For Quick Alerts
ALLOW NOTIFICATIONS  
For Daily Alerts

ಏನೇ ಕಸರತ್ತು ಮಾಡಿದರೂ, ಬೊಜ್ಜು ಕರಗದಿರಲು ಕಾರಣಗಳೇನು?

|

ಜಿಮ್‌ನಲ್ಲಿ ಹೆಚ್ಚು ಕಡಿಮೆ ಎಲ್ಲಾ ಸಮಯವನ್ನು ಕಳೆದರೂ ನಿಮ್ಮ ಹೊಟ್ಟೆಯ ಬೊಜ್ಜು ಕರಗುತ್ತಿಲ್ಲವೇ? ಆದರೆ ವರ್ಕ್‌ಔಟ್ ಮಾಡದೇ ನಿಮ್ಮ ಹೊಟ್ಟೆಯ ಬೊಜ್ಜು ಕರಗುವುದು ಸಾಧ್ಯವಿಲ್ಲದ ಮಾತಾಗಿದೆ. ಕೇವಲ ಡಯೆಟ್ ಮಾಡುವುದು ಮಾತ್ರ ನಿಮ್ಮ ಹೊಟ್ಟೆಯ ಬೊಜ್ಜನ್ನು ಕರಗಿಸಲು ಸಹಕಾರಿಯಾಗುವುದಿಲ್ಲ ಇದು ನಿಮ್ಮ ಜೀನ್ಸ್ ಅನ್ನು ಅವಲಂಬಿಸಿರುತ್ತದೆ ಎಂಬುದು ನಿಮಗೆ ಗೊತ್ತೇ? ನೀವು ವರ್ಕ್‌‌ಔಟ್ ಮಾಡುತ್ತಿದ್ದರೂ ನಿಮ್ಮ ಹೊಟ್ಟೆಯ ಬೊಜ್ಜು ಕರಗುತ್ತಿಲ್ಲ ಎಂದಾದಲ್ಲಿ ಅದಕ್ಕೆ ಕಾರಣ ಇದೇ ಎಂಬುದಾಗಿದೆ.

ಕೇವಲ ಕೆಲಸ ಮಾಡುವುದು ಮಾತ್ರ ಸಾಕಾಗುವುದಿಲ್ಲ. ನಿಮ್ಮ ಹೊಟ್ಟೆಯ ಬೊಜ್ಜನ್ನು ಕರಗಿಸಲು ನೀವು ಕ್ರಮ ಪ್ರಕಾರವಾದ ಸೂಕ್ತವಾದ ವ್ಯಾಯಾಮವನ್ನು ಮಾಡಬೇಕಾಗುತ್ತದೆ. ಏರೋಬಿಕ್ಸ್ ವ್ಯಾಯಾಮಗಳು ಹೊಟ್ಟೆಯ ಬೊಜ್ಜನ್ನು ಕರಗಿಸಲು ಸಹಕಾರಿ ಆಗುತ್ತದೆ ಎಂದು ನಾವು ತಿಳಿದಿರುತ್ತೇವೆ, ಆದರೆ ನಿಮ್ಮ ಸೊಂಟದ ಸುತ್ತಲೂ ಸಂಗ್ರಹಗೊಂಡಿರುವ ಬೊಜ್ಜನ್ನು ಕರಗಿಸಲು ಮಾತ್ರ ಏರೋಬಿಕ್ಸ್ ನೆರವನ್ನು ನೀಡುತ್ತದೆ. ಹಾಗಾಗಿ ಇದು ಮಾತ್ರ ನಿಮ್ಮ ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಕಾರಿಯಾಗುವುದಿಲ್ಲ ಇದಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿರುವ ವ್ಯಾಯಾಮವನ್ನು ಮಾಡುವುದು ಅಗತ್ಯವಾಗಿದೆ.

ನಿಮ್ಮ ಹೊಟ್ಟೆಯ ಬೊಜ್ಜು ಕರಗದಿರಲು ಹಲವಾರು ಕಾರಣಗಳಿವೆ. ನೀವು ಸರಿಯಾದ ವ್ಯಾಯಾಮವನ್ನು ಮಾಡಿ ಸೂಕ್ತವಾದ ಆಹಾರ ಪದ್ಧತಿಯನ್ನು ಕೈಗೊಂಡರೆ ಮಾತ್ರವೇ ಹೊಟ್ಟೆಯ ಬೊಜ್ಜು ಕರಗಲು ಸಾಧ್ಯ. ನಿಮ್ಮ ಬೊಜ್ಜು ಕರಗದಿರಲು ಕಾರಣಗಳೇನು ಹಾಗೂ ಬೊಜ್ಜು ಕರಗಿಸುವ ಸೂಕ್ತ ಮನೆ ಮದ್ದುಗಳನ್ನು ಕೆಳಗಿನ ಸ್ಲೈಡ್‌ಗಳಲ್ಲಿ ನಾವು ವಿವರವಾಗಿ ನೀಡುತ್ತಿದ್ದೇವೆ.

ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಟಿಪ್ಸ್

ನೀವು 40 ಅನ್ನು ದಾಟಿದ್ದರೆ

ನೀವು 40 ಅನ್ನು ದಾಟಿದ್ದರೆ

ನಿಮಗೆ ವಯಸ್ಸಾಗುತ್ತಿದ್ದಂತೆ ನಿಮ್ಮ ಸೊಂಟದ ಸುತ್ತ ಮತ್ತು ಹೊಟ್ಟೆಯ ಸುತ್ತಲೂ ಬೊಜ್ಜು ಸಂಗ್ರಹವಾಗುತ್ತದೆ. ನಿಮ್ಮ ಚಯಾಪಚಯ ಕ್ರಿಯೆಯನ್ನು ನಿಮ್ಮ ವಯಸ್ಸು ಕಡಿಮೆ ಮಾಡುತ್ತದೆ ಇದಕ್ಕಾಗಿ ಹೆಚ್ಚಿನ ವ್ಯಾಯಾಮವನ್ನು ನೀವು ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ವಯಸ್ಸಾಗುತ್ತಿದ್ದಂತೆ ಅಧಿಕ ಒತ್ತಡ ಅಥವಾ ಕೆಲವೊಂದು ಕಾಯಿಲೆಗೆ ನಿರಂತರ ಚಿಕಿತ್ಸೆಯನ್ನು ಪಡೆಯುತ್ತಿರುವವರು ದಪ್ಪಗಾಗುತ್ತಾರೆ. ಅಲ್ಲದೆ 40 ವರ್ಷದ ಮೇಲೆ ಸ್ನಾಯುಗಳು ಸಡಿಲಗೊಂಡು ಕೆಲವರು ವಿಪರೀತ ದಪ್ಪಗಾಗುತ್ತಾರೆ. ಅಂತಹ ದೇಹ ತೂಕವನ್ನು ಸರಿಯಾದ ವ್ಯಾಯಾಮದಿಂದ ಮಾತ್ರ ಕರಗಿಸಲು ಸಾಧ್ಯ.

ಬೊಜ್ಜು ಕರಗಿಸುವುದರ ಬಗ್ಗೆ ನಮ್ಮಲ್ಲಿರುವ ಕಲ್ಪನೆಗಳಿವು!

ಸಾಕಷ್ಟು ಕ್ಯಾಲೋರಿಗಳನ್ನು ಕರಗಿಸದೇ ಇರುವುದು

ಸಾಕಷ್ಟು ಕ್ಯಾಲೋರಿಗಳನ್ನು ಕರಗಿಸದೇ ಇರುವುದು

ನೀವು ಸೇಬು ಹಣ್ಣಿನಂತೆ ಊದಿಕೊಂಡಿದ್ದೀರಾ? ಕೆಲವರಿಗೆ ಪೃಷ್ಠ ಮತ್ತು ತೊಡೆಗಿಂತ ಜಾಸ್ತಿ ಸೊಂಟದ ಸುತ್ತ ಹೆಚ್ಚು ಕೊಬ್ಬು ಇರುತ್ತದೆ. ಇದಕ್ಕಾಗಿ ನೀವು ಹೆಚ್ಚಿನ ವ್ಯಾಯಾಮಗಳನ್ನು ಮಾಡಬೇಕಾಗುತ್ತದೆ.

ತಪ್ಪಾದ ವ್ಯಾಯಾಮವನ್ನು ನೀವು ಮಾಡುತ್ತಿದ್ದೀರಿ

ತಪ್ಪಾದ ವ್ಯಾಯಾಮವನ್ನು ನೀವು ಮಾಡುತ್ತಿದ್ದೀರಿ

ನಿಮ್ಮ ಏರೋಬಿಕ್ಸ್‌ಗಾಗಿ ತಪ್ಪಾದ ವ್ಯಾಯಾಮವನ್ನು ನೀವು ಮಾಡುತ್ತಿದ್ದೀರಿ. ನಿಮ್ಮ ಹೊಟ್ಟೆಯ ಬೊಜ್ಜನ್ನು ಕರಗಿಸಲು ಕ್ರಂಚಸ್ ಸೂಕ್ತ ವ್ಯಾಯಾಮವಾಗಿದೆ. ನೀವು ಇದರೊಂದಿಗೆ ಯೋಗ, ತೂಕ ಇಳಿಕೆ ತರಬೇತಿ ಮತ್ತು ಕೆಲವೊಂದು ಇತರ ವ್ಯಾಯಾಮಗಳನ್ನು ಮಾಡುವುದು ಅತೀ ಅಗತ್ಯವಾಗಿದೆ.

ನೀವು ಪಿಸಿಓಡಿ ಅನ್ನು ಹೊಂದಿದ್ದರೆ

ನೀವು ಪಿಸಿಓಡಿ ಅನ್ನು ಹೊಂದಿದ್ದರೆ

ನೀವು ಪಾಲಿಸಿಸ್ಟಿಕ್ ಓವರೀಸ್ ಅನ್ನು ಹೊಂದಿದ್ದರೆ, ನಿಮ್ಮ ಟೆಸ್ಟೋಸ್ಟಿಯೊರೋನ್ ಹಂತಗಳು (ಹಾರ್ಮೋನು) ಹೆಚ್ಚು ಎತ್ತರದಲ್ಲಿರುತ್ತದೆ. ನಿಮ್ಮ ದೇಹದ ಮಧ್ಯದ ಆಕಾರವನ್ನು ಇದು ಸೂಕ್ತವಾಗಿ ಸುಂದರಗೊಳಿಸಿ ನಿಮ್ಮನ್ನು ಅಂದಗೊಳಿಸುತ್ತದೆ.

ಒತ್ತಡಕ್ಕೆ ಒಳಗಾಗಿದ್ದರೆ

ಒತ್ತಡಕ್ಕೆ ಒಳಗಾಗಿದ್ದರೆ

ಒತ್ತಡಕ್ಕೊಳಪಟ್ಟ ಹಾರ್ಮೋನುಗಳು ನಿಮ್ಮ ದೇಹದಲ್ಲಿ ಕೊಬ್ಬನ್ನು ಸಂಗ್ರಹಿಸುತ್ತದೆ. ನೀವು ಒತ್ತಡಕ್ಕೆ ಒಳಗಾಗಿದ್ದಲ್ಲಿ ಯಾವುದೇ ರೀತಿಯ ವ್ಯಾಯಾಮ ನಿಮ್ಮ ಸಹಾಯಕ್ಕೆ ಬರುವುದಿಲ್ಲ. ಇನ್ನು ಮುಂದೆ ನಿಮಗೆ ಹೆಚ್ಚು ಒತ್ತಡವಾದಾಗ ಕಣ್ಣು ಮುಚ್ಚಿಕೊಂಡು ನಿಮ್ಮ ಉಸಿರಾಟವನ್ನು ಆಲಿಸಿ. ಜೀವನದಲ್ಲಿ ಸ್ವಲ್ಪ ಹಾಸ್ಯವಿರಲಿ. ಒಳ್ಳೆಯ ರೀತಿಯಲ್ಲಿ ನಗುವುದರಿಂದ ರಕ್ತ ಸಂಚಲನ ಸರಿಯಾಗಿ ಆಗುತ್ತದೆ ಮತ್ತು ದೇಹ ವಿಶ್ರಾಂತಿ ಪಡೆದು ಒತ್ತಡವನ್ನು ಕಡಿಮೆ ಮಾಡುತ್ತದೆ ಇದರಿಂದ ಹೆಚ್ಚು ಹಸಿವಾಗುವುದು ಕೂಡ ನಿಲ್ಲುತ್ತದೆ.

ನೀವು ಸಾಕಷ್ಟು ನಿದ್ದೆ ಮಾಡದಿದ್ದರೆ

ನೀವು ಸಾಕಷ್ಟು ನಿದ್ದೆ ಮಾಡದಿದ್ದರೆ

ನಿದ್ದೆಯನ್ನು ತ್ಯಜಿಸುವುದೂ ಕೂಡ ತೂಕ ಏರುವಲ್ಲಿ ಪಾತ್ರ ವಹಿಸುತ್ತದೆ. ನಿಮ್ಮ ದೇಹಕ್ಕೆ ಕನಿಷ್ಟ ಪಕ್ಷ ಎಂಟು ಗಂಟೆಗಳ ನಿದ್ದೆ ಅತೀ ಅಗತ್ಯವಾಗಿದೆ. ಇದರಿಂದ ನಿಮ್ಮ ದೇಹಕ್ಕೆ ಸಾಕಷ್ಟು ವಿಶ್ರಾಂತಿ ದೊರಕಿ ವ್ಯಾಯಾಮದ ಉಪಯೋಗ ದೊರಕುತ್ತದೆ.

ಹೊಟ್ಟೆಯ ಕೊಬ್ಬು ನಿಮ್ಮ ಅಭ್ಯಾಸವಾಗಿದ್ದರೆ

ಹೊಟ್ಟೆಯ ಕೊಬ್ಬು ನಿಮ್ಮ ಅಭ್ಯಾಸವಾಗಿದ್ದರೆ

ಕೆಲವರು ಸೇಬು ಹಣ್ಣಿನಂತೆ ಊದಿಕೊಂಡಿರುತ್ತಾರೆ. ಇವರಿಗೆ ಪೃಷ್ಠ ಮತ್ತು ತೊಡೆಯಲ್ಲಿ ಕೊಬ್ಬು ಸಂಗ್ರಹವಾಗದೇ ಹೊಟ್ಟೆಯ ಸೊಂಟದ ಸುತ್ತ ಕೊಬ್ಬು ಉತ್ಪನ್ನವಾಗುತ್ತದೆ. ಇಂತಹವರು ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಾಕಷ್ಟು ವ್ಯಾಯಾಮವನ್ನು ಮಾಡುವುದು ಅಗತ್ಯವಾಗಿದೆ.

ಹೊಟ್ಟೆ ಕರಗಬೇಕೆಂದರೆ ಈ ರೀತಿ ಮಾಡಲೇಬೇಕು

ಕೊಬ್ಬುಳ್ಳ ಆಹಾರ

ಕೊಬ್ಬುಳ್ಳ ಆಹಾರ

ಚಿಪ್ಸ್, ಅಥವಾ ಸಿದ್ಧಪಡಿಸಿದ ಆಹಾರವನ್ನು ನೀವು ತಿನ್ನುತ್ತಿದ್ದರೆ ನೀವು ತೆಳ್ಳಗಾಗುವುದು ದೂರದ ಮಾತಾಗಿರುತ್ತದೆ, ಹಾಗಾಗಿ ಇಂತಹ ಎಣ್ಣೆ ಅಂಶವಿರುವ ಆಹಾರಗಳಿಂದ ಸಾಕಷ್ಟು ದೂರವಿರಿ.

ಒಂದೇ ರೀತಿಯ ವರ್ಕ್‌ಔಟ್ ಅನ್ನು ಮಾಡುತ್ತಿದ್ದರೆ

ಒಂದೇ ರೀತಿಯ ವರ್ಕ್‌ಔಟ್ ಅನ್ನು ಮಾಡುತ್ತಿದ್ದರೆ

ಪ್ರತಿಯೊಂದು ಹಂತದಲ್ಲೂ ನಿಮ್ಮ ದೇಹಕ್ಕೆ ವ್ಯಾಯಾಮವನ್ನು ನೀವು ನೀಡಬೇಕು. ಕೆಲವೊಂದು ನಿರ್ದಿಷ್ಟ ಕ್ರಂಚ್‌ಗಳಿಗೆ ನಿಮ್ಮ ದೇಹ ಹೊಂದಿಕೊಂಡಿದ್ದರೆ, ನಿಮ್ಮ ಹೊಟ್ಟೆಯ ಕೊಬ್ಬು ಕರಗುವುದಿಲ್ಲ. ದೇಹದ ತೂಕವನ್ನು ಕಳೆದುಕೊಳ್ಳಲು ನೀವು ವಿಭಿನ್ನ ರೀತಿಯ ವ್ಯಾಯಾಮವನ್ನು ಮಾಡಬೇಕಾಗುತ್ತದೆ.

ಹಾಗಾದರೆ ಸುಲಭವಾಗಿ ಹೊಟ್ಟೆಯ ಬೊಜ್ಜು ಕರಗಿಸುವುದು ಹೇಗೆ?

ಹಾಗಾದರೆ ಸುಲಭವಾಗಿ ಹೊಟ್ಟೆಯ ಬೊಜ್ಜು ಕರಗಿಸುವುದು ಹೇಗೆ?

ನಗರದ ದೊಡ್ಡ-ದೊಡ್ಡ ಕಂಪನಿಗಳಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಕೂತುಕೊಂಡು ಮಾಡುವ ಕೆಲಸ ಆಗಿರುತ್ತದೆ. ಹೆಚ್ಚು ನಡೆದಾಡುವುದಿಲ್ಲ. ಎರಡನೇ ಮಹಡಿಗೆ ಹೋಗುವುದಾದರೆ ಲಿಫ್ಟ್ ಬಳಸಿ ಹೋಗುತ್ತಾರೆ. ಪ್ರತಿದಿನ ವ್ಯಾಯಾಮ ಮಾಡುವ ಅಭ್ಯಾಸ ಹೆಚ್ಚಿನವರಲ್ಲಿ ಇರುವುದಿಲ್ಲ. ಇವುಗಳ ಪರಿಣಾಮ ಹೊಟ್ಟೆ ಮೇಲೆ ಬೀಳುತ್ತದೆ. ಬೊಜ್ಜು ಹೊಟ್ಟೆ ಬರಲಾರಂಭಿಸುತ್ತದೆ. ನಿಧಾನಕ್ಕೆ ಕೊಲೆಸ್ಟ್ರಾಲ್ , ಡಯಾಬಿಟಿಸ್ ನಂತಹ ಕಾಯಿಲೆಗಳು ಬರುತ್ತವೆ. ಹಾಗಾದರೆ ಸುಲಭವಾಗಿ ಹೊಟ್ಟೆಯ ಬೊಜ್ಜು ಕರಗಿಸುವುದು ಹೇಗೆ ಎಂಬುದಕ್ಕೆ ಮುಂದಿನ ಸ್ಲೈಡ್ ಅನ್ನು ಕ್ಲಿಕ್ ಮಾಡಿ

ಗೋಧಿ ಹುಲ್ಲು

ಗೋಧಿ ಹುಲ್ಲು

ಜ್ಯೂಸ್ ನಂತೆ ಕುಡಿಯಬಹುದಾದ ಈ ಗೋಧಿ ಹುಲ್ಲಿನ ರಸದಲ್ಲಿ ಅಧಿಕವಾದ ನಾರಿನಂಶವಿದೆ. ಈ ನಾರಿನಂಶ ದೇಹದಲ್ಲಿ ಬೊಜ್ಜು ಮನೆಮಾಡದಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲ, ಇದರಲ್ಲಿ ಕಬ್ಬಿಣಾಂಶ, ಪ್ರೊಟೀನ್ ಕೂಡ ಇದೆ. ಪಾಲಾಕ್ ಸೊಪ್ಪು ಮತ್ತು ಮೊಳಕೆ ಕಾಳಿಗಿಂತ ಹೆಚ್ಚಿನ ಪ್ರಯೋಜನವನ್ನು ಗೋಧಿ ಹುಲ್ಲಿನಿಂದ ಪಡೆದುಕೊಳ್ಳಬಹುದು.

ಶುಂಠಿ

ಶುಂಠಿ

ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿರುವ ಶುಂಠಿ ಬೊಜ್ಜು ಕರಗಿಸುವಲ್ಲಿ ಹೆಚ್ಚು ಸಹಕಾರಿ. ಹಾಲಿನೊಂದಿಗೆ ಒಂದು ಚಮಚ ಶುಂಠಿ ಪೌಡರ್ ಬೆರೆಸಿ ಕುಡಿದರೆ ಫಿಟ್‌ನೆಸ್ ಕಾಪಾಡಿಕೊಳ್ಳಬಹುದು.

 ಕೆಂಪು ಮೆಣಸಿನಕಾಯಿ

ಕೆಂಪು ಮೆಣಸಿನಕಾಯಿ

ಕೆಂಪು ಮೆಣಸಿನಕಾಯಿ ಸೇವನೆಯಿಂದ ಜೀರ್ಣಕ್ರಿಯೆ ಚುರುಕುಗೊಳ್ಳುವುದಲ್ಲದೆ ದೇಹದಲ್ಲಿ ಶಕ್ತಿಯ ಮಟ್ಟವನ್ನೂ ಹೆಚ್ಚಿಸುತ್ತದೆ. ಬೊಜ್ಜು ಕರಗಿಸುವಲ್ಲಿಯೂ ಹೆಚ್ಚು ಶಕ್ತಿಯುತವಾಗಿರುವ ಮೆಣಸಿನಕಾಯಿಯನ್ನು ನಿಯಂತ್ರಿತ ಮಟ್ಟದಲ್ಲಿ ಸೇವಿಸಬೇಕು. ಇಲ್ಲವೆಂದರೆ ಹೊಟ್ಟೆಯಲ್ಲಿ ಉರಿಯೂ ಉಂಟಾಗುತ್ತದೆ.

ನಿಂಬೆಹಣ್ಣು

ನಿಂಬೆಹಣ್ಣು

ನಿಂಬೆಹಣ್ಣು ನೈಸರ್ಗಿಕವಾಗಿ ದೇಹದ ತೂಕ ಇಳಿಸುತ್ತದೆ. ಇದು ದೇಹದ ಅನೇಕ ಭಾಗದಲ್ಲಿ ಅಧಿಕವಾಗಿ ತುಂಬಿಕೊಂಡ ಬೊಜ್ಜನ್ನು ಕ್ರಮೇಣ ಕರಗಿಸುತ್ತದೆ. ಹೃದಯದ ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೂ ನಿಂಬೆಹಣ್ಣು ಸೇವನೆ ಒಳ್ಳೆಯದು.

ಗ್ರೀನ್ ಟೀ

ಗ್ರೀನ್ ಟೀ

ಗ್ರೀನ್ ಟೀ ಕುಡಿಯುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಣ ಪರಿಣಾಮಕಾರಿಯಾಗಿ ಸಾಧ್ಯವಿದೆ. ದಿನನಿತ್ಯ 2 ಕಪ್ ಗ್ರೀನ್ ಟೀ ಕುಡಿದರೆ ಟೀಯಲ್ಲಿನ ಆಂಟಿಯಾಕ್ಸಿಡಂಟ್ ನಿಮ್ಮನ್ನು ಫಿಟ್ ಮತ್ತು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುತ್ತದೆ.

ಜೇನು

ಜೇನು

ಬೆಳಗ್ಗಿನ ಜಾವ ಒಂದು ಚಮಚ ಜೇನನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ ಕುಡಿದರೆ ದೇಹದ ತೂಕ ಕಡಿಮೆಯಾಗುವುದು. ಇತ್ತೀಚೆಗೆ ಹಲವರು ವಾಟರ್ ಅಥವಾ ಹನಿ ಥೆರಪಿ ಅಂತ ಇದನ್ನು ಸೇವನೆ ಮಾಡಿ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದಾರೆ.

ಅರಿಶಿಣ

ಅರಿಶಿಣ

ಒಂದು ಚಿಕ್ಕ ತುಂಡು ಅರಿಶಿಣವನ್ನು ದಿನಾ ತಿಂದರೆ ಹೃದಯದ ಸ್ವಾಸ್ಥ್ಯಕ್ಕೆ ಒಳ್ಳೆಯದು. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನುತ್ತಾ ಬಂದರೆ ದೇಹದಲ್ಲಿರುವ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಇದು ದೇಹದಲ್ಲಿ ರಕ್ತ ಸಂಚಲನ ಸರಾಗವಾಗಿ ನಡೆಯಲು ತುಂಬಾ ಸಹಕಾರಿಯಾಗಿದೆ.

English summary

9 Reasons You Are Not Losing Belly Fat

There are a number of reasons that are responsible for you not losing belly fat. All these reasons apply to you only if you are working out regularly and maintaining a strict diet to flatten your abdominal muscles. Here are some of the reasons that could come in the way of your flashboard abs.
X
Desktop Bottom Promotion