For Quick Alerts
ALLOW NOTIFICATIONS  
For Daily Alerts

ವ್ಯಾಯಾಮದ ಮೂಲಕ ಖಿನ್ನತೆಯನ್ನು ಹೋಗಲಾಡಿಸಲು ಏಳು ಸೂಕ್ತ ಸಲಹೆಗಳು

|

ಕೆಲವು ಜನರು ತಮ ಜೀವನದಲ್ಲಿ ನಡೆಯುವ ಘಟನೆಗಳನ್ನು ಅರ್ಥಮಾಡಿಕೊಳ್ಳದೇ ಅದಕ್ಕೆ ಹೊಂದಿಕೊಳ್ಳಲಾಗದೇ ಖಿನ್ನತೆಗೆ ಒಳಗಾಗುತ್ತಾರೆ. ಇಂತಹ ಸಂದರ್ಭದಲ್ಲಿ ಮನಸ್ಸಿನ ಕೊರತೆಯನ್ನು ನಿವಾರಿಸುವಂತಹ ಸ್ವಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು ಅತ್ಯವಶ್ಯಕ. ಹಾಗಾಗಿ ಇಂತಹ ಸಮಸ್ಯೆಯನ್ನು ಹೋಗಲಾಡಿಸಲು ವ್ಯಾಯಾಮ ಮಾಡುವುದು ಅತ್ಯಂತ ಒಳ್ಳೆಯ ಮಾರ್ಗ.

ಇದು ಕೇವಲ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ನಿಮ್ಮನ್ನು ಸದೃಢರನ್ನಾಗಿಸುತ್ತದೆ. ವ್ಯಾಯಾಮವು ಚಿತ್ತಸ್ಥಿತಿಗಳನ್ನು ಸ್ಥಿರಗೊಳಿಸಲು ಮತ್ತು ಖಿನ್ನತೆಯ ಆಲೋಚನೆಗಳನ್ನುನ್ನು ದೂರಗೊಳಿಸುವ ಸಿರೊಟೋನಿನ್ ಮತ್ತು ಟೆಸ್ಟೋಸ್ಟೆರಾನ್ ಹಾರ್ಮೋನ್ ಬಿಡುಗಡೆಗೊಳಿಸುತ್ತದೆ.

ಅದರಲ್ಲೂ ಹೊರಾಂಗಣದಲ್ಲಿ ವ್ಯಾಯಾಮ ಮಾಡುವುದರಿಂದ ನಿಮ್ಮ ಖಿನ್ನತೆಯನ್ನು ಹೋಗಲಾಡಿಸಿಕೊಳ್ಳುವುದು ಸುಲಭ ಮಾರ್ಗವಾಗಿದೆ. ಚಳಿಗಾಲವಿರಲಿ, ಬೇಸಿಗೆಯಿರಲಿ ಹೊರಾಂಗಣದಲ್ಲಿ ವ್ಯಾಯಾಮ ಮಾಡುವುದರಿಂದ ನಿಮ್ಮ ಮೂಡ್, ಆರೋಗ್ಯ ಮತ್ತು ತೂಕ ಎಲ್ಲವೂ ನಿಮ್ಮ ನಿಯಂತ್ರಣದಲ್ಲಿರುತ್ತವೆ.

ಹಾಗಾಗಿ ಹೊರಾಂಗಣದಲ್ಲಿ ವ್ಯಾಯಾಮ ಮಾಡುವ ಅವಕಾಶವನ್ನು ಯಾವುದೇ ಕಾರಣಕ್ಕು ತಪ್ಪಿಸಿಕೊಳ್ಳಬೇಡಿ. ಈ ವ್ಯಾಯಾಮ ಮಾಡುವುದರಿಂದ ನಿಮಗೆ ಏನೆಲ್ಲಾ ಉಪಯೋಗವಾಗುತ್ತದೆ ಎಂಬುದನ್ನು ಕುರಿತು ನಾವಿಲ್ಲಿ ಚರ್ಚಿಸಿದ್ದೇವೆ ಓದಿ ನೋಡಿ.

ಉಚಿತವಾಗಿ ಪಡೆಯಿರಿ ವಿಟಮಿನ್ ಡಿ

ಉಚಿತವಾಗಿ ಪಡೆಯಿರಿ ವಿಟಮಿನ್ ಡಿ

ಖಿನ್ನತೆಯನ್ನು ಹೊಡೆದೊಡಿಸಲು ಹೊರಾಂಗಣದಲ್ಲಿ ವ್ಯಾಯಾಮ ಮಾಡಿ ಎಂದು ಹೇಳಲು ಮೊದಲ ಕಾರಣ ವಿಟಮಿನ್ ಡಿ. ಬೆಳಗಿನ ಸೂರ್ಯನ ಕಿರಣಗಳಲ್ಲಿ ಉಚಿತವಾಗಿ ದೊರೆಯುವ ಈ ವಿಟಮಿನ್ ನಿಮ್ಮ ದೇಹದಲ್ಲಿ ಸೆರೊಟೊನಿನ್‍ ಅನ್ನು ಬಿಡುಗಡೆ ಮಾಡುತ್ತದೆ. ಇವು ನಿಮ್ಮ ದೇಹದಲ್ಲಿ ಹಾರ್ಮೋನುಗಳಿಗೆ ಶಕ್ತಿಯನ್ನು ಉಂಟುಮಾಡುವುದರ ಜೊತೆಗೆ ಮನಸ್ಸನ್ನು ಉಲ್ಲಾಸಿತಗೊಳಿಸಿ, ಖಿನ್ನತೆಯನ್ನು ಅದರ ಮೂಲದಲ್ಲಿಯೇ ನಿವಾರಿಸುತ್ತದೆ. ಇದರ ಜೊತೆಗೆ ಇದು ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಉದ್ದೀಪನಗೊಳಿಸುತ್ತದೆ. ವಿಟಮಿನ್ ಡಿಯನ್ನು ನಿಮ್ಮ ದೇಹಕ್ಕೆ ಒದಗಿಸಲು ಸೂರ್ಯನ ಬೆಳಕಿಗಿಂತ ಬೇರೆ ಉತ್ತಮ ಮಾರ್ಗವಿಲ್ಲ. ಹೊರಾಂಗಣದಲ್ಲಿ ವ್ಯಾಯಾಮ ಮಾಡುವುದರಿಂದ ಬಿಸಿಲಿರಲಿ, ಇಲ್ಲದಿರಲಿ ವಿಟಮಿನ್ ಡಿ ನಿಮ್ಮ ದೇಹಕ್ಕೆ ದೊರೆಯುತ್ತದೆ. ಹೇಗೆಂದರೆ ಹೊರಾಂಗಣದಲ್ಲಿರುವ ಬೆಳಕಿನಲ್ಲಿ ಈ ವಿಟಮಿನ್ ಡಿ ಇರುತ್ತದೆ. ಅರ್ಧ ಗಂಟೆ ಹೊರಗಡೆ ಇರಿ, ಖಿನ್ನತೆಯನ್ನು ದೂರ ಮಾಡಿಕೊಳ್ಳಿ.

ಪರಿಸರದ ಬದಲಾವಣೆ

ಪರಿಸರದ ಬದಲಾವಣೆ

ಪರಿಸರದ ಬದಲಾವಣೆಯು ನಮ್ಮ ಮೆದುಳಿನಲ್ಲಿರುವ ನ್ಯೂರಾನ್‍ಗಳು ಉದ್ದೀಪನಗೊಳ್ಳುತ್ತವೆ ಮತ್ತು ಎಂಡೋರ್ಫಿನ್‍ಗಳನ್ನು ಉತ್ತೇಜನಗೊಳಿಸುತ್ತದೆ. ಇದಲ್ಲದೆ ಇದು ನಿಮ್ಮ ಇಡೀ ದಿನವನ್ನು ಸೃಜನಾತ್ಮಕಗೊಳಿಸಲು ನೆರವಾಗುತ್ತದೆ. ಬೇಸರವು ಖಿನ್ನತೆಗೆ ದಾರಿ ಮಾಡಿಕೊಡುತ್ತದೆ ಎಂಬುದನ್ನು ಮರೆಯಬೇಡಿ.

ತಾಜಾ ಗಾಳಿ

ತಾಜಾ ಗಾಳಿ

ತಾಜಾ ಗಾಳಿಗೆ ಸರಿಸಾಟಿಯಾಗಿರುವ ಮತ್ತೊಂದು ಗಾಳಿ ಜಗತ್ತಿನಲ್ಲಿಲ್ಲ. ಇಡೀ ದಿನವನ್ನು ಉಲ್ಲಾಸದಿಂದ ಕಳೆಯಲು ಬೆಳಗಿನ ತಂಗಾಳಿಯಲ್ಲಿ ಸ್ವಲ್ಪ ಅಡ್ಡಾಡಿದರೆ ಸಾಕು. ಇನ್ನು ಈ ತಂಗಾಳಿಯಲ್ಲಿ ವ್ಯಾಯಾಮ ಮಾಡಿದರೆ ಸಿಗುವ ಪ್ರಯೋಜನಕ್ಕೆ ಲೆಕ್ಕವೆ ಇಲ್ಲ. ಹೆಚ್ಚು ಚಳಿಯಿದ್ದ ದಿನ ರಕ್ತ ಪರಿಚಲನೆ ಹೆಚ್ಚು ಮಾಡುವ ವ್ಯಾಯಾಮವನ್ನು ಹೊರಗೆ ಮಾಡಿ. ತೂಕ ಎತ್ತುವ, ಯೋಗ ಮುಂತಾದ ವ್ಯಾಯಾಮಗಳನ್ನು ಒಳಾಂಗಣದಲ್ಲಿ ಮಾಡಿ. ಆದರೆ ವಾತಾವರಣ ಅನುಕೂಲಕರವಾಗಿದ್ದಾಗ ವ್ಯಾಯಾಮವನ್ನು ಹೊರಾಂಗಣದಲ್ಲಿ ಮಾಡಿ.

ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ

ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ

ಹೌದು ಹೊರಾಂಗಣದಲ್ಲಿ ವ್ಯಾಯಾಮ ಮಾಡುವುದರಿಂದ ನಿಮ್ಮ ರೋಗ ನಿರೋಧಕ ಶಕ್ತಿಯು ದ್ವಿಗುಣಗೊಳ್ಳುತ್ತದೆ. ಯಾವಾಗ ನಿಮ್ಮ ರೋಗ ನಿರೋಧಕ ಶಕ್ತಿಯು ಕುಂದುತ್ತದೆಯೋ, ಆಗ ನಿಮ್ಮ ಮನಸ್ಸಿನಲ್ಲಿ ಖಿನ್ನತೆಯು ಕಾಣಿಸಿಕೊಳ್ಳುತ್ತದೆ. ಹಾಗಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನಡಿಗೆ ಅಥವಾ ಜಾಗಿಂಗ್ ಮುಂತಾದ ಹೊರಾಂಗಣ ವ್ಯಾಯಾಮಗಳಲ್ಲಿ ಕೆಲವು ನಿಮಿಷ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ.

ದೇಹಧಾರ್ಡ್ಯತೆ

ದೇಹಧಾರ್ಡ್ಯತೆ

ಹೊರಾಂಗಣದಲ್ಲಿ ವ್ಯಾಯಾಮ ಮಾಡುವುದರಿಂದ ನಿಮ್ಮ ಸ್ನಾಯುಗಳ ಬೆಳವಣಿಗೆಯು ಉತ್ತಮವಾಗುತ್ತದೆ. ನಡೆಯುವುದರಿಂದ ಕಾಲುಗಳ ಸ್ನಾಯುಗಳು ಬಲಿಷ್ಟಗೊಳ್ಳುತ್ತದೆ ಅದು ಸಮತಟ್ಟಾದ ಜಾಗವಿರಬಹುದು ಅಥವಾ ಏರು ತಗ್ಗುಗಳ ಸ್ಥಳವಿರಬಹುದು. ಹೊರಾಂಗಣದಲ್ಲಿರುವ ಹುಲ್ಲು ಹಾಸಿನ ಮೇಲೆ ನಡೆದಾಡಿದರೆ ಸಾಕು ನಿಮ್ಮ ಸ್ನಾಯುಗಳು ಬಲಿಷ್ಟಗೊಳ್ಳುತ್ತವೆ. ಜೊತೆಗೆ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ದ್ವಿಗುಣಗೊಳ್ಳುತ್ತದೆ. ಇದರಿಂದಾಗಿ ನಿಮ್ಮ ಮನದಲ್ಲಿನ ಖಿನ್ನತೆಯು ದೂರವಾಗುತ್ತದೆ. ನಿಮಗಾಗಿ ಸುಂದರವಾದ ವಿಶ್ವವು ನಿಮ್ಮನ್ನು ಎದುರು ನೋಡುತ್ತಿದೆ, ಖಿನ್ನತೆಯ ಮಾತೇಕೆ ನಿಮ್ಮ ದೇಹದಲ್ಲಿರುವ ಕ್ಯಾಲೊರಿಯನ್ನು ಖರ್ಚು ಮಾಡಿ, ನವ ಜೀವನೋತ್ಸಾಹವನ್ನು ನಿಮ್ಮದಾಗಿಸಿಕೊಳ್ಳಿ.

ಋತುಗಳ ಬದಲಾವಣೆ

ಋತುಗಳ ಬದಲಾವಣೆ

ಹೊರಾಂಗಣದಲ್ಲಿ ವ್ಯಾಯಾಮ ಮಾಡುವುದರಿಂದ ದೊರೆಯುವ ಮತ್ತೊಂದು ಪ್ರಯೋಜನ ಋತುಗಳ ಬದಲಾವಣೆಯನ್ನು ವೀಕ್ಷಿಸಬಹುದು. ಹಾಗೆಯೇ ಈ ಋತುಗಳ ಬದಲಾವಣೆಯನ್ನು ಗಮನಿಸುವ ಕಾರ್ಯದಲ್ಲಿ ನಿರತರಾದಾಗ ಖಿನ್ನತೆಯು ನಿಮಗೆ ಗೊತ್ತಿಲ್ಲದೆ ದೂರ ಹೋಗುತ್ತದೆ. ಕೇಳಲು ಇದು ವಿಚಿತ್ರವೆನಿಸಿದರು ಸತ್ಯ. ನಾನು ಇದನ್ನು ನಂಬುತ್ತೇನೆ. ವಸಂತ ಮಾಸದ ಹೂವುಗಳು, ಬೇಸಿಗೆಯಲ್ಲಿ ಜೋತಾಡುವ ಮಾವುಗಳು, ಮಳೆಗಾಲದಲ್ಲಿ ಕಾಣುವ ಮರಗಳ ಹಚ್ಚ ಹಸಿರು ಮತ್ತು ಚಳಿಗಾಲದಲ್ಲಿ ಉದುರಿ ಹೋಗುವ ಎಲೆಗಳು ಇವೆಲ್ಲವು ನಮ್ಮ ಮನಸ್ಸನ್ನು ತಪ್ಪದೆ ಸೆಳೆಯುತ್ತವೆ. ಆಗ ಖಿನ್ನತೆಗೆ ಎಲ್ಲಿರುತ್ತದೆ ಜಾಗ!. ಪ್ರಕೃತಿಯು ನಮಗೆ ಅತ್ಯಂತ ಸ್ವಾಭಾವಿಕವಾದ ಖಿನ್ನತೆ ನಿರೋಧಕ ಶಕ್ತಿ ಎಂಬುದನ್ನು ಅರಿತುಕೊಳ್ಳಿ. ಇದಕ್ಕಾಗಿ ನಾವು ಹಣ ವ್ಯಯಿಸಬೇಕಿಲ್ಲ, ಸ್ವಲ್ಪ ಮನೋಬಲ ಮತ್ತು ಸಮಯ ಸಾಕು ಖಿನ್ನತೆಯನ್ನು ಈ ಔಷಧಿಯಿಂದ ಗುಣಪಡಿಸಲು.

ವಿಷಕಾರಿ ವಸ್ತುಗಳಿಗೆ ಒಡ್ಡಿಕೊಳ್ಳುವುದು ಕಡಿಮೆ ಮಾಡಿ

ವಿಷಕಾರಿ ವಸ್ತುಗಳಿಗೆ ಒಡ್ಡಿಕೊಳ್ಳುವುದು ಕಡಿಮೆ ಮಾಡಿ

ನಿಮಗೆ ತಿಳಿದಿದಿಯೇ, ತುಂಬಾ ಹೊತ್ತು ಒಳಾಂಗಣದಲ್ಲಿ ಇರುವುದರಿಂದ ನಿಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು? ಪ್ರತಿ ಮನೆಯಲ್ಲಿಯು ಸ್ವಾಭಾವಿಕವಾಗಿ ಲಭ್ಯವಿರುವ ವಿಷಕಾರಕ ವಸ್ತುಗಳನ್ನು ನಾವು ಕಾಣಬಹುದು. ಅವುಗಳೆಂದರೆ ಕ್ಲೀನರ್‌ಗಳು, ಸತು ಇರುವ ಬಣ್ಣಗಳು, ಹವಾ ನಿಯಂತ್ರಕಗಳು ಮತ್ತು ಪ್ಲಾಸ್ಟಿಕ್ ಉತ್ಪನ್ನಗಳು. ಹಾಗೆಂದು ನಿಮ್ಮ ಮನೆಯನ್ನು ನೀವು ಸಂಪೂರ್ಣ ವಿಷ ರಹಿತವನ್ನಾಗಿ ಮಾಡಲು ಸಾಧ್ಯವಿಲ್ಲ. ಹಾಗಾಗಿ ಇವುಗಳಿಂದ ನೀವು ಸ್ವಲ್ಪ ಹೊತ್ತು ಹೊರಗೆ ಇರಲು ಮಾತ್ರ ಸಾಧ್ಯವಿದೆ. ಆ ಸಮಯವನ್ನು ವ್ಯಾಯಾಮದಲ್ಲಿ ತೊಡಗಿಸಿ, ಆ ಮೂಲಕ ಖಿನ್ನತೆಯನ್ನು ತೊಲಗಿಸಿ. ಈ ಖಿನ್ನತೆಯ ಒಳಾಂಗಣದಲ್ಲಿ ತುಂಬಿರುವ ವಿಷಕಾರಕಗಳಿಂದ ಸೂಸುವ ವಾಯುವಿನಿಂದಲು ಸಹ ಬರುತ್ತದೆ, ಹಾಗಾಗಿ ಮೊದ ಮೊದಲು ಎಲ್ಲವೂ ಕಷ್ಟವೇ, ಹಾಗೆಂದು ಹಿಂದೆ ಸರಿಯುವುದು ಸಾಧಕರ ಲಕ್ಷಣವಲ್ಲ. ಹೊರಾಂಗಣದಲ್ಲಿ , ಅದರಲ್ಲೂ ಈ ಚಳಿಗಾಲದಲ್ಲಿ ವ್ಯಾಯಾಮ ಮಾಡಲು ಆರಂಭಿಸುವುದು ಕಷ್ಟವೇ, ಆದರೂ ಛಲ ಬಿಡದೆ ಪ್ರಯತ್ನಿಸಿ ನೋಡಿ. ನಿಮ್ಮ ಆರೋಗ್ಯ ವೃದ್ಧಿಯಾಗುವ ಜೊತೆಗೆ ಖಿನ್ನತೆ ಮಂಗ ಮಾಯವಾಗಿ ಹೋಗಿರುವುದಂತು ಸತ್ಯ ಎಂಬುದನ್ನು ನೀವೇ ದೃಢಪಡಿಸುವಿರಿ.

English summary

7 Reasons Exercising outside Can Help Prevent Depression

There are multiple reasons exercising outdoors can help prevent depression during winter months, some of which you might not have considered. With all the reasons exercising outdoors can help prevent depression, it's almost impossible not to at least give it a shot. Check out these reasons and share any you might have with me too!
X
Desktop Bottom Promotion