For Quick Alerts
ALLOW NOTIFICATIONS  
For Daily Alerts

ಕಂಪ್ಯೂಟರ್ ಬಳಕೆದಾರರಿಗೆ ಕಣ್ಣಿನ ಕಾಳಜಿಯ ಟಿಪ್ಸ್

By Hemanth P
|

ಹೊರಗಿನ ಜಗತ್ತಿಗೆ ಆತ್ಮದ ಕಿಟಕಿಯಂತಿರುವ ಕಣ್ಣುಗಳನ್ನು ಕನ್ನಡಿಯೆಂದು ಪರಿಗಣಿಸಲಾಗುತ್ತದೆ. ಕಣ್ಣುಗಳು ನಿಮ್ಮ ಸೌಂದರ್ಯವನ್ನು ಮಾತ್ರವಲ್ಲದೆ ಆರೋಗ್ಯವನ್ನು ಕೂಡ ಪ್ರತಿನಿಧಿಸುತ್ತದೆ. ಕಣ್ಣುಗಳ ಆರೋಗ್ಯ ನಿರ್ಧರಿಸುವಲ್ಲಿ ನಮ್ಮ ಜೀವನಶೈಲಿಯು ಪ್ರಮುಖ ಪಾತ್ರ ನಿರ್ವಹಿಸುತ್ತದೆ.

ಇಂದಿನ ದಿನಗಳಲ್ಲಿ ಹೆಚ್ಚಿನ ಮಂದಿ ಕಂಪ್ಯೂಟರ್ ನಲ್ಲಿ ಕೆಲಸ ಮಾಡುತ್ತಾರೆ ಮತ್ತು ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಿರಂತರವಾಗಿ ದೀರ್ಘಕಾಲದವರೆಗೆ ಕಂಪ್ಯೂಟರ್ ಬಳಕೆ ಮಾಡುವವರು ನಿವಾಗಿದ್ದರೆ ಆಗ ನಿಮ್ಮ ಕಣ್ಣುಗಳ ಆರೋಗ್ಯದೊಂದಿಗೆ ಅವುಗಳ ಆರೈಕೆ ಮಾಡುವುದು ತುಂಬಾ ಮುಖ್ಯ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆಯಿಲ್ ಪುಲ್ಲಿಂಗ್ ಆರೋಗ್ಯಕರ ಪ್ರಯೋಜನಗಳು

ದಿನಪೂರ್ತಿ ನೀವು ಕಂಪ್ಯೂಟರ್ ಮುಂದೆ ಕುಳಿತುಕೊಂಡ ಬಳಿಕ ಕಣ್ಣಿಗೆ ದಣಿವಾಗುವುದು ಸಾಮಾನ್ಯ ಅಂಶ. ಇದಕ್ಕೆ ಹಲವಾರು ಕಾರಣಗಳಿರಬಹುದು. ಅದರಲ್ಲಿ ಕಂಪ್ಯೂಟರ್ ಸ್ಕ್ರೀನ್ ಗೆ ತುಂಬಾ ಹತ್ತಿರದಲ್ಲಿರುವುದು, ಕಿಟಕಿಯಿಂದ ಪ್ರಜ್ವಲಿಸುವ ಬೆಳಕು ಬರುವುದು, ಸ್ಕ್ರೀನ್ ಮೇಲೆ ಮಸುಕಾದ ಅಕ್ಷರಗಳು, ಸ್ಕ್ರೀನ್ ನೊಂದಿಗೆ ಅಹಿತಕರ ಕಣ್ಣಿನ ಮಟ್ಟ ಅಥವಾ ದೀರ್ಘ ಕಾಲ ತೆರೆಯ ಮೇಲೆ ನಿರಂತರ ದಿಟ್ಟಿಸುವುದು.

Eye Care Tips For Computer Users

ನೀವು ಕೆಲಸ ಮಾಡುವಾಗ ಕಂಪ್ಯೂಟರ್ ಎದುರಿನಿಂದ ಬೇರೆ ಕಡೆಗೆ ಹೋಗಲು ಸಾಧ್ಯವಿಲ್ಲ. ಇದಕ್ಕೆ ಒಳ್ಳೆಯ ಆಯ್ಕೆಯೆಂದರೆ ನಿಮ್ಮ ಕಣ್ಣುಗಳ ಬಗ್ಗೆ ಕಾಳಜಿ ವಹಿಸುವುದು. ಇಲ್ಲಿ ಕೊಟ್ಟಿರುವ ಕಣ್ಣಿನ ಕಾಳಜಿಯ ಕೆಲವೊಂದು ಟಿಪ್ಸ್ ಗಳು ನೀವು ಕಂಪ್ಯೂಟರ್ ನೋಡಿ ಕಣ್ಣುಗಳು ದಣಿಸುವುದರಿಂದ ತಪ್ಪಿಸಲಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ರಾತ್ರಿ ಪಾಳಿ ಕೆಲಸದವರಿಗೆ ಆರೋಗ್ಯ ಸಲಹೆಗಳು

ವಿರಾಮ ಪಡೆಯಿರಿ:
ಕಣ್ಣು ಮಿಟುಕಿಸದೆ ನಿರಂತರವಾಗಿ ಕಂಪ್ಯೂಟರ್ ನೋಡುವುದರಿಂದ ಕಣ್ಣು ಒಣಗಿ ಹೋಗಬಹುದು. ಕಂಪ್ಯೂಟರ್ ನಿಂದ ಕಣ್ಣಿಗೆ ಆಗುವ ದಣಿವಿನಿಂದ ಹೇಗೆ ತಪ್ಪಿಸಿಕೊಳ್ಳುವುದೆಂದು ನಿಮಗೆ ಅನಿಸುತ್ತಿದ್ದರೆ ಕೆಲಸದ ಮಧ್ಯೆ ಸ್ವಲ್ಪ ವಿಶ್ರಾಂತಿ ಪಡೆಯುವುದು ಕಣ್ಣಿನ ಕಾಳಜಿಗೆ ಅತ್ಯುತ್ತಮ ಟಿಪ್ಸ್.

ಅಂಗೈ ಉಜ್ಜುವುದು:
ನಿಮ್ಮ ಅಂಗೈಗಳನ್ನು ಸರಿಯಾಗಿ ಬಿಸಿ ಆಗುವ ತನಕ ಉಜ್ಜಿ. ಇದರ ಬಳಿಕ 60 ಸೆಕೆಂಡುಗಳ ಕಾಲ ಅಂಗೈಗಳನ್ನು ಕಣ್ಣಿನ ಮೇಲಿಡಿ. ಇದರಿಂದ ದಣಿವಾಗಿರುವ ನಿಮ್ಮ ಕಣ್ಣುಗಳಿಗೆ ನೆರವಾಗುತ್ತದೆ. ನಿಮಗೆ ಆರಾಮವೆನಿಸುವ ತನಕ ಇದನ್ನು ಮುಂದುವರಿಸಿ.

ಕಣ್ಣಿನ ಮಟ್ಟವನ್ನು ಸರಿಹೊಂದಿಸಿ:
ಇದು ಟಿವಿ ಅಥವಾ ಕಂಪ್ಯೂಟರ್ ಆಗಿರಬಹುದು. ಕಣ್ಣಿನ ಆರೋಗ್ಯಕ್ಕೆ ಸ್ಕ್ರೀನ್ ಮತ್ತು ಕಣ್ಣಿನ ಮಟ್ಟವನ್ನು ಸರಿಹೊಂದಿಸುವುದು ತುಂಬಾ ಮುಖ್ಯ. ಕಂಪ್ಯೂಟರ್ ನಲ್ಲಿ ಕೆಲಸ ಮಾಡುವವರಿಗೆ ಕಣ್ಣಿನ ಕಾಳಜಿಗೆ ಇದು ಅತ್ಯುತ್ತಮ ಟಿಪ್ಸ್.

20 ನಿಮಿಷಕ್ಕೊಮ್ಮೆ ಕಣ್ಣನ್ನು ಬೇರೆ ಕಡೆ ಹಾಯಿಸಿ:
ಕಂಪ್ಯೂಟರ್ ಮುಂದೆ ದೀರ್ಘಕಾಲ ಕೆಲಸ ಮಾಡುವಾಗ ಆರಾಮ ಪಡೆಯಲು ಈ ವ್ಯಾಯಾಮ ನಿಮಗೆ ನೆರವಾಗುತ್ತದೆ. ನಿಮ್ಮ ಕಂಪ್ಯೂಟರ್ ನಿಂದ ಪ್ರತೀ 20 ನಿಮಿಷಕ್ಕೊಮ್ಮೆ ಕಣ್ಣನ್ನು ಬೇರೆ ಕಡೆ ಹಾಯಿಸಿ. ಸುಮಾರು 20 ಅಡಿ ಅಂತರದಲ್ಲಿರುವ ಯಾವುದಾದರೂ ವಸ್ತುವನ್ನು ಸುಮಾರು 20 ಸೆಕೆಂಡುಗಳ ಕಾಲ ನೋಡಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ರಾತ್ರಿ ಪಾಳಿ ಕೆಲಸದವರಿಗೆ ಆರೋಗ್ಯ ಸಲಹೆಗಳು

ಕಾಂಟ್ರೆಸ್ ಇಡಿ:
ಕಂಪ್ಯೂಟರ್ ನಲ್ಲಿ ಕೆಲಸ ಮಾಡುತ್ತಿರುವಾಗ ನಿಮ್ಮ ಸ್ಕ್ರೀನ್‌ನ ಹಿಂದುಗಡೆ ಲಘುವಾಗಿ ಗಾಢ ಅಕ್ಷರಗಳಿರಲಿ. ಕಂಪ್ಯೂಟರ್ ಮುಂದೆ ಕೆಲಸ ಮಾಡುವವರಿಗೆ ಇದು ಅತ್ಯಂತ ಪ್ರಾಯೋಗಿಕ ಕಣ್ಣಿನ ಕಾಳಜಿಯ ಟಿಪ್ಸ್.

ಬೆಳಕು ತಡೆಯಿರಿ:
ಸರಿಯಾದ ಬೆಳಕು ಇರುವ ಕಡೆ ಕೆಲಸ ಮಾಡುವುದು ತುಂಬಾ ಮುಖ್ಯ. ಕಂಪ್ಯೂಟರ್ ನಿಂದ ಕಣ್ಣಿನ ಮೇಲೆ ಆಗುವ ದಣಿವು ತಪ್ಪಿಸಲು ಏನು ಮಾಡಬೇಕೆಂದು ನಿಮಗೆ ಅಚ್ಚರಿಯಾಗುತ್ತಿದ್ದರೆ ನಿಮ್ಮ ಕಂಪ್ಯೂಟರ್ ಮೇಲೆ ನೇರವಾಗಿ ಕಿಟಿಕಿ ಅಥವಾ ಛಾವಣಿಯಿಂದ ಬೆಳಕು ಬೀಳುತ್ತಿದ್ದರೆ ಅದನ್ನು ತಡೆಯಿರಿ.

ಬ್ರೈಟ್ ನೆಸ್ ಕಡಿಮೆ ಮಾಡಿ:
ಒಂದು ಹಿತಕರ ಮಟ್ಟಕ್ಕೆ ಬ್ರೈಟ್ ನೆಸ್ ಕಡಿಮೆ ಮಾಡಿದ ಬಳಿಕವಷ್ಟೇ ಕಂಪ್ಯೂಟರ್ ನಲ್ಲಿ ಕೆಲಸ ಮಾಡಿ. ಬ್ರೈಟ್ ನೆಸ್ ಹೆಚ್ಚಿದ್ದರೆ ಅದು ನಿಮ್ಮ ಕಣ್ಣುಗಳ ದಣಿವು ಹೆಚ್ಚು ಮಾಡುತ್ತದೆ. ಕಂಪ್ಯೂಟರ್ ನಲ್ಲಿ ಕೆಲಸ ಮಾಡುವಾಗ ಅತ್ಯಂತ ಉಪಯುಕ್ತ ಟಿಪ್ಸ್ ಗಳಲ್ಲಿ ಇದು ಒಂದಾಗಿದೆ.

ಹಸಿರು ನೋಡಿ:
ನಿಮ್ಮ ಕಣ್ಣುಗಳು ಆರಾಮವಾಗಿರಲು ಹಸಿರು ಬಣ್ಣ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ನಿಮ್ಮ ಕೆಲಸದ ಮಧ್ಯೆ ಕಿಟಿಕಿಯಿಂದ ಹೊರಗೆ ನೋಡಿ. ನಾಲ್ಕು ಗೋಡೆಗಳ ಮಧ್ಯೆ ಕೆಲಸ ಮಾಡುವಾಗ ಹಸಿರು ನೋಡಲು ಹೇಗೆ ಸಾಧ್ಯವೆಂದು ನಿಮಗನಿಸುತ್ತಿದ್ದರೆ ಆಗ ಸ್ಕ್ರೀನ್‌ನಲ್ಲಿ ಹಸಿರು ವಾಲ್ ಪೇಪರ್ ಅಳವಡಿಸಿ.

ಆಗಾಗ್ಗೆ ಕಣ್ಣು ಮಿಟುಕಿಸಿ:
ಕಂಪ್ಯೂಟರ್ ಮುಂದೆ ಕೆಲಸ ಮಾಡುವಾಗ ನೀಡುವ ಅತ್ಯಂತ ಪರಿಣಾಮಕಾರಿ ಕಣ್ಣಿನ ಕಾಳಜಿಯ ಟಿಪ್ಸ್ ಎಂದರೆ ಆಗಾಗ್ಗೆ ಕಣ್ಣುಗಳನ್ನು ಮಿಟುಕಿಸುತ್ತಾ ಇರಿ. ಇದರಿಂದ ಕಣ್ಣಿನಲ್ಲಿ ನೈಸರ್ಗಿಕ ಮೊಶ್ಚಿರೈಸರ್ ಉಳಿದುಕೊಳ್ಳಲು ನೆರವಾಗುತ್ತದೆ. ಇದರಿಂದ ಒಣಗುವ ಮತ್ತು ಇತರ ಸಮಸ್ಯೆಗಳು ದೂರವಾಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಶುಂಠಿ ಚಹಾದ 8 ಆರೋಗ್ಯ ಪ್ರಯೋಜನಗಳು

ಕಂಪ್ಯೂಟರ್ ಗ್ಲಾಸ್ ಪರಿಗಣಿಸಿ:
ಹೆಸರೇ ಹೇಳುವಂತೆ ಕಂಪ್ಯೂಟರ್ ಗ್ಲಾಸ್ ನ್ನು ಕಂಪ್ಯೂಟರ್ ಮುಂದೆ ಕೆಲಸ ಮಾಡುವವರಿಗಾಗಿ ತಯಾರಿಸಲಾಗಿದೆ. ಕಂಪ್ಯೂಟರ್ ಮುಂದೆ ಕುಳಿತು ಕಣ್ಣು ದಣಿವಾಗುವುದರಿಂದ ತಪ್ಪಿಸುವುದು ಹೇಗೆಂದು ನಿಮಗನಿಸುತ್ತಿದ್ದರೆ ಕಂಪ್ಯೂಟರ್ ಗ್ಲಾಸ್ ಪ್ರಜ್ವಲಿಸುವುದನ್ನು ತಡೆದು, ಸ್ಪಷ್ಟತೆ ಹೆಚ್ಚಿಸುತ್ತದೆ ಮತ್ತು ನಿಮ್ಮ ಕಣ್ಣುಗಳಿಗೆ ಆರಾಮ ನೀಡುತ್ತದೆ.

English summary

Eye Care Tips For Computer Users

Eyes are considered as a mirror of the soul that acts as windows to the outside world. Eyes can express not only your beauty, but also your health. Our lifestyle has a great role in determining the health of the eyes.
Story first published: Monday, February 3, 2014, 11:36 [IST]
X
Desktop Bottom Promotion