For Quick Alerts
ALLOW NOTIFICATIONS  
For Daily Alerts

ಟೊಮೇಟೊದ 24 ಪ್ರಯೋಜನಗಳನ್ನು ನೀವು ಬಲ್ಲಿರಾ?

|

ನೀವು ಆಲೋಚಿಸಿರುವುದಕ್ಕಿಂತಲೂ ಹೆಚ್ಚಿನ ಪ್ರಯೋಜನಗಳನ್ನು ಟೊಮೇಟೊ ಹೊಂದಿದೆ ಎಂಬುದು ನಿಮಗೆ ಗೊತ್ತೇ? ಮನೆಯ ಹಿತ್ತಲಲ್ಲಿ ಸುಲಭವಾಗಿ ಬೆಳೆಸಬಹುದಾದ ಈ ಹಣ್ಣು ಉತ್ತಮ ಗುಣಗಳಿಂದ ಜನಸಾಮಾನ್ಯರಲ್ಲಿ ಹೆಸರುವಾಸಿಯಾಗಿದೆ. ಟೊಮೇಟೊವನ್ನು ತಿನ್ನದವರು ಯಾರೂ ಇಲ್ಲ ಎಂದೇ ಹೇಳಬಹುದು. ಅಷ್ಟೊಂದು ಪ್ರಸಿದ್ಧಿಯನ್ನು ಪಡೆದ ತರಕಾರಿಯಾಗಿದೆ ಟೊಮೇಟೊ.

ಇದರಿಂದ ತಯಾರಿಸಲಾಗುವ ಸೂಪ್, ಜ್ಯೂಸ್, ಗೊಜ್ಜು, ಪಲ್ಯ ಹೀಗೆ ಪ್ರತಿಯೊಂದೂ ರುಚಿಕರ ಮತ್ತು ಆರೋಗ್ಯಕಾರಿ ಅಂಶಗಳನ್ನು ಹೊಂದಿರುತ್ತದೆ. ಟೊಮೇಟೊ ಹಣ್ಣು ಮಾತ್ರ ಆರೋಗ್ಯಕಾರಿ ಪ್ರಯೋಜನಗಳನ್ನು ನೀಡದೇ ಇದರ ಬೀಜ ಕೂಡ ಒಂದಿಲ್ಲೊಂದು ರೀತಿಯಿಂದ ಉಪಯೋಗಕಾರಿಯಾಗಿದೆ. ನಿಮ್ಮ ಅಡುಗೆ ಮನೆಯಲ್ಲಿ ಅಗತ್ಯವಾಗಿ ಇರಲೇಬೇಕಾದ ಹಣ್ಣು ಟೊಮೇಟೊ ಆಗಿರುವುದರಿಂದ ಅದರ ಪ್ರಯೋಜನಗಳನ್ನು ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ.

ಇಂದಿನ ಲೇಖನದಲ್ಲಿ ಟೊಮೇಟೊದ ಹತ್ತು ಪ್ರಯೋಜನಗಳನ್ನು ನಾವು ನಿಮಗೆ ತಿಳಿಯಪಡಿಸಲಿದ್ದು ಇದು ಏಕೆ ಅಷ್ಟೊಂದು ಜನಜನಿತ ಎಂಬುದು ನಿಮಗೆ ಗೊತ್ತಾಗುತ್ತದೆ. ಸರಳ ತರಕಾರಿಯಾಗಿ ಪ್ರತಿಯೊಬ್ಬರಿಗೂ ಮೆಚ್ಚುಗೆಯಾಗುವ ಹಣ್ಣಾಗಿರುವ ಟೊಮೇಟೊ ಎಂಬ ತರಕಾರಿಯ ಇನ್ನೊಂದಷ್ಟು ಪ್ರಯೋಜನಗಳನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

ಟೊಮೇಟೊ ಆರೋಗ್ಯಕಾರಿ ತರಕಾರಿ ಹೇಗೆ?

ರೋಗನಿರೋಧಕ ಶಕ್ತಿ ವರ್ಧಿಸುತ್ತದೆ

ರೋಗನಿರೋಧಕ ಶಕ್ತಿ ವರ್ಧಿಸುತ್ತದೆ

ಟೊಮೇಟೊದಲ್ಲಿ ವಿಟಮಿನ್ ಸಿ ಅತ್ಯಧಿಕವಾಗಿರುವುದರಿಂದ, ನಿಮ್ಮ ರೋಗ ನಿರೋಧಕ ಶಕ್ತಿಯನ್ನು ವರ್ಧಿಸುವಲ್ಲಿ ಇದು ಸಹಕಾರಿಯಾಗಿದೆ.

ಆಂಟಿಸೆಪ್ಟಿಕ್

ಆಂಟಿಸೆಪ್ಟಿಕ್

ನಿಮ್ಮ ಬೆರಳುಗಳಲ್ಲಿ ಏನಾದರೂ ಗಾಯವಾಗಿದ್ದಾಗ ಟೊಮೇಟೊ ರಸ ನಿಮ್ಮ ಬೆರಳಿಗೆ ಉರಿಯನ್ನು ಕಡಿಮೆಗೊಳಿಸುತ್ತದೆ ಏಕೆಂದರೆ ಟೊಮೇಟೊ ಆಂಟಿಸೆಪ್ಟಿಕ್ ಗುಣವನ್ನು ಹೊಂದಿದೆ.

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ಟೊಮೇಟೊ ಲೈಸೋಪಿನ್‌ ಅಂಶವನ್ನು ತನ್ನಲ್ಲಿ ಹೊಂದಿದೆ. ಈ ಲೈಸೋಪಿನ್ ಕ್ಯಾನ್ಸರ್ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ.

ಸನ್ ಟ್ಯಾನ್ ನಿವಾರಣೆ

ಸನ್ ಟ್ಯಾನ್ ನಿವಾರಣೆ

ನೀವು ಬಿಸಿಲಿನಿಂದ ಬಂದ ನಂತರ ಟೊಮೇಟೊವನ್ನು ಮುಖಕ್ಕೆ ಉಜ್ಜುವುದರಿಂದ ಸನ್ ಟ್ಯಾನ್ ನಿವಾರಣೆಯಾಗುತ್ತದೆ.

ಕಿಡ್ನಿ ಸ್ಟೋನ್‌ಗೆ ಉತ್ತಮ

ಕಿಡ್ನಿ ಸ್ಟೋನ್‌ಗೆ ಉತ್ತಮ

ಟೊಮೇಟೊದಲ್ಲಿ ನಿಕೋಟಿನ್ ಆಸಿಡ್ ಇದ್ದು ಇವು ಕಿಡ್ನಿಯ ಕಲ್ಲುಗಳನ್ನು ಮತ್ತು ಗಾಲ್ ಸ್ಟೋನ್‌ಗಳನ್ನು ನಿವಾರಿಸಲು ಸಹಾಯಕವಾಗಿವೆ.

ಹೈಡ್ರೇಶನ್

ಹೈಡ್ರೇಶನ್

ಬೇಸಿಗೆಯಲ್ಲಿ ಟೊಮೇಟೊವನ್ನು ತಿನ್ನುವುದು ತುಂಬಾ ಆರೋಗ್ಯವಾಗಿರುತ್ತದೆ ಏಕೆಂದರೆ ದೇಹದಲ್ಲಿ ನೀರಿನ ಅಂಶವನ್ನು ಸಮತೋಲನಗೊಳಿಸಲು ಈ ತರಕಾರಿ ಸಹಾಯಕವಾಗಿದೆ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ಹೊಟ್ಟೆಯಲ್ಲಿನ ಜೀರ್ಣಕ್ರಿಯೆ ಸಮಸ್ಯೆಗಳನ್ನು ಸುಧಾರಿಸುವ ಗುಣವನ್ನು ಟೊಮೇಟೊ ಹೊಂದಿದೆ. ಇದು ಆಹಾರವನ್ನು ಸುಲಭವಾಗಿ ಜೀರ್ಣಗೊಳಿಸುತ್ತದೆ.

ನಿಯಂತ್ರಿತ ರಕ್ತದೊತ್ತಡ

ನಿಯಂತ್ರಿತ ರಕ್ತದೊತ್ತಡ

ಹೆಚ್ಚು ರಕ್ತದೊತ್ತಡದ ಸಮಸ್ಯೆ ಇದ್ದವರಿಗೆ ಟೊಮೇಟೊ ತಿನ್ನುವುದು ಉತ್ತಮವಾಗಿರುತ್ತದೆ. ಇದು ಕಡಿಮೆ ಸೋಡಿಯಂ ಅಂಶಗಳನ್ನು ಒಳಗೊಂಡಿರುವುದರಿಂದ ರಕ್ತದೊತ್ತಡವನ್ನು ಕಡಿಮೆ ಇರುವಂತೆ ನೋಡಿಕೊಳ್ಳುತ್ತದೆ.

ಅಪ್ಟೈಟ್ ಅನ್ನು ವರ್ಧಿಸುತ್ತದೆ

ಅಪ್ಟೈಟ್ ಅನ್ನು ವರ್ಧಿಸುತ್ತದೆ

ಟೊಮೇಟೊದಲ್ಲಿರುವ ರಸ ಹೊಟ್ಟೆಯಲ್ಲಿರುವ ಹಸಿವಿನ ಎಂಜೀಮ್‌ಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಆದ್ದರಿಂದಲೇ ಹಸಿ ಟೊಮೇಟೊವನ್ನು ಸಲಾಡ್‌ಗಳಲ್ಲಿ ಪ್ರಧಾನವಾಗಿ ಬಳಸುತ್ತಾರೆ.

ನಿಮ್ಮ ಕಣ್ಣುಗಳಿಗೆ ಉತ್ತಮ

ನಿಮ್ಮ ಕಣ್ಣುಗಳಿಗೆ ಉತ್ತಮ

ಟೊಮೇಟೊದಲ್ಲಿ ಕಂಡುಬರುವ ಬೀಟಾ-ಕ್ಯಾರೋಟಿನ್ ಅಂಶ ನಿಮ್ಮ ಕಣ್ಣು ದೃಷ್ಟಿಯನ್ನು ಆರೋಗ್ಯವಾಗಿರಿಸುತ್ತದೆ.

ಪ್ರೊಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ

ಪ್ರೊಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ

ಹಸಿ ಟೊಮೇಟೊವನ್ನು ನಿತ್ಯವೂ ಸೇವಿಸುವುದು ಪ್ರೊಸ್ಟೇಟ್ ಕ್ಯಾನ್ಸರ್ ಅಪಾಯವನ್ನು 20 ಶೇಕಡದಷ್ಟು ಕಡಿಮೆ ಮಾಡುತ್ತದೆ.

ಮೊಡವೆ ವಿರುದ್ಧ ಹೋರಾಡುತ್ತದೆ

ಮೊಡವೆ ವಿರುದ್ಧ ಹೋರಾಡುತ್ತದೆ

ತ್ವಚೆಯ ಅಲರ್ಜಿಗಳೊಂದಿಗೆ ಹೋರಾಡುವ ಗುಣವನ್ನು ಟೊಮೇಟೊ ಹೊಂದಿದೆ. ಇದು ನಿಮ್ಮ ಮುಖದಲ್ಲಿನ ಮೊಡವೆ ಮತ್ತು ಗಾಯಗಳನ್ನು ನಿವಾರಿಸುತ್ತದೆ.

ಹೃದಯದ ಆರೋಗ್ಯ

ಹೃದಯದ ಆರೋಗ್ಯ

ಟೊಮೇಟೊದಲ್ಲಿರುವ ವಿಟಮಿನ್ ಬಿ6 ನಿಮ್ಮ ದೇಹದಲ್ಲಿರುವ ರಕ್ತ ಕಣಗಳನ್ನು ಹಾನಿಯಾಗುವುದರಿಂದ ತಡೆಯುತ್ತದೆ.

ಮಧುಮೇಹಿಗಳಿಗೆ

ಮಧುಮೇಹಿಗಳಿಗೆ

ಟೊಮೇಟೊದಲ್ಲಿರುವ ವಿಟಮಿನ್ ಬಿ 1 ಸಕ್ಕರೆಯನ್ನು ಶಕ್ತಿಯನ್ನಾಗಿ ಮಾರ್ಪಡಿಸಿ ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ.

ನಿಮ್ಮ ದೇಹವನ್ನು ಶೋಧಿಸುತ್ತದೆ

ನಿಮ್ಮ ದೇಹವನ್ನು ಶೋಧಿಸುತ್ತದೆ

ನೀವು ಧೂಮಪಾನವನ್ನು ಮಾಡುವವರಾಗಿದ್ದರೆ ಟೊಮೇಟೊ ಸೂಪ್ ಅನ್ನು ಅವಶ್ಯವಾಗಿ ನೀವು ಸೇವಿಸಲೇಬೇಕು. ಇದು ಕ್ಲೋರೋಜೆನಿಕ್ ಮತ್ತು ಕೌರಾಮಿಕ್ ಆಸಿಡ್ ಅನ್ನು ಹೊಂದಿರುವುದರಿಂದ ನಿಮ್ಮ ದೇಹದಿಂದ ಕಾರ್ಸಿನೋಜಿನ್ಸ್ ಅನ್ನು ತೆರವುಗೊಳಿಸುತ್ತದೆ.

ಕಡಿಮೆ ಕೊಲೆಸ್ಟ್ರಾಲ್

ಕಡಿಮೆ ಕೊಲೆಸ್ಟ್ರಾಲ್

ನಿಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತಗ್ಗಿಸಲು ಟೊಮೇಟೊ ನೆರವು ನೀಡುತ್ತದೆ. ದೇಹದಲ್ಲಿರುವ ಒಳ್ಳೆಯ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಇದು ನಿರ್ವಹಿಸುತ್ತದೆ.

ಮಸಲ್ ಕ್ರಾಂಪ್‌ಗಳನ್ನು ರಿಲ್ಯಾಕ್ಸ್ ಮಾಡುತ್ತದೆ

ಮಸಲ್ ಕ್ರಾಂಪ್‌ಗಳನ್ನು ರಿಲ್ಯಾಕ್ಸ್ ಮಾಡುತ್ತದೆ

ಸ್ನಾಯುಗಾಗಿ ಫೋಸ್‌ಫರಸ್ ಒಂದು ಮುಖ್ಯವಾದ ನೀರಿನಂಶವಾಗಿದ್ದು ಟೊಮೇಟೊಗಳಲ್ಲಿ ಇದು ಹೇರಳವಾಗಿದೆ. ಟೊಮೇಟೊವನ್ನು ನಿತ್ಯವೂ ಸೇವಿಸುವುದು ಈ ರೀತಿಯ ತೊಂದರೆಗಳನ್ನು ನಿವಾರಿಸುತ್ತದೆ.

ಅನೀಮಿಯಾವನ್ನು ಗುಣಪಡಿಸುತ್ತದೆ

ಅನೀಮಿಯಾವನ್ನು ಗುಣಪಡಿಸುತ್ತದೆ

ವಿಟಮಿನ್ ಸಿ ಮತ್ತು ಐರನ್‌ನ ಜೋಡಿ ಕ್ರಿಯೆಯು ದೇಹದಲ್ಲಿ ಹೀಮೋಗ್ಲೋಬೀನ್ ಅನ್ನು ಸಿಂತಸೈಸ್ ಮಾಡುತ್ತದೆ. ಆದ್ದರಿಂದ ನಿಮಗೆ ಅನೀಮಿಯಾ ಇದಲ್ಲಿ ಟೊಮೇಟೊವನ್ನು ನೀವು ಸೇವಿಸಲೇಬೇಕು.

ನಿಮ್ಮ ಮೂಳೆ ಮತ್ತು ಹಲ್ಲನ್ನು ಸುದೃಢಗೊಳಿಸುತ್ತದೆ

ನಿಮ್ಮ ಮೂಳೆ ಮತ್ತು ಹಲ್ಲನ್ನು ಸುದೃಢಗೊಳಿಸುತ್ತದೆ

ಟೊಮೇಟೊದಲ್ಲಿ ಕ್ಯಾಲ್ಶಿಯಂ ಅಧಿಕ ಪ್ರಮಾಣದಲ್ಲಿದ್ದು ನಿಮ್ಮ ಮೂಳೆ ಮತ್ತು ಹಲ್ಲನ್ನು ಬಲಪಡಿಸಲು ಇದು ಸಹಕಾರಿಯಾಗಿದೆ.

ಸುಂದರ ಕೂದಲಿಗೆ

ಸುಂದರ ಕೂದಲಿಗೆ

ಟೊಮೇಟೊವು ನಿಮ್ಮ ಕೂದಲನ್ನು ಸುಂದರಗೊಳಿಸುತ್ತದೆ ಮತ್ತು ಇದು ವಿಟಮಿನ್ ಎ ಯನ್ನು ಹೇರಳವಾಗಿ ಹೊಂದಿದೆ.

ನೋವು ನಿವಾರಕ

ನೋವು ನಿವಾರಕ

ಟೊಮೇಟೊಗಳು ನೈಸರ್ಗಿಕ ನೋವು ನಿವಾರಕವಾದ್ದರಿಂದ ಇದು ನಿಮ್ಮ ನೋವನ್ನು ಕೂಡಲೇ ಉಪಶಮನ ಮಾಡುತ್ತದೆ.

ತೂಕ ಇಳಿಕೆ

ತೂಕ ಇಳಿಕೆ

ಟೊಮೇಟೊಗಳಲ್ಲಿ ಕ್ಯಾಲೋರಿ ಇರುವುದಿಲ್ಲ. ಟೊಮೇಟೊ ಸೂಪ್ ಅನ್ನು ನಿತ್ಯವೂ ಸೇವಿಸುವುದು ನಿಮ್ಮ ದೇಹದ ತೂಕವನ್ನು ಇಳಿಸಿ ಸುಂದರ ಕಾಯವನ್ನು ನಿಮಗೆ ನೀಡುತ್ತದೆ.

ವಯಸ್ಸಾಗುವಿಕೆಯನ್ನು ನಿಯಂತ್ರಿಸುತ್ತದೆ

ವಯಸ್ಸಾಗುವಿಕೆಯನ್ನು ನಿಯಂತ್ರಿಸುತ್ತದೆ

ಟೊಮೇಟೊ ಮುಪ್ಪಿನ ಲಕ್ಷಣಗಳನ್ನು ನಿಯಂತ್ರಿಸಿ ನಿಮ್ಮ ಸೌಂದರ್ಯವನ್ನು ಇನ್ನಷ್ಟು ವೃದ್ದಿಸುತ್ತದೆ.

ಒತ್ತಡ ನಿವಾರಕ

ಒತ್ತಡ ನಿವಾರಕ

ಟೊಮೇಟೊವು ಒತ್ತಡವನ್ನು ನಿವಾರಿಸಿ ನಿಮಗೆ ಮನಶಾಂತಿ ದೊರಕುವಂತೆ ಮಾಡುತ್ತದೆ.

English summary

The health benefits of tomatoes are many more than you think. Basically, tomatoes are pretty handy ingredients to have in your kitchen. Here are all the health benefits of tomatoes compiled for you.
X
Desktop Bottom Promotion