For Quick Alerts
ALLOW NOTIFICATIONS  
For Daily Alerts

ಬದನೆಕಾಯಿಯಿಂದ ನಮಗೆ ದೊರೆಯುವ ಆರೋಗ್ಯಕಾರಿ ಪ್ರಯೋಜನಗಳು

By manohar
|

ಬದನೆಕಾಯಿ, ಬಿಳಿ ಬದನೆ ಕಾಯಿ, ಗುಂಡು ಬದನೆಕಾಯಿ, ಬ್ರಿಂಜಲ್ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ತರಕಾರಿ ಯಾರಿಗೆ ತಾನೇ ಗೊತ್ತಿಲ್ಲ. ಇದರ ಸಸ್ಯಶಾಸ್ತ್ರೀಯ ಹೆಸರು ಸೊಲನಮ್ ಮೆಲೊಂಜೆನ ಎಂದು ಇದು ನೈಟ್‍ಶೇಡ್ ಅಥವಾ ಸೊಲನೇಸ್ ಕುಟುಂಬದ ಸದಸ್ಯ ತರಕಾರಿ. ಇದೇ ಕುಟುಂಬಕ್ಕೆ ಸೇರಿದ ಮತ್ತಿತರ ತರಕಾರಿಗಳು ಎಂದರೆ ಟೊಮಾಟೊ, ಸಿಹಿ ಮೆಣಸು ಮತ್ತು ಆಲೂಗಡ್ಡೆ. ಬೆಳೆಯುವ ವಿಧಾನವನ್ನು ಅವಲಂಬಿಸಿ ಬದನೆಕಾಯಿಯಲ್ಲಿ ನಾನಾ ವಿಧದ ಆಕಾರ ಮತ್ತು ಬಣ್ಣಗಳು ಕಂಡು ಬರುತ್ತವೆ.

ಸಾಮಾನ್ಯವಾಗಿ ಈ ತರಕಾರಿಯು ಎರಡು ಬಗೆಯಲ್ಲಿ ನಮಗೆ ಕಂಡು ಬರುತ್ತದೆ. ಒಂದು ಮೊಟ್ಟೆಯಾಕಾರದಲ್ಲಿ ಮತ್ತು ಉದ್ದವಾಗಿರುವ ಬಗೆಯಲ್ಲಿ. ಬದನೆಕಾಯಿಯು ಹೊಳೆಯುವ ಹೊರ ತಿರುಳನ್ನು ಹೊಂದಿರುತ್ತದೆ. ಇದರ ಒಳಗೆ ಸಣ್ಣ ಸಣ್ಣ ಬೀಜಗಳಿಂದ ಕೂಡಿದ ಒಳ ತಿರುಳನ್ನು ಇದು ಹೊಂದಿರುತ್ತದೆ.

ಬದನೆಕಾಯಿಯ ಪೂರ್ವಜರು ಭಾರತದ ಕಾಡುಗಳಲ್ಲಿ ಜನಿಸಿದರು. ಆದರೆ ಇದನ್ನು ಕ್ರಿ.ಪೂ 5ನೇ ಶತಮಾನದಲ್ಲಿ ಚೀನಾದಲ್ಲಿ ಮೊದಲು ಬೇಸಾಯ ಮಾಡಲಾಯಿತು. ಮಧ್ಯಕಾಲೀನ ಯುಗಕ್ಕಿಂತ ಮೊದಲು ಇದನ್ನು ಆಫ್ರಿಕಾಗೆ ಪರಿಚಯಿಸಲಾಯಿತು. ಆನಂತರ 14ನೇ ಶತಮಾನದಲ್ಲಿ ಇದು ಇಟಲಿಗೆ ಇದು ತೆರಳಿತು. ಅಲ್ಲಿಯೇ ಬದನೆಕಾಯಿಯು ಬಹು ಕಾಲ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡಿತು. ಅಲ್ಲಿಂದ ಇದು ಕ್ರಮೇಣ ಯೂರೋಪ್, ಮಧ್ಯ ಪ್ರಾಚ್ಯ ಮುಂತಾದ ದೇಶಗಳತ್ತ ತೆರಳಿತು.

ಸುಮಾರು ಶತಮಾನಗಳ ನಂತರ ಇದು ಯೂರೋಪಿಯನ್ ಅನ್ವೇಷಕರ ಮೂಲಕ ಪಾಶ್ಚಿಮಾತ್ಯ ಗೋಳವನ್ನು ತಲುಪಿತು. ಇಂದು ಇಟಲಿ, ಟರ್ಕಿ, ಈಜಿಪ್ಟ್, ಚೀನಾ ಮತ್ತು ಜಪಾನ್ ದೇಶಗಳು ಬದನೆಕಾಯಿಯನ್ನು ಬೆಳೆಯುವದರಲ್ಲಿ ಮುಂಚೂಣಿಯಲ್ಲಿವೆ.

ಬದನೆಕಾಯಿಯು ಇಂಡಿಯನ್ ಕರಿ (ಎಣ್ಣೆಗಾಯಿ), ಚೈನೀಸ್ ಝೇಶುವನ್ ಎಗ್ಗ್‌ಪ್ಲಾಂಟ್, ಇಟಾಲಿಯನ್ ಎಗ್ಗ್‌ಪ್ಲಾಂಟ್ ಪರ್ಮೆಸನ್, ಮಿಡಲ್ ಈಸ್ಟ್ರನ್ ಎಗ್ಗ್‌ಪ್ಲಾಂಟ್ ಡಿಪ್ ಮತ್ತು ಮೊರೊಕ್ಕನ್ ಎಗ್ಗ್‌ಪ್ಲಾಂಟ್ ಸಲಾಡ್‌ಗಳಲ್ಲಿ ಪ್ರಮುಖವಾಗಿ ಬಳಸಲ್ಪಡುತ್ತದೆ.

ಬದನೆಕಾಯಿ ಇಷ್ಟವಿಲ್ಲವೇ? ಆದರೂ ತಿನ್ನಿ!

ಟೈಪ್ 2 ಡಯಬಿಟೀಸ್

ಟೈಪ್ 2 ಡಯಬಿಟೀಸ್

ಬದನೆಕಾಯಿಯಲ್ಲಿರುವ ಯಥೇಚ್ಛವಾದ ನಾರು ಮತ್ತು ಸೋಡಿಯಂಗಳು ರಕ್ತವು ಅಧಿಕ ಪ್ರಮಾಣದ ಗ್ಲೂಕೋಸನ್ನು ಹೀರಿಕೊಳ್ಳುವುದನ್ನು ತಡೆಯುತ್ತವೆ. ಆ ಮೂಲಕ ಇದು ಟೈಪ್ 2 ಮಧುಮೇಹವನ್ನು ಹೊಂದಿರುವ ರೋಗಿಗಳ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಫೆನಲ್‍ಗಳು ಮತ್ತು ಕಡಿಮೆ ಪ್ರಮಾಣದ ಗ್ಲಿಸೆಮಿಕ್‍ಗಳು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಹತೋಟಿಯಲ್ಲಿಡುತ್ತವೆ. ಹೀಗಾಗಿ ಇದು ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಆಹಾರವಾಗಿದೆ.

ಹೃದಯದ ಆರೋಗ್ಯ

ಹೃದಯದ ಆರೋಗ್ಯ

ಬದನೆಕಾಯಿಯಲ್ಲಿ ಪೊಟಾಶಿಯಂ ಹೈಡ್ರೇಟ್ ಇರುತ್ತದೆ. ಇದು ದೇಹದಲ್ಲಿ ಧಾರಣೆಯಾಗಿರುವ ದ್ರವವನ್ನು ತೆಗೆದು ಹಾಕುತ್ತದೆ. ಹೀಗೆ ಇದು ಕರೋನರಿ ಹೃದ್ರೋಗ ಸಮಸ್ಯೆಯನ್ನು ನಿಯಂತ್ರಿಸುತ್ತದೆ. ಇದರಲ್ಲಿರುವ ಫೈಟೋನ್ಯೂಟ್ರಿಯೆಂಟ್‍ಗಳು ಕೊಲೆಸ್ಟ್ರಾಲನ್ನು ಕಡಿಮೆ ಮಾಡಿ, ರಕ್ತವು ಸರಾಗವಾಗಿ ಪರಿಚಲನೆಯಾಗಲು ನೆರವು ನೀಡುತ್ತದೆ.ಫೊಲೇಟ್, ಮ್ಯಗ್ನೀಷಿಯಂ, ವಿಟಮಿನ್ B3 ಮತ್ತು B6ಗಳು, ಆಂಟಿ ಆಕ್ಸಿಡೆಂಟ್‍ಗಳು ಮತ್ತು ಬೀಟಾ ಕೆರೋಟಿನ್‍ಗಳು ಸಹ ಹೃದ್ರೋಗದ ಸಮಸ್ಯೆಯನ್ನು ಕಡಿಮೆ ಮಾಡುತ್ತವೆ. ಬದನೆಕಾಯಿಯಲ್ಲಿ ಪ್ರಾಕೃತಿಕವಾಗಿ ಸ್ಯಾಚುರೇಟೇಡ್ ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಸೋಡಿಯಂ ಲಭ್ಯವಿರುತ್ತದೆ.

ಮೆದುಳಿನ ಆರೋಗ್ಯ

ಮೆದುಳಿನ ಆರೋಗ್ಯ

ಫೈಟೋನ್ಯೂಟ್ರಿಯೆಂಟ್‌ಗಳು ಜೀವಕೋಶಗಳ ಹೊರ ಪೊರೆಯನ್ನು ಫ್ರೀ ರಾಡಿಕಲ್‍ಗಳು, ಆಕ್ಸಿಡೇಟ್‍ನ ಒತ್ತಡದಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ. ಆ ಮೂಲಕ ನರ ಕೋಶದ ಕಾರ್ಯಕ್ಕೆ ಮತ್ತು ನೆನಪಿನ ಶಕ್ತಿಯು ತೀಕ್ಷ್ಣವಾಗಿ ಕೆಲಸ ಮಾಡಲು ನೆರವು ನೀಡುತ್ತದೆ. ಬದನೆಕಾಯಿಯಲ್ಲಿ ಇರುವ ಬಿ ಕಾಂಪ್ಲೆಕ್ಸ್ ವಿಟಮಿನ್‍ಗಳು ಒತ್ತಡವನ್ನು ಕಡಿಮೆ ಮಾಡುವುದಕ್ಕೆ ಸಹಕರಿಸುತ್ತವೆ.

ಕಬ್ಬಿಣಾಂಶದ ನಿಯಂತ್ರಣ

ಕಬ್ಬಿಣಾಂಶದ ನಿಯಂತ್ರಣ

ಕಬ್ಬಿಣಾಂಶವು ದೇಹಕ್ಕೆ ಆಮ್ಲಜನಕದ ಪೂರೈಕೆಗೆ ಅತ್ಯಗತ್ಯವಾಗಿ ಬೇಕು. ಇದು ಹೆಚ್ಚಾದರೆ ದೇಹಕ್ಕೆ ಹಾನಿ ಸಹ. ಪ್ರಾಯಕ್ಕೆ ಬಂದ ಗಂಡು ಹೆಣ್ಣು ಇಬ್ಬರಲ್ಲಿಯೂ ಕಬ್ಬಿಣಾಂಶದ ಕೊರತೆಯು ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಬದನೆಕಾಯಿಯಲ್ಲಿರುವ ನಸುನಿನ್ ಎಂಬ ಅಂಶವು ದೇಹದಲ್ಲಿರುವ ಅಧಿಕ ಕಬ್ಬಿಣಾಂಶವನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.

ತೂಕ ಇಳಿಸಿಕೊಳ್ಳಲು

ತೂಕ ಇಳಿಸಿಕೊಳ್ಳಲು

ಬದನೆಕಾಯಿಯಲ್ಲಿ ನೀರಿನಂಶವು ಅಧಿಕವಾಗಿರುತ್ತದೆ ಮತ್ತು ಕ್ಯಾಲೋರಿಗಳು ಕಡಿಮೆಯಿರುತ್ತವೆ. ಅಲ್ಲದೆ ಇದರಲ್ಲಿ ಯಥೇಚ್ಛವಾದ ಡಯೇಟರಿ ಫೈಬರ್‌ಗಳಿದ್ದು, ಇವು ನಮ್ಮ ದೇಹದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡುತ್ತವೆ ಮತ್ತು ದೇಹದಲ್ಲಿರುವ ನಂಜನ್ನು ಹೊರದಬ್ಬುವ ಪ್ರಕ್ರಿಯೆಯನ್ನು ವೇಗಗೊಳಿಸುವುದಲ್ಲದೆ, ನಮ್ಮ ಹೊಟ್ಟೆ ತುಂಬಿದ ಅನುಭವವನ್ನು ದೀರ್ಘಕಾಲದವರೆಗೆ ನೀಡುತ್ತದೆ. ಜೀರ್ಣಶಕ್ತಿಯನ್ನು ಹೆಚ್ಚಿಸುವ ಅಂಶಗಳು ಕ್ಯಾಲೋರಿಗಳನ್ನು ಕರಗುವಂತೆ ಮಾಡಿ, ನಮ್ಮ ತೂಕ ಇಳಿಯಲು ಸಹಾಯ ಮಾಡುತ್ತವೆ.

ಜೀರ್ಣಶಕ್ತಿಗೆ ಸಹಾಯ

ಜೀರ್ಣಶಕ್ತಿಗೆ ಸಹಾಯ

ಟೊಮೇಟೊ ಮತ್ತು ಬದನೆಕಾಯಿಯ ಮಿಶ್ರಣವನ್ನು ಹೊಂದಿರುವ ಸೂಪ್ ಹೊಟ್ಟೆ ಹಸಿವನ್ನು ಹೆಚ್ಚಿಸಿ,ಜೀರ್ಣಶಕ್ತಿಯನ್ನು ಸುಗಮಗೊಳಿಸುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂ‍ಟ್‍ಗಳು ಮತ್ತು ನಾರಿನಂಶಗಳು ಕರುಳಿನ ಕಾರ್ಯವನ್ನು ಚುರುಕುಗೊಳಿಸುತ್ತವೆ, ಇವು ಕರುಳನ್ನು ಹಿಂಡಿ, ಮಲಬದ್ಧತೆ ಮತ್ತು ಕೊಲೊನ್ ಕ್ಯಾನ್ಸರ್ ಬರದಂತೆ ತಡೆಯುತ್ತವೆ ಮತ್ತು ಮೂಲವ್ಯಾಧಿ, ಕೊಲೈಟಿಸ್, ಗ್ಯಾಸ್‍ಟ್ರಿಕ್ಟ್ ಮತ್ತು ಹೊಟ್ಟೆಯಲ್ಲಿ ಕಂಡು ಬರುವ ಉರಿಯೂತದಿಂದ ನಮಗೆ ಪರಿಹಾರವನ್ನು ನೀಡುತ್ತದೆ. ಬದನೆಕಾಯಿಯ ಜೊತೆಗೆ ಅಸಫೆಟಿಡ ಮತ್ತು ಬೆಳ್ಳುಳ್ಳಿಯನ್ನು ರುಬ್ಬಿ ಸೇವಿಸುವುದರಿಂದ ಉದರದಲ್ಲಿರುವ ವಾಯುವಿನ ಸಮಸ್ಯೆಯಿಂದ ಮುಕ್ತಿ ಕಾಣಬಹುದು.

ಆಂಟಿ ಬ್ಯಾಕ್ಟೀರಿಯ ಗುಣಗಳು

ಆಂಟಿ ಬ್ಯಾಕ್ಟೀರಿಯ ಗುಣಗಳು

ಬದನೆಕಾಯಿಯಲ್ಲಿರುವ ಯಥೇಚ್ಛ ವಿಟಮಿನ್ ಸಿಯು ಇದನ್ನು ಅತ್ಯುತ್ತಮವಾದ ಆಂಟಿ-ವೈರಲ್ ಮತ್ತು ಆಂಟಿ-ಬ್ಯಾಕ್ಟೀರಿಯಾ ಔಷಧಿಯನ್ನಾಗಿ ಮಾಡಿದೆ.

ಕೂದಲನ್ನು ಗಟ್ಟಿಗೊಳಿಸಲು

ಕೂದಲನ್ನು ಗಟ್ಟಿಗೊಳಿಸಲು

ಬದನೆಕಾಯಿಯಲ್ಲಿರುವ ಖನಿಜಾಂಶಗಳು, ವಿಟಮಿನ್‌ಗಳು ಮತ್ತು ಅಧಿಕ ಪ್ರಮಾಣದ ಖನಿಜಾಂಶಗಳು ನಿಮ್ಮ ಕೂದಲಿನ ಬೇರಿಗೆ ಉತ್ತಮ ಆರೈಕೆಯನ್ನು ನೀಡುತ್ತವೆ ಮತ್ತು ಒಡೆದ ಕೂದಲನ್ನು ಸರಿಪಡಿಸಿ, ಕೂದಲನ್ನು ಆರೋಗ್ಯಯುತವಾಗಿ ಮತ್ತು ಸದೃಢವನ್ನಾಗಿ ಮಾಡುತ್ತದೆ. ಬದನೆಕಾಯಿಯಲ್ಲಿರುವ ಕಿಣ್ವಗಳು ಕೂದಲಿನ ಕಾಂಡವನ್ನು ಸಹ ಆರೋಗ್ಯಯುತವಾಗಿ ಮಾಡಿ, ಕೂದಲಿನ ಹೊಳಪನ್ನು ಹೆಚ್ಚಿಸುತ್ತವೆ.

ಕುಂದಿಲ್ಲದ ತ್ವಚೆ

ಕುಂದಿಲ್ಲದ ತ್ವಚೆ

ಬದನೆಕಾಯಿಯಲ್ಲಿ ಅತಿ ಹೆಚ್ಚಾಗಿರುವ ಖನಿಜಾಂಶಗಳು, ವಿಟಮಿನ್‍ಗಳು ಮತ್ತು ಡಯಟೆರಿ ಫೈಬರ್ ಮತ್ತು ವಿಪುಲವಾದ ನೀರಿನಂಶವು ತ್ವಚೆಯನ್ನು ಸದಾ ನೀರಿನಂಶದಿಂದ ಕೂಡಿರುವಂತೆ ಮಾಡಿ, ಒಣ ತ್ವಚೆ, ಪೊರೆ ಬಿಡುವ ತ್ವಚೆ ಮತ್ತು ಸುಕ್ಕು ಬರದಂತೆ ಕಾಪಾಡುತ್ತವೆ. ಇದರಲ್ಲಿರುವ ಆಂಟಿ ಆಕ್ಸಿಡೆಂ‍ಟ್‍ಗಳು, ಆಂಥೊಸಿಯನಿನ್‍ಗಳು ತ್ವಚೆಗೆ ವಯಸ್ಸಾದಂತೆ ಕಾಣುವುದನ್ನು ತಡೆಯುತ್ತವೆ. ಹೀಗೆ ಬದನೆಕಾಯಿಯನ್ನು ಸುಕ್ಕುಗಳು, ನರೂಲಿಗಳು (ವಾರ್ಟ್ಸ್), ಕಲೆಗಳನ್ನು ನಿವಾರಿಸಲು ಮತ್ತು ಜಿಡ್ಡಿನಿಂದ ಕೂಡಿದ ತ್ವಚೆಗೆ ಚಿಕಿತ್ಸೆ ನೀಡಲು ಸಹ ಬಳಸುತ್ತಾರೆ.

ಕಫ ನಿವಾರಿಸಲು

ಕಫ ನಿವಾರಿಸಲು

ಬೆಂಕಿಯಲ್ಲಿ ಸುಟ್ಟು, ಅದಕ್ಕೆ ಉಪ್ಪನ್ನು ಹಾಕಿದ ಬದನೆಕಾಯಿಯನ್ನು ತಿನ್ನುವುದರಿಂದ ನಮ್ಮ ಗಂಟಲಿನಲ್ಲಿ ತೊಂದರೆ ಕೊಡುವ ಅಧಿಕ ಕಫವನ್ನು ತೆಗೆಯಬಹುದು ಮತ್ತು ಉಸಿರಾಟ ಹಾಗು ಕೆಮ್ಮನ್ನು ಸಹ ಸುಧಾರಿಸಬಹುದು. ಇದು ಕಫ ತೆಗೆಯಲು ಬಳಸುವ ತುಂಬಾ ಪ್ರಾಚೀನ ವಿಧಾನವಾಗಿದೆ.

ಇನ್ಸೋಮ್ನಿಯಾದ ವಿರುದ್ಧ ಹೋರಾಡುತ್ತದೆ

ಇನ್ಸೋಮ್ನಿಯಾದ ವಿರುದ್ಧ ಹೋರಾಡುತ್ತದೆ

ಒಂದು ವೇಳೆ ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ, ಬೇಯಿಸಿದ ಬದನೆಕಾಯಿಯನ್ನು ಸಂಜೆಯ ಹೊತ್ತು ಸೇವಿಸಿ. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಇನ್ಸೋಮ್ನಿಯಾವನ್ನು ನಿವಾರಿಸಿಕೊಳ್ಳಬಹುದು.

ಪೈಲ್ಸ್ ನಿವಾರಿಸಿಕೊಳ್ಳಲು

ಪೈಲ್ಸ್ ನಿವಾರಿಸಿಕೊಳ್ಳಲು

ಬದನೆಕಾಯಿಯ ತೊಟ್ಟನ್ನು ಸಾಂಪ್ರಾದಾಯಿಕ ಔಷಧಿ ಪದ್ಧತಿಯಲ್ಲಿ ಪುರಾತನ ಕಾಲದಿಂದಲು ಪೈಲ್ಸ್‌ಗೆ ಮದ್ದಾಗಿ ಬಳಸಿಕೊಂಡು ಬರಲಾಗುತ್ತಿದೆ. ಪೈಲ್ಸ್ ಮತ್ತು ಹೆಮೊರಾಯ್ಡ್‌ಗಳಿಗೆ ( ಗುದನಾಳದ ರಕ್ತನಾಳಗಳಿಂದ ರಕ್ತ ಸ್ರಾವವಾಗುವುದು) ಇವುಗಳನ್ನು ಬಳಸಲಾಗುತ್ತದೆ.

ನೋವು ಶಮನಕಾರಿ

ನೋವು ಶಮನಕಾರಿ

ಅರ್ಧ ಕತ್ತರಿಸಿದ ಬದನೆಕಾಯಿಗೆ ಸ್ವಲ್ಪ ಅರಿಶಿಣ ಪುಡಿಯನ್ನು ಚಿಮುಕಿಸಿ ಫ್ರೈ ಪ್ಯಾನ್ ಮೇಲೆ ಕೆಲವು ಸೆಕೆಂಡುಗಳ ಕಾಲ ಉರಿದು ಅದನ್ನು ಕೀಲು ನೋವು, ಬಾವು ಮತ್ತು ಗಾಯಗಳ ಮೇಲೆ ಇಡುವುದರಿಂದ ಬಾವು ಮತ್ತು ನೋವು ಶಮನಗೊಳ್ಳುತ್ತದೆ.

ದೇಹದ ದುರ್ಗಂಧವನ್ನು ನಿವಾರಿಸುತ್ತದೆ

ದೇಹದ ದುರ್ಗಂಧವನ್ನು ನಿವಾರಿಸುತ್ತದೆ

ಬದನೆಕಾಯಿಯ ರಸವನ್ನು ಅಂಗೈ ಮತ್ತು ಪಾದಗಳಿಗೆ ಲೇಪಿಸುವುದರಿಂದ, ಅದು ಹೀರಿಕೊಂಡು ದೇಹದ ದುರ್ಗಂಧವನ್ನು ನಿವಾರಿಸುತ್ತದೆ.

ಒಡೆದ ತ್ವಚೆಗೆ ಪರಿಹಾರ ನೀಡುತ್ತದೆ

ಒಡೆದ ತ್ವಚೆಗೆ ಪರಿಹಾರ ನೀಡುತ್ತದೆ

ಒಡೆದ ಹಿಮ್ಮಡಿ ಮತ್ತು ಸೀಳು ಬಿಟ್ಟ ಬೆರಳುಗಳಿಗೆ ಹಣ್ಣಾದ ಬದನೆಕಾಯಿಯನ್ನು ಪೆಟ್ರೋಲಿಯಂ ಜೆಲ್ಲಿ ಜೊತೆಗೆ ಬೆರೆಸಿ ಬಳಸುವುದರಿಂದ ಈ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯಬಹುದು.

ಕೊಲೊನ್ ಕ್ಯಾನ್ಸರನ್ನು ನಿವಾರಿಸುತ್ತದೆ

ಕೊಲೊನ್ ಕ್ಯಾನ್ಸರನ್ನು ನಿವಾರಿಸುತ್ತದೆ

ಬದನೆಕಾಯಿಯಲ್ಲಿರುವ ನಾರಿನಂಶಗಳು ದೇಹದಲ್ಲಿರುವ ನಂಜು ಮತ್ತು ರಾಸಾಯನಿಕಗಳನ್ನು ಹೀರಿಕೊಂಡು ಕೊಲೊನ್ ಕ್ಯಾನ್ಸರ್ ಬರದಂತೆ ಕಾಪಾಡುತ್ತದೆ. ಇದರಲ್ಲಿರುವ್ ಆಂಟಿ ಆಕ್ಸಿಡೆಂಟ್‍ಗಳು, ಕ್ಲೋರೊಜೆನಿಕ್ ಆಮ್ಲಗಳು ದೇಹದಲ್ಲಿರುವ ಫ್ರೀ ರಾಡಿಕಲ್‌ಗಳ ಮೇಲೆ ಹೋರಾಡುತ್ತವೆ. ಮತ್ತು ಜೀವಕೋಶಗಳು ಕ್ಯಾನ್ಸರ್ ಕೋಶಗಳಾಗಿ ಬದಲಾಗುವುದನ್ನು ತಡೆಯುತ್ತವೆ. ನಸುನಿನ್ ಎನ್ನುವ ಆಂಟಿ-ಆಂಜಿಯೋಜೆನಿಕ್ ಸಾಮರ್ಥ್ಯವನ್ನು ಹೊಂದಿರುವ ಅಂಶವು ಕ್ಯಾನ್ಸರ್ ಕೋಶಗಳಿಗೆ ಇಂಬು ನೀಡುವ ರಕ್ತನಾಳಗಳ ಬೆಳವಣಿಗೆಯನ್ನು ತಡೆಯುತ್ತದೆ.

ಧೂಮಪಾನವನ್ನು ತ್ಯಜಿಸಲು ಸಹಕರಿಸುತ್ತದೆ

ಧೂಮಪಾನವನ್ನು ತ್ಯಜಿಸಲು ಸಹಕರಿಸುತ್ತದೆ

ಬದನೆಕಾಯಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ನಿಕೋಟಿನ್ ಇರುತ್ತದೆ. ಇದರ ಸೇವನೆಯಿಂದ ಸ್ವಲ್ಪ ನಿಕೋಟಿನ್ ದೇಹವನ್ನು ಸೇರುತ್ತದೆ ಆಗ ಧೂಮಪಾನ ಮಾಡಬೇಕು ಎಂಬ ಹಂಬಲ ಕಡಿಮೆಯಾಗುತ್ತದೆ. ಹೀಗೆ ಇದು ಧೂಮಪಾನ ಮಾಡುವವರಿಗೆ ತಮ್ಮ ಅಭ್ಯಾಸವನ್ನು ತ್ಯಜಿಸಲು ಸಹಾಯ ಮಾಡುತ್ತದೆ.

ಅಲ್ಪ ಪ್ರಮಾಣದ ಸೋಡಿಯಂ ಹೊಂದಿದೆ

ಅಲ್ಪ ಪ್ರಮಾಣದ ಸೋಡಿಯಂ ಹೊಂದಿದೆ

ಬದನೆಕಾಯಿಯಲ್ಲಿ ಸೋಡಿಯಂ ಪ್ರಮಾಣ ಬಹುತೇಕ ಇಲ್ಲವೇ ಇಲ್ಲ. ಇದು ಅಧಿಕ ಪ್ರಮಾಣದ ರಕ್ತದೊತ್ತಡವನ್ನು ನಿವಾರಿಸುತ್ತದೆ ಮತ್ತು ಹೃದ್ರೋಗದ. ಪಾರ್ಶ್ವವಾಯುವಿನ ಮತ್ತು ಮೂತ್ರ ಪಿಂಡದ ಸಮಸ್ಯೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ವಿಟಮಿನ್‍ಗಳು ಮತ್ತು ಖನಿಜಗಳ ಗಣಿ

ವಿಟಮಿನ್‍ಗಳು ಮತ್ತು ಖನಿಜಗಳ ಗಣಿ

ಬದನೆಕಾಯಿಯಲ್ಲಿ ತಕ್ಕ ಮಟ್ಟಿಗೆ ಪ್ರೋಟಿನ್, ವಿಟಮಿನ್ ಸಿ ಮತ್ತು ಕಬ್ಬಿಣಾಂಶಗಳು ಇರುತ್ತವೆ. ಇದರ ಜೊತೆಗೆ ಕ್ಯಾಲ್ಶಿಯಂ, ಪೊಟಾಶಿಯಂ, ಫಾಸ್ಪರಸ್, ಫೊಲಿಕ್ ಆಮ್ಲ ಮತ್ತು ಬೀಟಾ ಕೆರೊಟಿನ್‍ಗಳು ಸಹ ಇರುತ್ತವೆ.

ವಿವಿಧ ಬಗೆಯ ಉಪಶಮನಕಾರಿ

ವಿವಿಧ ಬಗೆಯ ಉಪಶಮನಕಾರಿ

ಅಧ್ಯಯನಗಳ ಪ್ರಕಾರ ದೃಢಪಟ್ಟ ವಿಚಾರವೆಂದರೆ ಬದನೆಕಾಯಿಯಲ್ಲಿ ಹಲವಾರು ಉಪಶಮನಕಾರಿ ಗುಣಗಳು ಇವೆಯಂತೆ. ಇವು ಮೂತ್ರಪಿಂಡದಲ್ಲಿ ಕಂಡು ಬರುವ ಕಲ್ಲುಗಳನ್ನು ಮೂಲದಲ್ಲಿಯೇ ನಿವಾರಿಸಿ ಬಿಡುತ್ತವೆ. ಅಲ್ಲದೆ ಅಸ್ತಮಾ ಮತ್ತು ಹಲ್ಲಿನ ಸಮಸ್ಯೆಗಳನ್ನು ಹಾಗು ಅಥೆರೊಸ್ಕ್ಲೆರೊಸಿಸ್ ( ಅಪಧಮನಿಗಳು ದಪ್ಪವಾಗುವಿಕೆ) ಸಮಸ್ಯೆಗಳನ್ನು ನಿವಾರಿಸಲು ಹೇಳಿ ಮಾಡಿಸಿದ ಔಷಧಿಯಾಗಿದೆ.

English summary

Amazing Health Benefits of Eggplant

Eggplant, also known as aubergine or brinjal, is botanically named Solanum melongena and is a member of the nightshade, or Solanaceae family, which also includes tomatoes, sweet peppers and potatoes. The ancient ancestors of eggplant grew wild in India and were first cultivated in China in the 5th century B.C.
X
Desktop Bottom Promotion