For Quick Alerts
ALLOW NOTIFICATIONS  
For Daily Alerts

ಬಿಯರ್‌ನಿಂದ ಬರುವ ಬೊಜ್ಜನ್ನು ಇಳಿಸಲು ಅತ್ಯುತ್ತಮ ಸಲಹೆಗಳು

|

ದೀರ್ಘ ಸಮಯದವರೆಗೆ ಬಿಯರ್ ಸೇವಿಸಿದಾಗ ಹೆಚ್ಚುವರಿ ಕೊಬ್ಬು ದೇಹದಲ್ಲಿ ಶೇಖರವಾಗುತ್ತದೆ. ಇದು ಮಹಿಳೆ ಮತ್ತು ಪುರುಷರನ್ನು ಕಾಡುವ ಸಾಮಾನ್ಯ ಸಮಸ್ಯೆಯಾಗಿರುತ್ತದೆ. ಸಾಮಾನ್ಯವಾಗಿ ಪುರುಷರ ಸೊಂಟದ ಸುತ್ತಳತೆಯು ಅವರ ಎತ್ತರದ ಅರ್ಧದಷ್ಟಿರಬೇಕು. ನಿಮ್ಮ ಸೊಂಟ ಅದಕ್ಕಿಂತ ಹೆಚ್ಚಾಗಿದ್ದರೆ, ನಿಮ್ಮನ್ನು ಮಧುಮೇಮ ಮತ್ತು ರಕ್ತದೊತ್ತಡದ ಪರಿಣಾಮಕ್ಕೆ ಇದು ಒಳಗಾಗುವಂತೆ ಮಾಡುತ್ತದೆ.

ಆದ್ದರಿಂದ ನಿಮ್ಮ ಬೊಜ್ಜನ್ನು (ಬಿಯರ್ ಹೊಟ್ಟೆಯನ್ನು) ಇಳಿಸಿಕೊಳ್ಳುವ ಗುರಿಗೆ ಸಹಾಯ ಮಾಡಲು ಹಲವಾರು ಮಾರ್ಗಗಳು ಇವೆ. ನಿಮ್ಮ ದೇಹವನ್ನು ಸರಿಯಾದ ಆಕಾರದಲ್ಲಿ ಕಾಪಾಡುವುದು ಹೇಗೆ ಮತ್ತು ಅಧಿಕ ತೂಕವನ್ನು ನೀಗಿಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿದುಕೊಳ್ಳೋಣ.

ನಿಮ್ಮ ಹೊಟ್ಟೆಯಲ್ಲಿ ಕೊಬ್ಬು ಶೇಖರಗೊಳ್ಳಲು ಹಲವಾರು ಕಾರಣಗಳಿವೆ, ಅನಾರೋಗ್ಯಕರ ಜೀವನ ಶೈಲಿಯನ್ನು ಅನುಸರಿಸುವುದು, ವ್ಯಾಯಾಮದ ಕೊರತೆ, ಕೆಟ್ಟದಾದ ಆಹಾರ ಅಭ್ಯಾಸ, ಮತ್ತು ಬಿಯರ್ ಸೇವನೆ ಇದರಿಂದ ಹೊಟ್ಟೆಯಲ್ಲಿ ಕೊಬ್ಬು ಶೇಖರಗೊಳ್ಳುತ್ತದೆ. ಬಿಯರ್ ಹೆಚ್ಚುವರಿ ಕೊಬ್ಬನ್ನು ಹೊಂದಿರುವುದರಿಂದ ನಿಮ್ಮ ದೇಹದ ತೂಕ ಹೆಚ್ಚಾಗುತ್ತದೆ. ಮೂಲತಃ ಮದ್ಯಪಾನವು ಸೊಂಟದ ಮತ್ತು ಹೊಟ್ಟೆಯ ಸುತ್ತಳತೆಯನ್ನು ಹೆಚ್ಚಾಗಿಸುತ್ತದೆ.

ಬಿಯರ್ ಸೇವನೆಯುನ್ನು ಕಡಿಮೆ ಮಾಡಿದಷ್ಟು ದೇಹದ ತೂಕ ಕಡಿಮೆಯಾಗುತ್ತದೆ ಅದೇ ರೀತಿ ಹೆಚ್ಚು ವ್ಯಾಯಾಮವನ್ನು ಮಾಡುವುದು ದೇಹಕ್ಕೆ ಸುಂದರ ಆಕಾರವನ್ನು ನೀಡುತ್ತದೆ. ಬಿಯರ್ ಸೇವನೆಯನ್ನು ಪೂರ್ತಿಯಾಗಿ ತ್ಯಜಿಸುವುದು ಅಸಾಧ್ಯವಾಗಿದೆ. ಅಪರೂಪಕ್ಕೊಮ್ಮೆ ತಂಪು ಬಿಯರ್ ಅನ್ನು ಸೇವಿಸಬಹುದಾಗಿದೆ. ಕೆಳಗೆ ನಾವು ನೀಡಿರುವ ಕೆಲವೊಂದು ಸಲಹೆಗಳನ್ನು ಪಾಲಿಸುವುದರ ಮೂಲಕ ಹೊಟ್ಟೆಯ ಕೊಬ್ಬನ್ನು ಕರಗಿಸಬಹುದಾಗಿದೆ.

ಹುಡುಗರೇ ಮಹಿಳೆಯರಿಗಿಂತ ಬೀರ್ ಬೊಂಬಾಟ್ ಗೊತ್ತೇನ್ರಿ?

ದೊಡ್ಡ ಸ್ನಾಯುಗಳಿಗೆ ವ್ಯಾಯಾಮ

ದೊಡ್ಡ ಸ್ನಾಯುಗಳಿಗೆ ವ್ಯಾಯಾಮ

ಬಿಯರ್ ಕುಡಿದು ಉಂಟಾದ ಹೊಟ್ಟೆಯ ಕೊಬ್ಬನ್ನು ಕರಗಿಸಲು ನಿಮ್ಮ ದೊಡ್ಡಾದಾದ ಸ್ನಾಯುವನ್ನು ಕರಗಿಸುವುದಾಗಿದೆ. ನಿಮ್ಮ ಕಾಲುಗಳು ಮತ್ತು ಹಿಂಭಾಗದಲ್ಲಿನ ದೊಡ್ಡದಾದ ಸ್ನಾಯುಗಳನ್ನು ಕರಗಿಸುವ ಲಕ್ಷ್ಯವನ್ನು ನೀವು ಹೊಂದಿರಬೇಕು. ವ್ಯಾಯಾಮ ಮಾಡುವುದರಿಂದ ಈ ದೊಡ್ಡ ಸ್ನಾಯುಗಳ ಸಮಸ್ಯೆಯನ್ನು ನೀಗಿಸುತ್ತವೆ. ನಿಮ್ಮ ಸ್ನಾಯುಗಳಿಗೆ ಹೆಚ್ಚುವರಿ ವ್ಯಾಯಾಮ ದೊರಕಿದಂತೆ ಮತ್ತಷ್ಟು ಕ್ಯಾಲೊರಿಗಳನ್ನು ನೀವು ಕರಗಿಸಬಹುದು ಎಂಬುದನ್ನು ನೀವು ಮರೆಯಬೇಡಿ.

ಉತ್ತಮ ಆಹಾರ ಸೇವನೆ

ಉತ್ತಮ ಆಹಾರ ಸೇವನೆ

ಒಮೆಗಾ - 3 ಯಂತಹ ಉತ್ತಮ ಆಹಾರವನ್ನು ನಿಮ್ಮ ಡಯೆಟ್ ಹೊಂದಿರುವುದು ಅತ್ಯಗತ್ಯವಾಗಿದೆ. ಏಕೆಂದರೆ ಇದು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವುದಿಲ್ಲ. ನೀವು ತೆಗೆದುಕೊಳ್ಳುವ ಆಹಾರ ಇದನ್ನು ಒಳಗೊಂಡಿರುವುದು ಅತ್ಯವಶ್ಯಕ. ದೇಹದ ಚಯಾಪಚಯ ಕ್ರಿಯೆಯನ್ನು ನಿರ್ವಹಿಸುವಲ್ಲಿ ಇವುಗಳು ಪ್ರಮುಖ ಪಾತ್ರ ವಹಿಸುತ್ತವೆ. ನಿಮ್ಮ ಬಿಯರ್ ಸೇವನೆಯಿಂದ ಉಂಟಾದ ಕೊಬ್ಬು ಶೇಖರಣೆಯನ್ನು ಕರಗಿಸಲು ಇದು ನಿಮಗೆ ಸಹಾಯಕವಾಗಿದೆ.

ಏರೋಬಿಕ್ ಕಾರ್ಡಿಯೊ

ಏರೋಬಿಕ್ ಕಾರ್ಡಿಯೊ

ದೀರ್ಘ ಸಮಯದವರೆಗೆ ನಡೆಯುವ ಪ್ರಕ್ರಿಯೆಯು ನಿಮಗೆ ಸಹಾಯ ಮಾಡುತ್ತದೆ. ಜೊತೆಗೆ ಓಡುವಿಕೆಯನ್ನು ಕೂಡ ಒಳಗೊಂಡಿರುವುದು ಮುಖ್ಯವಾಗಿದೆ. ನಿಮ್ಮ ಬಿಯರ್ ಬೊಜ್ಜು ಬೇಗ ಕರಗಬೇಕು ಎಂದರೆ ನಿರಂತರವಾಗಿ ಏರೋಬಿಕ್ ಕಾರ್ಡಿಯೊವನ್ನು ಪ್ರಯತ್ನಿಸಬೇಕು. ಅಂದರೆ ಜೋರಾಗಿ ಓಡುವ ವ್ಯಾಯಾಮ, ಇದು ನಿಮ್ಮ ದೇಹದಲ್ಲಿರುವ ಅಧಿಕ ಕ್ಯಾಲೋರಿಗಳನ್ನು ಕರಗಿಸುತ್ತದೆ.

ಆಹಾರ ಕ್ಯಾಲೋರಿ ಮತ್ತು ಬಿಯರ್ ಕ್ಯಾಲೋರಿಗಳ ಸ್ಥಾನಾಂತರ

ಆಹಾರ ಕ್ಯಾಲೋರಿ ಮತ್ತು ಬಿಯರ್ ಕ್ಯಾಲೋರಿಗಳ ಸ್ಥಾನಾಂತರ

ಜನರು ಮಾಡುವ ಅತಿ ದೊಡ್ಡ ತಪ್ಪು ಇದಾಗಿದೆ. ಬಿಯರ್ ಕುಡಿಯುವ ಸಂದರ್ಭದಲ್ಲಿ ಜನರು ತಮ್ಮ ಆಹಾರವನ್ನು ಕಡಿಮೆ ಸೇವಿಸುತ್ತಾರೆ. ಇದರಿಂದಾಗಿ ಬಿಯರ್‌ನಲ್ಲಿರುವ ಹೆಚ್ಚು ಕ್ಯಾಲೋರಿ ದೇಹಕ್ಕೆ ಹೋಗಿ ದೇಹದ ತೂಕ ಹೆಚ್ಚಾಗುತ್ತದೆ. ಹಾಗಾಗಿ ಸರಿಯಾದ ಕ್ರಮದಲ್ಲಿ ಆಹಾರವನ್ನು ಸೇವಿಸುವುದನ್ನು ಮಾತ್ರ ಮರೆಯಬೇಡಿ. ಒಟ್ಟಾರೆ ಆಹಾರವನ್ನು ದಿನದಲ್ಲಿ ಸೇವಿಸುವುದು ಕಡ್ಡಾಯವಾಗಿದೆ.

 ಬಿಯರ್ ಸೇವನೆಯ ಪ್ರಮಾಣವನ್ನು ಗಮನಿಸಿ

ಬಿಯರ್ ಸೇವನೆಯ ಪ್ರಮಾಣವನ್ನು ಗಮನಿಸಿ

ಸ್ವಲ್ಪ ಬಿಯರ್ ಸೇವನೆಯನ್ನು ಮಾಡುವುದರಿಂದ ಯಾವುದೇ ಹಾನಿಯಿಲ್ಲ ಎಂದು ಅಧ್ಯಯನಗಳು ದೃಢಪಡಿಸಿವೆ. ನಿಮ್ಮ ಬಿಯರ್ ಸೇವನೆಯಿಂದ ಉಂಟಾದ ಕೊಬ್ಬನ್ನು ಕರಗಿಸುವ ಉತ್ತಮ ಉಪಾಯವೆಂದರೆ ಬಿಯರ್ ಅನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದಾಗಿದೆ. ಇದರಿಂದ ದೇಹದ ಸಂಪೂರ್ಣ ಆರೋಗ್ಯ ಸುಧಾರಣೆಯಾಗುತ್ತದೆ. ನಿಮ್ಮ ಬಿಯರ್ ಪ್ರಮಾಣವನ್ನು ಕಡಿಮೆ ಮಾಡಲು ಇದೊಂದು ಉತ್ತಮ ಕ್ರಮವಾಗಿದೆ. ಬಿಯರ್ ಬೊಜ್ಜನ್ನು ಕರಗಿಸಲು ಇದು ಸಹ ಉತ್ತಮವಾದ ಸಲಹೆ ಎಂಬುದನ್ನು ಮರೆಯಬೇಡಿ.

English summary

Best Tips To Lose Beer Belly

Beer belly is usually referred to a fat stomach because of the excessive consumption of beer over a long period of time, both in men and women. This may not be possible by all, as most men do enjoy a few cold beers occasionally. Following are a few tips on how to lose beer belly fat.
Story first published: Monday, July 14, 2014, 10:57 [IST]
X
Desktop Bottom Promotion