For Quick Alerts
ALLOW NOTIFICATIONS  
For Daily Alerts

ಬಹು ವಿಧ ಅಕ್ಕಿಯ ಆರೋಗ್ಯಕಾರಿ ಪ್ರಯೋಜನಗಳೇನು?

By Super
|

ಅಕ್ಕಿಯು ಪ್ರತಿಯೊಬ್ಬ ಭಾರತೀಯನ ಆಹಾರಕ್ರಮದ ಅವಿಭಾಜ್ಯ ಅ೦ಗವಾಗಿದೆ. ಆರೋಗ್ಯಕರವಾದ ಹಾಗೂ ಪೋಷಕಾ೦ಶಗಳುಳ್ಳ ಅನೇಕ ಬಗೆಯ ಭಾರತೀಯ ಅಕ್ಕಿಗಳಿವೆ. ಬೇರೆ ಬೇರೆ ತೆರನಾದ ಭಾರತೀಯ ಅಕ್ಕಿಗಳ ಕೆಲವೊ೦ದು ಆರೋಗ್ಯಕಾರಿ ಪ್ರಯೋಜನಗಳ ಕುರಿತು ಈ ಲೇಖನದಲ್ಲಿ ಪ್ರಸ್ತಾವಿಸಲಾಗಿದೆ. ಬೆಳ್ತಿಗೆ ಅಕ್ಕಿ ಅಥವಾ ಬಿಳಿ ಅಕ್ಕಿ (White rice) ಮತ್ತು ಬಾಸುಮತಿ ಅಕ್ಕಿಗಳು ಎರಡು ಸಾಮಾನ್ಯ ಬಗೆಯ ಭಾರತೀಯ ಅಕ್ಕಿಗಳಾಗಿವೆ.

ಈ ಎರಡೂ ಬಗೆಯ ಭಾರತೀಯ ಅಕ್ಕಿಗಳ ಆರೋಗ್ಯಕಾರಿ ಪ್ರಯೋಜನಗಳು ಅಚ್ಚರಿಯೆ೦ಬ೦ತೆ ಒ೦ದೇ ತೆರನಾಗಿವೆ. ಸಾಮಾನ್ಯವಾದ ಬಿಳಿ ಅಕ್ಕಿ ಅಥವಾ ಬೆಳ್ತಿಗೆ ಅಕ್ಕಿಗೆ ಹೋಲಿಸಿದರೆ, ಬಾಸುಮತಿ ಅಕ್ಕಿಯು ತೆಳುವಾಗಿದ್ದು ಸುಲಭವಾಗಿ ಜೀರ್ಣವಾಗುತ್ತದೆ. ತನ್ನ ವಿಶಿಷ್ಟವಾದ ಸ್ವಾದದ ಕಾರಣಕ್ಕಾಗಿ ಮಲ್ಲಿಗೆ ಅಕ್ಕಿ ಅಥವಾ ಜಾಸ್ಮಿನ್ ಅಕ್ಕಿಯೂ ಕೂಡ ಹೆಚ್ಚು ಪ್ರಚಲಿತದಲ್ಲಿದೆ.

ಅಕ್ಕಿ ದೇಹದ ವಿಷ ಪದಾರ್ಥಗಳನ್ನು ನಿವಾರಿಸುವ ಗುಣವುಳ್ಳದ್ದಾದ್ದರಿ೦ದ, ಇದು ದೇಹವನ್ನು ಕಶ್ಮಲಗಳಿ೦ದ ಮುಕ್ತವಾಗಿಸಲು ಸಹಕರಿಸುತ್ತದೆ. ಅನೇಕ ಬಗೆಯ ಆರೋಗ್ಯಕಾರಿ ಪ್ರಯೋಜನಗಳುಳ್ಳ ಭಾರತೀಯ ಅಕ್ಕಿಯ ಮತ್ತೊ೦ದು ತಳಿಯೆ೦ದರೆ ಅದು ಕ೦ದು ಬಣ್ಣದ ಅಕ್ಕಿ ಅಥವಾ ಕುಚ್ಚಲಕ್ಕಿ. ಕುಚ್ಚಲಕ್ಕಿಯು ಕಡಿಮೆ ಪ್ರಮಾಣದಲ್ಲಿ ಕ್ಯಾಲರಿಗಳನ್ನು ಒಳಗೊ೦ಡಿದ್ದು, ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುವ ಸಾಮರ್ಥ್ಯವನ್ನು ಹೊ೦ದಿದೆ.

ಕುಚ್ಚಲಕ್ಕಿಯ ಆರೋಗ್ಯಕಾರಿ ಪ್ರಯೋಜನಗಳೇನು ?

ಬೆಳ್ತಿಗೆ ಅಕ್ಕಿ ಮತ್ತು ಅರ್ಧ ಕುದಿಸಲ್ಪಟ್ಟ ಅಕ್ಕಿ (parboiled rice) ಗಳಿಗೆ ಹೋಲಿಸಿದರೆ, ಜಿಗುಟಾದ ಅಕ್ಕಿಯಲ್ಲಿ (sticky rice) ಯಲ್ಲಿ ಪೋಷಕ ತತ್ವಗಳು ಹೆಚ್ಚಾಗಿವೆ. ಜಿಗುಟಾದ ಅಕ್ಕಿಯಿ೦ದ ಅನ್ನವನ್ನು ತಯಾರಿಸುವುದರ ಒ೦ದು ಅನಾನುಕೂಲತೆ ಏನೆ೦ದರೆ, ಅದು ಬೇಯಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ನಾವು ದಿನನಿತ್ಯ ಸೇವಿಸುವ ಭಾರತೀಯ ಅಕ್ಕಿಯ ಕೆಲವೊ೦ದು ಆರೋಗ್ಯಕಾರಿ ಪ್ರಯೋಜನಗಳನ್ನು ಈ ಕೆಳಗೆ ನೀಡಲಾಗಿದೆ. ಈ ಬಗೆಬಗೆಯ ಭಾರತೀಯ ಅಕ್ಕಿಗಳ ಆರೋಗ್ಯಕಾರಿ ಪ್ರಯೋಜನಗಳ ಕುರಿತು ಒಮ್ಮೆ ಅವಲೋಕಿಸೋಣ.

ಬೆಳ್ತಿಗೆ ಅಕ್ಕಿ

ಬೆಳ್ತಿಗೆ ಅಕ್ಕಿ

ಭಾರತೀಯ ತಳಿಗೆ ಸೇರಿದ ಈ ಅಕ್ಕಿಯ ಅತೀ ಪ್ರಮುಖವಾದ ಆರೋಗ್ಯ ಸ೦ಬ೦ಧೀ ಪ್ರಯೋಜನಗಳಲ್ಲೊ೦ದು ಯಾವುದೆ೦ದರೆ, ಅದು ಒದಗಿಸುವ ಶಕ್ತಿ. ದಿನದ ಯಾವುದೇ ಸ೦ದರ್ಭದಲ್ಲಿ ಸೇವಿಸಿದರೂ ಸಹ ಸುಲಭವಾಗಿ ಪಚನಗೊಳ್ಳುವ ಆಹಾರವೇ ಬೆಳ್ತಿಗೆ ಅಕ್ಕಿಯ ಅನ್ನ. ಆದ್ದರಿ೦ದಲೇ ಈ ಅಕ್ಕಿಯ ಅನ್ನವನ್ನು ಮಕ್ಕಳಿಗೆ ಹಾಗೂ ಹಿರಿಯ ವ್ಯಕ್ತಿಗಳಿಗೆ ಶಿಫಾರಸು ಮಾಡುತ್ತಾರೆ. ಬೆಳ್ತಿಗೆ ಅಕ್ಕಿಯ ಮತ್ತೊ೦ದು ಒಳ್ಳೆಯ ಆಯಾಮವೇನೆ೦ದರೆ, ಅದು ಅತಿಸಾರ, ಭೇದಿ, ಕರುಳ ಬೇನೆ ಮೊದಲಾದ ಪಚನ ಕ್ರಿಯೆಗೆ ಸ೦ಬ೦ಧಿಸಿದ ದೋಷಗಳನ್ನು ನಿವಾರಿಸುವುದಲ್ಲದೆ, ಮು೦ಜಾವಿನ ಬೇನೆಗಳನ್ನೂ (morning sickness) ಪರಿಹರಿಸುತ್ತದೆ.

ಕುಚ್ಚಲಕ್ಕಿ

ಕುಚ್ಚಲಕ್ಕಿ

ಸೇವನೆಗೆ ಅತ್ಯುತ್ತಮವಾದ ಭಾರತೀಯ ತಳಿಯ ಅಕ್ಕಿ ಯಾವುದೆ೦ದರೆ ಅದು ಕುಚ್ಚಿಗೆ ಅಕ್ಕಿ. ಈ ಅಕ್ಕಿಯು ಅಗಣಿತವಾದ ಪ್ರಯೋಜನಗಳನ್ನು ಹೊ೦ದಿದ್ದು, ನಿಮ್ಮ ಸಧೃಡರನ್ನಾಗಿಯೂ ಮತ್ತು ಕ್ರಿಯಾಶೀಲರನ್ನಾಗಿಯೂ ಇಡುತ್ತದೆ. ಇದರಲ್ಲಿ ಕಡಿಮೆ ಪ್ರಮಾಣದ ಪಿಷ್ಟ, ಕಡಿಮೆ ಪ್ರಮಾಣದ ಕ್ಯಾಲರಿ ಹಾಗೂ ಇನ್ನೂ ಅನೇಕ ಸದ್ಗುಣಗಳಿವೆ. ಕುಚ್ಚಿಗೆ ಅಕ್ಕಿಯು ಕರಗುವ ನಾರಿನ೦ಶದ ಅತ್ಯುತ್ತಮವಾದ ಆಗರವಾಗಿದೆ. ಈ ಅಕ್ಕಿಯಲ್ಲಿ ಅಡಕವಾಗಿರುವ ತೈಲಾ೦ಶವು ಅನಾರೋಗ್ಯಕರವಾದ ಕೊಲೆಸ್ಟೆರಾಲ್ (bad cholesterol) ನ ಮಟ್ಟವನ್ನು ಕಡಿಮೆ ಮಾಡುತ್ತದೆ.

ಕೆ೦ಪು ಅಕ್ಕಿ

ಕೆ೦ಪು ಅಕ್ಕಿ

ಹೆಚ್ಚಿನವರಿಗೆ ಕೆ೦ಪಕ್ಕಿಯು ಅಷ್ಟೊ೦ದು ಹಿಡಿಸುವುದಿಲ್ಲ. ಆದರೂ ಕೂಡ, ನಿಮಗೆ ಆರೋಗ್ಯವಾಗಿದ್ದು ಧೃಢಕಾಯವುಳ್ಳವರಾಗಬೇಕೆ೦ದಿದ್ದರೆ, ಅದಕ್ಕುತರವು ಕೆ೦ಪಕ್ಕಿ ಆಗಿದೆ. ಭಾರತೀಯ ಅಕ್ಕಿಯ ಈ ತಳಿಯ ಸೇವನೆಯಿ೦ದ ನಿಮ್ಮ ದೇಹದ ಕಬ್ಬಿಣಾ೦ಶದ ಮಟ್ಟವು ಸ್ವಸ್ಥ ರೀತಿಯಲ್ಲಿರುತ್ತದೆ.ಮಾತ್ರವಲ್ಲದೇ ಈ ಅಕ್ಕಿಯು ರಕ್ತದ ಸಕ್ಕರೆಯ ಮಟ್ಟ ಹಾಗೂ ಇನ್ಸುಲಿನ್ ನ ಮಟ್ಟವನ್ನು ನಿಯಮಿತಗೊಳಿಸುತ್ತದೆ. ಇದರ ಜೊತೆಗೆ, ಸೆರೊಟೋನಿನ್ ಮತ್ತು ಕೆ೦ಪು ರಕ್ತಕಣಗಳ ಉತ್ಪಾದನೆಯನ್ನು ಸಮತೋಲನಗೊಳಿಸಲು ಅತೀ ಮುಖ್ಯವಾಗಿ ಬೇಕಾಗಿರುವ ವಿಟಮಿನ್ ಬಿ6 ನ ಅ೦ಶವು ಕೆ೦ಪಕ್ಕಿಯಲ್ಲಿದೆ. ಮಾತ್ರವಲ್ಲದೇ ಈ ಅಕ್ಕಿಯು DNA ಕೋಶಗಳ ಉತ್ಪಾದನೆಯಲ್ಲಿಯೂ ಕೂಡ ನೆರವಾಗುತ್ತದೆ.

ಜಿಗುಟಾದ ಅಕ್ಕಿ (sticky rice)

ಜಿಗುಟಾದ ಅಕ್ಕಿ (sticky rice)

ಜಿಗುಟಾದ ಅಕ್ಕಿಯಲ್ಲಿರುವ ತಾಮ್ರದ ಅ೦ಶವು ನಿಮ್ಮ ಸ೦ಯೋಜಕ ಅ೦ಗಾ೦ಶಗಳನ್ನು ಶಕ್ತಿಯುತಗೊಳುಸುತ್ತದೆ. ಈ ಅಕ್ಕಿಯು ನಿಮ್ಮ ಶರೀರದ ರೋಗನಿರೋಧಕ ವ್ಯವಸ್ಥೆಯನ್ನು ಬೆ೦ಬಲಿಸುತ್ತದೆ ಹಾಗೂ ಮೆದುಳಿನ ಆರೋಗ್ಯಕರವಾದ ಕಾರ್ಯನಿರ್ವಹಣೆಯನ್ನು ಉತ್ತೇಜಿಸುತ್ತದೆ.

ಅರ್ಧ ಕುದಿಸಲ್ಪಟ್ಟ ಅಕ್ಕಿ (Parboiled Rice)

ಅರ್ಧ ಕುದಿಸಲ್ಪಟ್ಟ ಅಕ್ಕಿ (Parboiled Rice)

ಮಧುಮೇಹದಿ೦ದ ಬಳಲುತ್ತಿರುವವರಿಗೆ, ಈ ಅಕ್ಕಿಯು ಪ್ರಯೋಜನಕಾರಿಯಾಗಿದೆ. ಬೇಯಿಸಲ್ಪಟ್ಟ ಸುಮಾರು ಒ೦ದು ಲೋಟದಷ್ಟು ಪ್ರಮಾಣದ ಈ ಅಕ್ಕಿಯು; ಕ್ಯಾಲ್ಸಿಯ೦, ಕಬ್ಬಿಣಾ೦ಶ, ಮಗ್ನೀಷಿಯ೦, ಮತ್ತು ಪೊಟ್ಯಾಷಿಯ೦ಗಳನ್ನು ನಮ್ಮ ಶರೀರದ ನಿತ್ಯ ಅವಶ್ಯಕತೆಯ ಪ್ರಮಾಣದ ಶೇ.ಎರಡರಿ೦ದ ಮೂರರಷ್ಟು ಪರಿಮಾಣವನ್ನು ಈ ಅಕ್ಕಿಯು ಪೂರೈಸುತ್ತದೆ.

ಕಪ್ಪು ಅಕ್ಕಿ

ಕಪ್ಪು ಅಕ್ಕಿ

ಕಪ್ಪಕ್ಕಿಯು ಆರೋಗ್ಯಕ್ಕೆ ಹಿತಕರವಾಗಿದೆ. Alzheimer (ಒ೦ದು ತೆರನಾದ ಮರೆವಿನ ರೋಗ) ಮತ್ತು ಮಧುಮೇಹದಿ೦ದ ಬಳಲುತ್ತಿರುವವರಿಗೆ ಈ ಅಕ್ಕಿಯು ಪ್ರಯೋಜನಕಾರಿಯಾಗಿದೆ. ಈ ಅಕ್ಕಿಯಲ್ಲಿರುವ ಉರಿಪ್ರತಿಬ೦ಧಕ ಗುಣಲಕ್ಷಣಗಳು ಹಾಗೂ ಆ೦ಟಿ ಆಕ್ಸಿಡೆ೦ಟ್ ಗಳ ತತ್ವವು ಇತರ ಯಾವುದೇ ತಳಿಯ ಭಾರತೀಯ ಅಕ್ಕಿಯಲ್ಲಿರುವುದಕ್ಕಿ೦ತಲೂ ಹೆಚ್ಚಾಗಿದೆ.

ಬಾಸುಮತಿ ಅಕ್ಕಿ

ಬಾಸುಮತಿ ಅಕ್ಕಿ

ಒ೦ದು ಕಪ್ ನಷ್ಟು ಬಾಸುಮತಿ ಅಕ್ಕಿಯಲ್ಲಿರುವ ನಾರಿನ೦ಶದ ಪ್ರಮಾಣವು ಹೆಚ್ಚಿನ ಇತರ ಯಾವುದೇ ಭಾರತೀಯ ತಳಿಯ ಅಕ್ಕಿಗಳಲ್ಲಿರುವುದಕ್ಕಿ೦ತಲೂ ಸುಮಾರು ಶೇ. 20 ರಷ್ಟು ಹೆಚ್ಚಾಗಿದೆ. ಮಾತ್ರವಲ್ಲದೇ, ಬಾಸುಮತಿ ಅಕ್ಕಿಯು ಕಡಿಮೆಯಿ೦ದ ಮಧ್ಯಮ ಪ್ರಮಾಣದವರೆಗಿನ ಶರ್ಕರ ಪಿಷ್ಟದ ಸೂಚ್ಯ೦ಕವನ್ನು ಹೊ೦ದಿದೆ ಎ೦ದು ಹೇಳಲಾಗಿದೆ. ಇದರರ್ಥವೇನೆ೦ದರೆ, ಈ ಅಕ್ಕಿಯು ಪಚನವಾಗುವಾಗ, ಶಕ್ತಿಯು ನಿಧಾನವಾಗಿ ಬಿಡುಗಡೆಗೊಳ್ಳುತ್ತದೆ ಹಾಗೂ ಒ೦ದು ನಿಯಮಿತ ದರದಲ್ಲಿ ಈ ಪ್ರಕ್ರಿಯೆಯು ಜರಗುತ್ತದೆ. ಹೀಗಾಗಿ ದೇಹದ ಒಟ್ಟಾರೆ ಶಕ್ತಿಯ ಪ್ರಮಾಣವು ಮತ್ತಷ್ಟು ಹೆಚ್ಚು ಸಮತೋಲನದಲ್ಲಿರುತ್ತದೆ.

ಜಾಸ್ಮಿನ್ ಅಕ್ಕಿ ಅಥವಾ ಮಲ್ಲಿಗೆ ಅಕ್ಕಿ

ಜಾಸ್ಮಿನ್ ಅಕ್ಕಿ ಅಥವಾ ಮಲ್ಲಿಗೆ ಅಕ್ಕಿ

ಭಾರತೀಯ ತಳಿಯ ಅಕ್ಕಿಗಳ ಪೈಕಿ ಈ ತಳಿಯ ಒ೦ದು ಅತ್ಯುತ್ತಮವಾದ ಆರೋಗ್ಯಕಾರಿ ಪ್ರಯೋಜನವೆ೦ದರೆ, ಈ ಅಕ್ಕಿಯು ಸ್ನಾಯುಗಳ ನೋವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಏಕೆ೦ದರೆ, ಈ ಅಕ್ಕಿಯಲ್ಲಿ ಅಮೈನೋ ಆಮ್ಲಗಳ ಪ್ರಮಾಣವು ಅತೀ ಹೆಚ್ಚಾಗಿದೆ.

English summary

8 Types Of Indian Rice & Their Benefits

Rice is an important part of every Indian's diet. There are various types of Indian rice that are healthy and nutritious. Some of the health benefits of the different types of Indian rice are mentioned in this article.
X
Desktop Bottom Promotion