For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಲು ಸಹಕಾರಿ ಈ ಎಂಟು ಬೆಳಗ್ಗಿನ ಸಲಹೆಗಳು

|

ನೀವು ತೂಕ ಇಳಿಸುವ ಛಲವನ್ನು ಹೊತ್ತವರಾಗಿದ್ದರೆ ಅದಕ್ಕೆ ಸರಿಯಾದ ಸಮಯವಾಗಿದೆ ಮುಂಜಾನೆ. ಬೆಳಗ್ಗೆಯೇ ನೀವು ಪ್ರಾರಂಭಿಸಿದರೆಂದರೆ ಹೆಚ್ಚುವರಿ ತೂಕವನ್ನು ನೀವು ಕಳೆದುಕೊಂಡಂತೆಯೇ. ಒಡುವುದು, ಜಾಗ್ ಮಾಡುವುದು, ವೇಗವಾಗಿ ನಡೆಯುವುದು ಇವು ಮೂರು ವೇಗವಾಗಿ ತೂಕ ಇಳಿಸಲು ಸಹಾಯ ಮಾಡುತ್ತವೆ. ಇದಲ್ಲದೆ ನಿಮ್ಮ ಡಯೆಟ್ ಕಡೆಗೂ ನೀವು ಗಮನ ಹರಿಸಬೇಕಾದ್ದು ಅತ್ಯವಶ್ಯಕ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ತೂಕ ಕಳಕೊಳ್ಳಲು ರಜಾದಿನದ ಟಿಪ್ಸ್ ಗಳು

ನೀವು ವೇಗವಾಗಿ ತೂಕ ಇಳಿಸುವ ಸಂಕಲ್ಪವನ್ನು ಮಾಡಿದವರಾಗಿದ್ದರೆ ನಿಮ್ಮ ಆಹಾರದ ಪದ್ಧತಿಯ ಕಡೆಗೂ ನೀವು ಗಮನ ಹರಿಸಬೇಕು. ರಾತ್ರಿಯ ವೇಳೆ ನೀವು ಯಾವುದೇ ದೈಹಿಕ ಸಾಮರ್ಥ್ಯವನ್ನು ಪ್ರದರ್ಶಿಸದೇ ವಿಶ್ರಾಂತಿಯನ್ನು ತೆಗೆದುಕೊಳ್ಳುವ ವೇಳೆಯಾದ್ದರಿಂದ ರಾತ್ರಿ ಹೆಚ್ಚು ಆಹಾರವನ್ನು ತೆಗೆದುಕೊಳ್ಳಬಾರದು.

ಕ್ಯಾಲೋರಿ ಬರ್ನ್ ಮಾಡುವ ಅವಕಾಶ ರಾತ್ರಿ ನಿಮಗೆ ಸಿಗುವುದಿಲ್ಲ ಆದರೆ ಹಗಲು ಹೊತ್ತು ನೀವು ಹೆಚ್ಚು ಕೆಲಸಮಾಡಿದ್ದರೂ ಮಧ್ಯಾಹ್ನದ ಸಮಯದಲ್ಲಿ ಹೆಚ್ಚು ಆಹಾರವನ್ನು ನೀವು ತೆಗೆದುಕೊಳ್ಳಬಾರದು, ಇದರಿಂದ ನಿದ್ರೆ ನಿಮಗೆ ಬೇಗನೇ ಆವರಿಸಬಹುದು ಮತ್ತು ತೂಕ ಹೆಚ್ಚಾಗುವ ಸಾಧ್ಯತೆ ಕೂಡ ಇಲ್ಲಿ ಹೆಚ್ಚಾಗುತ್ತದೆ.

ತಜ್ಞರ ಪ್ರಕಾರ ಬೆಳಗ್ಗಿನ ಹೊತ್ತು ತೂಕ ಇಳಿಸುವ ವಿಧಾನ ತುಂಬಾ ಪ್ರಯೋಜನಕಾರಿಯಾಗಿರುತ್ತದೆ. ಮತ್ತು ಬೆಳಗ್ಗಿನ ಹೊತ್ತು ದಿನದ ಪ್ರಾರಂಭವಾದ್ದರಿಂದ ನೀವು ಹೆಚ್ಚು ಚಟುವಟಿಕೆಯುಳ್ಳವರಾಗಿರುತ್ತೀರಿ. ಇದರಿಂದ ವರ್ಕ್ಔಟ್ ಮಾಡುವ ಶಕ್ತಿ ನಿಮ್ಮಲ್ಲಿರುತ್ತದೆ. ಬನ್ನಿ ಹಾಗಿದ್ದರೆ ಮುಂಜಾನೆಯ ಸಮಯದಲ್ಲಿ ತೂಕ ಇಳಿಸುವ ವಿಧಾನಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಸ್ಲಿಮ್ ಆಗಿ ಕಾಣಲು ಇಲ್ಲಿದೆ ಪರಿಣಾಮಕಾರಿ ಸಲಹೆ

ಬೆಳಗ್ಗಿನ ಶೇಕ್ಸ್

ಬೆಳಗ್ಗಿನ ಶೇಕ್ಸ್

ಆರೋಗ್ಯಯುತ ಪೇಯದಿಂದ ನಿಮ್ಮ ಬೆಳಗ್ಗಿನ ದಿನಚರಿ ಪ್ರಾರಂಭವಾಗಲಿ. ಬೆಳಗ್ಗಿನ ಪೇಯದಲ್ಲಿ ಹಣ್ಣುಗಳು ಹೆಚ್ಚಿರುವಂತೆ ನೋಡಿಕೊಳ್ಳಿ. ನೀರು ಹೆಚ್ಚಾಗಿರುವ ಹಣ್ಣುಗಳು ನಿಮ್ಮ ಹೊಟ್ಟೆಯನ್ನು ಭರ್ತಿ ಮಾಡಿಡುವಲ್ಲಿ ಹೆಚ್ಚು ಸಹಕಾರಿ.

ಲಿಂಬೆ ಜ್ಯೂಸ್:

ಲಿಂಬೆ ಜ್ಯೂಸ್:

ಲಿಂಬೆ ನಿಮ್ಮ ಕೊಬ್ಬನ್ನು ವೇಗವಾಗಿ ಕರಗಿಸುತ್ತದೆ. ನೀವು ಮಾಡಬೇಕಾದ್ದು ಇಷ್ಟೇ ಉಪ್ಪಿನಿಂದ ಬೆರೆತ ಬಿಸಿಯಾದ ಲಿಂಬೆ ಜ್ಯೂಸ್ ಅನ್ನು ಬೆಳಗ್ಗೆ ಸೇವಿಸಿ. ಸಕ್ಕರೆ ಇದಕ್ಕೆ ಸೇರಿಸಬೇಡಿ. ಬೆಳಗ್ಗೆ ಲಿಂಬೆ ಜ್ಯೂಸ್ ಅನ್ನು ಸೇವಿಸುವುದು ದೇಹದಲ್ಲಿ ಹೆಚ್ಚಿರುವ ಕೊಬ್ಬನ್ನು ಕರಗಿಸಿ ತೀವ್ರ ಹಸಿವನ್ನು ನಿವಾರಿಸುತ್ತದೆ.

ದಾಲ್ಚಿನಿ ಬ್ರೇಕ್‌ಫಾಸ್ಟ್:

ದಾಲ್ಚಿನಿ ಬ್ರೇಕ್‌ಫಾಸ್ಟ್:

ದಾಲ್ಚೀನಿಯನ್ನು ನಿಮ್ಮ ಬೆಳಗ್ಗಿನ ಆಹಾರದಲ್ಲಿ ಸೇವಿಸುವುದು ಅತೀ ಉತ್ತಮವಾದುದು. ಬೆಳಗ್ಗಿನ ಆಹಾರದಲ್ಲಿ ಪೂರ್ಣ ಗೋಧಿ ಸ್ಯಾಂಡ್‌ವಿಚ್ ಅನ್ನು ಜೇನು ಅಥವಾ ದಾಲ್ಚೀನಿ ಬೆರೆತ ಪೇಸ್ಟ್‌ನೊಂದಿಗೆ ಸ್ಯಾಂಡ್‌ವಿಚ್ ಸೇವಿಸಿ.

ವ್ಯಾಯಾಮ:

ವ್ಯಾಯಾಮ:

ಸರಳ ವ್ಯಾಯಾಮಗಳನ್ನು ಬೆಳಗ್ಗಿನ ಸಮಯದಲ್ಲಿ ಮಾಡುವುದು ದೇಹಕ್ಕೆ ಉತ್ತಮ ಸಾಮರ್ಥ್ಯವನ್ನು ನೀಡುತ್ತದೆ. ಇದರಿಂದ ದೇಹ ಹಗುರಗೊಂಡು ಅತಿಯಾದ ಕೊಬ್ಬು ನಿವಾರಣೆಯಾಗುತ್ತದೆ.

ಸಕ್ಕರೆ ಸೇವನೆ ಇಳಿತ:

ಸಕ್ಕರೆ ಸೇವನೆ ಇಳಿತ:

ನಿಮ್ಮ ಬೆಳಗ್ಗಿನ ಸಮಯದಲ್ಲಿ ಕೊಬ್ಬು ನಿವಾರಿಸಲು ಸಹಾಯ ಮಾಡುವ ಒಂದು ಉತ್ತಮ ವಿಧಾನವೆಂದರೆ ಬೆಳಗ್ಗಿನ ಹೊತ್ತು ಸಕ್ಕರೆಯನ್ನು ತೆಗೆದುಕೊಳ್ಳದೇ ಇರುವುದಾಗಿದೆ. ನೀವು ಸಿಹಿಯನ್ನು ತುಂಬಾ ಇಷ್ಟಪಡುವವರಾಗಿದ್ದಲ್ಲಿ, ಹಂತ ಹಂತವಾಗಿ ಸಕ್ಕರೆ ಸೇವನೆಯನ್ನು ಕಡಿಮೆ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

ಜಾಗಿಂಗ್ ಸಹಾಯ ಮಾಡುತ್ತದೆ:

ಜಾಗಿಂಗ್ ಸಹಾಯ ಮಾಡುತ್ತದೆ:

ಬೆಳಗ್ಗಿನ ಸಮಯದಲ್ಲಿ ತೂಕ ಇಳಿಸಿಕೊಳ್ಳುವ ಉತ್ತಮ ವಿಧಾನವೆಂದರೆ ಜಾಗಿಂಗ್ ಮಾಡುವುದಾಗಿದೆ. ನಿಮ್ಮ ಕಾಲನ್ನು ಸೊಂಟದವರೆಗೆ ತಂದು ನೇರ ಭಂಗಿಯಲ್ಲಿ 15 ರಿಂದ 20 ನಿಮಿಷಗಳ ಕಾಲ ನಿರಂತರವಾಗಿ ಜಾಗಿಂಗ್ ಮಾಡಿ. ಸುತ್ತಲೂ ಈ ಪ್ರಕಾರವಾಗಿ ಚಲಿಸುವುದೂ ಕೂಡ ತುಂಬಾ ಪ್ರಭಾವಕಾರಿ ವಿಧಾನವಾಗಿದೆ.

ಸೌನಾ ಮ್ರಮುಖವಾದುದು:

ಸೌನಾ ಮ್ರಮುಖವಾದುದು:

ನಿಮಗೆ ಸೌನಾದ ಸೌಳಭ್ಯವಿದ್ದಲ್ಲಿ ಅದರ ಉತ್ತಮ ಬಳಕೆಯನ್ನು ಮಾಡಿ. ಬೆಳಗ್ಗಿನ ಹೊತ್ತು ನಿಯಮಿತವಾಗಿ ಸೌನಾ ಮಾಡುವುದು ವೇಗವಾಗಿ ತೂಕ ಇಳಿಸುವಂತೆ ಮಾಡುತ್ತದೆ.

ಸೂರ್ಯನಬೆಳಕನ್ನು ಬಳಸಿ ಕ್ಯಾಲೋರಿ ಇಳಿಸಿ:

ಸೂರ್ಯನಬೆಳಕನ್ನು ಬಳಸಿ ಕ್ಯಾಲೋರಿ ಇಳಿಸಿ:

ಸೂರ್ಯನ ಬೆಳಕನ್ನು ಬಳಸಿ ಕ್ಯಾಲೋರಿ ಇಳಿಸಿ. ಹೌದು ನಿಮಗೆ ನೈಸರ್ಗಿಕ ವಿಧಾನದ ಮೂಲಕ ತೂಕ ಇಳಿಸುವ ಮನಸಿದ್ದಲ್ಲಿ ವೇಗವಾಗಿ ನಡೆಯಿರಿ. ಉತ್ತಮ ಶಕ್ತಿಶಾಲಿ ಮತ್ತು ಪೇಯ ಹಾಗೂ ಸೂರ್ಯನ ಪ್ರಖರತೆಯಿಂದ ಸಂರಕ್ಷಿಸಿಕೊಳ್ಳುವ ವಿಧಾನವನ್ನು ಅನುಸರಿಸಿ ತೂಕ ಇಳಿಸಿಕೊಳ್ಳಿ.

English summary

8 Early Morning Weight Loss Tips

If you want to lose weight, you should try working out in the morning. The best way you can lose those extra pounds is if you begin an early start to the day. Running, jogging and brisk walking early in the morning are three ways to losing weight quickly.
X
Desktop Bottom Promotion