For Quick Alerts
ALLOW NOTIFICATIONS  
For Daily Alerts

ವಾರದೊಳಗೆ ಹೊಟ್ಟೆಯ ಕೊಬ್ಬು ಕರಗಲು ಹೀಗೆ ಮಾಡಿ!

|

ಯಾರು ತಾನೆ ಫ್ಲಾಟ್ ಹೊಟ್ಟೆಯನ್ನು ಪಡೆಯಲು ಇಷ್ಟಪಡುವುದಿಲ್ಲ ಹೇಳಿ? ಫ್ಲಾಟ್ ಹೊಟ್ಟೆ ಅಥವಾ ಎಬಿಎಸ್ ಹದಿಹರೆಯದವರಲ್ಲಿ ಮಾತ್ರವಲ್ಲ ಮಧ್ಯ ವಯಸ್ಕರಲ್ಲೂ ಬಯಕೆಯನ್ನು ಮೂಡಿಸಿದೆ. ಸುಂದರವಾಗಿರುವ ದೇಹದಾಕಾರ ಮತ್ತು ಸೆಕ್ಸೀ ಹೊಟ್ಟೆಯನ್ನು ಯಾರು ತಾನೆ ಬಯಸುವುದಿಲ್ಲ ಹೇಳಿ. ಪ್ರತಿಯೊಬ್ಬರೂ ಸುಂದರ ದೇಹಾಕೃತಿಯನ್ನು ಪಡೆಯಲು ಬಯಸುತ್ತಾರೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನಿಮ್ಮಲ್ಲಿ ಕಂಡುಬರುವ ಒತ್ತಡಕ್ಕೆ ಕಾರಣಗಳೇನು?

ಒಂದು ವಾರದಲ್ಲಿ ಹೊಟ್ಟೆ ಕರಗುವ ಸಲಹೆಯನ್ನು ನೀಡಿದ ಯಾವುದೇ ಲೇಖನಗಳು ಬಹುಶಃ ಇರಲಿಕ್ಕಿಲ್ಲ. ಇಲ್ಲಿ ಸಮಸ್ಯೆ ಏನೆಂದರೆ ಸಲಹೆಯನ್ನು ಅನುಸರಿಸಲು ಪ್ರತಿಯೊಬ್ಬರೂ ಪ್ರಯತ್ನಪಡುವುದಿಲ್ಲ. ನಿಮ್ಮ ಪ್ರಯತ್ನ ಕೂಡ ಸುಂದರ ಹೊಟ್ಟೆಯನ್ನು ಪಡೆಯುವಲ್ಲಿ ಸಹಕಾರಿ.

ಈ ಲೇಖನದಲ್ಲಿ ನಾವು ಈ ದಿನ ಸುಂದರ ಕೊಬ್ಬಿಲ್ಲದ ಹೊಟ್ಟೆಯನ್ನು ಪಡೆಯುವ ಸರಳ ಸಲಹೆಗಳನ್ನು ನೀಡುತ್ತಿದ್ದೇವೆ. ನೀವು ವರ್ಕಿಂಗ್ ಮಾಡುವ ಕೆಲವೊಂದು ವಿಧಾನಗಳನ್ನು ಇದು ಒಳಗೊಂಡಿದೆ. ನೀವು ಇದಕ್ಕೆ ಮಾಡಬೇಕಾದ್ದು ಇಷ್ಟೇ ನಾವಿಲ್ಲಿ ನೀಡಿರುವ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸಿ ವರ್ಕ್‌ಔಟ್ ಅನ್ನು ಮಾಡುತ್ತಾ ವಾರದೊಳಗೆ ಸುಂದರ ಆಕಾರದ ಹೊಟ್ಟೆಯನ್ನು ಪಡೆಯಿರಿ. ನೀವು ಒಮ್ಮೆ ಸಾಧಿಸಿದರೆಂದರೆ ಜಯ ನಿಮಗೆ ಕಟ್ಟಿಟ್ಟದ್ದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಡಯಟ್ ಮಾಡದೆಯೇ ತೆಳ್ಳಗಾಗಬೇಕೆ?

ಸಕ್ಕರೆ ಅಂಶವನ್ನು ಇಳಿಸಿ

ಸಕ್ಕರೆ ಅಂಶವನ್ನು ಇಳಿಸಿ

ಹೊಟ್ಟೆಯ ಕೊಬ್ಬು ಹೆಚ್ಚಾಗಲು ಕಾರಣ ನೀವು ಸೇವಿಸುವ ಸಿಹಿ ಪದಾರ್ಥವಾಗಿದೆ. ಕೊಬ್ಬಿಲ್ಲದ ಹೊಟ್ಟೆ ನಿಮ್ಮದಾಗಬೇಕಿದ್ದರೆ ಸಕ್ಕರೆ ಸೇವನೆಯನ್ನು ನೀವು ಕಡಿಮೆ ಮಾಡಲೇಬೇಕು. ಸಕ್ಕರೆ ಮಿಶ್ರಿತ ಪದಾರ್ಥಗಳೆಂದರೆ ಐಸ್‌ಕ್ರೀಂ, ಬೇಕರಿ ತಿನಿಸುಗಳು ಮತ್ತು ಸಿಹಿತಿಂಡಿಗಳ ಸೇವನೆ ಪ್ರಮಾಣವನ್ನು ನೀವು ಮಿತಗೊಳಿಸಲೇಬೇಕು. ಇಂತಹ ಆಹಾರಗಳು ನಿಮ್ಮ ಹೊಟ್ಟೆಯಲ್ಲಿ ಕೊಬ್ಬು ಸಂಗ್ರಹವಾಗುವಂತೆ ಮಾಡುತ್ತದೆ.

ಸಿಂಗಲ್ ವೆಜಿಟೇಬಲ್ ಡಯಟ್

ಸಿಂಗಲ್ ವೆಜಿಟೇಬಲ್ ಡಯಟ್

ವಾರದಲ್ಲಿ ಕೊಬ್ಬಿಲ್ಲದ ಹೊಟ್ಟೆ ನಿಮ್ಮದಾಗಬೇಕಿದ್ದರೆ ನೀವು ತ್ಯಾಗ ಮತ್ತು ಗುರಿ ಸಾಧಿಸುವ ಆಕಾಂಕ್ಷೆಯನ್ನು ಹೊಂದಲೇಬೇಕು. ಸಿಂಗಲ್ ವೆಜಿಟೇಬಲ್ ಅಥವಾ ಫ್ರುಟ್ ಡಯಟ್ ಅನ್ನು ಪಾಲಿಸಲೇಬೇಕು. ನಿಮ್ಮ ಸಣ್ಣಗಿನ ಆಕರ್ಷಕ ಹೊಟ್ಟೆಗೆ ಸಿಂಗಲ್ ವೆಜಿಟೇಬಲ್ ಅಥವಾ ಫ್ರುಟ್ ಡಯೆಟ್ ತುಂಬಾ ಹಿತಕಾರಿ.

ವ್ಯಾಯಾಮ, ವ್ಯಾಯಾಮ, ವ್ಯಾಯಾಮ

ವ್ಯಾಯಾಮ, ವ್ಯಾಯಾಮ, ವ್ಯಾಯಾಮ

ದಿನನಿತ್ಯ ಒಂದು ಗಂಟೆಯಷ್ಟು ಹೊಟ್ಟಯ ವ್ಯಾಯಾಮ ಅತೀ ಅಗತ್ಯ. ವ್ಯಾಯಾಮವು ನಿಮ್ಮ ಕೊಬ್ಬಿನಂಶವನ್ನು ಕರಗಿಸಿ ಹೊಟ್ಟೆಯ ಸ್ಲಿಮ್‌ನೆಸ್ ಪಡೆಯಲು ಹಿತಕಾರಿ. ಹೊಟ್ಟೆಯ ಕೊಬ್ಬನ್ನು ಕರಗಿಸಲು ನೀವು ವ್ಯಾಯಾಮವನ್ನು ಆಯ್ದುಕೊಳ್ಳಲೇಬೇಕು. ಜಿಮ್ ಅಥವಾ ಪವರ್ ಯೋಗಾವನ್ನು ನೀವು ಪ್ರತಿನಿತ್ಯ ಅಭ್ಯಸಿಸಬೇಕು. ಹೊಟ್ಟೆಯ ವ್ಯಾಯಾಮವನ್ನು ಮಾಡಿದಷ್ಟು ಫಲಿತಾಂಶ ಹಿತಕಾರಿಯಾಗಿರುತ್ತದೆ ಎಂಬುದನ್ನು ನೆನಪಿಡಿ.

ಪ್ರೋಟೀನ್ ಹೆಚ್ಚಿಸಿ

ಪ್ರೋಟೀನ್ ಹೆಚ್ಚಿಸಿ

ನೀವು ಪ್ರೋಟೀನ್ ಅಂಶಗಳನ್ನು ಹೆಚ್ಚು ತೆಗೆದುಕೊಳ್ಳುತ್ತಿದ್ದಂತೆ, ಕೊಬ್ಬು ಸಂಗ್ರಹಣೆ ಕಡಿಮೆಯಾಗುತ್ತಾ ಹೋಗುತ್ತದೆ. ಆದ್ದರಿಂದ ದಿನನಿತ್ಯದ ಆಹಾರದಲ್ಲಿ ಪ್ರೋಟೀನ್ ಸೇವನೆ ಹೆಚ್ಚಾಗಿರಲಿ. ನಿಮ್ಮ ವೈದ್ಯರ ಸಲಹೆಯನ್ನು ಪಡೆದುಕೊಂಡು ಪ್ರೊಟೀನ್ ಆಹಾರಗಳನ್ನು ಸೇವಿಸಿ. ನಿಮ್ಮ ತೂಕ ಇಳಿಸುವ ಗಮನದೊಂದಿಗೆ ನಿಮ್ಮ ಆರೋಗ್ಯದ ಕಡೆಗೂ ಗಮನವಿರಲಿ.

ನೀರು ಮತ್ತು ಲಿಂಬೆ

ನೀರು ಮತ್ತು ಲಿಂಬೆ

ಬೆಚ್ಚಗಿನ ನೀರಿಗೆ ಲಿಂಬೆ ರಸವನ್ನು ಹಿಂಡಿಕೊಂಡು ಪ್ರಾತಃ ಕಾಲದಲ್ಲಿ ನಿತ್ಯವೂ ಸೇವಿಸಿದರೆ ನಿಮ್ಮ ಕೊಬ್ಬು ಕರಗಿ ಸುಂದರ ಆಕಾರ ನಿಮ್ಮದಾಗುತ್ತದೆ. ಹೊಟ್ಟೆಯ ಕೊಬ್ಬು ವಾರದೊಳಗೆ ಖಂಡಿತ ಕರಗುತ್ತದೆ. ಆದರೆ ಲಿಂಬೆ ಬೆರೆಸಿದ ಬೆಚ್ಚಗಿನ ನೀರಿನ ಸೇವನೆಯನ್ನು ನಿತ್ಯವೂ ನೀವು ಮಾಡಬೇಕು ಆದರೆ ಮಾತ್ರ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.

English summary

Fitness Tips To Get A Flat Stomach In A Week

Who does not want a flat tummy to flaunt? The flat tummy or abs is getting popular not only among youth but middle aged women also do not like flabby stomachs. Every body wants to wear clothes that flaunt their perfect curves and sexy tummy.
Story first published: Thursday, March 13, 2014, 16:34 [IST]
X
Desktop Bottom Promotion