For Quick Alerts
ALLOW NOTIFICATIONS  
For Daily Alerts

ಗೊರಕೆ ಹೊಡೆಯುವ ಸಮಸ್ಯೆಯಿಂದ ಬಳಲುತ್ತಿರುವಿರಾ?

By Poornima heggade
|

ನಿದ್ದೆ ಎಂದ ಕೂಡಲೆ ನೆನಪಾಗುವ ಮೊದಲ ಶಬ್ದ ಕನಸು. ಆದರೆ ಇದಾದ ನಂತರ ಯಾವ ಶಬ್ದ ನೆನಪಾಗುತ್ತದೆ ಎಂದರೆ ಬಹುಶಃ ಅದು ಗೊರಕೆ. ಜಗತ್ತಿನ ಅದೆಷ್ಟೊ ಮಂದಿಗೆ ಗೊರಕೆ ಒಂದು ತಮಾಷೆಯ ಅಥವಾ ನಗುವಿನ ವಿಷಯವಲ್ಲ. ಗೊರಕೆ ಹೊಡೆಯುವ ಜನರನ್ನು ಪ್ರೀತಿಸುವವರ ಪಾಲಿಗೂ ಇದು ನಿರ್ಲಕ್ಸ್ಯ ಮಾಡುವ ವಿಷಯವಲ್ಲ. ಇದು ಬಹಳ ಕಡೆ ನಿಮ್ಮನು ಮುಜುಗರಕ್ಕೆ ತರುವುದೇ ಇದಕ್ಕೆ ಕಾರಣ. ವಯಸ್ಸಿನೊಂದಿಗೆ ಗೊರಕೆಯ ಪ್ರಮಾಣವೂ ಹೆಚ್ಚಾಗುತ್ತದೆ.

ಹಾಗಾದರೆ ಗೊರಕೆಗೆ ಕಾರಣಗಳೇನು? ಇದಕ್ಕೆ ದೈಹಿಕ ಕಾರಣಗಳಿರಬಹುದು. ಮೂಗು, ಗಂಟಲಿನಲ್ಲಿರುವ ತಡೆಗಳು, ಗಂಟಲು ನೋವು, ದೇಹದಲ್ಲಿ ಹೆಚ್ಚಾಗಿರುವ ಕೊಬ್ಬು, ಸರಿಯಾಗಿರದ ಮಲಗುವ ಭಂಗಿಗಳು ಕಾರಣವಾಗಿರಬಹುದು. ವೈಜ್ಞಾನಿಕವಾಗಿ ಹೇಳುವುದಾದರೆ ಮೃದು ಅಂಗುಳವು ಗಾಳಿಯಲ್ಲಿ ಬೀಸಲು ಆರಂಭವಾದಾಗ ಗೊರಕೆ ಆರಂಭವಾಗುತ್ತದೆ.

ನೀವು ಗೊರಕೆ ಹೊಡೆಯಲು ಕಾರಣ ಏನಿರಬಹುದು?

ಗೊರಕೆಯಿಂದಾಗಿ ಕೆಲವೊಮ್ಮೆ ನಿಮಗೆ ಬಹಳವೇ ಬೇಸರ ಬರಬಹುದು. ಗೊರಕೆಯ ಕಾರಣದಿಂದಾಗಿ ಸಂಗಾತಿಗಳು ಬೇರೆಯಾದ ಅದೆಷ್ಟೋ ಉದಾಹರಣೆಗಳೂ ಇವೆ. ಆದರೆ ಹೀಗಾಗುವ ಮುನ್ನ ಅದನ್ನು ತಡೆಯುವ ಯಾವುದಾದರೂ ಮಾರ್ಗಗಳಿವೆಯೇ? ಖಂಡಿತ ಇವೆ. ನಿಮ್ಮ ಜೀವನ ಶೈಲಿಯಲ್ಲಿನ ಸಣ್ಣ ಪುಟ್ಟ ಬದಲಾವಣೆಗಳು, ನಿಮ್ಮ ಆಹಾರ ಕ್ರಮದಲ್ಲಿನ ಬದಲಾವಣೆಗಳು ನಿಮ್ಮ ಗೊರಕೆಯ ಸಮಸ್ಯೆಯಿಂದ ಮುಕ್ತಿ ನೀಡಬಲ್ಲುದು. ಅದರಲ್ಲೂ ಆಹಾರ ಕ್ರಮ ಬಹಳ ಪ್ರಮುಖ ಪಾತ್ರವನ್ನು ಪಡೆದಿದೆ.

ಆಹಾರ ಕ್ರಮದಲ್ಲಿನ ಬದಲಾವಣೆಗಳೇ ಗೊರಕೆಯ ಸಮಸ್ಯೆಯನ್ನು ಬಹಳ ಮಟ್ಟಿಗೆ ತಡೆಯಬಹುದು ಎಂದು ಸಂಶೋಧನೆಗಳು ದೃಢಪಡಿಸಿವೆ. ಆಹಾರ ಮತ್ತು ಗೊರಕೆಯ ಸಂಬಂಧದ ಕುರಿತಾದ ಕೆಲವು ಸತ್ಯಗಳು ಇಲ್ಲಿವೆ. ಇದನ್ನು ಅರಿತರೆ ನಿಮ್ಮ ಆಹಾರ ಕ್ರಮ ಹೇಗಿರಬೇಕು ಎಂಬ ಬಗ್ಗೆ ನಿಮಗೆ ಕಲ್ಪನೆ ಮೂಡುತ್ತದೆ.

ರಾತ್ರಿಯ ಆಹಾರ ಮಿತವಾಗಿರಲಿ:

ರಾತ್ರಿಯ ಆಹಾರ ಮಿತವಾಗಿರಲಿ:

ಹೆಚ್ಚು ಆಹಾರ ಸೇವಿಸಿ ಮಲಗುವ ಅಭ್ಯಾಸ ಒಳ್ಳೆಯದಲ್ಲ. ಆಹಾರ ಸೇವಿಸಿದ ಬಳಿಕ ಸ್ವಲ್ಪ ಹೊತ್ತು ಬೇರೆನಾದರೂ ಚಟುವಟಿಕೆಯಲ್ಲಿ ಸಮಯ ಕಳೆದು ನಂತರ ಮಲಗುವ ಅಭ್ಯಾಸ ಒಳ್ಳೆಯದು. ಊಟವಾದ ಬಳಿಕ ಒಂದು ಸುತ್ತು ತಿರುಗಾಡಿಕೊಂಡು ಬಂದರೆ ಆಹಾರ ಪಚನವಾಗುತ್ತದೆ. ರಾತ್ರಿಯ ಸಮಯದಲ್ಲಿ ಬಹಳ ಹೆಚ್ಚು ಆಹಾರ ಸೇವಿಸುವ ಅಭ್ಯಾಸವನ್ನು ಬಿಟ್ಟರೆ ಒಳ್ಳೆಯದು.

ಜೇನುತುಪ್ಪ:

ಜೇನುತುಪ್ಪ:

ಗೊರಕೆಯನ್ನು ತಡೆಯಲು ಜೇನುತುಪ್ಪ ಒಂದು ಪ್ರಭಾವಿ ಆಹಾರವಾಗಿದೆ. ಜೇನುತುಪ್ಪದಲ್ಲಿ ಉರಿಯೂತ ನಿಯಂತ್ರಕ ಹಾಗೂ ಸೂಕ್ಷ್ಮ ಜೀವಿ ನಿಯಂತ್ರಕ ಅಂಶಗಳಿವೆ. ಇವು ನಮ್ಮ ದೇಹದಲ್ಲಿ ಆಮ್ಲಜನಕ ಸಾಗಾಣಿಕೆಯಲ್ಲಿರುವ ಯಾವುದೇ ತರಹದ ತಡೆಗಳನ್ನು ಬಿಡುಗಡೆ ಮಾಡುತ್ತದೆ.

ಮಾಂಸಕ್ಕಿಂತ ಮೀನು ಉತ್ತಮ:

ಮಾಂಸಕ್ಕಿಂತ ಮೀನು ಉತ್ತಮ:

ಮಾಂಸಾಹಾರ ಸಾಮಾನ್ಯವಾಗಿ ಗೊರಕೆಗೆ ಬಹಳ ಪ್ರಮುಖ ಕಾರಣವಾಗಿದೆ. ಇದರ ಬದಲಿಗೆ ಮೀನನ್ನು ಸೇವಿಸಿ ನೋಡಿ ನಿಮ್ಮ ಗೊರಕೆಯ ಸಮಸ್ಯೆ ಅದೆಷ್ಟೊ ಮಟ್ಟಿಗೆ ನಿಯಂತ್ರಣಕ್ಕೆ ಬರುತ್ತದೆ. ಮಾಂಸದಿಂದ ಗಂಟಲಲ್ಲಿ ಊತ ಬಂದಂತೆ ಮೀನಿನಲ್ಲಿ ಬರುವುದಿಲ್ಲ ಇದೇ ಕಾರಣಕ್ಕೆ ಗೊರಕೆ ಕಡಿಮೆಯಾಗುತ್ತದೆ.

ಆಲೀವ್ ಎಣ್ಣೆ:

ಆಲೀವ್ ಎಣ್ಣೆ:

ಸಂಸ್ಕರಿತ ಎಣ್ಣೆಗಳನ್ನು ಸೇವಿಸುವುದರಿಂದಾಗಿ ಆಮ್ಲಗಳ ಹಿಮ್ಮುಖ ಚಲನೆ ಆರಂಭವಾಗುತ್ತದೆ. ಆಮ್ಲಗಳು ಗೊರಕೆಯಲ್ಲಿ ಪ್ರಧಾನ ಪಾತ್ರ ವಹಿಸುವ ಕಾರಣ ಈ ಹಿಮ್ಮುಖ ಚಲನೆಯಿಂದಾಗಿ ಗೊರಕೆಯ ಸಮಸ್ಯೆ ಹೆಚ್ಚಾಗುತ್ತದೆ. ಆಲೀವ್ ಎಣ್ಣೆಯಿಂದಾಗಿ ಗಂಟಲಲ್ಲಿ ಕಿರಿಕಿರಿ ಕಡಿಮೆಯಾಗುತ್ತದೆ ಹಾಗೂ ಇದರಿಂದಾಗಿ ಮೃದು ಭಾಗಗಳು ಕಡಿಮೆಯಾಗಿ ಗೊರಕೆ ಕಡಿಮೆಯಾಗುತ್ತದೆ.

ಚಹಾ:

ಚಹಾ:

ಚಹಾದಲ್ಲೂ ಗಂಟಲ್ಲಲ್ಲಿ ಇರುವ ತಡೆಗಳನ್ನು ಬಿಡುಗಡೆ ಮಾಡುವ ಸತ್ವವಿದೆ. ಒದರಿಂದಾಗಿ ಗಂಟಲು ಕಟ್ಟಿದಂತಾಗುವ ಬಾಧೆ ನಿಮ್ಮನ್ನು ಕಾಡದು. ಕ್ಯಾಮೋಮೈಲ್ ಚಹಾ, ಗ್ರೀನ್ ಟಿ, ಪುದಿನ ಚಹಾ ಮತ್ತು ಸಾಮಾನ್ಯ ಬ್ಲಾಕ್ ಟಿ ಅನ್ನೂ ಪ್ರಯತ್ನಿಸಿ ನೋಡಿ. ಲಿಂಬೆ ಮತ್ತು ಜೇನುತುಪ್ಪವನ್ನೂ ಸೇರಿಸಬಹುದು.

ಸೋಯಾ ಹಾಲು:

ಸೋಯಾ ಹಾಲು:

ದನದ ಹಾಲಿನಿಂದಾಗಿ ಗೊರಕೆ ಹೆಚ್ಚಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಲಾಕ್ಟೋಸ್ ಅನ್ನು ಸರಿಯಾಗಿ ಜೀರ್ಣಮಾಡಿಕೊಳ್ಳಲಾಗದ ದೇಹ ಪ್ರಕೃತಿ ಇರುವವರಲ್ಲಿ ಇದರ ಸಮಸ್ಯೆ ಮತ್ತೂ ಹೆಚ್ಚಾಗಬಹುದು. ಇದರಿಂದಾಗಿ ಕಫದ ಸಂಗ್ರಹವೂ ಹೆಚ್ಚಾಗಬಹುದು. ಸೋಯಾ ಹಾಲನ್ನು ಗೊರಕೆ ತಡೆಯುವ ಸಾಧನವಾಗಿ ಬಳಸುವುದು ಉತ್ತಮ ಆಯ್ಕೆಯಾಗಿದೆ.

ಮದ್ಯಪಾನದಿಂದ ದೂರವಿರಿ:

ಮದ್ಯಪಾನದಿಂದ ದೂರವಿರಿ:

ಈ ಎಲ್ಲಾ ಆಹಾರ ಕ್ರಮದ ಬದಲಾವಣೆಗಳು ನೀವು ಮದ್ಯಪಾನಿಯಾಗಿದ್ದಲ್ಲಿ ಯಾವುದೇ ಪರಿಣಾಮ ತೋರದೇ ಇರಬಹುದು. ಮದ್ಯಪಾನದಿಂದಾಗಿ ಕೇಂದ್ರೀಯ ನರ ವ್ಯವಸ್ಥೆಯಲ್ಲಿ ಬದಲಾವಣೆಗಳಾಗುತ್ತವೆ ಇದರ ಕಾರಣದಿಂದ ಗೊರಕೆ ಬರುತ್ತದೆ. ಆಹಾರ ಕ್ರಮದ ಬದಲಾವಣೆಯ ಜೊತೆಗೆ ಇಂತಹ ನಿಮ್ಮ ಅಭ್ಯಾಸಗಳನ್ನು ಬಿಡುವತ್ತಲೂ ಗಮನ ಹರಿಸಿ.

ಹಾಲಿನ ಉತ್ಪನ್ನಗಳನ್ನು ದೂರವಿಡಿ:

ಹಾಲಿನ ಉತ್ಪನ್ನಗಳನ್ನು ದೂರವಿಡಿ:

ನಿಮ್ಮ ಆಹಾರ ಕ್ರಮದಲ್ಲಿರುವ ಹಾಲಿನ ಉತ್ಪನ್ನಗಳನ್ನು ಆದಷ್ಟು ಕಡಿಮೆ ಮಾಡಿದರೆ ಗೊರಕೆಯ ಪ್ರಮಾಣ ಬಹಳ ಕಡಿಮೆಯಾಗುತ್ತದೆ. ನಿಮಗೆ ಅಷ್ಟು ಇಷ್ಟವಾದರೆ ಹಾಲಿನ ಉತ್ಪನ್ನಗಳನ್ನು ಸೇವಿಸಿದ ನಾಲ್ಕು ತಾಸಿನ ನಂತರ ಮಲಗುವ ಅಭ್ಯಾಸ ಮಾಡಿ.

English summary

Foods To Prevent Snoring

Snoring is not a matter of joke or laughter for millions of people around the globe. This feeling is the same with all those people who love them. Snoring is a common problem found in both men and women. It will cause many embarrassing moments in your life.
Story first published: Saturday, June 21, 2014, 9:35 [IST]
X
Desktop Bottom Promotion