For Quick Alerts
ALLOW NOTIFICATIONS  
For Daily Alerts

ತೂಕ ಇಳಿಸುವ ಸಾಧನೆಗೆ ಪ್ರೇರಕ ಈ ಬ್ರೇಕ್‌ಫಾಸ್ಟ್!

|

ನಿಮ್ಮ ಬೆಳಗ್ಗಿನ ಆಹಾರ ತುಂಬಾ ಪ್ರಮುಖವಾಗಿರುತ್ತದೆ ಎಂಬ ಮಾತು ನಿಜಕ್ಕೂ ಸತ್ಯ. ಹೆಚ್ಚಾಗಿ ಜನರು ಬೆಳಗ್ಗಿನ ಬ್ರೇಕ್‌ಫಾಸ್ಟ್ ಅನ್ನು ಭರ್ಜರಿಯಾಗಿ ತಯಾರಿಸುತ್ತಾರೆ. ಚೀಸ್ ಸ್ಯಾಂಡ್‌ವಿಚ್ ಇಲ್ಲವೇ ಹುರಿದ ತಿಂಡಿ ಅವರ ಪ್ರಧಾನ ಆಹಾರವಾಗಿರುತ್ತದೆ. ಇಂತಹ ಆಹಾರ ಕೊಬ್ಬು ಶೇಖರಣೆಯನ್ನು ಖಂಡಿತ ಮಾಡುತ್ತದೆ. ಇನ್ನು ಕೆಲವರು ಡಯೆಟ್‌ನ ಹೆಸರಿನಲ್ಲಿ ಬೆಳಗ್ಗಿನ ತಿಂಡಿಗೆ ಕೊಕ್ ನೀಡುತ್ತಾರೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತೂಕ ಇಳಿಕೆಯಲ್ಲಿ ಸಹಾಯ ಮಾಡುವ ಹರ್ಬ್ಸ್

ಇದು ಖಂಡಿತ ಆರೋಗ್ಯದಾಯಕ ಲಕ್ಷಣವಲ್ಲ. ನಿಮ್ಮ ಡಯೆಟ್‌ನ ನಡುವೆ ಆರೋಗ್ಯಕರವಾದ ಅಂತರವನ್ನು ನೀವು ನಿರ್ವಹಿಸಬೇಕು. ಪೂರ್ಣ ಪ್ರಮಾಣದಲ್ಲಿ ಆಹಾರವನ್ನು ನೀವು ಸೇವಿಸುತ್ತಿರುವಿರಿ ಎಂಬ ಖಾತ್ರಿ ನಿಮಗಿರಬೇಕು.

ನಿಯಮಿತವಾಗಿ ಆರೋಗ್ಯಯುತ ಆಹಾರವನ್ನು ಸೇವಿಸದಿರುವುದೂ ಕೂಡ ಬೊಜ್ಜು, ತೂಕ ಏರಿಕೆ ಮೊದಲಾದ ದೇಹ ಮಾರ್ಪಾಡುಗಳಿಗೆ ಕಾರಣವಾಗುತ್ತದೆ. ಆದ್ದರಿಂದಲೇ ನಿಮ್ಮ ಬೆಳಗ್ಗಿನ ಆಹಾರ ಹೇಗಿರಬೇಕು ಎಂಬ ಪಟ್ಟಿಯನ್ನು ಬ್ರೇಕ್‌ಫಾಸ್ಟ್ ವಿವರವನ್ನು ನಾವಿಲ್ಲಿ ನೀಡುತ್ತಿದ್ದೇವೆ. ಅದರ ಪೂರ್ಣ ಪ್ರಯೋಜನವನ್ನು ಮಾಡಿಕೊಳ್ಳಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕೊಲೆಸ್ಟ್ರಾಲ್ ತಗ್ಗಿಸಲು ಸರಳ ವಿಧಾನ ಇಲ್ಲಿದೆ ನೋಡಿ!

ಓಟ್‌ಮೀಲ್:

ಓಟ್‌ಮೀಲ್:

ಇದೊಂದು ಪೂರ್ಣ ಪ್ರಮಾಣದ ಧಾನ್ಯವಾಗಿದ್ದು ಕೊಬ್ಬು ಮತ್ತು ಕ್ಯಾಲೋರಿ ಮಿತ ಪ್ರಮಾಣದಲ್ಲಿದೆ. ಇದರ ಸುಗಂಧ ಕೂಡ ನಿಮ್ಮ ಮನಸೆಳೆಯುವಂಥಿದ್ದು ನಿಮ್ಮ ಆಯ್ಕೆಯ ಯಾವುದೇ ಹಣ್ಣು, ಡ್ರೈ ಫ್ರುಟ್ಸ್ ಅನ್ನು ಇದರ ಟೋಪಿಂಗ್‌ಗೆ ಬಳಸಿ ನಿಮಗೆ ಸೇವಿಸಬಹುದು. ಸ್ಟ್ರಾಬೆರಿ, ಬಾಳೆಹಣ್ಣು ಮೊದಲಾದ ಹಣ್ಣುಗಳೂ ಕೂಡ ಇದಕ್ಕೆ ಉತ್ತಮ ರುಚಿಯನ್ನು ನೀಡುತ್ತದೆ. ಡ್ರೈ ಫ್ರುಟ್ಸ್‌ಗಳಾದ ರೈಸನ್ಸ್, ಬಾದಾಮಿ ಸಹ ಓಟ್ಸ್‌ಗೆ ಪರಿಪೂರ್ಣ ರುಚಿಯನ್ನು ನೀಡುತ್ತದೆ.

ಬೇಗಲ್ಸ್:

ಬೇಗಲ್ಸ್:

ನಾರಿನಂಶಗಳಿಂದ ಕೂಡಿದ ಸಿರೆಲ್ಸ್ ನಿಮ್ಮ ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ತುಂಬಾ ಹಿತಕಾರಿ. ಕೊಬ್ಬಿನಂಶ ಕಡಿಮೆ ಇದ್ದು ನಾರಿನಂಶ ಹೆಚ್ಚು ಸಿರೆಲ್ಸ್‌ನಲ್ಲಿ ಇದೆ. ಕೆನೆರಹಿತ ಹಾಲನ್ನು ಮತ್ತು ರೈಸನ್ಸ್, ಬಾದಾಮಿಯನ್ನು ಮಿಶ್ರ ಮಾಡಿಕೊಂಡು ಸಿರೆಲ್ಸ್ ಅನ್ನು ಸವಿಯಿರಿ.

ಆಮ್ಲೇಟ್:

ಆಮ್ಲೇಟ್:

ಮೊಟ್ಟೆಯು ತೂಕ ಇಳಿಸುವಲ್ಲಿ ಸಹಕಾರಿಯಾಗಿರುವ ಆಹಾರವಾಗಿದೆ. ಇದರಿಂದ ತಯಾರಿಸಲಾದ ಆಮ್ಲೇಟ್ ಕೂಡ ಕೊಬ್ಬಿನಂಶವನ್ನು ಸೊನ್ನೆ ಪ್ರಮಾಣದಲ್ಲಿ ಒಳಗೊಂಡಿದೆ. 2-3 ಮೊಟ್ಟೆಯನ್ನು ಒಡೆದು ಅದಕ್ಕೆ ಈರುಳ್ಳಿ ಹಾಕಿ ನಾನ್‌ಸ್ಟಿಕ್ ಪ್ಯಾನ್‌ನಲ್ಲಿ ಆಮ್ಲೇಟ್ ತಯಾರಿಸಿ.

ಸಿರೆಲ್ಸ್:

ಸಿರೆಲ್ಸ್:

ನಾರಿನಂಶಗಳಿಂದ ಕೂಡಿದ ಸಿರೆಲ್ಸ್ ನಿಮ್ಮ ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ತುಂಬಾ ಹಿತಕಾರಿ. ಕೊಬ್ಬಿನಂಶ ಕಡಿಮೆ ಇದ್ದು ನಾರಿನಂಶ ಹೆಚ್ಚು ಸಿರೆಲ್ಸ್‌ನಲ್ಲಿ ಇದೆ. ಕೆನೆರಹಿತ ಹಾಲನ್ನು ಮತ್ತು ರೈಸನ್ಸ್, ಬಾದಾಮಿಯನ್ನು ಮಿಶ್ರ ಮಾಡಿಕೊಂಡು ಸಿರೆಲ್ಸ್ ಅನ್ನು ಸವಿಯಿರಿ.

ಟೋಸ್ಟ್:

ಟೋಸ್ಟ್:

ಡ್ರೈ ಟೋಸ್ಟ್ ಕೂಡ ನಿಮ್ಮ ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ಒಂದು ಉತ್ತಮ ಆರಂಭವಾಗಿದೆ. ಇದನ್ನು ಇನ್ನೂ ರುಚಿಕಟ್ಟಾಗಿಸಲು ಕೆಲವೊಂದು ಸಾಮಾಗ್ರಿಗಳನ್ನು ನೀವು ಬಳಸಬಹುದು. ಜೇನು ಅಥವಾ ಪೀನಟ್ ಬೆಣ್ಣೆಯನ್ನು ಟೋಸ್ಟ್ ಮೇಲೆ ಸವರಿ ಆರೋಗ್ಯಪೂರ್ಣ ಬ್ರೇಕ್‌ಫಾಸ್ಟ್‌ನಿಂದ ದಿನವನ್ನು ಆರಂಭಿಸಿ.

ಸ್ಮೂತಿ:

ಸ್ಮೂತಿ:

ಆಹ್! ನಿಮ್ಮ ಬ್ರೇಕ್‌ಫಾಸ್ಟ್‌ನೊಂದಿಗೆ ತಂಪಾದ ಸ್ಮೂತಿ ಇಲ್ಲದಿದ್ದರೆ ಅದು ಪರಿಪೂರ್ಣ ಆಗಲಿಕ್ಕಿಲ್ಲ. ತಾಜಾ ಹಣ್ಣು ಮೊಸರು ಮತ್ತು ಕೆನೆರಹಿತ ಹಾಲನ್ನು ತೆಗೆದುಕೊಂಡು ಆರೋಗ್ಯಭರಿತ ಸ್ಮೂತಿಯನ್ನು ತಯಾರಿಸಿ. ದೇಹದ ಬಿಸಿಯನ್ನು ನಿವಾರಿಸಲು ಇದು ಹಿತಕಾರಿ ಪೇಯವಾಗಿದೆ.

English summary

6 Tasteful Breakfast Ideas for Weight-Loss

It is rightly said that it matters a lot what you eat very first in the morning. Generally, people tend to have something heavy like cheese sandwiches or fried stuff in the breakfast, which tends to make them obese.
X
Desktop Bottom Promotion