For Quick Alerts
ALLOW NOTIFICATIONS  
For Daily Alerts

ದೇಹದ ತೂಕ ಇಳಿಸಲು ತ್ಯಜಿಸಲೇಬೇಕಾದ ಆಹಾರಗಳಿವು

|

ನೀವು ಪ್ರತೀ ದಿನ ಬೆಳಗ್ಗೆ ತೂಕ ಇಳಿಸಬೇಕೆಂಬ ಆಲೋಚನೆಯಲ್ಲಿರುತ್ತೀರಾ ಆದರೆ ಸಂಜೆಯಾದಂತೆ ಈ ಯೋಚನೆಯನ್ನು ನೀವು ಕೈಬಿಟ್ಟಿರುತ್ತೀರಿ. ನಿಮ್ಮ ಭಾರೀ ತೂಕವನ್ನು ಕಳೆದುಕೊಳ್ಳುವುದರ ಜೊತೆಗೆ ದೇಹದ ಬೊಜ್ಜು ಕರಗಬೇಕೆಂಬ ನಿರ್ಧಾರವನ್ನು ನೀವು ಕೈಗೊಂಡಿದ್ದು ಅದು ನಿಮ್ಮ ಮೇಲೆ ಏನೂ ಪ್ರಭಾವ ಬೀರಿಲ್ಲ ಎಂದಾದಲ್ಲಿ ನಿಮ್ಮ ತೂಕ ಇಳಿಸುವ ಯೋಜನೆಯಲ್ಲಿ ಏನೋ ಲೋಪವಿದೆಯೆಂಬುದು ಅರ್ಥ.

ನೀವು ಸರಿಯಾದ ಆಹಾರವನ್ನು ತೆಗೆದುಕೊಳ್ಳುತ್ತಿಲ್ಲ ಎಂಬುದು ಇದರಿಂದ ತಿಳಿದು ಬರುತ್ತದೆ. ನಿಮ್ಮನ್ನು ದಪ್ಪಗಾಗಿಸುವ ಕೆಲವೊಂದು ಆಹಾರ ಪದಾರ್ಥಗಳಿಂದ ನೀವು ದೂರ ಇರುವ ನಿರ್ಧಾರವನ್ನು ನೀವು ತೆಗೆದುಕೊಳ್ಳಲೇಬೇಕು. ಹಾಗಿದ್ದರೆ ನಿಮ್ಮ ತೂಕವನ್ನು ನೀವು ಕಡಿಮೆಗೊಳಿಸುವುದು ಹೇಗೆ?

ನೀವು ತಿನ್ನುವ ಆಹಾರದಲ್ಲಿರುವ ಕ್ಯಾಲೋರಿ ಆರೋಗ್ಯಕರವಾಗಿದ್ದರೆ ಮಾತ್ರ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗಿರುತ್ತದೆ. ನೀವು ತೆಗೆದುಕೊಳ್ಳುವ ಆಹಾರದಲ್ಲಿ ಕ್ಯಾಲೋರಿ ಪ್ರಮಾಣ ಹೆಚ್ಚಾಗಿದ್ದಲ್ಲಿ ಇದು ನಿಮ್ಮ ತೂಕ ಏರಿಕೆಗೆ ಕಾರಣವಾಗಿರುತ್ತದೆ. ಇಂತಹ ಆಹಾರಗಳ ಸೇವನೆಯನ್ನು ನೀವು ಕಡಿಮೆ ಮಾಡಿದರೆ ನಿಮ್ಮ ದೇಹದ ತೂಕ ಕಡಿಮೆಯಾಗುತ್ತದೆ.

ಹಾಗಿದ್ದರೆ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ಯಾವ ರೀತಿಯ ಆಹಾರವನ್ನು ನೀವು ತ್ಯಜಿಸಬೇಕೆಂಬ ಪಟ್ಟಿಯೊಂದಿಗೆ ನಾವು ಬಂದಿದ್ದು ನೀವು ಇದನ್ನು ಗಮನಿಸಿ ಇದೇ ವಿಧಾನವನ್ನು ಅನುಸರಿಸಿದರೆ ನಿಮ್ಮ ದೇಹ ತೂಕ ಕಡಿಮೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಅಕ್ಕಿ

ಅಕ್ಕಿ

ಬಿಳಿ ಅನ್ನದಲ್ಲಿ ಹೆಚ್ಚು ಪ್ರಮಾಣದ ಕಾರ್ಬೊಹೈಡ್ರೇಟ್ ಇರುತ್ತದೆ. ಇದರಿಂದ ಕುಚ್ಚಲಕ್ಕಿ (ಬ್ರೌನ್ ರೈಸ್) ಮತ್ತು ಕಡಿಮೆ ಪಾಲಿಶ್ ಇರುವ ಅಕ್ಕಿಯನ್ನು ನೀವು ಬಳಸುವುದು ಒಳಿತು. ಕುಚ್ಚಲಕ್ಕಿಯು ತನ್ನಲ್ಲಿರುವ ಸಕಲ ನಾರಿನಂಶವನ್ನು ಹಾಗೆಯೇ ಉಳಿಸಿಕೊಳ್ಳುವ ಮೂಲಕ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಹಾಗಾಗಿ ಇದು ತೂಕವನ್ನು ಇಳಿಸಿಕೊಳ್ಳಲು ಹೇಳಿ ಮಾಡಿಸಿದ ಆಹಾರವಾಗಿರುತ್ತದೆ.

ನೂಡಲ್ಸ್

ನೂಡಲ್ಸ್

ಕೆಲವೊಂದು ಚೈನೀಸ್ ಅಂಗಡಿಗಳಲ್ಲಿ ಹೆಚ್ಚಿನ ಜನರು ನೂಡಲ್ಸ್‌ಗೆ ಪ್ರಧಾನ್ಯತೆಯನ್ನು ನೀಡುತ್ತಾರೆ. ಇದು ಅಕ್ಕಿಗಿಂತಲೂ ನಿಮ್ಮನ್ನು ಹೆಚ್ಚು ದಪ್ಪನಾಗಿಸುವ ಗುಣವನ್ನು ಹೊಂದಿದೆ.

ಮಾವಿನ ಹಣ್ಣು

ಮಾವಿನ ಹಣ್ಣು

ಸಾಮಾನ್ಯವಾಗಿ ಹಣ್ಣುಗಳು ನೈಸರ್ಗಿಕ ಸಕ್ಕರೆಯನ್ನು ಒಳಗೊಂಡಿರುತ್ತವೆ ಇವುಗಳು ಆರೋಗ್ಯಕಾರಕವಾಗಿ ಇರುತ್ತವೆ ಆದರೆ ತೂಕ ಇಳಿಸುವ ಯೋಜನೆಯನ್ನು ಇಟ್ಟುಕೊಂಡವರಿಗೆ ಇದು ಸರಿಯಾದುದಲ್ಲ. ನೀವು ತೂಕ ಇಳಿಸುವ ಯೋಜನೆಯಲ್ಲಿದ್ದರೆ ಈ ಹಣ್ಣನ್ನು ನೀವು ತ್ಯಜಿಸಲೇಬೇಕು.

ಬೆಣ್ಣೆ

ಬೆಣ್ಣೆ

ನೀವು ತೆಳ್ಳಗಾಗಿ ಕಾಣಿಸಿಕೊಳ್ಳಲು ಬಯಸುವಿರಾದರೆ, ಬೆಣ್ಣೆಯಿಂದ ಒಂದು ಮೈಲಿ ದೂರ ಇರುವುದೇ ಒಳಿತು! ದಪ್ಪನಾಗಿರುವವರಿಗೆ ಬೆಣ್ಣೆ ಯಾವುದೇ ಆರೋಗ್ಯಕಾರಿ ಸಹಕಾರವನ್ನು ನೀಡುವುದಿಲ್ಲ. ಇದು ಹೆಚ್ಚುವರಿ ಕೊಲೆಸ್ಟ್ರಾಲ್ ಮತ್ತು ಕೊಬ್ಬನ್ನು ಹೊಂದಿರುತ್ತದೆ.

ಬಿಳಿ ಬ್ರೆಡ್

ಬಿಳಿ ಬ್ರೆಡ್

ಹೆಚ್ಚಿನ ಬ್ರೆಡ್‌ಗಳು ಮೈದಾವನ್ನು ಹೊಂದಿರುತ್ತದೆ. ಮೈದಾ ಹೊಂದಿದ ಬ್ರೆಡ್ ಅನ್ನು ಹೆಚ್ಚು ತಿನ್ನುವುದು ಆರೋಗ್ಯಕ್ಕೆ ಉತ್ತಮವಾಗಿರುವುದಿಲ್ಲ, ಅಲ್ಲದೆ ಇದು ತೂಕ ಇಳಿಸುವಲ್ಲಿ ಹೆಚ್ಚು ಪರಿಣಾಮಕಾರಿ ಪ್ರಭಾವ ಬೀರುವುದಿಲ್ಲ

ಪಾಸ್ತಾ

ಪಾಸ್ತಾ

ನಿಮ್ಮ ದೇಹದ ತೂಕವನ್ನು ಇಳಿಸಿಕೊಳ್ಳುವ ಆಲೋಚನೆಯಲ್ಲಿ ನೀವು ಇರುವಿರಾದರೆ ಪಾಸ್ತಾದಿಂದ ದೂರ ಇರುವುದೇ ಸೂಕ್ತ. ಏಕೆಂದರೆ ಪಾಸ್ತಾದಲ್ಲಿ ಅತೀ ಹೆಚ್ಚು ಕೊಬ್ಬಿನಂಶ ಇರುತ್ತದೆ. ಅದೂ ಅಲ್ಲದೆ ಪಾಸ್ತಾ ತಿಂಡಿಗಳಲ್ಲಿ ಚೀಸ್ ಮತ್ತು ಎಣ್ಣೆಯ ಅಂಶ ಹೆಚ್ಚಾಗಿ ಬಳಕೆಯಾಗುತ್ತದೆ. ಹಾಗಾಗಿ ಇಂತಹ ಆಹಾರದಿಂದ ನೀವು ದೂರ ಇರುವುದೇ ಒಳಿತು.

ರೆಡ್ ಮೀಟ್

ರೆಡ್ ಮೀಟ್

ಕೆಂಪು ಮಾಂಸ ಅತ್ಯಂತ ಹೆಚ್ಚು ಕೊಬ್ಬು ಹಾಗೂ ಕೊಲೆಸ್ಟ್ರಾಲ್ ಹೊಂದಿರುವ ಆಹಾರವಾಗಿದೆ. ಕೆಲವು ಅಧ್ಯಯನಗಳ ಪ್ರಕಾರ ಕೆಂಪು ಮಾಂಸ ಸೇವನೆಯಿಂದ ಬೊಜ್ಜು ಮತ್ತು ಹೃದಯ ಸಮಸ್ಯೆಯ ಅಪಾಯಗಳು ಉಂಟಾಗುತ್ತವೆ ಎಂದು ಸಾಬೀತು ಪಡಿಸಿದೆ. ಇದು ರುಚಿಕರವಾಗಿದ್ದರೂ ಅನಿಯಮಿತ ಕೊಲೆಸ್ಟ್ರಾಲ್ ಮಟ್ಟವನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತದೆ. ಹಾಗಾಗಿ ಕೆಂಪು ಮಾಂಸ (ರೆಡ್ ಮೀಟ್) ಹೆಚ್ಚು ಪ್ರಮಾಣದ ಕೊಬ್ಬನ್ನು ಹೊಂದಿರುವುದರಿಂದ ಇದು ನಿಮ್ಮನ್ನು ದಪ್ಪನಾಗಿಸುವುದಕ್ಕೆ ಕಾರಣವಾಗಿರುತ್ತದೆ.

ಚೀಸ್

ಚೀಸ್

ಇದು ಕ್ಯಾಲ್ಶಿಯಮ್ ಮತ್ತು ಹಾಲಿನ ಅಂಶವನ್ನು ಒಳಗೊಂಡಿರುತ್ತದೆ, ಅಲ್ಲದೆ ನಿಮ್ಮ ದೇಹದಲ್ಲಿ ಕೊಬ್ಬನ್ನು ಉತ್ಪಾದಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ಇದು ನಿಮ್ಮ ದೇಹದ ತೂಕ ಇಳಿಸುವಲ್ಲಿ ಹೆಚ್ಚು ಪರಿಣಾಮಕಾರಿ ಪ್ರಭಾವ ಬೀರುವುದಿಲ್ಲ.

ಬೀನ್ಸ್

ಬೀನ್ಸ್

ಕೆಲವೊಂದು ಬೀನ್ಸ್‌ಗಳಾದ ಕೆಂಪು ಬೀನ್ಸ್ ಕೊಬ್ಬನ್ನು ಹೊಂದಿರುತ್ತದೆ. ರಾಜ್ಮಾ ಕೂಡ ನಿಮ್ಮ ತೂಕ ಇಳಿಸುವ ಕಾಯಕಕ್ಕೆ ವಿರೋಧಿ ಆಹಾರವಾಗಿದೆ. ತಾಜಾ ಮತ್ತು ಒಣ ಬೀನ್ಸ್ ಅನ್ನು ತೊರೆಯುವುದು ಅನಿವಾರ್ಯವಾಗಿದೆ.

English summary

Food To Stop Eating For Weight Loss

Do you go on a diet every morning and fail by the end of the day? There are some foods that you must quit to lose weight right away. Staying away from these fattening foods helps you to lose weight fast.
X
Desktop Bottom Promotion