For Quick Alerts
ALLOW NOTIFICATIONS  
For Daily Alerts

ಗ್ಯಾಸ್ಟ್ರಿಕ್ ಸಮಸ್ಯೆ ಇದೆಯಾ? ನೈಸರ್ಗಿಕ ಪರಿಹಾರ ಇಲ್ಲಿದೆ

By Super
|

ಕೆಲವೊಂದು ಆಂತರಿಕ ಮತ್ತು ಬಾಹ್ಯ ಕಾರಣಗಳಿಂದಾಗಿ ಜಠರದ ಲೋಳೆಯ ಆಂತರಿಕ ಒಳಪದರಕ್ಕೆ ಅಡಚಣೆಯಾದಾಗ ಹೊಟ್ಟೆಯ ಸಮಸ್ಯೆಗಳು ಉಂಟಾಗುತ್ತದೆ. ಇದರಿಂದ ಹೊಟ್ಟೆಯಲ್ಲಿ ಅತಿಯಾದ ಮತ್ತು ಅನಿಯಂತ್ರಿತ ಆಮ್ಲವು ಬಿಡುಗಡೆಯಾಗುತ್ತದೆ.

ಜಠರದ ಲೋಳೆ ನಿರ್ಮಾಣ ಮಾಡುವಂತಹ ಹೈಡ್ರೋಕ್ಲೋರಿಕ್ ಆಮ್ಲವು ಮಾನವ ದೇಹಕ್ಕೆ ಹಾನಿಕಾರಕ. ಇದರಿಂದ ಯಾವುದೇ ಮಟ್ಟದ ಗ್ಯಾಸ್ಟ್ರಿಕ್ ಸಮಸ್ಯೆಗೆ ಪರಿಣಾಮಕಾರಿ ಚಿಕಿತ್ಸೆ ನೀಡುವುದು ಅತ್ಯಗತ್ಯ.

ಕೊಲೆಸ್ಟ್ರಾಲ್ ನಿಯಂತ್ರಿಸಲು ಕೆಲವೊಂದು ಸಲಹೆಗಳು

Cure Gastric Problem Naturally

ಗ್ಯಾಸ್ಟ್ರಿಕ್ ಸಮಸ್ಯೆಗೆ ಚಿಕಿತ್ಸೆ:

ಗ್ಯಾಸ್ಟ್ರಿಕ್ ಸಮಸ್ಯೆಯನ್ನು ತಡೆಯಲು ಕೆಲವೊಂದು ಸರಳ, ಪ್ರಮುಖ ಅಭ್ಯಾಸಗಳನ್ನು ಪಾಲಿಸಿಕೊಂಡು ಹೋಗಬೇಕು. ಅವುಗಳೆಂದರೆ ನಿಯಂತ್ರಿತ ಆಹಾರ ವೇಳಾಪಟ್ಟಿ, ಸರಿಯಾಗಿ ಆಹಾರವನ್ನು ಜಗಿದು ನಿಧಾನವಾಗಿ ಊಟ ಮಾಡುವುದು, ಪದೇ ಪದೇ ಊಟ ಮಾಡುವುದು ಆದರೆ ಸಣ್ಣ ಪ್ರಮಾಣದಲ್ಲಿ, ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಮತ್ತು ನಾರಿನಾಂಶ ಹೆಚ್ಚಿರುವ ಆಹಾರ ಸೇವನೆ. ಸರಿಯಾಗಿ ಚೇತರಿಕೆ ಮತ್ತು ಉಪಶಮನಕ್ಕಾಗಿ ತುಂಬಾ ಖಾರದ ಪದಾರ್ಥ, ಕಾಫಿ, ಸ್ಟ್ರಾಂಗ್ ಟೀ, ಮಾಂಸ, ಕೇಕ್, ಆಲ್ಕೋಹಾಲ್ ಮತ್ತು ಹುಳಿ ಆಹಾರ ಸೇವನೆ ಕಡೆಗಣಿಸಬೇಕೆಂದು ವೈದ್ಯರು ಸಲೆಹ ಮಾಡುತ್ತಾರೆ.

ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣಗಳು:
ಈ ಸಮಸ್ಯೆ ಹಲವಾರು ಕಾರಣಗಳಿಂದ ಬರಬಹುದು. ಇದರಲ್ಲಿ ಸಾಮಾನ್ಯ ಕಾರಣವೆಂದರೆ ದೈಹಿಕ ಮತ್ತು ಮಾನಸಿಕ ಒತ್ತಡ. ಆಘಾತ ಅಥವಾ ಒತ್ತಡವು ಜಠರದ ಲೋಳೆಯ ಹುಣ್ಣಿಗೆ ಕಾರಣವಾಗಬಹುದು. ಕೆಲವೊಂದು ಕಾರಣ ಜಠರದ ಒಳಪದರದ ತೀವ್ರ ಉರಿಯೂತ ಉಂಟಾಗಬಹುದು. ಇದಕ್ಕೆ ಕಾರಣವೆಂದರೆ ಆ್ಯಸಿಡಿಟಿ ಉಂಟುಮಾಡುವ ಆಹಾರ ಸೇವನೆ, ಡ್ರಗ್ಸ್, ಧೂಮಪಾನ ಮತ್ತು ಆಲ್ಕೋಹಾಲ್. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಎದೆಉರಿ, ಆ್ಯಸಿಡಿಟಿ, ಅಜೀರ್ಣ ಮತ್ತು ಹೊಟ್ಟೆ ಉಬ್ಬರ ಉಂಟಾಗಬಹುದು. ಗಡ್ಡೆಗಳು, ಕಿಡ್ನಿಯಲ್ಲಿ ಕಲ್ಲು, ಮಲಬದ್ಧತೆ, ಆಹಾರ ವಿಷವಾಗುವುದು, ಬ್ಯಾಕ್ಟೀರಿಯಾ ಸೋಂಕು, ಅಲ್ಸರ್ ಮತ್ತು ಪ್ಯಾಂಕ್ರಿಯಾಟಿಟಿಸ್ ಹೊಟ್ಟೆಯ ಸಮಸ್ಯೆಗೆ ಕಾರಣವಾಬಹುದು.

ನಿಂಬೆಹಣ್ಣು ಬಳಕೆ:
ಒಂದು ಲೋಟ ನೀರಿನಲ್ಲಿ ನಿಂಬೆರಸ ಹಿಂಡಿ ಮತ್ತು ಅರ್ಧ ಚಮಚ ಅಡುಗೆ ಸೋಡಾ ಹಾಕಿ. ಇದನ್ನು ಸರಿಯಾಗಿ ಅಲುಗಾಡಿಸಿ ಅಡುಗೆ ಸೋಡಾ ಸರಿಯಾಗಿ ಮಿಶ್ರವಾಗಲಿ. ಇದು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಉಪಶಮನ ನೀಡುತ್ತದೆ. ಇದನ್ನು ಬೆಳಗ್ಗಿನ ಅವಧಿಯಲ್ಲಿ ಸೇವಿಸಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯ ನೋವಿನಿಂದ ಉಪಶಮನ ಪಡೆಯಿರಿ.

ಹೃದಯ ತೊಂದರೆಯ ಸಾಮಾನ್ಯ ಮುನ್ಸೂಚನೆಗಳು

ಹರ್ಬಲ್ ಟೀ:
ಹರ್ಬಲ್ ಟೀಯ ಮಿಶ್ರಣವು ಜೀರ್ಣ ಕ್ರಿಯೆಯ ವೇಗ ನೀಡಿ ಅದನ್ನು ಪರಿಣಾಮಕಾರಿಯಾಗಿ ಹೆಚ್ಚಿಸುತ್ತದೆ. ಇದನ್ನು ಸಾಮಾನ್ಯವಾಗಿ ಕ್ಯಾಮೊಮೈಲ್, ರಾಸ್ಪ್ಬೆರಿ, ಬ್ಲ್ಯಾಕ್ ಬೆರಿ ಮತ್ತು ಪುದೀನಾದಿಂದ ತಯಾರಿಸಲಾಗುತ್ತದೆ.

English summary

Cure Gastric Problem Naturally

Problems of stomach arise when internal lining of gastric mucosa is disturbed due to some external or internal factor, leading to increased uncontrolled secretion of acid in the stomach.
Story first published: Saturday, April 26, 2014, 16:35 [IST]
X
Desktop Bottom Promotion