For Quick Alerts
ALLOW NOTIFICATIONS  
For Daily Alerts

ಋತುಚಕ್ರದ ಏರುಪೇರಿಗೆ ಪರಂಗಿ ಹಣ್ಣು ರಾಮಬಾಣ

By Super
|

ಮಾಸಿಕ ಋತುಚಕ್ರ ನಿಯಮಿತವಾಗಿ ಆಗುತ್ತಿದ್ದರೆ ಯಾವುದೇ ಚಿಂತೆ ಇರುವುದಿಲ್ಲ. ಆದರೆ ಯಾವುದೋ ಕಾರಣಗಳಿಂದ ಋತುಚಕ್ರ ಏರುಪೇರಾದರೆ ಮಾತ್ರ ಆತಂಕ ತಪ್ಪಿದ್ದಲ್ಲ. ಅದರಲ್ಲೂ ದಿನಗಳು ಮುಂದೆ ಹೋದರೆ ಯಾವ ಕಾರಣದಿಂದ ಹೀಗಾಯಿತು ಎಂಬ ಯೋಚನೆ ನೆಮ್ಮದಿಯನ್ನೇ ಕೆಡಿಸಿಬಿಡುತ್ತದೆ.

ಇಂತಹ ಸಮಯದಲ್ಲಿ ಅಜ್ಜಿ ಹೇಳಿದ್ದ ಮನೆಮದ್ದು ನೆನಪಾಗುತ್ತದೆ. ಅದೆಂದರೆ ಹಸಿ ಪಪ್ಪಾಯಿ ಹಣ್ಣು (ಪರಂಗಿ ಹಣ್ಣು) ತಿನ್ನುವುದು. ಹಸಿ ಪಪ್ಪಾಯಿ ಹಣ್ಣು ತಿನ್ನುವುದರಿಂದ ಎಂತಹ ತೊಂದರೆ ಇದ್ದರೂ ಒಂದೆರಡು ದಿನಗಳಲ್ಲೇ ಸ್ರಾವ ಸುಲಲಿತವಾಗಿ ಆಗುವುದು ಎಂದು ತುಂಬಾ ಹಿಂದಿನಿಂದ ನಮ್ಮ ಮಹಿಳೆಯರು ನಂಬಿಕೊಂಡು ಬಂದಿದ್ದಾರೆ.

ಈ ನಂಬಿಕೆಯಿಂದಲೇ ಋತುಚಕ್ರ ಮುಂದೂಡಿರುವ ಅಗತ್ಯಕ್ಕೆ ಹೊರತಾಗಿ ಬೇರೆ ಯಾವ ದಿನಗಳಲ್ಲೂ ಹಸಿ ಪಪ್ಪಾಯಿಯನ್ನು ತಿನ್ನದಿರುವಂತೆ ಕಟ್ಟಪ್ಪಣೆ ಮಾಡಲಾಗಿರುತ್ತದೆ. ಬರಿ ಹಸಿ ಪಪ್ಪಾಯಿ ಅಲ್ಲದೇ ಹಣ್ಣಾದ ಪಪ್ಪಾಯಿಯನ್ನೂ ತಿನ್ನುವುದಕ್ಕೆ ಅನುಮತಿ ದೊರಕುವುದಿಲ್ಲ. ಪಪ್ಪಾಯಿಯ ಈ ಗುಣವನ್ನು ಋಣಾತ್ಮಕವಾಗಿ ಪರಿಗಣಿಸಿ ಸರಾಸಗಟಾಗಿ ತಿರಸ್ಕರಿಸುವ ಮುನ್ನ ಈ ಹಣ್ಣಿನ ಗುಣಗಳ ಬಗ್ಗೆ ಕೊಂಚ ಅರಿವು ಪಡೆಯುವುದು ಉತ್ತಮ. ಅನಿಯಮಿತ ಮುಟ್ಟಿನ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಸಲ್ಲದು

ಪಪ್ಪಾಯಿ ಹಣ್ಣಿನಲ್ಲಿ ಉತ್ತಮ ಪ್ರಮಾಣದಲ್ಲಿ ವಿಟಮಿನ್ ಎ, ಸಿ. ಮತ್ತು ಬಿ ಇವೆ. ಪಪ್ಪಾಯಿ ಹಣ್ಣಿನ ರಸದಲ್ಲಿ ಪ್ರತಿ ದಿನಕ್ಕೆ ಅಗತ್ಯವಾದ ಪೊಟ್ಯಾಶಿಯಂ ನ ಶೇ. ಹತ್ತರಷ್ಟು ಮತ್ತು ತಾಮ್ರದ ಹದಿಮೂರು ಶೇ ಲಭ್ಯವಾಗುತ್ತದೆ. ಜೀವಕೋಶಗಳಿಗೆ ಬಲನೀಡುವ ಫೋಲೇಟ್ ಸಹಾ ಉತ್ತಮ ಪ್ರಮಾಣದಲ್ಲಿದೆ. ಹಾಗಾಗಿ ಜೀವಕೋಶಗಳು ಮರುಜೀವ ಪಡೆಯಲು ನೆರವಾಗುವ ಲೈಕೋಪಿನ್ ಎಂಬ ಪೋಷಕಾಂಶವೂ ಪೊಪ್ಪಾಯಿಯಲ್ಲಿ ಹೇರಳವಾಗಿದ್ದು ಶರೀರಕ್ಕೆ ನವ ಚೈತನ್ಯ ನೀಡುತ್ತದೆ.

ಪಪ್ಪಾಯಿ ಹಣ್ಣನ್ನು ಹಾಗೇ ಅಥವಾ ರಸದಂತೆ ಸೇವಿಸಬಹುದು. ಕೇವಲ ಪೊಪ್ಪಾಯಿಯ ರಸವನ್ನು ಮಾತ್ರ ಸೇವಿಸುವುದಕ್ಕಿಂತ ಇತರ ಹಣ್ಣುಗಳನ್ನು ಸೇರಿಸಿದ ರಸಗಳ ಮಿಶ್ರಣ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಪ್ರತಿ ಹಣ್ಣಿನಲ್ಲಿರುವ ಪ್ರತ್ಯೇಕ ಪೋಷಕಾಂಶಗಳು ದೇಹವನ್ನು ಸೇರಿ ಹೆಚ್ಚಿನ ಚೈತನ್ಯ ನೀಡುತ್ತದೆ. ಮಾವಿನ ಹಣ್ಣು, ಬಾಳೆಹಣ್ಣು, ಸ್ಟ್ರಾಬೆರಿ, ಪಪ್ಪಾಯಿ, ಲಿಂಬೆಹಣ್ಣು ಮತ್ತು ಒಂದು ಚಮಚ ಜೇನುತುಪ್ಪ ಸೇರಿಸಿ ತಯಾರಿಸಿದ ಮಿಶ್ರಣ ಸಂಜೀವಿನಿಗೆ ಸಮನಾಗಿದೆ.

ಪಪ್ಪಾಯಿಹಣ್ಣಿನ ರಸದ ಲಾಭಗಳು
ಯಾವುದೇ ಹಣ್ಣಿನ ರಸ ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ. ಪಪ್ಪಾಯಿ ಹಣ್ಣಿನ ತಿರುಳ್ಳನ್ನು ಬಳಸಿ ತಯಾರಿಸಿದ ತಾಜಾ ರಸದಿಂದಲೂ ಹಲವು ಲಾಭಗಳಿವೆ.

ಋತುಚಕ್ರವನ್ನು ಕ್ರಮಬದ್ಧವಾಗಿಸುವುದು
ಅಜ್ಜಿಯ ಮನೆಮದ್ದಿನ ಪ್ರಕಾರ ಪಪ್ಪಾಯಿ ಹಣ್ಣು (ಅಥವಾ ಹಸಿ ಪಪ್ಪಾಯಿ) ಶರೀರಕ್ಕೆ ಬಿಸಿ ತರುತ್ತದೆ. ಅಂದರೆ ಮಾಸಿಕ ಋತುಚಕ್ರವನ್ನು ಬೇಗನೇ ಆಗುವಂತೆ ಮಾಡುತ್ತದೆ. ನಿಜವಾದ ಅರ್ಥದಲ್ಲಿ ಪಪ್ಪಾಯಿಯಲ್ಲಿರುವ ಫೈಟೋ ಈಸ್ಟ್ರೋಜೆನ್ (phytoestrogen) ಎಂಬ ಪೋಷಕಾಂಶ ಸ್ರೀಯರ ದೇಹದಲ್ಲಿ ಈಸ್ಟ್ರೋಜೆನ್ ಹಾರ್ಮೋನು ಉತ್ಪತ್ತಿಯಾಗುವಂತೆ ಮಾಡುತ್ತದೆ. ಯಾವುದೋ ಕಾರಣದಿಂದ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ಈಸ್ಟ್ರೋಜೆನ್ ಉತ್ಪತ್ತಿಯಾಗದೇ ಇದ್ದಲ್ಲಿ ಋತುಚಕ್ರದ ದಿನಗಳು ಮುಂದೆ ಹೋಗುತ್ತದೆ. ಪಪ್ಪಾಯಿ ಹಣ್ಣನ್ನು ಸೇವಿಸುವುದರಿಂದ ಕಡಿಮೆಯಾಗಿದ್ದ ಈಸ್ಟ್ರೋಜೆನ್ ಉತ್ಪತ್ತಿಯಾಗಿ ಋತುಚಕ್ರ ಸರಿಪಡಿಸಲು ಸಾಧ್ಯವಾಗುತ್ತದೆ. ಇದೇ ಇದರ ಗುಟ್ಟು. ಹಸಿ ಪಪ್ಪಾಯಿಯಲ್ಲಿ ಫೈಟೋ ಈಸ್ಟ್ರೋಜೆನ್ ಅತ್ಯಧಿಕ ಪ್ರಮಾಣದಲ್ಲಿರುವುದರಿಂದ ಹೆಚ್ಚಿನ ಈಸ್ಟ್ರೋಜೆನ್ ಉತ್ಪತ್ತಿಯಾಗುತ್ತದೆ. ಪರಿಣಾಮವಾಗಿ ಫಲಿತಾಂಶ ಬೇಗನೇ ಸಿಗುತ್ತದೆ. ತಿಂಗಳ ಮುಟ್ಟಿನ ತಡವಾಗುವಿಕೆಗಾಗಿ ಮನೆಮದ್ದುಗಳು

ಜೀರ್ಣಕ್ರಿಯೆಗೆ ಸಹಕರಿಸುವುದು
ಪಪ್ಪಾಯಿ- ಹಸಿ ಅಥವಾ ಹಣ್ಣಾಗಿರಲಿ, ಅದರಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಇದೆ. ಈ ನಾರು ನಮ್ಮ ಜೀರ್ಣಾಂಗಗಳಲ್ಲಿ ಸುಲಭವಾಗಿ ಪಚನಗೊಂಡು ಮಲಿನ ಪದಾರ್ಥಗಳ ಸುಲಲಿತ ವಿಸರ್ಜನೆಗೆ ಸಹಕರಿಸುತ್ತದೆ.

ಮಲಬದ್ಧತೆಯನ್ನು ನಿವಾರಿಸುತ್ತದೆ
ನಮ್ಮ ಬದಲಾದ ಜೀವನಶೈಲಿ ಹಾಗೂ ಸುಲಭ ಆಹಾರಗಳು ಮಲಬದ್ಧತೆಗೆ ಮೂಲವಾಗಿವೆ. ಪ್ರಮುಖವಾಗಿ ಮೈದಾ ಆಧಾರಿತ ಆಹಾರಗಳು ದೊಡ್ಡಕರುಳಿನಲ್ಲಿ ಪೂರ್ಣವಾಗಿ ಜೀರ್ಣವಾಗದೇ, ಗಟ್ಟಿಯಾಗಿದ್ದು ಮುಂದೆ ಹೋಗಲಾಗದೇ ಮಲಬದ್ಧತೆಗೆ ಕಾರಣವಾಗುತ್ತವೆ. ಈ ಸಂದರ್ಭದಲ್ಲಿ ಪಪ್ಪಾಯಿ ಹಣ್ಣನ್ನು ತಿನ್ನುವುದರಿಂದ ಅಥವಾ ರಸವನ್ನು ಸೇವಿಸುವುದರಿಂದ ಗಟ್ಟಿಯಾಗಿದ್ದ ಆಹಾರಗಳು ಮೆದುವಾಗಿ ಸುಲಭವಾಗಿ ವಿಸರ್ಜಿಸಲು ಸಾಧ್ಯವಾಗುತ್ತದೆ.

ಚರ್ಮಕ್ಕೆ ಕಾಂತಿ ನೀಡುತ್ತದೆ
ಇತ್ತೀಚೆಗೆ ಪಪ್ಪಾಯಿಯ ಮುಖಚಿತ್ರವಿರುವ ಸೋಪುಗಳೂ ಮಾರುಕಟ್ಟೆಯಲ್ಲಿ ದೊರಕುತ್ತಿವೆ. ಪಪ್ಪಾಯಿಯ ಸೇವನೆಯಿಂದ ಚರ್ಮದ ಕಾಂತಿ ಹೆಚ್ಚುವುದು. ಪಪ್ಪಾಯಿಯಲ್ಲಿರುವ ಪಪಾಯಿನ್ (papain) ಎಂಬ ಪೋಷಕಾಂಶ ಸತ್ತ ಜೀವಕೋಶಗಳನ್ನು ಕಳಸಿ ಹೊಸ ಜೀವಕೋಶಗಳನ್ನು ಬೆಳೆಸುವಲ್ಲಿ ನೆರವಾಗುತ್ತದೆ. ಸ್ವಾಭಾವಿಕವಾಗಿ ಹೊಸ ಜೀವಕೋಶಗಳು ಕಳೆಯಿಂದ ಕೂಡಿರುತ್ತವೆ.

ಜೀವನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ
ನಿಯಮಿತವಾಗಿ ಪಪ್ಪಾಯಿಹಣ್ಣನ್ನು ಸೇವಿಸುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಪಪ್ಪಾಯಿಯಲ್ಲಿರುವ ಹಲವು ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿ ಫ್ರೀ ರ್‍ಯಾಡಿಕಲ್ ಎಂಬ ಜೀವಕೋಶಗಳನ್ನು ರಕ್ಷಿಸುತ್ತದೆ. ವಯಸ್ಸಾದಂತೆ ಈ ಫ್ರೀ ರ್‍ಯಾಡಿಕಲ್ ಗಳು ದೇಹದ ವಿವಿಧ ಜೀವಕೋಶಗಳನ್ನು ಕೊಲ್ಲುತ್ತಾ ಹೋಗುವುದರಿಂದ ನಿಧಾನವಾಗಿ ಮುಪ್ಪು ಆವರಿಸುತ್ತದೆ. ಈ ಪ್ರಕ್ರಿಯೆಯನ್ನು ಪಪ್ಪಾಯಿನಿಧಾನವಾಗಿಸುವುದರಿಂದ ಮುಪ್ಪು ದೂರಾಗುತ್ತದೆ. ಮುಪ್ಪಿನ ಕಾರಣ ಆಗಮಿಸುವ ಹಲವು ರೋಗಗಳ ವಿರುದ್ಧ ರಕ್ಷಣೆ ದೊರಕಿದಂತಾಗುತ್ತದೆ. ನಿಯಮಿತ ಸೇವನೆಯಿಂದ ಮಧುಮೇಹಕ್ಕೆ ಪ್ರಮುಖ ಕಾರಣವಾದ C-reactive protein ಮತ್ತು uric acid ಕಡಿಮೆಯಾಗುವುದರಿಂದ ಮಧುಮೇಹ ರೋಗವೂ ನಿಯಂತ್ರಣಕ್ಕೆ ಬರುತ್ತದೆ.

English summary

Can Papaya Help To Induce Your Periods?

A missed period can be a cause of great frustration and anxiety. Not that you are always looking forward to your periods, but if you miss it, there is no end to your worries. What do you do now? If you remember your grandmother’s words, you might feel tempted to try out this remedy.
X
Desktop Bottom Promotion