For Quick Alerts
ALLOW NOTIFICATIONS  
For Daily Alerts

ಕಡಿಮೆ ಖರ್ಚಿನಲ್ಲಿ ಕೊಬ್ಬು ಕರಗಿಸಲು ಅಪ್ಪಟ ಭಾರತೀಯ ಅಡುಗೆಗಳು!

By Super
|

ಕಳೆದ ಹತ್ತು ವರ್ಷಗಳಲ್ಲಿ ಭಾರತ ಅತ್ಯಧಿಕ ಬದಲಾವಣೆ ಕಂಡಿದೆ. ಇದಕ್ಕೆ ಪ್ರಮುಖ ಕಾರಣ ವಿದೇಶಿ ವ್ಯವಹಾರದ ಆಗಮನ. ಅದರೊಂದಿಗೇ ಲಭ್ಯವಾದ ಆರಾಮ, ಸೌಲಭ್ಯ ಮತ್ತು ಅಮೇರಿಕನ್ ಶೈಲಿಯ ಆಹಾರ ನಿಧಾನವಾಗಿ ನಮ್ಮೆಲ್ಲರಲ್ಲಿ ಸ್ಥೂಲಕಾಯವನ್ನು ಹೆಚ್ಚಿಸುತ್ತಿದೆ. ಮಹಾನಗರಗಳಲ್ಲಿ ಮಕ್ಕಳ ಸರಾಸರಿ ತೂಕ ಸಾಮಾನ್ಯಕ್ಕಿಂತಲೂ ಹೆಚ್ಚಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ಅಗತ್ಯಕ್ಕಿಂತಲೂ ಹೆಚ್ಚಿನ ಕೊಬ್ಬು ನಮಗೆ ಆಹಾರದ ಮೂಲಕ ಲಭ್ಯವಾಗುತ್ತಿರುವುದು ಹಾಗೂ ಅದನ್ನು ಕರಗಿಸಲು ದೈಹಿಕ ಚಟುವಟಿಕೆ ಕಡಿಮೆಯಾಗಿರುವುದು.

ಆದರೆ ಹಿಂದಿನಿಂದಲೂ ಸೇವಿಸುತ್ತಾ ಬಂದಿರುವ ಭಾರತೀಯ ಅಡುಗೆಗಳನ್ನು ಅವಲೋಕಿಸಿದರೆ ಇದರಲ್ಲಿರುವ ಪೋಷಕಾಂಶಗಳು ಹಾಗೂ ಕೊಬ್ಬು ಅತಿ ಸೂಕ್ತ ಪ್ರಮಾಣದಲ್ಲಿವೆ. ಅಂದರೆ ಅಗತ್ಯಕ್ಕಿಂತ ಹೆಚ್ಚೂ ಇಲ್ಲ, ಕಡಿಮೆಯೂ ಇಲ್ಲ! ಪಾಶ್ಚಾತ್ಯ ಆಹಾರಗಳಿಗೆ ಮಾರುಹೋಗಿ ಭಾರತೀಯ ಅಡುಗೆಗಳನ್ನು ಬದಿಗಿಟ್ಟಿರುವ ನಮಗೆ ಕೊಂಚ ಹಿಂದೆ ನೋಡಿ ನಮ್ಮದೇ ಅಡುಗೆಗಳನ್ನು ಸೇವಿಸಲು ಮನವೊಲಿಸಬೇಕಾಗಿ ಬಂದಿದೆ. ನಮ್ಮ ಪ್ರತಿದಿನದ ಆಹಾರದಲ್ಲಿ ಈ ಅಡುಗೆಗಳು ಸೂಕ್ತ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳುವ ಮೂಲಕ ಹೆಚ್ಚಿರುವ ತೂಕವನ್ನು ಕಡಿಮೆಗೊಳಿಸಿ ಉತ್ತಮ ಆರೋಗ್ಯವನ್ನು ಪಡೆಯಬಹುದು. ಬೆಚ್ಚನೆ ನೀರಿನ ಜೊತೆ ಲಿಂಬೆ ಮತ್ತು ಜೇನು ಸೇವನೆ ಏಕೆ ಮಹತ್ವಪೂರ್ಣ

ಇನ್ನೊಂದು ಪ್ರಮುಖ ಕಾರಣವೆಂದರೆ ಈ ಅಡುಗೆಗಳು ಕಡಿಮೆ ಖರ್ಚಿನದ್ದಾಗಿದ್ದು ಎಲ್ಲಾ ಸಾಂಬಾರ ಮತ್ತು ತರಕಾರಿ ಹಾಗೂ ದಿನಸಿ ವಸ್ತುಗಳು ಸುಲಭವಾಗಿ ಹಾಗೂ ಸ್ಥಳೀಯವಾಗಿ ಲಭ್ಯವಿವೆ. ಇನ್ನೂ ಉತ್ತಮವಾದ ಗುಣವೆಂದರೆ ಇದರಲ್ಲಿ ಯಾವ ಯಾವ ವಸ್ತುಗಳು ಅಡಕವಾಗಿವೆ ಎಂದು ನಮಗೆ ಗೊತ್ತಿರುತ್ತದೆ. ಆದರೆ ಪಾಶ್ಚಾತ್ಯ ಅಡುಗೆಗಳಲ್ಲಿ ಅದರಲ್ಲೂ ಸಿದ್ದ ಅಡುಗೆಗಳಲ್ಲಿ ಉಪಯೋಗಿಸಿರುವ ಪದಾರ್ಥಗಳಲ್ಲಿ ಕೆಲವನ್ನು ಆ ಸಂಸ್ಥೆಗಳು ಈ ಕೋಡು (E-code) ಮೂಲಕ ನೀಡಿರುತ್ತವೆ. ಈ ಸಂಖ್ಯೆಯಲ್ಲಿರುವ ಪದರ್ಥವನ್ನು ಯಾವ ಕಚ್ಚಾವಸ್ತುವಿನಿಂದ ಮಾಡಲಾಗಿದೆ ಎಂಬುವುದನ್ನು ತಿಪ್ಪರಲಾಗ ಹಾಕಿದರೂ ತಿಳಿಯಲಾಗದುದರಿಂದ ಅನುಮಾನಗಳು ಮೂಡುತ್ತವೆ. ಅನುಮಾನದಿಂದ ತಿನ್ನುವ ಬದಲು ನಮ್ಮದೇ ಅಡುಗೆಗಳನ್ನು ಯಾವುದೇ ಅನುಮಾನವಿಲ್ಲದೇ ಮನಃಪೂರ್ತಿಯಾಗಿ ಸೇವಿಸುವುದು ಒಳ್ಳೆಯದು ಅಲ್ಲವೇ! ನಮ್ಮದೇ ಸಮೃದ್ದವಾದ ಇಪ್ಪತ್ತೆರಡು ಅಡುಗೆಗಳನ್ನು ಈಗ ನೋಡೋಣ ... ದೇಹದ ಕೊಬ್ಬನ್ನು ನಿಮಿಷದಲ್ಲಿ ಕರಗಿಸಬಲ್ಲ ಟಾಪ್ ಹಣ್ಣುಗಳು

ಏಕದಳದಾನ್ಯಗಳು

ಏಕದಳದಾನ್ಯಗಳು

ಇತ್ತೀಚೆಗೆ ನಮ್ಮ ಮಾಧ್ಯಮಗಳಲ್ಲಿ ಓಟ್ಸ್ ಎಂಬ ಧಾನ್ಯದ ಗುಣಗಾನ ನಡೆಯುತ್ತಿದೆ. ವಾಸ್ತವವಾಗಿ ಇದು ಆಸ್ಟ್ರೇಲಿಯಾದಲ್ಲಿ ಕುದುರೆಗಳಿಗೆ ತಿನ್ನಿಸುವ ಪದಾರ್ಥವಾಗಿದ್ದು ಇದರ ಉತ್ಪಾದನೆ ಬೇಡಿಕೆಗಿಂತಲೂ ಹೆಚ್ಚಾಗಿರುವುದರಿಂದ ಹೆಚ್ಚಿನ ಪ್ರಮಾಣವನ್ನು ಭಾರತ ಸಹಿತ ಇತರ ದೇಶಗಳಿಗೆ ಕಳುಹಿಸಲಾಗುತ್ತಿದೆ. ಇದರ ಬದಲಿಗೆ ನಮ್ಮದೇ ಆದ ಸ್ವದೇಶೀ ಏಕದಳ ಧಾನ್ಯಗಳಾದ ಜೋಳ, ರಾಗಿ, ನವಣೆ, ಬಾಜ್ರಾ ಮೊದಲಾದವು ಕೊಬ್ಬನ್ನು ಕರಗಿಸುವಲ್ಲಿ ಓಟ್ಸಿಗಿಂತಲೂ ಹೆಚ್ಚು ಉಪಯುಕ್ತವಾಗಿವೆ. ಕೊಬ್ಬು ಹೆಚ್ಚಿಸುವ ಪಿಜ್ಜಾ ಬದಲಿಗೆ ಜೋಳದ ರೊಟ್ಟಿಯನ್ನು ಸೇವಿಸುವ ಮೂಲಕ ಕೊಬ್ಬನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕರಗಿಸಬಹುದು.

ಹೆಸರು ಬೇಳೆ

ಹೆಸರು ಬೇಳೆ

ಸುಲಭವಾಗಿ ಬೇಯುವ ಹೆಸರು ಬೇಳೆಯಲ್ಲಿ ವಿಟಮಿನ್ ಎ, ಇ ಮತ್ತು ಸಿ ಅಗತ್ಯ ಪ್ರಮಾಣದಲ್ಲಿರುವುದರಿಂದ ಕೊಬ್ಬು ಕರಗಿಸಲು ಸಹಕಾರಿಯಾಗಿದೆ

ಅರಿಶಿನ ಪುಡಿ

ಅರಿಶಿನ ಪುಡಿ

ಸಾಮಾನ್ಯವಾಗಿ ಶೀತವಾದರೆ ನಮ್ಮ ಹಿರಿಯರು ಸೂಚಿಸುವ ಸುಲಭ ಉಪಾಯವೆಂದರೆ ಬಿಸಿಹಾಲಿನಲ್ಲಿ ಅರಿಶಿನಪುಡಿ ಸೇರಿಸಿ ಕುಡಿಯುವುದು. ಇದು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರೊಂದಿಗೆ ಕೊಬ್ಬನ್ನು ಕರಗಿಸಲೂ ಉಪಯುಕ್ತವಾಗಿವೆ. ಬಿಸಿ ಹಾಲಿನಲ್ಲಿ ಅರಿಶಿನ ಇಷ್ಟವಾಗದಿದ್ದರೆ ತಣ್ಣನೆಯ ಮೊಸರಿನೊಂದಿಗೂ ಸೇವಿಸಬಹುದು.

ಮಜ್ಜಿಗೆ

ಮಜ್ಜಿಗೆ

ಸಾಮಾನ್ಯವಾಗಿ ಮೊಸರಿಗೆ ಭರ್ಜರಿಯಾಗಿ ನೀರು ಸೇರಿಸಿ ಉಪ್ಪು ಹಾಕಿದ ಪಾನೀಯವನ್ನೇ ಮಜ್ಜಿಗೆ ಎಂದು ಮಾರಲಾಗುತ್ತಿದೆ. ಆದರೆ ಇದರಲ್ಲಿ ಮೊಸರಿನಲ್ಲಿರುವ ಕೊಬ್ಬು ಸಹಾ ಸೇರಿರುತ್ತದೆ. ನಿಜವಾದ ಮಜ್ಜಿಗೆ ಎಂದರೆ ಮೊಸರನ್ನು ಕಡೆದು ಬೆಣ್ಣೆಯನ್ನು ತೆಗೆಅ ಬಳಿಕ ಉಳಿಯುವ ನೀರು. ಇದರಲ್ಲಿ ಕೇವಲ 2.2ಗ್ರಾಂ ಕೊಬ್ಬು ಹಾಗೂ 99 ಕ್ಯಾಲೋರಿ ಶಕ್ತಿ ಇರುವುದರಿಂದ ದೇಹಕ್ಕೆ ಅತಿ ಕಡಿಮೆ ಕೊಬ್ಬು ಸಂಗ್ರಹವಾಗುತ್ತದೆ. ಹಾಗೂ ಹೆಚ್ಚಿನ ನೀರಿನಂಶ ಲಭ್ಯವಾಗುವುದರಿಂದ ಹಿಂದೆ ಸಂಗ್ರಹವಾಗಿದ್ದ ಕೊಬ್ಬು ನಿಧಾನವಾಗಿ ಕರಗಲು ತೊಡಗುತ್ತದೆ.

ಜೇನು

ಜೇನು

ಬೆಳಿಗೆದ್ದ ತಕ್ಷಣ ಒಂದು ಲೋಟ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರಿನಲ್ಲಿ ಒಂದು ಚಮಚ ಅಪ್ಪಟ ಜೇನನ್ನು ಕದಡಿ ಕುಡಿಯುವ ಮೂಲಕ ದೇಹದಿಂದ ಕೊಬ್ಬು ಕರಗಲು ಅನುಕೂಲವಾಗುತ್ತದೆ. ಜೊತೆಗೇ ಜೇನಿನಿಂದ ಚರ್ಮದ ಹೊಳಪು ಹೆಚ್ಚುವ ಸಹಿತ ಇತರ ಹಲವು ಉಪಯೋಗಗಳೂ ಇವೆ.

ಎಲೆಕೋಸು

ಎಲೆಕೋಸು

ಎಲೆಕೋಸಿನಲ್ಲಿ ಹೆಚ್ಚಿನ ಪ್ರಮಾಣದ ನೀರು ಇರುವುದರಿಂದ ಹಸಿವನ್ನು ತಣಿಸಿ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ. ಎಲೆಕೋಸನ್ನು ಆರಿಸುವಾಗ ಮೇಲಿನಿಂದ ಒತ್ತಿದರೆ ಗಟ್ಟಿಯಾಗಿರುವ ಕೋಸನ್ನೇ ಆರಿಸಿ.

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ

ನಿಮ್ಮ ಅಡುಗೆಯಲ್ಲಿ ಕಡೆಮೆ ಬೆಲೆಯ ಅಡುಗೆ ಎಣ್ಣೆಯನ್ನು ಬಳಸುತ್ತಿದ್ದರೆ ಅದರ ಬದಲಿಗೆ ಸಾಸಿವೆ ಎಣ್ಣೆಯನ್ನು ಬಳಸಲು ಪ್ರಾರಂಭಿಸಿ. ಸಾಸಿವೆ ಎಣ್ಣೆಯಲ್ಲಿರುವ ಪೋಷಕಾಂಶಗಳು ಕರುಳಿನಲ್ಲಿ ಪಚನಕ್ರಿಯೆಗೆ ಸಹಕರಿಸಿ ದೇಹದಲ್ಲಿದ್ದ ವಿಷಕಾರಿ ವಸ್ತುಗಳನ್ನು ವಿಸರ್ಜಿಸಲು ನೆರವಾಗುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಪುಟ್ಟ ಬೆಳ್ಳುಳ್ಳಿಯ ಎಸಳೊಂದರಲ್ಲಿ ಉತ್ತಮ ಪ್ರಮಾಣದ ಗಂಧಕದ ಸಂಯುಕ್ತ ಪದಾರ್ಥವಾದ ಆಲಿಸಿನ್ (allicin) ಇದೆ. ಈ ಪೋಷಕಾಂಶವು ಕೊಬ್ಬನ್ನು ಶೀಘ್ರವಾಗಿ ಕರಗಿಸಲು ನೆರವಾಗುತ್ತದೆ. ಭರ್ಜರಿ ಊಟವಾದ ಬಳಿಕ ಕೆಲವು ಹಸಿ ಬೆಳ್ಳುಳ್ಳಿಗಳ ಎಸಳುಗಳನ್ನು ತಿನ್ನುವುದರಿಂದ ಈ ಊಟದಲ್ಲಿ ಲಭ್ಯವಾದ ಹೆಚ್ಚುವರಿ ಕೊಬ್ಬನ್ನು ಶೀಘ್ರವಾಗಿ ಕರಗಿಸಲು ಸಾಧ್ಯವಾಗುತ್ತದೆ.

ಓಟ್ಸ್

ಓಟ್ಸ್

ಓಟ್ಸ್ ನಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದೆ. ಇದರಿಂದ ಹೊಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಲಭ್ಯವಾದರೂ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ ಹಾಗೂ ಕಡಿಮೆ ಕ್ಯಾಲೋರಿಗಳಿರುವುದರಿಂದ ಕೊಬ್ಬು ಕರಗಲು ಸಹಾಯವಾಗುತ್ತದೆ.

ಟೊಮೇಟೊ

ಟೊಮೇಟೊ

ಟೊಮೇಟೊ ಹಣ್ಣಿನಲ್ಲಿರುವ ಲೈಕೋಪಿನ್ ಎಂಬ ಪೋಷಕಾಂಶ ಕೊಬ್ಬನ್ನು ಶೀಘ್ರವಾಗಿ ಸಹಕರಿಸಲು ನೆರವಾಗುತ್ತದೆ. ಇದರಲ್ಲಿ ಹೆಚ್ಚಿನ ನೀರು ಹಾಗೂ ಕಡಿಮೆ ಕ್ಯಾಲೋರಿಗಳಿರುವುದರಿಂದ ಕೊಬ್ಬು ಕರಗಿಸಲು ಉತ್ತಮ ಆಹಾರವಾಗಿದೆ.

ಮೊಟ್ಟೆಯ ಬಿಳಿಭಾಗ

ಮೊಟ್ಟೆಯ ಬಿಳಿಭಾಗ

ಮೊಟ್ಟೆಯ ಹಳದಿಭಾಗದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಇರುವುದರಿಂದ ಹಳದಿ ಭಾಗವನ್ನು ಬೇರ್ಪಡಿಸಿ ಕೇವಲ ಬಿಳಿಯ ಭಾಗವನ್ನು ಸೇವಿಸುವುದು ತೂಕ ಕಳೆದುಕೊಳ್ಳಲು ಸಹಕಾರಿಯಾಗಿದೆ. ಬಿಳಿಯ ಭಾಗದಲ್ಲಿ ಕಡಿಮೆ ಕೊಬ್ಬು ಹಾಗೂ ಹೆಚ್ಚಿನ ಪೋಷಕಾಂಶಗಳಿರುವುದರಿಂದ ಬೇಗನೇ ತೂಕ ಕಳೆದುಕೊಳ್ಳಲು ಇದೊಂದು ಉಪಯುಕ್ತ ಆಹಾರವಾಗಿದೆ.

ಕೋಳಿಯ ಎದೆಯಭಾಗ

ಕೋಳಿಯ ಎದೆಯಭಾಗ

ಮಾಂಸಾಹಾರಿಗಳಿಗೆ ಕೋಳಿ ಮಾಂಸ ಎಂದರೆ ಪಂಚಪ್ರಾಣ. ಆದರೆ ಕೋಳಿಮಾಂಸದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪ್ರೋಟೀನುಗಳಿರುವುದರಿಂದ ಒಂದು ದಿನಕ್ಕೆ ನೂರು ಗ್ರಾಂಗಳಿಗಿಂತ ಹೆಚ್ಚು ಸೇವಿಸದಿರಲು ತೂಕ ಕಳೆದುಕೊಳ್ಳಲು ತಜ್ಞರು ಸಲಹೆ ನೀಡುತ್ತಾರೆ. ಆದರೆ ಕೋಳಿಮಾಂಸದ ಎಲ್ಲಾ ಭಾಗಗಳಲ್ಲಿ ಕೊಬ್ಬು ಸಮನಾಗಿರುವುದಿಲ್ಲ. ತೊಡೆಗಳಲ್ಲಿ ಅತ್ಯಧಿಕವಾಗಿರುವ ಕೊಬ್ಬು ಎದೆಯ ಭಾಗದಲ್ಲಿ ಅತಿ ಕಡಿಮೆ ಇರುತ್ತದೆ. ಹಾಗಾಗಿ ಮಾಂಸಾಹಾರಿಗಳು ಎದೆಯಭಾಗದ ಮಾಂಸವನ್ನು ಮಾತ್ರ ಸೇವಿಸುವುದು ಅನುಕೂಲಕರವಾಗಿದೆ.

ಬಿಳಿಯ ಅಣಬೆ

ಬಿಳಿಯ ಅಣಬೆ

ಬಿಳಿಯ ಅಣಬೆಯಲ್ಲಿ ಉತ್ತಮ ಪೋಷಕಾಂಶಗಳಿದ್ದು ಹೆಚ್ಚಿನ ವಿಟಮಿನ್ ಹಾಗೂ ಕೊಬ್ಬಿನ ಅಂಶ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಾಗಿದೆ. ಇದನ್ನು ಮಾಂಸಾಹಾರದ ಅಡುಗೆಗಳಲ್ಲಿ ಮಾಂಸದ ಬದಲು ಉಪಯೋಗಿಸಬಹುದಾದುದರಿಂದ ಮಾಂಸಾಹಾರಿಗಳಿಗೆ ತೂಕ ಕಳೆದುಕೊಳ್ಳಲು ಒಂದು ಉತ್ತಮ ಪರ್ಯಾಯವಾಗಿದೆ.

ಬಾದಾಮಿ

ಬಾದಾಮಿ

ಆಹಾರ ಸೇವನೆಯ ಬಳಿಕ ಕೆಲವು ಬಾದಾಮಿಗಳನ್ನು ಕುರುಕುವುದರಿಂದ ರಕ್ತದಲ್ಲಿ ಸಕ್ಕರೆಯ ಅಂಶವನ್ನು ನಿಯಂತ್ರಿಸುವ ಕಾರಣ ಕೊಬ್ಬನ್ನು ಕರಗಿಸಲು ಸಹಕಾರಿಯಾಗಿದೆ. ಅಲ್ಲದೇ ಮೆದುಳಿನ ಕಾರ್ಯಕ್ಷಮತೆಯೂ ಹೆಚ್ಚಿಸುವುದು ಸಂಶೋಧನೆಗಳಿಂದ ದೃಢಪಟ್ಟಿದೆ. ಬಾದಾಮಿ ತಿಂದ ಬಳಿಕ ಮನಸ್ಸು ಇನ್ನೂ ಹೆಚ್ಚಿನ ತಿಂಡಿಯನ್ನು ತಿನ್ನದಿರಲು ಪ್ರೇರೇಪಿಸುವ ಕಾರಣ ಹೆಚ್ಚಿನ ಆಹಾರ ಸೇವಿಸುವುದನ್ನು ತಪ್ಪಿಸಿದಂತಾಗಿ ಕೊಬ್ಬು ಕರಗಿಸಲು ಸಾಧ್ಯವಾಗುತ್ತದೆ.

ಹಸಿರು ಸೊಪ್ಪುಗಳು

ಹಸಿರು ಸೊಪ್ಪುಗಳು

ಹರಿವೆ, ಬಸಲೆ, ಪಾಲಕ್, ಮೆಂತೆ ಮೊದಲಾದ ಸೊಪ್ಪುಗಳು ಉತ್ತಮ ಪ್ರಮಾಣದ ಕರಗದ ನಾರು ಹೊಂದಿವೆ ಹಾಗೂ ಅತ್ಯಂತ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದರಿಂದ ದೇಹದಿಂದ ಹೆಚ್ಚಿನ ಕೊಬ್ಬನ್ನು ಕರಗಿಸಲು ಸಹಕರಿಸುತ್ತವೆ. ಅಲ್ಲದೇ ಇದರಲ್ಲಿರುವ ಹೆಚ್ಚಿನ ಖನಿಜಗಳು ಮತ್ತು ವಿಟಮಿನ್‌ಗಳು ಆರೋಗ್ಯವನ್ನು ವೃದ್ಧಿಸುತ್ತವೆ.

ಕರಿಬೇವಿನ ಎಲೆಗಳು

ಕರಿಬೇವಿನ ಎಲೆಗಳು

ಕರಿಬೇವಿನ ಎಲೆಗಳನ್ನು ಒಗ್ಗರಣೆಯ ಮೂಲಕ ಆಹಾರದಲ್ಲಿ ಸೇರಿಸುವುದರಿಂದ ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಾಧ್ಯವಾಗುತ್ತದೆ. ಅಲ್ಲದೇ ಶೇಖರಗೊಂಡಿದ್ದ ಕೊಬ್ಬು ಕರಗಲೂ ನೆರವಾಗುತ್ತದೆ.

ಏಲಕ್ಕಿ

ಏಲಕ್ಕಿ

ಏಲಕ್ಕಿ ಕೇವಲ ಸುಗಂಧವಾದ ಮಸಾಲೆ ಪದಾರ್ಥವಲ್ಲ. ಇದರಲ್ಲಿಯೂ ಹಲವು ಪೋಷಕಾಂಶಗಳಿದ್ದು ಜೀರ್ಣಕ್ರಿಯೆಯಲ್ಲಿ ನೆರವಾಗುತ್ತವೆ. ಊಟದ ಬಳಿಕ ಒಂದೆರಡು ಏಲಕ್ಕಿಗಳನ್ನು ಜಗಿದು ನುಂಗುವ ಮೂಲಕ ಜೀರ್ಣಕ್ರಿಯೆ ಸರಾಗಗೊಂಡು ಕೊಬ್ಬು ಬೇಗನೇ ಕರಗಲು ಸಾಧ್ಯವಾಗುತ್ತದೆ.

ಅವರೆ (ಬೀನ್ಸ್)

ಅವರೆ (ಬೀನ್ಸ್)

ಸಾಮಾನ್ಯವಾಗಿ ಕಡಿಮೆ ಬೆಲೆಯಲ್ಲಿ ಎಲ್ಲೆಡೆ ಸಿಗುವ ಬೀನ್ಸ್ ಅಥವಾ ತಿಂಗಳಾವರೆ ಕೋಡುಗಳಲ್ಲಿ ಉತ್ತಮ ಪ್ರಮಾಣದ ನೀರು, ಪೋಷಕಾಂಶಗಳು ಹಾಗೂ ಕರಗುವ ನಾರು ಇದೆ. ಅಲ್ಲದೇ ಬೀನ್ಸ್ ನ ಸೇವನೆ ಕೊಬ್ಬನ್ನು ಕರಗಿಸಲೂ ನೆರವಾಗುತ್ತದೆ.

ಪುದಿನಾ ಎಲೆಗಳು

ಪುದಿನಾ ಎಲೆಗಳು

ಊಟದ ಜೊತೆಗೆ ಸೇವಿಸುವ ಸಾಲಾಡ್ ಅಥವಾ ಕೋಸಂಬರಿಯಲ್ಲಿ ಕೆಲವು ಪುದಿನಾ ಎಲೆಗಳಿರುವಂತೆ ನೋಡಿಕೊಳ್ಳಿ. ಏಕೆಂದರೆ ಪುದಿನಾ ಎಲೆಗಳಲ್ಲಿ ದೇಹದಲ್ಲಿ ಸಂಗ್ರಹವಾಗಿರುವ ವಿಷಕಾರಿ ವಸ್ತುಗಳನ್ನು ಹೊರದಬ್ಬಲು ಹಲವು ಪೋಷಕಾಂಶಗಳಿವೆ. ಇದರ ಬೆಲೆಯಂತೂ ಮಾರುಕಟ್ಟೆಯಲ್ಲಿ ಅತ್ಯಂತ ಅಗ್ಗವಾಗಿದೆ.

ಹಸುವಿನ ಹಾಲು

ಹಸುವಿನ ಹಾಲು

ಪ್ಯಾಕೆಟ್ಟುಗಳ ಮೂಲಕ ಉತ್ತಮ ಹಾಲು ಲಭ್ಯವಾದರೂ ಸಂಸ್ಕಣೆಯ ಸಮಯದಲ್ಲಿ ಕೊಬ್ಬು ಹೆಚ್ಚು ಗಾಢಗೊಳ್ಳುವುದರಿಂದ ಇದಕ್ಕಿಂತ ಹಸಿಯಾದ ಹಸುವಿನ ಹಾಲು ಉತ್ತಮವಾಗಿದೆ. ಇದರಲ್ಲಿ ಕಡಿಮೆ ಪ್ರಮಾಣದಲ್ಲಿ ಕೊಬ್ಬು ಇರುವುದರಿಂದ ತೂಕ ಕಳೆದುಕೊಳ್ಳಲು ಪ್ಯಾಕೆಟ್ ಹಾಲಿಗಿಂತಲೂ ಉತ್ತಮವಾಗಿದೆ.

ಮೀನು

ಮೀನು

ಮಾಂಸಾಹಾರಿಗಳಿಗೆ ಅತ್ಯಂತ ಸುರಕ್ಷಿತವಾದ ಆಹಾರವೆಂದರೆ ಸಾಗರೋತ್ಪನ್ನಗಳು. ಅದಲ್ಲಿಯೂ ಮೀನಿನಲ್ಲಿ ಹೆಚ್ಚಿನ ಪೋಷಕಾಂಶಗಳು, ಪ್ರೋಟೀನುಗಳು ಇದ್ದರೆ ಅತಿ ಕಡಿಮೆ ಪ್ರಮಾಣದಲ್ಲಿ ಕೊಬ್ಬು ಇರುವುದರಿಂದ ತೂಕ ಇಳಿಸಲು ನೆರವಾಗುತ್ತವೆ.

ತೊಗರಿ ಕಾಳು

ತೊಗರಿ ಕಾಳು

ಸಿಪ್ಪೆ ತೆಗೆಯದ ತೊಗರಿ ಕಾಳಿನಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಹಲವು ಪೋಷಕಾಂಶಗಳಿರುವ ಕಾರಣ ರಕ್ತ ಸಂಚಾರ ಸುಗಮವಾಗುತ್ತದೆ ಹಾಗೂ ಕೊಬ್ಬು ಕರಗಲು ನೆರವಾಗುತ್ತದೆ.

English summary

22 Cheap Indian Foods That Burn Fat Fast

Indian food is the best type of cuisine which will help you to stay healthy and fit. It has the right amount of nutrients, proteins and minerals to keep your body active and strong. Though the introduction of American foods have replaced a lot of things in the market, there is no necessity for you to switch your cuisine to cut the fat in your body.
X
Desktop Bottom Promotion