For Quick Alerts
ALLOW NOTIFICATIONS  
For Daily Alerts

ಹಸುವಿನ ಹಾಲು ಅಥವಾ ಎಮ್ಮೆಯ ಹಾಲು ಎರಡರಲ್ಲಿ ಯಾವುದು ಆರೋಗ್ಯಕಾರಿ?

By Super
|

ಸಾಮಾನ್ಯವಾಗಿ ಹಾಲು ಎಂದರೆ ಹಸುವಿನ ಹಾಲು ಎಂದೇ ಪರಿಗಣಿಸಲ್ಪಡುತ್ತದೆ. ಏಕೆಂದರೆ ವಿಶ್ವದಲ್ಲಿ ಅತಿ ಹೆಚ್ಚಾಗಿ ಹಸುವಿನ ಹಾಲನ್ನೇ ಮಾರಾಟಕ್ಕೆ ತರಲಾಗುತ್ತದೆ. ಆದರೆ ಎಮ್ಮೆಯ ಹಾಲಿನ ರುಚಿ ತಿಳಿದವರು ಮಾತ್ರ ಮಾರುಕಟ್ಟೆಯಲ್ಲಿ ಯಥೇಚ್ಛವಾಗಿ ಹಸುವಿನ ಹಾಲು ಸಿಗುತ್ತಿದ್ದರೂ ಎಮ್ಮೆಯ ಹಾಲಿಗೇ ಬೇಡಿಕೆಯಿಡುತ್ತಾರೆ. ಒಂದು ವೇಳೆ ಹಸುವಿನ ಮತ್ತು ಎಮ್ಮೆಯ ಹಾಲಿನ ಲಭ್ಯತೆ ನಿಮಗೆ ಸಮಾನವಾಗಿದ್ದಲ್ಲಿ ನೀವು ಯಾವ ಹಾಲನ್ನು ಆಯ್ಕೆ ಮಾಡಿಕೊಳ್ಳುತ್ತೀರಿ?

ಪ್ರಶ್ನೆ ಕೊಂಚ ದಿಗಿಲು ಹುಟ್ಟಿಸಿತೇ? ಚಿಂತೆ ಬೇಡ. ಹಸುವಿನ ಮತ್ತು ಎಮ್ಮೆಯ ಹಾಲಿನಲ್ಲಿ ಉತ್ತಮ ಪ್ರಮಾಣದ ಪೋಷಕಾಂಶಗಳು ಇರುವುದು ಖಂಡಿತ. ಆದರೆ ಎರಡರಲ್ಲಿ ಇರುವ ಕೆಲವು ಅಂತರಗಳನ್ನು ಗಮನಿಸಿದ ಬಳಿಕ ನಿಮ್ಮ ಆಯ್ಕೆಯನ್ನು ಖಚಿತಪಡಿಸಲು ಈ ಕೆಳಗಿನ ವಿವರಗಳು ನಿಮ್ಮ ನೆರವಿಗೆ ಬರುತ್ತವೆ. ಈ ವಿವರಗಳನ್ನು ಪ್ರತಿ ನೂರು ಮಿಲಿಲೀಟರಿಗೆ ತಕ್ಕನಾಗಿ ನೀಡಲಾಗಿದೆ.

Cow milk or Buffalo milk: Which is Better for You?

ಎಮ್ಮೆಯ ಹಾಲು
ಕ್ಯಾಲೋರಿಗಳು - 97ಕಿಲೋ ಕ್ಯಾಲೋರಿ,
ಪ್ರೋಟೀನ್ - 3.7ಗ್ರಾಂ,
ಕೊಬ್ಬು - 6.9ಗ್ರಾಂ,
ನೀರು - 84%,
ಲ್ಯಾಕ್ಟೋಸ್ - 5.2ಗ್ರಾಂ,
ಖನಿಜಗಳು - 0.79ಗ್ರಾಂ.

ಹಸುವಿನ ಹಾಲು
ಕ್ಯಾಲೋರಿಗಳು - 61ಕಿಲೋ ಕ್ಯಾಲೋರಿ,
ಪ್ರೋಟೀನ್ - 3.2 ಗ್ರಾಂ,
ಕೊಬ್ಬು - 3.4 ಗ್ರಾಂ,
ನೀರು - 90 %,
ಲ್ಯಾಕ್ಟೋಸ್ - 4.7 ಗ್ರಾಂ,
ಖನಿಜಗಳು - 0.72 ಗ್ರಾಂ. ಹಸು ಹಾಲಿಗಿಂತ ಆಡಿನ ಹಾಲು ಪರಿಪೂರ್ಣ ಏಕೆ?

ಈ ವಿವರಗಳನ್ನು ಗಮನಿಸಿದ ಬಳಿಕ ನಿಮ್ಮ ಆಯ್ಕೆ ಕೊಂಚ ಸುಲಭವಾಗಬಹುದು. ಒಂದು ವೇಳೆ ನಿಮ್ಮ ತೂಕ ಸಾಮಾನ್ಯಕ್ಕಿಂತ ಹೆಚ್ಚಿದ್ದು ಕಡಿಮೆ ಇನ್ನೂ ಹೆಚ್ಚಗಾಗಲು ಮನಸ್ಸಿಲ್ಲದಿದ್ದರೆ (ಹೆಚ್ಚಗಾಗಲೂಬಾರದು) ನಿಮಗೆ ಹಸುವಿನ ಹಾಲು ಸೂಕ್ತ. ಒಂದು ವೇಳೆ ನಿಮ್ಮ ತೂಕ ಕಡಿಮೆಯಿದ್ದು ತೂಕ ಮತ್ತು ದಾರ್ಡ್ಯತೆಯನ್ನು ಹೆಚ್ಚಿಸಿಕೊಳ್ಳಬಯಸಿದರೆ ಎಮ್ಮೆಯ ಹಾಲು ನಿಮಗೆ ಸೂಕ್ತ. ಏಕೆಂದರೆ ಎಮ್ಮೆಯ ಹಾಲಿನಲ್ಲಿ ಹಸುವಿನ ಹಾಲಿಗಿಂತಲೂ ಒಂದೂವರೆಪಟ್ಟು ಹೆಚ್ಚು ಕ್ಯಾಲೋರಿಗಳಿವೆ. ಅಲ್ಲದೆ ಕೊಬ್ಬು ಹೆಚ್ಚೂಕಡಿಮೆ ಎರಡರಷ್ಟಿದೆ.

ಇದೇ ಕಾರಣದಿಂದ ಎಮ್ಮೆಯ ಹಾಲಿನ ಕೆನೆ ದಪ್ಪನಾಗಿರುತ್ತದೆ. ಚಹಾಪ್ರಿಯರಿಗೆ ಎಮ್ಮೆಯ ಹಾಲಿನ ಚಹಾ ತುಂಬಾ ಇಷ್ಟವಾಗುತ್ತದೆ. ಟೀ ಪುಡಿಯನ್ನು ಎಮ್ಮೆಯ ಹಾಲಿನಲ್ಲಿ ಕುದಿಸಿ ಸುಮಾರು ಮೂರರಿಂದ ನಾಲ್ಕು ಬಾರಿ ಕುದಿಬಂದ ಬಳಿಕ ಇಳಿಸಿ ನೊರೆ ಇಳಿದ ಬಳಿಕ ಮತ್ತೆ ಕುದಿಸಿ ತಣಿಸಿದ ಬಳಿಕ ಸೋಸಿ ಕೊಂಚ ತಣ್ಣಗಾದ ಬಳಿಕ ಕೆನಗಟ್ಟಿದ ಚಹಾ ಅಮೃತಸಮಾನವಾಗಿರುತ್ತದೆ.

ಒಂದು ವೇಳೆ ನಿಮಗೆ ಅಜೀರ್ಣ ಅಥವಾ ಹೊಟ್ಟೆಯಲ್ಲಿ ಉರಿ (ಅಲ್ಸರ್) ಮೊದಲಾದ ತೊಂದರೆಗಳಿದ್ದರೆ ಹಸುವಿನ ಹಾಲೇ ಒಳಿತು. ಎಮ್ಮೆಯ ಹಾಲಿನಲ್ಲಿರುವ ಹೆಚ್ಚಿನ ಕೊಬ್ಬಿನ ಕಾರಣ ನಿಮಗೆ ಜೀರ್ಣಕ್ರಿಯೆ ಸುಲಭವಾಗಲಾರದು. ಹಸುವಿನ ಹಾಲಿನಲ್ಲಿ ಶೇಖಡಾ ತೊಂಭತ್ತರಷ್ಟು ನೀರು ಇರುವುದರಿಂದ ಸುಲಭವಾಗಿ ಜೀರ್ಣವಾಗುತ್ತದೆ. ಅಲ್ಸರ್ ತೊಂದರೆ ಇರುವವರಿಗೆ ಹಾಲಿಗಿಂತಲೂ ಮೊಸರು ಉಪಯುಕ್ತವಾಗಿದೆ (ದಿನಕ್ಕೆ ಮೂರು ಬಾರಿ)

English summary

Cow milk or Buffalo milk: Which is Better for You?

Cow Milk or buffalo Milk? Confused? Find out the truth. Cow milk and buffalo milk both are very high in nutrition. When both are available, the choice of milk should be made based on your personal needs.
X
Desktop Bottom Promotion