For Quick Alerts
ALLOW NOTIFICATIONS  
For Daily Alerts

ಚಿಕನ್ ಫಾಕ್ಸ್ ಆದಾಗ ನೀವು ನಿರ್ಲಕ್ಷಿಸಲೇಬೇಕಾದ ಆಹಾರಗಳು

|

ಬೇಸಿಗೆ ಇನ್ನೇನು ನಿಮ್ಮನ್ನು ಸಮೀಪಿಸುತ್ತಿದೆ. ನಿಮ್ಮನ್ನು ಮಾರಕವಾಗಿ ಹಾನಿಮಾಡುವ ಹಲವಾರು ರೋಗಗಳು ನಿಮಗಾಗಿ ಕಾಯುತ್ತಿವೆ ಅದರಲ್ಲೊಂದು ಚಿಕನ್ ಫಾಕ್ಸ್. ವರಿಸೆಲ್ಲಾ - ಜೋಸ್ಟರ್ ವೈರಸ್ (ವಿಝಿವಿ) ನಿಂದ ಈ ರೋಗ ನಿಮ್ಮ ಮೇಲೆ ಹಾನಿಮಾಡುತ್ತದೆ. ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರು ಈ ರೋಗಕ್ಕೆ ಹೆಚ್ಚು ಆಹುತಿಗಳಾಗುತ್ತಾರೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆರೋಗ್ಯ ಸುಧಾರಣೆಗೆ ಬೇವು ಸಹಕಾರಿ ಹೇಗೆ?

ಮಕ್ಕಳಂತಹ ದುರ್ಬಲ ರೋಗನಿರೋಧಕ ಶಕ್ತಿ ನಿಮ್ಮದಾಗಿದ್ದರೆ ಅಥವಾ ನಿಮ್ಮ ಬಾಲ್ಯದಲ್ಲಿ ಒಮ್ಮೆ ಕೂಡ ಈ ರೋಗ ನಿಮಗೆ ಬರದಿದ್ದರೆ, ನೀವು ಇದರ ಪರಿಣಾಮಕ್ಕೆ ಒಳಗಾಗುತ್ತೀರಿ, ಈ ರೋಗವಿರುವ ವ್ಯಕ್ತಿಯ ನಿಕಟ ಸಮೀಪತೆ ಚಿಕನ್ ಫಾಕ್ಸ್‌ಗೆ ನಿಮ್ಮನ್ನು ಒಳಗಾಗುವಂತೆ ಮಾಡುತ್ತದೆ.

ಚಿಕನ್ ಫಾಕ್ಸ್ ನಿಮ್ಮ ಶರೀರದಲ್ಲಿ ತುರಿಕೆ, ನವೆ ಮತ್ತು ನಿಮ್ಮ ದೇಹವನ್ನು ದುರ್ಬಲಗೊಳಿಸುವ ಜ್ವರವನ್ನು ಉಂಟುಮಾಡುತ್ತದೆ. ಮುಖದ ಮೇಲೆ ಒಂದೆರಡು ಗುಳ್ಳೆಗಳು ಕಂಡುಬಂದು ಇದು ಇಡೀ ದೇಹವನ್ನು ವ್ಯಾಪಿಸಬಹುದು. 200 ರಿಂದ 250 ಗುಳ್ಳೆಗಳು ನಿಮ್ಮ ದೇಹದಲ್ಲಿ ಕಂಡುಬರಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಾಮರ್ಥ್ಯವನ್ನು ಹೆಚ್ಚಿಸುವ 20 ಸಸ್ಯಾಹಾರಿ ಆಹಾರಗಳು

ಈ ಸಮಯದಲ್ಲಿ, ನೀವು ತೆಗೆದುಕೊಳ್ಳಬಾರದ ಕೆಲವು ಆಹಾರಪದಾರ್ಥಗಳಿವೆ. ಚಿಕನ್‌ ಫಾಕ್ಸ್‌ಗೆ ನೀವು ಒಳಗಾದ ಸಮಯದಲ್ಲಿ ಕೆಲವೊಂದು ಆಹಾರಪದಾರ್ಥಗಳನ್ನು ಸೇವಿಸಲೇಬಾರದು ಎಂಬ ನಿಯಮವಿದೆ. ಇಂದಿನ ಲೇಖನವು ಚಿಕನ್ ಫಾಕ್ಸ್ ಬಿದ್ದಾಗ ತೆಗೆದುಕೊಳ್ಳಬಾರದ ಕೆಲವೊಂದು ಆಹಾರ ಪದಾರ್ಥಗಳ ಪಟ್ಟಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಡೈರಿ ಉತ್ಪನ್ನಗಳು:

ಡೈರಿ ಉತ್ಪನ್ನಗಳು:

ಎಲ್ಲಾ ಪ್ರಕಾರದ ಡೈರಿ ಉತ್ಪನ್ನಗಳಿಂದ ದೂರವಿರಿ. ಹಾಲು, ಚೀಸ್, ಐಸ್ ಕ್ರೀಂ ಮತ್ತು ಬೆಣ್ಣೆ ಯಿಂದ ದೂರವಿರಿ. ನಿಮಗೆ ಚಿಕನ್ ಫಾಕ್ಸ್ ಬಿದ್ದಾಗ ಡೈರಿ ಉತ್ಪನ್ನಗಳನ್ನು ಸೇವಿಸುವುದು ನಿಮ್ಮ ತ್ವಚೆಯನ್ನು ಎಣ್ಣೆಯುಕ್ತಗೊಳಿಸುತ್ತದೆ.

ಮಾಂಸ:

ಮಾಂಸ:

ಮಾಂಸ ಉಷ್ಣವನ್ನು ಪ್ರೇರೇಪಿಸುವ ಆಹಾರವಾಗಿದೆ. ನಿಮಗೆ ಚಿಕನ್‌ ಫಾಕ್ಸ್ ಬಿದ್ದಾಗ ನೀವು ಎಲ್ಲಾ ಪ್ರಕಾರದ ಮಾಂಸ ಉತ್ಪನ್ನಗಳನ್ನು ಕಡೆಗಣಿಸಬೇಕು.

ಜಂಕ್ ಫುಡ್:

ಜಂಕ್ ಫುಡ್:

ನೀವು ಚೆಕನ್‌ ಫಾಕ್ಸ್‌ಗೆ ಒಳಗಾದಾಗ ಯಾವುದೇ ರೀತಿಯ ಜಂಕ್ ಪುಡ್ ಅನ್ನು ಸೇವಿಸಲೇಬಾರದು. ಇದು ನಿಮ್ಮನ್ನು ಹೊಟ್ಟೆ ತುಂಬಿದಂತೆ ಮಾಡುತ್ತದೆ ಹಾಗೂ ರೋಗಿಯನ್ನಾಗಿಸುತ್ತದೆ. ಮಿತವಾದ ಆಹಾರ ಒಳಿತು.

ಹುರಿದ ಆಹಾರಗಳು:

ಹುರಿದ ಆಹಾರಗಳು:

ಹೆಚ್ಚು ಎಣ್ಣೆ ಅಂಶವುಳ್ಳ ಕರಿದ ಆಹಾರಗಳನ್ನು ಸೇವಿಸುವುದು ಚಿಕನ್ ಫಾಕ್ಸ್ ರೋಗಿಗೆ ಒಳ್ಳೆಯದಲ್ಲ.

ಸಿಟ್ರಸ್ ಆಹಾರಗಳು:

ಸಿಟ್ರಸ್ ಆಹಾರಗಳು:

ನೀವು ಚಿಕನ್ ಫಾಕ್ಸ್ ಬಿದ್ದಾಗ ತ್ಯಜಿಸಲೇಬೇಕಾದ ಆಹಾರ ಪದಾರ್ಥವೆಂದರೆ ಸಿಟ್ರಸ್ ಆಹಾರಗಳಾಗಿವೆ. ಕಿತ್ತಳೆ ಮತ್ತು ಲಿಂಬೆ ಸಿಟ್ರಸ್ ಅಂಶವನ್ನು ಒಳಗೊಂಡಿರುವ ಹಣ್ಣುಗಳಾಗಿದ್ದು ಗುಳ್ಳೆಗಳನ್ನು ಉದ್ರೇಕಿಸಿ ನಿಮಗೆ ಹೆಚ್ಚು ತುರಿಕೆಯುಂಟಾಗುವಂತೆ ಮಾಡುತ್ತದೆ.

ಮಸಾಲೆ ಆಹಾರಪದಾರ್ಥಗಳು:

ಮಸಾಲೆ ಆಹಾರಪದಾರ್ಥಗಳು:

ನಿಮಗೆ ಚಿಕನ್ ಫಾಕ್ಸ್ ಇದ್ದಾಗ ಖಾರ ಅಥವಾ ಮಸಾಲೆ ಆಹಾರಗಳನ್ನು ಸೇವಿಸಲೇಬಾರದು. ಇದು ಎದೆಯುರಿ ಮತ್ತು ಉರಿಯೂತಕ್ಕೆ ಕಾರಣವಾಗುತ್ತದೆ.

ಉಪ್ಪಿನ ಆಹಾರಗಳು:

ಉಪ್ಪಿನ ಆಹಾರಗಳು:

ಚಿಕನ್ ಫಾಕ್ಸ್ ಬಿದ್ದಾಗ ಉಪ್ಪಿನ ಅಂಶವುಳ್ಳ ಆಹಾರಗಳನ್ನು ತೆಗೆದುಕೊಳ್ಳಬಾರದೆಂಬ ನಿಯಮವಿದೆ. ಉಪ್ಪಿನ ಅಂಶವುಳ್ಳ ಆಹಾರಗಳು ಗುಳ್ಳೆಗಳನ್ನು ಉದ್ರೇಕಿಸಿ ನಿಮಗೆ ಹೆಚ್ಚು ತುರಿಕೆಯುಂಟಾಗುವಂತೆ ಮಾಡುತ್ತದೆ.

ಏಸಿಡಿಕ್ ಆಹಾರಗಳು:

ಏಸಿಡಿಕ್ ಆಹಾರಗಳು:

ನಿಮಗೆ ಚಿಕನ್ ಫಾಕ್ಸ್ ಆದಾಗ ನಿಮ್ಮ ದೇಹಕ್ಕೆ ತಂಪು ಅವಶ್ಯಕ. ಕಾಫಿ ಅಥವಾ ಚಾಕಲೇಟ್‌ಗಳು ಗಾಯಗಳನ್ನು ರೇಗಿಸಿ ಹೆಚ್ಚು ತುರಿಕೆಯುಂಟಾಗುವಂತೆ ಮಾಡುತ್ತದೆ.

English summary

Foods To Avoid When You Have Chicken Pox

Summer season is around the corner and one of the deadliest and contagious diseases which can affect you is chicken pox. This disease which is caused by the varicella-zoster virus (VZV) affects anyone, no matter what age you are in.
X
Desktop Bottom Promotion