For Quick Alerts
ALLOW NOTIFICATIONS  
For Daily Alerts

ಹೂಕೋಸಿನ 8 ಆರೋಗ್ಯಕಾರಿ ಪ್ರಯೋಜನ

|

ಕಾಲಿಫ್ಲವರ್ ಭಾರತದ ಖಾದ್ಯಗಳಲ್ಲಿ ತನ್ನದೇ ಆದ ಸ್ಥಾನವನ್ನು ಅಲಂಕರಿಸಿದೆ. ಹಲವಾರು ರೀತಿಯ ತಿಂಡಿಗಳನ್ನು ಇದನ್ನು ಬಳಸಿ ಮಾಡಲಾಗುತ್ತದೆ. ಆದರೆ ಇದರಿಂದ ನಿಮಗುಂಟಾಗುವ ಆರೋಗ್ಯಕಾರಿ ಪ್ರಯೋಜನಗಳ ಬಗೆಗೆ ನಿಮಗೆ ಅರಿವಿದೆಯೇ?

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬೇಯಿಸಿದ ಮೊಟ್ಟೆಯಿಂದ ಆರೋಗ್ಯಕರ ಪ್ರಯೋಜನ

ಕಾಲಿಫ್ಲವರ್‌ನಲ್ಲಿ ಸಲ್ಫರ್ ಅಂಶ ಧಾರಾಳವಗಿದ್ದು ಜಠರದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ಸಹಾಯಕವಾಗಿವೆ. ಕಾಲಿಫ್ಲವರ್ ಜ್ಯೂಸ್ ಹಲವಾರು ರೀತಿಯ ಕ್ಯಾನ್ಸರ್ ಅನ್ನು ನಿಮ್ಮಿಂದ ದೂರಮಾಡುತ್ತದೆ. ಕಾಲಿಫ್ಲವರ್‌ನಲ್ಲಿ ಜಿಂಕ್, ಫೋಸ್‌ಫರಸ್, ಮೆಗ್ನೇಶಿಯಂ, ಸೆಲೆನೀಯಮ್, ಸೋಡಿಯಂ ಹೇರಳವಾಗಿದೆ. ಜಿಂಕ್ ಗಾಯ ಒಣಗುವಲ್ಲಿ ಸಹಾಯ ಮಾಡಿದರೆ, ಫೋಸ್‌ಫರಸ್ ಮೂಳೆಗಳನ್ನು ಸುದೃಢಗೊಳಿಸುತ್ತದೆ.

ಸೆಲೆನೀಯಂ ರೋಗನಿರೋಧಕ ಶಕ್ತಿಯನ್ನು ಅಧಿಕಗೊಳಿಸಿದರೆ, ಮೆಗ್ನೇಶಿಯಂ ಹಾರ್ಮೋನ್ ಉತ್ಪತ್ತಿ ಮಾಡುವ ಪ್ಯಾರಥೈರೋಯ್ಡ್ ಗ್ಲಾಂಡ್ ಕಾರ್ಯವೈಶಿಷ್ಟ್ಯವನ್ನು ವರ್ಧಿಸುತ್ತದೆ. ಸೋಡಿಯಂ ದೇಹದಲ್ಲಿನ ಫ್ಲೂಯಿಡ್ಸ್ ಅನ್ನು ಸರಿದೂಗಿಸುತ್ತದೆ.ಇಷ್ಟೇ ಅಲ್ಲದೆ ಕಾಲಿಫ್ಲವರ್‌ನ ಮತ್ತಷ್ಟು ವಿಶೇಷ ಗುಣಗಳನ್ನು ಮುಂದೆ ಓದಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತಲೆಗೂದಲಿನ ಆರೋಗ್ಯ ವರ್ಧಕ 20 ಆಹಾರ

1.ಹೃದಯಕ್ಕೆ ಒಳ್ಳೆಯದು

1.ಹೃದಯಕ್ಕೆ ಒಳ್ಳೆಯದು

ಇದೊಂದು ಹೃದಯಕ್ಕೆ ಒಳ್ಳೆಯದಾಗಿರುವ ತರಕಾರಿಯಾಗಿದ್ದು, ಹೃದಯವನ್ನು ಸುಸ್ಥಿತಿಯಲ್ಲಿಡುತ್ತದೆ.

2.ಮಲಬದ್ಧತೆ ನಿವಾರಕ

2.ಮಲಬದ್ಧತೆ ನಿವಾರಕ

ಮಲಬದ್ಧತೆ ನಿಮ್ಮ ಸಮಸ್ಯೆಯಾಗಿದ್ದರೆ, ಕಾಲಿಫ್ಲವರ್ ಜ್ಯೂಸ್ ಸೇವಿಸಿ. ನಿಮ್ಮ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಇದು ಉತ್ತ ಪಡಿಸಿ ಮಲಬದ್ಧತೆ ದೋಷವನ್ನು ನಿವಾರಿಸುತ್ತದೆ.

3.ಗರ್ಭಾವಸ್ಥೆಯ ಸಮಯದಲ್ಲಿ

3.ಗರ್ಭಾವಸ್ಥೆಯ ಸಮಯದಲ್ಲಿ

ಕಾಲಿಫ್ಲವರ್‌ನಲ್ಲಿರುವ ಫೋಲೇಟ್, ವಿಟಮಿನ್ ಎ ವಿಟಮಿನ್ ಬಿ ಹೊಸ ಕೋಶಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಗರ್ಭಿಣಿ ಸ್ತ್ರೀಯರಿಗೆ ಇದು ಉತ್ತಮ ಆಹಾರವಾಗಿದೆ.

4.ರೋಗನಿರೋಧಕ ಶಕ್ತಿಗಾಗಿ

4.ರೋಗನಿರೋಧಕ ಶಕ್ತಿಗಾಗಿ

ಈ ಆರೋಗ್ಯಕಾರಿ ತರಕಾರಿ ಉತ್ಕರ್ಷಣ ನಿರೋಧಿ ಅಂಶವನ್ನು ಒಳಗೊಂಡಿದ್ದು ಉತ್ತಮ ಸುದೃಢ ನಿರೋಧಕ ಶಕ್ತಿಯನ್ನು ಉತ್ಪಾದಿಸುತ್ತದೆ.

5.ಗರ್ಭಿಣಿ ಸ್ತ್ರೀಯರಿಗೆ

5.ಗರ್ಭಿಣಿ ಸ್ತ್ರೀಯರಿಗೆ

ಕಾಲಿಫ್ಲವರ್‌ನಲ್ಲಿರುವ ವಿಟಮಿನ್ ಸಿ ಅಂಶ, ಗರ್ಭಿಣಿಯರಲ್ಲಿ ರೋಗ ನಿರೋಧಕ ಅಂಶವನ್ನು ವೃದ್ಧಿಸಿ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುತ್ತದೆ.

6.ಮೂಳೆಗಳ ಸ್ವಾಸ್ಥ್ಯಕ್ಕಾಗಿ

6.ಮೂಳೆಗಳ ಸ್ವಾಸ್ಥ್ಯಕ್ಕಾಗಿ

ಕಾಲಿಫ್ಲವರ್‌ನ ಆರೋಗ್ಯ ಪ್ರಯೋಜನಗಳು ಇಲ್ಲಿಗೆ ಕೊನೆಯಾಗುವುದಿಲ್ಲ. ಇದರಲ್ಲಿರುವ ಕ್ಯಾಲ್ಶಿಯಂನ ಅಧಿಕ ಅಂಶಗಳು ಮೂಳೆಗಳ ಸ್ವಾಸ್ಥ್ಯಕ್ಕೆ ಹೆಚ್ಚು ಉಪಕಾರಿ.

7.ಕ್ಯಾನ್ಸರ್ ಅಪಾಯವನ್ನು ತಡೆಗಟ್ಟುತ್ತದೆ

7.ಕ್ಯಾನ್ಸರ್ ಅಪಾಯವನ್ನು ತಡೆಗಟ್ಟುತ್ತದೆ

ಕಾಲಿಫ್ಲವರ್ ಕ್ಯಾನ್ಸರ್ ತಡೆಗಟ್ಟುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂಬುದು ಹಲವಾರು ಅಧ್ಯಯನಗಳಿಂದ ಸಾಬೀತಾಗಿದೆ. ಸ್ತನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಮೂತ್ರಕೋಶದ ಕ್ಯಾನ್ಸರ್ ಅಪಾಯವನ್ನು ಇದು ತಡೆಗಟ್ಟುತ್ತದೆ.

8.ತೂಕ ಇಳಿಕೆಗಾಗಿ

8.ತೂಕ ಇಳಿಕೆಗಾಗಿ

ಕಾಲಿಫ್ಲವರ್‌ನ ಉತ್ತಮ ಅಂಶಗಳು ತೂಕ ಇಳಿಸುವಲ್ಲಿ ಮಹತ್ವಕಾರಿಯಾಗಿದೆ. ಇದರಲ್ಲಿರುವ ಫೋಲೆಟ್ ತೂಕ ಇಳಿಕೆಯಲ್ಲಿ ಪಾತ್ರ ವಹಿಸುತ್ತದೆ. ಒಂದು ಕಪ್ ಕಾಲಿಫ್ಲವರ್ 30 ಕ್ಯಾಲೋರಿಗಳನ್ನು ಒಳಗೊಂಡಿದೆ.

Read more about: health ಆರೋಗ್ಯ
English summary

8 Health Benefits of Cauliflower

Cauliflower is an important part of Indian cuisine and there are many delicacies prepared with it. But, did you ever think that it could do a lot of help to your health
X
Desktop Bottom Promotion