For Quick Alerts
ALLOW NOTIFICATIONS  
For Daily Alerts

ಕೇವಲ 10 ನಿಮಿಷದಲ್ಲಿ ಸೂಪರ್ ಆರೋಗ್ಯ ನಿಮ್ಮದಾಗಲಿ!

|

ಮುಂಜಾನೆದ್ದು ತಿಂಡಿಗಿಂತ ಮುಂಚೆ ವ್ಯಾಯಾಮ ಮಾಡುವುದರಿಂದ ನಿಮ್ಮ ದೈಹಿಕ ಸ್ವಾಸ್ಥ್ಯವನ್ನು ಕಾಪಾಡುತ್ತದೆ. ಹೌದು, ನೀವು ಇದಕ್ಕೆ ಕೇವಲ 10 ನಿಮಿಷವನ್ನು ವ್ಯಯಿಸಿದರೆ ಸಾಕು. ಉತ್ತಮ ಆರೋಗ್ಯ ನಿಮ್ಮದಾಗುತ್ತದೆ. ನಿಮ್ಮ ದೇಹದಲ್ಲಿರುವ ಕೊಬ್ಬನ್ನು ಕರಗಿಸಲು ಈ ವ್ಯಾಯಾಮ ಸಹಕಾರಿಯಾಗಿದೆ.

ವೈದ್ಯರಿಂದ ದೂರವಿರಲು ಹೂವುಗಳನ್ನು ತಿನ್ನಿ!

ನಿಮ್ಮ ತೂಕ ಇಳಿಸುವ ಗುರಿಯನ್ನು ಸಾಧಿಸಲು ಈ ವ್ಯಾಯಾಮ ಸಹಕಾರಿಯಾಗಿದೆ. ಬೆಳಿಗೆ ಎದ್ದು ವ್ಯಾಯಾಮ ಮಾಡುವುದು ಸ್ವಲ್ಪ ಕಷ್ಟದ ಕೆಲಸವೇ ಸರಿ. ಆದರೆ ಇದರ ಫಲ ಮಾತ್ರ ಸಿಹಿಯಾಗಿರುತ್ತದೆ ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಿ. ಅಧ್ಯಯನದ ಪ್ರಕಾರ ತಿಂಡಿಗಿಂತ ಮುಂಚೆ ವ್ಯಾಯಾಮ ಮಾಡುವವರು ತಿಂಡಿ ತಿಂದ ನಂತರ ವ್ಯಾಯಾಮ ಮಾಡಿದವರಿಗಿಂತ 20% ತೂಕವನ್ನು ಕಳೆದುಕೊಂಡಿದ್ದಾರೆ.

ಹಾಗಿದ್ದರೆ ಇನ್ನೇಕೆ ತಡ, ಬೆಳಗ್ಗಿನ ಜಾವದ ವ್ಯಾಯಾಮಕ್ಕೆ ನಿಮ್ಮನ್ನು ನೀವು ತೊಡಗಿಸಿಕೊಳ್ಳಲು ಸನ್ನದ್ಧರಾಗಿ ಮತ್ತು ಆರೋಗ್ಯವಂತ ದೇಹವನ್ನು ಪಡೆದುಕೊಳ್ಳಿ.

ನಿಮ್ಮ ಯೌವನ ಕಾಪಾಡುವ ಸೂಪರ್‍ ಆಹಾರಗಳು

ನಡಿಗೆ:

ನಡಿಗೆ:

ಬೆಳಿಗೆ ಎದ್ದು 10 ನಿಮಿಷದ ಸರಳ ವ್ಯಾಯಾಮವಾದ ನಡಿಗೆಯನ್ನು ಅಭ್ಯಾಸ ಮಾಡಿಕೊಳ್ಳಿ. ಗಾರ್ಡನ್ ಅಥವಾ ನಿಮ್ಮ ಕೋಣೆಯಲ್ಲೂ ಈ ವ್ಯಾಯಾಮವನ್ನು ನಿಮಗೆ ಮಾಡಬಹುದಾಗಿದೆ. 10 ನಿಮಿಷದಲ್ಲಿ ಮೈಲುದ ದೂರವನ್ನು ಕ್ರಮಿಸಲು ಪ್ರಯತ್ನಿಸಿ.

ಸ್ಕಿಪ್ಪಿಂಗ್:

ಸ್ಕಿಪ್ಪಿಂಗ್:

ಸ್ಕಿಪ್ಪಿಂಗ್ ಅಥವಾ ಜಂಪ್ ರೋಪ್ ಬಳಸಿಕೊಂಡು 135 ಕ್ಯಾಲೋರಿಗಳನ್ನು ಹತ್ತು ನಿಮಿಷದಲ್ಲಿ ನಿಮಗೆ ಕರಗಿಸಬಹುದು. ಇದು ಹೃದಯಕ್ಕೆ ಅತೀ ಉತ್ತಮವಾದುದು. ಹಾರುವ ಮುಂಚೆ ನಿಮ್ಮ ಕಾಲಿಗೆ ಶೂಗಳನ್ನು ಧರಿಸಿ.

ಸೈಕ್ಲಿಂಗ್:

ಸೈಕ್ಲಿಂಗ್:

10 ನಿಮಿಷ ಸೈಕ್ಲಿಂಗ್ ಅಭ್ಯಾಸ ಮಾಡಿಕೊಳ್ಳಿ, ಹಾಗೂ ನಿಮ್ಮ ದೇಹದ ಆರೋಗ್ಯವನ್ನು ಕಾಪಾಡಿ. ನಿಮ್ಮ ಹೃದಯದ ಬಡಿತ ವೇಗವನ್ನು ಹೆಚ್ಚಿಸಲು ಇದು ಸಹಕಾರಿಯಾಗಿದೆ. ಮತ್ತು ಉತ್ತಮ ವ್ಯಾಯಾಮವನ್ನು ನಿಮಗೆ ಇದರ ಮೂಲಕ ಪಡೆದುಕೊಳ್ಳಬಹುದಾಗಿದೆ.

ಜಾಗಿಂಗ್:

ಜಾಗಿಂಗ್:

ಉತ್ತಮ ಆರೋಗ್ಯವನ್ನು ಪಡೆಯಲು ತಿಂಡಿಗಿಂತ ಮುಂಚೆ 10 ನಿಮಿಷ ಜಾಗಿಂಗ್ ಮಾಡಿ. ಇದು ನಿಮಗೆ ತಾಜಾ ಹವೆಯನ್ನು ನೀಡಿ ನಿಮ್ಮ ಮೈ ಮನಗಳನ್ನು ಖುಷಿಯಾಗಿಸುತ್ತದೆ.

ಯೋಗ:

ಯೋಗ:

ತಿಂಡಿಗಿಂತ ಮುಂಚೆ 10 ನಿಮಿಷ ಯೋಗವನ್ನು ಮಾಡುವುದು ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಉತ್ತಮವಾದುದು. ಜಿಮ್‌ನಲ್ಲಿ ಕಳೆಯುವ ಅರ್ಧ ಗಂಟೆಗೂ 10 ನಿಮಿಷದ ಯೋಗಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ನಿಮ್ಮ ಮಾನಸಿಕ ಶಾಂತಿಗಾಗಿ ಯೋಗ ಅತೀ ಉತ್ತಮವಾದುದು.

X
Desktop Bottom Promotion