For Quick Alerts
ALLOW NOTIFICATIONS  
For Daily Alerts

ಹೊಳೆಯುವ ತ್ವಚೆಗಾಗಿ 9 ಯೋಗಾಸನಗಳು

By Deepak M
|

ಸೌಂದರ್ಯವು ಕೇವಲ ಹೊರಗಡೆ ಕಾಣುವುದಷ್ಟೇ ಅಲ್ಲ. ಅದು ನಮ್ಮ ಒಳಗಿನಿಂದ ಅಭಿವ್ಯಕ್ತಗೊಳ್ಳಬೇಕು. ಆ ಕಳೆ ಮತ್ತು ಹೊಳಪು ನಿಮ್ಮ ತ್ವಚೆಯಲ್ಲಿ ಬೆಳಗಬೇಕು ಎಂದರೆ ನೀವು ನಿಮ್ಮ ದೇಹ ಮತ್ತು ಆತ್ಮವನ್ನು ದಂಡಿಸಬೇಕಾಗುತ್ತದೆ. ಹೀಗೆ ಹೊಳೆಯುವ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಲು ಯೋಗಾಸನಗಳು ನಿಮಗೆ ಅತ್ಯುತ್ತಮ ರೀತಿಯಲ್ಲಿ ಸಹಕರಿಸುತ್ತವೆ. ಇತ್ತೀಚೆಗೆ ತಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಯುವಕ ಮತ್ತು ಯುವತಿಯರು ಯೋಗಾಸನದ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ.

ನೀವು ಆಂತರಿಕವಾಗಿ ಆರೋಗ್ಯವನ್ನು ಕಾಪಾಡಿಕೊಂಡಿದ್ದರೆ ಮಾತ್ರ ನಿಮ್ಮ ತ್ವಚೆಯಲ್ಲಿ ಸೌಂದರ್ಯವು ಹೊರಗೆ ಅಂದವಾಗಿ ಕಾಣಿಸಿಕೊಳ್ಳುತ್ತದೆ. ಹಾಗೆ ನಿಮ್ಮ ಸೌಂದರ್ಯವನ್ನು ಸುಧಾರಿಸುವ ಕೆಲವೊಂದು ಯೋಗಾಸನಗಳನ್ನು ನಾವು ಇಲ್ಲಿ ಹೆಸರಿಸುತ್ತಿದ್ದೇವೆ, ಇವುಗಳು ನಿಮ್ಮ ತ್ವಚೆಗೆ ಒಳಗಿನಿಂದಲೆ ಹೊಳಪನ್ನು ತಂದು ಕೊಡುತ್ತವೆ.

ಯೋಗಾಸನಗಳು ಅದು ಹೇಗೆ ತ್ವಚೆಗೆ ಒಳಗಿನಿಂದಲೆ ಹೊಳಪನ್ನು ತಂದು ಕೊಡುತ್ತವೆ ಎಂಬುದು ನಿಮ್ಮ ಸಂಶಯವೇ? ವಾಸ್ತವ ಏನೆಂದರೆ, ಯೋಗಾಸನಗಳು ನಮ್ಮ ಶರೀರದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತವೆ. ಅಲ್ಲದೆ ನಮ್ಮ ತ್ವಚೆಯಲ್ಲಿರುವ ಕೋಶಗಳನ್ನು ಕಳಚಿಕೊಳ್ಳಲು ಇವು ನೆರವಾಗುತ್ತವೆ. ತ್ವಚೆಯಲ್ಲಿರುವ ವಿಷಕಾರಿ ಅಂಶಗಳನ್ನು ಇವು ಹೊಡೆದೊಡಿಸುತ್ತವೆ. ಹೀಗೆ ಯೋಗಾಸನದಲ್ಲಿರುವ ಈ ಎಲ್ಲ ಅಂಶಗಳು ಸೇರಿ ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದಲ್ಲದೆ,

ನೀವು ಆರೋಗ್ಯವಾಗಿ ಕಾಣುವಂತೆ ಮಾಡುತ್ತವೆ. ಹೀಗೆ ಯೋಗಾಸನಗಳು ಕೇವಲ ನಿಮ್ಮ ಆರೋಗ್ಯವನ್ನು ಕಾಪಾಡುವುದರ ಜೊತೆಗೆ, ನೀವು ವಯಸ್ಸಾದಂತೆ ಕಾಣುವುದನ್ನು ಸಹ ತಡೆಯುತ್ತವೆ. ನೀವು ನಿರಂತರವಾಗಿ ಯೋಗಾಸನಗಳನ್ನು ಅಭ್ಯಾಸ ಮಾಡುತ್ತಿದ್ದರೆ, ಖಂಡಿತ ನೀವು ನೋಡಲು ಸೊಗಸಾಗಿ ಕಾಣುತ್ತೀರಿ. ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಅಥವಾ ಒತ್ತಡವೇ ಇಲ್ಲದಂತೆ ಮಾಡಿಕೊಳ್ಳುವುದು ಆರೋಗ್ಯದ ಮತ್ತು ಸೌಂದರ್ಯದ ನಿಜವಾದ ಗುಟ್ಟು. ಆ ನಿಟ್ಟಿನಲ್ಲಿ ನಿಮಗೆ ನೆರವಾಗಲು ನಾವು ಇಲ್ಲಿ ಕೆಲವೊಂದು ಯೋಗಾಸನಗಳ ಪಟ್ಟಿಯನ್ನು ಇಲ್ಲಿ ನೀಡಿದ್ದೇವೆ ಓದಿಕೊಳ್ಳಿ ಮತ್ತು ದಿನನಿತ್ಯ ಇವುಗಳನ್ನು ಅಭ್ಯಾಸ ಮಾಡಿ.

ಸಾಮಾನ್ಯ 9 ಯೋಗ ಮುದ್ರಾಗಳು ಮತ್ತು ಅದರ ಆರೋಗ್ಯಕಾರಿ ಲಾಭಗಳು

ಪದ್ಮಾಸನ

ಪದ್ಮಾಸನ

ಪದ್ಮಾಸನದಲ್ಲಿ ಕುಳಿತು ಧ್ಯಾನ ಮಾಡುವುದರಿಂದ ನಿಮ್ಮ ಒತ್ತಡದ ಮಟ್ಟವನ್ನು ಗಣನೀಯವಾಗಿ ಕಡಿಮೆ ಮಾಡಿಕೊಳ್ಳಬಹುದು. ನೀವು ಸುಂದರವಾಗಿ ಕಾಣಲು ಈ ಆಸನವನ್ನು ಒಮ್ಮೆ ಪ್ರಯತ್ನಿಸಿ. ಇದು ಅತ್ಯಂತ ಸುಲಭವಾದ ಆಸನಗಳಲ್ಲಿ ಒಂದಾಗಿದೆ.

ಸುಖಾಸನ

ಸುಖಾಸನ

ಸುಖಾಸನವು ಯೋಗಾಸನಗಳಲ್ಲಿ ಸುಲಭವಾದ ಆಸನಗಳಲ್ಲಿ ಒಂದಾಗಿದೆ. ಇದು ಸಾಮಾನ್ಯವಾಗಿ ನಾವು ಕೂರಲು ಬಳಸುವ ಭಂಗಿಗಳಲ್ಲಿ ಒಂದಾಗಿದೆ. ಈ ಆಸನವು ನಿಮ್ಮ ಮುಖದಲ್ಲಿರುವ ಸ್ನಾಯುಗಳಿಗೆ ವಿಶ್ರಾಂತಿಯನ್ನು ಒದಗಿಸುತ್ತದೆ ಮತ್ತು ನಿಮಗೆ ಯಾವುದೇ ರೀತಿಯ ಮುಖದ ಸುಕ್ಕುಗಳು ಬರದಂತೆ ತಡೆಯುತ್ತದೆ.

ವರುಣ ಮುದ್ರೆ

ವರುಣ ಮುದ್ರೆ

ಯೋಗ ಮುದ್ರೆಗಳಲ್ಲಿ ಒಂದಾದ ವರುಣ ಮುದ್ರೆಯು ನಿಮ್ಮ ದೇಹದಲ್ಲಿನ ನೀರಿನಂಶವನ್ನು ಸಮತೋಲನದಲ್ಲಿಡುತ್ತದೆ. ಇದು ನಿಮ್ಮ ತ್ವಚೆಯಲ್ಲಿ ನೀರಿನಂಶದ ಪರಿಚಲನೆಗೆ ಮತ್ತು ಮೊಯಿಶ್ಚರೈಸ್ ಅಂಶವನ್ನು ಸದಾ ಕಾಪಾಡುವ ಮೂಲಕ ತ್ವಚೆಗೆ ಹೊಳಪನ್ನು ನೀಡುತ್ತದೆ. ಈ ಸರಳವಾದ ಮುದ್ರೆಯನ್ನು ತಿಳಿದು ದಿನವೂ ಅಭ್ಯಾಸ ಮಾಡಿ.

ಪ್ರಾಣಾಯಾಮ

ಪ್ರಾಣಾಯಾಮ

ದೀರ್ಘವಾಗಿ ಉಸಿರಾಡುವ ಕ್ರಿಯೆಯು ನಿಮ್ಮ ದೇಹಕ್ಕೆ ಅಗತ್ಯವಾದ ಆಮ್ಲಜನಕವನ್ನು ಪೂರೈಸಲು ಹೇಳಿ ಮಾಡಿಸಿದ ವ್ಯಾಯಾಮವಾಗಿರುತ್ತದೆ. ಯಾವಾಗ ನೀವು ಹೆಚ್ಚಿನ ಆಮ್ಲಜನಕವನ್ನು ಸೇವಿಸುವಿರೊ, ಆಗ ನಿಮ್ಮ ತ್ವಚೆಯ ಕೋಶಗಳು ಸಹ ಉಸಿರಾಡುತ್ತವೆ. ಹೀಗೆ ನಿಮಗೆ ಹೊಳೆಯುವ ತ್ವಚೆಯು ಲಭಿಸುತ್ತದೆ.

ಸೂರ್ಯ ನಮಸ್ಕಾರ

ಸೂರ್ಯ ನಮಸ್ಕಾರ

ಸೂರ್ಯ ನಮಸ್ಕಾರವು ತ್ವಚೆ ಮತ್ತು ದೇಹಕ್ಕೆ ಹೇಳಿ ಮಾಡಿಸಿದ ವರ್ಕ್‍ಔಟ್ ಆಗಿದೆ. ಪ್ರತಿದಿನ ಸೂರ್ಯ ನಮಸ್ಕಾರವನ್ನು ಮಾಡುವುದರಿಂದ ನಿಮ್ಮ ದೇಹದಲ್ಲಿರುವ ಎಲ್ಲಾ ಕಶ್ಮಲಗಳನ್ನು ಮತ್ತು ವಿಷಕಾರಿ ಪದಾರ್ಥಗಳನ್ನು ಹೊರಗೆ ಹಾಕಬಹುದು.

ಶಿರಸಾಸನ

ಶಿರಸಾಸನ

ತಲೆ ಕೆಳಗೆ ಮಾಡಿ ಕಾಲು ಮೇಲೆ ಮಾಡುವ ಈ ಆಸನವು ಇಡೀ ದೇಹದಲ್ಲಿ ರಕ್ತವು ಸರಿಯಾಗಿ ಹಿಂದಕ್ಕೆ ಮತ್ತು ಮುಂದಕ್ಕೆ ಪರಿಚಲನೆಯಾಗಲು ಸಹಕರಿಸುತ್ತದೆ. ಹೀಗೆ ರಕ್ತವು ಮುಖಕ್ಕು ಸಹ ಸರಬರಾಜಾಗುವ ಮೂಲಕ ಮುಖದ ಕಾಂತಿಯು ಹೆಚ್ಚುತ್ತದೆ.

ಹಲಾಸನ

ಹಲಾಸನ

ಈ ಆಸನವನ್ನು ಮಾಡಲು ನೀವು ನಿಮ್ಮ ದೇಹವನ್ನು ನೇಗಿಲಿನಂತೆ ಮಾಡಬೇಕಾಗುತ್ತದೆ. ಈ ಆಸನವನ್ನು ನೀವು ಮಾಡುವುದರಿಂದ ಜೀರ್ಣ ಕ್ರಿಯೆ ಸರಾಗವಾಗಿ ಮತ್ತು ವೇಗವಾಗಿ ಆಗುತ್ತದೆ. ಉತ್ತಮವಾದ ಜೀರ್ಣ ಕ್ರಿಯೆಯು ಕಾಂತಿಯುತವಾದ ತ್ವಚೆಯನ್ನು ಪಡೆಯಲು ಸಹಕರಿಸುತ್ತದೆ.

ಶವಾಸನ

ಶವಾಸನ

ಶವಾಸನವು ನಿಮ್ಮ ವರ್ಕ್‍ಔಟ್ ನಂತರ ದೇಹಕ್ಕೆ ಅಗತ್ಯವಾದ ವಿಶ್ರಾಂತಿಯನ್ನು ನೀಡಲು ತುಂಬ ಸಹಕರಿಸುತ್ತದೆ. ನೀವು ಈ ಆಸನದಲ್ಲಿ ಶವದಂತೆ ಮಲಗುವುದರಿಂದ ನಿಮ್ಮ ಎಲ್ಲಾ ಸ್ನಾಯುಗಳು ವಿಶ್ರಾಂತಿಯನ್ನು ಪಡೆಯಲು ಸಹಕಾರಿಯಾಗುತ್ತದೆ. ಹೀಗೆ ಇದು ನಿಮ್ಮ ತ್ವಚೆಗೆ ಆಹ್ಲಾದಕತೆಯನ್ನು ಮತ್ತು ವಿಶ್ರಾಂತಿಯನ್ನು ಒದಗಿಸಿ ಅದಕ್ಕೆ ಕಾಂತಿಯನ್ನು ತಂದು ಕೊಡುತ್ತದೆ.

ಶ್ರರ್ವಾಂಗ

ಶ್ರರ್ವಾಂಗ

ನಿಮ್ಮ ಭುಜದ ಭಾಗವನ್ನು ಮೇಲೆ ಮಾಡುವ ಈ ಆಸನವು ಇಡೀ ದೇಹದಲ್ಲಿ ನಿಮ್ಮ ರಕ್ತ ಹಿಂದಕ್ಕೆ ಮತ್ತು ಮುಂದಕ್ಕೆ ಹರಿಯುವಂತೆ ಮಾಡುವ ಉತ್ತಮ ಮಾರ್ಗವಾಗಿದೆ. ಹೀಗೆ ರಕ್ತವು ಮುಖಕ್ಕು ಸಹ ಸರಬರಾಜಾಗುವ ಮೂಲಕ ಮುಖದ ಕಾಂತಿ ಹೆಚ್ಚಾಗುತ್ತದೆ.

English summary

9 Yoga Poses For Healthy Glowing Skin

Yoga is one of the best ways to get glowing skin. Yoga for skin glow is a concept that is effective and increasingly catching up with young men and women. These yoga poses for glowing skin improve your internal health giving you a natural glow of good health.
X
Desktop Bottom Promotion