For Quick Alerts
ALLOW NOTIFICATIONS  
For Daily Alerts

ನಿಮ್ಮ ಮೆದುಳಿನ ಆರೋಗ್ಯವನ್ನು ವೃದ್ಧಿಸುವ ಸೂಪರ್ ಆಹಾರಗಳು!

|

ಮಾನವನ ದೇಹದಲ್ಲಿ ಅತಿ ಹೆಚ್ಚು ಶಕ್ತಿಯನ್ನು ಬಳಸಿಕೊಳ್ಳುವ ಅಂಗವೆಂದರೆ ಅದು ಮೆದುಳು. ನಮ್ಮ ಮೆದುಳು ಸಹ ಒಂದು ಸ್ನಾಯು ಇದನ್ನು ಬಳಸಿದಷ್ಟು ಅದರ ಕಾರ್ಯಕ್ಷಮತೆ ಹೆಚ್ಚುತ್ತ ಹೋಗುತ್ತದೆ. ಈ ಅಂಗವು ಮಾಡುವ ಕಾರ್ಯವನ್ನು ಸರಿಯಾಗಿ ಯೋಚಿಸಿದರೆ ಅಚ್ಚರಿಗೊಳಗಾಗುತ್ತೀರಿ. ಜೊತೆಗೆ ನಮ್ಮ ದೇಹದಲ್ಲಿರುವ ಅತ್ಯಂತ ಸೂಕ್ಷ್ಮ ಅಂಗವಾಗಿದೆ.

ನಮ್ಮ ಮೆದುಳು ಮಾನಸಿಕ ಲಕ್ಷಣಗಳನ್ನು ನಿರ್ಧರಿಸುತ್ತದೆ. ಇದು ಮುಖ್ಯವಾಗಿ ಙ್ಞಾಪಕ ಶಕ್ತಿ , ಏಕಾಗ್ರತೆ, ದೈಹಿಕ ಮತ್ತು ಅಸಂಖ್ಯಾತವಾದ ಮಾನವನ ವರ್ತನೆಗಳ ಲಕ್ಷಣಗಳನ್ನು ನಿರ್ಧರಿಸುತ್ತದೆ. ಹಾಗಾಗಿ ಮೆದುಳಿನ ಶಕ್ತಿ ಉನ್ನತ ಮಟ್ಟದಲ್ಲಿಡಲು ನಾವು ಸ್ವಲ್ಪ ಹೆಚ್ಚಿನ ಮಟ್ಟದ ಆಹಾರ ಸೇವಿಸುವ ಅಗತ್ಯವಿದೆ. ವಿವಿಧ ವರ್ಗದ ಬೆರ್ರಿಗಳಿಂದ ಹಿಡಿದು ವಿಟಮಿನ್ ಆಹಾರಗಳು ನಮ್ಮ ಮೆದುಳಿನ ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮಾನಸಿಕವಾಗಿ ನೀವು ಬಳಲಿದರೆ ಇದು ನಿಮ್ಮ ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಒಂದು ವಿಧದ ಆಹಾರ ಬೇಕೆಂಬುದರ ಲಕ್ಷಣವಾಗಿದೆ. ಕೆಳಗೆ ಕೊಟ್ಟಿರುವ ಕೆಲವೊಂದು ಆಹಾರಗಳು ನಿಮ್ಮ ಮೆದುಳಿನ ಶಕ್ತಿ ಹೆಚ್ಚಿಸುವುದರೊಂದಿಗೆ ಸಂಪೂರ್ಣವಾಗಿ ನಿಮ್ಮ ಉತ್ತಮ ಆರೋಗ್ಯಕ್ಕೆ ನೆರವಾಗುತ್ತದೆ. ಪರ್ಕಿನ್ಸನ್ ನಂತಹ ಕಾಯಿಲೆಯಿಂದ ದೂರವಿಡಲು ಮೆದುಳಿನ ಆಹಾರ ಅತ್ಯಗತ್ಯ. ನೆನೆಪಿನ ಶಕ್ತಿ ಹೆಚ್ಚಿಸಬೇಕೆ? ಈ ರೀತಿ ಮಾಡಿ

ಈ ಆಹಾರಗಳಲ್ಲಿರುವ ಕೆಲವೊಂದು ರಾಸಾಯನಿಕಗಳು ಮಕ್ಕಳಲ್ಲಿ ಐಕ್ಯೂ ಹೆಚ್ಚಿಸುತ್ತದೆ. ಇದರಿಂದ ಅವರು ಕಲಿಕೆಯಲ್ಲಿ ಅಗ್ರಸ್ಥಾನಕ್ಕೇರಲು ಸಾಧ್ಯ. ತಜ್ಞರ ಪ್ರಕಾರ ಮೆದುಳಿನ ಆಹಾರಗಳನ್ನು ಮಕ್ಕಳ ಪರೀಕ್ಷೆಯ ಸಮಯದಲ್ಲಿ ಅವರಿಗೆ ನೀಡಬೇಕು. ಇದರಿಂದ ಅವರು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುವುದು ತಪ್ಪುತ್ತದೆ. ನಿಮ್ಮ ಮೆದುಳಿಗೆ ಅಗತ್ಯವಿರುವ ಮತ್ತು ಅದರ ಶಕ್ತಿ ಹೆಚ್ಚಿಸಬಲ್ಲ ಕೆಲವೊಂದು ಆರೋಗ್ಯಕರ ಆಹಾರಗಳು ಇಲ್ಲಿವೆ.

ಪುದೀನಾ

ಪುದೀನಾ

ತಾಜಾ ಪುದೀನಾದ ಸುವಾಸನೆಯು ಪ್ರಚೋದಕದಂತೆ ಕೆಲಸ ಮಾಡಿ ಜಾಗೃತಾವಸ್ಥೆ ಮತ್ತು ಮೆದುಳಿನ ಕ್ರಿಯೆಯನ್ನು ಉತ್ತಮ ಪಡಿಸುತ್ತದೆ. ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ದಿನದಲ್ಲಿ ಒಂದು ಕಪ್ ಪುದೀನಾ ಚಹಾ ಕುಡಿಯಿರಿ.

ಮೊಸರು

ಮೊಸರು

ಮೊಸರಿನಲ್ಲಿ ಕ್ಯಾಲ್ಸಿಯಂ ಅಧಿಕವಾಗಿದೆ. ಇದು ಮೆದುಳಿನ ಎಲ್ಲಾ ಕ್ರಿಯೆಗಳಿಗೆ ನೆರವಾಗುವುದರೊಂದಿಗೆ ನಿಮ್ಮ ಮೆದುಳಿನ ಆರೋಗ್ಯವನ್ನು ವೃದ್ಧಿಸುತ್ತದೆ.

ಸೇಬು

ಸೇಬು

ಕೆಂಪು ಸೇಬಿನಲ್ಲಿರುವ ಕೆಲವು ವರ್ಗದ ರಾಸಾಯನಿಕಗಳು ಮಾರಕ ಕಾಯಿಲೆಗಳಾದ ಪರ್ಕಿಸನ್ ಮತ್ತು ಅಲ್ಝೆಮರ್ ನಿಂದ ಮೆದುಳನ್ನು ರಕ್ಷಿಸುತ್ತದೆ. ದಿನಕ್ಕೊಂದು ಸೇಬು, ವೈದ್ಯರಿಂದ ನಮ್ಮನ್ನು ದೂರವಿಡುತ್ತದೆ ಎನ್ನುವ ಮಾತು ನಿಜ.

ನೀರು

ನೀರು

ಮೆದುಳನ್ನು ಕ್ರಿಯಾತ್ಮಕವಾಗಿಡಲು ನಮ್ಮ ದೇಹಕ್ಕೆ ಹೆಚ್ಚಿನ ನೀರು ಅಗತ್ಯವಿದೆ. ಮೆದುಳಿನ ಮೂರನೇ ಒಂದು ಭಾಗವು ನೀರಿನಿಂದ ತುಂಬಿರುವ ಕಾರಣ ನಿರ್ಜಲೀಕರಣವು ನಿಮ್ಮ ಮೆದುಳಿನ ಕ್ರಿಯೆಯ ಮೇಲೆ ಪರಿಣಾಮ ಬೀರಬಹುದು.

ಹೂಕೋಸು

ಹೂಕೋಸು

ಹೆಚ್ಚಿನವರಿಗೆ ರುಚಿಸದ ಹಸಿರು ತರಕಾರಿಯಲ್ಲಿ ವಿಟಮಿನ್ ಕೆ ಉನ್ನತ ಮಟ್ಟದಲ್ಲಿದೆ. ಹೂಕೋಸು ಗ್ರಹಿಕೆಯ ಕ್ರಿಯೆ ವೃದ್ಧಿಸುತ್ತದೆ ಮತ್ತು ಮೆದುಳಿನ ಶಕ್ತಿಯನ್ನು ಸುಧಾರಿಸುತ್ತದೆ.

ಒಣದ್ರಾಕ್ಷಿ

ಒಣದ್ರಾಕ್ಷಿ

ನಿಯಮಿತ ಒಣದ್ರಾಕ್ಷಿಯಲ್ಲಿ ಬೊರೊನ್ ಎನ್ನುವ ಅಂಶವಿದ್ದು, ಇದು ಎಚ್ಚರಿಕೆ ಮತ್ತು ಜ್ಞಾಪಕಶಕ್ತಿಯನ್ನು ಹೆಚ್ಚಿಸುತ್ತದೆ. ಸ್ವಲ್ಪ ಒಣದ್ರಾಕ್ಷಿ ತಿನ್ನುವುದರಿಂದ ನಿಮ್ಮ ಮೆದುಳಿಗೆ ಒಳ್ಳೆಯದು.

ಕುಂಬಳಕಾಯಿ ಬೀಜಗಳು

ಕುಂಬಳಕಾಯಿ ಬೀಜಗಳು

ಈ ಬೀಜಗಳಲ್ಲಿ ಟ್ರಿಪ್ಟೊಫಾನ್ ಎನ್ನುವ ಅಮಿನೋ ಆ್ಯಸಿಡ್ ಸಮೃದ್ಧವಾಗಿದೆ. ಇದು ನರಪೇಕ್ಷಕವು ಸರಿಯಾದ ರೀತಿಯಲ್ಲಿ ಕೆಲಸ ಮಾಡಿ ಸಾಮಾಜಿಕ ಆತಂಕ ಕಡಿಮೆ ಮಾಡಲು ಅಗತ್ಯವಿದೆ.

ತೆಂಗಿನ ಎಣ್ಣೆ

ತೆಂಗಿನ ಎಣ್ಣೆ

ತಮ್ಮ ಆಹಾರದಲ್ಲಿ ತೆಂಗಿನ ಎಣ್ಣೆಯನ್ನು ಬಳಸುವವರ ಮೆದುಳಿನ ಶಕ್ತಿಯು ಹೆಚ್ಚಾಗಲು ಇದು ನೆರವಾಗುತ್ತದೆ. ತೆಂಗಿನ ಎಣ್ಣೆ ಕೆಟೊನ್ಸ್‌ನ್ನು ನಿರ್ಮಿಸುತ್ತದೆ. ಇದು ಮೆದುಳಿಗೆ ಇಂಧನವನ್ನು ಒದಗಿಸುತ್ತದೆ.

ಮೊಟ್ಟೆಯ ಲೋಳೆ

ಮೊಟ್ಟೆಯ ಲೋಳೆ

ಮೊಟ್ಟೆಯ ಹಳದಿ ಲೋಳೆಯಲ್ಲಿ ಕೋಲೀನ್ ಸಮೃದ್ಧವಾಗಿದೆ. ಈ ಪೌಷ್ಠಿಕಾಂಶವು ಮೆದುಳಿನಲ್ಲಿರುವ ನರಕೋಶಕ್ಕೆ ಸಂಕೇತಗಳನ್ನು ಕಳುಹಿಸುವ ಕಾರ್ಯವನ್ನು ವೇಗವಾಗಿ ಮಾಡಿ ಮೆದುಳಿನ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ಇತ್ತೀಚಿನ ಸಂಶೋಧನೆಯಿಂದ ಸಾಬೀತಾಗಿದೆ.

ಸ್ಟ್ರಾಬೆರ್ರಿ

ಸ್ಟ್ರಾಬೆರ್ರಿ

ಈ ಬೆರ್ರಿಗಳಲ್ಲಿ ಉರಿಯೂತ ವಿರೋಧಿ ಗುಣಗಳಿವೆ. ಈ ಗುಣಗಳಿಂದ ಅದು ಮೆದುಳು ಮತ್ತು ಜ್ಞಾಪಕ ಶಕ್ತಿಯನ್ನು ಕಾಪಾಡುತ್ತದೆ.

ಅರಶಿನ

ಅರಶಿನ

ಅಲ್ಝೆಮರ್ ಕಾಯಿಲೆಯಲ್ಲಿ ವಿಶ್ವದಲ್ಲೇ ಭಾರತದ ಪ್ರಮಾಣವು ತುಂಬಾ ಕಡಿಮೆಯಿದೆ. ಯಾವುದೇ ಪದಾರ್ಥದಲ್ಲಿ ಅರಶಿನವನ್ನು ಸೇರಿಸುವುದರಿಂದ ಅಪಾಯಕಾರಿ ಕಾಯಿಲೆ ಬರುವ ಸಾಧ್ಯತೆ ತುಂಬಾ ಕಡಿಮೆಯಾಗಿದೆ. ಅಲ್ಝೆಮರ್ ಕಾಯಿಲೆಯು ಮೆದುಳಿನಲ್ಲಿ ಉರಿಯೂತ ಕಾರ್ಯದಿಂದ ಆರಂಭವಾಗುತ್ತದೆ.

English summary

Foods to boost your brain power

Like everything else in your body, the brain cannot work without energy. The ability to concentrate and focus comes from the adequate, steady supply of energy - in the form of glucose in our blood to the brain.
Story first published: Monday, October 27, 2014, 17:05 [IST]
X
Desktop Bottom Promotion