For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಲು 7 ದಿನದ ಕ್ರ್ಯಾಶ್ ಡಯೆಟ್ ಯೋಜನೆ

|

ನೀವು ನಿಮ್ಮ ಹೆಚ್ಚುವರಿ ತೂಕವನ್ನು ಇಳಿಸುವ ಯೋಜನೆಗೆ ಬದ್ಧರಾಗಿದ್ದಲ್ಲಿ, ಕೆಲವೊಂದು ತ್ವರಿತ ಪರಿಣಾಮವನ್ನು ನೀಡುವ ಕ್ರ್ಯಾಶ್ ಡಯೆಟ್ ಅನ್ನು ನಿಮಗೆ ಪಾಲಿಸಬಹುದು. ಇಂದು ಬೋಲ್ಡ್ ಸ್ಕೈ ಏಳು ಜನಪ್ರಿಯ ಕ್ರ್ಯಾಶ್ ಡಯೆಟ್ ಯೋಜನೆಯನ್ನು ನಿಮ್ಮ ಮುಂದಿಡುತ್ತಿದೆ. ನಿಮಗೆ ಈ ಡೆಯೆಟ್ ಯೋಜನೆ ಉತ್ತಮ ಹಾಗೂ ತ್ವರಿತ ಫಲಿತಾಂಶವನ್ನು ನೀಡುವುದು ಖಂಡಿತ.

ಹೌದು, ಏಳು ದಿನಗಳಲ್ಲಿ ಅಥವಾ ಒಂದು ವಾರದಲ್ಲಿ, ನೀವು ಹೊಸ ಮತ್ತು ಸುಧಾರಿತ ವ್ಯಕ್ತಿಯಾಗುವುದು ಖಂಡಿತ. ಕ್ರ್ಯಾಶ್ ಡಯೆಟ್ ಅನ್ನು ನಂಬದವರು ಹಾಗೂ ಕೆಟ್ಟದ್ದೆಂದು ಪರಿಗಣಿಸಿದವರು ಈ ಲೇಖನವನ್ನು ಓದಿ

ಮಾಹಿತಿಯನ್ನು ತಿಳಿದುಕೊಳ್ಳಲೇಬೇಕು. ಇವರು ಹೇಳುವಂತೆ ಇದು ದೇಹಕ್ಕೆ ಕೆಟ್ಟದ್ದನ್ನು ಉಂಟು ಮಾಡುವುದಿಲ್ಲ. ಕೆಲವೊಂದು ಕ್ರ್ಯಾಶ್ ಡಯೆಟ್ ಯೋಜನೆಗಳು ನ್ಯೂಟ್ರಿಶಿಯನ್ ಮತ್ತು ವಿಟಮಿನ್‌ಗಳ ಮೂಲವನ್ನು ಒಳಗೊಂಡು ಭರ್ತಿಯಾಗಿದೆ. ಇದು ನಿಮಗೆ ಶಕ್ತಿಯನ್ನು ನೀಡಿ ನಿಮ್ಮ ತೂಕವನ್ನು ವೇಗವಾಗಿ ಇಳಿಸುತ್ತದೆ.

ಈ ಏಳು ದಿನದ ಕ್ರ್ಯಾಶ್ ಡಯೆಟ್ ಯೋಜನೆ ಕೆಲವೊಂದು ಪ್ರಮುಖ ಸಾಮಾಗ್ರಿಗಳನ್ನು ಒಳಗೊಂಡಿದೆ. ಇಲ್ಲಿ ನಾವು ನೀಡಿರುವ ಆಹಾರವನ್ನು ನಿಯಮಿತವಾಗಿ ತೆಗೆದುಕೊಂಡರೆ, ಯೋಜನೆಗಳನ್ನು ಸರಿಯಾಗಿ ಪಾಲಿಸಿದರೆ ನಿಮ್ಮ ತೂಕ ಏಳು ದಿನದಲ್ಲಿ ಖಂಡಿತ ಕಡಿಮೆಯಾಗುತ್ತದೆ. ಹಾಗಿದ್ದರೆ ಅವುಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ತೂಕ ಇಳಿಸಲು ಸಹಕಾರಿ ಈ ಎಂಟು ಬೆಳಗ್ಗಿನ ಸಲಹೆಗಳು

ದಿನ 1 - ಸೂಪ್ ಡಯೆಟ್:

ದಿನ 1 - ಸೂಪ್ ಡಯೆಟ್:

ಮೊದಲ ದಿನವನ್ನು ಸೂಪ್‌ನಿಂದ ಪ್ರಾರಂಭಿಸಿ. ದಿನವಿಡೀ ವಿವಿಧ ಪ್ರಕಾರದ ಸೂಪ್‌ಗಳಿಂದ ಹೊಟ್ಟೆ ತುಂಬಿಸಿ. ಅದು ಸಸ್ಯಾಹಾರಿಯಾಗಿರಬಹುದು ಇಲ್ಲವೇ ಮಾಂಸಾಹಾರಿಯಾಗಿರಬಹುದು. ಆದರೆ ಮಾಂಸಾಹಾರಿ ಸೂಪ್ ಅನ್ನು ಸೇವಿಸುವಾಗ ಮಾಂಸದ ಪ್ರಮಾಣ ಕಡಿಮೆ ಇರುವಂತೆ ನೋಡಿಕೊಳ್ಳಿ. ಸೂಪ್‌ಗೆ ಉಪ್ಪನ್ನು ಸೇರಿಸದಿರಿ. ನೀವು ಸೇವಿಸುವ ಸೂಪ್ ಆದಷ್ಟು ಸರಳವಾಗಿರಲಿ.

ದಿನ 2 - ಕ್ಯಾಬೇಜ್ ಡಯೆಟ್:

ದಿನ 2 - ಕ್ಯಾಬೇಜ್ ಡಯೆಟ್:

ಒಂದು ಉತ್ತಮ ತರಕಾರಿಯಾಗಿರುವ ಕ್ಯಾಬೇಜ್ ತೂಕ ಇಳಿಸುವ ಅಂಶಗಳನ್ನು ಹೆಚ್ಚು ಹೊಂದಿದೆ. ಕ್ರ್ಯಾಶ್ ಡಯೆಟ್‌ನ 2 ನೇ ದಿನದಂದು ಕ್ಯಾಬೇಜ್ ಡಯೆಟ್ ಅನ್ನು ಸೇವಿಸಿ. ಅಧಿಕ ಪ್ರಮಾಣದ ಫೈಬರ್ ಅನ್ನು ಒಳಗೊಂಡಿರುವ ತರಕಾರಿಯಾಗಿರುವ ಕ್ಯಾಬೇಜ್ ನಿಮ್ಮ ದೇಹವನ್ನು ಸ್ವಚ್ಛಗೊಳಿಸುತ್ತದೆ.

ದಿನ 3 - ಗ್ರೇಪ್‌ಫ್ರುಟ್ ಡಯೆಟ್:

ದಿನ 3 - ಗ್ರೇಪ್‌ಫ್ರುಟ್ ಡಯೆಟ್:

ತೂಕ ಇಳಿಕೆಗಾಗಿ ಏಳು ದಿನದ ಕ್ರ್ಯಾಶ್ ಡಯೆಟ್‌ನಲ್ಲಿ 3 ನೇ ದಿನ ಗ್ರೇಪ್‌ಫ್ರುಟ್ ನಿಮ್ಮ ಪ್ಲೇಟ್‌ನಲ್ಲಿ ಇರುವಂತೆ ನೋಡಿಕೊಳ್ಳಿ. ಗ್ರೇಪ್‌ಫ್ರುಟ್‌ನಲ್ಲಿ ಕೊಬ್ಬನ್ನು ಕರಗಿಸುವ ಎಂಜೀಮ್‌ಗಳು ಹೇರಳವಾಗಿದ್ದು ಇದು ವೇಗವಾಗಿ ದೇಹ ತೂಕವನ್ನು ಇಳಿಸಲು ಸಹಕಾರಿಯಾಗಿದೆ. ಆದ್ದರಿಂದ ಮೂರನೇ ದಿನದಂದು ಈ ಹಣ್ಣನ್ನು ಯಾವ ರೂಪದಲ್ಲಾದರೂ ಸೇವಿಸಿ.

ದಿನ 4 - ಜ್ಯೂಸ್ ಡಯೆಟ್:

ದಿನ 4 - ಜ್ಯೂಸ್ ಡಯೆಟ್:

ಹೌದು, ಹಣ್ಣುಗಳು ದೇಹದ ಅಧಿಕ ತೂಕವನ್ನು ಇಳಿಸಲು ಸಹಕಾರಿಯಾಗಿದೆ. ಕ್ರ್ಯಾಶ್ ಡಯೆಟ್ ಯೋಜನೆಯ ನಾಲ್ಕನೇ ದಿನದಂದು ಹಣ್ಣಿನ ರಸಗಳನ್ನು ಸೇವಿಸಿ. ಜ್ಯೂಸ್‌ನಲ್ಲಿರುವ ನೀರಿನಂಶ ನಿಮ್ಮ ಹೊಟ್ಟೆಯನ್ನು ತುಂಬಿಸಿ ನಿಮ್ಮ ಹಸಿವನ್ನು ನಿಯಂತ್ರಣದಲ್ಲಿಡುತ್ತವೆ.

ದಿನ 5 - ತರಕಾರಿ ಡಯೆಟ್:

ದಿನ 5 - ತರಕಾರಿ ಡಯೆಟ್:

ವಿಟಮಿನ್ ಮತ್ತು ನ್ಯೂಟ್ರೀನ್‌ಗಳ ಅತ್ಯಧಿಕ ಸಾರವನ್ನು ಒಳಗೊಂಡಿರುವ ತರಕಾರಿಗಳು ನಿಮ್ಮ ತೂಕ ಇಳಿಕೆಗೆ ಸಹಕಾರಿ. ಪಾಲಾಕ್, ಕ್ಯಾರೇಟ್, ಆಲೂಗಡ್ಡೆ ಹೀಗೆ ಬಗೆಬಗೆಯ ತರಕಾರಿಗಳನ್ನು ನಿಮ್ಮ ಡಯೆಟ್ ಯೋಜನೆಯ ಐದನೇ ದಿನದಂದು ಸೇವಿಸಿ.

ದಿನ 6 - ನೀರು ಡಯೆಟ್:

ದಿನ 6 - ನೀರು ಡಯೆಟ್:

ಆರನೇ ದಿನಂದು, ನಿಮ್ಮ ದೇಹಕ್ಕೆ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುವ ನೀರಿನ ಡಯೆಟ್ ಅನ್ನು ಪಾಲಿಸಿ. ಆರನೇ ದಿನಂದು 6 ರಿಂದ 8 ಲೀಟರ್‌ನಷ್ಟು ನೀರನ್ನು ಕುಡಿಯಿರಿ. ದೇಹದ ಕೊಬ್ಬನ್ನು ಕರಗಿಸಲು ನೀರು (ಬೆಚ್ಚಗಿನ ನೀರು) ಸಹಕಾರಿ.

ದಿನ 7 - ಹಾಲಿವುಡ್ ಡಯೆಟ್:

ದಿನ 7 - ಹಾಲಿವುಡ್ ಡಯೆಟ್:

ಕ್ರ್ಯಾಶ್ ಡಯೆಟ್ ಯೋಜನೆಯ ಏಳನೇ ದಿನದಂದು, ನಿಮ್ಮ ದೇಹಕ್ಕೆ ಒಂದು ಉತ್ತಮ ಟ್ರೀಟ್ ಅನ್ನು ಕೊಡುವ ಸಮಯವಾಗಿದೆ. ಸ್ವಲ್ಪ ಕೋಕೋ ಮತ್ತು ನಿಮ್ಮ ಮೆಚ್ಚಿನ ಊಟದ ಸಣ್ಣ ಭಾಗದಷ್ಟನ್ನು ಸೇವಿಸಿ. ನೀವು ಹೆಚ್ಚು ತಿನ್ನುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.


English summary

7 Day Crash Diet Plan For Weight Loss

If you are ready to lose those extra kilos, you can opt for something quick and healthy like a crash diet. Boldsky has a popular seven-day crash diet plan for weight loss. This seven-day crash diet can get you the curves you are longing for.
Story first published: Thursday, April 10, 2014, 12:43 [IST]
X
Desktop Bottom Promotion