For Quick Alerts
ALLOW NOTIFICATIONS  
For Daily Alerts

ಮೈಗ್ರೇನ್‌ಗೆ ಏಳು ಅಚ್ಚರಿಯ ಕಾರಣಗಳು

By Hemanth P
|

ಮೈಗ್ರೇನ್ ನ ನೋವು ನಮ್ಮನ್ನು ದಿನವಿಡೀ ಯಾವುದೇ ಚಟುವಟಿಕೆ ಇಲ್ಲದಂತೆ ಮತ್ತು ಅಲಸ್ಯವಾಗಿರುವಂತೆ ಮಾಡುತ್ತದೆ. ಕೆಲವೊಂದು ಸಲ ಈ ನೋವು 48 ಗಂಟೆಗಳ ಕಾಲ ಮಾತ್ರ ಇದ್ದರೆ, ಮತ್ತೆ ಕೆಲವೊಮ್ಮೆ ದೀರ್ಘಕಾಲದವರೆಗೆ ತೊಂದರೆ ನೀಡುತ್ತದೆ.

ಬೆಳಕು ಪ್ರತಿಫಲಿಸಿದಂತಾಗುವುದು, ಕುರುಡು ಚುಕ್ಕೆ, ತೋಳುಗಳು ಜುಮ್ಮೆನ್ನುವುದು, ವಾಕರಿಕೆ, ವಾಂತಿ, ಬೆಳಕು ಮತ್ತು ಶಬ್ದದ ಸೂಕ್ಷ್ಮತೆ ಹೆಚ್ಚಾಗುವುದು ಮೈಗ್ರೇನ್ ನ ಕೆಲವೊಂದು ಮುನ್ಸೂಚನೆಗಳು. ರಕ್ತನಾಳಗಳ ಉಬ್ಬುವಿಕೆ ಮತ್ತು ರಕ್ತನಾಳಗಳ ಸುತ್ತ ಇರುವ ನರತಂತುಗಳು ರಾಸಾಯನಿಕ ಬಿಡುಗಡೆ ಮಾಡುವ ಪರಿಣಾಮ ಮೈಗ್ರೇನ್ ಉಂಟಾಗುತ್ತದೆ.

ಮೈಗ್ರೇನ್ ನ ರೋಗಿಗಳಿಗೆ ಮುಂದೆ ಇದು ಬಾರದಂತೆ ತಡೆಯಲು ನೋವು ಯಾವುದರಿಂದ ಬರುತ್ತದೆ ಎಂದು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಕೆಲವೊಂದು ಅಚ್ಚರಿಯ ಕಾರಣಗಳನ್ನು ಇಲ್ಲಿ ನೀಡಲಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆರೋಗ್ಯಭರಿತ ಸಿಹಿ ಆಲೂಗಡ್ಡೆ ಸೇವನೆಯ ಪ್ರಯೋಜನ

ದೀರ್ಘಾವದಿ ಮತ್ತು ಒತ್ತಡದಲ್ಲಿ ಕೆಲಸ ಮಾಡುವುದರಿಂದ ಆಹಾರ ಸೇವನೆಯ ಸಮಯ ಮತ್ತು ನಿದ್ರೆಯಲ್ಲಿ ವ್ಯತ್ಯಯವಾಗುವುದರಿಂದ ಮೈಗ್ರೇನ್ ಉಂಟಾಗಬಹುದು. ಅತಿಯಾಗಿ ಕೆಲಸ ಮಾಡುವವರು ಇತರರಿಗಿಂತ ಹೆಚ್ಚು ಮೈಗ್ರೇನ್ ಗೆ ತುತ್ತಾಗುತ್ತಾರೆ. ದಿನದ ಕಠಿಣ ಕೆಲಸದ ಬಳಿಕ ಸರಿಯಾಗಿ ವಿಶ್ರಾಂತಿ ಪಡೆಯುವುದನ್ನು ಸಲಹೆ ಮಾಡಲಾಗಿದೆ. ಬಿಸಿ ನೀರಿನ ಸ್ನಾನ ಮತ್ತು ಒಂದು ಕಪ್ ಲೆಮನ್ ಟೀ ನಿಮ್ಮ ದಿನದ ಆಯಾಸ ಕಡಿಮೆ ಮಾಡಿ ಆರಾಮವಾಗಿರುವಂತೆ ಮಾಡಬಹುದು. ಯಾವಾಗಲೂ ಮಲಗುವಾಗ ಪ್ರಶಾಂತವಾದ ಮನಸ್ಸಿನೊಂದಿಗೆ ಮಲಗಬೇಕು.

ಹವಾಮಾನ

ಹವಾಮಾನ

ಸೂರ್ಯನ ಬಿಸಿಲಿನಲ್ಲಿ ತಿರುಗಾಡುವುದರಿಂದ ಬೇಗನೆ ಮೈಗ್ರೇನ್ ದಾಳಿಗೆ ಒಳಗಾಗಬಹುದು. ಇದನ್ನು ಹೊರತುಪಡಿಸಿ, ವಾಯುಭಾರ ಒತ್ತಡ, ಅತಿಯಾದ ತಾಪಮಾನ ಮತ್ತು ಉಷ್ಣಾಂಶ ಮೈಗ್ರೇನ್ ಗೆ ಕೆಲವು ಸಾಮಾನ್ಯ ಕಾರಣಗಳೆಂದು ಪಟ್ಟಿ ಮಾಡಲಾಗಿದೆ. ಸೂರ್ಯನ ಬಿಸಿಲಿನಲ್ಲಿ ತಿರುಗಾಡದೆ ಇರುವುದು ಉತ್ತಮ. ಆದರೆ ಹೊರಗೆ ಹೋಗಲೇಬೇಕೆಂದಿದ್ದರೆ ಆಗ ಛತ್ರಿ ಬಳಸಿ. ಛತ್ರಿ ಬಳಸುವುದು ನಿಮ್ಮ ಶೈಲಿಗೆ ಹೊಂದಿಕೊಳ್ಳದಿದ್ದರೆ ತಲೆಯನ್ನು ಸುತ್ತುವರಿಯುವಂತೆ ಸ್ಕ್ರಾಪ್ ಹಾಕಿ.

ಕೆಫಿನ್ ಕಡೆಗಣಿಸಿ

ಕೆಫಿನ್ ಕಡೆಗಣಿಸಿ

ದಿನದಲ್ಲಿ ಎರಡು ಕಪ್ ಕೆಫಿನ್ ಸೇವನೆ ಅಭ್ಯಾಸವಾಗಿರುವವರು ಮೈಗ್ರೇನ್ ಗೆ ತುತ್ತಾಗುತ್ತಾರೆ ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ. ಕೆಫಿನ್ ಸೇವನೆಯ ಕೆಲವು ಗಂಟೆಗಳ ಬಳಿಕ ಮತ್ತು ಅದನ್ನು ಸೇವಿಸದೆ ಇದ್ದಾಗ ಮೈಗ್ರೇನ್ ಕಾಣಿಸಿಕೊಳ್ಳುತ್ತದೆ. ಕೆಫಿನ್ ಸೇವನೆ ಕಡಿಮೆ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಲಾಗುತ್ತದೆ.

ಜೋರಾದ ಸಂಗೀತ

ಜೋರಾದ ಸಂಗೀತ

ದೀರ್ಘ ಸಮಯದವರೆಗೆ ಜೋರಾದ ಸಂಗೀತ ಕೇಳುವುದು ಮೈಗ್ರೇನ್ ದಾಳಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಜೋರಾದ ಸದ್ದಿನಿಂದ ಉಂಟಾಗುವ ತಲೆನೋವು 72 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ಇರಬಹುದು. ಮೈಗ್ರೇನ್ ತಡೆಯಲು ಸಂಗೀತ ಕೇಳುವಾಗ ಶಬ್ದ ಕಡಿಮೆಯಿರಲಿ.

ಪ್ರತಿಕ್ರಿಯಾತ್ಮಕ ಸಕ್ಕರೆ ಕೊರತೆ

ಪ್ರತಿಕ್ರಿಯಾತ್ಮಕ ಸಕ್ಕರೆ ಕೊರತೆ

ಸಕ್ಕರೆ ಮತ್ತು ಪಾಸ್ತಾವನ್ನು ಅತಿಯಾಗಿ ಸೇವನೆ ಮಾಡುವುದರಿಂದ ಮೈಗ್ರೇನ್ ಉಂಟಾಗಬಹುದು. ಇದರಿಂದ ದೇಹವು ಹೆಚ್ಚುವರಿ ಇನ್ಸುಲಿನ್ ಉತ್ಪಾದನೆ ಮಾಡಿ ಅದು ಸಕ್ಕರೆ ಉತ್ಪಾದಿಸಬಹುದು. ಇದಕ್ಕೆ ಪ್ರತಿಯಾಗಿ ರಕ್ತದಲ್ಲಿನ ಸಕ್ಕರೆ ಅಂಶವು ಕಡಿಮೆಯಾಗಬಹುದು. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗಿ ತಲೆನೋವಿಗೆ ಕಾರಣವಾಗಬಹುದು.

ಹೆಚ್ಚು ನಿದ್ರೆ ಮಾಡುವುದು

ಹೆಚ್ಚು ನಿದ್ರೆ ಮಾಡುವುದು

ದಿನದಲ್ಲಿ 9 ಗಂಟೆಗಿಂತ ಹೆಚ್ಚು ನಿದ್ರೆ ಮಾಡುವುದರಿಂದ ಮೈಗ್ರೇನ್ ಬರಬಹುದು. ಕೆಲಸಕ್ಕೆ ಹೋಗುವ ಜನರು ವಾರದ ಇತರ ದಿನಗಳಲ್ಲಿ ಕಡಿಮೆ ನಿದ್ರೆ ಮಾಡುತ್ತಾರೆ ಮತ್ತು ವಾರಾಂತ್ಯದಲ್ಲಿ ಹೆಚ್ಚು ನಿದ್ರಿಸುತ್ತಾರೆ. ಇತರ ದಿನಗಳಲ್ಲಿ ಕಡಿಮೆ ನಿದ್ರೆ ಮಾಡಿ ವಾರಾಂತ್ಯದಲ್ಲಿ ಹೆಚ್ಚು ನಿದ್ರೆ ಮಾಡುವುದರಿಂದ ನಿದ್ರೆಯ ಆವರ್ತನಕ್ಕೆ ತೊಂದರೆಯಾಗುತ್ತದೆ. ಇದರ ಪರಿಣಾಮ ಬೊಜ್ಜು, ಮೈಕೈ ನೋವು ಮತ್ತು ತಲೆನೋವು ಕಾಣಿಸಿಕೊಳ್ಳುತ್ತದೆ.

ಖಾಲಿ ಹೊಟ್ಟೆ

ಖಾಲಿ ಹೊಟ್ಟೆ

ಹಲವಾರು ಗಂಟೆಗಳ ಕಾಲ ಹೊಟ್ಟೆಗೆ ಏನು ಸೇವಿಸದೆ ಹಾಗೆ ಇದ್ದರೆ ಆಗ ಗ್ಯಾಸ್ಟ್ರಿಕ್ ಮತ್ತು ತಲೆನೋವು ಕಾಣಿಸಬಹುದು. ಉಪಹಾರ ತಪ್ಪಿಸುತ್ತಿದ್ದರೆ ಅದು ತುಂಬಾ ಕೆಟ್ಟ ಅಭ್ಯಾಸ. ದಿನದ ಆರಂಭವನ್ನು ಹಣ್ಣು, ಧಾನ್ಯಗಳು ಮತ್ತು ಹೆಚ್ಚಿನ ನೀರಿನೊಂದಿಗೆ ಆರಂಭಿಸಿ.

Read more about: health ಆರೋಗ್ಯ
English summary

7 surprising triggers of migraine

Migraine is often preceded or accompanied by sensory warning signs such as flashes of light, blind spots, tingling in the arms and legs, nausea, vomiting and increased sensitivity to light and sound.
X
Desktop Bottom Promotion