For Quick Alerts
ALLOW NOTIFICATIONS  
For Daily Alerts

ಪುರುಷರ ಸ್ತನಗಳ ಗಾತ್ರವನ್ನು ತಗ್ಗಿಸಲು ಸೂಕ್ತ ಸಲಹೆಗಳು

By Gururaja Achar
|

ನೀವು ಪುರುಷರೇ..?! ನೀವು ಉಬ್ಬಿದ ಎದೆಯ ಸಮಸ್ಯೆಯಿ೦ದ ಬಳಲುತ್ತಿರುವಿರಾ...?! ಕನ್ನಡಿಯಲ್ಲಿ ನಿಮ್ಮ ಶರೀರವನ್ನು ನೋಡಿಕೊ೦ಡಾಗ ನಿಮಗೆ ನಾಚಿಕೆಯಾಗುತ್ತದೆಯೇ ?! ಜನರು ನಿಮ್ಮ ಉಬ್ಬಿದ ಎದೆಯನ್ನು ಕುರಿತು ತಮಾಷೆ ಮಾಡುತ್ತಾರೆಯೇ ?! ಈ ಪ್ರಶ್ನೆಗಳಿಗೆ ನಿಮ್ಮ ಉತ್ತರವು ಹೌದೆ೦ದಾದರೆ, ಬದಲಾವಣೆಗೆ ಇದು ಸೂಕ್ತ ಕಾಲವಾಗಿದೆ ಹಾಗೂ ನಿಮ್ಮ ಈ ಎಲ್ಲಾ ಸಮಸ್ಯೆಗಳಿಗೆ ವಿದಾಯ ಹೇಳುವ ಕಾಲ ಸನ್ನಿಹಿತವಾಗಿದೆ.

ಯಾಕೆ೦ದರೆ, ನಾವೀಗ ನಿಮಗಾಗಿ, ನಿಮ್ಮ ಉಬ್ಬಿದ ಸ್ತನಗಳ ಗಾತ್ರವನ್ನು ಕುಗ್ಗಿಸುವ ಕೆಲವೊ೦ದು ವ್ಯಾಯಾಮಗಳ ಬಗ್ಗೆ ತಿಳಿಸಲಿದ್ದೇವೆ. ಪುರುಷರಲ್ಲಿ ಸ್ತನಗಳು ಜೋತುಬೀಳುವ೦ತಾಗಲು ಅನೇಕ ಕಾರಣಗಳಿರುತ್ತವೆ. ಇದಕ್ಕೆ ಔಷಧಿಗಳ ಅಡ್ಡಪರಿಣಾಮವು ಕಾರಣವಾಗಿರಬಹುದು ಅಥವಾ ಅತಿಯಾದ ಆಹಾರ ಸೇವನೆಯು ಕಾರಣವಾಗಿರಬಹುದು ಅಥವಾ ಇದಕ್ಕೆ ಅನುವ೦ಶೀಯ ಕಾರಣವೂ ಇದ್ದಿರಬಹುದು. ಹಾಗೆ೦ದ ಮಾತ್ರಕ್ಕೆ ಈ ಸಮಸ್ಯೆಗೆ ಪರಿಹಾರವೇ ಇಲ್ಲವೆ೦ದೇನಲ್ಲ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೃದಯಾಘಾತದಿಂದ ರಕ್ಷಿಸಿಕೊಳ್ಳುವುದು ಹೇಗೆ?

ಸರಿಯಾದ ವ್ಯಾಯಾಮದ ಮೂಲಕ ಉಬ್ಬಿದ ಸ್ತನಗಳ ಗಾತ್ರವನ್ನು ಕುಗ್ಗಿಸಲು ಸಾಧ್ಯವಿದೆ. ಈ ಅಂಕಣದಲ್ಲಿ, ನಿಮ್ಮ ಉಬ್ಬಿದ ಸ್ತನಗಳ ಗಾತ್ರವನ್ನು ಕಡಿಮೆ ಮಾಡಿ, ಅವು ಆಕರ್ಷಕವಾಗಿ, ನಿಮ್ಮ ಶರೀರಕ್ಕೆ ತಕ್ಕಂತಹ, ಸ್ನಾಯುಯುಕ್ತ, ಬಲಶಾಲಿ ಎದೆಯನ್ನು ಹೊಂದಲು ನೆರವಾಗುವಂತಹ ವ್ಯಾಯಾಮಗಳ ಕುರಿತು ಹೇಳಲಿದ್ದೇವೆ. ಆದರೆ, ಒಂದು ವಿಚಾರವನ್ನು ಈ ಸಂದರ್ಭದಲ್ಲಿ ನೆನಪಿಟ್ಟುಕೊಳ್ಳಬೇಕು. ಅದೇನೆಂದರೆ, ಈ ವ್ಯಾಯಾಮಗಳು ಪರಿಣಾಮಕಾರಿಯಾಗಲು ನೀವು ಜಂಕ್ ಫುಡ್ ಗಳಂತಹ ಎಣ್ಣೆ ಪದಾರ್ಥಗಳನ್ನು ಎಂದಿಗೂ ಸೇವಿಸಬಾರದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬಾಳೆಹಣ್ಣಿನ ಹತ್ತು ಹಲವು ಉಪಯೋಗಗಳು

ಅತಿಯಾಗಿ ಆಹಾರ ಸೇವಿಸಬಾರದು, ಅತಿಯಾಗಿ ಸಿಹಿ ಪದಾರ್ಥಗಳನ್ನು ತಿನ್ನಬಾರದು, ಹಾಗೂ ಈ ವ್ಯಾಯಾಮಗಳನ್ನು ಪ್ರತಿದಿನವೂ ಕೂಡ ಸರಿಯಾದ ರೀತಿಯಲ್ಲಿ ಮಾಡಬೇಕು. ಈ ಮೇಲೆ ಸೂಚಿಸಿದ ಯಾವುದೇ ನಿಬಂಧನೆಯನ್ನು ನೀವು ಅನುಸರಿಸಲು ವಿಫಲರಾದಿರೆದಾoದರೆ, ಫಲಿತಾಂಶವು ಶೇ. 60 ರಷ್ಟು ಕುಸಿಯುತ್ತದೆ ಹಾಗೂ ನೀವು ಕೇವಲ ಶೇ. 40 ರಷ್ಟು ಮಾತ್ರವೇ ಈ ವ್ಯಾಯಾಮಗಳ ಪ್ರಯೋಜನವನ್ನು ಪಡೆಯುವ೦ತಾಗುತ್ತದೆ. ಈಗ ಈ ವ್ಯಾಯಾಮಗಳ ಬಗ್ಗೆ ನೋಡೋಣ:

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನೈಸರ್ಗಿಕವಾಗಿ ಸ್ತನದ ಗಾತ್ರವನ್ನು ಹೆಚ್ಚಿಸುವುದು ಹೇಗೆ?

1. ಓಡುವುದು

1. ಓಡುವುದು

ನೀವು ಉಬ್ಬಿರುವ ಸ್ತನಗಳ ಸಮಸ್ಯೆಯಿ೦ದ ಬಳಲುತ್ತಿರುವಿರಾದರೆ, ಓಟವನ್ನೊಳಗೊoಡ ವ್ಯಾಯಾಮವು ನಿಮಗೆ ಅತಿ ಮುಖ್ಯವಾದುದಾಗಿದೆ. ಏಕೆಂದರೆ, ನಿಮ್ಮ ಶರೀರದ ಹೆಚ್ಚುವರಿ ಕೊಬ್ಬನ್ನು ಕರಗಿಸುವಲ್ಲಿ ಈ ವ್ಯಾಯಾಮದ ಪಾತ್ರವು ಅತೀ ಮಹತ್ತರದ್ದಾಗಿದೆ. ಕೇವಲ ನಿಮ್ಮ ಎದೆಯ ಭಾಗದ ಕೊಬ್ಬು ಮಾತ್ರವಲ್ಲದೇ, ನಿಮ್ಮ ಶರೀರದ ಇತರ ಭಾಗವಾದ ಹೊಟ್ಟೆ, ಕಿಬ್ಬೊಟ್ಟೆಗಳ ಭಾಗಗಳಿಂದಲೂ ಕೂಡ ಈ ವ್ಯಾಯಾಮವು ಕೊಬ್ಬನ್ನು ಕರಗಿಸುತ್ತದೆ. ಈ ಮಾತಿನ ತಾತ್ಪರ್ಯವೇನೆಂದರೆ, ಓಟವು ನಿಮ್ಮ ತಲೆಯ ಕೂದಲಿನಿಂದ ಹಿಡಿದು ಕಾಲಿನ ಬೆರಳುಗಳವರೆಗಿನ ಎಲ್ಲಾ ಅವಯವಗಳನ್ನೂ ಸಹ ಅಲುಗಾಡಿಸುತ್ತದೆ. ಓಟವು ಶೇ.70 ರಿಂದ 80 ರಷ್ಟು ಕೊಬ್ಬನ್ನು ಕಳೆದುಕೊಳ್ಳುವುದರಲ್ಲಿ ಸಹಕಾರಿಯಾಗಿದೆ. ನೀವು ನಿಮ್ಮ ಎದೆಯ ಭಾಗದ ಕೊಬ್ಬನ್ನು ಕರಗಿಸಲು ಬಯಸುವಿರಾದರೆ, ನೀವು ದಿನವೊಂದಕ್ಕೆ ಕನಿಷ್ಟ ಪಕ್ಷ 2 ಕಿ.ಮೀ. ನಷ್ಟಾದರೂ ಓಡಲೇಬೇಕು ಹಾಗೂ ಈ ವಿಚಾರದಲ್ಲಿ ನಿಮಗೆ ನೀವೇ ಪ್ರಾಮಾಣಿಕರಾಗಿರಬೆಕು.

2. ಹಗ್ಗದಾಟ (rope skipping)

2. ಹಗ್ಗದಾಟ (rope skipping)

ನಿಮ್ಮ ಉಬ್ಬಿದ ಸ್ತನಗಳ ಗಾತ್ರವನ್ನು ತಗ್ಗಿಸಲು ಇದು ಮತ್ತೊಂದು ಬಹು ಉಪಯುಕ್ತವಾದ ವ್ಯಾಯಾಮವಾಗಿದೆ. ನಿಮ್ಮ ಎದೆ ಮತ್ತು ಶರೀರದ ಇತರ ಭಾಗಗಳಲ್ಲಿನ ಕೊಬ್ಬನ್ನು ತಗ್ಗಿಸಲು ಇದು ಶೇ. 100% ರಷ್ಟು ಪರಿಣಾಮಕಾರಿ. ಈ ವ್ಯಾಯಾಮವನ್ನು ನೀವು ಪ್ರಾಮಾಣಿಕವಾಗಿ ಮಾಡಿದ್ದೇ ಆದರೆ, ಕೇವಲ ಒಂದು ತಿಂಗಳಿನೊಳಗೆ ಇದರ ಫಲಿತಾಂಶವನ್ನು ಕಾಣಬಹುದು. ನೀವು ಈ ವ್ಯಾಯಾಮವನ್ನು ಓಟದ ನಂತರ ಕೈಗೊಳ್ಳಬಹುದು ಇಲ್ಲವೇ ನೀವು ಓಟವನ್ನು ಕೈಗೊಳ್ಳದೆಯೂ ಸಹ ಹಗ್ಗದಾಟವನ್ನು ನಡೆಸಬಹುದು. ಆದರೆ ಯಾವಾಗಲೂ ನೆನಪಿಡಿ. ಈ ಹಗ್ಗದಾಟವನ್ನು ದಿನಕ್ಕೆರಡು ಬಾರಿ ಕೈಗೊಳ್ಳಬೇಕು; ಒಮ್ಮೆ, ಓಟದ ನಂತರ ಹಾಗೂ ಮತ್ತೊಮ್ಮೆ, ನಿಮಗೆ ಯಾವಾಗಲಾದರೂ ಬಿಡುವಿದ್ದಾಗ. ಹಗ್ಗದಾಟವನ್ನು ನಡೆಸುವಾಗ ನಿಮಗೆ ಯಾವುದೇ ಸಮಸ್ಯೆ ಉಂಟಾದರೆ, ನೀವು ಈ ಹಗ್ಗದಾಟವನ್ನು ಸರಳ ನೆಗೆತದೊoದಿಗೆ ಆರಂಭಿಸಬಹುದು. ಆರಂಭದಲ್ಲಿ ಸರಿಸುಮಾರು 90 ರಿಂದ 150 ಬಾರಿ ಜಿಗಿಯಿರಿ ನಂತರ ನಿಮ್ಮ ಮಿತಿಗನುಗುಣವಾಗಿ ಜಿಗಿತದ ಸಂಖ್ಯೆಯನ್ನು ಹೆಚ್ಚಿಸಿರಿ. ಈ ಸಂಖ್ಯೆಗಳ ಬಗ್ಗೆ ಭಯ ಪಡುವ ಕಾರಣವಿಲ್ಲ. ಮೇಲಿನ ಸಂಖ್ಯೆಯ ಜಿಗಿತಗಳನ್ನು ನೀವು 3 ವಿಭಾಜಿತ ಹಂತಗಳಲ್ಲಿ ನಡೆಸಬಹುದು.

3. ಪುಶ್‌ಅಪ್

3. ಪುಶ್‌ಅಪ್

ಈ ವಿಧದ ವ್ಯಾಯಾಮವು ನಿಮ್ಮ ಎದೆಗೆ ಸ್ನಾಯುಯುಕ್ತ ಆಕಾರವನ್ನು ಒದಗಿಸುವಲ್ಲಿ ಸಹಕಾರಿಯಾಗಿದೆ. ಈ ವ್ಯಾಯಾಮವು ತುಸು ಕಠಿನವಾಗಿದ್ದರೂ ಕೂಡ ಅಸಾಧ್ಯವೇನಲ್ಲ. ಈ ತೆರನಾದ ವ್ಯಾಯಾಮವು ಎದೆಯ ಭಾಗಕ್ಕೆ ಅತೀ ಪ್ರಶಸ್ತವಾಗಿದೆ ಹಾಗೂ ನಿಮ್ಮ ಎದೆಯ ಭಾಗದಿಂದ ಕೊಬ್ಬನ್ನು ಕರಗಿಸುವಲ್ಲಿ ಬಹು ಪರಿಣಾಮಕಾರಿಯಾಗಿದೆ. ಈ ವ್ಯಾಯಾಮವನ್ನು ಸರಿಯಾದ ರೀತಿಯಲ್ಲಿ ನಡೆಸಲು, ಆರoಭದಲ್ಲಿ ನಿಮಗೇನಾದರೂ ತೊಡಕುoಟಾದರೆ, ನೀವು ನಿಮ್ಮ ಪಾದಗಳ ಬದಲಿಗೆ ನಿಮ್ಮ ಮೊಣಕಾಲುಗಳನ್ನು ಬಳಸಬಹುದು. ಕ್ರಮೇಣ ನಿಮ್ಮ ತೋಳುಗಳು ಶಕ್ತಿಯುತವಾದಂತೆ, ನೀವು ಈ ವ್ಯಾಯಾಮವನ್ನು ಸರಿಯಾದ ರೀತಿಯಲ್ಲಿ ಕೈಗೊಳ್ಳಬಹುದು. ಈ ವ್ಯಾಯಾಮವನ್ನು ನೀವು ಓಟ ಮತ್ತು ಹಗ್ಗದಾಟದ ನಂತರ ಕೈಗೊಳ್ಳಬಹುದು. Pushup ಗಳನ್ನು ಕೈಗೊಳ್ಳಲು ನಿಮ್ಮ ಶರೀರವು ಬೆಚ್ಚಗಾಗಿರುವುದು ಅಗತ್ಯ ಇಲ್ಲದಿದ್ದರೆ ಮುಂದೆ ಸಮಸ್ಯೆಗಳುoಟಾಗಬಹುದು.

4. ಚಿನ್- ಅಪ್

4. ಚಿನ್- ಅಪ್

ಚಿನ್- ಅಪ್‌ಗಳು ಉನ್ನತಮಟ್ಟದ ವ್ಯಾಯಾಮಗಳಾಗಿದ್ದು, ಸ್ಥೂಲಕಾಯವುಳ್ಳವರಿಗೆ ನಿರ್ವಹಿಸಲು ಸ್ವಲ್ಪ ಕಷ್ಟವಾಗಬಹುದು. ಆದರೆ, ಈ ವ್ಯಾಯಾಮಗಳು ನಿಮ್ಮ ಶರೀರಕ್ಕೆ ಅತೀವವಾದ ಶಕ್ತಿಯನ್ನು ಒದಗಿಸುತ್ತವೆ ಹಾಗೂ ನಿಮ್ಮ ಶರೀರವನ್ನು ಸ್ನಾಯುಯುತ ಮತ್ತು ಆಕರ್ಷಕವನ್ನಾಗಿಸುತ್ತವೆ. ಈ ತೆರನಾದ ವ್ಯಾಯಾಮಗಳನ್ನು ನಿರ್ವಹಿಸುವಾಗ ನೀವು ಇತರರ ಸಹಕಾರವನ್ನು ಪಡೆಯಬಹುದು. ಸಹಾಯಕನು, ನಿಮ್ಮ ಮೊಣಕಾಲನ್ನು ಆಧರಿಸಿ ನಿಮ್ಮನ್ನು ಎತ್ತುವುದರ ಮೂಲಕ ನಿಮಗೆ ಸಹಕಾರಿಯಾಗಬಲ್ಲನು. ಆರಂಭದಲ್ಲಿ ನೀವು ಸಹಾಯಕರ ಸಹಾಯವನ್ನು ಪಡೆಯಬಹುದು, ಆದರೆ, ಕೆಲ ತಿಂಗಳುಗಳ ನಂತರ, ನಿಮ್ಮ ತೋಳುಗಳು ನಿಮ್ಮ ತೂಕವನ್ನು ತಾಳಿಕೊಳ್ಳಲು ಸಮರ್ಥವಾದ ನಂತರ, ಈ ವ್ಯಾಯಾಮವನ್ನು ನೀವೇ ಸ್ವತಂತ್ರವಾಗಿ ಕೈಗೊಳ್ಳಬಹುದು.

5. ಡಂಬಲ್

5. ಡಂಬಲ್

ನಿಮ್ಮ ಎದೆಯ ಸ್ನಾಯುಗಳಿಗೆ ಆಕಾರವನ್ನೋದಗಿಸುವ ಮತ್ತೊಂದು ವ್ಯಾಯಾಮವು ಇದಾಗಿರುತ್ತದೆ. ಈ ವ್ಯಾಯಾಮವು ನಿಮ್ಮ ಎದೆಯು ವಿಸ್ತಾರಗೊಳ್ಳಲು ಸಹಕಾರಿಯಾಗಿದೆ ಹಾಗೂ ನಿಮ್ಮ ಎದೆಯು ಮತ್ತಷ್ಟು ಆಕರ್ಷಕವಾಗಿರುವಂತೆ ಮಾಡುತ್ತದೆ. ಈ ವ್ಯಾಯಾಮವನ್ನು ನಿರ್ವಹಿಸಲು ನಿಮಗೆ ಒಂದು ಮೇಜು (table), ಡಂಬಲ್‌ಗಳು, ಅಥವಾ ಇತರೆ ಯಾವುದೇ ಭಾರವಾದ ವಸ್ತುಗಳ ಅವಶ್ಯಕತೆಯಿರುತ್ತದೆ. ಈ ಭಾರವಾದ ವಸ್ತುಗಳು, ನೀವು ಸಮತೋಲನವನ್ನು ಕಳೆದುಕೊಳ್ಳದಂತೆ ಕೈಗಳಿಂದ ಹಿಡಿಯಲು ಸಾಧ್ಯವಾಗುವoತಿರಬೆಕು. ಈ ವ್ಯಾಯಾಮವನ್ನು ಸರಿಯಾಗಿ ನಿರ್ವಹಿಸುವುದರ ಕುರಿತು ನೀವು YouTube ನಲ್ಲಿ ಮಾಹಿತಿಗಾಗಿ ಶೋಧಿಸಬಹುದು. YouTube ನಲ್ಲಿ ಈ ವ್ಯಾಯಾಮ ನಿರ್ವಹಣೆಯ ಕುರಿತು ಸಾಕಷ್ಟು ತರಬೇತಿ ಸ್ಲೈಡ್‌ಗಳು ನಿಮಗೆ ದೊರಕುತ್ತವೆ.

6. ಬೆಂಚ್ ಪ್ರೆಸ್ (Bench press)

6. ಬೆಂಚ್ ಪ್ರೆಸ್ (Bench press)

ಎದೆಯಲ್ಲಿನ ಹೆಚ್ಚುವರಿ ಕೊಬ್ಬನ್ನು ನಿವಾರಿಸಿ, ಅದನ್ನು ಸ್ನಾಯುಯುತವನ್ನಾಗಿಸಲು ಸಮರ್ಪಿತವಾದ ಮತ್ತೊಂದು ವ್ಯಾಯಾಮವೇ ಬೆಂಚ್ ಪ್ರೆಸ್. ವಿವಿಧ ಬೆಂಚ್ ಪ್ರೆಸ್ ವ್ಯಾಯಾಮಗಳು ಇಂತಿವೆ: inclined, declined, ಮತ್ತು straight. ನಿಮ್ಮ ಎದೆಗೆ ಸರಿಯಾದ ಆಕೃತಿಯನ್ನು ಒದಗಿಸಲು ಈ ವ್ಯಾಯಾಮವು ಸಹಕಾರಿಯಾಗಿದೆ. ನೀವು ನಿಮ್ಮ ಎದೆಯ ಗಾತ್ರವನ್ನು ತಗ್ಗಿಸಲು, ಇವುಗಳ ಪೈಕಿ ಯಾವುದಾದರೊಂದು ಅಥವಾ ಎಲ್ಲಾ ವ್ಯಾಯಾಮಗಳನ್ನು ಕೂಡ ಮಾಡಬಹುದು.

7. ಟಕ್ ಜಂಪ್ಸ್ (Tuck jumps)

7. ಟಕ್ ಜಂಪ್ಸ್ (Tuck jumps)

ಈ ತೆರನಾದ ವ್ಯಾಯಾಮದಲ್ಲಿ, ನೀವು ಜಿಗಿಯುವಾಗ, ನಿಮ್ಮ ಎದೆಯನ್ನು ನಿಮ್ಮ ಮೊಣಕಾಲುಗಳಿoದ ಸ್ಪರ್ಶಿಸಬೇಕಾಗುತ್ತದೆ. ಆರಂಭದ ಹಂತದಲ್ಲಿರುವವರಿಗೆ ಈ ವ್ಯಾಯಾಮವು ಕಷ್ಟಕರ. ಆದರೆ, ನೀವು ದಿನಂಪ್ರತಿ ಜಿಗಿತ ಅಥವಾ ಹಗ್ಗದಾಟವನ್ನು ಕೈಗೊಂಡಿದ್ದೇ ಆದರೆ, ಬಹುಬೇಗನೆ ನೀವು ಈ ವ್ಯಾಯಾಮವನ್ನು ಸಹ ನಿರ್ವಹಿಸಬಹುದು. ಈಗಾಗಲೇ ತಿಳಿಸಿರುವಂತೆ ಈ ವ್ಯಾಯಾಮವು ಕಷ್ಟಕರವಾಗಿದ್ದರೂ ಕೂಡ, ಫಲಿತಾಂಶವು ಅದೇ ಪ್ರಮಾಣದಲ್ಲಿ ಪರಿಣಾಮಕಾರಿಯಾಗಿಯೂ ಇರುತ್ತದೆ. ದಿನವೊಂದಕ್ಕೆ 3 ಆವೃತ್ತಿಗಳಲ್ಲಿ 30 ಬಾರಿ ಟಕ್ ಜಂಪ್ಸ್‪ಗಳನ್ನು ನಿರ್ವಹಿಸಿದರೆ ಶೇ. 20 ರಷ್ಟು ತೂಕನಷ್ಟವಾಗುತ್ತದೆ. ಸಂಖ್ಯೆಯನ್ನು ಹೆಚ್ಚಿಸಿದoತೆಲ್ಲಾ ಫಲಿತಾಂಶವು ಸಹ ಉತ್ತಮವಾಗಿರುತ್ತದೆ.

8. ಪುರುಷರ ಬ್ರಾ

8. ಪುರುಷರ ಬ್ರಾ

ಅತೀ ಸಡಿಲವಾದ ಸ್ತನಗಳನ್ನು ಹೊಂದಿರುವ ಪುರುಷರಿಗಾಗಿಯೇ ಇದು ಮೀಸಲಾಗಿದೆ. ನಿಮ್ಮ ಎದೆಯು ಅತೀ ಸಡಿಲವಾಗಿದ್ದು, ವ್ಯಾಯಾಮ ಕಾಲದಲ್ಲಿ ಇದು ಅಹಿತಕರ ಅನುಭವವನ್ನು ನೀಡುತ್ತಿದ್ದರೆ ಅಂತಹ ಸಂದರ್ಭದಲ್ಲಿ ನೀವು ಈ ಬ್ರಾ ವನ್ನು ಧರಿಸಬಹುದು. ಈ ಯೋಚನೆಯು ನಿಮಗೆ ವಿಚಿತ್ರವೆನಿಸಿದರೂ ಸಹ, ವ್ಯಾಯಾಮ ನಿರ್ವಹಿಸಲು ಕಷ್ಟವಾದಾಗ ಇದು ಪ್ರಯೋಜನಕಾರಿಯಾಗಿದೆ. ಆದ್ದರಿಂದ, ಆರಂಭದ ಹಂತದಲ್ಲಿ ನೀವು ಈ ಉಪಾಯವನ್ನು ಅನುಸರಿಸಬಹುದು ಮತ್ತು 2 ಅಥವಾ 3 ತಿಂಗಳುಗಳಲ್ಲಿ ಸಹಜವಾಗಿಯೇ ನೀವು ಈ ಬ್ರಾ ಹಾಗೂ ಉಬ್ಬಿದ ಎದೆ ಇವೆರಡರಿಂದಲೂ ಮುಕ್ತರಾಗುವಿರಿ.

ಗಮನಿಸಿ: ಪುರುಷ ಸ್ತನಗಳನ್ನು ನಿವಾರಿಸಲು ಮೊದಲ 3 ವ್ಯಾಯಾಮಗಳು ಅತೀ ಮುಖ್ಯ ಹಾಗೂ ಅಗತ್ಯವಾಗಿ ನಿರ್ವಹಿಸಲೇಬೇಕಾದವುಗಳು. ಅದ್ದರಿಂದ, ಅಲ್ಪ ಅವಧಿಯಲ್ಲಿ ನೀವು ಉತ್ತಮ ಪರಿಣಾಮಗಳನ್ನು ಬಯಸುವಿರಾದರೆ, ನೀವು ಈ ವ್ಯಾಯಾಮಗಳನ್ನು ಪ್ರತಿದಿನ ಪ್ರಾಮಾಣಿಕವಾಗಿ ನಿರ್ವಹಿಸಬೇಕಾಗುತ್ತದೆ.

English summary

8 effective exercises to reduce man boobs

Are you a man? Are you suffering from problem of saggy chest? Are feel shame when you see your body in mirror? Are people teasing you? If your answer is yes, then this is time to change and say bye to your all problems.
X
Desktop Bottom Promotion