For Quick Alerts
ALLOW NOTIFICATIONS  
For Daily Alerts

ಕಾಫಿ ಸೇವನೆಯಿಂದ ತೂಕ ಇಳಿಕೆ ಸಾಧ್ಯವೇ?

|

ಕಾಫಿ ಸೇವನೆಯು ತೂಕ ಇಳಿಸುವಲ್ಲಿ ಸಹಕಾರಿ ಎಂಬ ಮಾತು ಚರ್ಚಾಗ್ರಾಸವಾಗಿದೆ. ಕೆಲವರ ಪ್ರಕಾರ ಕಾಫಿ ತೂಕ ಇಳಿಸುವಲ್ಲಿ ಪರಿಣಾಮಕಾರಿಯಾಗಿಲ್ಲ ಎಂದಾದರೆ ಮತ್ತೆ ಕೆಲವರು ತೂಕ ಇಳಿಸಲು ಸಹಕಾರಿ ಎಂದು ಕೂಡ ಹೇಳುತ್ತಾರೆ. ನಾವು ಕಾಫಿ ಸೇವಿಸುವುದನ್ನು ಆಧರಿಸಿ ಇದರ ಪರಿಣಾಮ ನಮ್ಮ ದೇಹದ ಮೇಲೆ ಪಾಸಿಟೀವ್ ಅಥವಾ ನೆಗೆಟೀವೇ ಎಂಬುದನ್ನು ನಿರ್ಧರಿಸಬೇಕು. ತೂಕ ಇಳಿಸಲು ಕಾಫಿ ಸಹಕಾರಿಯಾಗಿದೆ ಎಂಬ ಮಾತಿನ ಮೇಲೆ ಸಂಶಯಗಳು ಸುಳಿದಾಡುತ್ತಲೇ ಇದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತೂಕ ಇಳಿಸಿಕೊಳ್ಳಲು 5 ವಿಸ್ಮಯಕಾರಿ ಚಹಾ!

Does Coffee Help In Weight Loss?

ಕಾಫಿ ಅಥವಾ ಕೆಫೀನ್ ಅನ್ನು ಆಗಾಗ್ಗೆ ಸೇವಿಸುವುದರಿಂದ ದೇಹದ ಮೇಲೆ ನೆಗೆಟೀವ್ ಪರಿಣಾಮ ಉಂಟಾಗುತ್ತದೆ. ಆದರೆ ಸಮಪ್ರಮಾಣದಲ್ಲಿ ಮಿತವಾಗಿ ಮಾಡುವ ಕಾಫಿ ಸೇವನೆಯು ಪ್ರಯೋಜನಕಾರಿಯಾಗಿದೆ. ಹಾಗಿದ್ದರೆ ತೂಕ ಇಳಿಸುವಲ್ಲಿ ಕಾಫಿ ಹೇಗೆ ಪರಿಣಾಮಕಾರಿ? ನಮ್ಮ ಹಸಿವು ಮತ್ತು ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುವ ಮೂಲಕ ತೂಕವನ್ನು ಇಳಿಸುವಲ್ಲಿ ಕೆಫೀನ್ ಸಹಕಾರಿ. ನೀವು ಕಾಫಿಯನ್ನು ತಯಾರಿಸುವ ವಿಧಾನವನ್ನು ಅನುಸರಿಸಿಕೊಂಡು ಕಾಫಿಯಿಂದ ದೇಹದ ತೂಕ ಇಳಿಯುವ ಚಮತ್ಕಾರ ವರ್ಧಿಸುತ್ತದೆ.

ಬನ್ನಿ ಈ ಲೇಖನದಲ್ಲಿ ತೂಕ ಇಳಿಸಲು ಸಹಾಯ ಮಾಡುವಂತೆ ಕಾಫಿಯನ್ನು ಹೇಗೆ ತಯಾರಿಸಬೇಕು ಮತ್ತು ತೂಕ ಇಳಿಕೆಯಲ್ಲಿ ಕಾಫಿಯ ಪಾತ್ರವೇನು ಎಂಬುದನ್ನು ತಿಳಿದುಕೊಳ್ಳೋಣ.

ಮಿತ ಸೇವನೆ
ಕಾಫಿಯನ್ನು ಮಿತವಾಗಿ ಸೇವಿಸಿದಲ್ಲಿ ಅದು ಆರೋಗ್ಯಕ್ಕೆ ಪ್ರಯೋಜನಕಾರಿ. ಅತಿಯಾದ ಸಕ್ಕರೆ ಮತ್ತು ಮೇಲ್ಬಾಗದಲ್ಲಿ ಕ್ರೀಂನಿಂದ ಕೂಡಿದ ಕಾಫಿ ತೂಕ ಇಳಿಸುವಲ್ಲಿ ಸಹಕಾರಿಯಾಗಿಲ್ಲ. ಇದು ಅತಿಯಾದ ತೂಕಕ್ಕೆ ಕಾರಣವಾಗುತ್ತದೆ. ಕಾಫಿಯನ್ನು ಮಿತವಾಗಿ ಸೇವಿಸುವುದು ಹಸಿವಿನ ಬಯಕೆಯನ್ನು ನಿಯಂತ್ರಿಸುತ್ತದೆ. ಯಾವುದನ್ನಾದರೂ ಅತಿಯಾಗಿ ಸೇವಿಸುವುದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಕಾಫಿಗೂ ಇದು ಅನ್ವಯವಾಗುತ್ತದೆ. ಕಾಫಿಯ ಮಿತವಾದ ಸೇವನೆಯು ಕಾಫಿಯಿಂದ ತೂಕ ಇಳಿಕೆ ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಉತ್ತರವಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತೂಕ ಇಳಿಸಲು ದಾಳಿಂಬೆ ಹಣ್ಣು ತಿನ್ನಿ!

ಶಕ್ತಿ ಮತ್ತು ಚಯಾಪಚಯ ಕ್ರಿಯೆಯ ಹೆಚ್ಚಳ
ನಿಮ್ಮ ಕಾಫಿಯಿಂದ ತೂಕ ಇಳಿಕೆಯಾಗುವಂತೆ ನೀವು ಮಾಡಬೇಕೆಂದರೆ ಸಕ್ಕರೆ ಮತ್ತು ಕ್ರೀಂ ಅನ್ನು ಕಾಫಿಯಿಂದ ತೆಗೆಯಿರಿ. ಈ ಬ್ಲಾಕ್ ಕಾಫಿ ಸಕ್ಕರೆ ಮತ್ತು ಕೊಬ್ಬು ಉತ್ಪಾದಿಸುವ ಕ್ರೀಂ ರಹಿತವಾಗಿರುತ್ತದೆ. ಬ್ಲಾಕ್ ಕಾಫಿ ದೇಹದ ಶಕ್ತಿಯನ್ನು ವರ್ಧಿಸಿ ಚಯಾಪಚಯ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಆದ್ದರಿಂದ ಕಾಫಿಯ ಸೇವನೆ ವರ್ಕ್‌ಔಟ್‌ಗೆ ಸಹಕಾರಿ. ಇದು ಉತ್ಸಾಹ, ಶಕ್ತಿ ಮತ್ತು ಸಾಮರ್ಥ್ಯವನ್ನು ವರ್ಧಿಸಿ ವರ್ಕ್‌ಔಟ್‌ಗೆ ನೆರವಾಗುತ್ತದೆ.

ಕಾಫಿ ಮತ್ತು ಹಸಿವು
ಕಾಫಿ ಹಸಿವಿನ ಬಯಕೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ತೂಕ ಇಳಿಸುವ ಪಣ ತೊಟ್ಟವರು ನೀವಾಗಿದ್ದರೆ, ಊಟದ ನಂತರ ಒಂದು ಕಪ್ ಕಾಫಿಯನ್ನುಸೇವಿಸಿ. ರಾತ್ರಿ ತಡವಾಗಿ ಊಟ ಮಾಡುವುದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆದ್ದರಿಂದ ರಾತ್ರಿಯೂಟಕ್ಕೆ ಸಲಾಡ್ ಮತ್ತು ತಾಜಾ ತಯಾರುಮಾಡುಲ್ಪಟ್ಟ ಕಾಫಿಯನ್ನು ಸೇವಿಸಿ. ಕಡಿಮೆಯಾಗುವ ಹಸಿವಿನ ಬಯಕೆಗಳು ಕಾಫಿ ತೂಕ ಇಳಿಸುವಲ್ಲಿ ಹೇಗೆ ಸಹಕಾರಿ ಎಂಬ ಪ್ರಶ್ನೆಗೆ ಉತ್ತರ ನೀಡುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಲೈಂಗಿಕ ಶಕ್ತಿ ಹೆಚ್ಚಿಸಲು ಡಯಟ್ ಟಿಪ್ಸ್

ಸಂಯೋಜಿಸಿ
ಕಾಫಿಯೊಂದೇ ನಿಮ್ಮ ತೂಕ ಇಳಿಕೆಯಲ್ಲಿ ಪರಿಣಾಮಕಾರಿಯಲ್ಲ. ಇದು ಹೆಚ್ಚಾಗಿ ವೇಗವರ್ಧಕದಂತೆ ಕೆಲಸ ಮಾಡುತ್ತದೆ ಹಾಗೂ ತೂಕ ನಷ್ಟಕ್ಕೆ ಸಹಾಯಮಾಡುತ್ತದೆ. ಪಥ್ಯದ ಹೆಚ್ಚುವರಿ ಪರಿಣಾಮಕ್ಕಾಗಿ ನಿಮ್ಮ ತೂಕ ಇಳಿಕೆಯಲ್ಲಿ ಕಾಫಿಯನ್ನು ಸಂಯೋಜಿಸಿ. ತೂಕ ಇಳಿಸುತ್ತದೆ ಎಂದು ಕಾಫಿಯ ಮೇಲೆ ಹೆಚ್ಚು ಅವಲಂಬಿತರಾಗಬೇಡಿ. ಸಂಜೆಯ ಅನಾರೋಗ್ಯಕರ ಹುರಿದ ತಿಂಡಿಯ ಬಯಕೆಯನ್ನು ಒಂದು ಕಪ್ ಕಾಫಿ ನಿಯಂತ್ರಿಸುತ್ತದೆ.

English summary

Does Coffee Help In Weight Loss?

Coffee as an aid to weight loss has always been a contentious issue. Coffee is considered to have no effect on weight loss or weight gain by many. Some believe that coffee has both positive and negative effects on the body which entirely depends on the intake pattern
Story first published: Wednesday, March 5, 2014, 15:28 [IST]
X
Desktop Bottom Promotion