For Quick Alerts
ALLOW NOTIFICATIONS  
For Daily Alerts

ಕ್ಯಾಪ್ಸಿಕಂನಿಂದ ಪಡೆಯಿರಿ 7 ಅದ್ಭುತ ಆರೋಗ್ಯ ಕವಚಗಳು

By Super
|

ನಿಮ್ಮ ಭಕ್ಷ್ಯಗಳಿಗೆ ಕ್ಯಾಪ್ಸಿಕಂ (ದೊಡ್ಡ ಮೆಣಸಿನಕಾಯಿ) ದೊಡ್ಡ ಮೆಣಸಿನಕಾಯಿ ಕೇವಲ ಬಣ್ಣ ಮತ್ತು ಕರಮ್-ಕರಮ್ ಎಂದು ಅಗಿಯುವುದಕ್ಕಿಂತ ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ಪೌಷ್ಟಿಕ ದಪ್ಪವಾದ ತರಕಾರಿಯು ವಿಟಮಿನ್ ಸಿ, ನಾರಿನಾಂಶ ಮತ್ತು ಉತ್ಕರ್ಷಣ ನಿರೋಧಕ (ಆಂಟಿ ಆಕ್ಸಿಡೆಂಟ್)ಗಳ ಉತ್ತಮ ಮೂಲವಾಗಿದೆ. ಅದು ಹಲವಾರು ಪ್ರಮುಖ ಖನಿಜಗಳ ಉತ್ತಮ ಮೂಲವಾಗಿದೆ. ಕಚ್ಚಾ ಅಥವ ಬೇಯಿಸಿದ ಕ್ಯಾಪ್ಸಿಕಂ ಅನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಂಡರೆ ಹಲವಾರು ಅರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

ಜೀರ್ಣಾಂಗ ತೊಂದರೆಗಳನ್ನು ನಿವಾರಿಸಲು

7 reasons capsicum is great for your health

ಅದು ಜೀರ್ಣಕ್ರಿಯೆಯನ್ನು ನಿಯಂತ್ರಿಸಿ, ಜಠರ ಮತ್ತು ಕರುಳುಗಳಿಗೆ ಸಂಬಂಧಪಟ್ಟ ಕಾಯಿಲೆಗಳಾದ ವಾಯು, ವಾಯುನೋವು, ಹೊಟ್ಟೆನೋವು, ಅತಿಸಾರ ಹಾಗೂ ಹೊಟ್ಟೆ ಸೆಳೆತಗಳ ತೊಂದರೆಗಳನ್ನು ಚಿಕಿತ್ಸೆಮಾಡಲು ಸಹಾಯಮಾಡುತ್ತದೆ. ಅದು ಹೊಟ್ಟೆ ಹುಣ್ಣನ್ನು ವಾಸಿಮಾಡಲು ಸಹಾಯಮಾಡುತ್ತದೆ. ದೇಹಕ್ಕೆ ವರದಾನವಾಗಿರುವ ಆಲೀವ್ ಎಣ್ಣೆಯ ವಿಶೇಷತೆ ಏನು?

ಮಧುಮೇಹ ರೋಗವನ್ನು ನಿಯಂತ್ರಸುತ್ತದೆ

ಅದರಲ್ಲಿ ಕ್ಯಾಲೊರಿ ಮತ್ತು ಕೊಬ್ಬಿನಾಂಶ ಮಟ್ಟ ಕಡಿಮೆಯಿರುವುದರಿಂದ ದೇಹದ ಕೆಟ್ಟ ಕೊಲೆಸ್ಟ್ರಾಲ್‪ನ ಮಟ್ಟವನ್ನೂ ಸಹ ಹೆಚ್ಚಿಸುವುದಿಲ್ಲ.

ನೋವು ತಗ್ಗಿಸುವ ಗುಣಗಳನ್ನು ಹೊಂದಿದೆ

ಕ್ಯಾಪ್ಸಿಕಂನಲ್ಲಿರುವ ಕೇನ್ (Cayenne) ಎಂಬ ಪ್ರಮುಖ ಅಂಶವು ನೋವು ತಗ್ಗಿಸುವ ಗುಣಗಳನ್ನು ಹೊಂದಿದೆ ಮತ್ತು ಸಂಧಿವಾತ ಮತ್ತು ವಾಯುನೋವು ಇವುಗಳನ್ನು ತಡೆಯುವ ಶಕ್ತಿಯನ್ನು ಹೊಂದಿದೆ. ಅದರಿಂದ ಮಾಡಿಕೊಂಡ ಕ್ರೀಮ್ ಅಥವ ಮುಲಾಮಿನಿಂದ ನೋವು ಪೀಡಿತ ಸ್ಥಳಗಳಲ್ಲಿ ಲೇಪಿಸಿ ನೋವು ಕಡಿಮೆಮಾಡಬಹುದು.

ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ

ಅದರಲ್ಲಿರುವ ಕೇನ್ ಅಂಶದಲ್ಲಿ ರಕ್ತನಾಳಗಳನ್ನು ಸಡಿಲಗೊಳಿಸುವ ಗುಣಗಳಿರುತ್ತದೆ. ಈ ಗುಣಗಳಿಂದ ರೋಗಿಗಳ ರಕ್ತನಾಳಗಳಲ್ಲಿ ಆಗಬಹುದಾದ ರಕ್ತದ ಹೆಪ್ಪುಗಟ್ಟುವಿಕೆ ಅಥವ ಮುಚ್ಚುವಿಕೆ ಮತ್ತು ಕೊಲೆಸ್ಟ್ರಾಲ್‪ನ ಹೆಚ್ಚಿನ ಮಟ್ಟವನ್ನು ತಡೆಯಲು ಸಹಕಾರಿಯಾಗಿದೆ. ಪುರುಷರ ಆರೋಗ್ಯ ವೃದ್ಧಿಸುವ ಕ್ಯಾರೆಟ್‌ನ ವಿಶೇಷತೆ ಏನು?

ಸಮಗ್ರತೆಯನ್ನು ಕಾಪಾಡಿಕೊಳ್ಳಲು ಸಹಾಯಕ

ಕ್ಯಾಪ್ಸಿಕಂ ವಿಟಮಿನ್ ಸಿ ಅಂಶಕ್ಕೆ ಅತ್ಯುತ್ತಮ ಮೂಲವಾಗಿದ್ದು ಅದು ಅತ್ಯಂತ ಆಂಟಿ ಆಕ್ಸಿಡೆಂಟ್ ಪರಿಣಾಮಕಾರಿಯಾಗಿದೆ. ಅದರಿಂದ ರಕ್ತನಾಳಗಳ, ಚರ್ಮದ, ಅಂಗಾಂಗಗಳ ಹಾಗೂ ಮೂಳೆಗಳ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕ್ಯಾಪ್ಸಿಕಂನ ನಿಯಮಿತ ಬಳಕೆಯಿಂದ ರಕ್ತಪಿತ್ತವ್ಯಾಧಿಯನ್ನು ತಡೆಯುತ್ತದೆ ಮತ್ತು ರೋಗದ ಸೋಂಕಿನಿಂದ ರಕ್ಷಣೆ ದೊರೆಯುತ್ತದೆ.

ನೋವು ಶಮನ ಮಾಡುವ ಗುಣಹೊಂದಿದೆ

ಕ್ಯಾಪ್ಸಿಕಂನ ಅತ್ಯಂತ ಗಮನಾರ್ಹ ಆರೋಗ್ಯ ಪ್ರಯೋಜನಗಳಲ್ಲಿ ಒಂದೆಂದರೆ ನೋವು ಶಮನ ಮಾಡುವ ಗುಣ. ಅದರಲ್ಲಿರುವ ಕ್ಯಾಪ್ಸೈಸಿನ್ ಅಂಬ ಅಂಶದಿಂದ ಚರ್ಮದ ನೋವು ಬೆನ್ನುಹುರಿಗೆ (ಸ್ಪೈನಲ್ ಕಾರ್ಡ್) ಹರಡುವಿಕೆಯನ್ನು ತಡೆಹಿಡಿಯುತ್ತದೆ.

ಕ್ಯಾಪ್ಸಿಕಂನಲ್ಲಿ ಕ್ಯಾಲೊರಿ ಅಂಶವು ಕಡಿಮೆಯಿರುತ್ತದೆ

ಈ ತರಕಾರಿಯು ಕೊಬ್ಬನ್ನು ಕರಗಿಸಲು ಪ್ರಚೋದಿಸುತ್ತದೆ ಮತ್ತು ಚಯಾಪಚಯ ಮತ್ತು ದೇಹದಲ್ಲಿ ಜರಗುವ ನಿರ್ವಿಶೀಕರಣ (ಡಿಟಾಕ್ಸಿಫಿಕೇಶನ್) ಪ್ರಕ್ರಿಯಗಳ ವೇಗವನ್ನು ಹೆಚ್ಚಿಸಲು ಸಹಾಯಮಾಡಬಹುದು. ನೀವು ಇದನ್ನು ನಿಮ್ಮ ದಿನ ನಿತ್ಯದ ಊಟ ಅಥವ ಸಲಾಡಿನಲ್ಲಿ ಬಳಸಿ ಕ್ಯಾಲೊರಿ ಹೆಚ್ಚು ಸೇರದಂತೆ ಉಪಯೋಗ ಪಡೆಯಬಹುದು.

English summary

7 reasons capsicum is great for your health

Capsicums add more than just colour and crunch to your dishes. This nutrient dense vegetable is a very good source of vitamin C, fibre and antioxidants. It is also a good source of several important minerals.have a look
X
Desktop Bottom Promotion