For Quick Alerts
ALLOW NOTIFICATIONS  
For Daily Alerts

ಸೊಳ್ಳೆ ಕಡಿತವನ್ನು ನಿವಾರಿಸಿ ಈ 8 ವಿಧಾನಗಳಿಂದ!

|

ಟೆರೇಸ್ ಮೇಲೆ ನೀರು ಸಂಗ್ರಹಿಸುವುದು, ಕಿಟಕಿಯನ್ನು ತೆರೆದಿಡುವುದು, ಮಂತಾದ ಹಲವಾರು ಕ್ರಿಯೆಗಳನ್ನು ಜನರು ಬೇಸಿಗೆಯಲ್ಲಿ ಮನೆಯನ್ನು ತಂಪಾಗಿಸಲು ಅನುಸರಿಸುವ ವಿಧಾನಗಳಾಗಿವೆ. ನೀವು ಕಿಟಕಿಯನ್ನು ತೆರೆದ ಕೂಡಲೇ ಸೊಳ್ಳೆಗಳ ಗುಂಪೇ ನಿಮ್ಮ ಮನೆಯನ್ನು ಪ್ರವೇಶಿಸುತ್ತವೆ.

ತಂಪಾದ ಗಾಳಿಯನ್ನು ನೀವು ತೆರೆದ ಕಿಟಿಕಿಯಿಂದ ಅನುಭವಿಸುವುದು ಖಂಡಿತ ಆದರೆ ರೋಗಗಳನ್ನು ಹೊತ್ತು ತರುವ ಸೊಳ್ಳೆಗಳನ್ನು ಇದು ಮನೆಯನ್ನು ಆಗಮಿಸುವಂತೆ ಮಾಡುತ್ತದೆ. ಸೊಳ್ಳೆಗಳ ಕಡಿತವು ರೋಗಕ್ಕೆ ಆಹ್ವಾನವಿತ್ತಂತೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಸೊಳ್ಳೆ ಕಡಿತದಿಂದ ಪಾರಾಗಬೇಕೆ?

ಬೇಸಿಗೆಯಲ್ಲಿ ನಿಮ್ಮ ಮನೆಯಲ್ಲಿ ಏರ್ ಕಂಡೀಷನರ್ ಇಲ್ಲದಿದ್ದರೆ ಥಟ್ಟನೆ ತಲೆಗೆ ಹೊಳೆಯುವ ಉಪಾಯ ಕಿಟಕಿ ಬಾಗಿಲುಗಳನ್ನು ತೆಗೆದು ತಂಪಾದ ಗಾಳಿಯನ್ನು ಮನೆಯೊಳಕ್ಕೆ ಪಸರಿಸುವಂತೆ ಮಾಡುವುದು. ಆದರೆ ಸಂಜೆ ನಾಲ್ಕರ ಸಮಯದಲ್ಲಿ ನೀವು ತೆರೆದ ಕಿಟಕಿಯಿಂದ ತಂಪಾದ ಗಾಳಿಯನ್ನು ಮಾತ್ರ ಅನುಭವಿಸದೇ ಗುಯ್‌ಗುಡುವ ಸೊಳ್ಳೆಯ ಕಂಠಾನಾದವನ್ನು ಆಲಿಸುವಿರಿ. ವೆಕ್ಟರ್ - ಬೋರ್ನ್ ರೋಗಗಳಂತಹ ಭಯಾನಕ ಭಯಂಕರ ರೋಗವನ್ನು ಪಸರಿಸುವ ಸೊಳ್ಳೆಗಳು ಬೇಸಿಗೆಯಲ್ಲಿ ತಮ್ಮ ಸಾಮ್ರಾಜ್ಯವನ್ನೇ ಸ್ಥಾಪಿಸಿರುತ್ತವೆ.

ಸೊಳ್ಳೆ ಕಡಿತವನ್ನು ನಿವಾರಿಸಲು ನೀವು ಹಲವಾರು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಸೊಳ್ಳೆ ಪರದೆಯನ್ನು ಬಳಸುವುದು, ಅಡಿಕೆ ಸಿಪ್ಪೆಯ ಹೊಗೆಯನ್ನು ಸುತ್ತಲೂ ಪಸರಿಸುವುದು, ಸೊಳ್ಳೆ ಬತ್ತಿ, ಸೊಳ್ಳೆ ಮುಲಾಮುವಿನ ಬಳಕೆ ಇವೇ ಮುಂತಾದ ವಿಧಾನಗಳನ್ನು ಅನುಸರಿಸಿ ಸೊಳ್ಳೆಗಳು ನಿಮ್ಮನ್ನು ಕಚ್ಚುವುದನ್ನು ನೀವು ನಿವಾರಿಸಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಡೆಂಗ್ಯೂ ಜ್ವರಕ್ಕೆ 9 ಬಗೆಯ ಮನೆಮದ್ದು

ಸಿಟ್ರೋನೆಲ್ಲಾ ಆಯಿಲ್:

ಸಿಟ್ರೋನೆಲ್ಲಾ ಆಯಿಲ್:

ಈ ಎಣ್ಣೆಯನ್ನು ಬಳಸುವುದು ಕೀಟಗಳು ಸೊಳ್ಳೆಗಳು ಮುಂತಾದ ರೋಗವನ್ನು ಹರಡುವ ಜೀವಿಗಳನ್ನು ದೂರ ಇರಿಸುತ್ತವೆ. ಇವುಗಳನ್ನು ಮೈಗೆ ಹಚ್ಚಿಕೊಳ್ಳುವುದರಿಂದ ಸೊಳ್ಳೆಗಳು ನಿಮ್ಮ ದೇಹದಲ್ಲಿ ಕುಳಿತುಕೊಳ್ಳುವುದಿಲ್ಲ ಮತ್ತು ಇದು ಉತ್ತಮ ಸುವಾಸನೆಯನ್ನು ಹೊಂದಿದೆ.

ಮೇಣದ ಬತ್ತಿಗಳನ್ನು ಉರಿಸುವುದು:

ಮೇಣದ ಬತ್ತಿಗಳನ್ನು ಉರಿಸುವುದು:

ಮೇಣದ ಬತ್ತಿಗಳನ್ನು ಉರಿಸಿಡುವುದೂ ಕೂಡ ಸೊಳ್ಳೆಗಳನ್ನು ಹತ್ತಿರಕ್ಕೆ ಬರಲು ಬಿಡುವುದಿಲ್ಲ. ಮೇಣದ ಬತ್ತಿಯ ಹೊಗೆಯು ಸೊಳ್ಳೆಗಳನ್ನು ನಾಶ ಮಾಡಿಬಿಡುತ್ತವೆ. ಸಿಟ್ರೋನೆಲ್ಲಾ ಕ್ಯಾಂಡಲ್‌ಗಳನ್ನು ಬಳಸುವುದೂ ಕೂಡ ತ್ವರಿತ ಪರಿಣಾಮವನ್ನು ಉಂಟುಮಾಡುತ್ತವೆ.

ವಿಮಿನ್ ಬಿ:

ವಿಮಿನ್ ಬಿ:

ಆರೋಗ್ಯಪೂರ್ಣ ಮತ್ತು ವಿಟಮಿನ್ ಬಿ 1 ನ ಸೀಮಿತ ಸೇವನೆಯು ದೇಹದ ಸುವಾಸನೆಯನ್ನು ಮಾರ್ಪಡಿಸುತ್ತದೆ ಮತ್ತು ಸೊಳ್ಳೆಗಳನ್ನು ದೇಹದಲ್ಲಿ ಕುಳಿತುಕೊಳ್ಳದಂತೆ ಮಾಡುತ್ತದೆ.

ಬೆಳ್ಳುಳ್ಳಿ ಬಳಕೆ:

ಬೆಳ್ಳುಳ್ಳಿ ಬಳಕೆ:

ಹೆಚ್ಚು ಪ್ರಮಾಣದ ಬೆಳ್ಳುಳ್ಳಿ ಬಳಕೆ ನಿಮ್ಮ ಸಂಗಾತಿಯನ್ನು ದೂರ ಮಾಡುತ್ತದೆ. ಆದರೆ ಬೆಳ್ಳುಳ್ಳಿಯಲ್ಲಿರುವ ಅಲ್ಸಿನ್ ಒಂದು ಶಕ್ತಿಯುತ ಉತ್ಕರ್ಷಣ ನಿರೋಧಿಯಾಗಿದ್ದು ಇದು ಆಹಾರಕ್ಕೆ ಸುವಾಸನೆಯನ್ನು ರುಚಿಯನ್ನು ಮಾತ್ರ ನೀಡದೇ ಸೊಳ್ಳೆಗಳಿಗೆ ರಾಮಬಾಣವಾಗಿದೆ.

ಬೀರ್ ಸೇವನೆ ಬೇಡ

ಬೀರ್ ಸೇವನೆ ಬೇಡ

2002 ರಲ್ಲಿ ನಡೆಸಿ ಒಂದು ಸಂಶೋಧನೆಯ ಪ್ರಕಾರ, ಬೀರ್‌ನ ಪರಿಮಳವು ಸೊಳ್ಳೆಗಳನ್ನು ಹತ್ತಿರಕ್ಕೆ ಆಕರ್ಷಿಸುತ್ತವೆ.

ಮುಂಜಾನೆ ಮತ್ತು ಮುಸ್ಸಂಜೆಯ ವೇಳೆ ಜಾಗರೂಕರಾಗಿರಿ:

ಮುಂಜಾನೆ ಮತ್ತು ಮುಸ್ಸಂಜೆಯ ವೇಳೆ ಜಾಗರೂಕರಾಗಿರಿ:

ಮುಂಜಾನೆ ಮತ್ತು ಮುಸ್ಸಂಜೆ ಸಮಯವು ಸೊಳ್ಳೆಗಳ ಆಗಮನಕ್ಕೆ ಒಳ್ಳೆಯ ಸಮಯವಾಗಿದೆ. ಈ ಸಮಯದಲ್ಲಿ ಇವುಗಳ ಪ್ರಮಾಣ ಹೆಚ್ಚಿದ್ದು ಮನುಷ್ಯರನ್ನು ಕಡಿಯುತ್ತವೆ. ಆದ್ದರಿಂದ ಈ ಸಮಯದಲ್ಲಿ ಮನೆಯ ಕಿಟಕಿ ಬಾಗಿಲುಗಳನ್ನು ತೆಗೆದಿರಿಸಬೇಡಿ.

ಎಕ್ಯುಲೆಪ್ಟಸ್ ಆಯಿಲ್:

ಎಕ್ಯುಲೆಪ್ಟಸ್ ಆಯಿಲ್:

ಇದೊಂದು ನೈಸರ್ಗಿಕ ವಿಧಾನವಾಗಿದೆ. ಈ ಎಣ್ಣೆಯನ್ನು ಲಿಂಬೆಯನ್ನು ಬೆರೆಸಿ ಹಚ್ಚಿಕೊಳ್ಳಿ. ಇದು ಸೊಳ್ಳೆಗಳನ್ನು ದೂರಮಾಡುವುದರಲ್ಲಿ ಹೆಚ್ಚು ಪಾತ್ರ ವಹಿಸಿದೆ.

ಮುಚ್ಚಿಕೊಳ್ಳಿ:

ಮುಚ್ಚಿಕೊಳ್ಳಿ:

ಹೊರಗೆ ಹೋಗುವ ಸಮಯದಲ್ಲಿ ಆದಷ್ಟು ನಿಮ್ಮ ದೇಹವನ್ನು ಮುಚ್ಚಿಕೊಳ್ಳಿ. ಲಾನ್, ಮಹಡಿ ಮತ್ತು ಡ್ರೈನ್ ಹತ್ತಿರ ದೇಹವನ್ನು ಬಟ್ಟೆಯಿಂದ ಸುತ್ತಿಕೊಳ್ಳಿ.

English summary

8 Easy Ways To Prevent Mosquito Bites

From watering the terrace floor to opening the windows, people do a lot of things to keep the room cool during summers. However, opening the windows means giving free invitation to the mosquitoes. Once you open the windows, you would love the cool breeze that will enter the house.
Story first published: Friday, April 11, 2014, 16:58 [IST]
X
Desktop Bottom Promotion