For Quick Alerts
ALLOW NOTIFICATIONS  
For Daily Alerts

ತೆಂಗಿನ ನೀರಿನ ಹತ್ತು ಹಲವು ಉಪಯೋಗಗಳು

|

ಇಂದಿನ ಕಾಲದಲ್ಲಿ ನಾವೆಲ್ಲರೂ ಪ್ಯಾಕೇಜ್ಡ್ ನೀರಿಗೆ ಮೊರೆ ಹೋಗುತ್ತಿದ್ದೇವೆ. ಕಾಲ ಬದಲಾದಂತೆ ಕೋಲ ಎಂಬ ನಾಣ್ಣುಡಿಯಂತೆ ಪ್ಯಾಕೇಜ್ ನೀರಿನ ಒಳಿತು ಕೆಡುಕುಗಳ ಬಗ್ಗೆ ಚಿಂತಿಸದೆ ಅದನ್ನು ಕೊಂಡುಕೊಳ್ಳುತ್ತೇವೆ. ಈ ನೀರು ಎಷ್ಟು ಆರೋಗ್ಯಕಾರಿಯಾಗಿದೆ ಎಂಬುದರ ಆಲೋಚನೆಯನ್ನು ನಾವು ಮಾಡುವುದಿಲ್ಲ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಈ ಆಹಾರಗಳು ರೋಗನಿರೋಧಕತೆ ಹೆಚ್ಚಿಸುತ್ತವೆ

ಮಾನವ ನಿರ್ಮಿತ ಪ್ಯಾಕೇಜ್ ಡ್ರಿಂಕ್‌ಗಳ ರಕ್ಷಣೆಗಾಗಿ ಅಷ್ಟೇ ಪ್ರಮಾಣದ ರಾಸಾಯನಿಕಗಳ ಬಳಕೆ ಆಗುತ್ತಿರುತ್ತದೆ ಎಂಬುದರ ಅರಿವು ನಿಮಗಿದೆಯೇ... ನೈಸರ್ಗಿಕವಾಗಿ ಮುಕ್ತವಾಗಿ ದೊರೆಯುವ ಸಂಪನ್ಮೂಲಗಳನ್ನು ನಾವು ದೂರಮಾಡಿರುವುದು ಪ್ಯಾಕೇಜ್ ನೀರಿನ ಹಾವಳಿಯನ್ನು ಎಲ್ಲೆಡೆ ವಿಸ್ತರಿಸುವಂತೆ ಮಾಡಿದೆ.

ಅದರಲ್ಲೂ ನೈಸರ್ಗಿಕ ನೀರಾದ ಎಳನೀರು ಮತ್ತು ತೆಂಗಿನ ಕಾಯಿಯ ನೀರು ದೇಹಕ್ಕೆ ಉಂಟು ಮಾಡುವ ಆರೋಗ್ಯ ಪ್ರಯೋಜನಗಳನ್ನು ನೀವು ಅರಿತುಕೊಂಡಿರೆಂದರೆ ನೀವು ಸ್ತಂಭಿಭೂತರಾಗುವುದಂತೂ ನಿಜ.

ದೇಹ ತೂಕ ಏರಿಕೆಯನ್ನು ಇಳಿಸಲು ಬಯಸುವವರು, ತಾಜಾ ಮೈಕಾಂತಿಯ ಕ್ರೇಜ್ ಉಳ್ಳವರು, ಆರೋಗ್ಯಪೂರ್ಣ ದೇಹ ಸಂಪತ್ತನ್ನು ಬಯಸುವರು ಹೀಗೆ ನಿಮ್ಮ ಆಗ್ರಹಗಳಿಗೆ ಅನುಗುಣವಾಗಿ ಕಾಮಧೇನು ಕಲ್ಪವೃಕ್ಷ ವರವನ್ನು ನೀಡುತ್ತದೆ.

ತೆಂಗಿನ ನೀರು ಸಿಹಿಯಿಂದ ಕೂಡಿದ್ದು ನಿಮ್ಮ ದೇಹದಲ್ಲಿ ಶಕ್ತಿ ಸಂಚಯನವನ್ನುಂಟು ಮಾಡುತ್ತದೆ. ಇದು ಹೈಜೀನಿಕ್ ಆಗಿದ್ದು ರೋಗನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ. ಮಾನವನಿರ್ಮಿತವಲ್ಲದ ಈ ಪಾನೀಯದ ಸೊಗಸು ನೀವದನ್ನು ಮೊದಲು ಹೀರುವಾಗಲೇ ನಿಮಗರಿವಿಗೆ ಬರುತ್ತದೆ.

ಯಾವುದೇ ರಾಸಾಯನಿಕ ಮಿಶ್ರಣವಲ್ಲದ ಶುದ್ಧ ದೇವರ ಕೊಡುಗೆಯಾಗಿರುವ ಕಲ್ಪವೃಕ್ಷದ ನೀರು ರೋಗಾಣುಗಳನ್ನುಂಟು ಮಾಡುವ ಸೂಕ್ಷ್ಮಾಣುಗಳನ್ನು ದೇಹದಿಂದ ಹೊರಹಾಕುತ್ತವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹಸಿವನ್ನು ನಿಯಂತ್ರಿಸುವ 20 ಅತ್ಯುತ್ತಮ ಆಹಾರಗಳು.

ಬನ್ನಿ ಈ ದೇವರ ಕೊಡುಗೆ ಕಲ್ಪವೃಕ್ಷದ ಇನ್ನಷ್ಟು ಮಹತ್ವಗಳನ್ನು ಅರಿತುಕೊಂಡು ಆರೋಗ್ಯವನ್ನು ಮತ್ತಷ್ಟು ಸುಧಾರಿಸೋಣ.

ಹೈಡ್ರೇಟ್ ಮಾಡುತ್ತದೆ:

ಹೈಡ್ರೇಟ್ ಮಾಡುತ್ತದೆ:

ಬಿಸಿಲಿನ ಝಳವು ನಿಮ್ಮಲ್ಲಿ ನಿರ್ಜಲೀಕರಣವನ್ನುಂಟು ಮಾಡಬಹುದು. ನಿಮ್ಮ ದೇಹಕ್ಕೆ ಜಲವನ್ನುಂಟು ಮಾಡುವ ದೇಹಕ್ಕೆ ತಂಪನ್ನು ಒದಗಿಸುವ ಸಕ್ಕರೆ ಮತ್ತು ಇಲೆಕ್ಟ್ರೋಲೈಟ್ಸ್ ಸಮನಾಗಿ ಬೆರೆತಿರುವ ಪೇಯದ ಅವಶ್ಯಕತೆ ಇರುತ್ತದೆ. ಈ ಸಮಯದಲ್ಲಿ ನಿಮಗೆ ತೆಂಗಿನ ನೀರಿಗಿಂತ ಇನ್ನೊಂದು ಪಾನೀಯ ದೊರೆಯಲಿಕ್ಕಿಲ್ಲ. ಕ್ಷಣ ಮಾತ್ರದಲ್ಲಿ ಹೈಡ್ರೇಶನ್ ಸಮಸ್ಯೆಯನ್ನು ಇದು ದೂರ ಮಾಡುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿ:

ಜೀರ್ಣಕ್ರಿಯೆಗೆ ಸಹಕಾರಿ:

ಆರೋಗ್ಯಕರ ಜೀರ್ಣಕ್ರಿಯೆ ಪ್ರಕ್ರಿಯೆಯು ನಿಮಗೆ ಆರೋಗ್ಯಕರ ದೇಹ ಮನಸ್ಸನ್ನು ಜಯಿಸುವಂತೆ ಮಾಡುತ್ತದೆ. ಒಂದು ಬಾರಿ ಕುಡಿಯುವ ತೆಂಗಿನ ಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ಎಂಜೀಮ್‌ಗಳಿದ್ದು ಜೀರ್ಣಕ್ರಿಯಯ ಸಮಸ್ಯೆಯನ್ನು ದೂರ ಮಾಡುತ್ತದೆ.

ತೂಕ ಇಳಿಕೆ:

ತೂಕ ಇಳಿಕೆ:

ಕೊಬ್ಬಿಲ್ಲದೆ ನೈಸರ್ಗಿಕವಾಗಿರುವ ತೆಂಗಿನ ಕಾಯಿ ನೀರು ತೂಕ ಇಳಿಸುವಲ್ಲಿ ಗಮನಾರ್ಹ ಪರಿಣಾಮವನ್ನುಂಟು ಮಾಡುತ್ತದೆ. ಒಮ್ಮೆ ತೆಂಗಿನ ಕಾಯಿ ನೀರು ಕುಡಿದರೆ ಸ್ವಲ್ಪ ಹೊತ್ತಿನವರೆಗೆ ನಮಗೆ ಬೇರಾವ ಆಹಾರದ ಅವಶ್ಯಕತೆ ಇರುವುದಿಲ್ಲ.

ಮುಪ್ಪಿನೊಂದಿಗೆ ಹೋರಾಡುತ್ತದೆ:

ಮುಪ್ಪಿನೊಂದಿಗೆ ಹೋರಾಡುತ್ತದೆ:

ಮುಪ್ಪಿನೊಂದಿಗೆ ಹೋರಾಡುವ ಅಭೂತಪೂರ್ವ ಗುಣ ತೆಂಗಿನ ನೀರಿಗಿದೆ. ಪಿಎಚ್ ಹಂತಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುವ ತೆಂಗಿನ ನೀರು ಕೋಶಗಳ ಬೆಳವಣಿಗೆಯನ್ನು ಹೆಚ್ಚಿಸಿ ಅದನ್ನು ನಿಯಂತ್ರಣ ಮಾಡುತ್ತದೆ. ತ್ವಚೆಯನ್ನು ಆರೋಗ್ಯಯುತ ಮತ್ತು ಬಲಯುತಗೊಳಿಸುತ್ತದೆ.

ಆರೋಗ್ಯಕರ ಹೃದಯ:

ಆರೋಗ್ಯಕರ ಹೃದಯ:

ಉತ್ತಮ ಕೊಲೆಸ್ಟ್ರಾಲ್, ಎಚ್‌ಡಿಎಲ್, ಮತ್ತು ಉತ್ತಮ ರಕ್ತ ಪರಿಚಲನೆಯನ್ನು ನಿರ್ವಹಿಸುವ ತೆಂಗಿನ ಕಾಯಿ ನೀರು, ಹೃದಯ ಸಂಬಂಧಿ ರೋಗಗಳನ್ನು ನಿವಾರಿಸಿ ಹೃದಯಕ್ಕೆ ಸ್ವಾಸ್ಥ್ಯವನ್ನುಂಟು ಮಾಡುತ್ತದೆ.

ವಿಟಮಿನ್ ಮಿನರಲ್ ಹೇರಳವಾಗಿದೆ:

ವಿಟಮಿನ್ ಮಿನರಲ್ ಹೇರಳವಾಗಿದೆ:

ತೆಂಗಿನ ಕಾಯಿ ನೀರಿನಲ್ಲಿರುವ ವಿಟಮಿನ್ ಹಾಗೂ ಮಿನರಲ್‌‍ಗಳ ಪ್ರಮಾಣ ಎಣಿಕೆಗೂ ಮೀರಿದ್ದು. ಥೈಮೇನ್ ಮತ್ತು ರಿಬೋಫ್ಲೇವಿನ್ ವಿಟಮಿನ್ ಸಿಯೊಂದಿಗೆ ಮಿಶ್ರಗೊಂಡಿದ್ದು ಕ್ಯಾಲ್ಶಿಯಂ, ಪೊಟಾಶಿಯಂ, ಜಿಂಕ್, ಮೆಗ್ನೇಶಿಯಂ ಐರನ್ ಕಾಯಿ ನೀರಿನಲ್ಲಿದೆ.

ತೆಂಗಿನ ಕಾಯಿ ನಿಜಕ್ಕೂ ಅದ್ಭುತ:

ತೆಂಗಿನ ಕಾಯಿ ನಿಜಕ್ಕೂ ಅದ್ಭುತ:

ತೆಂಗಿನ ಕಾಯಿಯ ಬಗ್ಗೆ ಮಾತನಾಡುತ್ತಾ ಹೋದರೆ ಪುಟಗಳೇ ಸಾಲದಾಗಬಹುದು. ಅದರ ಮಹತ್ವ ಅಷ್ಟಕ್ಕೆಲ್ಲಾ ಮುಗಿಯುವಂಥದ್ದಲ್ಲ. ತೂಕ ಇಳಿಸುವುದರಲ್ಲಿ ಮಹತ್ವದ ಪಾತ್ರ ವಹಿಸುವ ತೆಂಗಿನ ಕಾಯಿ ನೀರು ಆರೋಗ್ಯಕರ ಪೇಯವಾಗಿದೆ. ನಿರ್ಜಲೀಕರಣ, ಜೀರ್ಣಕ್ರಿಯೆಯ ಸಮಸ್ಯೆಯನ್ನು ಹೋಗಲಾಡಿಸುವ ಕಾಯಿ ನೀರು ದೇಹದ ಆರೋಗ್ಯಕ್ಕೆ ಹೇಳಿ ಮಾಡಿಸಿದ್ದು.

English summary

Benefits Of Coconut Water

The market is flooded with a variety of packaged drinks that come in various flavors. One serving of these sugar-loaded drinks fills you up with a whole lot of extra calories.
Story first published: Thursday, February 20, 2014, 17:50 [IST]
X
Desktop Bottom Promotion