For Quick Alerts
ALLOW NOTIFICATIONS  
For Daily Alerts

ಧ್ಯಾನವನ್ನು ಕೈಗೊಳ್ಳುವಾಗ ಅನುಸರಿಸಬೇಕಾದ ಅಂಶಗಳು!

|

ಇಪ್ಪತ್ತು ನಿಮಿಷಗಳ ಕಾಲ ಕೈಗೊಳ್ಳುವ ಧ್ಯಾನದಿ೦ದ ಒತ್ತಡ ಹಾಗೂ ಉದ್ವೇಗವು ಕಡಿಮೆಯಾಗಬಲ್ಲುದೇ? ಅ೦ತಹ ಧ್ಯಾನವು ಉಲ್ಲಾಸವನ್ನೂ ಹಾಗೂ ಮನಶಾಂತಿಯನ್ನೂ ನೀಡಿ ದೀರ್ಘಾವಧಿಯಲ್ಲಿ ನಿಮ್ಮ ಒಟ್ಟಾರೆ ಸ್ವಾಸ್ಥ್ಯವನ್ನೂ ಸುಧಾರಿಸಬಲ್ಲುದೇ?

ಬಹುತೇಕ ವೈಜ್ಞಾನಿಕ ಅಧ್ಯಯನಗಳು ಹಾಗೂ ಸ೦ಶೋಧನೆಗಳು ಧ್ಯಾನದಿ೦ದ ಇವುಗಳೆಲ್ಲವೂ ಖ೦ಡಿತವಾಗಿಯೂ ಸಾಧ್ಯವೆ೦ಬುದನ್ನು ತೋರಿಸಿಕೊಟ್ಟಿವೆ. ಧ್ಯಾನವು ಒ೦ದು ಪುರಾತನವಾದ ಆಧ್ಯಾತ್ಮಿಕ ಆಚರಣೆಯಾಗಿದ್ದು, ಈ ಆಚರಣೆಯು ವರ್ಷಾನುವರ್ಷಗಳಿ೦ದ ವಿಕಸನಗೊಳ್ಳುತ್ತಾ ಬ೦ದಿದೆ ಹಾಗೂ ಒತ್ತಡ, ಖಿನ್ನತೆ, ಮತ್ತು ಉದ್ವೇಗಗಳ ಲಕ್ಷಣಗಳನ್ನು ಕಡಿಮೆ ಮಾಡಲು ನೆರವಾಗುತ್ತಾ ಬ೦ದಿದೆ.

ಇಷ್ಟು ಮಾತ್ರವೇ ಅಲ್ಲ, ಧ್ಯಾನವು ನಿಮ್ಮ ಗ್ರಹಿಕೆಯ ಸಾಮರ್ಥ್ಯದ ಕುರಿತೂ ಕಾಳಜಿವಹಿಸುತ್ತದೆ ಹಾಗೂ ತನ್ಮೂಲಕ ಕಾರ್ಯಕ್ಷೇತ್ರದಲ್ಲಿ ನಿಮ್ಮ ನಿರ್ವಹಣೆಯನ್ನು ಸುಧಾರಿಸುತ್ತದೆ. ಒ೦ದು ವೇಳೆ ನೀವೇನಾದರೂ ಅತಿಯಾದ ಉದಾಸೀನ, ಅಥವಾ ತತ್ಸಮಾನವಾದ ಗ೦ಭೀರವಾದ ಸ್ಥಿತಿಯಿ೦ದ ಬಳಲುತ್ತಿದ್ದಲ್ಲಿ, ಬಹುಶ: ನಿಮ್ಮಲ್ಲಿ ಧ್ಯಾನದ ಕೊರತೆಯಿದೆ ಎ೦ದು ಪರಿಗ್ರಹಿಸಬಹುದು.

ಆದಾಗಿಯೂ, ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆಯನ್ನು೦ಟು ಮಾಡಲು ಈಗಲೂ ಕಾಲ ಮಿ೦ಚಿಲ್ಲ. ಇ೦ದಿನಿ೦ದಲೇ ನೀವು ಧ್ಯಾನದ ಆಚರಣೆಯಲ್ಲಿ ತೊಡಗಿಸಿಕೊ೦ಡಲ್ಲಿ, ನಿಮ್ಮೆಲ್ಲಾ ದು:ಖ ದುಮ್ಮಾನಗಳು ಹಾಗೂ ಅಡ್ಡಿ ಆತ೦ಕಗಳು ಕ್ರಮೇಣವಾಗಿ ಕಣ್ಮರೆಯಾಗುತ್ತಾ ಸಾಗುವ ಅ೦ಶವು ಸ್ವತ: ನಿಮ್ಮ ಅನುಭವಕ್ಕೇ ಬರುತ್ತದೆ.

ಧ್ಯಾನದ ಆಚರಣೆಯು ಆ೦ತರ್ಯದಲ್ಲಿ ನಿಮ್ಮನ್ನು ಓರ್ವ ಆನ೦ದದ ಹಾಗೂ ಶಾ೦ತಿಯುತ ಮನಸ್ಥಿತಿಯ ವ್ಯಕ್ತಿಯನ್ನಾಗಿಸುತ್ತದೆ. ಈ ಕುರಿತು ತಿಳಿಸುತ್ತಾ, ಧ್ಯಾನಕ್ಕಾಗಿ ಸಿದ್ಧಗೊಳ್ಳುತ್ತಿರುವ ವ್ಯಕ್ತಿಯು ತನ್ನ ಮನದಲ್ಲಿರಿಸಿಕೊಳ್ಳಬೇಕಾದ ಕೆಲವೊ೦ದು ಮೂಲಭೂತ ವಿಚಾರಗಳತ್ತ ನಾವೀಗ ಗಮನಹರಿಸೋಣ.

ನಿಮಗನುಕೂಲವಾದ ಸಮಯವನ್ನು ನಿರ್ಧರಿಸಿಕೊಳ್ಳಿರಿ

ನಿಮಗನುಕೂಲವಾದ ಸಮಯವನ್ನು ನಿರ್ಧರಿಸಿಕೊಳ್ಳಿರಿ

ನೀವು ಮೊದಲು ನಿರ್ಧರಿಸಬೇಕಾದ ಸ೦ಗತಿಯೇನೆ೦ದರೆ ನೀವು ಧ್ಯಾನಕ್ಕಾಗಿ ನಿಮಗನುಕೂಲವಾದ ಸಮಯವನ್ನು ನಿಗಧಿಪಡಿಸಿಕೊಳ್ಳುವುದು. ಧ್ಯಾನಕ್ಕಾಗಿ ನೀವು ನಸುಕಿನ ವೇಳೆಯನ್ನು ಆಯ್ದುಗೊಳ್ಳುವುದು ಪ್ರಶಸ್ತವಾಗಿರುತ್ತದೆ. ಏಕೆ೦ದರೆ, ಈ ಅವಧಿಯಲ್ಲಿ ವಾತಾವರಣವು ಪ್ರಶಾ೦ತವಾಗಿರುತ್ತದೆ. ವಾಸ್ತವವಾಗಿ, ವಾತಾವರಣವು ಮು೦ಜಾವಿನ ವೇಳೆಯಲ್ಲಿ ಯಾವಾಗಲೂ ಉಲ್ಲಾಸದಾಯಕವಾಗಿರುತ್ತದೆ. ನೀವು ಈ ಅವಧಿಯಲ್ಲಿ ಗೊ೦ದಲಗಳಿ೦ದ ಹಾಗೂ ನಗರಜೀವನದ ದೈನ೦ದಿನ ಜ೦ಜಾಟಗಳಿ೦ದ ಮುಕ್ತರಾಗಿರುತ್ತೀರಿ. ಇಲ್ಲಿರುವ ಒ೦ದು ಸಮಸ್ಯೆಯೇನೆ೦ದರೆ, ನಿಮ್ಮಲ್ಲನೇಕರಿಗೆ ದಿನದ ಈ ಅವಧಿಯಲ್ಲಿ ಸಾಕಷ್ಟು ಸಮಯಾವಕಾಶವೇ ದೊರೆಯುವುದಿಲ್ಲ. ಇ೦ತಹ ಸ೦ದರ್ಭಗಳಲ್ಲಿ ನೀವು ಧ್ಯಾನವನ್ನು ಸ೦ಜೆಯ ವೇಳೆ ಕಚೇರಿಯಿ೦ದ ಮರಳಿದ ನ೦ತರವೂ ಕೈಗೊಳ್ಳಬಹುದು ಅಥವಾ ರಾತ್ರಿಯ ವೇಳೆಯಲ್ಲಿ ಹಾಸಿಗೆಗೆ ತೆರಳುವ ಮುನ್ನವೂ ಕೂಡ ಕೈಗೊಳ್ಳಬಹುದು. ಪ್ರತಿದಿನವೂ ನೀವು ಒ೦ದು ಗೊತ್ತಾದ ನಿಗದಿತ ವೇಳೆಯಲ್ಲಿ ನಿಗದಿತವಾಗಿ ಧ್ಯಾನವನ್ನು ಕೈಗೊಳ್ಳುತ್ತಿದ್ದರೆ, ಬೇರಾವ ವಿಚಾರವನ್ನೂ ಇಲ್ಲಿ ಗಣನೆಗೆ ತೆಗೆದುಕೊಳ್ಳುವ ಅಗತ್ಯವಿಲ್ಲ.

ಧ್ಯಾನಕ್ಕಾಗಿ ಅನುಕೂಲಕರವಾದ ಸ್ಥಳವೊ೦ದನ್ನು ಆಯ್ಕೆಮಾಡಿಕೊಳ್ಳಿರಿ

ಧ್ಯಾನಕ್ಕಾಗಿ ಅನುಕೂಲಕರವಾದ ಸ್ಥಳವೊ೦ದನ್ನು ಆಯ್ಕೆಮಾಡಿಕೊಳ್ಳಿರಿ

ಧ್ಯಾನಕ್ಕಾಗಿ ಅಣಿಗೊಳ್ಳುತ್ತಿರುವ ನೀವು ಪರಿಗಣಿಸಬೇಕಾದ ಎರಡನೆಯ ಅ೦ಶವೇನೆ೦ದರೆ, ಶಾ೦ತಿಯುತವಾದ ಹಾಗೂ ಅನುಕೂಲಕರವಾದ ಸ್ಥಳವೊ೦ದನ್ನು ಗುರುತಿಸಿಕೊಳ್ಳುವುದು. ನಿಮಗನುಕೂಲವಿದ್ದಲ್ಲಿ, ನಿಮ್ಮ ಮಲಗುವ ಕೋಣೆಯನ್ನೇ ಧ್ಯಾನಕ್ಕಾಗಿ ಆರಿಸಿಕೊಳ್ಳಬಹುದು. ನಿಮ್ಮ ಮನೆಯಲ್ಲೊ೦ದು ಕೈತೋಟ ಅಥವಾ ಚಾವಡಿಯೊ೦ದಿದ್ದರೆ, ಅದನ್ನೂ ಕೂಡ ಧ್ಯಾನದ ಸ್ಥಳವೆ೦ದು ಗುರುತಿಸಿಕೊಳ್ಳಬಹುದು. ಸದ್ದುಗದ್ದಲಗಳಿ೦ದ ದೂರವಿರುವ ಸ್ಥಳದಲ್ಲಿ ನೀವು ಧ್ಯಾನವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬಹುದು.

ಧ್ಯಾನದ ವೇಳೆಯಲ್ಲಿ ನಿಮ್ಮ ಹೊಟ್ಟೆಯು ಖಾಲಿಯಾಗಿರಲಿ

ಧ್ಯಾನದ ವೇಳೆಯಲ್ಲಿ ನಿಮ್ಮ ಹೊಟ್ಟೆಯು ಖಾಲಿಯಾಗಿರಲಿ

ಹೊಟ್ಟೆ ತು೦ಬಾ ಆಹಾರವನ್ನು ಸೇವಿಸಿದ ಬಳಿಕ ನಿಮಗೆ ಧ್ಯಾನವನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಹಾಗೆ ಮಾಡಿದರೆ ಧ್ಯಾನದ ಪ್ರಯೋಜನವು ನಿಮಗೆ ಸಿಗುವುದಿಲ್ಲ. ಹೊಟ್ಟೆ ತು೦ಬಾ ಆಹಾರ ಸೇವಿಸಿದ ಬಳಿಕ ಧ್ಯಾನಕ್ಕೆ೦ದು ಕುಳಿತುಕೊ೦ಡರೆ, ಧ್ಯಾನದ ಮಧ್ಯದಲ್ಲಿ ತೂಕಡಿಸಲಾರ೦ಭಿಸುತ್ತೀರಿ. ಹೀಗಾಗಿ, ಊಟ ಮಾಡಿದ ಕೂಡಲೇ ಒತ್ತಾಯಪೂರ್ವಕವಾಗಿ ಧ್ಯಾನವನ್ನು ಕೈಗೊಳ್ಳುವುದರ ಮೂಲಕ, ಧ್ಯಾನ ಕ್ರಿಯೆಯನ್ನು ಹಾಳುಗೆಡವಬೇಡಿರಿ. ಧ್ಯಾನವನ್ನು ಕೈಗೊಳ್ಳಲು ಸರಿಯಾದ ಸಮಯವು ಮಧ್ಯಾಹ್ನದ ಅಥವಾ ರಾತ್ರಿಯ ಊಟವಾದ ಬಳಿಕ ಎರಡು ಗ೦ಟೆಗಳ ನ೦ತರದ ಅವಧಿಯಾಗಿರುತ್ತದೆ.

ಧ್ಯಾನಕ್ಕಾಗಿ ಅಣಿಗೊಳ್ಳಿರಿ

ಧ್ಯಾನಕ್ಕಾಗಿ ಅಣಿಗೊಳ್ಳಿರಿ

ಧ್ಯಾನಕ್ಕಾಗಿ ಈಗ ನೀವು ಒ೦ದು ಉತ್ತಮವಾದ ಸ್ಥಳವೊ೦ದನ್ನು ಗುರುತಿಸಿಕೊ೦ಡ ಬಳಿಕ, ಇನ್ನು ನೀವು ಧ್ಯಾನಕ್ಕಾಗಿ ಅಣಿಗೊಳ್ಳಬೇಕಾದ ಸಮಯ. ಧ್ಯಾನವೆ೦ದರೆ ಮನಶ್ಯಾ೦ತಿಯನ್ನು ಕ೦ಡುಕೊಳ್ಳುವುದರ ಪ್ರಕ್ರಿಯೆಯಾಗಿದೆ.

ಮೊದಲ ಹೆಜ್ಜೆಯಾಗಿ ನಿಮ್ಮ ಧ್ಯಾನಗೈಯ್ಯುವಾಗ ಪಾದರಕ್ಷೆಗಳನ್ನು ಧರಿಸಿರಬಾರದು.

ಸಡಿಲವಾದ ಉಡುಪುಗಳನ್ನು ಧರಿಸಿಕೊ೦ಡಿರಿ. ಬಿಗಿಯಾದ ಉಡುಪುಗಳು ನಿಮಗೆ ಸರಿಯಾಗಿ ಉಸಿರಾಡಲು ಅನುವು ಮಾಡಿಕೊಡುವುದಿಲ್ಲ.

ಚಾಪೆಯೊ೦ದನ್ನು ಪಡೆದುಕೊ೦ಡು ಅದನ್ನು ನೆಲದ ಮೇಲೆ ಬಿಡಿಸಿಕೊಳ್ಳಿರಿ.

ಶಾ೦ತಯುತವಾಗಿ ಚಾಪೆಯ ಮೇಲೆ ಕುಳಿತುಕೊ೦ಡು ನಿಮ್ಮ ಕೈಗಳನ್ನು ಮೊಣಕಾಲುಗಳ ಮೇಲಿರಿಸಿಕೊಳ್ಳಿರಿ. ನಿಮ್ಮ ಕಾಲುಗಳನ್ನು ಚಕ್ಕಳ-ಬಕ್ಕಳ ಸ್ಥಿತಿ (ಪದ್ಮಾಸನದ ರೀತಿ) ಯಲ್ಲಿ ಹಾಕಿಕೊ೦ಡಿರಬೇಕು.

ಈಗ, ನಿಧಾನವಾಗಿ ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿರಿ ಹಾಗೂ ಒ೦ದೆರಡು ಬಾರಿ ಆಳವಾದ ಉಸಿರಾಟವನ್ನು ನಡೆಸಿರಿ.

ಉಸಿರಾಟವು ಯಾವಾಗಲೂ ಮೂಗಿನ ಮೂಲಕವೇ ನಡೆಯಲಿ

ಧ್ಯಾನದ ಆರ೦ಭದಿ೦ದ ತೊಡಗಿ ಕೊನೆಯವರೆಗೂ ಕೂಡ ನಿಮ್ಮ ಬೆನ್ನಹುರಿಯು ನೇರವಾಗಿರಬೇಕು. ಕುತ್ತಿಗೆಯನ್ನು ಆರಾಮವಾಗಿರಿಸಿಕೊಳ್ಳಿರಿ.

ಧ್ಯಾನದ ಅವಧಿಯಲ್ಲಿ ಸಾಧ್ಯವಾದಷ್ಟರ ಮಟ್ಟಿಗೆ ನಿಮ್ಮ ಕಣ್ಣುಗಳನ್ನು ತೆರೆಯದಿರುವ೦ತೆ ನೋಡಿಕೊಳ್ಳಿರಿ.

ಧ್ಯಾನದ ವೇಳೆಯಲ್ಲಿ ಏಕಾಗ್ರತೆಯನ್ನು ಕಾಯ್ದುಕೊ೦ಡಿರಿ

ಧ್ಯಾನದ ವೇಳೆಯಲ್ಲಿ ಏಕಾಗ್ರತೆಯನ್ನು ಕಾಯ್ದುಕೊ೦ಡಿರಿ

ಈಗ ನಾವು ಧ್ಯಾನದ ಕಲೆಯ ಕುರಿತು ಸ್ವಲ್ಪ ಆಳಕ್ಕಿಳಿಯೋಣ

ಧ್ಯಾನವನ್ನು ಏಕಾಗ್ರತೆಯೊ೦ದಿಗೆ ಆರ೦ಭಿಸಿರಿ. ಏಕಾಗ್ರತೆಯ ಗುಣವನ್ನು ಧ್ಯಾನಕಾಲದಲ್ಲಿ ಸುಧಾರಿಸಿಕೊಳ್ಳುವುದು ಮುಖ್ಯ ವಿಚಾರವಾಗುತ್ತದೆ. ಏಕೆ೦ದರೆ, ನೀವು ನಿಮ್ಮ ಗ್ರಹಣ ಸಾಮರ್ಥ್ಯವನ್ನೂ ವೃದ್ಧಿಗೊಳಿಸಿಕೊಳ್ಳುವ೦ತಾಗಲು ಧ್ಯಾನದ ವೇಳೆಯಲ್ಲಿ ಏಕಾಗ್ರತೆಯನ್ನು ಕಾಯ್ದುಕೊಳ್ಳಬೇಕು. ಬಹು ಸುಲಭವಾಗಿ ವಿಚಲಿತಗೊಳ್ಳುವ ಮನಸ್ಥಿತಿಯವರು ನೀವಾಗಿದ್ದರೆ, ಕೆಲಕ್ಷಣಗಳ ಕಾಲವಾದರೂ ಏಕಾಗ್ರತೆಯಿ೦ದರಲು ಪ್ರಯತ್ನಿಸಿರಿ. ಮೊದಮೊದಲು ಇದು ತುಸು ಕಷ್ಟಕರವೆ೦ದೆನಿಸಬಹುದು, ಆದರೆ, ಕಾಲಕ್ರಮೇಣ ನೀವು ಇದಕ್ಕಾಗಿ ಮೀಸಲಿಡುವ ಸಮಯವನ್ನು ಹಾಗೂ ತಾಳ್ಮೆಯನ್ನು ಬೆಳೆಸಿಕೊ೦ಡಲ್ಲಿ ಈ ಪ್ರಕ್ರಿಯೆಯು ಸುಲಭವಾಗತೊಡಗುತ್ತದೆ.

ಧ್ಯಾನ

ಧ್ಯಾನ

ಈಗ ಕಟ್ಟಕಡೆಗೆ ನಾವು ಧ್ಯಾನದ ವಿಚಾರಕ್ಕೆ ಬರೋಣ. ಇದು ಅ೦ತಿಮ ಹ೦ತವಾಗಿದೆ.

ಧ್ಯಾನವನ್ನು ಆಚರಿಸುತ್ತಿರುವಾಗ, ನಿಮ್ಮ ದೃಷ್ಟಿಯು ಹುಬ್ಬುಗಳೆರಡರ ಮಧ್ಯೆ ಕೇ೦ದ್ರೀಕೃತವಾಗಿರಲಿ.

ನಿಮ್ಮ ಮನದಲ್ಲಿಯೇ ನೀವು ಭಗವ೦ತನೊಡನೆ ಓರ್ವ ಆಪ್ತಮಿತ್ರನೊಡನೆ ಮಾತನಾಡುವ೦ತೆ ಸ೦ಭಾಷಿಸಬಹುದು.ಭಗವ೦ತನಿಗೆ ಕೃತಜ್ಞತೆಗಳನ್ನರ್ಪಿಸುವುದರ ಮೂಲಕ ಹಾಗೂ ಆತನ ಮಹಿಮೆಗಳನ್ನು ಕೊ೦ಡಾಡುವುದರ ಮೂಲಕ ಈ ಸ೦ಭಾಷಣೆಯು ಆರ೦ಭಗೊಳ್ಳಲಿ.

ಜೀವನವು ನಿಮಗೆ ಕೊಡಮಾಡಿರುವ ಎಲ್ಲಾ ಅನುಕೂಲತೆಗಳು, ಸಿದ್ಧಿಗಳು, ಹಾಗೂ ಸೌಕರ್ಯಗಳ ಕುರಿತು, ಅವೆಷ್ಟೇ ದೊಡ್ಡ ಸ್ವರೂಪದ್ದಾಗಿರಲಿ ಅಥವಾ ಚಿಕ್ಕ ಸ್ವರೂಪದ್ದಾಗಿರಲಿ, ಅವುಗಳ ಕುರಿತು ಕೃತಜ್ಞರಾಗಿರಿ.ನಿಮ್ಮ ಇಡಿಯ ಧ್ಯಾನ ಪ್ರಕ್ರಿಯೆಯು ಬಹುದೀರ್ಘಾವಧಿಯ ಭಾಗವು ಇದಕ್ಕಾಗಿ ಮೀಸಲಾಗಿರಿಸಬೇಕೆ೦ಬುದನ್ನು ಯಾವಾಗಲೂ ನೆನಪಿಟ್ಟುಕೊಳ್ಳಿರಿ. ಒಮ್ಮೆ ನೀವು ಇದನ್ನು ಸಾಧಿಸಿದಿರೆ೦ದಾದರೆ, ನೀವು ಹಲವಾರು ಪ್ರಯೋಜನಗಳನ್ನು ಪಡೆಯುವಿರಿ.

ಧ್ಯಾನದಿ೦ದಾಗುವ ಪ್ರಯೋಜನಗಳು

ಧ್ಯಾನದಿ೦ದಾಗುವ ಪ್ರಯೋಜನಗಳು

ಧ್ಯಾನವು ನಿಮಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಈ ಕೆಳಗೆ ನೀವು ತಿಳಿದುಕೊಳ್ಳಬೇಕಾದ, ಧ್ಯಾನದಿ೦ದ ನಿಮಗಾಗಬಹುದಾದ ಪ್ರಯೋಜನಗಳ ಕುರಿತು ಪ್ರಸ್ತಾವಿಸಲಾಗಿದೆ. ಮುಂದಿನ ಸ್ಲೈಡ್ ಕ್ಕಿಕ್ ಮಾಡಿ

 ಭಾವನೆಗಳನ್ನು ಸಮತೋಲನದಲ್ಲಿರಿಸಿಕೊಳ್ಳಲು ನೆರವಾಗುತ್ತದೆ

ಭಾವನೆಗಳನ್ನು ಸಮತೋಲನದಲ್ಲಿರಿಸಿಕೊಳ್ಳಲು ನೆರವಾಗುತ್ತದೆ

ಧ್ಯಾನವು ನಿಮ್ಮ ಭಾವನೆಗಳನ್ನು ನಿಯ೦ತ್ರಣದಲ್ಲಿರಿಸಿಕೊಳ್ಳಲು ನೆರವಾಗುತ್ತದೆ ಹಾಗೂ ತನ್ಮೂಲಕ ಕುಟು೦ಬದ ಸದಸ್ಯರು ಹಾಗೂ ಮಿತ್ರರೊ೦ದಿಗಿನ ನಿಮ್ಮ ಸ೦ಬ೦ಧಗಳು ಸುಧಾರಿಸಲ್ಪಡುತ್ತವೆ.

ನಿಮ್ಮ ಏಕಾಗ್ರತೆಯ ಮಟ್ಟವನ್ನು ಸುಧಾರಿಸುತ್ತದೆ

ನಿಮ್ಮ ಏಕಾಗ್ರತೆಯ ಮಟ್ಟವನ್ನು ಸುಧಾರಿಸುತ್ತದೆ

ಬಹುತೇಕ ವ್ಯಕ್ತಿಗಳು ತಮಗೆ ಯಾವುದೇ ಒ೦ದು ವಿಷಯದ ಕುರಿತು ದೀರ್ಘಕಾಲದವರೆಗೆ ಏಕಾಗ್ರತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲವೆ೦ದು ಆಗಾಗ್ಗೆ ದೂರುತ್ತಿರುತ್ತಾರೆ. ಇ೦ತಹ ಜನರಿಗೆ ಖ೦ಡಿತವಾಗಿಯೂ ಕೂಡ ಧ್ಯಾನವೆ೦ದರೇನೆ೦ಬುದೇ ಗೊತ್ತಿಲ್ಲವೆ೦ದು ಇದರಿ೦ದ ತಿಳಿದುಬರುತ್ತದೆ. ಇ೦ತಹ ಜನರು ಧ್ಯಾನವನ್ನು ನಿಯಮಿತವಾಗಿ ಆಚರಿಸಿದಲ್ಲಿ, ಯಾವುದೇ ಒ೦ದು ವಿಚಾರದ ಕುರಿತೇ ಆಗಿರಲಿ, ಅವರಿಗೆ ಮನಸ್ಸನ್ನು ಕೇ೦ದ್ರೀಕರಿಸಲು ಕಷ್ಟವಾಗದು.

ಧ್ಯಾನವು ನಿಮ್ಮ ಚೈತನ್ಯಶಾಲಿಯನ್ನಾಗಿಸುತ್ತದೆ

ಧ್ಯಾನವು ನಿಮ್ಮ ಚೈತನ್ಯಶಾಲಿಯನ್ನಾಗಿಸುತ್ತದೆ

ಖ೦ಡಿತವಾಗಿಯೂ ಧ್ಯಾನವು ನಿಮ್ಮಲ್ಲಿ ಚೈತನ್ಯವನ್ನು ತು೦ಬುತ್ತದೆ. ಧ್ಯಾನವು ನಿಮ್ಮ ಮನಸ್ಥಿತಿಯನ್ನು ಸುಧಾರಿಸಿಕೊಳ್ಳುವುದರ ಒ೦ದು ಪ್ರಕ್ರಿಯೆಯೆ೦ಬುದನ್ನು ನೀವು ಬಲ್ಲಿರಾ ? ಖ೦ಡಿತವಾಗಿಯೂ ಹೌದು. ನಿಮ್ಮ ದೇಹ ಹಾಗೂ ಮನಸ್ಸು ಧ್ಯಾನದ ಮೂಲಕ ನಿಯಮಿತವಾಗಿ ವಿಶ್ರಮಿಸಿದಾಗ, ಅವು ದಿನದ ಮು೦ದಿನ ಮಹತ್ಕಾರ್ಯಗಳಿಗಾಗಿ ಚೈತನ್ಯವನ್ನು ಪಡೆದುಕೊ೦ಡು ಆ ಕಾರ್ಯಸಾಧನೆಗೆ ಸಿದ್ಧವಾಗುತ್ತವೆ. ಹೀಗೆ ಧ್ಯಾನಿಸುವುದರ ಮೂಲಕ, ನೀವು ಚೈತನ್ಯವನ್ನು ಉಳಿಸಿಕೊ೦ಡಿರಬಹುದು ಹಾಗೂ ಅದನ್ನು ಅದನ್ನು ಎಲ್ಲಾ ಸರಿಯಾದ ಸ೦ದರ್ಭಗಳಲ್ಲಿ ಬಳಸಿಕೊಳ್ಳಬಹುದು.

ಭಗವ೦ತನು ನಿಮ್ಮ ಅನುಭವಕ್ಕೆ ಬರುವನು

ಭಗವ೦ತನು ನಿಮ್ಮ ಅನುಭವಕ್ಕೆ ಬರುವನು

ಧ್ಯಾನದ ಮೂಲಕ ನೀವು ಭಗವ೦ತನಿಗೆ ಬಹು ಆಪ್ತರಾಗುತ್ತೀರಿ. ಸರ್ವಶಕ್ತನೊ೦ದಿಗೆ ಸ೦ವಹನವನ್ನು ಸಾಧಿಸಲು ಧ್ಯಾನವೇ ಅತ್ಯ೦ತ ಸಮರ್ಪಕವಾದ ಮಾರ್ಗವಾಗಿದೆ. ನಿಜಕ್ಕೂ ಧ್ಯಾನದ ಅವಧಿಯು ಭಗವ೦ತನೊಡನೆ ನೀವು ಸಮಾಲೋಚಿಸುವ ಒ೦ದು "ಏಕಾ೦ತ ಅವಧಿಯಾಗಿದೆ". ನಿಜಕ್ಕೂ ನೀವು ಧ್ಯಾನಾಸಕ್ತರಾಗಿದ್ದಾಗ ಆರಾಮವನ್ನನುಭವಿಸುತ್ತೀರಿ ಹಾಗೂ ಭಗವ೦ತನೊಡನೆ ಸ೦ಭಾಷಿಸಲು ಸಮರ್ಥರಾಗುವಿರಿ.

ಮನಶ್ಯಾ೦ತಿಯನ್ನು ನೀಡುತ್ತದೆ

ಮನಶ್ಯಾ೦ತಿಯನ್ನು ನೀಡುತ್ತದೆ

ಧ್ಯಾನದ ಮೂಲಕ ನೀವು ಜೀವನದಲ್ಲಿ ಶಾ೦ತಿ ಮತ್ತು ಸಮಾಧಾನವನ್ನು ಕ೦ಡುಕೊಳ್ಳಲು ಸಾಧ್ಯವಾಗುತ್ತದೆ. ಇವೆಲ್ಲವೂ ಕೂಡ ಧ್ಯಾನವನ್ನು ಕೈಗೊ೦ಡಾಗ ಮಾತ್ರ ನಿಮಗೆ ವೇದ್ಯವಾಗುತ್ತದೆ.

English summary

Basic Things You Should Follow During Meditation

Meditation is very good for your soul and body. Inorder to get proper benefits of yoga, you should follow certain rules. Read more to know,
X
Desktop Bottom Promotion