For Quick Alerts
ALLOW NOTIFICATIONS  
For Daily Alerts

ಹೊಟ್ಟೆಯ ಕೊಬ್ಬನ್ನು ಸ್ವಾಭಾವಿಕವಾಗಿ ಕರಗಿಸಲು ಸೂಕ್ತ ಸಲಹೆಗಳು

By Deepak M
|

ಹೊಟ್ಟೆ ಬೊಜ್ಜು ಬಂದರೆ ಅದನ್ನು ಹೋಗಲಾಡಿಸಲು ಕಷ್ಟ ಪಡುವುದಕ್ಕಿಂತ, ಅದನ್ನು ಬರದಂತೆ ತಡೆಯುವ ಮುನ್ನೆಚ್ಚರಿಕೆ ಕ್ರಮಗಳು ಪಾಲಿಸುವುದು ಸೂಕ್ತ ಅಲ್ಲವೇ? ಹೊಟ್ಟೆ ಮತ್ತು ಸೊಂಟದ ಗಾತ್ರವನ್ನು ಸರಿಯಾದ ರೀತಿಯಲ್ಲಿ ಇಡುವುದು ಸುಲಭದ ಕೆಲಸವಲ್ಲ, ಅದಕ್ಕಾಗಿ ಉತ್ತಮವಾದ ಆಹಾರಕ್ರಮ ಪಾಲಿಸಬೇಕು, ದೈಹಿಕ ಶ್ರಮ ಪಡಬೇಕು. ಇದರತ್ತ ಏಕಾಗ್ರತೆ ಇರಬೇಕಾಗುತ್ತದೆ.

ಈ ಲೇಖನದಲ್ಲಿ ನಾವು ಈ ದಿನ ಸುಂದರ ಕೊಬ್ಬಿಲ್ಲದ ಹೊಟ್ಟೆಯನ್ನು ಪಡೆಯುವ ಸರಳ ಸಲಹೆಗಳನ್ನು ನೀಡುತ್ತಿದ್ದೇವೆ. ನೀವು ಇದಕ್ಕೆ ಮಾಡಬೇಕಾದ್ದು ಇಷ್ಟೇ ನಾವಿಲ್ಲಿ ನೀಡಿರುವ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸಿ ವ್ಯಾಯಾಮವನ್ನು ಮಾಡುತ್ತಾ ಸುಂದರ ಆಕಾರದ ಹೊಟ್ಟೆಯನ್ನು ಪಡೆಯಿರಿ. ನೀವು ಒಮ್ಮೆ ಸಾಧಿಸಿದರೆಂದರೆ ಖಂಡಿತ ನಿಮಗೆ ಜಯ ಸಿಗುತ್ತದೆ.

ಕೊಬ್ಬನ್ನು ಕರಗಿಸಲು ನಿಂಬೆ ರಸವನ್ನು ಸೇವಿಸಿ

ಕೊಬ್ಬನ್ನು ಕರಗಿಸಲು ನಿಂಬೆ ರಸವನ್ನು ಸೇವಿಸಿ

ನಿಮ್ಮ ಸೊಂಟದ ಸುತ್ತ ಹರಡಿಕೊಂಡಿರುವ ಕೊಬ್ಬನ್ನು ಕರಗಿಸಲು ಮೊದಲು ನೀವು ನಿಮ್ಮ ದೇಹವನ್ನು ಡಿಟಾಕ್ಸಿಫೈ ಮಾಡಬೇಕು. ಏಕೆಂದರೆ ನಂಜು ಇದ್ದರೆ ನಿಮ್ಮ ಕರುಳುಗಳು ಮತ್ತು ಜಠರವು ಪರಿಣಾಮಕಾರಿಯಾಗಿ ತನ್ನ ಕೆಲಸ ಮಾಡುವುದಿಲ್ಲ. ನಿಂಬೆ ರಸವು ನಿಮ್ಮ ಕರುಳಿನ ಸುಗಮ ಕಾರ್ಯ ನಿರ್ವಹಣೆಗಾಗಿ ಅಗತ್ಯವಾದ ಕಿಣ್ವಗಳನ್ನು ಹೆಚ್ಚಿಸುತ್ತದೆ. ಇವುಗಳ ಸಹಾಯದಿಂದ ಕರುಳು ಸುಗಮವಾಗಿ ಕಾರ್ಯ ನಿರ್ವಹಿಸುತ್ತದೆ.

ಇವುಗಳನ್ನು ತೆಗೆದುಕೊಳ್ಳಿ:

ನಿಂಬೆಹಣ್ಣು 1

ನೀರು (ಆದಷ್ಟು ಬೆಚ್ಚಗಿದ್ದರೆ ಉತ್ತಮ) - 1 ಲೋಟ

ಹೀಗೆ ಮಾಡಿ:

* ಬೆಳಗ್ಗೆ ಎದ್ದ ಕೂಡಲೆ ಒಂದು ಲೋಟ ನೀರಿಗೆ ನಿಂಬೆ ರಸವನ್ನು ಹಿಂಡಿಕೊಳ್ಳಿ.

* ಬೆಚ್ಚಗಿನ ನೀರು ಕೊಬ್ಬನ್ನು ಕರಗಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಒಂದು ವೇಳೆ ನಿಮಗೆ ಹಿಡಿಸದಿದ್ದಲ್ಲಿ ಕೊಠಡಿಯ ಉಷ್ಣಾಂಶದಲ್ಲಿರುವ ಸಾಮಾನ್ಯ ನೀರನ್ನೆ ಬಳಸಬಹುದು. ಇದರಿಂದ ಸಹ ನೀವು ಅದೇ ಪ್ರಯೋಜನವನ್ನು ನಿಮ್ಮದಾಗಿಸಿಕೊಳ್ಳಬಹುದು.

* ಇವುಗಳನ್ನು ಚೆನ್ನಾಗಿ ಬೆರೆಸಿ, ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಬೆಳಗ್ಗೆ ಸೇವಿಸಿ.

* ಪ್ರತಿದಿನ ನಿಂಬೆ ರಸವನ್ನು ಸೇವಿಸಿದ ನಂತರ 30 ನಿಮಿಷ ಯಾವುದೇ ಪದಾರ್ಥವನ್ನು ಸೇವಿಸಬೇಡಿ.

ಕೊಬ್ಬನ್ನು ಕರಗಿಸಲು ಕ್ರಾನ್‍ಬೆರ್ರಿ ರಸವನ್ನು ಸೇವಿಸಿ.

ಕೊಬ್ಬನ್ನು ಕರಗಿಸಲು ಕ್ರಾನ್‍ಬೆರ್ರಿ ರಸವನ್ನು ಸೇವಿಸಿ.

ಕ್ರಾನ್‍ಬೆರ್ರಿಯಲ್ಲಿ ಮಾಲಿಕ್ ಆಮ್ಲ, ಸಿಟ್ರಿಕ್ ಆಮ್ಲ ಮತ್ತು ಕ್ವಿನಿಕ್ ಆಮ್ಲಗಳಂತಹ ಜೀರ್ಣಶಕ್ತಿಯನ್ನು ಪ್ರಚೋದಿಸುವ ಸಾವಯವ ಆಮ್ಲಗಳ ಸಮೃದ್ಧ ಆಗರವೇ ಅಡಗಿದೆ. ಈ ಆಮ್ಲಗಳು ದುಗ್ಧ ನಾಳ ಭಾಗದಲ್ಲಿ ಕುಳಿತ ಹಠಮಾರಿ ಕೊಬ್ಬನ್ನು ತೊಲಗಿಸಲು ಸಹಾಯ ಮಾಡುತ್ತವೆ. ಇವು ಎಷ್ಟು ಗಡಸಾಗಿರುತ್ತವೆಯೆಂದರೆ ನಿಮ್ಮ ಕರುಳು ಇವುಗಳನ್ನು ಸಾಗಿಸಲು ಸಹ ಕಷ್ಟವಾಗಿರುತ್ತವೆ, ಆದರೆ ಈ ಆಮ್ಲಗಳು ಆ ಪ್ರಕ್ರಿಯೆಯನ್ನು ಸುಗಮ ಮಾಡುತ್ತವೆ. ಕ್ರಾನ್‍ಬೆರ್ರಿ ರಸವು ದುಗ್ಧ ನಾಳದಲ್ಲಿ ಕುಳಿತ ಈ ಬಗೆಯ ಕಸವನ್ನೆಲ್ಲ ಕರಗಿಸುತ್ತದೆ ಮತ್ತು ಕೊಬ್ಬನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಶೇ.100 ರಷ್ಟು ಕ್ರಾನ್‍ಬೆರ್ರಿ ರಸವನ್ನು ( ಸಕ್ಕರೆ ರಹಿತವಾಗಿ) ಅಥವಾ ಕ್ರಾನ್‍ಬೆರ್ರಿ ನೀರನ್ನು ಸೇವಿಸಿ ಹೆಚ್ಚಿನ ಪ್ರಯೋಜನವನ್ನು ಪಡೆಯಿರಿ.

ಇವುಗಳನ್ನು ತೆಗೆದುಕೊಳ್ಳಿ:

* ಸಕ್ಕರೆ ರಹಿತವಾದ ಕ್ರಾನ್‍ಬೆರ್ರಿ ರಸ - 8 ಔನ್ಸ್. ಅಥವಾ 1 ಕಪ್

* ನೀರು - 56 ಔನ್ಸ್ ಅಥವಾ 7 ಕಪ್

ಹೀಗೆ ಮಾಡಿ:

* ಬೆಳಗ್ಗೆ ಕ್ರಾನ್‍ಬೆರ್ರಿ ರಸವನ್ನು ನೀರಿನೊಂದಿಗೆ ಬೆರೆಸಿ, ಈ ಕ್ರಾನ್ ನೀರನ್ನು ದಿನವಿಡೀ ಸೇವಿಸಿ.

* ಪ್ರತಿ ಬಾರಿಯು ಈ ಕ್ರಾನ್ ನೀರಿನ ಒಂದು ಬಟ್ಟಲನ್ನು ದಿನವಿಡೀ ಸೇವಿಸಿ.

* ನಿಮಗೆ ಬೇಕಾದಲ್ಲಿ ಉಪಾಹಾರಕ್ಕೆ, ಮಧ್ಯಾಹ್ನ ಊಟಕ್ಕೆ ಮತ್ತು ರಾತ್ರಿ ಊಟಕ್ಕೆ ಮೊದಲು ಈ ಕ್ರಾನ್ ನೀರಿನ ಒಂದು ಬಟ್ಟಲನ್ನು ಸೇವಿಸಬಹುದು.

* ನಿಮಗೆ ಅಗತ್ಯವಿದ್ದಲ್ಲಿ ತಕ್ಷಣ ಈ ಕ್ರಾನ್ ನೀರನ್ನು ನೀವು ಸೇವಿಸಬಹುದು. ಎರಡು ಚಮಚದಷ್ಟು ಕ್ರಾನ್‍ಬೆರ್ರಿ ರಸವನ್ನು 7 ಔನ್ಸ್ ತಣ್ಣನೆಯ ನೀರಿಗೆ ಬೆರೆಸಿ ( ಒಂದು ಬಟ್ಟಲಿಗಿಂತ ಕಡಿಮೆ ಇರುತ್ತದೆ) ಸೇವಿಸಿ.

ಮೀನೆಣ್ಣೆ ಅಥವಾ ಮೀನನ್ನು ಸೇವಿಸಿ ಕೊಬ್ಬನ್ನು ಕರಗಿಸಿ

ಮೀನೆಣ್ಣೆ ಅಥವಾ ಮೀನನ್ನು ಸೇವಿಸಿ ಕೊಬ್ಬನ್ನು ಕರಗಿಸಿ

ಮೀನೆಣ್ಣೆಯಲ್ಲಿ ಒಮೆಗಾ - 3 ಕೊಬ್ಬಿನ ಆಮ್ಮ ಅಧಿಕ ಪ್ರಮಾಣದಲ್ಲಿರುತ್ತದೆ. ಐಕೊಸಪೆಂಟೇನೊಯ್ಕ್ ಆಮ್ಲ, ಡೊಕೊಸಹೆಕ್ಸೆನೋಯಿಕ್ ಆಮ್ಲ ಮತ್ತು ಲಿನೊಲೆಸಿನಿಕ್ ಆಮ್ಲದಂತಹ ಒಮೆಗಾ 3 ಆಮ್ಲಗಳು ನಿಮ್ಮ ಸೊಂಟದಲ್ಲಿ ಶೇಖರಣೆಯಾಗಿರುವ ಕೊಬ್ಬನ್ನು ಕರಗಿಸುತ್ತವೆ. ನಿಮಗೆ ಮೀನೆಣ್ಣೆ ಹಿಡಿಸದಿದ್ದಲ್ಲಿ ಒಮೆಗಾ -3 ಹೆಚ್ಚಾಗಿರುವ ಮೀನುಗಳನ್ನು ಸೇವಿಸಿ.

ಹೀಗೆ ಮಾಡಿ

* ಪ್ರತಿ ದಿನ 6ಗ್ರಾಂ ಮೀನೆಣ್ಣೆಯನ್ನು ಸೇವಿಸಿ. 6ಗ್ರಾಂ ಎಂದರೆ ಅಂದಾಜು ಒಂದು ಚಮಚ. ಅಧಿಕ ಸೇವನೆ ಒಳ್ಳೆಯದಲ್ಲ.

* ಬದಲಿಯಾಗಿ, ಸಾಲ್ಮನ್ ಅಥವಾ ಮ್ಯಕ್ರೆಲ್‍ಗಳಂತಹ ಮೀನುಗಳನ್ನು ವಾರಕ್ಕೆ ಎರಡು ಬಾರಿ ಸೇವಿಸಿ. ಟುನಾ ಮತ್ತು ಹ್ಯಾಲಿಬಟ್‍ನಂತಹ ಮೀನುಗಳಲ್ಲಿ ಸಹ ಅಧಿಕ ಪ್ರಮಾಣದ ಒಮೆಗಾ -3 ಇರುತ್ತದೆ.

ಸೊಂಟದಲ್ಲಿರುವ ಕೊಬ್ಬನ್ನು ಕರಗಿಸಲು ಚಿಯಾ ಬೀಜಗಳನ್ನು ಸೇವಿಸಿ

ಸೊಂಟದಲ್ಲಿರುವ ಕೊಬ್ಬನ್ನು ಕರಗಿಸಲು ಚಿಯಾ ಬೀಜಗಳನ್ನು ಸೇವಿಸಿ

ಒಂದು ವೇಳೆ ನೀವು ಸಸ್ಯಾಹಾರಿಯಾಗಿದ್ದಲ್ಲಿ, ಮೀನು ಮತ್ತು ಮೀನೆಣ್ಣೆಯನ್ನು ಸೇವಿಸುವ ಸಂಪ್ರದಾಯವಿಲ್ಲದಿದ್ದಲ್ಲಿ, ನೀವು ಚಿಯಾ ಬೀಜಗಳನ್ನು ಸೇವಿಸಬಹುದು. ಇವುಗಳಲ್ಲಿ ಸಹ ಒಮೆಗಾ-3 ಅತ್ಯಧಿಕ ಪ್ರಮಾಣದಲ್ಲಿ ಇರುತ್ತವೆ. ಇದು ಒಮೆಗಾ- 3 ಆಮ್ಲಗಳು ಅಧಿಕ ಪ್ರಮಾಣದಲ್ಲಿರುವ ಸಸ್ಯವಾಗಿದೆ. ಆದರೂ ಈ ಬೀಜಗಳಲ್ಲಿರುವ ಆಲ್ಫಾ-ಲಿನೊಲೆನಿಕ್ ಆಮ್ಲವನ್ನು DHA ಅಥವಾ EPAಗಳಾಗಿ ಪರಿವರ್ತಿಸಲು ನಿಮ್ಮ ದೇಹವು ಸ್ವಲ್ಪ ಕೆಲಸ ಮಾಡುವ ಅಗತ್ಯವಿರುತ್ತದೆ. ಈ DHA ಅಥವಾ EPAಗಳು ಮೀನೆಣ್ಣೆಯಿಂದ ನೇರವಾಗಿ ದೊರೆಯುತ್ತವೆ. ಒಮೆಗಾ -3 ಆಮ್ಲಗಳ ಹೊರತಾಗಿ ಚಿಯಾ ಬೀಜಗಳು ಆಂಟಿ ಆಕ್ಸಿಡೆಂಟ್‍ಗಳ ಸಮೃದ್ಧ ಕಣಜವಾಗಿದೆ. ಇದರಲ್ಲಿ ಕ್ಯಾಲ್ಸಿಯಂ, ಕಬ್ಬಿಣಾಂಶ ಮತ್ತು ಡಯಟೆರಿ ಫೈಬರ್‌ಗಳು ಅಧಿಕವಾಗಿ ಇರುತ್ತವೆ. ಇವುಗಳೆಲ್ಲದರ ಪರಿಣಾಮವಾಗಿ ನಿಮ್ಮ ಹೊಟ್ಟೆ ಬೇಗ ಹಸಿಯುವುದಿಲ್ಲ. ಡಯಟ್ ಬಗ್ಗೆ ಇರುವ " ದ ಅಜ್‍ಟೆಕ್ ಡಯಟ್" ಎನ್ನುವ ಪುಸ್ತಕವು ಪ್ರತಿದಿನ 4-8 ಟೇಬಲ್ ಸ್ಪೂನ್ ( 1- 2 ಔನ್ಸ್ ಅಥವಾ 30-60 ಗ್ರಾಂ) ನಷ್ಟು ಚಿಯಾ ಬೀಜಗಳನ್ನು ಸೇವಿಸುವುದರಿಂದ ನಿಮ್ಮ ಹೊಟ್ಟೆ ಬೇಗ ಹಸಿಯುವುದಿಲ್ಲ ಮತ್ತು ಇದರಿಂದ ನೀವು ಅಧಿಕವಾಗಿ ಆಹಾರ ಸೇವಿಸುವುದನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದೆ. ಆದರೂ 1 ಟೇಬಲ್ ಸ್ಪೂನ್‍ನಷ್ಟು ಚಿಯಾ ಬೀಜಗಳು ನಿಮ್ಮ ಪ್ರತಿನಿತ್ಯದ ಡಯಟ್‍ನಲ್ಲಿರುವುದು ಉತ್ತಮ.

ಚಿಯಾ ಬೀಜಗಳನ್ನು ಹೇಗೆ ಸೇವಿಸುವುದು?

* ಚಿಯಾ ಬೀಜಗಳನ್ನು ಸ್ಮೂತೀಗಳಿಗೆ, ಸಲಾಡ್‍ಗಳಿಗೆ ಮತ್ತು ಯೋಗರ್ಟ್‌ಗಳಿಗೆ ಸೇರಿಸಿ.

* ಈ ಬೀಜಗಳನ್ನು ನಿಮ್ಮ ಉಪಾಹಾರದ ಧಾನ್ಯಗಳಿಗೆ ಬೆರೆಸಿ.

* ಚಿಯಾ ಬೀಜಗಳನ್ನು ಸೂಪ್ ಮತ್ತು ಗ್ರೇವಿಗಳನ್ನು ನೀರಿನಂತಾಗದಿರಲು ಬಳಸಬಹುದು.

ಸೊಂಟದಲ್ಲಿರುವ ಕೊಬ್ಬನ್ನು ಕರಗಿಸಲು ಶುಂಠಿ ಚಹಾ ಕುಡಿಯಿರಿ

ಸೊಂಟದಲ್ಲಿರುವ ಕೊಬ್ಬನ್ನು ಕರಗಿಸಲು ಶುಂಠಿ ಚಹಾ ಕುಡಿಯಿರಿ

ಎಲ್ಲರಿಗು ಗೊತ್ತಿರುವಂತೆ ಶುಂಠಿಯು ಒಂದು ಒಳ್ಳೆಯ ಜೀರ್ಣ ಕ್ರಿಯೆ ಪ್ರಚೋದಕ. ಇದನ್ನು ಸೇವಿಸುವುದರಿಂದ ಜೀರ್ಣ ಕ್ರಿಯೆ ಸರಾಗವಾಗಿ ನಡೆಯುತ್ತದೆ. ಇದರ ಜೊತೆಗೆ ಶುಂಠಿಯು ನಮ್ಮ ದೇಹಕ್ಕೆ ಸ್ವಲ್ಪ ಉಷ್ಣತೆಯನ್ನು ಒದಗಿಸುತ್ತದೆ ಎಂಬುದನ್ನು ಬಲ್ಲಿರಾ? ಹೌದು ಶುಂಠಿಯು ಒಂದು ಉಷ್ಣತೆಯನ್ನು ಒದಗಿಸುವ ಮಧ್ಯವರ್ತಿ ಅಂದರೆ ಥರ್ಮೊಜೆನಿಕ್ ಏಜೆಂಟ್ ಆಗಿ ಕೆಲಸ ನಿರ್ವಹಿಸುತ್ತದೆ. ಇದು ನಮ್ಮ ದೇಹದಲ್ಲಿ ಉಷ್ಣತೆಯನ್ನು ಅಧಿಕಗೊಳಿಸಿ ಕೊಬ್ಬನ್ನು ಪರಿಣಾಮಕಾರಿಯಾಗಿ ಕರಗಿಸುತ್ತದೆ. ನಿಮ್ಮ ಉದರ ಭಾಗದಲ್ಲಿ ಅಂದರೆ ಸೊಂಟದ ಅಕ್ಕ-ಪಕ್ಕ ಇರುವ ಕೊಬ್ಬಿಗೆ ಹಲವಾರು ಕಾರಣಗಳಿರಬಹುದು. ಅಧಿಕ ಆಹಾರ ಸೇವನೆ, ವಯಸ್ಸಿಗೆ ಸಂಬಂಧಿಸಿದ ಹಾರ್ಮೊನುಗಳ ಪ್ರಭಾವ, ಒತ್ತಡ ಅಥವಾ ವ್ಯಾಯಾಮದ ಕೊರತೆ ಹೀಗೆ ನಾನಾ ಕಾರಣಗಳಿಂದ ಕೊಬ್ಬು ಶೇಖರಣೆಗೊಳ್ಳುತ್ತದೆ. ಶುಂಠಿಯು ಪ್ರಾಯೋಗಿಕವಾಗಿ ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ. ಶುಂಠಿಯು ಕಾರ್ಟಿಸೊಲ್ ಉತ್ಪಾದನೆಯನ್ನು ಸಹ ದಮನ ಮಾಡುತ್ತದೆ. ಕಾರ್ಟಿಸೊಲ್ ಎಂಬುದು ಒಂದು ಸ್ಟಿರಾಯಿಡ್ ಹಾರ್ಮೋನ್ ಆಗಿದ್ದು, ನಮ್ಮ ದೇಹದಲ್ಲಿ ಶಕ್ತಿ ನಿಯಂತ್ರಣಕ್ಕೆ ಮತ್ತು ಕ್ರೋಢೀಕರಣಕ್ಕೆ ನೆರವಾಗುತ್ತದೆ. ಹಾಗಾಗಿ ಪ್ರತಿನಿತ್ಯ ಶುಂಠಿ ಟೀಯನ್ನು ಸೇವಿಸುವುದರಿಂದ ಸೊಂಟದ ಭಾಗದಲ್ಲಿನ ಕೊಬ್ಬನ್ನು ಕರಗಿಸಿಕೊಳ್ಳಬಹುದು.

ಶುಂಠಿ,ನಿಂಬೆ, ಜೇನು ತುಪ್ಪದ ಟೀಯನ್ನು ತಯಾರಿಸುವುದು ಹೇಗೆ?

ಇವುಗಳನ್ನು ತೆಗೆದುಕೊಳ್ಳಿ:

* ನೀರು - 4 ಕಪ್‍ಗಳು

* ಶುಂಠಿ ( ಸಿಪ್ಪೆ ಸುಲಿದ ಮತ್ತು ಕತ್ತರಿಸಿದಂತಹವು) 1 - 2 ಇಂಚು ಉದ್ದದ ತುಂಡುಗಳು

* ನಿಂಬೆ ಹಣ್ಣು - 1

* ಜೇನು ತುಪ್ಪ - 1 ಚಮಚ

ಹೀಗೆ ಮಾಡಿ

* ನೀರನ್ನು ಕಾಯಿಸಿ.

* ಕುದಿಯುವ ನೀರಿಗೆ ಶುಂಠಿಯನ್ನು ಸೇರಿಸಿ ಮತ್ತು 5-10 ನಿಮಿಷಗಳ ಕಾಲ ಸಿಮ್‍ನಲ್ಲಿ ಉರಿಸಿ.

* ಸ್ಟವ್ ಮೇಲಿನಿಂದ ಕೆಳಗೆ ಇಳಿಸಿ ಮತ್ತು ಅದಕ್ಕೆ ನಿಂಬೆರಸ ಮತ್ತು ಜೇನು ತುಪ್ಪವನ್ನು ಬೆರೆಸಿ.

* ಚೆನ್ನಾಗಿ ಕಲೆಸಿ, ಪ್ರತಿದಿನ ಬೆಳಗ್ಗೆ ಈ ಶುಂಠಿ ಟೀಯನ್ನು ಕುಡಿಯಿರಿ.

* ನಿಮ್ಮ ಜೀರ್ಣ ಕ್ರಿಯೆಯನ್ನು ಸರಾಗಗೊಳಿಸಲು ಮತ್ತು ಜೀರ್ಣಕ್ರಿಯೆಯನ್ನು ನಿಯಂತ್ರಿಸಲು ಹಾಗು ಕಾರ್ಟಿಸಾಲ್ ಉತ್ಪಾದನೆಯನ್ನು ಕಡಿಮೆ ಮಾಡಲು ಪ್ರತಿದಿನ ಕನಿಷ್ಟ 2 ಕಪ್ ಶುಂಠಿ ಟೀಯನ್ನು ಸೇವಿಸಿ.

ಕೊಬ್ಬನ್ನು ಕರಗಿಸಲು ಬೆಳ್ಳುಳ್ಳಿಯನ್ನು ಸೇವಿಸಿ

ಕೊಬ್ಬನ್ನು ಕರಗಿಸಲು ಬೆಳ್ಳುಳ್ಳಿಯನ್ನು ಸೇವಿಸಿ

ನಿಮಗೆ ಗೊತ್ತಿರಬಹುದು ಹೃದಯದ ನಾಳ ವ್ಯವಸ್ಥೆಗೆ ಬೆಳ್ಳುಳ್ಳಿಯು ಒಂದು ಅದ್ಭುತವಾದ ಆಹಾರವಾಗಿರುತ್ತದೆ. ಇದು ಸಿಸ್ಟೊಲಿಕ್ ಆಮ್ಲ ಮತ್ತು ಡೈಯಸ್ಟೊಲಿಕ್ ರಕ್ತದ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಟ್ರೈ ಗ್ಲಿಸರೈಡ್‍ಗಳನ್ನು ಮತ್ತು ಉತ್ತಮ ಕೊಲೆಸ್ಟ್ರಾಲ್‍ಗಳನ್ನು ಹೆಚ್ಚಿಸುತ್ತದೆ. ನಿಮಗೆ ಗೊತ್ತಿರದ ಮತ್ತೊಂದು ವಿಚಾರವೇನೆಂದರೆ ಬೆಳ್ಳುಳ್ಳಿಯು ಒಂದು ಅದ್ಭುತವಾದ ಸ್ಥೂಲಕಾಯ ನಿರೋಧಕ ಅಂಶಗಳನ್ನು ಒಳಗೊಂಡಿರುವ ಪದಾರ್ಥವಾಗಿದೆ. ಪ್ರತಿ ನಿಮಿಷವು ನಮ್ಮ ದೇಹದಲ್ಲಿ ಕೆಲವೊಂದು ಕೋಶಗಳು ಸಾಯುತ್ತಿರುತ್ತವೆ ಮತ್ತು ಕೆಲವೊಂದು ಕೋಶಗಳು ಜನ್ಮ ತಾಳುತ್ತಿರುತ್ತವೆ. ಅಡಿಪೊಸೈಟ್‍ಗಳು ( ಲಿಪೊಸೈಟ್‍ಗಳೆಂದು ಮತ್ತು ಕೊಬ್ಬಿನ ಕೋಶಗಳೆಂದ ಸಹ ಕರೆಯಲಾಗುತ್ತದೆ) ಎಂದು ಕರೆಯಲ್ಪಡುವ ಕೋಶಗಳು ನಮ್ಮ ದೇಹದಲ್ಲಿ ಮೂಲಭೂತವಾಗಿ ಅಡಿಪೊಸ್ ಟಿಶ್ಶೂಗಳನ್ನು ( ದೇಹದಲ್ಲಿನ ಕೊಬ್ಬು) ಸಂಯೋಜಿಸುತ್ತವೆ. ಈ ಅಡಿಪೋಸ್ ಟಿಶ್ಶೂಗಳಲ್ಲಿ ಒಂದು ಪ್ರಕ್ರಿಯೆಯು ನಡೆಯುತ್ತದೆ. ಈ ಪ್ರಕ್ರಿಯೆಯು ಪೂರ್ವ-ಅಡಿಪೊಸೈಟ್‍ಗಳನ್ನು ಪರಿಪೂರ್ಣವಾದ-ಅಡಿಪೊಸ್‍ ಟಿಶ್ಶೂಗಳಾಗಿ ಅಥವಾ ಕೊಬ್ಬಾಗಿ ಪರಿವರ್ತಿಸುತ್ತವೆ. ಈ ಪ್ರಕ್ರಿಯೆಯು ಅಡಿಪೊಜೆನಿಸಿಸ್ ಎಂದು ಕರೆಯಲ್ಪಡುತ್ತದೆ. ಬೆಳ್ಳುಳ್ಳಿಯು ಈ ಅಡಿಪೊಜೆನಿಸಿಸ್ ಅಥವಾ ಕೊಬ್ಬು ನಿರ್ಮಿಸುವ ಪ್ರಕ್ರಿಯೆಯನ್ನು ತನ್ನಲ್ಲಿ ಒಳಗೊಂಡಿದೆ ಎಂದು ಅಧ್ಯಯನಗಳು ಸಾಭೀತು ಮಾಡಿವೆ. ಸರಳ ಭಾಷೆಯಲ್ಲಿ ಹೇಳುವುದಾದರೆ ಬೆಳ್ಳುಳ್ಳಿಯು ಪೂರ್ವ ಭಾವಿ ಕೊಬ್ಬಿನ ಕೋಶಗಳನ್ನು ಕೊಬ್ಬಿನ ಕೋಶಗಳಾಗಿ ಪರಿವರ್ತನೆಯಾಗುವುದನ್ನು ತಡೆಯುತ್ತದೆ. ಹಾಗಾಗಿ ನೀವು ಪ್ರತಿನಿತ್ಯ ಬೆಳ್ಳುಳ್ಳಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಬಹುದು. ಸೊಂಟದಲ್ಲಿರುವ ಕೊಬ್ಬನ್ನು ಕರಗಿಸಲು ಕಚ್ಛಾ ಬೆಳ್ಳುಳ್ಳಿಯು ಅತ್ಯುತ್ತಮ ಎಂದು ಹೇಳಬಹುದು.

Read more about: ಆರೋಗ್ಯ fat health
English summary

Amazing Tips to Reduce Belly Fat Naturally

Many people try dieting to lose belly fat, but this is not the optimal solution. The healthy way to trim down your tummy is to use natural home remedies.
Story first published: Friday, October 24, 2014, 9:26 [IST]
X
Desktop Bottom Promotion