For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು

|

ಚಳಿಗಾಲದ ಆಗಮನವಾಗುತ್ತಿದೆ. ಬೆಳಗಿನ ಇಬ್ಬನಿ, ಚಳಿಗಾಳಿ, ಚಿಗುರೊಡೆದ ತಳಿರಿನೊಡನೇ ತಣ್ಣಗೇ ಆಗಮಿಸುತ್ತವೆ. ಜೊತೆಗೆ ಶೀತ, ನೆಗಡಿ ಇನ್ನಿತರ ಚಳಿಗಾಲ ಸಂಬಂಧಿ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತಿವೆ. ಆದರೆ ಇವೆಲ್ಲವನ್ನು ತಡೆಯುವ ಶಕ್ತಿ ಮಾತ್ರ ದೇಹದಲ್ಲಿ ಕುಂದುತ್ತಿದೆ. ಹಾಗಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೆಲವು ಆಹಾರವನ್ನು ಸೇವಿಸುವುದರಿಂದ ರೋಗಗಳಿಗೆ ತುತ್ತಾಗುವುದನ್ನು ತಡೆಯಬಹುದು.

ಸೀಬೆಕಾಯಿ


ಸೀಬೆಕಾಯಿ ಹೊಟ್ಟೆಯ ಹಾಗೂ ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಚಳಿಗಾಲದಲ್ಲಿ ಸಂಧಿ ನೋವು ಹೆಚ್ಚಾಗಿ ಕಂಡು ಬರುತ್ತದೆ. ಸೀಬೆಕಾಯಿ ಸಂಧಿನೋವು ತಡೆಯುವಲ್ಲಿ ಸಹಕಾರಿಯಾಗಿದೆ.

ಪಾಲಾಕ್


ಪಾಲಾಕ್ ಸೊಪ್ಪನ್ನು ಆಹಾರಕ್ರಮದಲ್ಲಿ ಹೆಚ್ಚಾಗಿ ಸೇರಿಸಬೇಕು. ಅದರಲ್ಲೂ ಈ ಸಮಯದಲ್ಲಿ ಪಾಲಾಕ್ ಸೊಪ್ಪು ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತದೆ. ಖಾಲಿ ಹೊಟ್ಟೆಯಲ್ಲಿ ಹಣ್ಣುಗಳ ಸೇವನೆ ದೇಹಕ್ಕೆ ಆರೋಗ್ಯಕಾರಿ ಹೇಗೆ?

ಮೊಸರು


ಮೊಸರಿನಲ್ಲಿ ದೇಹಕ್ಕೆ ಅಗತ್ಯವಾದ ಒಳ್ಳೆಯ ಬ್ಯಾಕ್ಟೀರಿಯಾ ಇರುವುದರಿಂದ ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿ. ಇದರ ಸೇವನೆಯಿಂದ ಜೀರ್ಣಕ್ರಿಯೆಯೂ ಸಮತೋಲನವಾಗಿ ಸಾಗುವಂತೆ ನೋಡಿಕೊಳ್ಳುತ್ತದೆ

ಗ್ರೀನ್ ಟೀ


ಗ್ರೀನ್ ಟೀನಲ್ಲಿನ ಪಾಲಿಫೆನಾಲ್ಸ್, ಪೊಟೆಂಟ್ ಪ್ಲಾಂಟ್ ಆಂಟಿಯಾಕ್ಸಿಡೆಂಟ್ ಗಳಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಗ್ರೀನ್ ಟೀನಲ್ಲಿರುವ ಪ್ರತ್ಯೇಕ ಪಾಲಿಫೆನಾಲ್ಸ್ ಕ್ಯಾಟೆಚಿನ್ ಎಂಬ ಅಂಶ ವೈರಸ್‌ಗಳನ್ನು ತೊಡೆದು ಹಾಕುತ್ತದೆ ಎಂದು ಕೆಲವು ಅಧ್ಯಯನ ತಿಳಿಸಿದೆ. ಆದರೆ ಗ್ರೀನ್ ಟೀ ಉಪಯೋಗವನ್ನು ಸಂಪೂರ್ಣವಾಗಿ ಪಡೆಯಬೇಕೆಂದರೆ ಬಿಸಿ ನೀರಿಗೆ ಗ್ರೀನ್ ಟೀಯನ್ನು ಒಂದು ನಿಮಿಷ ಅದ್ದಿ ಸ್ವಲ್ಪ ನಿಂಬೆ ಅಥವಾ ಜೇನನ್ನು ಬೆರೆಸಿ ಕುಡಿಯಬಹುದು. ಆದರೆ ಹಾಲನ್ನು ಸೇರಿಸಿ ಕುಡಿದರೆ ಈ ಉಪಯೋಗ ಪಡೆಯಲು ಸಾಧ್ಯವಿಲ್ಲ.

ವಿಟಮಿನ್ ಡಿ


ವಿಟಮಿನ್ ಡಿ ಮಾತ್ರೆಗಳನ್ನು ತೆಗೆದುಕೊಳ್ಳುವ ಮಕ್ಕಳು ಚಳಿಗಾಲದ ಸಮಸ್ಯೆಗಳಿಗೆ ಒಳಗಾಗುವುದು ಶೇಕಡಾ 40ರಷ್ಟು ಕಡಿಮೆ ಎಂದು ತಿಳಿದುಬಂದಿದೆ. ಈ ವಿಟಮಿನ್ ಡಿ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿ ಸುಸ್ತಾಗುವಂತೆ ಮಾಡುವ ಬ್ಯಾಕ್ಟೀರಿಯಾವನ್ನು ನಿರ್ಮೂಲನೆ ಮಾಡುತ್ತದೆ ಎನ್ನಲಾಗಿದೆ. ಅಷ್ಟೇ ಅಲ್ಲ, ಮೀನು, ಸೂರ್ಯನ ಕಿರಣವೂ ಕೂಡ ವಿಟಮಿನ್ ಡಿ ನೀಡುತ್ತದೆ.

ಕಿತ್ತಳೆ


ಕಿತ್ತಳೆ ತಿಂದರೆ ಶೀತವಾಗುತ್ತದೆ ಎಂದು ಅದನ್ನು ತಿನ್ನದೆ ಇರುತ್ತಾರೆ. ಕಿತ್ತಳೆಯಲ್ಲಿ ವಿಟಮಿನ್ ಸಿ ಇರುವುದರಿಂದ ಇದನ್ನು ತಿಂದರೆ ಕೆಮ್ಮು, ಶೀತ ಇವುಗಳ ವಿರುದ್ಧ ಹೋರಾಡುತ್ತದೆ. ಪ್ರತಿದಿನ ಕಿತ್ತಳೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ಕಿತ್ತಳೆಯ ಬಗ್ಗೆ ಕೆಲ ಆಸಕ್ತಿಕರ ಅಂಶಗಳು
English summary

Food to boost immune system in Winter

You can ensure that your body and immunity run smoothly by rounding out your plate with plenty of colorful servings of fruits and veggies. The following ingredients can add extra flu-fighting punch to your winter meal plan.
Story first published: Monday, November 17, 2014, 12:22 [IST]
X
Desktop Bottom Promotion