For Quick Alerts
ALLOW NOTIFICATIONS  
For Daily Alerts

ಅಕ್ಕಿಯ ಹಾಲಿನ 8 ಆರೋಗ್ಯಕಾರಿ ಪ್ರಯೋಜನ

|

ಅಕ್ಕಿಯಿಂದ ಮಾಡಿದ ಹಾಲನ್ನು ರೈಸ್ ಮಿಲ್ಕ್ ಎಂದು ಕರೆಯಲಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಆಶ್ಚರ್ಯಕರ ಮತ್ತು ಆಸಕ್ತಿಕರವಾಗಿರುವ ಈ ಆರೋಗ್ಯಪೂರ್ಣ ಅಕ್ಕಿಯ ಹಾಲು ಜನಪ್ರಿಯ ಪೇಯವಾಗಿದೆ.

ಹೆಚ್ಚಿನ ಜನರು ಅಕ್ಕಿ ಹಾಲನ್ನೇ ಇತರ ಹಾಲಿಗಿಂತ ಹೆಚ್ಚು ಬಳಸುತ್ತಾರೆ. ಇದು ಆರೋಗ್ಯಕರವಾಗಿದ್ದು ದೈಹಿಕ ಮಾನಸಿಕ ಸ್ವಾಸ್ಥ್ಯಕ್ಕೆ ಪರಿಣಾಮಕಾರಿಯಾಗಿದೆ. ಅಕ್ಕಿಯ ಹಾಲಿನ ಮಹತ್ವವನ್ನು ತಿಳಿಯುವ ಮುಂಚೆ ಇದನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ಮೊದಲು ಅರಿಯೋಣ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬಂಗಾರದಂಥ ಅಕ್ಕಿಯನ್ನು ಉಳಿಸುವುದು ಹೇಗೆ?

ಬ್ರೌನ್ ರೈಸ್‌ನಿಂದ ಅಕ್ಕಿಯ ಹಾಲನ್ನು ತಯಾರಿಸಲಾಗುತ್ತದೆ. ಅಕ್ಕಿಯನ್ನು ಬೇಯಿಸುವುದರ ಮೂಲಕ ಇಲ್ಲವೇ ರೈಸ್ ಸಿರಪ್ ಅಥವಾ ಬ್ರೌನ್ ರೈಸ್‌ನಿಂದ ಉತ್ಪತ್ತಿಯಾಗುವ ಪಿಷ್ಟದಿಂದ ಅಕ್ಕಿಯ ಹಾಲನ್ನು ತಯಾರಿಸಲಾಗುತ್ತದೆ. ಅಕ್ಕಿಯ ಹಾಲಿಗೆ ಹಾಲು ದಪ್ಪಗಾಗಿಸುವ ಕೆಲವೊಂದು ಅಂಶಗಳನ್ನು ಸೇರಿಸಲಾಗುತ್ತದೆ.

ಸಕ್ಕರೆ ಅಥವಾ ವೆನಿಲ್ಲಾವನ್ನು ಹಾಲಿನ ಸಿಹಿ ಮತ್ತು ಸುಗಂಧಕ್ಕಾಗಿ ಬಳಸಲಾಗುತ್ತದೆ. ದನದ ಹಾಲಿನ ರುಚಿಯನ್ನೇ ವೆನಿಲ್ಲಾ ಸೇರಿಸಿದ ಅಕ್ಕಿಯ ಹಾಲು ನೀಡುತ್ತದೆ. ಅಕ್ಕಿಯ ಹಾಲು ಸಸ್ಯಾಹಾರಿಗಳಲ್ಲಿ ಅತ್ಯಂತ ಪ್ರಿಯವಾಗಿರುವುದು ಮತ್ತು ಜನಪ್ರಿಯವಾಗಿರುವುದಾಗಿದೆ.

ಅಕ್ಕಿಯ ಹಾಲಿನಲ್ಲಿ ಯಾವುದೇ ಮಾಂಸಹಾರಿ ಅಂಶಗಳಿಲ್ಲ ಮತ್ತು ಪ್ರಾಣಿಗಳ ಕೊಬ್ಬು ಅಥವಾ ಪ್ರಾಣಿಗೆ ಸಂಬಂಧಿಸಿದ ಯಾವುದನ್ನೂ ಇದಕ್ಕೆ ಸೇರಿಸುವುದಿಲ್ಲ. ಆದ್ದರಿಂದ ಇದೊಂದು ಸಸ್ಯಾಹಾರಿ ಹಾಲಾಗಿದೆ. ಲ್ಯಾಕ್ಟೋಸ್ ನಿಮಗಿಷ್ಟವಿಲ್ಲದಿದ್ದರೆ ಅಕ್ಕಿಯ ಹಾಲು ನಿಮಗೆ ಒಳ್ಳೆಯದು. ನಿಮ್ಮ ಚರ್ಮ ಮತ್ತು ಆರೋಗ್ಯಕ್ಕೆ ಅಕ್ಕಿಯ ಹಾಲು ಹೇಗೆ ಉಪಯೋಗಕಾರಿ ಎಂಬುದನ್ನು ಅರಿಯೋಣ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಎದೆ ಹಾಲು ಕೊಡುವುದನ್ನು ನಿಲ್ಲಿಸಬೇಕೆ?

ಜೇನಿನೊಂದಿಗೆ ಅಕ್ಕಿಯ ಹಾಲು:

ಜೇನಿನೊಂದಿಗೆ ಅಕ್ಕಿಯ ಹಾಲು:

ಸೂಕ್ತವಾದ ಫೇಶಿಯಲ್ ಇದಾಗಿದೆ! ಅಕ್ಕಿಯ ಹಾಲಿನೊಂದಿಗೆ ಜೇನನ್ನು ಮಿಶ್ರ ಮಾಡಿಕೊಂಡು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ನಿಮಗೆ ಮೃದುವಾದ ಕಾಂತಿಯುಕ್ತ ಮುಖಾರವಿಂದ ದೊರೆಯುವುದರಲ್ಲಿ ಸಂಶಯವಿಲ್ಲ.

ದೇಹ ಮಾರ್ಜಕ:

ದೇಹ ಮಾರ್ಜಕ:

ತ್ವಚೆಗೆ ಇನ್ನೊಂದು ರೀತಿಯ ಪ್ರಯೋಜನವನ್ನು ಅಕ್ಕಿಯ ಹಾಲು ಈ ವಿಧಾನದಲ್ಲಿ ಉಂಟು ಮಾಡುತ್ತದೆ. ಅಕ್ಕಿಯ ಹಾಲನ್ನು ಬಾದಾಮಿ ಪೇಸ್ಟ್ ಅಥವಾ ಪುಟಾಣಿ ಹುಡಿಯೊಂದಿಗೆ ಮಿಶ್ರ ಮಾಡಿಕೊಂಡು ನಿಮ್ಮ ಮುಖ ತ್ವಚೆಗೆ ಉಜ್ಜಿಕೊಳ್ಳಿ.ನಿಮ್ಮ ದೇಹವನ್ನು ನುಣುಪು ಮತ್ತು ಕಾಂತಿಯುಕ್ತಗೊಳಿಸುತ್ತದೆ.

ಕಪ್ಪು ವರ್ತುಲದ ತುಟಿಗೆ:

ಕಪ್ಪು ವರ್ತುಲದ ತುಟಿಗೆ:

ಕಪ್ಪು ವರ್ತುಲದ ತುಟಿಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅಕ್ಕಿಯ ಹಾಲು ಉತ್ತಮ ಔಷಧವಾಗಿದೆ. ನಿಮ್ಮ ತುಟಿಗೆ ರಂಗನ್ನು ನೀಡಿ ಅದನ್ನು ಇನ್ನಷ್ಟು ಸುಂದರಗೊಳಿಸುವ ಚಮತ್ಕಾರೀ ಗುಣ ಅಕ್ಕಿಯ ಹಾಲಿಗಿದೆ.

.ಸನ್ ಬರ್ನ್ ಅನ್ನು ಹೋಗಲಾಡಿಸುತ್ತದೆ:

.ಸನ್ ಬರ್ನ್ ಅನ್ನು ಹೋಗಲಾಡಿಸುತ್ತದೆ:

ತ್ವಚೆಗೆ ಉತ್ತಮ ಪರಿಹಾರಕವಾಗಿರುವ ಅಕ್ಕಿಯ ಹಾಲು ಸನ್ ಬರ್ನ್‌ನ ಪ್ರಕೋಪಕ್ಕೆ ಉತ್ತಮ ಪರಿಹಾರವನ್ನು ನೀಡುತ್ತದೆ. ನಿಮ್ಮ ತ್ವಚೆಯ ಹೊಳಪನ್ನು ಮರಳಿ ಪಡೆಯಲು ಅಕ್ಕಿಯ ಹಾಲಿಗೆ ಅರಶಿನ ಅಥವಾ ಪುಟಾಣಿ ಹುಡಿಯನ್ನು ಬೆರೆಸಿ ಹಚ್ಚಿಕೊಳ್ಳಿ.

ಆರೋಗ್ಯಕರ ಹೃದಯ:

ಆರೋಗ್ಯಕರ ಹೃದಯ:

ವಿಟಮಿನ್ ಇ ಮತ್ತು ಮೆಗ್ನೇಶಿಯಂ ಅಧಿಕವಾಗಿರುವ ಅಕ್ಕಿಯ ಹಾಲಿನಲ್ಲಿ ಹೃದಯಕ್ಕೆ ಉಪಯೋಗಕಾರಿಯಾಗಿರುವ ಹಲವಾರು ಅಂಶಗಳಿವೆ. ನೀವು ಸಾಕಷ್ಟು ಪ್ರಮಾಣದಲ್ಲಿ ಅಕ್ಕಿಯ ಹಾಲನ್ನು ಸೇವಿಸಿದಂತೆ ಹೃದಯದ ಆರೋಗ್ಯವನ್ನು ನೀವು ಹೆಚ್ಚು ಕಾಪಾಡಿದಂತೆ. ಪಾರ್ಶ್ವವಾಯು ಮತ್ತು ಹೃದಯದ ಇತರ ತೊಂದರೆಗಳನ್ನು ಅಕ್ಕಿಯ ಹಾಲು ನಿವಾರಿಸುತ್ತದೆ.

ರೋಗ ವರ್ಧಿತ ಶಕ್ತಿ ಹೆಚ್ಚಿಸುತ್ತದೆ:

ರೋಗ ವರ್ಧಿತ ಶಕ್ತಿ ಹೆಚ್ಚಿಸುತ್ತದೆ:

ಅಕ್ಕಿಯ ಹಾಲಿನಲ್ಲಿರುವ ಅಗತ್ಯ ಮಿನರಲ್‌ಗಳು ದೇಹದ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿವೆ. ನಿಮ್ಮ ದೇಹದ ನಿರೋಧಕ ಶಕ್ತಿಯನ್ನು ಕುಗ್ಗಿಸುವ ಅಲರ್ಜಿ ಮತ್ತು ಇತರ ಸೋಂಕುಗಳ ವಿರುದ್ಧ ಅಕ್ಕಿಯ ಹಾಲಿನಲ್ಲಿರುವ ಮಿನರಲ್ಸ್‌ಗಳು ಹೋರಾಡುತ್ತವೆ.

ತೂಕ ಇಳಿಕೆಗೆ:

ತೂಕ ಇಳಿಕೆಗೆ:

ತಮ್ಮ ತೂಕವನ್ನು ಇಳಿಸುವ ಮಹತ್ವಾಕಾಂಕ್ಷೆ ಉಳ್ಳವರು ಅಕ್ಕಿಯ ಹಾಲನ್ನು ಬೇರೆ ಹಾಲಿಗೆ ಪರ್ಯಾಯವಾಗಿ ಬಳಸಿ. ನಿಮ್ಮ ತೂಕ ಇಳಿಸುವ ಪ್ರಕ್ರಿಯೆಯಲ್ಲಿ ಇದು ಉಪಯುಕ್ತವಾಗಿದೆ. ಅಕ್ಕಿಯ ಹಾಲಿನಲ್ಲಿ ಕ್ಯಾಲೋರಿ ಪ್ರಮಾಣ ಕಡಿಮೆ ಇದ್ದು ಕೊಬ್ಬಿನಂಶ ಆರೋಗ್ಯಕರ ರೀತಿಯಲ್ಲಿದೆ. ಬ್ರೌನ್ ರೈಸ್ ತೂಕ ಇಳಿಸುವಲ್ಲಿ ಹೆಚ್ಚು ಆಯ್ಕೆಯ ಅಕ್ಕಿಯಾಗಿರುವುದರಿಂದ ಅದರಿಂದಲೇ ತಯಾರಿಸಲಾದ ಅಕ್ಕಿಯ ಹಾಲು ಸಮಾನ ಗುಣಗಳನ್ನು ಹೊಂದಿವೆ.

ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸುತ್ತದೆ:

ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸುತ್ತದೆ:

ಅಕ್ಕಿಯ ಹಾಲಿನಲ್ಲಿ ವಿಟಮಿನ್‌ಗಳು ಮತ್ತು ಕಾರ್ಬೊಹೈಡ್ರೇಟ್‌ಗಳು ಸಾಕಷ್ಟು ಪ್ರಮಾಣದಲ್ಲಿದ್ದು ಇತರ ಹಾಲಿನಲ್ಲಿರುವ ಲ್ಯಾಕ್ಟೋಸ್ ಅಕ್ಕಿಯ ಹಾಲಿನಲ್ಲಿ ಇಲ್ಲವೇ ಇಲ್ಲ. ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಇರುವವರಿಗೆ ಅಕ್ಕಿಯ ಹಾಲು ಉತ್ತಮ ಪರಿಹಾರವಾಗಿದೆ. ಇದು ನಿಮ್ಮ ಹೃದಯವನ್ನು ಕಾಪಾಡಿ ಹೃದಯ ಕಾಯಿಲೆಯನ್ನು ತಡೆಗಟ್ಟುತ್ತದೆ. ಕೊಲೆಸ್ಟ್ರಾಲ್ ಅಂಶಗಳು ಇದರಲ್ಲಿ ಕಡಿಮೆ ಇವೆ.

English summary

8 Health Benefits Of Rice Milk

Rice milk is a dairy free milk that is made out of rice. Yes, it is pretty interesting and a very popular source of health and healthy skin in the present times. You would find people endorsing rice milk more than any other sort of milk.
Story first published: Friday, February 14, 2014, 13:16 [IST]
X
Desktop Bottom Promotion