For Quick Alerts
ALLOW NOTIFICATIONS  
For Daily Alerts

ನಿಮಗೆ ತಿಳಿದಿರಲೇಬೇಕಾದ ಚಿಕನ್ ಫಾಕ್ಸ್‌ನ ಲಕ್ಷಣಗಳು!

By Gururaja Achar
|

ಚಿಕನ್ ಫಾಕ್ಸ್‌ ರೋಗಕ್ಕೆ varicella zoster virus ಎಂಬ ವೈರಾಣುವೇ ಕಾರಣವಾಗಿದೆ. ಇದೊಂದು ಅತ್ಯಂತ ಸಾಂಕ್ರಾಮಿಕ ರೋಗವಾಗಿದ್ದು, ಸಾಮಾನ್ಯವಾಗಿ ಸೊಂಕು ಇರುವ ವ್ಯಕ್ತಿಯೊಂದಿಗಿನ ನೇರ ಸಂಪರ್ಕದಿಂದ ಹರಡುತ್ತದೆ. ಚಿಕನ್ ಫಾಕ್ಸ್‌‌ಗೆ ತುತ್ತಾದ ವ್ಯಕ್ತಿಯ ಸೀನಿನ ಹನಿಗಳು ಅಥವಾ ಆ ವ್ಯಕ್ತಿಯು ಕೆಮ್ಮಿದಾಗ ಹೊರಹೊಮ್ಮುವ ಸಣ್ಣ ಸಣ್ಣ ಹನಿಗಳಲ್ಲಿ ಈ ವೈರಾಣು ಇರುತ್ತದೆ.

ಸೋಂಕಿಗೆ ಒಳಗಾದ ವ್ಯಕ್ತಿಯಲ್ಲಿ ರೋಗಲಕ್ಷಣವು ವೈರಾಣು ಸಂಪರ್ಕಕ್ಕೆ ಬಂದ 15 ರಿಂದ 16 ದಿನಗಳ ನಂತರ ಗೋಚರಿಸುತ್ತದೆ. ಚಿಕನ್ ಫಾಕ್ಸ್‌‌ಗೆ ಆರಂಭಿಕ ರೋಗ ಲಕ್ಷಣಗಳು ಫ್ಲೂ ಜ್ವರದoತೆಯೇ ಇದ್ದು ಇದು ಗೊoದಲಕ್ಕೀಡು ಮಾಡುತ್ತದೆ ಮತ್ತು ಇದು ತಪ್ಪು ರೋಗ ನಿಧಾನಕ್ಕೆ (diagnosis) ಅಥವಾ ತಡವಾದ ರೋಗ ನಿಧಾನಕ್ಕೆ ಕಾರಣವಾಗುತ್ತದೆ. ನಿಮ್ಮ ಮಗುವಿಗೆ ಈ ಕೆಳಕಂಡ ರೋಗ ಲಕ್ಷಣಗಳ ಪೈಕಿ ಯಾವುದಾದರೊಂದಿದ್ದರೆ, ಅದರರ್ಥ ನಿಮ್ಮ ಮಗುವು ಚಿಕನ್ ಫಾಕ್ಸ್‌‌ಗೆ ತುತ್ತಾಗಿದೆ ಎಂದೇ ಬಹುತೇಕ ಖಚಿತವಾಗುತ್ತದೆ.

ಚಿಕನ್ ಫಾಕ್ಸ್ ಆದಾಗ ನೀವು ನಿರ್ಲಕ್ಷಿಸಲೇಬೇಕಾದ ಆಹಾರಗಳು

ಅತಿಯಾದ ಜ್ವರ.

ಅತಿಯಾದ ಜ್ವರ.

ವೈರಾಣುವನ್ನು ಒಂದು ಅಪಾಯಕಾರೀ ಜೀವಿ ಎಂದು ನಿಮ್ಮ ಶರೀರದ ರೋಗನಿರೋದಕ ವ್ಯವಸ್ಥೆಯು ಗುರುತಿಸಿದ ಕೂಡಲೇ ಅದು ನಿಮ್ಮ ಶರೀರದ ಉಷ್ಣತೆಯ ಕಡೆಗೆ ಗಮನವಿಟ್ಟು ಅದನ್ನು ನಿಯಮಿತವಾಗಿರಿಸುವುದರ ಮೂಲಕ ನಿಮ್ಮ ಶರೀರದಿಂದ ವೈರಾಣುವನ್ನು ಹೊಡೆದೋಡಿಸಲು ಉದ್ಯುಕ್ತವಾಗುತ್ತದೆ. ಉಷ್ಣತೆಯು 100.4 Fahrenheit ನ ವರೆಗೂ ತಲುಪಬಹುದು. ಅಥವಾ ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚಾಗಬಹುದು. ಜ್ವರದೊಂದಿಗೆ ಫ್ಲೂ ನಂತಹ ಮತ್ತಿತರ ರೋಗ ಲಕ್ಷಣಗಳು, ತೌಲನಿಕವಾಗಿ ಮಕ್ಕಳಿಗಿಂತಲೂ ಹೆಚ್ಚಾಗಿ ವಯಸ್ಕರನ್ನೇ ಹೆಚ್ಚು ಪೀಡಿಸುತ್ತವೆ.

ತಲೆಸುತ್ತು ಬರುವುದು: .

ತಲೆಸುತ್ತು ಬರುವುದು: .

ಸಿಡುಬು ರೋಗದ ಕಲೆಗಳು ದೇಹದ ಮೇಲೆ ಕಾಣಿಸಿಕೊಳ್ಳುವುದಕ್ಕಿoತ 1 ಅಥವಾ 2 ದಿನಗಳ ಮೊದಲೇ ಸಾಮಾನ್ಯವಾಗಿ ಮಂದವಾದ ತಲೆಸುತ್ತು ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಇದು ಇತರ ಫ್ಲೂ ನಂತಹ ಲಕ್ಷಣಗಳಾದ ಗಂಟಲು ಕೆರೆತ, ಕೆಮ್ಮು, ಮತ್ತು ಸೀನುವಿಕೆಯನ್ನೂ ಸಹ ಜೊತೆಗೂಡಿಸಿಕೊಂಡೇ ಕಾಣಿಸುತ್ತದೆ. ಈ ರೋಗ ಲಕ್ಷಣಗಳು ನಂತರದ ದಿನಗಳಲ್ಲಿ ಕ್ರಮೇಣವಾಗಿ ಮತ್ತಷ್ಟು ಉಗ್ರಸ್ವರೂಪವನ್ನು ತಾಳುತ್ತದೆ ಹಾಗೂ ಈ ತೀವ್ರತೆಯು, ಕಲೆಗಳು ದೇಹದ ಸಂಪೂರ್ಣ ಭಾಗಗಳಲ್ಲಿ ಕಾಣಿಸಿಕೊಳ್ಳುವವರೆಗೂ ಮುಂದುವರೆಯುತ್ತದೆ.

ತುರಿಸುವ, ಕೆಂಪು ಬೊಕ್ಕೆಗಳು.

ತುರಿಸುವ, ಕೆಂಪು ಬೊಕ್ಕೆಗಳು.

ಸಿಡುಬಿನ ಆರಂಭಿಕ ಲಕ್ಷಣಗಳು; ವಿಶೇಷವಾಗಿ ತಲೆಶೂಲೆ, ಕೆಮ್ಮು, ಮತ್ತು ಗಂಟಲು ಕೆರೆತವು ಸಾಮಾನ್ಯ ಫ್ಲೂ ನಂತೆಯೇ ಇದ್ದು ದಾರಿ ತಪ್ಪಿಸಿ ಗೊoದಲಕ್ಕೀಡು ಮಾಡುತ್ತವೆ. ಆದರೆ ಕೆಂಬಣ್ಣದ ಬೊಕ್ಕೆಗಳು ದೇಹದ ತುಂಬೆಲ್ಲಾ ಕಾಣಿಸಿಕೊಳ್ಳುವುದು ಸಿಡುಬು ರೋಗದ ನಿದಾನಕ್ಕೆ ಖಚಿತವಾದ ರೋಗ ಲಕ್ಷಣವಾಗಿದೆ. ತುರಿಕೆಯು ಸಾಮಾನ್ಯವಾದ ಸಹಿಸಬಹುದಾದ ಮಟ್ಟದಿಂದ ಆರಂಭಿಸಿ ಅತಿಯಾದ ಸಹಿಸಲಸ್ಸಾದ್ಯವಾದ ತುರಿಕೆಯವರೆಗೂ ವ್ಯತ್ಯಯಗೊಳ್ಳಬಹುದು. ಒಂದು ವೇಳೆ ಮಕ್ಕಳಲ್ಲಿ ಇತರೆ ಚರ್ಮದ ಸಮಸ್ಯೆಗಳೂ ಮೊದಲೇ ಇದ್ದರಂತೂ, ತುರಿಕೆಯು ಮತ್ತಷ್ಟು ತ್ರಾಸದಾಯಕವಾಗುತ್ತದೆ.

ಚಿಕನ್ ಫಾಕ್ಸ್‌ನ ಕಲೆಗಳು ಅಥವಾ ಗುರುತುಗಳು.

ಚಿಕನ್ ಫಾಕ್ಸ್‌ನ ಕಲೆಗಳು ಅಥವಾ ಗುರುತುಗಳು.

ತುರಿಕೆಯು ಆರಂಭಗೊಂಡು ಸುಮಾರು 12 ರಿಂದ 14 ಘoಟೆಗಳೊಳಗೆ ಕೆಂಪು ಬೊಕ್ಕೆಗಳು ಇರುವ ಜಾಗಗಳಲ್ಲಿ ಕೆಂಪಾದ, ದುಂಡುದುoಡಾದ ಗುಳ್ಳೆಗಳು ಅಥವಾ ಕಲೆಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಈ ಗುಳ್ಳೆಗಳು ಮೊದಲು ಹೊಟ್ಟೆ, ಮುಖ, ಬೆನ್ನು, ಮತ್ತು ಎದೆಯ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತವೆ. ನಂತರ ಇವು ಕ್ರಮೇಣ ತೋಳುಗಳು, ಕಾಲುಗಳು, ತಲೆಯ ಮೇಲ್ಭಾಗ, ನಾಲಗೆ, ಮತ್ತು ಬಾಯಿಯಲ್ಲಿ ಕಾಣಿಸಿಕೊಳ್ಳುತ್ತವೆ. ಈ ವೃಣಗಳ ಸಂಖ್ಯೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಆದರೆ, ಸರಾಸರಿಯಾಗಿ, ಸುಮಾರು 200 ರಿಂದ 500 ರವರೆಗೆ ದೇಹದ ಎಲ್ಲಾ ಭಾಗಗಳ ಮೇಲೂ ಈ ಕಲೆಗಳು ಕಾಣಿಸಿಕೊಳ್ಳಬಹುದು.

ಹಸಿವಿಲ್ಲದಿರುವುದು.

ಹಸಿವಿಲ್ಲದಿರುವುದು.

ಹೆಚ್ಚಿನ ಮಕ್ಕಳು ಜ್ವರದೊಂದಿಗೆ ಹೊಟ್ಟೆ ನೋವು ಇರುವುದರ ಬಗ್ಗೆಯೂ ದೂರುತ್ತಾರೆ. ಶಕ್ತಿಹೀನತೆ ಮತ್ತು ವಾಕರಿಕೆಯಂತಹ ಅನುಭವದಿಂದಾಗಿ ರೋಗಿಗಳಿಗೆ ಸಾಮಾನ್ಯವಾಗಿ ಹಸಿವು ಇರುವುದಿಲ್ಲ. ಇದರಿಂದಾಗಿ ರೋಗಿಯ ತೂಕ ನಷ್ಟವಾಗಬಹುದು.

ಒಟ್ಟಾರೆಯಾಗಿ ತಲೆಸುತ್ತು ಬಂದಂತಹ ಅನುಭವ.

ಒಟ್ಟಾರೆಯಾಗಿ ತಲೆಸುತ್ತು ಬಂದಂತಹ ಅನುಭವ.

ದುರ್ಬಲಗೊಂಡ ರೋಗನಿರೋಧಕ ಶಕ್ತಿ, ವಾಕರಿಕೆಯ ಅನುಭವ, ಮತ್ತು ಹಸಿವಿಲ್ಲದ ಕಾರಣ, ಆಗಾಗ್ಗೆ ತಲೆಸುತ್ತು ಬಂದಂತಹ ಅನುಭವವೂ ಸಹ ಸಾಮಾನ್ಯವಾಗಿರುತ್ತದೆ.

English summary

6 classic chicken pox symptoms you should know about

Chicken pox is caused by the varicella zoster virus. It is highly contagious and usually acquired through direct contact with an infected person.
X
Desktop Bottom Promotion