For Quick Alerts
ALLOW NOTIFICATIONS  
For Daily Alerts

ತೂಕ ಇಳಿಕೆಗೆ ಅತ್ಯುತ್ತಮವಾಗಿರುವ ಕಾರ್ಡಿಯೋ ವ್ಯಾಯಾಮ

|

ತೂಕ ಇಳಿಕೆಗೆ ಅತ್ಯುತ್ತಮ ಯೋಗ ಅಭ್ಯಾಸವಾಗಿರುವ, ಕಾರ್ಡಿಯೋ ವ್ಯಾಯಾಮ, ನಿಮ್ಮ ಕೊಬ್ಬನ್ನು ಕರಗಿಸಿ ಆರೋಗ್ಯ ಮತ್ತು ಫಿಟ್‌ನೆಸ್ ಅನ್ನು ವೃದ್ಧಿಸುತ್ತದೆ. ಇದು ನಿಮ್ಮ ಸುಂದರ ಕಾಯವನ್ನು ನಿರ್ವಹಿಸಲು ಮಾತ್ರ ಸಹಾಕರಿಯಾಗಿರದೇ ನಿಮಗೆ ಮೋಜನ್ನು ನೀಡುತ್ತದೆ.

ಹೌದು ನಾವು ಮಾಡುವ ವ್ಯಾಯಾಮ ನಮಗೆ ಕಷ್ಟವನ್ನು ನೀಡದೇ ನಮ್ಮನ್ನು ಇನ್ನು ಇನ್ನು ಮಾಡುವಂತೆ ಪ್ರೋತ್ಸಾಹಿಸುವಂತಿರಬೇಕು. ನಿಮ್ಮ ಕ್ಯಾಲೋರಿಗಳನ್ನು ಕರಗಿಸಿ ಹೃದಯ ಬಡಿತವನ್ನು ಹೆಚ್ಚಿಸಿ ನಿಮ್ಮ ಉತ್ತಮ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಸುಂದರ ಕಾಯ ಮತ್ತು ಉತ್ತಮ ಆರೋಗ್ಯವನ್ನು ಕಾಪಾಡಿ ನಿಮ್ಮಲ್ಲಿ ಚೈತನ್ಯವನ್ನು ಉಂಟುಮಾಡುತ್ತದೆ.

ಕಾರ್ಡಿಯೋ ವ್ಯಾಯಾಮದಲ್ಲಿ ಕೇವಲ ಒಂದು ವಿಧಾನ ಮಾತ್ರವಲ್ಲ, ಅವುಗಳನ್ನು ಆರಿಸಲು ನಿಮಗೆ ಹಲವಾರು ಆಯ್ಕೆಗಳಿವೆ ನಿಮ್ಮ ಮೆಚ್ಚಿನ ಒಂದನ್ನು ಆಯ್ಕೆ ಮಾಡಿ ನಿಮ್ಮ ಹೆಚ್ಚುವರಿ ಕಿಲೋಗಳನ್ನು ಕರಗಿಸಲು ಸಹಾಯ ಮಾಡುತ್ತದೆ. ಇಂದಿನ ಲೇಖನದಲ್ಲಿ ನಾವು ಕೆಲವೊಂದು ವ್ಯಾಯಾಮಗಳನ್ನು ಇಲ್ಲಿ ನೀಡುತ್ತಿದ್ದು ಇದರಿಂದ ನಿಮ್ಮ ದೇಹಕ್ಕೆ ಉತ್ತಮ ಆರೋಗ್ಯ ದೊರೆಯುತ್ತದೆ ಮತ್ತು ನಿಮ್ಮನ್ನು ಸುಂದರಿನ್ನಾಗಿಸಲು ಸಹಾಯ ಮಾಡುತ್ತದೆ.

ತೂಕ ಇಳಿಸಲು ಸಹಕಾರಿ ಈ ಎಂಟು ಬೆಳಗ್ಗಿನ ಸಲಹೆಗಳು

ಓಡುವಿಕೆ

ಓಡುವಿಕೆ

ಇದೊಂದು ಕಾರ್ಡಿಯೋ ವ್ಯಾಯಾಮದ ಸರಳ ಭಾಗವಾಗಿದೆ. ಅರ್ಧ ಗಂಟೆಯ ಓಡುವಿಕೆಯು ನಿಮ್ಮಲ್ಲಿ 300 ಕ್ಯಾಲೋರಿಗಳನ್ನು ದಿನದಲ್ಲಿ ಕರಗಿಸುತ್ತದೆ. ಹೆಚ್ಚಿನ ಪರಿಕರಗಳ ಸಹಾಯವಿಲ್ಲದೆ ನಿಮ್ಮ ದೇಹದಲ್ಲಿನ ಕೊಬ್ಬನ್ನು ಕರಗಿಸುವ ಕಾರ್ಡಿಯೋ ವ್ಯಾಯಾಮದ ಸರಳ ವ್ಯಾಯಾಮವಾಗಿದೆ. ನಿಮಗೆ ಇದಕ್ಕೆ ಬೇಕಾಗಿರುವುದು ಉತ್ತಮ ಜೋಡಿಯ ಶೂಗಳು ಮತ್ತು ಬಟ್ಟೆ. ಓಡುವಿಕೆಯನ್ನು ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ಯಾವ ಸ್ಥಳದಲ್ಲಾದರೂ ಮಾಡಬಹುದಾಗಿದೆ. ಪ್ರತಿಯೊಂದು ತೂಕ ಇಳಿಕೆಯ ವ್ಯಾಯಾಮವು ಓಡುವುದನ್ನು ಒಳಗೊಂಡಿರುತ್ತದೆ.

ಯಂತ್ರ ವ್ಯಾಯಾಮ

ಯಂತ್ರ ವ್ಯಾಯಾಮ

ಜಿಮ್ ಮತ್ತು ವರ್ಕ್ಔಟ್ ಸೆಷನ್‌ಗಳು ಕಾರ್ಡಿಯೋ ವ್ಯಾಯಾಮದ ಭಾಗವಾಗಿದ್ದು ಇದನ್ನು ಯಂತ್ರಗಳನ್ನು ಬಳಸಿ ಮಾಡಲಾಗುತ್ತದೆ. ಎಲಿಪ್ಟಿಕಲ್ ಟ್ರೈನರ್ ಅಥವಾ ಟ್ರೆಡ್‌ಮಿಲ್ ಮುಖ್ಯವಾಗಿರುವ ಎರಡು ಉಪಯೋಗಕಾರಿ ಮೆಶೀನ್‌ಗಳಾಗಿದ್ದು ನಿಮ್ಮ ಕಾರ್ಡಿಯೋ ವ್ಯಾಯಾಮಕ್ಕೆ ಸಹಕಾರಿಯಾಗಿದೆ. ಈ ಮೆಶೀನ್‌ಗಳಲ್ಲಿ ನೀವು ಅರ್ಧಗಂಟೆಗಳ ಕಾಲ ವ್ಯಾಯಾಮ ಮಾಡುವುದು 300 - 400 ಕ್ಯಾಲೋರಿಗಳನ್ನು ಕರಗಿಸುತ್ತದೆ.

ಈ ಮೆಶೀನ್‌ಗಳನ್ನು ನೀವು ಮನೆಯಲ್ಲೇ ಸ್ಥಾಪಿಸಿರಬೇಕು ಇಲ್ಲವೇ ಇದು ಇರುವಂತಹ ಜಿಮ್ ಅಥವಾ ವ್ಯಾಯಾಮ ಕೇಂದ್ರಗಳಿಗೆ ನೀವು ಭೇಟಿ ಕೊಡಬೇಕು. ಆದ್ದರಿಂದ ವ್ಯಾಯಾಮಕ್ಕಾಗಿ ಅಧಿಕ ವೆಚ್ಚ ಮಾಡಲು ಬಯಸದವರಿಗೆ ಇದು ಅಷ್ಟೊಂದು ಸಮಾಧಾನಕರವಾಗಿಲ್ಲ.

ಈಜುವುದು

ಈಜುವುದು

ಕೆಲವೊಂದು ತೂಕ ಇಳಿಕೆಯ ವಿಧಾನಗಳಲ್ಲಿ ಈಜುವುದನ್ನು ಪ್ರಮುಖವಾಗಿ ಸೇರ್ಪಡಿಸಲಾಗಿದೆ. ಪ್ರತೀ ದಿನ ಅರ್ಧ ಗಂಟೆಗಳ ಕಾಲ ಈಜುವುದು 400 ರಷ್ಟು ಕ್ಯಾಲೋರಿಗಳನ್ನು ಕರಗಿಸುತ್ತದೆ. ಇದೊಂದು ತೂಕ ಇಳಿಕೆಗೆ ಸಹಕಾರಿಯಾಗಿರುವ ವ್ಯಾಯಾಮವಾಗಿದೆ. ಇದು ನಿಮ್ಮ ದೇಹದ ಪ್ರತಿಯೊಂದು ಅಂಗಕ್ಕೂ ವ್ಯಾಯಾಮವನ್ನು ಒದಗಿಸುವುದರಿಂದ ಇದು ಬೆಸ್ಟ್ ವ್ಯಾಯಾಮವಾಗಿದೆ.

ಏರೋಬಿಕ್ಸ್

ಏರೋಬಿಕ್ಸ್

ಮೋಜಿನ ಕಾರ್ಡಿಯೋ ಅಭ್ಯಾಸವನ್ನು ಬಯಸುವವರಿಗೆ, ಏರೋಬಿಕ್ಸ್ ಒಂದು ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ಸ್ಟ್ರೆಚ್ಚಿಂಗ್, ಜಂಪಿಂಗ್ ಕ್ರಂಚಸ್ ಮತ್ತು ಇತರ ಕೆಲವೊಂದು ವ್ಯಾಯಾಮಗಳು ಸೇರ್ಪಡೆಗೊಂಡಿರುವುದರಿಂದ ನಿಮ್ಮ ದೇಹದಲ್ಲಿನ ಕೊಬ್ಬನ್ನು ಕರಗಿಸಲು ಇದು ಉತ್ತಮ ವ್ಯಾಯಾಮವಾಗಿದೆ. ಏರೋಬಿಕ್ಸ್ ಅನ್ನು ಹೆಚ್ಚಾಗಿ ಮಹಿಳೆಯರು ಅಭ್ಯಸಿಸುತ್ತಾರೆ.

ಜುಂಬಾ

ಜುಂಬಾ

ಇದೊಂದು ಹೊಸ ಪ್ರಕಾರದ ಮತ್ತು ಮುಂದಕ್ಕೆ ಬರುತ್ತಿರುವ ತೂಕ ಇಳಿಕೆಯ ಪರಿಹಾರಗಳನ್ನು ಒಳಗೊಂಡಿರುವ ವ್ಯಾಯಾಮ ವಿಧಾನವಾಗಿದೆ. ಇದು ಡ್ಯಾನ್ಸ್ ಸ್ಟೆಪ್‌ಗಳನ್ನು ಒಳಗೊಂಡು ನಿಮ್ಮಲ್ಲಿ ವ್ಯಾಯಾಮ ಮಾಡಿಸುವುದರಿಂದ ನಿಮ್ಮ ಹೃದಯ ಬಡಿತವನ್ನು ಇದು ಹೆಚ್ಚಿಸುತ್ತದೆ. ಜಾಜ್, ಹಿಪ್ ಹೋಪ್, ಮತ್ತು ಪ್ರತಿಯೊಂದು ಡ್ಯಾನ್ಸ್ ಫಾರ್ಮ್ ಇದರಲ್ಲಿರುವುದಿರಿಂದ ನಿಮ್ಮ ಹೆಚ್ಚುವರಿ ತೂಕವನ್ನು ಇದು ನಿಯಂತ್ರಣಕ್ಕೆ ತಂದು ನಿಮ್ಮಲ್ಲಿ ಉತ್ಸಾಹ ಪುಟಿಯುವಂತೆ ಮಾಡುತ್ತದೆ.

X
Desktop Bottom Promotion