For Quick Alerts
ALLOW NOTIFICATIONS  
For Daily Alerts

ಎಬೋಲಾ ವೈರಸ್ಸಿನ ಬಗ್ಗೆ ತಲೆಕೆಡಿಸಿಕೊಳ್ಳದಿರಲು ಏಳು ಕಾರಣಗಳು

By Super
|

1995ರಲ್ಲಿ ಔಟ್ ಬ್ರೇಕ್ (outbreak) ಎಂಬ ಆಂಗ್ಲ ಚಿತ್ರ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು. 1967ರಲ್ಲಿ ಜೈರೇಯಲ್ಲಿ ಎಬೋಲಾದಂತಹದ್ದೇ ಮೊಟಾಬಾ ಎಂಬ ವೈರಸ್ಸು ಹಾವಳಿಯಿಂದಾಗಿ ಇಡಿಯ ಗ್ರಾಮ ಪೀಡಿತವಾಗುತ್ತದೆ. ಈ ಕಾಯಿಲೆಗೆ ಔಷಧಿಯೇ ಇಲ್ಲದಿರುವುದರಿಂದ ಹಾಗೂ ಒಬ್ಬರಿಂದ ಇನ್ನೊಬ್ಬರಿಗೆ ಶೀಘ್ರವಾಗಿ ಹರಡುವುದರಿಂದ ಅಮೇರಿಕಾ ಸರ್ಕಾರ ಬಾಂಬ್ ಹಾಕಿ ಇಡಿಯ ಗ್ರಾಮವನ್ನೇ ನಿರ್ನಾಮ ಮಾಡುತ್ತದೆ.

ಒಂದು ಕೋತಿಯ ಮೂಲಕ ಈ ವೈರಸ್ಸು ಮತ್ತೆ 1995ರಲ್ಲಿ ನಾಗರಿಕ ಪ್ರಪಂಚಕ್ಕೆ ಧಾಳಿ ಇಡುತ್ತದೆ. ಸೆಡಾರ್ ಕ್ರೀಕ್ ಎಂಬ ಅಮೇರಿಕಾದ ಗ್ರಾಮವಾಸಿಗಳೆಲ್ಲಾ ವೈರಸ್ಸಿನ ರೋಗಪೀಡಿತರಾಗುತ್ತಾರೆ. ಈಗ ಈ ವೈರಸ್ಸು ಗಾಳಿಯಲ್ಲೂ ಹರಡುವಷ್ಟು ಪ್ರಬಲವಾಗಿರುತ್ತದೆ. ಈಗಲೂ ಅಮೇರಿಕಾ ಸರ್ಕಾರ ಸೆಡಾರ್ ಕ್ರೀಕ್ ಮೇಲೆ ಬಾಂಬ್ ಹಾಕುವ ನಿರ್ಧಾರ ಕೈಗೊಳ್ಳುತ್ತದೆ. ಆದರೆ ಅದಕ್ಕೂ ಮುನ್ನ ಚಿತ್ರದ ನಾಯಕ ಹರಸಾಹಸದಿಂದ ವೈರಸ್ಸಿಗೆ ಔಷಧಿ ಕಂಡುಹಿಡಿದು ಕಾಯಿಲೆ ನಿಯಂತ್ರಣಕ್ಕೆ ತರುತ್ತಾನೆ. ಅಲ್ಲಿಗೆ ಚಿತ್ರ ಸುಖಾಂತ್ಯಗೊಳ್ಳುತ್ತದೆ. ಎಚ್ಚರ; ಮಾರಕ ಎಬೋಲಾ ಜ್ವರದ ಲಕ್ಷಣಗಳೇನು?

ಸರಿಸುಮಾರು ಇದೇ ಕಥೆಯನ್ನು ಹೋಲುವ ವಾಸ್ತವ ಇಂದು ಪತ್ರಿಕೆಗಳಲ್ಲಿ ನೋಡುತ್ತಿದ್ದೇವೆ. ಎಬೋಲಾ ಎಂಬ ವೈರಸ್ಸು ಜೈರೇ ದೇಶದಲ್ಲಿ 1976ರಲ್ಲಿ ಕಂಡುಬಂದಿತ್ತು. ಈ ವೈರಸ್ಸು ಮನುಷ್ಯ ಹಾಗೂ ಎಲ್ಲಾ ಪ್ರಾಣಿಗಳನ್ನು ಬಾಧಿಸುತ್ತದೆ. ಕಳೆದ ವರ್ಷ ಪಾಪುವಾ ನ್ಯೂ ಗಿನಿ ದೇಶದ ಗಿನಿ ಪ್ರಾಂತದಲ್ಲಿ ಮೊದಲ ಬಾರಿ ಮತ್ತೆ ಕಾಣಿಸಿಕೊಂಡಿತ್ತು. ಬಳಿಕ ಅಮೇರಿಕಾ ಸೇರಿದಂತೆ ಆರು ರಾಷ್ಟ್ರಗಳಿಗೆ ವ್ಯಾಪಿಸುತ್ತಾ ಹೋಗಿದೆ. ಇಂದಿನ ದಿನಗಳಲ್ಲಿ ದೇಶಗಳ ನಡುವಣ ಸಂಚಾರ ಕೆಲವರಿಗೆ ಪಕ್ಕದ ಮನೆಗೆ ಹೋಗಿ ಬಂದಷ್ಟೇ ಸಲೀಸಾಗಿರುವುದರಿಂದ ವೈರಸ್ಸು ದೇಶದಿಂದ ದೇಶಕ್ಕೆ ಹರಡುವ ಸಾಧ್ಯತೆಗಳು ತುಂಬಾ ಹೆಚ್ಚು. ಇಂತಹ ಸುದ್ದಿಗಳಿಗೆ ಕಾದು ಕುಳಿತಿರುವ ಮಾಧ್ಯಮಗಳು ಪ್ರತಿ ಬಾರಿ ಎಬೋಲಾ ವೈರಸ್ಸಿನ ಕುರುಹುಗಳು ಕಂಡುಬಂದರೆ ಪ್ರಮುಖ ಸುದ್ಧಿಯನ್ನಾಗಿ ಪ್ರಕಟಿಸುತ್ತಿವೆ. ಎಬೋಲಾ ಬಗ್ಗೆ ಅರಿವಿಲ್ಲದಿರುವವರಿಗೂ ದಿಗಿಲು ಹುಟ್ಟಿಸುತ್ತಿದೆ.

ಆದರೆ ಈ ವೈರಸ್ಸು ಹುಟ್ಟಿಸಿದಷ್ಟು ಭೀತಿ ಪಡುವ ಅಗತ್ಯವಿಲ್ಲ. ಏಕೆಂದರೆ ಮಾಧ್ಯಮಗಳು ಎಬೋಲಾ ಹಾವಳಿಗಳ ಬಗ್ಗೆಯೇ ಕೊರೆಯುತ್ತವೆಯೇ ಹೊರತು ಇದನ್ನು ತಡೆಗಟ್ಟುವ ಬಗ್ಗೆ ಹಾಗೂ ಸಾಧಕ ಬಾಧಕ ಪರಿಣಾಮಗಳ ಬಗ್ಗೆ ಹೆಚ್ಚು ವಿವರಣೆ ನೀಡುತ್ತಿಲ್ಲ. ಎಬೋಲಾ ಒಂದು ನಿಯಂತ್ರಿಸಲಾಗದ ವೈರಸ್ಸಂತೂ ಖಂಡಿತಾ ಅಲ್ಲ. ಈ ಬಗ್ಗೆ ಹೆಚ್ಚಿನ ವಿವಗಳನ್ನು ಚೆಲ್ಲಬಲ್ಲ ಏಳು ಸಕಾರಣಗಳನ್ನು ಇಲ್ಲಿ ನೀಡಲಾಗಿದೆ.
ಎಬೋಲಾ ಪ್ರಾರಂಭಿಕ ಹಂತದಲ್ಲಿಯೇ ಪ್ರಕಟಗೊಳ್ಳುತ್ತದೆ

ಕೆಲವು ಕ್ಯಾನ್ಸರ್, ಮೂತ್ರಪಿಂಡದ ಕಲ್ಲುಗಳು ಮೊದಲಾದವು ಪ್ರಾರಂಭಿಕ ಹಂತದಲ್ಲಿ ಗೋಚರಿಸುವುದೇ ಇಲ್ಲ. ಅದರ ಇರುವು ಗೊತ್ತಾಗುವುದೇ ಕಾಯಿಲೆ ಉತ್ಕಟ ಸ್ಥಿತಿಯಲ್ಲಿರುವಾಗ. ಆಗ ಪರಿಸ್ಥಿತಿ ಕೈಮೀರಿ ಹೋಗಿ ಪ್ರಾಣಕ್ಕೇ ಅಪಾಯ ಸಂಭವಿಸಬಹುದು. ಎಬೋಲಾ ವಿಷಯದಲ್ಲಿ ಹಾಗಲ್ಲ, ಪ್ರಾರಂಭಿಕ ಹಂತದಲ್ಲಿಯೇ ಇದರ ಪರಿಣಾಮಗಳು ಗೋಚರಿಸುತ್ತವೆ. ಕೇವಲ ಮೈಬಿಸಿ ನೋಡಿಯೇ ಕೆಲವು ಲಕ್ಷಣಗಳನ್ನು ಕಂಡುಹಿಡಿಯಬಹುದು. ಅದಕ್ಕೆಂದೇ ವಿಮಾನ ನಿಲ್ದಾಣಗಳಲ್ಲಿ ಮೈಬಿಸಿ ಅಳೆಯುವ ಲೇಸರ್‌ಗನ್ನುಗಳನ್ನು ಹಿಡಿದ ಸಿಬ್ಬಂದಿ ಕ್ಷಣಮಾತ್ರದಲ್ಲಿ ಎಬೋಲಾ ಪೀಡಿತರನ್ನು ಕಂಡುಹಿಡಿದುಬಿಡುತ್ತಾರೆ. ಎಬೋಲಾ ಸೋಂಕಿನಿಂದ ದೂರವಿರಲು ಎಂಟು ಸಲಹೆಗಳು

ನೀವು ಮಾಡುವ ಊಟದಿಂದ ಇದರ ಬಾಧೆಗೊಳಗಾಗುವುದಿಲ್ಲ

ಈ ವೈರಸ್ಸು ಮಾಂಸಾಹಾರ ಸಹಿತ ಇತರ ಆಹಾರಗಳ ಮೂಲಕ ಹರಡುವುದಿಲ್ಲ ಎಂದು ಸಂಶೋಧನೆಗಳು ಧೃಢಪಡಿಸಿವೆ. ಆದರೆ ಸ್ವಚ್ಛತೆಯನ್ನು ಕಾಪಾಡುವುದು ಮತ್ತು ಪೂರ್ಣ ಪ್ರಮಾಣದಲ್ಲಿ ಬೇಯಿಸಿ ಮಾಂಸಾಹಾರವನ್ನು ಸೇವಿಸುವುದು ಎಬೋಲಾ ಸಹಿತಿ ಎಲ್ಲಾ ಕ್ರಿಮಿಗಳಿಂದ ರಕ್ಷಣೆ ಪಡೆಯಲು ಅವಶ್ಯವಾಗಿದೆ.

ಎಬೋಲಾ ದಿಂದ ಪ್ರಾಣ ತೆತ್ತವರ ಸಂಖ್ಯೆ ಬಹಳ ದೊಡ್ಡದೇನಲ್ಲ
ಜೈರೇ ದೇಶದಲ್ಲಿ 1976ರ ಎಬೋಲಾ ಹಾವಳಿಯಿಂದ ಸುಮಾರು ಆರು ಸಾವಿರ ಜನರು ಸಾವನ್ನಪ್ಪಿದ್ದರು. ಆದರೆ ಈ ಘಟನೆಯ ಬಳಿಕ ಬೇರೆ ಕಾರಣಗಳಿಂದ ಸಾವನ್ನಪ್ಪಿದ್ದವರ ಸಂಖ್ಯೆಯೂ ಇದಕ್ಕಿಂತ ಭಿನ್ನವೇನಲ್ಲ. ಹಾಗಾಗಿ ಕೇವಲ ಎಬೋಲಾ ವೈರಸ್ಸಿನ ಮೇಲೆ ಗೂಬೆ ಕೂರಿಸಿ ಬೇರೆ ಕಾರಣಗಳಿಗೆ ಕಡಿಮೆ ಪ್ರಾಮುಖ್ಯತೆ ನೀಡುವುದೂ ತಪ್ಪು.

ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಜಾಗ್ರತೆ ಏರ್ಪಡಿಸಲಾಗಿದೆ

ವಿಶ್ವದ ಪ್ರತಿಯೊಂದೂ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವೈದ್ಯಕೀಯ ತಪಾಸಣೆಯನ್ನು ಏರ್ಪಡಿಸಲಾಗಿದ್ದು ಸುಸಜ್ಜಿತ ಸಿಬ್ಬಂದಿ ದಿನದ ಇಪ್ಪತ್ತನಾಲ್ಕೂ ಗಂಟೆ ಜಾಗರೂಕರಾಗಿರುತ್ತಾರೆ. ಹಾಗಾಗಿ ಈ ಸುರಕ್ಷಾ ಕವಚವನ್ನು ಬೇಧಿಸಿ ಎಬೋಲಾ ವೈರಸ್ಸು ನಮ್ಮ ದೇಶಕ್ಕೆ ಆಗಮಿಸುವುದು ಕಷ್ಟಸಾಧ್ಯ.

ಎಬೋಲಾ ವೈರಸ್ ಬಗ್ಗೆ ಎಲ್ಲಾ ರಾಷ್ಟ್ರಗಳು ಎಚ್ಚರಿಕೆ ವಹಿಸಿವೆ

ವಿಶ್ವದ ಎಲ್ಲಾ ಪ್ರಮುಖ ಸಂಸ್ಥೆಗಳು ಜಾಗರೂಕತಾ ಕ್ರಮವನ್ನು ಹಮ್ಮಿಕೊಂಡಿದ್ದು ಎಲ್ಲಾ ದೇಶಗಳ ಸರ್ಕಾರ ಹಾಗೂ ವೈದ್ಯಕೀಯ ವಿಭಾಗಗಳು ಸ್ವಪ್ರೇರಣೆಯಿಂದ ಈ ಕ್ರಮಗಳಿಗೆ ತಮ್ಮ ಬೆಂಬಲವನ್ನು ಘೋಷಿಸಿವೆ. ಹಲವು ಸ್ವಯಂಸೇವಾ ಸಂಸ್ಥೆಗಳೂ ಈ ನಿಟ್ಟಿನಲ್ಲಿ ತಮ್ಮ ಸಹಾಯ ನೀಡುತ್ತಿವೆ. ರೋಗದ ಬಗ್ಗೆ ಎಳ್ಳಷ್ಟೂ ಮಾಹಿತಿ ದೊರಕಿದಾಕ್ಷಣ ಕೈಗೊಳ್ಳಬೇಕಾದ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಲಾಗುತ್ತಿದೆ. ಹಾಗಾಗಿ ಈ ಬಗ್ಗೆ ಆತಂಕಪಡುವ ಅವಶ್ಯಕತೆಯಿಲ್ಲ.

ಎಬೋಲಾ ವೈರಸ್ ಗಾಳಿಯಿಂದ ಹರಡುವುದಿಲ್ಲ

ಔಟ್ ಬ್ರೇಕ್ ಚಿತ್ರದಲ್ಲಿ ಮೊಟಾಬಾ ವೈರಸ್ಸು ಮರುಕಳಿಸಿದಾಗ ಅದು ಗಾಳಿಯಲ್ಲಿ ಹಾರುವ ಸಾಮರ್ಥ್ಯ ಪಡೆದಿತ್ತು. ವಾಸ್ತವದಲ್ಲಿ ಎಬೋಲಾ ವೈರಸ್ಸು ಎಂದೂ ಗಾಳಿಯಲ್ಲಿ ಹಾರಲು ಸಾಧ್ಯವಿಲ್ಲ. ಅಂತೆಯೇ ಜನರ ಉಸಿರಿನಿಂದ ಒಬ್ಬರಿಂದಿನ್ನೊಬ್ಬರಿಗೆ ಈ ಕಾಯಿಲೆ ಹರಡುವ ಸಂಭವವಿಲ್ಲ.

ಈ ವೈರಸ್ಸನ್ನು ತಡೆಗಟ್ಟಲು ಸಾಧ್ಯವಿದೆ

ಈ ವೈರಸ್ ಕೇವಲ ಮನುಷ್ಯ ಹಾಗೂ ಕಪಿಗಳ ನೇರ ಸಂಪರ್ಕದಿಂದ ಮಾತ್ರ ಹರಡುವುದರಿಂದ ಕಾಯಿಲೆ ಬರದಿರುವಂತೆ ಸುಲಭವಾಗಿ ತಡೆಗಟ್ಟಲು ಸಾಧ್ಯವಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅಗತ್ಯವಿರುವುದು ಸ್ವಚ್ಛತೆ. ಸೋಪು ಉಪಯೋಗಿಸಿ ಪ್ರತಿಬಾರಿ ಕೈತೊಳೆಯುವ ಮೂಲಕ ಈ ವೈರಸ್ಸು ಹರಡದಂತೆ ಸುಲಭವಾಗಿ ತಡೆಗಟ್ಟಬಹುದು.

English summary

7 Reasons You Shouldn't Worry About Ebola

Ebola, also known as the Ebola virus disease, is a widely known disease caused by the Ebola virus. It affects humans and other primates alike. The disease was detected after almost decades in Guinea in 2013 and has since then spread to over six countries,
X
Desktop Bottom Promotion