For Quick Alerts
ALLOW NOTIFICATIONS  
For Daily Alerts

ಸ್ತನ ಕ್ಯಾನ್ಸರ್ ಬರದಂತೆ ತಡೆಯಲು 7 ಉತ್ತಮ ಸಲಹೆಗಳು!

By Poornima heggade
|

ದಿನ ಉರುಳಿದಂತೆ ನಮ್ಮಲ್ಲಿ ಕಾಸಿಕೊಳ್ಳುತ್ತಿರುವ ರೋಗಗಳಿಗೆ ಮಿತಿಯಿಲ್ಲದಂತಾಗಿದೆ. ಮಾರಣಾಂತಿಕವೆನಿಸಿದ ಕ್ಯಾನ್ಸರ್ ನಂತಹ ರೋಗಗಳು ಸದ್ದಿಲ್ಲದೇ ನಮ್ಮನ್ನು ಆವರಿಸಿಕೊಳ್ಳುತ್ತಿವೆ! ಕಳೆದ 25 ವರ್ಷಗಳಲ್ಲಿ ಭಾರತೀಯ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ನ ಪ್ರಮಾಣ ಅಧಿಕವಾಗುತ್ತಿದೆ.

ಟಾಟಾ ಮೆಮೋರಿಯಲ್ ಹಾಸ್ಪಿಟಲ್ ವೆಬ್ ಸೈಟ್ ಮಾಹಿತಿಯ ಪ್ರಕಾರ, ಸ್ತನ ಕ್ಯಾನ್ಸರ್ ಎಲ್ಲಾ ಕ್ಯಾನ್ಸರ್ ಗಿಂತ ಸಾಮಾನ್ಯ ಮತ್ತು ಈ ಕ್ಯಾನ್ಸರ್ ನಿಂದಾಗಿ ಸಾಯುವ ಪ್ರಮಾಣವೂ ಅಧಿಕ ಎಂದು ಹೇಳಲಾಗಿದೆ. ಇತ್ತೀಚಿನ ಒಂದು ಅಧ್ಯಯನದ ಪ್ರಕಾರ ಸರಾಸರಿ 28 ಮಹಿಳೆಯರಲ್ಲಿ ಒಬ್ಬ ಮಹಿಳೆ ತನ್ನ ಜೀವಿತಾವಧಿಯಲ್ಲಿ ಸ್ತನ ಕ್ಯಾನ್ಸರ್ ಗೆ ತುತ್ತಾಗುತ್ತಾಳೆ. ಈ ಪ್ರಮಾಣವು ನಗರ ವಲಯಗಳಲ್ಲಿ ಅಧಿಕವಾಗಿದ್ದು (ಪ್ರತಿ 22 ಮಹಿಳೆಯರಲ್ಲಿ ಒಬ್ಬರು) ಇದಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲಿ ಕಡಿಮೆ.

ಅಂದರೆ ಪ್ರತಿ 60 ಮಹಿಳೆಯರಲ್ಲಿ ಒಬ್ಬರಿಗೆ ಸ್ತನ ಕ್ಯಾನ್ಸರ್ ಸಂಭವಿಸಬಹುದು! ನೀವು ಯಾವುದೇ ಪರೀಕ್ಷೆಗಳನ್ನು ಕಡ್ದಾಯವಾಗಿ ಮಾಡಿಸಿಕೊಳ್ಳುವುದಕ್ಕೂ ಮೊದಲು ನಿಮ್ಮ ಜೀವನ ಶೈಲಿಯ ಬದಲಾವಣೆಯ ಮೂಲಕ, ಸ್ತನ ಕ್ಯಾನ್ಸರ್‌ನ ಅಪಾಯವನ್ನು ಕಡಿಮೆಗೊಳಿಸಬಹುದು.

ಸ್ತನ ಕ್ಯಾನ್ಸರ್ ಎಂಬ ಮಹಾಮಾರಿ ತಡೆಗಟ್ಟಲು ಟಿಪ್ಸ್

ಮನೆಗೆಲಸ ಮಾಡಿ

ಮನೆಗೆಲಸ ಮಾಡಿ

ತಜ್ಞರ ಪ್ರಕಾರ ಮಹಿಳೆ ಸದಾ ಚಟುವಟಿಕೆಯಿಂದ ಇದ್ದಷ್ಟು ಸ್ತನ ಕ್ಯಾನ್ಸರ್‌ನ ಅಪಾಯ ಕಡಿಮೆ. ಈಸ್ಟ್ರೊಜೆನ್ ಮತ್ತು ಟೆಸ್ಟೋಸ್ಟೆರಾನ್ ನಂತಹ ಹಾರ್ಮೋನುಗಳನ್ನು ಬಿಡುಗಡೆ ಮಾಡುವ ಕೊಬ್ಬಿನ ಕೋಶಗಳನ್ನು ಕಡಿಮೆ ಮಾಡಲು ವ್ಯಾಯಾಮ ಅತ್ಯಂತ ಸಹಾಯಕಾರಿಯಾಗಿದೆ. ಈ ಕೋಶಗಳು ಟ್ಯೂಮರ್/ಗಡ್ಡೆ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತವೆ. ಮಹಿಳೆಯರು ದಿನವೂ ಕನಿಷ್ಠ 30 ನಿಮಿಷಗಳ ಕಾಲ ಮಿತವಾದ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಅತ್ಯಗತ್ಯ. ಇದರಿಂದ ಕನಿಷ್ಠ 20% ಸ್ತನ ಕ್ಯಾನ್ಸರ್ ಉಂಟಾಗುವ ಪ್ರಮಾಣವನ್ನು ಕಡಿಮೆಗೊಳಿಸಬಹುದು. ಪ್ರತಿ ದಿನ ಯಾವುದಾದರೂ ಒಂದು ಬೆವರಿಳಿಸುವಂತಹ ಕೆಲಸದಲ್ಲಿ ತೊಡಗಿಕೊಳ್ಳಿ. ನಿಮ್ಮ ದೇಹಕ್ಕೆ ಚಟುವಟಿಕೆಯನ್ನು ನೀಡುವಂತಹ ಯಾವುದಾದರೂ ಕೆಲಸವನ್ನು ಮಾಡಿ.

ನಿಮ್ಮ ಮಗುವಿಗೆ ಸ್ತನ್ಯ ಪಾನ ಮಾಡಿಸಿ

ನಿಮ್ಮ ಮಗುವಿಗೆ ಸ್ತನ್ಯ ಪಾನ ಮಾಡಿಸಿ

ತನ್ನ ಮಗುವಿಗೆ ಕನಿಷ್ಠ ಒಂದು ವರ್ಷದವರೆಗಾದರೂ ಸ್ತನ್ಯಪಾನ ಮಾಡಿಸಿದ ಮಹಿಳೆ ಮತ್ತು ಸ್ತನ್ಯ ಪಾನ ಮಾಡಿಸದ ಮಹಿಳೆಗೆ ಹೋಲಿಸಿದರೆ, ಸ್ತನ್ಯ ಪಾನ ಮಾಡಿಸಿದ ಮಹಿಳೆಯರಲ್ಲಿ 5% ನಷ್ಟು ಸ್ತನ್ಯ ಕ್ಯಾನ್ಸರ್ ನ ಅಪಾಯ ಕಡಿಮೆ ಎಂಬುದು ವಿಶ್ವ ಕ್ಯಾನ್ಸರ್ ಸಂಶೋಧನಾ ನಿಧಿ, ಅಂಕಿಅಂಶಗಳ ವಿಶ್ಲೇಷಣೆಯಿಂದ ತಿಳಿದುಬಂದಿದೆ. ಅಧಿಕ ದಿನಗಳವರೆಗೆ ಸ್ತನ್ಯಪಾನ ಮಾಡಿಸಿದ ಮಹಿಳೆಯರಲ್ಲಿ ರೋಗದ ಪ್ರಮಾಣ ಕಡಿಮೆ. ಸ್ತನ್ಯಪಾನ ಮಾಡುವುದರಿಂದ ಮಹಿಳೆಯರ ರಕ್ತದಲ್ಲಿ ಕ್ಯಾನ್ಸರ್‌ಗೆ ಸಂಬಂಧಿಸಿದ ಹಾರ್ಮೋನ್‌ಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಕಡಿಮೆ. ಸ್ತನ್ಯಪಾನ ಮಾಡಿಸುವ ಅವಧಿ ಮುಗಿಯುತ್ತಿದ್ದಂತೆ ಹಾನಿಗೊಳಗಾದ ಜೀವಕೋಶಗಳು ಕ್ಯಾನ್ಸರ್ ಕೋಶಗಳಾಗಿ ತಿರುಗುವ ಅಪಾಯ ಕಡಿಮೆಯಾಗುತ್ತದೆ.

ಮದ್ಯಪಾನ ಸೇವನೆ ಕಡಿಮೆ ಮಾಡಿ

ಮದ್ಯಪಾನ ಸೇವನೆ ಕಡಿಮೆ ಮಾಡಿ

ದಿನವೂ ಆಲ್ಕೋಹಾಲ್ ಸೇವಿಸುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ನ ಪ್ರಮಾಣ ಅಧಿಕ. ದಿನವೂ ಮದ್ಯಪಾನವನ್ನು ಮಾಡುತ್ತ ಹೋದಂತೆ ಸ್ತನ ಕ್ಯಾನ್ಸರ್ ನ ಅಪಾಯವೂ ಹೆಚ್ಚುತ್ತಾ ಹೋಗುತ್ತದೆ ಎನ್ನುವುದು ಹೈಸ್ ಅವರ ಅಭಿಪ್ರಾಯ. ಇಂಥ ಅಪಾಯವನ್ನು ತಪ್ಪಿಸಲು ನೀವು ಕುಡಿಯುವ ಪ್ರಮಾಣವನ್ನು ನೀವೇ ನಿರ್ಧರಿಸಿಕೊಳ್ಳಿ. ದಿನವೂ ಮದ್ಯಪಾನ ಮಾಡುವುದನ್ನು ತಪ್ಪಿಸಿ. ಎರಡು ಮೂರು ಲೋಟ ಮದ್ಯಪಾನ ಮಾಡುವ ಬದಲು ಒಂದು ಲೋಟ ಅಥವಾ ಅದಕ್ಕಿಂತ ಕಡಿಮೆ ವೈನ್‌ಗಳನ್ನು ಸೇವಿಸಿ. ಕ್ರಮೇಣ ನಿಮ್ಮ ಮದ್ಯಪಾನ ಹವ್ಯಾಸವನ್ನೇ ಬಿಡಬಹುದು.

ನೈಟ್ ಶಿಫ್ಟ್ ಕೆಲಸವನ್ನು ಕಡಿಮೆಗೊಳಿಸಿ

ನೈಟ್ ಶಿಫ್ಟ್ ಕೆಲಸವನ್ನು ಕಡಿಮೆಗೊಳಿಸಿ

ಡ್ಯಾನಿಶ್ (ಉತ್ತರ ಜರ್ಮನಿ) ಸಂಶೋಧಕರ ಪ್ರಕಾರ ಸುಮಾರು ಆರು ವರ್ಷಗಳಿಂದ ಅಥವಾ ಅದಕ್ಕಿಂತ ಅಧಿಕ ವರ್ಷಗಳಿಂದ ವಾರದಲ್ಲಿ ಮೂರು ದಿನ ಅಥವಾ ಅದಕ್ಕಿಂತ ಹೆಚ್ಚು ರಾತ್ರಿ ಅವಧಿಯಲ್ಲಿ ಕೆಲಸ ಮಾಡುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ನ ಅಪಾಯ ತುಸು ಜಾಸ್ತಿ. ಯುಕೆಯ ಹೆಲ್ತ್ ಆಂಡ್ ಸೆಫ್ಟಿ ಎಕ್ಸಿಕ್ಯೂಟಿವ್ (ಆರೋಗ್ಯ ಮತ್ತು ಸುರಕ್ಷತೆ ಕಾರ್ಯನಿರ್ವಾಹಕರು) ಒಂದು ಅಧ್ಯಯನ ಕೈಗೊಂಡಿದ್ದು ಅದು 2015ರ ಹೊತ್ತಿಗೆ ಪ್ರಕಾಶನಗೊಳ್ಳಲಿದ್ದು ಇನ್ನಷ್ಟು ಮಾಹಿತಿಯನ್ನು ಪಡೆಯಲು ಸಹಾಯಕವಾಗಬಹುದು.

ವೈದ್ಯರು, ಪ್ರಕಾರ ಮಹಿಳೆಯರು ಅಧಿಕ ಕೆಲಸದ ಒತ್ತಡದಿಂದಾಗಿ ಅಡಿಮೆ ಆಹಾರ ಸೇವಿಸುವುದು, ಕಡಿಮೆ ಚಟುವಟಿಕೆ ಇವೆಲ್ಲವೂ ಕ್ಯಾನ್ಸರ್ ಅಪಾಯವನ್ನು ತಂದೊಡ್ಡುತ್ತದೆ ಎನ್ನುತ್ತಾರೆ. ಆದ್ದರಿಂದ ಮಹಿಳೆಯರು ತಾವು ಎಷ್ಟು ಸಮಯ ಕೆಲಸ ಮಾಡಬೇಕು ಎಂಬಿತ್ಯಾದಿಯನ್ನು ಅರಿತು ತಮ್ಮ ಜೀವನ ಶೈಲಿಯನ್ನು ಆರೋಗ್ಯಕರವಾಗಿ ರೂಢಿಸಿಕೊಳ್ಳುವುದು ಇಂತಹ ಅಪಾಯವನ್ನು ತಪ್ಪಿಸಬಹುದು.

ಕೊಲೆಸ್ಟ್ರಾಲ್ ಕಡಿಮೆಗೊಳಿಸಿ

ಕೊಲೆಸ್ಟ್ರಾಲ್ ಕಡಿಮೆಗೊಳಿಸಿ

ಫ್ರೆಡ್ ಹಚಿನ್ ಸನ್ ಕ್ಯಾನ್ಸರ್ ರಿಸರ್ಚ್ ಸೆಂಟರ್ ಪ್ರಕಾರ ' ಸ್ಟ್ಯಾಟಿನ್' (ಕೊಲೆಸ್ಟ್ರಾಲ್ ಕಡಿಮೆ ಮಾಡುವ ಔಷಧ) ಅನ್ನು ದಶಕಕ್ಕೂ ಹೆಚ್ಚು ಸೇವಿಸಿದ ಮಹಿಳೆಯರಲ್ಲಿ ಇನ್ವೆಸಿವ್ ಡಕ್ಟಲ್ ಸಿನೋಮಾ (ಐ.ಡಿ.ಸಿ) ಉಂತಾಗುವ ಸಾಧ್ಯತೆಗಳು ಎರಡು ಪಟ್ಟು ಹೆಚ್ಚಾಗಿವೆ. ಅಧ್ಯಯನಗಳ ಪ್ರಕಾರ ಅಡಿಮೆ ಅವಧಿಯ ಸ್ಟ್ಯಾಟಿನ್ ಸೇವನೆ ಸ್ತನ ಕ್ಯಾನ್ಸರ್ ವಿರುದ್ಧ ರಕ್ಷಣೆ ಒದಗಿಸಿದರೆ, ಬಹಳ ಕಾಲ ಇದನ್ನು ಸೇವಿಸುವುದರಿಂದ ದೇಹದಲ್ಲಿ ಕೆಲವು ರಾಸಾಯನಿಕಗಳ ಹರಿವಿಗೆ ಅಡ್ಡಿಯುಂಟಾಗಿ ಇದರಿಂದ ಗಡ್ಡೆಗಳು (ಟ್ಯೂಮರ್) ಬೆಳೆಯುತ್ತವೆ. ಆದರೂ ಸ್ಟ್ಯಾಟಿನ್ ಸೇವನೆಯನ್ನು ನಿಲ್ಲಿಸುವ ಮೊದಲು ವೈದ್ಯರ ಬಳಿ ಸಲಹೆಯನ್ನು ಪಡೆದುಕೊಳ್ಳುವುದು ಉತ್ತಮ.

ಅನಾರೋಗ್ಯಕರ ರಾಸಾಯನಿಕಗಳನ್ನು ಸೇವಿಸದಿರಿ

ಅನಾರೋಗ್ಯಕರ ರಾಸಾಯನಿಕಗಳನ್ನು ಸೇವಿಸದಿರಿ

ಶೇಖರಿಸಿಟ್ಟ ಆಹಾರ ಹಾಗೂ ಪಾನೀಯಗಳನ್ನು ಸೇವಿಸಬೇಡಿ. ಮತ್ತು ಪ್ಲಾಸ್ಟಿಕ್ ಪಾತ್ರೆಗಳಲ್ಲಿ, ಮೈಕ್ರೋವೆವ್ ನಲ್ಲಿ ಆಹಾರವನ್ನು ಬಿಸಿ ಮಾಡಿ ತಿನ್ನಬೇಡಿ ಎಂಬುದು ಪೌಷ್ಠಿಕಾಂಶ ತಜ್ಞೆ, ಕಾನರ್ ಮಿಡ್ಲ್ ಮೆನ್ ವೈಟ್ನಿ ಅವರ ಅಭಿಪ್ರಾಯ. ಇಂತಹ ಆಹಾರಗಳು ಇಸ್ಟ್ರೋಜನ್ ನಂತೆ ಕೆಲಸಮಾಡುವ ರಾಸಾಯನಿಕಗಳನ್ನು ಉತ್ಪತ್ತಿಮಾಡಿ ಕ್ಯಾನ್ಸರ್ ಕಾರಕಗಳನ್ನು ಹೆಚ್ಚಿಸುತ್ತವೆ. ಹೆಚ್ಚಿನ ತಾಪಮಾನಸಲ್ಲಿ ಬೇಯಿಸಿದ, ಹುರಿದ ಮಾಂಸಾಹಾರಗಳು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಆಕ್ರಿಲಾಮೈಡ್ನ ಉತ್ಪಾದನೆಯನ್ನು ಪ್ರಚೋದಿಸಬಹುದು. ಆದ್ದರಿಂದ ಇಂತಹ ಆಹಾರಗಳು ಹಾಗೂ ಸಂರಕ್ಷಿತ ಮಾಂಸವನ್ನು ಸೇವಿಸದಿರುವುದು ಉತ್ತಮ.

ಸೂರ್ಯನ ಬೆಳಕಿಗೆ ಮೈಯೊಡ್ಡಿ

ಸೂರ್ಯನ ಬೆಳಕಿಗೆ ಮೈಯೊಡ್ಡಿ

ಕೆನಡಿಯನ್ ಸಂಶೋಧಕರ ಪ್ರಕಾರ, ಸ್ತನ ಕ್ಯಾನ್ಸರ್ ಸಾಧ್ಯತೆಯನ್ನು ಕಡಿಮೆಗೊಳಿಸುವ, ಸೂರ್ಯನ ಕಿರಣಗಳಿಂದ ದೊರೆಯುವ ವಿಟಮಿನ್ ಡಿ ದೇಹಕ್ಕೆ ಅತ್ಯಗತ್ಯ. ಸೂರ್ಯನ ಕಿರಣದಿಂದ ಸ್ತನ ಜೀವಕೋಶಗಳು ವಿಟಮಿನ್ ಡಿಯನ್ನು ಕ್ಯಾನ್ಸರ್ ವಿರೋಧಿ ಹಾರ್ಮೋನ್ ಗಳನ್ನು ಉತ್ಪಾದಿಸುತ್ತವೆ ಎಂಬುದು ಪ್ರಯೋಗಾಲಯದ ಪರೀಕ್ಷೆಗಳ ಮೂಲಕ ಸಾಬೀತಾಗಿದೆ. ಜೊತೆಗೆ ಸೂರ್ಯನ ಅತಿಯಾದ ಶಾಖ ಚರ್ಮದ ಕ್ಯಾನ್ಸರ್‌ಗೂ ಕಾರಣವಾಗಬಹುದು. ಆದ್ದರಿಂದ ಎಚ್ಚರಿಕೆವಹಿಸಿ.

English summary

7 super ways you won't have breast cancer

According to information available on the Tata Memorial Hospital's website worldwide, breast cancer is the most common of all cancers and is the leading cause of cancer deaths. In addition to going for mandatory screenings and tests, you can make lifestyle changes to lower your risk.
X
Desktop Bottom Promotion