For Quick Alerts
ALLOW NOTIFICATIONS  
For Daily Alerts

ಉಸಿರಿನ ದುರ್ವಾಸನೆಗೆ ಇನ್ನೂ ಗುಡ್ ಬೈ ಹೇಳಿ!

By Deepak M
|

ಕೆಲವೊಂದು ಆಹಾರಗಳು, ಒಣಗಿದ ಬಾಯಿ ಇತ್ಯಾದಿಗಳು ಉಸಿರಿನ ದುರ್ವಾಸನೆಯನ್ನುಂಟು ಮಾಡುತ್ತವೆ. ಅದರಲ್ಲು ನೀವು ಎಲ್ಲಾದರು ಪ್ರವಾಸ ಹೊರಟಾಗ ಪ್ರತಿ ಬಾರಿ ದುರ್ವಾಸನೆ ಬಂದಾಗ ರೆಸ್ಟ್ ರೂಮಿಗೆ ಹೋಗಿ ಬ್ರಷ್ ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಹಲವಾರು ಮೌತ್ ಫ್ರೆಶ್‍ನರ್‌ಗಳು ಲಭ್ಯವಿವೆ.

ಇದರ ಹೊರತಾಗಿ ನಿಮ್ಮ ಮನೆಯ ಅಡುಗೆ ಮನೆಯಲ್ಲಿ ದೊರೆಯುವ ಕೆಲವೊಂದು ನೈಸರ್ಗಿಕ ಅಂಶಗಳನ್ನು ಬಳಸಿಕೊಂಡು ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಿಕೊಳ್ಳಬಹುದೇ? ಎಂಬ ಪ್ರಶ್ನೆ ನಿಮ್ಮದಾಗಿದ್ದಲ್ಲಿ, ಹೌದು ಎಂಬ ಉತ್ತರ ನಮ್ಮದು. ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪಾದ ದುರ್ವಾಸನೆ ಬೀರುವುದನ್ನು ತಡೆಯಲು ಟಿಪ್ಸ್

1.ಸೌಂಫ್ ಅಥವಾ ಫೆನ್ನೆಲ್ ಬೀಜಗಳು

1.ಸೌಂಫ್ ಅಥವಾ ಫೆನ್ನೆಲ್ ಬೀಜಗಳು

ಊಟವಾದ ನಂತರ ಜೀರ್ಣ ಶಕ್ತಿಯನ್ನು ಹೆಚ್ಚಿಸಲು ಸೌಂಫ್ ಅನ್ನು ಸೇವಿಸುತ್ತಾರೆ. ನಿಮಗೆ ತಿಳಿದಿರಲಿ ಸೌಂಫ್ ಒಂದು ಅತ್ಯುತ್ತಮ ಮೌತ್ ಫ್ರೆಶ್‍ನರ್ ಎಂದು!. ಏಕೆಂದರೆ ಇವು ಬಾಯಿಯಲ್ಲಿ ಲಾಲಾ ರಸದ ಉತ್ಪತ್ತಿಯನ್ನು ಹೆಚ್ಚು ಮಾಡಿ ಕೀಟಾಣುಗಳ ಮೇಲೆ ಹೋರಾಡುವಂತೆ ಮಾಡಿ, ದುರ್ವಾಸನೆಯನ್ನು ತಡೆಯುತ್ತದೆ. ಇದರ ಜೊತೆಗೆ ಸೌಂಫ್ ತೇಗು ಮತ್ತು ಹೊಟ್ಟೆಯಲ್ಲಿ ಆಮ್ಲೀಯ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ನಿಮ್ಮ ಬಾಯಿಯಲ್ಲಿ ಸುವಾಸನೆಯನ್ನು ತರಲು ಒಂದಿಷ್ಟು ಸೌಂಫ್ ಸೇವಿಸಿ.

2.ಮಿಂಟ್ ಅಥವಾ ಪುದಿನಾ

2.ಮಿಂಟ್ ಅಥವಾ ಪುದಿನಾ

ಮಾರುಕಟ್ಟೆಯಲ್ಲಿ ದೊರೆಯುವ ಬಹುತೇಕ ಮೌತ್ ಫ್ರೆಶ್‍ನರ್‌ಗಳಲ್ಲಿ ಪುದಿನಾವನ್ನು ಒಂದು ಪದಾರ್ಥವಾಗಿ ಬಳಸಿರುತ್ತಾರೆ. ಪುದಿನಾ ಎಲೆಗಳನ್ನು ಅಡುಗೆಗಳಲ್ಲಿ ಸೌಂದರ್ಯಕ್ಕೆ ಮತ್ತು ರುಚಿಗಾಗಿ ಬಳಸುವುದು ಚಾಲ್ತಿಯಲ್ಲಿದೆ. ಇವುಗಳು ತಮ್ಮಲ್ಲಿರುವ ಕಟು ಮತ್ತು ತಂಪು ಗುಣಗಳಿಂದ ಬಾಯಿಯ ದುರ್ವಾಸನೆಯನ್ನು ತತ್‍ಕ್ಷಣಕ್ಕೆ ಕಡಿಮೆ ಮಾಡುತ್ತವೆ. ಮುಂದೆ ಬಾಯಿಯ ದುರ್ವಾಸನೆಯು ನಿಮ್ಮನ್ನು ಕಾಡಿದರೆ ಕೆಲವು ಪುದಿನಾ ಎಲೆಗಳನ್ನು ತೆಗೆದುಕೊಂಡು ಜಗಿಯಿರಿ ಅಥವಾ ಒಂದು ಪುದಿನಾ ಟೀಯನ್ನು ಕುಡಿಯಿರಿ.

3.ಅನೈಸ್ ಬೀಜ ( ಬಡೇ ಸೋಪು) ಅಥವಾ ಚೋಟಿ ಸೌಂಫ್

3.ಅನೈಸ್ ಬೀಜ ( ಬಡೇ ಸೋಪು) ಅಥವಾ ಚೋಟಿ ಸೌಂಫ್

ಡೆಸರ್ಟ್ ಮತ್ತು ಬೇಕ್ ಮಾಡಲಾಗುವ ಉತ್ಪನ್ನಗಳಲ್ಲಿ ಇದು ಪ್ರಧಾನವಾಗಿ ಬಳಕೆಯಾಗುತ್ತವೆ. ಜೊತೆಗೆ ಮದ್ಯದಲ್ಲಿ ಸುವಾಸನೆಯನ್ನು ತರಲು ಸಹ ಇದು ಬಳಕೆಯಾಗುತ್ತದೆ. ಈ ಬೀಜಗಳಲ್ಲಿರುವ ಅನೆಥೊಲ್ ಅಂಶವು ಸಿಹಿ ತಿಂಡಿಗಳಿಗೆ ಒಂದು ಬಗೆಯ ವಿಶೇಷ ಪರಿಮಳವನ್ನು ನೀಡುತ್ತವೆ. ಅನೈಸ್ ಬೀಜಗಳಲ್ಲಿರುವ ಕಡು ಪರಿಮಳ ಹಾಗು ಅಂಟಿ ಬ್ಯಾಕ್ಟೀರಿಯಲ್ ಅಂಶಗಳು ಅತ್ಯುತ್ತಮ ಮೌತ್ ಫ್ರೆಶ್‍ನರ್ ಆಗಿ ಕಾರ್ಯ ನಿರ್ವಹಿಸುತ್ತವೆ. ಈ ಬೀಜಗಳನ್ನು ನೀವು ಹಾಗೆಯೇ ಜಗಿಯಬಹುದು ಅಥವಾ ಬಿಸಿ ನೀರಿನಲ್ಲಿ ಕುದಿಸಿ, ನೈಸರ್ಗಿಕ ಮೌತ್ ವಾಷ್‍ನಂತೆ ಬಳಸಬಹುದು. ( ಓದಿ; ಉಸಿರಿನ ದುರ್ವಾಸನೆಯ ಕುರಿತು ನಿಮಗೆ ತಿಳಿದಿರದ 10 ಕಾರಣಗಳು)

4.ಪಾರ್ಸ್ಲೀ ಅಥವಾ ಅಜಮೊಡ್

4.ಪಾರ್ಸ್ಲೀ ಅಥವಾ ಅಜಮೊಡ್

ಅಡುಗೆ ತಯಾರು ಮಾಡುವಾಗ ಪಾರ್ಸ್ಲೀಯು ಒಂದು ನಿರುಪಯೋಗಿ ಸೊಪ್ಪು ಎಂದು ಪರಿಗಣಿಸಿದ್ದೀರಾ? ಮತ್ತೊಮ್ಮೆ ಯೋಚಿಸಿ. ಪಾರ್ಸ್ಲೀಯಲ್ಲಿ ಕ್ಲೋರೊಫಿಲ್ಲ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವುಗಳು ಕೀಟಾಣುಗಳೊಂದಿಗೆ ಹೋರಾಡುವ ಗುಣಗಳನ್ನು ಹೊಂದಿರುತ್ತವೆ. ಆಹಾರದಲ್ಲಿ ಇದನ್ನು ಸೇವಿಸುವಾಗ ಕಡೆಯದಾಗಿ ಸೇವಿಸುವ ಅಭ್ಯಾಸವನ್ನು ಇಟ್ಟುಕೊಳ್ಳಿ. ಇದು ಅತ್ಯುತ್ತಮವಾದ ಬ್ರೀಥ್ ಫ್ರೆಶ್‍ನರ್‌ ಆಗಿ ಕಾರ್ಯ ನಿರ್ವಹಿಸುತ್ತದೆ. ಇದರ ಎಣ್ಣೆಯನ್ನು ಕೆಲವು ಬ್ರೀಥ್ ಫ್ರೆಶ್‍ನರ್‌ಗಳಲ್ಲಿ ಬಳಸುತ್ತಾರೆ ಮತ್ತು ಕೆಲವು ಸೋಪ್‍ಗಳಲ್ಲಿ ಪರಿಮಳಕಾರಕಗಳಾಗಿ ಬಳಸುತ್ತಾರೆ.

5.ಲವಂಗ

5.ಲವಂಗ

ಅಡುಗೆ ಮಾಡುವಾಗ ಲವಂಗವನ್ನು ಸುವಾಸನೆಗಾಗಿ ಮತ್ತು ರುಚಿಗಾಗಿ ಬಳಸುತ್ತಾರೆ. ಬಹು ಹಿಂದಿನ ಕಾಲದಿಂದಲು ಇದನ್ನು ಹಲ್ಲು ನೋವಿಗೆ ರಾಮ ಬಾಣವಾಗಿ ಬಳಸುತ್ತಿದ್ದಾರೆ. ಜೊತೆಗೆ ಹಲವಾರು ಟೂಥ್ ಪೇಸ್ಟ್ ಮತ್ತು ಮೌತ್ ವಾಷ್‍ಗಳಲ್ಲಿ ಇದನ್ನು ಬಳಸಿರುತ್ತಾರೆ. ಇದು ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುವ ಅತ್ಯುತ್ತಮ ಮನೆಮದ್ದಾಗಿದೆ. ಲವಂಗದಲ್ಲಿ ಯೂಜೆನೊಲ್ ಎಂಬ ಅಂಟಿ ಬ್ಯಾಕ್ಟೀರಿಯಲ್ ಅಂಶವು ಯಥೇಚ್ಛವಾಗಿದೆ. ಮತ್ತೇಕೆ ತಡ ದುರ್ವಾಸನೆ ಬಂದಾಗ ಒಂದೆರಡು ಲವಂಗಗಳನ್ನು ಜಗಿಯಿರಿ. ( ಓದಿ; 10 ಉಸಿರಿನಿ ದುರ್ವಾಸನೆಕಾರಕ ಪೆಡಂಭೂತಗಳನ್ನು ತೊಲಗಿಸಿ!)

6.ಚಕ್ಕೆ ಅಥವಾ ದಾಲ್ಚಿನ್ನಿ

6.ಚಕ್ಕೆ ಅಥವಾ ದಾಲ್ಚಿನ್ನಿ

ಅತ್ಯುತ್ತಮವಾದ ಮಸಾಲೆ ಪದಾರ್ಥವಾದ ಚಕ್ಕೆಯಲ್ಲಿ ಸಹ ಕೆಲವೊಂದು ಅಂಟಿ ಬ್ಯಾಕ್ಟೀರಿಯಲ್ ಅಂಶಗಳು ಇದ್ದು, ಇದು ಉಸಿರಿನ ದುರ್ವಾಸನೆಯನ್ನು ತಡೆಯುತ್ತದೆ. ಇದನ್ನು ನೀವು ಬೇಕಾದರೆ ಜಗಿಯಬಹುದು ಅಥವಾ ಚಹಾದಲ್ಲಿ ಬೆರೆಸಿಕೊಂಡು ಕುಡಿಯಬಹುದು. ಇದರ ಜೊತೆಗೆ ನಿಮಗೆ ಬೇಕಾಗಿದ್ದಲ್ಲಿ, ಈ ಚಕ್ಕೆಗಳನ್ನು ನೀರಿನಲ್ಲಿ ಹಾಕಿ ಕುದಿಸಿ, ಆರಿಸಿ ಮೌತ್ ವಾಷ್‍ನಂತೆ ಸಹ ಬಳಸಬಹುದು ( ಓದಿ; ಚಕ್ಕೆಯ ( ದಾಲ್ಚಿನ್ನಿ) ಆರೋಗ್ಯಕಾರಿ ಪ್ರಯೋಜನಗಳು)

7.ಏಲಕ್ಕಿ ಅಥವಾ ಇಲಾಚಿ

7.ಏಲಕ್ಕಿ ಅಥವಾ ಇಲಾಚಿ

ಸಿಹಿ ತಿಂಡಿಗಳಲ್ಲಿ ಮತ್ತು ಅಡುಗೆಯಲ್ಲಿ ಬಳಸಲಾಗುವ ಏಲಕ್ಕಿಯಲ್ಲಿ ಅತ್ಯುತ್ತಮ ಪರಿಮಳಕಾರಕ ಗುಣಗಳು ಇರುತ್ತವೆ. ಬಾಯಿಯು ದುರ್ವಾಸನೆಯನ್ನು ಸೂಸಿದಾಗ ಸುಮ್ಮನೆ ಒಂದು ಏಲಕ್ಕಿಯನ್ನು ಬಾಯಿಯಲ್ಲಿ ಹಾಕಿಕೊಂಡು ಜಗಿಯಿರಿ, ದುರ್ವಾಸನೆಯು ಓಡಿ ಹೋಗುತ್ತದೆ. ಇದರ ಜೊತೆಗೆ ಆಹಾರದ ಕೊನೆಯಲ್ಲಿ ಏಲಕ್ಕಿ ಚಹಾವನ್ನು ಸೇವಿಸುವುದು ಸಹ ಉತ್ತಮವಾದ ಫಲಿತಾಂಶವನ್ನು ನೀಡುತ್ತದೆ.

8.ಸಿಟ್ರಸ್ ಹಣ್ಣುಗಳು

8.ಸಿಟ್ರಸ್ ಹಣ್ಣುಗಳು

ಕಿತ್ತಳೆ, ನಿಂಬೆ ಇತ್ಯಾದಿ ಹಣ್ಣುಗಳು ನಿಮ್ಮ ಬಾಯಿಯಲ್ಲಿ ಲಾಲಾ ರಸದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಲಾಲಾ ರಸವು ಪ್ಲಾಕ್,ನಿರ್ಜೀವ ಕೋಶಗಳಿಂದ ಮತ್ತು ಆಹಾರದ ಕಣಗಳಿಂದ ಬಾಯಿಯಲ್ಲಿ ಉಂಟಾಗುವ ದುರ್ವಾಸನೆಯನ್ನು ಹತೋಟಿಗೆ ತರುತ್ತದೆ. ( ಓದಿ; ನಿಮ್ಮ ಆರೋಗ್ಯದ ಬಗ್ಗೆ ನಿಮ್ಮ ಬಾಯಿ ಏನು ಹೇಳುತ್ತದೆ)

9.ಕೊತ್ತಂಬರಿ ಅಥವಾ ಧನಿಯಾ

9.ಕೊತ್ತಂಬರಿ ಅಥವಾ ಧನಿಯಾ

ಈರುಳ್ಳಿ ಮತ್ತು ಬೆಳ್ಳುಳ್ಳಿಯಂತಹ ಆಹಾರ ಪದಾರ್ಥಗಳು ನಿಮ್ಮ ಬಾಯಿಯಲ್ಲಿ ದುರ್ವಾಸನೆಯನ್ನು ಉಂಟು ಮಾಡುತ್ತವೆ. ಇದಕ್ಕಾಗಿ ಕೊತ್ತಂಬರಿಯನ್ನು ಆಹಾರದ ತಯಾರಿಕೆಯಲ್ಲಿ ಬಳಸಿದರೆ ಆ ದುರ್ವಾಸನೆಕಾರಕಗಳನ್ನು ಹತೋಟಿಯಲ್ಲಿಡಬಹುದು. ನಿಮ್ಮ ಬಾಯಿಯ ದುರ್ವಾಸನೆಯನ್ನು ತಡೆಯಲು ಊಟದ ನಂತರ ಸ್ವಲ್ಪ ಕೊತ್ತಂಬರಿ ಎಲೆಗಳನ್ನು ಸೇವಿಸಿ. ಇದರ ಜೊತೆಗೆ ಧನಿಯಾ ಬೀಜಗಳನ್ನು ಉರಿದು ಅದಕ್ಕೆ ಒಂದು ಚಿಟಿಕೆ ಉಪ್ಪನ್ನು ಸೇರಿಸಿ ಮೌತ್ ಫ್ರೆಶ್‍ನರ್ ರೀತಿ ಬಳಸಬಹುದು.


English summary

9 ways to lose bad breath naturally

Certain foods, dry mouth, etc. can leave you with bad breath. But when you are on the go you cannot always rush to a restroom to brush your teeth.
X
Desktop Bottom Promotion