For Quick Alerts
ALLOW NOTIFICATIONS  
For Daily Alerts

ನಾವು ತಕ್ಷಣ ಬದಲಾಯಿಸಬೇಕಾದ 6 ದಿನಚರಿಗಳು

By Arpitha Rao
|

ಮಾರುಕಟ್ಟೆಯಲ್ಲಿ ಬಾಟಲಿ ನೀರು ಮತ್ತು ಹ್ಯಾಂಡ್ ಸ್ಯಾನಿಟೈಸರ್ ದೊರೆಯುತ್ತದೆ ಇದನ್ನು ಸಾಕಷ್ಟು ಜನರು ಬಳಸುತ್ತಾರೆ.ಆದರೆ ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದೇ? ತಜ್ಞರು ಇದರ ಬಗ್ಗೆ ವಾದ ಮಾಡುತ್ತಾರೆ!
ಪ್ರತಿ ಭಾರಿ ಊಟ ಮಾಡಿದ ನಂತರ ಕೀಟಾಣುಗಳಿಂದ ದೂರವಿರಲು ಬ್ರಷ್ ಮಾಡುವುದು ಅನವಶ್ಯಕ ಮಾತ್ರವಲ್ಲ ಇದರಿಂದ ದೇಹದ ಅರೋಗ್ಯ ಕೂಡ ಹದಗೆಡಬಹುದು ಎನ್ನಲಾಗುತ್ತದೆ ಹೇಗೆ ಎಂಬುದನ್ನು ಇಲ್ಲಿ ಓದಿ ತಿಳಿದುಕೊಳ್ಳಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನಿದ್ರಾಹೀನತೆ ಕಾಯಿಲೆಯ ಲಕ್ಷಣಗಳು

ನೀವು ದೈನಂದಿನ ದಿನಚರಿಯಲ್ಲಿ ಬದಲಾಯಿಸಿಕೊಳ್ಳಬೇಕಾದ 6 ವಿಧಾನಗಳು
ಊಟವಾದ ತಕ್ಷಣ ಬ್ರಶ್ ಮಾಡುವುದು:ನಿಮ್ಮ ಹಲ್ಲುಗಳು ಮುತ್ತಿನಂತೆ ಹೊಳೆಯಬೇಕು ಎಂದು ಬಯಸಿ ನೀವು ಬಹುಶಃ ಪ್ರತಿಬಾರಿ ಊಟವಾದ ನಂತರ ಬ್ರಶ್ ಮಾಡುತ್ತಿರಬಹುದು.ಆದರೆ ನಿಮ್ಮ ತಾಯಿ ನಿಮಗೆ ದಿನದಲ್ಲಿ ಕೇವಲ ಎರಡು ಬಾರಿ ಬ್ರಶ್ ಮಾಡಿದರೆ ಸಾಕು ಬೆಳಿಗ್ಗೆ ಎದ್ದ ಕೂಡಲೇ ಮತ್ತು ರಾತ್ರಿ ಮಲಗುವ ಮೊದಲು ಎಂದು ತಿಳಿ ಹೇಳಿರಬಹುದು.ಹೌದು ಆಕೆ ಹೇಳುವುದು ಸರಿ.

6 daily habits we need to quickly change

ದಂತ ವೈದ್ಯರು ಹೇಳುತ್ತಾರೆ ಏನನ್ನಾದರೂ ತಿಂದ ತಕ್ಷಣ ಬ್ರಶ್ ಮಾಡಲು ನೀವು ಹೋಗುವಿರಾದರೆ ಅದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.ಆಹಾರವನ್ನು ಬಾಯಿಯಲ್ಲಿ ಅಗೆಯುವಾಗ ವಿಶೇಷ ರೀತಿಯ ಆಮ್ಲೀಯ ಉತ್ಪತ್ತಿಯಾಗಿ ಅದು ದಂತಕವಚದ ರಕ್ಷಣಾ ಕವಚದ ಪದರವನ್ನು ದುರ್ಬಲವಾಗಿಸುತ್ತದೆ.ದಂತ ಕವಚ ದುರ್ಬಲವಾಗಿರುವ ಸಂದರ್ಭದಲ್ಲಿ ಬ್ರಶ್ ಮಾಡುವುದರಿಂದ ಅದಕ್ಕೆ ಶಾಶ್ವತವಾಗಿ ಹಾನಿಗೆ ಒಳಗಾಗುವ ಸಂಭವವಾಗುತ್ತದೆ.

ಪರ್ಯಾಯವಾಗಿ ಈ ರೀತಿ ಮಾಡಿ: ಊಟ ಮಾಡಿದ ನಂತರ ಕನಿಷ್ಠ ಒಂದು ಗಂಟೆ ತಡೆದು ನಂತರ ಬ್ರಶ್ ಮಾಡುವುದು ಸೂಕ್ತ.ನಿಮಗೆ ಊಟ ಮಾಡಿದ ತಕ್ಷಣ ಹಲ್ಲುಗಳಲ್ಲಿ ಸಿಕ್ಕಿಹಾಕಿಕೊಂಡಿದ್ದನ್ನು ಸ್ವಚ್ಚಗೊಳಿಸಬೇಕು ಎಂದೆನಿಸಿದರೆ ಬಾಯಲ್ಲಿ ನೀರು ಹಾಕಿ ಮುಕ್ಕಳಿಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಜ್ವರದ ಚಿಕಿತ್ಸೆಗೆ ಹತ್ತು ಆಹಾರಗಳು

ಹ್ಯಾಂಡ್ ಸ್ಯನಿಟೈಸರ್ ಬಳಕೆ:ನಿಮಗೆ ಆಗಾಗ ಕೈಯನ್ನು ಸ್ವಚ್ಚಗೊಳಿಸುವ ಸ್ಯಾನಿಟೈಸರ್ ಉಪಯೋಗಿಸುವ ಅಭ್ಯಾಸವಿದೆಯೇ?ಕೈ ಬೆವರುತ್ತಿದೆ ಅಥವಾ ಇನ್ನಾವುದೋ ಕಾರಣಕ್ಕೆ ಆಗಾಗ ಹ್ಯಾಂಡ್ ಸ್ಯಾನಿಟೈಸರ್ ಉಪಯೋಗಿಸಿದರೆ ಇದರಿಂದ ನಿಮಗೆ ಒಳ್ಳೆಯದಕ್ಕಿಂತ ಕೆಡುಕೇ ಹೆಚ್ಚು ಎನ್ನಬಹುದು.ಹ್ಯಾಂಡ್ ಸ್ಯಾನಿಟೈಸರ್ ಕೈಯನ್ನು ಸ್ವಚ್ಚಗೊಳಿಸಲು ಮತ್ತು ಕೀಟಾಣುಗಳನ್ನು ತೊಡೆದು ಹಾಕಲು ಬಳಸಲಾಗುತ್ತದೆ.

ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದ ಪ್ರಕಾರ ಹೆಚ್ಚಿನ ಸ್ಯಾನಿಟೈಸರ್ ನಲ್ಲಿ ಟ್ರೈಕ್ಲೊಸನ್ ಎಂಬ ರಾಸಾಯನಿಕ ಅಂಶವಿದ್ದು ಇದನ್ನು ನಿಮ್ಮ ಕೈಗಳು ಸುಲಭವಾಗಿ ಹೀರಿಕೊಂಡುಬಿಡುತ್ತವೆ.ಇದು ರಕ್ತವನ್ನು ಸೇರಿ ಸ್ನಾಯು ಸಮನ್ವಯಕ್ಕೆ ಅಗತ್ಯವಿರುವ ಜೀವಕೋಶಗಳ ಸಂವಹನವನ್ನು ಕಡಿತಗೊಳಿಸುತ್ತದೆ.ಇದರ ದೀರ್ಘಕಾಲದ ಬಳಕೆಯಿಂದ ಬಂಜೆತನ,ಹೃದಯ ಸಮಸ್ಯೆ ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಪರಿಹಾರ: ನಿಮಗೆ ಕೈ ತೊಳೆಯಬೇಕು ಎಂದಾಗಲೆಲ್ಲ ನೀರು ಮತ್ತು ಸೋಪು ಬಳಸಿ ಕೈ ತೊಳೆದುಕೊಳ್ಳಿ.

ಹೃದಯ ಆರೋಗ್ಯಕ್ಕಾಗಿ ತೂಕ ಕಳೆದುಕೊಳ್ಳುವುದು:
ಬೆಳಗ್ಗೆ ಓಡುವುದು ಮತ್ತು ಈಜುವುದು ಒಳ್ಳೆಯ ವ್ಯಾಯಾಮ.ಅದರಲ್ಲೂ ವೈಟ್ ಲಿಫ್ಟಿಂಗ್ ಗೆ ಹೋಲಿಸಿದರೆ ಓಡುವುದು ಮತ್ತು ಈಜುವುದು ಆರೋಗ್ಯಕ್ಕೆ ಒಳ್ಳೆಯದು ಎಂದೇ ಹೇಳಬಹುದು.ನೀವು ಫಿಟ್ ಆಗಿ ಇರಬೇಕು ಎಂದು ವರ್ಕ್ ಔಟ್ ಮಾಡಬಹುದು ನೀವು ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದಿದ್ದಲ್ಲಿ ಹೃದಯಕ್ಕೆ ತೊಂದರೆ ಇರುವಂತಹ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ:ಹೊಟ್ಟೆ ಉಬ್ಬುವಿಕೆಗೆ ಕಾರಣ ತಿಳಿದುಕೊಳ್ಳಿ

ಕಾರ್ಡಿಯೋ ವ್ಯಾಯಾಮವನ್ನು ಹೆಚ್ಚು ಮಾಡುವುದರಿಂದ ದೇಹ ಇದಕ್ಕೆ ಒಗ್ಗಿಕೊಂಡು ತೂಕ ಕಡಿಮೆ ಮಾಡುವುದನ್ನು ನಿಲ್ಲಿಸಿಬಿಡುತ್ತದೆ.ಸೆಲೆಬ್ರಿಟಿ ತರಬೇತುದಾರ ಸತ್ಯಜಿತ್ ಚೌರಾಸಿಯಾ ಹೇಳುವ ಪ್ರಕಾರ ವೈಟ್ ತರಬೇತಿ ಜೊತೆಗೆ ಕಾರ್ಡಿಯೋ ತರಬೇತಿ ಮಾಡುವುದರಿಂದ ಬೇಗ ತೂಕ ಕಡಿಮೆ ಮಾಡಿಕೊಳ್ಳಬಹುದು ಮತ್ತು ಸ್ನಾಯುಗಳನ್ನು ಬಲಯುತವಾಗಿಸಬಹುದು."ಹೃದಯ ಮತ್ತು ಶಕ್ತಿ ತರಬೇತಿಯನ್ನು ಪರ್ಯಾಯ ರೂಪದಲ್ಲಿ ಮಾಡುವುದರಿಂದ ಹೃದಯ ಬಡಿತ ಹೆಚ್ಚುತ್ತದೆ ಮತ್ತು ಇದು ದೇಹವನ್ನು ಆಘಾತಗೊಳಿಸುತ್ತದೆ ಜೊತೆಗೆ ನಿರ್ಧಿಷ್ಟ ರೀತಿಯಲ್ಲಿ ಹೃದಯ ಬಡಿತ ನಡೆಯುವುದಿಲ್ಲ ಇದರಿಂದ ತೂಕ ಕೂಡ ಹಾಗೆಯೇ ಉಳಿದುಬಿಡುತ್ತದೆ ಎನ್ನುತ್ತಾರೆ".

ಪರಿಹಾರ:ನೀವು ಹೊರ ಹೋಗುವುದು ಇಷ್ಟ ಪಡುತ್ತೀರಿ ಆದರೆ ಜಿಮ್ ಸೇರುವುದು ಇಷ್ಟವಿಲ್ಲ ಎಂದಾದರೆ ಚೌರಾಸಿಯ ಸಲಹೆ ಎಂದರೆ ಒಂದು ಬೆಂಚ್ ಮತ್ತು ಡಂಬಲ್ಸ್ ಹುಡುಕಿ ಮತ್ತು ಅದರಿಂದ ವ್ಯಾಯಾಮ ಮಾಡಿದರೆ ಆರಂಭ ವ್ಯಾಯಾಮಕ್ಕೆ ಅಷ್ಟು ಸಾಕು ಎನ್ನಲಾಗುತ್ತದೆ.

ನಿಮ್ಮ ಸೌಂದರ್ಯವರ್ಧಕ ಬದಲಾಯಿಸುವುದು:
ಲ್ಯೂಕ್ಸ್ ಸೌಂದರ್ಯವರ್ಧಕದವರು ಹೊಸ ಉತ್ಪನ್ನ ಒಂದನ್ನು ಬಿಡುಗಡೆ ಮಾಡಿದ್ದಾರೆ ಅದ್ದರಿಂದ ನೀವು ಕಳೆದ ತಿಂಗಳು ತಂದ ಉತ್ಪನ್ನವನ್ನು ಅರ್ಧಕ್ಕೆ ಎಸೆದು ಹೊಸದನ್ನು ಉಪಯೋಗಿಸಲು ಪ್ರಾರಂಭಿಸುತ್ತೀರಿ ಎಂದಾದರೆ ಇದು ಕೇವಲ ನಿಮ್ಮ ಹಣಕ್ಕೆ ಕುಂದು ಮಾತ್ರವಲ್ಲ ನಿಮ್ಮ ತ್ವಚೆಗೂ ಕೂಡ ಇದು ಹಾನಿಕಾರಕ.

ಚರ್ಮತಜ್ಞ ಮನೋಹರ ಸೊಭಾನಿ ಹೇಳುವ ಪ್ರಕಾರ ಮನುಷ್ಯನ ಚರ್ಮದಲ್ಲಿ ph ಮಟ್ಟ ೫.೫ ಇರುತ್ತದೆ ಕಾಸ್ಮೆಟಿಕ್ಸ್ ನಲ್ಲಿ ಇದರ ಮಟ್ಟ ಬೇರೆಬೇರೆ ಇರುತ್ತದೆ.ನಿಮ್ಮ ತ್ವಚೆ ಹೆಚ್ಚು ಸೂಕ್ಷ್ಮವಾಗಿದ್ದಲ್ಲಿ ph ಮಟ್ಟ ಕೂಡ ಭಿನ್ನವಾಗಿರುತ್ತದೆ.ಈ ರೀತಿ ಉತ್ಪನ್ನಗಳನ್ನು ಬಳಸುವುದರಿಂದ ನಿಮ್ಮ ತ್ವಚೆ ತುರಿಕೆ,ಕಜ್ಜಿ ಇನ್ನಿತರ ತೊಂದರೆಗೆ ಒಳಗಾಗಬಹುದು.ph ಮಟ್ಟ ೫ . ೫ ಕ್ಕಿಂತ ಹೆಚ್ಚಿರುವ ಸೋಪ್ ಬಳಕೆ ಚರ್ಮಕ್ಕೆ ಹಾನಿಕಾರಕ.
ಪ್ರತಿ ವಾರಗಳಿಗೊಮ್ಮೆ ನಿಮ್ಮ ಕಾಸ್ಮೆಟಿಕ್ಸ್ ಬದಲಾಯಿಸಿದರೆ ಅದರಿಂದ ತುರಿಕೆ,ಮೊಡವೆ ಇನ್ನಿತರ ಸಮಸ್ಯೆಗಳು ಹೆಚ್ಚಬಹುದು.

ಪರ್ಯಾಯ :ಶೊಭಾನಿ ಸಲಹೆ ಎಂದರೆ ಒಂದೇ ರೀತಿಯ ಕ್ರೀಂ ಬಳಸುವುದು ಮತ್ತು ph ಮಟ್ಟ ಎಷ್ಟಿದೆ ಎಂದು ಮೊದಲೇ ಉತ್ಪನ್ನದ ಹಿಂದೆ ಬರೆದಿರುವುದನ್ನು ಓದಿ ತೆಗೆದುಕೊಳ್ಳುವುದು ಸೂಕ್ತ.

ಫ್ಲಿಪ್ ಬಳಸುವುದು :
ಹೀಲ್ಸ್ ಬಳಸುವುದರಿಂದ ನಿಮ್ಮ ಕಾಲಿಗೆ ಹಾನಿಯಾಗಬಹುದು ಎಂದು ತಿಳಿದು ನೀವು ಫ್ಲಾಟ್ ಇರುವ ಚಪ್ಪಲಿ ಬಳಸುವುದು ಸೂಕ್ತ ಎಂದು ನಿರ್ಧರಿಸಿದ್ದರೆ ಅದು ಸೂಕ್ತವಾದುದು. ಪೊಡಿಯಾಟ್ರಿಸ್ಟ್ ಮತ್ತು ಚಲನಶೀಲತೆ ಸಲಹೆಗಾರ ಚೈತನ್ಯ ಷಾ ಹೇಳುವ ಪ್ರಕಾರ ಫ್ಲಿಪ್ ಹೀಲ್ಸ್ ಬಳಸುವುದು ಸೂಕ್ತವಲ್ಲ ಏಕೆಂದರೆ ಅದು ಪಾದಕ್ಕೆ ಯಾವುದೇ ರೀತಿಯಲ್ಲಿ ಬೆಂಬಲ ನೀಡುವುದಿಲ್ಲ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: 20 ಕೆಟ್ಟ ಹವ್ಯಾಸಗಳಿಗೆ ಇಂದೇ ಗುಡ್ ಬೈ ಹೇಳಿ!

ಕೇವಲ ಬಾಟಲ್ ನೀರು ಕುಡಿಯುವುದು:
ಬಾಟಲ್ ನೀರು ಕುಡಿಯುವುದು ಸೂಕ್ತ ಎಂದು ಕೊಳ್ಳಬಹುದು ಆದರೆ ಇದನ್ನು ಬಳಸಿದಾಗ ನಿಮಗೆ ಮಿನರಲ್ಸ್ ತೊಂದರೆ ಕಾಣಿಸಿಕೊಳ್ಳುತ್ತದೆ.ಮೆಗ್ನೀಸಿಯಮ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಸಿಲಿಕಾ ಮತ್ತು ಸಲ್ಫೇಟ್ ಇವು ಕಡಿಮೆ ಆಗುತ್ತದೆ ಆದ್ದರಿಂದ ಬಾಟಲ್ ನೀರು ಕುಡಿಯದಿರುವುದು ಸೂಕ್ತ.

English summary

6 daily habits we need to quickly change

Turns out several of the habits we have cultivated over the years, from being wary of germs to brushing teeth after every meal are not only unnecessary but could actually rob us of good health in the long term. Read on to find out how.
X
Desktop Bottom Promotion