For Quick Alerts
ALLOW NOTIFICATIONS  
For Daily Alerts

ತಿನ್ನುವ ಆಹಾರ ಕ್ರಮದಲ್ಲಿ ನಿಯಂತ್ರಣ ಸಾಧಿಸಬೇಕೇ?

By Super
|

ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೆ ಆರೋಗ್ಯವೆನ್ನುವುದು ಆದ್ಯತೆಯ ವಿಷಯವಾಗಿದೆ. ತಮ್ಮ ಫಿಗರ್ ಬಗ್ಗೆ ಜಾಗೃತರಾಗಿರುವ ಜನರು ಫಿಟ್ ಹಾಗೂ ಸೆಕ್ಸಿಯಾಗಿ ಕಾಣಿಸಲು ಬಯಸುತ್ತಾರೆ. ಇದಕ್ಕಾಗಿ ಜಿಮ್ ಮತ್ತು ಆಹಾರ ಪಥ್ಯ ಪಾಲಿಸುತ್ತಾರೆ. ಈ ವಿಧಾನವು ಹಲವಾರು ಮಂದಿಗೆ ಕೆಲಸ ಮಾಡಿದೆ. ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಆಹಾರ ಕ್ರಮ ಪಾಲಿಸುವುದು ತುಂಬಾ ಕಠಿಣ. ಆಹಾರ ಕ್ರಮ ತುಂಬಾ ಮುಖ್ಯ. ಇದಕ್ಕಾಗಿ ಸೂಕ್ತ ರೀತಿ ತಿನ್ನಬೇಕು ಮತ್ತು ಕಡಿಮೆ ತಿನ್ನಬೇಕು.

ಒಳ್ಳೆಯ ಆಹಾರ ಕ್ರಮಕ್ಕೆ ಆರೋಗ್ಯ ಮತ್ತು ಫಿಟ್ ನೆಸ್ ಮಾರ್ಗದರ್ಶಕರು ನೀಡುವ ಸಾಮಾನ್ಯ ಸಲಹೆಯೆಂದರೆ ಕೆಲವು ಗಂಟೆಗಳ ಅವಧಿಯಲ್ಲಿ ಸ್ವಲ್ಪ ಸ್ವಲ್ಪ ತಿನ್ನಿ. ಒಳ್ಳೆಯ ಫಲಿತಾಂಶ ಪಡೆಯಲು ಈ ಒಂದು ನೈಜಾಂಶವನ್ನು ಪಾಲಿಸಬೇಕಾಗುತ್ತದೆ. ಸರಳ ಆಹಾರ ಕ್ರಮಕ್ಕಾಗಿ ನೀವು ಕಡಿಮೆ ತಿಂದು ಹೆಚ್ಚು ನೀರು ಕುಡಿಯಬೇಕು. ಇದು ತೂಕ ಕಡಿಮೆ ಮಾಡಲು ಅದೇ ರೀತಿ ಹೆಚ್ಚಿಸಲು ನೆರವಾಗುತ್ತದೆ. ಕೆಲವು ಸಲ ನಾವು ತುಂಬಾ ಹಸಿವಾಗುವವರೆಗೆ ಏನೂ ತಿನ್ನುವುದಿಲ್ಲ. ನಾವು ಅಗತ್ಯಕ್ಕಿಂತ ಹೆಚ್ಚಿನ ಆಹಾರ ತಿಂದು ಕೊಬ್ಬು ಮತ್ತು ಕಾಲರಿ ಹೆಚ್ಚಿಸಿಕೊಳ್ಳುತ್ತೇವೆ.

ಆಹಾರ ಕ್ರಮ ನಿಯಮಿತವಾಗಿರಬೇಕು ಹಾಗೂ ಹೆಚ್ಚು ತಿನ್ನುವುದನ್ನು ಕಡೆಗಣಿಸಬೇಕು. ಕಡಿಮೆ ಆಹಾರ ತಿನ್ನಲು ಕೆಲವೊಂದು ಆಹಾರ ಕ್ರಮದ ಟಿಪ್ಸ್ ಗಳನ್ನು ಕೆಳಗೆ ನೀಡಲಾಗಿದೆ.

ಒತ್ತಡವನ್ನು ಕಡಿಮೆ ಮಾಡುವ ಆಹಾರಗಳು ಇಲ್ಲಿದೆ ನೋಡಿ!

Easy tips to eat less

ಗಾತ್ರ ಕಿರಿದಾಗಿರಲಿ
ನಿಮಗೆ ನೀವೇ ಬಡಿಸಿಕೊಳ್ಳುತ್ತಿದ್ದರೆ ಆಗ ಸಣ್ಣ ಗಾತ್ರದ ಪಾತ್ರೆ ಮತ್ತು ಸೌಟುಗಳನ್ನು ಬಳಸಿ. ನೀವು ಬಳಸುವ ಪ್ಲೇಟ್ ಮತ್ತು ಬಟ್ಟಲುಗಳ ಬಗ್ಗೆ ಗಮನವಿರಲಿ. ಅಗತ್ಯವಿರುವ ಆಹಾರ ಹಾಕಬಹುದಾದಷ್ಟು ಮಾತ್ರ ಇದರ ಗಾತ್ರವಿರಲಿ. ದೊಡ್ಡ ಗಾತ್ರದ ಪ್ಲೇಟ್ ಗಳಿಂದ ನೀವು ಹೆಚ್ಚು ಬಡಿಸಿಕೊಂಡು ಹೆಚ್ಚಿಗೆ ತಿನ್ನಬಹುದು. ಅದೇ ರೀತಿ ಬಟ್ಟಲುಗಳು ಕೂಡ. ಕಡಿಮೆ ತಿನ್ನಲು ಇದು ಒಳ್ಳೆಯ ಆಹಾರ ಕ್ರಮದ ಟಿಪ್ಸ್.

ಗಮನ ಕೇಂದ್ರೀಕರಿಸಿ
ಊಟ ಮಾಡುವಾಗ ಬೇರೆ ಯಾವುದೇ ಕೆಲಸ ಮಾಡುವುದು ಬೇಡ. ಟಿವಿ ವೀಕ್ಷಿಸುತ್ತಾ, ಮೊಬೈಲ್ ನಲ್ಲಿ ಮಾತನಾಡುತ್ತಾ ಅಥವಾ ಪುಸ್ತಕ ಓದುತ್ತಾ ನೀವು ಊಟ ಮಾಡಿದರೆ ಆಗ ನಿಮಗೆ ಹಸಿವಾಗಿರುವುದಕ್ಕಿಂತ ಹೆಚ್ಚು ತಿನ್ನುಬಹುದು. ನಿಮ್ಮ ಆಹಾರದ ಮೇಲೆ ನಿಮಗೆ ಗಮನವಿಲ್ಲದ ಕಾರಣ ಹೀಗೆ ಆಗಬಹುದು ಮತ್ತು ಹಸಿವು ತೃಪ್ತಿಗೊಳ್ಳಬಹುದು. ಮುಂದಿನ ಸಲ ನೀವು ಊಟ ಮಾಡುವಾಗ ಯಾವುದೇ ಬೇರೆ ಚಟುವಟಿಕೆಗಳಲ್ಲಿ ಭಾಗಿಯಾಗಬೇಡಿ.

ನೀರು ಕುಡಿಯಿರಿ
ಕೆಲವೊಂದು ಸಲ ನಿಮಗೆ ಬಾಯಾರಿಕೆಯಾಗಿರಬಹುದು. ಆದರೆ ಹಸಿವಾದ ಭಾವನೆಯಾಗಿ ಏನಾದರೂ ತಿನ್ನುತ್ತೀರಿ. ಇದು ಪ್ರತಿಯೊಬ್ಬರಿಗೂ ಆಗುತ್ತದೆ. ನಿಮಗೆ ಯಾವುದೇ ಸಮಯದಲ್ಲಿ ಬಾಯಾರಿಕೆಯಾದರೆ ಆಗ ಒಂದು ಗ್ಲಾಸ್ ನೀರು ಕುಡಿಯರಿ. ಈಗಲೂ ನಿಮಗೆ ಹಸಿವಾಗುತ್ತಿದ್ದರೆ ಆಗ ಏನಾದರೂ ತಿನ್ನಿ. ಊಟದ ಮಧ್ಯೆ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ನಿಮಗೆ ಕಡಿಮೆ ತಿನ್ನಲು ಸಾಧ್ಯವಾಗುತ್ತದೆ. ನೀರು ಕುಡಿಯುವುದರಿಂದ ಎಷ್ಟು ತಿನ್ನಬೇಕು ಎನ್ನುವುದನ್ನು ನೀವು ತಿಳಿದುಕೊಳ್ಳಬಹುದು. ಪ್ರತೀ ಸಲ ಊಟಕ್ಕೆ ಮೊದಲು ನೀರು ಕುಡಿಯುವುದು ಒಳ್ಳೆಯ ಆಹಾರ ಕ್ರಮದ ಟಿಪ್ಸ್.

ನಿಧಾನವೇ ಪ್ರಧಾನ
ಅವಸರದಲ್ಲಿ ಯಾವುದೇ ಆಹಾರ ತಿನ್ನಬೇಡಿ. ಅವಸರದಲ್ಲಿ ತಿಂದರೆ ನಿಮಗೆ ಯಾವುದೇ ನಿಯಂತ್ರಣ ಮತ್ತು ತಿನ್ನುವ ಆಹಾರದ ಪ್ರಮಾಣದ ಬಗ್ಗೆ ತಿಳಿಯುವುದಿಲ್ಲ. ನಿಧಾನವಾಗಿ ಜಗಿದು ತುಂಬಾ ಸಮಯ ತೆಗೆದುಕೊಂಡು ಊಟ ಮಾಡುವುದು ಆರೋಗ್ಯ ದೃಷ್ಟಿಯಿಂದಲೂ ತುಂಬಾ ಒಳ್ಳೆಯದು. ಆಹಾರ ಸಣ್ಣಸಣ್ಣ ತುಂಡುಗಳಾಗಿ ಹೊಟ್ಟೆಯೊಳಗೆ ಹೋದರೆ ಆಗ ಜೀರ್ಣಕ್ರಿಯೆಗೆ ಸುಲಭವಾಗುತ್ತದೆ. ಆಹಾರವನ್ನು ಸರಿಯಾಗಿ ಜಗಿಯದಿದ್ದರೆ ಕೊಬ್ಬು ಸಣ್ಣ ತುಂಡಾಗಿ ಜೀರ್ಣಿಸಿಕೊಳ್ಳಲು ಸುಲಭವಾಗದು. ಕಡಿಮೆ ತಿನ್ನಲು ಸರಳ ವಿಧಾನವೆಂದರೆ ಚೆನ್ನಾಗಿ ಜಗಿಯಿರಿ.

ಪ್ಯಾಕೇಜ್ ಆಹಾರ ಕಡೆಗಣಿಸಿ
ಪ್ಯಾಕ್ ಮಾಡಿರುವ ಡಬ್ಬಿ ಮತ್ತು ಬಾಕ್ಸ್ ಗಳಲ್ಲಿ ಆಹಾರ ತಿನ್ನುವುದನ್ನು ಕಡೆಗಣಿಸಿ. ಇದು ನೀವು ತಿನ್ನುವ ಆಹಾರದ ಪ್ರಮಾಣಕ್ಕೆ ನಿಯಂತ್ರಣ ಹಾಕುವುದಿಲ್ಲ. ಪ್ಲೇಟ್, ಬಟ್ಟಲು ಅಥವಾ ಟಿಶ್ಯೂನಲ್ಲಿ ಹಾಕಿ ತಿನ್ನಿ. ಪ್ಯಾಕೆಟ್ ಮತ್ತು ಬಾಕ್ಸ್ ಗಳನ್ನು ಸಂಪೂರ್ಣವಾಗಿ ಕಡೆಗಣಿಸಿ. ಕಡಿಮೆ ತಿನ್ನಲು ಇದು ತುಂಬಾ ಸುಲಭ ಆರೋಗ್ಯಕ್ರಮದ ಟಿಪ್ಸ್.

ಕಡಿಮೆ ತಿನ್ನುವುದು ಎಂದರೆ ಯಾವಾಗಲೂ ಹಸಿದಿರುವುದು ಎಂದಲ್ಲ. ಆಹಾರ ಕ್ರಮದ ಟಿಪ್ಸ್ ಗಳು ನೀವು ಕಡಿಮೆ ತಿಂದು ನಿಮ್ಮ ಆಹಾರ ಕ್ರಮ ಪಾಲಿಸುವಂತೆ ಮಾಡುತ್ತದೆ ಮತ್ತು ಹೆಚ್ಚು ತಿನ್ನುವುದನ್ನು ತಡೆಯುತ್ತದೆ. ಈ ಟಿಪ್ಸ್ ಗಳನ್ನು ಬಳಸಿಕೊಂಡು ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ನೀವು ಆರೋಗ್ಯಕರವಾಗಿರಬಲ್ಲಿರಿ.

Story first published: Monday, June 16, 2014, 18:28 [IST]
X
Desktop Bottom Promotion