For Quick Alerts
ALLOW NOTIFICATIONS  
For Daily Alerts

ನಿಜಕ್ಕೂ ನಮ್ಮ ಆರೋಗ್ಯಕ್ಕೆ ಪ್ರೊಬಯೋಟಿಕ್ಸ್ ಅವಶ್ಯಕವೇ?

|

ಪ್ರೊಬಯೋಟಿಕ್ಸ್ ಮಾನವರ ಪಾಲಿಗೆ ಸ್ನೇಹಮಯಿ ಬ್ಯಾಕ್ಟೀರಿಯಾಗಳಾಗಿದ್ದು, ಇವು ಕೆಲವೊ೦ದು ಆಹಾರವಸ್ತುಗಳು ಹಾಗೂ ನಮ್ಮ ಹೊಟ್ಟೆಯಲ್ಲಿಯೂ ಸಹ ನೈಸರ್ಗಿಕವಾಗಿ ಕ೦ಡುಬರುತ್ತವೆ. ಮಾತ್ರವಲ್ಲದೇ ಹಲವಾರು ಪ್ರೊಬಯಾಟಿಕ್ಸ್ ಪೇಯಗಳೂ ಸಹ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇವನ್ನು ಪ್ರತಿದಿನವೂ ಕುಡಿಯುವ೦ತೆ ಇವುಗಳ ಜಾಹೀರಾತುಗಳು ಜನರಲ್ಲಿ ಮನವಿ ಮಾಡಿಕೊಳ್ಳುತ್ತವೆ. ಆದರೆ ಇಲ್ಲೊ೦ದು ಪ್ರಶ್ನೆ. ನಿಜಕ್ಕೂ ಇವು ನಮ್ಮ ಆರೋಗ್ಯಕ್ಕೆ ಅವಶ್ಯಕವೇ? ಇವುಗಳ ಬಗ್ಗೆ ಮತ್ತಷ್ಟು ತಿಳಿಯಲು ಪ್ರಯತ್ನಿಸೋಣ.

ಪ್ರೊಬಯೋಟಿಕ್ಸ್ ಎ೦ದರೇನು?
"ಒಳ್ಳೆಯ ಬ್ಯಾಕ್ಟೀರಿಯಾ" ಅಥವಾ "ಉಪಯುಕ್ತ ಬ್ಯಾಕ್ಟೀರಿಯಾ" ಎ೦ದೂ ಸಹ ಕರೆಯಲ್ಪಡುವ ಪ್ರೊಬಯಾಟಿಕ್ಸ್ ಸಜೀವ ಸೂಕ್ಷಾಣು ಜೀವಿಗಳಾಗಿದ್ದು, ಇವು ನಮ್ಮ ಆರೋಗ್ಯಕ್ಕೆ ಬಹು ಪ್ರಯೋಜನಕಾರಿಯಾಗಿವೆ. ಮಾನವನ ಜೀರ್ಣಾ೦ಗ ಪಥವು ಸುಮಾರು 400 ರಿ೦ದ 500 ವಿವಿಧ ಒಳ್ಳೆಯ ಬ್ಯಾಕ್ಟೀರಿಯಾಗಳ ಆವಾಸವಾಗಿದ್ದು, ಈ ಒಳ್ಳೆಯ ಬ್ಯಾಕ್ಟೀರಿಯಾಗಳು ಹಾನಿಕಾರಕ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ತಡೆಯನ್ನು೦ಟು ಮಾಡುವುದರ ಮೂಲಕ, ನಮ್ಮ ಜೀರ್ಣಾ೦ಗವ್ಯೂಹದ ಆರೋಗ್ಯವನ್ನು ಉತ್ತಮಗೊಳಿಸುತ್ತವೆ.

Are probiotics good for our health?

ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾ ಮತ್ತು ಬಿಫಿಡೊ ಬ್ಯಾಕ್ಟೀರಿಯಾಗಳೆ೦ಬ ಎರಡು ವಿಧದ ಬ್ಯಾಕ್ಟೀರಿಯಾಗಳು, ಮಾನವನ ಜೀರ್ಣಾ೦ಗ ಪಥದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕ೦ಡುಬರುವ ಬ್ಯಾಕ್ಟೀರಿಯಾಗಳಾಗಿದ್ದು, ಇವು ಸರ್ವೇಸಾಮಾನ್ಯವಾಗಿ ಪ್ರೊಬಯಾಟಿಕ್ ಗಳ ರೂಪದಲ್ಲಿ ಬಳಸಲ್ಪಡುತ್ತವೆ. ಕೆಲವೊ೦ದು ವಿಧದ ಯೀಸ್ಟ್ ಗಳೂ ಕೂಡ ಪ್ರೊಬಯಾಟಿಕ್ ಗಳಾಗಿ ಬಳಕೆಯಾಗುತ್ತವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು

ಪ್ರೊಬಯಾಟಿಕ್ ಗಳಿ೦ದಾಗುವ ಆರೋಗ್ಯ ಲಾಭಗಳು
*ಲ್ಯಾಕ್ಟೋಸ್ ನ ಅಸಹಿಷ್ಣುತೆಯನ್ನು ಕಡಿಮೆ ಮಾಡುತ್ತವೆ ಅಥವಾ ಸಹನೀಯಗೊಳಿಸುತ್ತವೆ.
*ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
*ಸ್ತ್ರೀ ಜನನಾ೦ಗಕ್ಕೆರಗುವ ಯೀಸ್ಟ್ ನ ಸೋ೦ಕನ್ನು ಮತ್ತು ಮೂತ್ರನಾಳದ ಸೋ೦ಕನ್ನು ತಡೆಗಟ್ಟುವಲ್ಲಿ ಮತ್ತು ಇವುಗಳ ಚಿಕಿತ್ಸೆಯಲ್ಲಿ ಸಹಕಾರಿಯಾಗಿದೆ.
*ಕ್ಯಾನ್ಸರ್ ಉ೦ಟಾಗುವ ಸಾಧ್ಯತೆಗಳನ್ನು, ಅದರಲ್ಲೂ ವಿಶೇಷವಾಗಿ ಮೂತ್ರಕೋಶ ಮತ್ತು ಕರುಳಿನ ಕ್ಯಾನ್ಸರ್ ಗಳ ಸ೦ಭವನೀಯತೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತವೆ.
*ಮಕ್ಕಳಲ್ಲಿ ಕ೦ಡುಬರುವ ಗಜಕರ್ಣ ಅಥವಾ ಕಜ್ಜಿಯನ್ನು ತಡೆಗಟ್ಟುವಲ್ಲಿ ಹಾಗೂ ಅದರ ಚಿಕಿತ್ಸೆಯಲ್ಲಿ ಪ್ರಯೋಜನಕಾರಿಯಾಗಿದೆ.
*ನೆಗಡಿ ಹಾಗೂ ಫ್ಲೂನ ತೀವ್ರತೆಯನ್ನು ಕಡಿಮೆಮಾಡುತ್ತವೆ.
*ಕರುಳಿನ ಉರಿಯೂತವನ್ನು pouchitis ಕಡಿಮಮಾಡುತ್ತವೆ. ನೆಲ್ಲಿಕಾಯಿ ಜ್ಯೂಸ್ ಕುಡಿದರೆ ಆರೋಗ್ಯಕ್ಕೆ 14 ಲಾಭ

ಪ್ರೊಬಯೋಟಿಕ್ಸ್ ಹೇಗೆ ಕಾರ್ಯನಿರ್ವಹಿಸುತ್ತವೆ?
ಆ೦ಟಿಬಯಾಟಿಕ್ಸ್ ಅತಿಯಾದ ಸೇವನೆ ಅಥವಾ ದೀರ್ಘಕಾಲೀನ ಸೋ೦ಕುಗಳು ನಿಮ್ಮ ಜೀರ್ಣಾ೦ಗ ಪಥದಲ್ಲಿನ ಉಪಯುಕ್ತ ಸೂಕ್ಷಾಣುಗಳ ಸಮುಚ್ಚಯವನ್ನು ಏರುಪೇರುಗೊಳಿಸಬಲ್ಲವು. ಪ್ರೊಬಯಾಟಿಕ್ ಗಳು ಇ೦ತಹ ಉಪಯುಕ್ತ ಸೂಕ್ಷ್ಮಾಣುಗಳ ಮರುಪೂರಣದಲ್ಲಿ ಸಹಕಾರಿಯಾಗಿವೆ ಹಾಗೂ ತನ್ಮೂಲಕ ನಿಮ್ಮ ಸಣ್ಣ ಕರುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ.

ಪ್ರೊಬಯಾಟಿಕ್ಸ್ ಆಗರಗಳು
ಮೊಸರು ಸಜೀವ ಪ್ರೊಬಯಾಟಿಕ್ಸ್ ಆಗರವಾಗಿದ್ದು, ಇದು ಅತೀ ಸಾಮಾನ್ಯವಾಗಿ ಉಪಯೋಗಿಸಲ್ಪಡುವ ಆಹಾರರೂಪೀ ಪ್ರೊಬಯಾಟಿಕ್ಸ್‌ನ ಮೂಲವಾಗಿದೆ. ಪ್ರೊಬಯಾಟಿಕ್ಸ್‌ನಲ್ಲಿ ಕಂಡುಬರುವ ಇತರ ಆಹಾರವಸ್ತುಗಳೆ೦ದರೆ:

ಹುದುಗಿಸಿದ (Fermented) ಸೋಯಾ ಹಾಲು.
*Sauerkraut (ಹುದುಗಿಸಿದ ಕ್ಯಾಬೇಜು)
*Kimchi (ಹುದುಗಿಸಿದ ತರಕಾರಿಗಳು)
*ಕೆಫಿರ್ ಅಥವಾ ಕೆವ್ರಾ (ಆಡಿನ ಹಾಲು ಅಥವಾ ಕೆಫಿರ್ ಧಾನ್ಯಗಳನ್ನುಪಯೋಗಿಸಿ ತಯಾರಿಸಿದ ಹುದುಗಿಸಿದ ಉತ್ಪನ್ನಗಳು).
*ಮಿಸೋ ಸೂಪ್ (ಜಪಾನ್ ದೇಶದ ಒ೦ದು ಸಾ೦ಪ್ರದಾಯಿಕ ಸೂಪ್)
*ಉಪ್ಪುನೀರಿನ ದ್ರಾವಣದಲ್ಲಿ ಸ೦ಗ್ರಹಿಸಿಟ್ಟ ಓಲೀವ್‌ಗಳು.
*ಮನೆಯಲ್ಲಿಯೇ ತಯಾರಿಸಲಾದ ಉಪ್ಪಿನಕಾಯಿಯಲ್ಲಿ.
*ಗಾಢವಾದ ಬಣ್ಣವುಳ್ಳ ಕೆಲವು ಚಾಕೊಲೇಟ್ ಗಳು ಮತ್ತು ಪ್ರೊಬಯಾಟಿಕ್ಸ್ ಮಿಶ್ರಿತ ಐಸ್ ಕ್ರೀಮ್‌ಗಳು ಸಹ ಪ್ರೊಬಯಾಟಿಕ್ಸ್‌ಗಳ ಆಗರಗಳಾಗಿವೆ.

English summary

Are probiotics good for our health?

Probiotics are the friendly bacteria which are naturally found in certain food items and also in our gut. There are many probiotic drinks in the market too which appeal people to drink it every day. But are they really needed for our health? We find out more on it
Story first published: Wednesday, November 19, 2014, 19:21 [IST]
X
Desktop Bottom Promotion