For Quick Alerts
ALLOW NOTIFICATIONS  
For Daily Alerts

ಆಹಾರ ಮತ್ತು ಪಾನೀಯಗಳ ಕುರಿತಾಗಿ ಇರುವ 8 ಮೂಢನಂಬಿಕೆಗಳು

By Deepak M
|

ಮೂಢನಂಬಿಕೆಗಳು ಮನುಷ್ಯನ ಅವಿಭಾಜ್ಯ ಅಂಗ. ಕೆಲವೊಂದು ಮೂಢನಂಬಿಕೆಗಳು ಮನುಷ್ಯನ ಜೀವಕ್ಕೆ ಅಪಾಯವನ್ನು ತಂದೊಡ್ಡಿದರೆ, ಕೆಲವೊಂದು ನೆನಪಿಸಿಕೊಂಡರೆ ಸುಮ್ಮನೆ ನಗು ತರಿಸುತ್ತವೆ. ಕೆಲವೊಂದನ್ನು ನಾವು ಯಾವ ಪ್ರಮಾಣದಲ್ಲಿ ನಂಬಿರುತ್ತೇವೆಯೆಂದರೆ ಅವುಗಳ ಸತ್ಯಾಸತ್ಯಾತೆಯನ್ನು ಸಹ ಪರಿಶೀಲಿಸದೆ ಪಾಲಿಸುವಷ್ಟರ ಮಟ್ಟಿಗೆ ನಾವು ಅವುಗಳನ್ನು ನಂಬಿರುತ್ತೇವೆ. ಈ ನಂಬಿಕೆಗಳ ಪಟ್ಟಿಯಲ್ಲಿ ಆಹಾರ ಮತ್ತು ಪಾನೀಯಗಳು ಸಹ ಸೇರಿವೆಯೆಂಬುದನ್ನು ನೀವು ತಿಳಿದರೆ ನಿಜಕ್ಕು ಅಚ್ಚರಿಗೊಳಗಾಗುತ್ತೀರಿ.

ನಿಜ ನಾವು ಸೇವಿಸುವ ಆಹಾರ ಮತ್ತು ಪಾನೀಯಗಳ ಕುರಿತಾಗಿ ನಮ್ಮ ಅಜ್ಜ, ಅಜ್ಜಿ, ಪೋಷಕರು ಮುಂತಾದವರು ಹಲವಾರು ಮೂಢನಂಬಿಕೆಗಳನ್ನು ನಮ್ಮಲ್ಲಿ ಬಿತ್ತಿದ್ದಾರೆ. ಈ ನಂಬಿಕೆಗಳು ಹುಟ್ಟಿ ಶತ ಶತಮಾನಗಳೆ ಕಳೆದಿವೆ. ನಾವು ಸಹ ಅವುಗಳನ್ನು ಅಕ್ಷರಶಃ ಸತ್ಯವೆಂದು ನಂಬಿದ್ದೇವೆ.

ಆದರೆ ವೈಧ್ಯಕೀಯ ವಿಜ್ಞಾನವು ಅವುಗಳನ್ನು ಪರೀಕ್ಷಿಸಿ, ನಾವು ನಂಬಿದಂತಹ ಯಾವುದೇ ಕಟ್ಟು ಕತೆಗಳು ಈ ಆಹಾರ ಪದಾರ್ಥಗಳಲ್ಲಿ ಇಲ್ಲವೆಂದು ಹೇಳಿದ್ದಾರೆ. ಹಾಗಾದರೆ ಆ ಮೂಢನಂಬಿಕೆಗಳು ಯಾವುವು? ಅವುಗಳಲ್ಲಿ ಎಷ್ಟು ಸತ್ಯಾಂಶ ಅಡಗಿದೆ? ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ, ನಾವಿಲ್ಲಿ ನಿಮಗಾಗಿ ಅವುಗಳ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತಿದ್ದೇವೆ:

ಮೂಢನಂಬಿಕೆ #1 - ಕ್ಯಾರಟ್‍ಗಳು ದೃಷ್ಟಿಯನ್ನು ಸುಧಾರಿಸುತ್ತವೆ:

ಮೂಢನಂಬಿಕೆ #1 - ಕ್ಯಾರಟ್‍ಗಳು ದೃಷ್ಟಿಯನ್ನು ಸುಧಾರಿಸುತ್ತವೆ:

ಇದು ನಮ್ಮ ಜೀವನದಲ್ಲಿನ ಆಹಾರ- ಪಾನೀಯಗಳ ಕುರಿತಾಗಿ ನಾವು ನೋಡಿದ ಅತ್ಯಂತ ದೊಡ್ಡ ಮೂಢನಂಬಿಕೆ. ನಮಗೆ ಯಾವಾಗಲಾದರು ದೃಷ್ಟಿ ದೋಷವುಂಟಾದರೆ ಪ್ರತಿಯೊಬ್ಬ ತಾಯಿಯು ನಮಗೆ ಅಥವಾ ತನ್ನ ಮಗುವಿಗೆ ಹೇಳುವ ಮಾತು ಒಂದೇ, ಕ್ಯಾರಟ್ ರಸವನ್ನು ಅಥವಾ ಕ್ಯಾರಟ್ ತಿನಿಸುಗಳನ್ನು ಸೇವಿಸು ಎಂದು. ನಂಬಿಕೆಗಳ ಪ್ರಕಾರ ಕ್ಯಾರಟ್‍ನಲ್ಲಿ ವಿಟಮಿನ್ ಎ ಜೀವಸತ್ವವು ಯಥೇಚ್ಛ ಪ್ರಮಾಣದಲ್ಲಿರುತ್ತವೆಯಂತೆ, ಇದು ಕಣ್ಣಿನ ದೋಷಗಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿರುತ್ತವೆಯಂತೆ.

ಸತ್ಯಾಂಶವೇನೆಂದರೆ ಎರಡನೆಯ ಮಹಾಯುದ್ಧದ ಕಾಲದಲ್ಲಿ ಬ್ರಿಟೀಷ್ ಗುಪ್ತಚರ ದಳವು ಒಂದು ಗಾಳಿಸುದ್ದಿಯನ್ನು ಹಬ್ಬಿಸಿತು. ಅದೇನೆಂದರೆ "ನಮ್ಮ ಪೈಲಟ್‍ಗಳು ಯಥೇಚ್ಛ ಪ್ರಮಾಣದಲ್ಲಿ ಕ್ಯಾರಟ್ ಸೇವಿಸುತ್ತಾರೆ, ಹೀಗಾಗಿ ಅವರು ಹಾಗಾಗಿ ಜರ್ಮನ್ ನೆಲೆಗಳನ್ನು ನಾಶ ಮಾಡಲು ಅವರಿಗೆ ಸುಲಭವಾಗುತ್ತದೆ" ಎಂಬುದು ಆ ಕಟ್ಟು ಕತೆ. ಆದರೆ ಸತ್ಯಾಂಶವೆಂದರೆ ಅವರು ಜರ್ಮನ್ ನೆಲೆಗಳನ್ನು ನಾಶ ಮಾಡಿದ್ದು, ರೆಡಾರ್ ಸಹಾಯದಿಂದಲೆ ಹೊರತು ಕ್ಯಾರಟ್ ಸಹಾಯದಿಂದಲ್ಲ.

ಮೂಢನಂಬಿಕೆ #2 - ಪಾಲಕ್ ಸೊಪ್ಪನ್ನು ಸೇವಿಸುವುದರಿಂದ ನೀವು ಶಕ್ತಿಶಾಲಿಯಾಗುತ್ತಾನೆ.

ಮೂಢನಂಬಿಕೆ #2 - ಪಾಲಕ್ ಸೊಪ್ಪನ್ನು ಸೇವಿಸುವುದರಿಂದ ನೀವು ಶಕ್ತಿಶಾಲಿಯಾಗುತ್ತಾನೆ.

ಇದು ನಮ್ಮ ಜೀವನದಲ್ಲಿನ ಮತ್ತೊಂದು ಮಹಾ ಮೂಢನಂಬಿಕೆ. ನಾವು ಚಿಕ್ಕವರಿದ್ದಾಗಲಿಂದಲು ನೋಡುತ್ತಿದ್ದೇವ ನಮ್ಮ ಕಾರ್ಟೂನ್ ಹೀರೋ ಪೊಪೆಯೆ ಪಾಲಕ್ ಸೊಪ್ಪಿನ ಟಿನ್ ಸೇವಿಸಿ ಕ್ಷಣಾರ್ಧದಲ್ಲಿ ಶಕ್ತಿಶಾಲಿಯಾಗುತ್ತಾನೆ. ಆದರೆ ಸತ್ಯಾಂಶವೆಂದರೆ ಪಾಲಕ್ ನಮ್ಮನ್ನು ಶಕ್ತಿಶಾಲಿಯನ್ನಾಗಿ ಮಾಡುವುದಿಲ್ಲ. ಆದರೂ ಪಾಲಕ್‍ನಲ್ಲಿ ಕಡಿಮೆ ಪ್ರಮಾಣದ ಕಬ್ಬಿಣಾಂಶವಿರುತ್ತದೆ. ಇದು ಇನ್ನಿತರ ಸೊಪ್ಪು ಮತ್ತು ಹಸಿರು ತರಕಾರಿಗಳಿಗೆ ಹೋಲಿಸಿದರೆ ಕಡಿಮೆಯಿರುತ್ತದೆ.

ತುಂಬಾ ವರ್ಷಗಳ ಹಿಂದೆ ಇದು ಮುದ್ರಣ ದೋಷದ ಸಲುವಾಗಿ ಅಧಿಕ ಕಬ್ಬಿಣಾಂಶವಿರುವ ತರಕಾರಿಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆಯಿತು. ಆ ವರದಿಯಲ್ಲಿ ಒಂದು ಟಿನ್ ಪಾಲಕ್‍ನಲ್ಲಿ 34ಗ್ರಾಂ ಕಬ್ಬಿಣಾಂಶವಿರುತ್ತದೆಯೆಂದು ತಪ್ಪಾಗಿ ಮುದ್ರಣಗೊಂಡಿತ್ತು. ವಾಸ್ತವವೆಂದರೆ ಅದರಲ್ಲಿ ಪ್ರತಿ ಟಿನ್‍ಗೆ 3.4ಗ್ರಾಂ ಕಬ್ಬಿಣಾಂಶ ಮಾತ್ರ ಇರುತ್ತದೆ. ಹೀಗೆ ಈ ಮೂಢನಂಬಿಕೆಯು ಇಂದಿಗು ಸಹ ಮುಂದುವರಿದುಕೊಂಡೆ ಬರುತ್ತಿದೆ, ಇದಕ್ಕೆ ಈ ತರಕಾರಿಯ ಕಡಿಮೆ ಬೆಲೆ ಮತ್ತು ಪೊಪೆಯೆ ಇಬ್ಬರೂ ಕಾರಣವೆಂದು ಬಿಡಿಸಿ ಹೇಳಬೇಕಾಗಿಲ್ಲ.

ಮೂಢನಂಬಿಕೆ #3 - ಕಾಫಿ ನಮ್ಮ ಆರೋಗ್ಯಕ್ಕೆ ಹಾನಿಕಾರಕ:

ಮೂಢನಂಬಿಕೆ #3 - ಕಾಫಿ ನಮ್ಮ ಆರೋಗ್ಯಕ್ಕೆ ಹಾನಿಕಾರಕ:

ಕಾಫಿ ಭಾರತ ಸೇರಿದಂತೆ ಪ್ರಪಂಚದ ಇನ್ನಿತರ ದೇಶಗಳ ನೆಚ್ಚಿನ ಪಾನೀಯವಾಗಿರುವುದು ತಿಳಿದಿರುವ ವಿಚಾರವೇ. ನಂಬಿಕೆಗಳ ಪ್ರಕಾರ ಕಾಫಿಯು ನಮ್ಮ ನರವ್ಯೂಹದ ಮೇಲೆ ಪರಿಣಾಮ ಬೀರಿ, ನಮ್ಮ ದೇಹ ಮತ್ತು ತ್ವಚೆಗೆ ಹಾನಿಯನ್ನುಂಟು ಮಾಡುತ್ತದೆಯಂತೆ. ಆದರೆ ಹಾರ್ವರ್ಡ್ ವಿಶ್ವವಿದ್ಯಾನಿಲಯ ನಡೆಸಿದ ಅಧ್ಯಯನದ ಪ್ರಕಾರ ಕಾಫಿ ಸೇವಿಸುವುದರಿಂದ ಎರಡನೆಯ ದರ್ಜೆಯ ಮಧುಮೇಹ ಬರುವ ಸಾಧ್ಯತೆ ತುಂಬಾ ಕಡಿಮೆಯಂತೆ.

ಈ ಅಧ್ಯಯನಲ್ಲಿ ಪಾಲ್ಗೊಂಡಿದ್ದ 1.25,000 ಮಂದಿಯಲ್ಲಿ ಶೇ.30 ರಷ್ಟು ಮಹಿಳೆಯರಲ್ಲಿ ಎರಡನೆಯ ದರ್ಜೆಯ ಮಧುಮೇಹ ಕಡಿಮೆ ಪ್ರಮಾಣದಲ್ಲಿತ್ತಂತೆ. ಇದಕ್ಕೂ ಮೇಲಾಗಿ ಕಾಫಿಯು ಕ್ಯಾನ್ಸರ್‌ನಿಂದ ನಮ್ಮನ್ನು ರಕ್ಷಿಸಿ, ನಮ್ಮ ದೇಹಕ್ಕೆ ಪುನಃಶ್ಚೇತನವನ್ನು ಒದಗಿಸುತ್ತದೆ. ದಿನ ನಾವು ಸೇವಿಸುವ 2-3 ಕಪ್ ಕಾಫಿಯು ದೇಹಕ್ಕೆ ಯಾವುದೇ ರೀತಿಯ ಅಪಾಯವನ್ನುಂಟು ಮಾಡುವುದಿಲ್ಲ.

ಮೂಢನಂಬಿಕೆ # 4- ತಾಜಾ ಆಹಾರ ಪದಾರ್ಥಗಳು ಶೀಥಲವಾಗಿರುವ ಆಹಾರ ಪದಾರ್ಥಗಳಿಗಿಂತ ಒಳ್ಳೆಯದು:

ಮೂಢನಂಬಿಕೆ # 4- ತಾಜಾ ಆಹಾರ ಪದಾರ್ಥಗಳು ಶೀಥಲವಾಗಿರುವ ಆಹಾರ ಪದಾರ್ಥಗಳಿಗಿಂತ ಒಳ್ಳೆಯದು:

ಆಂಟಿ ಆಕ್ಸಿಡೆಂಟ್‍ಗಳ ಉಪಯೋಗವನ್ನು ತಿಳಿಯುವವರೆಗು ತಾಜಾ ಆಹಾರ ಪದಾರ್ಥಗಳು ಮಾತ್ರವೇ ಆರೋಗ್ಯಕ್ಕೆ ಲಾಭಕರ ಎಂಬ ಭಾವನೆಯನ್ನು ಹೊಂದಿದ್ದರು. ಅಲ್ಲಿಯವರೆಗು ಶೀಥಲ (ಫ್ರೋಜನ್) ಆಹಾರ ಪದಾರ್ಥಗಳು ಆರೋಗ್ಯಕ್ಕೆ ಅಷ್ಟೇನು ಪ್ರಯೋಜನಕಾರಿಯಲ್ಲ ಎಂಬ ಧೋರಣೆ ಎಲ್ಲರದ್ದಾಗಿತ್ತು.

ಆದರೆ ಸತ್ಯಾಂಶವೇನೆಂದರೆ ತಾಜಾ ತರಕಾರಿಗಳನ್ನು ಕತ್ತರಿಸಿದ ತಕ್ಷಣ ಅವುಗಳಲ್ಲಿನ ಪೋಷಕಾಂಶಗಳು ತನ್ನ ಉತ್ತುಂಗ ಸ್ಥಿತಿಯನ್ನು ಕಾಯ್ದುಕೊಂಡಿರುತ್ತವೆ. ಅವುಗಳನ್ನು ತಕ್ಷಣ ಶೀಥಲೀಕರಣ ಪ್ರಕ್ರಿಯೆಗೆ ಒಳಪಡಿಸುವುದರಿಂದ ಅವುಗಳಲ್ಲಿನ ಸತ್ವವು ಶಾಶ್ವತವಾಗಿ ಉಳಿದುಕೊಳ್ಳುತ್ತವೆ. ಆದರೆ ಅವುಗಳನ್ನು ತೆರೆದ ಪರಿಸರದಲ್ಲಿ ಶೀಥಲೀಕರಣಗೊಳಿಸದೆ ಇಡುವುದರಿಂದ ಅವುಗಳಲ್ಲಿನ ಸತ್ವಾಂಶವು ಧೂಳು, ಗಾಳಿ ಮತ್ತು ತೇವಾಂಶಕ್ಕೆ ಒಳಗಾಗಿ ಹಾಳಾಗಬಹುದು.

ಮೂಢನಂಬಿಕೆ #5 - ಮೊಟ್ಟೆಗಳು ಕೊಲೆಸ್ಟ್ರಾಲನ್ನು ಹೆಚ್ಚಿಸುತ್ತವೆ:

ಮೂಢನಂಬಿಕೆ #5 - ಮೊಟ್ಟೆಗಳು ಕೊಲೆಸ್ಟ್ರಾಲನ್ನು ಹೆಚ್ಚಿಸುತ್ತವೆ:

60-70ರ ದಶಕದಲ್ಲಿ ಹೃದ್ರೋಗ ತಙ್ಞರು ಮೊಟ್ಟೆಗಳು ಕೊಲೆಸ್ಟ್ರಾಲ್‍ಗೆ ಕಾರಣವಾಗುತ್ತವೆ ಎಂದು ಹೇಳಿಕೆಯನ್ನು ನೀಡಿದರು. ಅದರಿಂದ ಪ್ರತಿಯೊಬ್ಬರ ಮನೆಯಲ್ಲಿ ಮೊಟ್ಟೆಗಳು ಆಹಾರ ಪಟ್ಟಿಯಿಂದ ಕಾಲ್ತೆಗೆಯುವಂತಾಯಿತು.ಆದರೆ ಇತ್ತೀಚಿನ ಅಧ್ಯಯನದ ಪ್ರಕಾರ ಹೃದ್ರೋಗಗಳು ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಫ್ಯಾಟ್ಸ್‌ಗಳ ಕಾರಣದಿಂದ ಬರುತ್ತದೆ ಎಂದು ತಿಳಿದುಬಂದಿದೆ. ಒಂದು ಮೊಟ್ಟೆಯಲ್ಲಿ 1.6 ಗ್ರಾಂ ಕೊಬ್ಬಿನ ಆಮ್ಲ ಮಾತ್ರ ಇರುತ್ತದೆ.

ಇದು ಒಂದು ಲೋಟ ಹಾಲಿಗಿಂತ ಕಡಿಮೆ ಎಂಬುದು ಬಹುತೇಕ ಮಂದಿಗೆ ತಿಳಿದಿಲ್ಲ. ಇದರ ಜೊತೆಗೆ ಮೊಟ್ಟೆಗಳಲ್ಲಿ ವಿಟಮಿನ್ ಎ ಮತ್ತು ಡಿ ಅಧಿಕ ಪ್ರಮಾಣದಲ್ಲಿದ್ದು, ನಿಮ್ಮ ತೂಕವನ್ನು ಯಾವುದೇ ಕಾರಣಕ್ಕು ಹೆಚ್ಚಾಗಲು ಇದು ಅವಕಾಶ ಮಾಡಿಕೊಡುವುದಿಲ್ಲ. ಇನ್ನೇಕೆ ಭಯ ನಿತ್ಯವು ಮೊಟ್ಟೆಯನ್ನು ಸೇವಿಸಲು?

ಮೂಢನಂಬಿಕೆ #6 - ಬಾಳೆಹಣ್ಣುಗಳು ನಿಮಗೆ ಊಟಮಾಡಲು ಪ್ರೋತ್ಸಾಹಿಸುತ್ತವೆ

ಮೂಢನಂಬಿಕೆ #6 - ಬಾಳೆಹಣ್ಣುಗಳು ನಿಮಗೆ ಊಟಮಾಡಲು ಪ್ರೋತ್ಸಾಹಿಸುತ್ತವೆ

ನಂಬಿಕೆಗಳ ಪ್ರಕಾರ ಬಾಳೆಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬು ಇದೆಯಂತೆ. ಅದಕ್ಕಾಗಿ ನಾವು ಅವುಗಳನ್ನು ಕಡಿಮೆ ಸೇವಿಸಬೇಕಂತೆ. ನಿಜ ಏನಪ್ಪ ಎಂದರೆ, ಬಾಳೆಹಣ್ಣುಗಳಲ್ಲಿ ಸುಮಾರು 95 ಕ್ಯಾಲೋರಿಯಷ್ಟು ಪೋಷಕಾಂಶವಿದ್ದು, ಕೇವಲ ಅರ್ಧ ಗ್ರಾಂ ಕೊಬ್ಬು ಇರುತ್ತದೆ. ಇನ್ನು ಬಾಳೆಹಣ್ಣಿನ ಬಗ್ಗೆ ಭಯ ಪಡುವ ಅಗತ್ಯವಿಲ್ಲ, ಒಂದರ ಮೇಲೊಂದು ಸೇವಿಸಲು ಆರಂಭಿಸಿ.

ಮೂಢನಂಬಿಕೆ #7 - ಚಾಕೊಲೇಟ್ ಮೊಡವೆಗಳನ್ನು ಉಂಟು ಮಾಡುತ್ತದೆ.

ಮೂಢನಂಬಿಕೆ #7 - ಚಾಕೊಲೇಟ್ ಮೊಡವೆಗಳನ್ನು ಉಂಟು ಮಾಡುತ್ತದೆ.

ಕೆಲವು ಮಂದಿ ತಾವು ಅಧಿಕವಾಗಿ ಚಾಕೊಲೇಟ್ ಸೇವಿಸಿದ ಪರಿಣಾಮವಾಗಿ ಮೊಡವೆಗಳು ಉಂಟಾಗಿದೆ ಎಂಬ ಕಾರಣವನ್ನು ಹಿಡಿದು ಕೊಂಡು ನಮ್ಮ ಬಳಿಗೆ ಬಂದಿರುತ್ತಾರೆ. ಆದರೆ ಇದು ವೈಙ್ಞಾನಿಕವಾಗಿ ಸಾಭೀತಾಗಿಲ್ಲ. ಯಾವಾಗ ಇದು ವೈಙ್ಞಾನಿಕವಾಗಿ ಸಾಭೀತಾಗಿಲ್ಲವೊ, ನೀವು ಏಕೆ ಭಯಪಡಬೇಕು. ನಿಮಗೆ ಇಷ್ಟ ಬಂದಷ್ಟು ಚಾಕೊಲೇಟ್‍ಗಳನ್ನು ಸೇವಿಸಿ. ಆದರೆ ಒಂದು ವಿಚಾರ ಅದನ್ನು ತಿನ್ನುವಾಗ ಕ್ಯಾಲೋರಿಗಳ ಕುರಿತಾಗಿ ಗಮನಹರಿಸುವುದನ್ನು ಮರೆಯಬೇಡಿ.

ಮೂಢನಂಬಿಕೆ #8- ಸ್ವಾಭಾವಿಕ ಆಹಾರ ಪದಾರ್ಥಗಳು ಕೃತಕ ಆಹಾರಗಳಿಗಿಂತ ಸುರಕ್ಷಿತ

ಮೂಢನಂಬಿಕೆ #8- ಸ್ವಾಭಾವಿಕ ಆಹಾರ ಪದಾರ್ಥಗಳು ಕೃತಕ ಆಹಾರಗಳಿಗಿಂತ ಸುರಕ್ಷಿತ

ನಮ್ಮ ಪ್ರಕೃತಿ ಮಾತೆಯು ನಮಗಾಗಿ ಹಲವಾರು ಸ್ವಾಭಾವಿಕ ಆಹಾರ ಪದಾರ್ಥಗಳನ್ನು ದಯಪಾಲಿಸಿದ್ದಾಳೆ. ಹಾಗೆಂದು ಎಲ್ಲಾ ಸ್ವಾಭಾವಿಕ ಆಹಾರ ಪದಾರ್ಥಗಳನ್ನು ನಾವು ನೇರವಾಗಿ ಸೇವಿಸಲು ಸಾಧ್ಯವಾಗುವುದಿಲ್ಲ. ಮಾನವನು ಪ್ರಯೋಗಾಲಯ ಎಂಬ ಅದ್ಭುತವಾದ ಅವಿಷ್ಕಾರವನ್ನು ಕಂಡು ಹಿಡಿದಿದ್ದಾನೆ. ಇದರಲ್ಲಿ ಸ್ವಾಭಾವಿಕ ಆಹಾರ ಪದಾರ್ಥಗಳನ್ನು ಮಾನವ ನಿರ್ಮಿತ ಅಥವಾ ಸಿಂಥೆಟಿಕ್ ಆಗಿರುವ ಆಹಾರ ಪದಾರ್ಥಗಳ ಜೊತೆಗೆ ಬೆರೆಸಿ ಒಂದು ಹೊಸ ಬಗೆಯ ಪದಾರ್ಥವನ್ನು ತಯಾರಿಸುತ್ತಾನೆ.

ಇವು ಹಲವಾರು ರೋಗರುಜಿನಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿರುತ್ತದೆ. ಹಾಗೆಂದು ಎಲ್ಲಾ ಮಾನವ ನಿರ್ಮಿತ ಕೃತಕ ಆಹಾರ ಪದಾರ್ಥಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ವೈಙ್ಞಾನಿಕವಾಗಿ ಅದು ಸಾಭೀತಾಗುವವರೆಗು ಅದನ್ನು ಸೇವಿಸುವುದು ತಪ್ಪೇನೂ ಅಲ್ಲ. ಇವೇ ಅಲ್ಲದೆ ಆಹಾರ ಪದಾರ್ಥಗಳಿಗೆ ಸಂಬಂಧಿಸಿದ ಇನ್ನಿತರ ಮೂಢನಂಬಿಕೆಗಳು ಹಲವಾರು ಚಾಲ್ತಿಯಲ್ಲಿವೆ.

ನಾನು ನನ್ನ ಮುಂದಿನ ಅಂಕಣಗಳಲ್ಲಿ ಅವುಗಳ ಕುರಿತು ಸವಿಸ್ತಾರವಾಗಿ ತಿಳಿಸುತ್ತೇನೆ. ನಮ್ಮ ಸುತ್ತ ಮುತ್ತಲಿನವರು ಹೇಳುವುದನ್ನು ಕಣ್ಣು ಮುಚ್ಚಿ ಕೇಳುವ ಬದಲು ಆ ಆಹಾರ ಪದಾರ್ಥಗಳ ಸತ್ಯಾಸತ್ಯತೆಯನ್ನು ನಾವೇ ಖುದ್ದಾಗಿ ಪರೀಕ್ಷಿಸುವುದು ಉತ್ತಮ. ಏಕೆಂದರೆ ಸತ್ಯವು ಯಾವಾಗಲು ಸೂರ್ಯ ಚಂದ್ರರಂತೆ ಮರೆಮಾಚಲು ಅಸಾಧ್ಯ.

English summary

8 Myths about Foods and Drinks That We Consume

We all have been told by our grandmothers, parents, and many other people around us, about their beliefs regarding eatable and drinks.
Story first published: Saturday, May 24, 2014, 15:16 [IST]
X
Desktop Bottom Promotion