For Quick Alerts
ALLOW NOTIFICATIONS  
For Daily Alerts

ಹೊಟ್ಟೆಯ ಕೊಬ್ಬು ಕರಗಿಸಿಕೊಳ್ಳಲು ಸೂಕ್ತ ಸಲಹೆ

By Arpitha Rao
|

ನೀವು ಹೊಟ್ಟೆ ಕರಗಿಸಿಕೊಳ್ಳಲು ಸಾಕಷ್ಟು ವ್ಯಾಯಾಮ ಮಾಡಿದರೂ ಏಕೆ ಹೊಟ್ಟೆ ಕರಗುತ್ತಿಲ್ಲ ಎಂದು ಯೋಚಿಸುತ್ತಿದ್ದೀರಾ? ಬಹುಶಃ ನೀವು ಏನನ್ನಾದರೂ ಮರೆತಿರಬಹುದು!

ಫಿಟ್ ಆಗಿ ಇರಬೇಕು ಎಂದು ಬಯಸಿದರೆ ಹೊಟ್ಟೆ ಸಪಾಟವಾಗಿ ಇರಬೇಕು ಎಂಬುದು ಕೂಡ ಅಷ್ಟೇ ಮುಖ್ಯವಾಗುತ್ತದೆ.ಎಷ್ಟೇ ವ್ಯಾಯಾಮ ಮಾಡಿದರೂ ಹೊಟ್ಟೆ ಕರಗುತ್ತಿಲ್ಲ ಎಂಬುದು ಇತ್ತೀಚಿಗೆ ಹೆಚ್ಚಿನ ಜನರ ಕೊರಗು.ಆದರೆ ವ್ಯಾಯಾಮ ಮಾಡುವಾಗ ಕೂಡ ಅದರ ಬಗ್ಗೆ ಸಾಕಷ್ಟು ತಿಳಿದುಕೊಂಡು ಸರಿಯಾದ ರೀತಿಯಲ್ಲಿ ತಯಾರಾಗಿ ಮಾಡುವುದು ಸೂಕ್ತ.ಮುಂಜಾಗ್ರತೆ ಕ್ರಮ ವಹಿಸಿಕೊಂಡಲ್ಲಿ ಸಪಾಟಾದ ಹೊಟ್ಟೆ ಪಡೆಯಬಹುದು.

ಹೊಟ್ಟೆಯ ಮತ್ತು ಸೊಂಟದಲ್ಲಿ ಹೆಚ್ಚು ಕೊಬ್ಬು ಸೇರಿಕೊಳ್ಳದಿರಲು ನೀವು ಸೇವಿಸುವ ಆಹಾರದಲ್ಲಿ ಯಾವುದೇ ರೀತಿಯ ಜಾದೂ ಇಲ್ಲ.ಆದರೆ ಹೇಗೆ ನಿಮ್ಮ ಹೊಟ್ಟೆಯನ್ನು ಸಪಾಟವಾಗಿ ಇಟ್ಟುಕೊಳ್ಳಬಹುದು ಎಂಬುದನ್ನು ಈ ಕೆಳಗೆ ಓದಿ ತಿಳಿಯಿರಿ.

ಈ ಕೆಳಗೆ ನೀಡಿರುವ ಕೆಲವು ಸಲಹೆಗಳು ನಿಮ್ಮ ಹೊಟ್ಟೆ ಕರಗಿಸಲು ಹೆಚ್ಚು ಸಹಾಯಕವಾಗುತ್ತವೆ.

ನಿಧಾನವಾಗಿ ಆರಂಭಿಸಿ:

ನಿಧಾನವಾಗಿ ಆರಂಭಿಸಿ:

ಒಂದೇ ಬಾರಿ ಹೊಟ್ಟೆ ಕರಗಿಸುವುದು ಸಾಧ್ಯವಾಗದ ಮಾತು.ಆದ್ದರಿಂದ ಒಂದೇ ಬಾರಿ ಕರಗಿಸಬೇಕು ಎಂದು ವ್ಯಾಯಮದಲ್ಲಿ ಅಧಿಕ ಒತ್ತಡ ನೀಡಬೇಡಿ .ನಿಧಾನವಾಗಿ ಪ್ರಾರಂಭಿಸಿ.

ವಾರ್ಮ್ ಅಪ್ ಆಗಿ:

ವಾರ್ಮ್ ಅಪ್ ಆಗಿ:

ಕೆಲವು ಜನರು ವರ್ಕ್ ಔಟ್ ಮಾಡುವ ಮೊದಲು ವಾರ್ಮ್ ಅಪ್ ಆಗಬೇಕು ಎಂಬುದನ್ನು ತಿಳಿದಿರುವುದಿಲ್ಲ.ಇದರಿಂದ ಸಮಯ ವ್ಯರ್ಥ ಎಂದು ತಪ್ಪು ತಿಳಿದಿರುತ್ತಾರೆ.ಆದರೆ ವ್ಯಾಯಾಮ ಪ್ರಾರಂಭಿಸುವ ಮೊದಲು ಸ್ವಲ್ಪ ವಾರ್ಮ್ ಅಪ್ ಆಗುವುದರಿಂದ ದೇಹಕ್ಕಾಗುವ ಗಾಯವನ್ನು ತಪ್ಪಿಸಬಹುದು.ಸ್ವಲ್ಪ ನಡೆಯುವುದು,ಮಾರ್ಚ್ ಫಾಸ್ಟ್ ಆಡುವುದು, ಕೈ ನೆರವಾಗಿಟ್ಟುಕೊಂಡು ಪಾದಕ್ಕೆ ಬಗ್ಗಿ ತಾಗಿಸುವುದು ಇವುಗಳನ್ನು ಮಾಡುವುದರಿಂದ ದೇಹವನ್ನು ವರ್ಕ್ ಔಟ್ ಗೆ ತಯಾರು ಮಾಡಿಕೊಳ್ಳಿ.

ಉಸಿರಾಡಿ

ಉಸಿರಾಡಿ

ಆಮ್ಲಜನಕ ನಿಮ್ಮ ಸ್ನಾಯುಗಳಿಗೆ ಮುಖ್ಯವಾಗುತ್ತದೆ.ಆದ್ದರಿಂದ ನಿಮ್ಮ ಉಸಿರನ್ನು ಬಿಗಿ ಹಿಡಿದು ವ್ಯಾಯಾಮ ಮಾಡಬೇಡಿ.ನೀವು ವ್ಯಾಯಾಮ ಮಾಡುವಾಗ ಉಚ್ವಾಸ ಮತ್ತು ನಿಶ್ವಾಸಗಳು ಸರಿಯಾಗಿ ಆಗುತ್ತಿರಲಿ.

ಉದಾಹರಣೆ - ನೀವು ಕುಳಿತು ಏಳುವಾಗ ಕುಳಿತುಕೊಳ್ಳುವಾಗ ಉಸಿರು ಒಳಗೆ ಎಳೆದುಕೊಳ್ಳಿ, ಏಳುವಾಗ ಉಸಿರು ಬಿಡಿ.

ಹಿಂಜರಿಬೇಡಿ:

ಹಿಂಜರಿಬೇಡಿ:

ನೀವು ಪುಶ್ ಅಪ್ ಮಾಡುವಾಗ ನಿಮ್ಮ ಸ್ನಾಯುಗಳು ಮಾತ್ರ ಮುಖ್ಯ ಪಾತ್ರ ವಹಿಸುತ್ತವೆ ಎಂದರೆ ತಪ್ಪು ನಿಮ್ಮ ಮನಸ್ಸು ಕೂಡ ಮುಖ್ಯವಾಗಿರುತ್ತದೆ.ಆದ್ದರಿಂದ ವ್ಯಾಯಾಮ ಮಾಡುವಾಗ ಟಿವಿ ನೋಡುವುದನ್ನು ತಪ್ಪಿಸಿ,ಏಕಾಗ್ರತೆಯಿಂದ ವ್ಯಾಯಾಮ ಮಾಡಿ.ಈ ರೀತಿ ಮಾಡುವುದರಿಂದ ಪಲಿತಾಂಶವನ್ನು ಬದಲಾಯಿಸಬಹುದು.

ಆಲ್ ರೌಂಡರ್ ಆಗಿರಿ:

ಆಲ್ ರೌಂಡರ್ ಆಗಿರಿ:

ನೀವು ನಿಮ್ಮ ಹೊಟ್ಟೆ ಸಪಾಟಾಗಿ ಇರಬೇಕು ಎಂಬುದನ್ನು ಬಯಸುತ್ತೀರಾದರೆ ಎಲ್ಲಾ ರೀತಿಯ ವ್ಯಾಯಾಮ ಮಾಡಲು ತಯಾರಿರಬೇಕು.ಕೇವಲ ಏಕಾಗ್ರತೆಯಿಂದ ಒಂದು ವ್ಯಾಯಾಮ ಮಾಡಿದರೆ ಸಾಲದು.ಸಾಕಷ್ಟು ವ್ಯಾಯಾಮ ಜೊತೆಗೆ ಯೋಗದ ಕೆಲವು ಆಸನವಾದ ವಕ್ರಾಸನ ಇವುಗಳನ್ನು ಮಾಡುವುದರಿಂದ ನಿಮ್ಮ ದೇಹ ಸುಲಭವಾಗಿ ಬಾಗುತ್ತದೆ.ಹೊಟ್ಟೆ ಕರಗುತ್ತದೆ.

ಸಮತೋಲನ ಮಾಡಿ:

ಸಮತೋಲನ ಮಾಡಿ:

ಸರಿಯಾದ ಸಮತೋಲನವನ್ನು ನೀವು ಕಾಪಾಡಿಕೊಳ್ಳಬೇಕು. ಒಂದು ಕಾಲು ಕೆಳಗೆ ಇರಿಸಿ ಇನ್ನೊಂದನ್ನು ಎತ್ತುವುದು, ಒಂದು ಕೈಯನ್ನು ಸಂಪೂರ್ಣವಾಗಿ ಎತ್ತುವುದು ಮತ್ತೊಂದನ್ನು ನಿಮ್ಮ ಕಾಲಿಗೆ ಮುಟ್ಟಿಸುವುದು ಅಥವಾ ವಕ್ರಾಸನ ಎಂದರೆ ಮರದ ಆಕಾರದಲ್ಲಿ ಕಾಲುಗಳೆರಡು ಎತ್ತುವುದು ಇವುಗಳು ಸಹಾಯವಾಗುತ್ತವೆ.

ವಿಶ್ರಾಂತಿ:

ವಿಶ್ರಾಂತಿ:

ದೇಹ ಬಲಯುತವಾಗಲು ವಿಶ್ರಾಂತಿ ಕೂಡ ಅಷ್ಟೇ ಅಗತ್ಯ.ವರ್ಕ್ ಔಟ್ ಮಾಡಿದ ನಂತರ ವಿಶ್ರಾಂತಿ ಕೂಡ ಪಡೆಯಿರಿ ಇದರಿಂದ ನಿಮ್ಮ ಸ್ನಾಯುಗಳು ಬಲಯುತವಾಗುತ್ತವೆ.

ನಿಧಾನ ಮತ್ತು ಸ್ಥಿರವಾಗಿರಲಿ:

ನಿಧಾನ ಮತ್ತು ಸ್ಥಿರವಾಗಿರಲಿ:

ನಿಮ್ಮ ವ್ಯಾಯಾಮವನ್ನು ಅತಿ ವೇಗವಾಗಿ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ.ನಿಧಾನವಾಗಿ ಮಾಡಿ ಮತ್ತು ಹೊಟ್ಟೆ ಕರಗಿಸಿಕೊಳ್ಳಿ.

ಯೋಗ:

ಯೋಗ:

ಜಿಮ್ ಮಾಡಿ ಬೇಸತ್ತಿದ್ದೀರಾ? ಹಾಗಿದ್ದರೆ ಯೋಗ ಮಾಡಿ ನೋಡಿ.ಯೋಗದ ಸಾಕಷ್ಟು ಆಸನಗಳು ದೇಹವನ್ನು ಬಲಯುತವಾಗಿಸುತ್ತದೆ.ಯೋಗ ಕೇವಲ ನಿಮ್ಮ ದೇಹವನ್ನು ಮಾತ್ರವಲ್ಲ ಮನಸ್ಸನ್ನು ಕೂಡ ಸುಧಾರಿಸುತ್ತದೆ.ಜೊತೆಗೆ ಒತ್ತಡವನ್ನು ಕಡಿಮೆ ಮಾಡಿ ಸ್ಥಿರವಾಗಿ ಇರುವಂತೆ ಮಾಡುತ್ತದೆ.

ತೂಕ ಕೂಡ ಪ್ರಭಾವ ಬೀರುತ್ತದೆ:

ತೂಕ ಕೂಡ ಪ್ರಭಾವ ಬೀರುತ್ತದೆ:

ತೂಕ ಕೂಡ ನಿಮ್ಮ ಹೊಟ್ಟೆ ಬರುವಿಕೆಗೆ ಕಾರಣ.ಪ್ರತಿದಿನ ವರ್ಕ್ ಔಟ್ ಮಾಡುವುದರಿಂದ ತೂಕದ ಜೊತೆಗೆ ಹೊಟ್ಟೆ ಕರಗಿಸಿಕೊಳ್ಳಬಹುದು.

ನೀವು ಏನನ್ನು ತಿನ್ನುತ್ತೀರಿ ಎಂಬುದರ ಬಗ್ಗೆ ಗಮನವಿರಲಿ:

ನೀವು ಏನನ್ನು ತಿನ್ನುತ್ತೀರಿ ಎಂಬುದರ ಬಗ್ಗೆ ಗಮನವಿರಲಿ:

ನೀವು ಹೊಟ್ಟೆ ಕರಗಿಸಬೇಕು ಎಂದು ಬಯಸಿದಲ್ಲಿ ಸರಿಯಾದ ಆಹಾರ ಪದ್ಧತಿ ಮುಖ್ಯವಾಗುತ್ತದೆ.ಕೇವಲ ಪ್ರತಿದಿನ ಜಿಮ್ ಗೆ ಹೋಗುವುದರಿಂದ ಪ್ರಯೋಜನವಿಲ್ಲ.ಪೋಷಣಾ ತಜ್ಞರು ಹೇಳುವ ಪ್ರಕಾರ ಆಹಾರದಲ್ಲಿ ಪೌಷ್ಟಿಕಾಂಶ,ಕಡಿಮೆ ಕೊಬ್ಬಿನ ಹಾಲು,ತಾಜಾ ತರಕಾರಿ,ಹಣ್ಣುಗಳು ಇವುಗಳನ್ನು ಸೇವಿಸುವುದು ಕೂಡ ಆರೋಗ್ಯಕ್ಕೆ ಉತ್ತಮವಾದುದು.

English summary

Brilliant ways to get a flatter belly

Worried why all your ab exercises aren't showing the results you want? Maybe you are missing something.
Story first published: Friday, January 3, 2014, 13:44 [IST]
X
Desktop Bottom Promotion