For Quick Alerts
ALLOW NOTIFICATIONS  
For Daily Alerts

ಯೋಗಾಸನ ಮಾಡಿ ನಿದ್ರಾಹೀನತೆಯನ್ನು ಪರಿಹರಿಸಿಕೊಳ್ಳಿ

By Deepak M
|

ನಿಮಗೆ ರಾತ್ರಿ ನಿದ್ದೆ ಬರುತ್ತಿಲ್ಲವೆ? ಇಡೀ ದಿನ ಕೆಲಸ ಮಾಡಿ ನೀವು ನಿಶ್ಶಕ್ತರಾಗಿದ್ದೀರಾ? ಬಹುಶಃ ಒತ್ತಡ ಅಥವಾ ಇನ್ನಿತರ ಅಂಶಗಳು ನಿಮ್ಮ ಅಸೌಖ್ಯಕ್ಕೆ ಕಾರಣವಾಗಿರಬಹುದು. ಆದರೆ ಒಂದು ವಿಚಾರ ನೆನಪಿನಲ್ಲಿಡಿ, ರಾತ್ರಿಯ ಹೊತ್ತು ನಿದ್ದೆ ಬಾರದಿರುವುದು ನಿದ್ರಾಹೀನತೆ ಅಥವಾ ಇನ್ಸೋಮ್ನಿಯಾದ ಸೂಚನೆಗಳಿರಬಹುದು. ಇನ್ಸೋಮ್ನಿಯಾವು ಇಡೀ ದಿನದ ಬಳಲಿಕೆ ಅಥವಾ ದೈನಂದಿನ ಜಂಜಡಗಳ ಕಾರಣದಿಂದ ಕಾಡಬಹುದು.

ಇತ್ತೀಚಿನ ಅಧ್ಯಯನದ ಪ್ರಕಾರ ಪ್ರತಿ 20 ಭಾರತೀಯರಲ್ಲಿ ಒಬ್ಬರಿಗೆ ಇನ್ಸೋಮ್ನಿಯಾ ಇರುವುದು ಕಂಡು ಬಂದಿದೆಯಂತೆ. ನಿಧಾನವಾಗಿ ಉಸಿರನ್ನು ಎಳೆದುಕೊಳ್ಳುತ್ತ ನೇರವಾಗಿ ನಿಲ್ಲಿ. ಈ ಪ್ರಕ್ರಿಯೆಯಲ್ಲಿ ಕೈಗಳನ್ನು ಹಾಗೆಯೇ ನೇರವಾಗಿ ತೆಗೆದುಕೊಂಡು ಬನ್ನಿ. ಆನಂತರ ನೇರವಾಗಿ ನಿಂತ ನಂತರ ನಿಮ್ಮ ಕೈಗಳನ್ನು ಸ್ವಸ್ಥಾನಕ್ಕೆ ನಿಧಾನವಾಗಿ ಕೊಂಡೊಯ್ಯುವುದನ್ನು ಮರೆಯಬೇಡಿ. ಯಾವುದೇ ಆತುರವನ್ನು ಪಡಲು ಹೋಗಬೇಡಿ. ಒಂದು ವಿಚಾರ ನೆನಪಿನಲ್ಲಿಡಿ, ನೀವು ಯಥಾಸ್ಥಿತಿಗೆ ಬರುವಾಗ ಯಾವುದೇ ಕಾರಣಕ್ಕು ಸ್ನಾಯುಗಳಿಗೆ ಆಯಸವನ್ನು ಉಂಟು ಮಾಡಬೇಡಿ.

ಇನ್ಸೋಮ್ನಿಯಾದ ಜೊತೆಗೆ ಹೋರಾಡಲು ನಾವು ನಿಮಗಾಗಿ ಕೆಲವೊಂದು ಯೋಗಾಸನಗಳನ್ನು ಸೂಚಿಸಿದ್ದೇವೆ. ಇವುಗಳು ನಿಮಗೆ ರಾತ್ರಿಯ ವೇಳೆಯಲ್ಲಿ ಒಳ್ಳೆಯ ಮತ್ತು ಅಡೆತಡೆಗಳಿಲ್ಲದ ನಿದ್ದೆಯನ್ನು ನೀಡಲು ಸಹಕರಿಸುತ್ತವೆ. ಉತ್ತಮ ನಿದ್ದೆಗಾಗಿ ಯೋಗಾಸನಗಳು

Beat insomnia with yoga

ಪಶ್ಚಿಮೋತ್ತಾನಾಸನ:
ಈ ಆಸನವು ನಿಮ್ಮ ಮನಸ್ಸನ್ನು ಪ್ರಶಾಂತಗೊಳಿಸುತ್ತದೆ. ಈ ಆಸನವನ್ನು ಮಾಡಲು ಮೊದಲು ನಿಮ್ಮ ಕಾಲುಗಳನ್ನು ನೀಟಿ ನೆಲದ ಮೇಲೆ ಕೂರಿ. ಈಗ ನಿಮ್ಮ ಎರಡೂ ಕೈಗಳನ್ನು ನೇರವಾಗಿ ನಿಮ್ಮ ತಲೆ ಬಳಿ ಮೇಲಕ್ಕೆ ಎತ್ತಿ, ಹಾಗೆಯೇ ಮುಂದೆ ಬಾಗಿ. ಈ ಭಂಗಿಯಲ್ಲಿ ನಿಮ್ಮ ಕೈಗಳಿಂದ ನಿಮ್ಮ ಕಾಲಿನ ಬೆರಳುಗಳನ್ನು ಮುಟ್ಟಲು ಪ್ರಯತ್ನಿಸಿ ಹಾಗು ತಲೆಯಿಂದ ಮೊಣಕಾಲನ್ನು ಸ್ಪರ್ಶಿಸಲು ಪ್ರಯತ್ನಿಸಿ. ಈ ಭಂಗಿಯು ನಿಮಗೆ ಯಾವುದೇ ಒತ್ತಡವನ್ನು ನೀಡದೆ ವಿಶ್ರಾಂತಿಯನ್ನು ನೀಡುತ್ತದೆ.
ಆದ್ದರಿಂದ ನಿಧಾನವಾಗಿ ಈ ಆಸನ ಮಾಡಿ. ಈ ಆಸನದಲ್ಲಿ ಒಂದೇ ಬಾರಿಗೆ ಕಾಲಿನ ಬೆರಳುಗಳನ್ನು ಮುಟ್ಟಲು ಸಾಧ್ಯವಾಗುವುದಿಲ್ಲ, ಆದ್ದರಿಂದ ನಿಧಾನವಾಗಿ ಪ್ರಯತ್ನವನ್ನು ಮುಂದುವರಿಸಿ. ಒಂದಲ್ಲ ಒಂದು ದಿನ ನೀವು ನಿಮ್ಮ ಕಾಲಿನ ಬೆರಳುಗಳನ್ನು ಮುಟ್ಟಲು ಸಾಧ್ಯವಾಗುತ್ತದೆ. ಈ ಆಸನದಲ್ಲಿ ಮುಂದೆ ಬಾಗುವಾಗ ಉಸಿರನ್ನು ನಿಧಾನವಾಗಿ ಹೊರಬಿಡುತ್ತ ಬಾಗಿ, ಹಾಗು ಮತ್ತೆ ಸ್ಥಿತಿಗೆ ಬರುವಾಗ ಉಸಿರನ್ನು ಎಳೆದುಕೊಳ್ಳುತ್ತ ಎದ್ದೇಳಿ.

ನಿದ್ರಾಹೀನತೆ ಕಾಯಿಲೆಯ ಲಕ್ಷಣಗಳು

ಉತ್ತಾನಾಸನ:
ಈ ಆಸನವನ್ನು ಮಾಡಲು ನೇರವಾಗಿ ನಿಲ್ಲಿ. ನಿಮ್ಮ ಕೈಗಳನ್ನು ನಿಧಾನವಾಗಿ ಸ್ವಸ್ಥಾನದಿಂದ ನೇರವಾಗಿ ತಲೆಯ ಪಕ್ಕದಲ್ಲಿ ನೇರವಾಗಿ ಚಾಚಿ. ಈಗ ಹಾಗೆಯೇ ಉಸಿರನ್ನು ಹೊರಕ್ಕೆ ಬಿಡುತ್ತ ನಿಮ್ಮ ದೇಹವನ್ನು ಬಾಗಿಸಲು ಆರಂಭಿಸಿ. ನಿಮ್ಮ ಕಾಲುಗಳು ನೆಟ್ಟಗೆ ಇರಲಿ, ಇದೇ ಸ್ಥಿತಿಯಲ್ಲಿ ನಿಮ್ಮ ಹಸ್ತಗಳಿಂದ ನೆಲವನ್ನು ಮುಟ್ಟಿ ಮತ್ತು ಹಣೆಯಿಂದ ಮೊಣಕಾಲನ್ನು ಮುಟ್ಟಿ. ಒಂದು ವೇಳೆ ಈ ಆಸನದಲ್ಲಿ ನಿಮ್ಮ ಹಸ್ತಗಳಿಂದ ನೆಲವನ್ನು ತಾಕಿಸಲು ಸಮಸ್ಯೆಯಾದಲ್ಲಿ,
ನಿಮ್ಮ ಮೊಣಕಾಲನ್ನು ಸ್ವಲ್ಪ ಬಾಗಿಸಿ. ಈ ಆಸನದಲ್ಲಿ ನೆಲವನ್ನು ಮುಟ್ಟಿ, ಸಾಧ್ಯವಾದಷ್ಟು ಹೊತ್ತು ಅದೇ ಸ್ಥಿತಿಯಲ್ಲಿ ನಿಲ್ಲಿ. ಈ ಆಸನವು ನಿಮ್ಮ ತಲೆಗೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಇದರಿಂದ ನಿಮಗೆ ವಿಶ್ರಾಂತಿಯು ದೊರೆಯುತ್ತದೆ. ಇದರಿಂದ ನಿಮ್ಮ ನರವ್ಯೂಹಕ್ಕೆ ಅಗತ್ಯ ಚೈತನ್ಯ ದೊರೆಯುತ್ತದೆ ಮತ್ತು ಅಗತ್ಯ ವಿಶ್ರಾಂತಿಯು ಸಹ ದೊರೆಯುತ್ತದೆ. ಮತ್ತೆ ನೀವು ಸ್ಥಿತಿಗೆ ಬರಲು ಧೀರ್ಘವಾಗಿ ಉಸಿರನ್ನು ಎಳೆದುಕೊಳ್ಳುತ್ತ ನಿಮ್ಮ ದೇಹವನ್ನು ಮೇಲಕ್ಕೆ ತನ್ನಿ. ಕೈಗಳನ್ನು ಯಥಾ ಸ್ಥಾನಕ್ಕೆ ತರದೆ ಹಾಗೆಯೇ ನಿಮ್ಮ ತಲೆಯ ಪಕ್ಕದಲ್ಲಿ ನೆಟ್ಟಗೆ ಎತ್ತಿ ಹಿಡಿದಿರಲು ಮರೆಯಬೇಡಿ. ನಂತರ ನಿಧಾನವಾಗಿ ನಿಮ್ಮ ಕೈಗಳನ್ನು ಸ್ವ-ಸ್ಥಾನಕ್ಕೆ ಸೇರಿಸಿ. ಈ ಆಸಾನದಲ್ಲಿ ಮೇಲೆ ಏಳುವಾಗ ಆದಷ್ಟು ನಿಮ್ಮ ಸೊಂಟದ ಸಹಾಯವನ್ನು ಪಡೆಯಿರಿ. ಆದರೆ ಸ್ನಾಯುಗಳಿಗೆ ಯಾವುದೇ ಕಷ್ಟವನ್ನು ನೀಡಬೇಡಿ.

ಕೂದಲುದುರುವುದನ್ನು ತಡೆಯಲು ಯೋಗಾಸನ

ಅಪಾನಾಸನ:
ನಿಮ್ಮ ಬೆನ್ನು ಮೂಳೆ, ಸ್ನಾಯು ಮತ್ತು ತೊಡೆಗಳಿಗೆ ವಿಶ್ರಾಂತಿಯನ್ನು ನೀಡಲು ಈ ಆಸನ ಹೇಳಿ ಮಾಡಿಸಿದ ಆಸನವಾಗಿದೆ. ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ!. ಮೊದಲು ನಿಮ್ಮ ಬೆನ್ನನ್ನು ಕೆಳಗೆ ಮಾಡಿ ಮಲಗಿ. ನಂತರ ನಿಮ್ಮ ಹಸ್ತಗಳನ್ನು ನಿಮ್ಮ ಮೊಣಕಾಲಿನ ಮೇಲೆ ಇಡಿ. ಉಸಿರನ್ನು ಬಿಡುತ್ತ ನಿಮ್ಮ ಕಾಲುಗಳನ್ನು ಎದೆಯ ಭಾಗಕ್ಕೆ ನಿಧಾನವಾಗಿ ತನ್ನಿ. ನಿಮ್ಮ ತೊಡೆಗಳ ಸಹಾಯದಿಂದಲೆ ನಿಮ್ಮ ಕಾಲುಗಳನ್ನು ಎದೆಯ ಭಾಗಕ್ಕೆ ತಲುಪಿಸಲು ಪ್ರಯತ್ನಿಸಿ.
ಕೈಗಳನ್ನು ನಿಮ್ಮ ಕಾಲನ್ನು ಎಳೆಯಲು ಬಳಸುವುದನ್ನು ಆದಷ್ಟು ಕಡಿಮೆ ಮಾಡಿ. ಆದರೆ ಎದೆಯ ಭಾಗಕ್ಕೆ ನಿಮ್ಮ ಕಾಲುಗಳು ತಲುಪಿದಾಗ ಅವುಗಳನ್ನು ಅದೇ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಹಿಡಿದುಕೊಳ್ಳಿ. ಉಸಿರನ್ನು ಒಳಗೆ ತೆಗೆದುಕೊಳ್ಳುವಾಗ ನಿಮ್ಮ ಕೈಗಳ ಬಿಗಿಯನ್ನು ಸ್ವಲ್ಪ ಸಡಿಲಿಸಿ. ಆಗ ನಿಮ್ಮ ಕಾಲುಗಳು ಹೊಟ್ಟೆಯ ಭಾಗದಿಂದ ಸ್ವಲ್ಪ ದೂರ ಹೋಗಲು ಬಿಡಿ. ಈ ಆಸನವನ್ನು ನಿಮಗೆ ಸಾಧ್ಯವಾದಷ್ಟು ಬಾರಿ ನಿಮ್ಮದೇ ಆದ ವೇಗದಲ್ಲಿ ಮಾಡಿ. ನಿಮ್ಮ ಉಸಿರಾಟವು ನಿಮ್ಮ ಚಲನೆಯನ್ನು ಮಾರ್ಗದರ್ಶನ ಮಾಡಲಿ. ಸಾಧ್ಯವಾದರೆ ನಿಮ್ಮ ಕಣ್ಣುಗಳನ್ನು ಮುಚ್ಚಿ ಈ ಆಸನ ಮಾಡಿ. ಉಸಿರಾಟದ ಮೇಲೆ ಗಮನವನ್ನು ಕೇಂದ್ರೀಕರಿಸಿ, ಇದರಿಂದ ನಿಮ್ಮ ಮನಸ್ಸಿಗೆ ವಿಶ್ರಾಂತಿಯು ದೊರೆಯುತ್ತದೆ ಮತ್ತು ನೀವು ಲವಲವಿಕೆಯನ್ನು ಪಡೆಯುತ್ತೀರಿ. ಯಾವಾಗ ನಿಮಗೆ ಆನಂದ ಮತ್ತು ವಿಶ್ರಾಂತಿ ದೊರೆಯಿತು ಎಂದು ಭಾವಿಸುತ್ತೀರೋ, ಆಗ ಕಾಲುಗಳನ್ನು ಉದ್ದಕ್ಕೆ ಚಾಚಿ. ಶವಾಸನದಲ್ಲಿ ವಿಶ್ರಾಂತಿಯನ್ನು ಪಡೆಯಿರಿ.

ಮಿದುಳನ್ನು ಚುರುಕುಗೊಳಿಸುವ ಹೊಸ ಯೋಗ!

ಸುಪ್ತ ಭದ್ರಕೋನಾಸನ:
ಈ ಆಸನವು ಸಹ ನಿಮಗೆ ವಿಶ್ರಾಂತಿಯನ್ನು ನೀಡಲು ಸಹಕರಿಸುತ್ತದೆ. ಜೊತೆಗೆ ಇದು ಕಾಲು ಮತ್ತು ಬೆನ್ನಿನಲ್ಲಿರುವ ಸ್ನಾಯುಗಳನ್ನು ಸಡಿಲಗೊಳಿಸಲು ಮತ್ತು ಚೈತನ್ಯವನ್ನು ಒದಗಿಸಲು ನೆರವಾಗುತ್ತದೆ. ಈ ಆಸನವನ್ನು ಮಾಡಲು ಮೊದಲು ನೆಲದ ಮೇಲೆ ಬೆನ್ನು ಕೆಳಗೆ ಮಾಡಿ ಮಲಗಿ. ನಂತರ ನಿಧಾನವಾಗಿ ನಿಮ್ಮ ಮೊಣಕಾಲನ್ನು ಮಡಿಚಿ ಮತ್ತು ಪಾದಗಳನ್ನು ನಿಮ್ಮ ಪೃಷ್ಠದ ಭಾಗಕ್ಕೆ ತನ್ನಿ. ಆ ನಂತರ ನಿಧಾನವಾಗಿ ಉಸಿರಾಡುತ್ತ ನಿಮ್ಮ ಕಾಲುಗಳನ್ನು ಅದೇ ಸ್ಥಿತಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ನೆಲದತ್ತ ಚಾಚಿ ಮತ್ತು ನಿಮ್ಮ ಕೈಗಳನ್ನು ನಿಮ್ಮ ತಲೆಯ ಹಿಂಭಾಗಕ್ಕೆ ಚಾಚಿ ನೆಲದ ಮೇಲೆ ಇಡಿ. ಇದೇ ಸ್ಥಿತಿಯಲ್ಲಿ ಸ್ವಲ್ಪ ಧೀರ್ಘವಾಗಿ ಉಸಿರಾಡಿ. ಮತ್ತೆ ಸ್ಥಿತಿಗೆ ಬರಲು ಮೊದಲು ಕೈಗಳನ್ನು ಮೊದಲು ಸ್ವ ಸ್ಥಾನಕ್ಕೆ ತನ್ನಿ. ಆ ನಂತರ ಕಾಲುಗಳನ್ನು ನಿಧಾನವಾಗಿ ಚಾಚಿ. ಮೇಲಕ್ಕೆ ಏಳುವಾಗ ಮೊದಲು ಎಡಗಡೆಗೆ ಹೊರಳಿ, ನಂತರ ಕೈಗಳ ಸಹಾಯದಿಂದ ನಿಧಾನವಾಗಿ ಏಳಿ.

ಶವಾಸನ:
ಈ ಆಸನದಲ್ಲಿ ಕೇವಲ ಬೆನ್ನನ್ನು ಕೆಳಗೆ ಮಾಡಿ ಆರಾಮವಾಗಿ ಮಲಗಿ ಸಾಕು. ನಿಮ್ಮ ಹಸ್ತಗಳನ್ನು ನಿಮ್ಮ ದೇಹದ ಪಕ್ಕದಲ್ಲಿ ಇರಿಸಿ. ನಿಮ್ಮ ಹಸ್ತ ಆಕಾಶವನ್ನು ನೋಡುವಂತಿರಲಿ. ಸುಮ್ಮನೆ ಇದೇ ಸ್ಥಿತಿಯಲ್ಲಿ ಆರಾಮವಾಗಿ ಮಲಗಿ ಮತ್ತು ಚೆನ್ನಾಗಿ ಉಸಿರಾಡಿ.

English summary

Beat insomnia with yoga

Can’t fall asleep at night? Do you feel tired and rundown through the day? It might be stress or some other factors that could be contributing to your discomfort. To help you combat insomnia, we have brought few yoga asanas which will help you in getting good and deep sleep at night.
Story first published: Tuesday, June 17, 2014, 11:17 [IST]
X
Desktop Bottom Promotion