For Quick Alerts
ALLOW NOTIFICATIONS  
For Daily Alerts

ಆಕರ್ಷಕ ಮೈಕಟ್ಟು ನಿಮ್ಮದಾಗಿಸಿಕೊಳ್ಳಲು 20 ಸೂಕ್ತ ಸಲಹೆಗಳು

By Super
|

ಒಂದು ಆರೋಗ್ಯಕರವಾದ ಪರಿಪೂರ್ಣ ದೇಹವು ಆ ವ್ಯಕ್ತಿಗೆ ಆತ್ಮ ವಿಶ್ವಾಸವನ್ನು ನೀಡುವುದರ ಜೊತೆಗೆ, ರೋಗ ರುಜಿನಗಳಿಂದ ಸಹ ಆತನನ್ನು ದೂರವಿಡುತ್ತದೆ. ಆದರೆ ಪರಿಪೂರ್ಣವಾದ ದೇಹವನ್ನು ಪಡೆಯಲು ಮಾತ್ರ ನೀವು ಶ್ರಮ ಪಡಬೇಕಾಗುತ್ತದೆ.

ಆದರೆ ಫಿಟ್‍ನೆಸ್ ತಜ್ಞೆ ಮತ್ತು ಭಾರತದಲ್ಲಿ ಗೋಲ್ಡ್ಸ್ ಜಿಮ್‍ನ ಉಪಾಧ್ಯಕ್ಷೆಯಾಗಿರುವ ಅಲ್ಥಿಯಾ ಷಾರವರು ನಮಗಾಗಿ ತೂಕ ಇಳಿಸಿಕೊಳ್ಳಲು ಮತ್ತು ಆಕರ್ಷಕವಾದ ದೇಹವನ್ನು ಪಡೆಯಲು 20 ಮಾರ್ಗಗಳನ್ನು ಸೂಚಿಸಿದ್ದಾರೆ. ಈ ಸರಳ ಸಲಹೆಗಳನ್ನು ಪಾಲಿಸಿ ಹಾಗು ನಿಮಗೆ ಬೇಕಾದಂತಹ ಪರಿಪೂರ್ಣವಾದ ದೇಹವನ್ನು ಪಡೆಯಿರಿ. ಈ ಸಲಹೆಗಳನ್ನು ಹೆಂಗಸರು ಮತ್ತು ಗಂಡಸರು ಎಂಬ ಭೇದವಿಲ್ಲದೆ ಎಲ್ಲರೂ ಪಾಲಿಸಬಹುದು. 40ರ ನಂತರವೂ ಫಿಟ್ ಆಗಿರುವುದು ಹೇಗೆ?

 ಏಕರೂಪದ ಡಯಟ್ ಯೋಜನೆ

ಏಕರೂಪದ ಡಯಟ್ ಯೋಜನೆ

ಏಕರೂಪದ ಡಯಟ್ ಪಾಲಿಸುವವರು ಭಾರಿ ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತಾರೆ. ಒಂದು ಡಯಟ್ ಯೋಜನೆಯಿಂದ ಮತ್ತೊಂದು ಯೋಜನೆಗೆ ಧುಮುಕುವ ತುಡಿತ ಡಯಟ್ ಮಾಡುವವರಲ್ಲಿ ಕಂಡು ಬರುತ್ತದೆ. ಆದರೆ ನೀವು ತೂಕ ಇಳಿಸಿಕೊಳ್ಳಲು ಏಕರೂಪದ ಡಯಟ್ ಪಾಲಿಸುತ್ತಿದ್ದರು, ಅದಕ್ಕೆ ಬೆಂಬಲಿತವಾಗಿ ಹೆಚ್ಚುವರಿ ಡಯಟ್ ಯೋಜನೆ ಇದ್ದಲ್ಲಿ, ನಿಮ್ಮ ಅಭಿಲಾಷೆ ಯಶಸ್ವಿಯಾಗುತ್ತದೆ.

 ಉಪಾಹಾರ

ಉಪಾಹಾರ

ನಿಮ್ಮ ದಿನವನ್ನು ಆರೋಗ್ಯಕರವಾದ ಉಪಾಹಾರದಿಂದ ಆರಂಭಿಸಿ. ನಿಮ್ಮ ಜೀರ್ಣಾಂಗವನ್ನು ಪರಿಣಾಮಕಾರಿಯಾಗಿ ಉಳಿಸಲು ಉಪಾಹಾರಗಳು ಅತ್ಯಂತ ಪ್ರಯೋಜನಕಾರಿಯಾಗಿರುತ್ತವೆ. ಇದರ ಜೊತೆಗೆ ಈ ಉಪಾಹಾರವು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.

ಸ್ಕಿಮ್ ಮಾಡಿದ ಹಾಲು

ಸ್ಕಿಮ್ ಮಾಡಿದ ಹಾಲು

ನಿಮ್ಮ ತೂಕವನ್ನು ಪರಿಣಾಮಕಾರಿಯಾಗಿ ಇಳಿಸಿಕೊಳ್ಳಬೇಕೆಂದರೆ ನೀವು ಕಚ್ಛಾ ಹಾಲಿನಿಂದ ಸ್ಕಿಮ್ ಮಾಡಿದ ಹಾಲು ಅಂದರೆ ಕೊಬ್ಬು ರಹಿತ ಹಾಲಿಗೆ ಬದಲಾಗುವುದು ಒಳಿತು. ಕಚ್ಛಾ ಹಾಲಿನಲ್ಲಿ ಕ್ಯಾಲೋರಿಗಳು ಅಧಿಕವಾಗಿರುತ್ತವೆ, ಈ ಕ್ಯಾಲೋರಿಗಳು ನಿಮಗೆ ಮತ್ತಷ್ಟು ತೂಕವನ್ನು ನೀಡುತ್ತವೆ. ಆದರೆ ಸ್ಕಿಮ್ ಮಾಡಿದ ಹಾಲಿನಲ್ಲಿ ಕ್ಯಾಲೋರಿಗಳು ಕಡಿಮೆ ಇರುತ್ತವೆ. ಹಾಗಾಗಿ ಇವು ನಿಮ್ಮ ತೂಕವನ್ನು ಇಳಿಸಿಕೊಳ್ಳಲು ಆರೋಗ್ಯಕರವಾಗಿ ಸಹಕರಿಸುತ್ತದೆ.

 ನೀರು

ನೀರು

ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿ ದಿನವು 2-3 ಲೀಟರ್ ನೀರನ್ನು ಸೇವಿಸಿ. ನಿಮ್ಮ ತ್ವಚೆಯು ಸಹ ನೀರಿನಂಶದಿಂದ ಕೂಡಿರಲಿ, ನಿಮ್ಮ ದೇಹದಲ್ಲಿ ಯಾವುದೇ ಕಲ್ಮಶಲಗಳು ಸೇರಿಕೊಳ್ಳದಂತೆ ನಿಯಂತ್ರಿಸಿ.

 ಕ್ಯಾಲೋರಿ ಇರುವ ಪಾನೀಯಗಳನ್ನು ಸೇವಿಸದೆ ಇರುವುದು

ಕ್ಯಾಲೋರಿ ಇರುವ ಪಾನೀಯಗಳನ್ನು ಸೇವಿಸದೆ ಇರುವುದು

ತೂಕವನ್ನು ಪರಿಣಾಮಕಾರಿಯಾಗಿ ಇಳಿಸಬೇಕೆಂದರೆ ಕ್ಯಾಲೋರಿ ಇರುವ ಪಾನೀಯಗಳನ್ನು ಸೇವಿಸಬಾರದು. ಕ್ಯಾಲೋರಿ ಇರುವ ಪಾನೀಯಗಳು ಎಂದರೆ ಕಾರ್ಬೋನೆಟ್ ಆಗಿರುವ ಪಾನೀಯಗಳು ಮತ್ತು ಪ್ಯಾಕ್ ಆಗಿರುವ ಜ್ಯೂಸ್‍ಗಳು.

ಊಟವನ್ನು 4 ಭಾಗಗಳಾಗಿ ಮಾಡಿ

ಊಟವನ್ನು 4 ಭಾಗಗಳಾಗಿ ಮಾಡಿ

ನಿಮ್ಮ ಊಟವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ. ಅದರಲ್ಲಿ ಅರ್ಧ ಭಾಗವು ತರಕಾರಿ ಇರುವಂತೆ ನೋಡಿಕೊಳ್ಳಿ. 1/4 ಭಾಗ ಪಿಷ್ಟ ಇರಲಿ ಮತ್ತು ಇನ್ನುಳಿದ 1/4 ಭಾಗದಲ್ಲಿ ಮಾಂಸವಿರಲಿ.

ಹಸಿವಾದಾಗ

ಹಸಿವಾದಾಗ

ಯಾವಾಗ ನಿಮಗೆ ಹಸಿವಾದ ಅನುಭವವಾಗುತ್ತದೆಯೋ, ಆಗ ಒಂದು ಲೋಟ ನೀರು ಕುಡಿಯಿರಿ. ನೀರು ನಿಮ್ಮ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ ಮತು ನೀವು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ.

ಆರೋಗ್ಯಕರವಾದ ತಿಂಡಿಗಳು

ಆರೋಗ್ಯಕರವಾದ ತಿಂಡಿಗಳು

ಸಾಮಾನ್ಯವಾಗಿ 3 ಗಂಟೆಗೆ ನಮ್ಮ ಶಕ್ತಿಯ ಮಟ್ಟವು ಕುಸಿಯುತ್ತದೆ. ಆಗ ನಾವು ಸ್ನ್ಯಾಕ್ಸ್ ಎಂದು ಹಾಳು ಮೂಳು ತಿನ್ನಲು ಮನಸ್ಸು ಮಾಡುತ್ತೇವೆ. ಆದರೆ ಈ ಅವಧಿಯಲ್ಲಿ ಅದು ಇದು ತಿನ್ನುವ ಬದಲು ಕಡಿಮೆ ಕೊಬ್ಬಿರುವ ಯೋಗರ್ಟ್, ಕಡಿಮೆ ಕ್ಯಾಲೋರಿ ಇರುವ ತರಕಾರಿಗಳು, ಬಾದಾಮಿ ಮತ್ತು ವಾಲ್‍ನಟ್‍ಗಳಂತಹ ಒಣ ಹಣ್ಣುಗಳನ್ನು ಸೇವಿಸಿ.

ಸೂಪ್ ಸೇವಿಸಬಹುದು ಎಂದು ಸಲಹೆ ಮಾಡಲಾಗಿದೆ

ಸೂಪ್ ಸೇವಿಸಬಹುದು ಎಂದು ಸಲಹೆ ಮಾಡಲಾಗಿದೆ

ಸೂಪ್ ಸೇವಿಸುವುದು ಆರೋಗ್ಯಕರ ಮತ್ತು ನಿಮಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ಇದರಲ್ಲಿ ಕೆನೆ ರಹಿತ, ಕಡಿಮೆ ಕ್ಯಾಲೋರಿ ಮತ್ತು ಅಧಿಕ ನಾರಿನಂಶ ಇದ್ದಷ್ಟು ಒಳ್ಳೆಯದು.

ನಿಧಾನವಾಗಿ ತಿನ್ನಿ

ನಿಧಾನವಾಗಿ ತಿನ್ನಿ

ಆಹಾರವನ್ನು ನಿಧಾನವಾಗಿ ತಿನ್ನಿ ಮತ್ತು ಚೆನ್ನಾಗಿ ಅಗಿಯಿರಿ. ಏಕೆಂದರೆ ಅಧ್ಯಯನಗಳ ಪ್ರಕಾರ ನಮ್ಮ ಮೆದುಳು ಹೊಟ್ಟೆ ತುಂಬಿರುವುದನ್ನು ಗ್ರಹಿಸಲು 15 ನಿಮಿಷಗಳ ಕಾಲವನ್ನು ತೆಗೆದುಕೊಳ್ಳುತ್ತದೆಯಂತೆ. ಆದ್ದರಿಂದ ನೀವು ಬೇಗ ತಿನ್ನಲು ಆರಂಭಿಸಿದರೆ ಹೆಚ್ಚು ತಿನ್ನುವ ಸಂಭವವಿರುತ್ತದೆಯಂತೆ.

ಕಡಿಮೆ ಕ್ಯಾಲೋರಿ ಇರುವ ಕಾಂಡಿಮೆಂಟ್‍ಗಳನ್ನು ಸೇವಿಸಿ

ಕಡಿಮೆ ಕ್ಯಾಲೋರಿ ಇರುವ ಕಾಂಡಿಮೆಂಟ್‍ಗಳನ್ನು ಸೇವಿಸಿ

ಮಯೊನ್ನೈಸ್‍ಗಳಂತಹ ಕೊಬ್ಬಿರುವ ಕಾಂಡಿಮೆಂಟ್‍ಗಳನ್ನು ಸೇವಿಸುವುದರ ಬದಲಿಗೆ ಸಾಸಿವೆ ಮುಂತಾದ ಕಡಿಮೆ ಕ್ಯಾಲೋರಿ ಇರುವ ಕಾಂಡಿಮೆಂಟ್‍ಗಳನ್ನು ಸೇವಿಸಿ.

ಆಹಾರದ ದಿನಚರಿಯನ್ನು ಇಡಿ

ಆಹಾರದ ದಿನಚರಿಯನ್ನು ಇಡಿ

ಒಂದು ವೇಳೆ ನೀವು ತೂಕವನ್ನು ಕಡಿಮೆ ಮಾಡಿಕೊಳ್ಳುವ ಯೋಜನೆಯನ್ನು ಇರಿಸಿಕೊಂಡಿದ್ದಲ್ಲಿ ಅಥವಾ ಡಯಟ್ ಯೋಜನೆ ಇರಿಸಿಕೊಂಡಿದ್ದಲ್ಲಿ ಅದರ ಪ್ರಗತಿಯನ್ನು ತಿಳಿಯಲು ಒಂದು ದಿನಚರಿಯನ್ನು ಇಡಿ. ನೀವು ಏನೆಲ್ಲ ಸೇವಿಸುತ್ತೀರೋ, ಅದರಲ್ಲಿ ನಮೂದಿಸುತ್ತ ಹೊಗಿ. ಇದರಿಂದ ನಿಮಗೆ ಒಳ್ಳೆಯದು ಯಾವುದು ಮತ್ತು ಕೆಟ್ಟದ್ದು ಯಾವುದು ಎಂದು ತಿಳಿಯುತ್ತದೆ.

ಹೊರಗೆ ತಿನ್ನಬೇಕಾದಾಗ

ಹೊರಗೆ ತಿನ್ನಬೇಕಾದಾಗ

ಒಂದು ವೇಳೆ ನೀವು ಹೊರಗೆ ಊಟವನ್ನು ಮಾಡುವಾಗ ಸಲಾಡ್ ಅಥವಾ ಸೂಪ್ ಅನ್ನು ನಿಮ್ಮ ಊಟದ ಮೊದಲ ಹಂತದಲ್ಲಿ ಸೇವಿಸಿ. ಇದರಿಂದ ನೀವು ಮುಂದೆ ಅಧಿಕ ಕ್ಯಾಲೋರಿ ಇರುವ ಆಹಾರವನ್ನು ಸೇವಿಸುವುದು ನಿಯಂತ್ರಣವಾಗುತ್ತದೆ.

ಡೆಸರ್ಟ್ ಊಟ ಆದಷ್ಟು ಕಡಿಮೆ ಮಾಡಿ

ಡೆಸರ್ಟ್ ಊಟ ಆದಷ್ಟು ಕಡಿಮೆ ಮಾಡಿ

ನೀವು ಹೊರಗೆ ಊಟ ಮಾಡುವಾಗ ನೀವು ಉದ್ದೇಶ ಪೂರ್ವಕವಾಗಿ ಡೆಸರ್ಟ್ ಬಿಟ್ಟು ಬಿಡುವುದನ್ನು ಅಭ್ಯಾಸ ಮಾಡಿಕೊಳ್ಳಿ ಒಂದು ವೇಳೆ ಇದನ್ನು ಬಿಡಲು ಸಾಧ್ಯವಾಗದಿದ್ದಾಗ, ಇದನ್ನು ನೀವು ನಿಮ್ಮ ಸಂಗಾತಿಯ ಜೊತೆಗೆ ಹಂಚಿಕೊಳ್ಳಿ.

 ನಿಮ್ಮನ್ನು ನೀವು ಸತ್ಕರಿಸಿಕೊಳ್ಳಿ

ನಿಮ್ಮನ್ನು ನೀವು ಸತ್ಕರಿಸಿಕೊಳ್ಳಿ

ವಾರಕ್ಕೊಮ್ಮೆ ನಿಮ್ಮನ್ನು ನೀವು ಸತ್ಕರಿಸಿಕೊಳ್ಳುವ ಕೆಲಸ ಮಾಡಿ. ಅಂದು ನಿಮ್ಮ ಡಯಟ್ ಪ್ಲಾನ್‍ನಿಂದ ನೀವು ಬಿಡುಗಡೆ ಹೊಂದಿ, ನಿಮಗೆ ಇಷ್ಟ ಬಂದದ್ದನ್ನು ತಿನ್ನಿ. ಇದರಿಂದ ನಿಮ್ಮ ಡಯಟ್ ಯೋಜನೆಯನ್ನು ಪಾಲಿಸಲು ಬೇಕಾದ ಸ್ಥೈರ್ಯ ಮತ್ತು ದೃಢ ನಿರ್ಧಾರ ನಿಮಗೆ ದೊರೆಯುತ್ತದೆ.

ಪ್ರತಿನಿತ್ಯ ವ್ಯಾಯಾಮ ಮಾಡಿ

ಪ್ರತಿನಿತ್ಯ ವ್ಯಾಯಾಮ ಮಾಡಿ

ನೀವು ಪ್ರತಿ ನಿತ್ಯ ಡಯಟ್ ಮಾಡುವುದರ ಜೊತೆಗೆ, ದಿನ ನಿತ್ಯ ವ್ಯಾಯಾಮ ಸಹ ಮಾಡಿ. 20-25 ನಿಮಿಷಗಳ ಕಾಲ ಸರಳ ವ್ಯಾಯಾಮ ಮಾಡುವ ಮೂಲಕ ಪವಾಡಗಳನ್ನು ಮಾಡಬಹುದು. ವ್ಯಾಯಾಮವು ನಿಮ್ಮ ಸ್ಥೂಲ ಕಾಯವನ್ನು ಕರಗಿಸಲು ಹೇಗೆ ಸಹಾಯ ಮಾಡುತ್ತದೆಯೋ, ಹಾಗೆಯೇ ನಿಮ್ಮ ದೇಹ ಆಕರ್ಷಕವಾಗಿ ಕಾಣುವಂತೆ ಸಹ ಮಾಡಲು ಸಹಾಯ ಮಾಡುತ್ತದೆ.

 ನಿಮ್ಮ ಸಂಗಾತಿಯೊಂದಿಗೆ ಒಂದೇ ಅವಧಿಯಲ್ಲಿ ವ್ಯಾಯಾಮ ಮಾಡಿ

ನಿಮ್ಮ ಸಂಗಾತಿಯೊಂದಿಗೆ ಒಂದೇ ಅವಧಿಯಲ್ಲಿ ವ್ಯಾಯಾಮ ಮಾಡಿ

ಹೌದು ದಿನ ನಿತ್ಯ ಒಂದೇ ಸಮಯದಲ್ಲಿ ನೀವು ಮತ್ತು ನಿಮ್ಮ ಸಂಗಾತಿ ವ್ಯಾಯಾಮ ಮಾಡುವುದರಿಂದ ವ್ಯಾಯಾಮವು ಆಗುತ್ತದೆ ಮತ್ತು ನಿಮ್ಮಿಬ್ಬರ ಮನಸ್ಸಿಗೆ ಮುದವು ಸಹ ಸಿಗುತ್ತದೆ. ಇದರಿಂದ ನೀವು ವ್ಯಾಯಾಮವನ್ನು ತಪ್ಪದೆ ಮಾಡಬಹುದು.

ವೇಯ್ಟ್ ಟ್ರೈನಿಂಗ್ ಮತ್ತು ಕಾರ್ಡಿಯೋವ್ಯಾಸ್ಕುಲರ್:

ವೇಯ್ಟ್ ಟ್ರೈನಿಂಗ್ ಮತ್ತು ಕಾರ್ಡಿಯೋವ್ಯಾಸ್ಕುಲರ್:

ವ್ಯಾಯಾಮವು ವೇಯ್ಟ್ ಟ್ರೈನಿಂಗ್ ಮತ್ತು ಕಾರ್ಡಿಯೋವ್ಯಾಸ್ಕುಲರ್‌ಗಳ ಸಮ್ಮಿಶ್ರಣವನ್ನು ಹೊಂದಿರಬೇಕು. ಇದರಿಂದ ಕೊಬ್ಬು ಕರಗುತ್ತದೆ ಮತ್ತು ಕೊಬ್ಬಿನ ಜಾಗದಲ್ಲಿ ಸ್ನಾಯುಗಳ ಬೆಳವಣಿಗೆಯಾಗುತ್ತದೆ.

ಬೇಗ ಬೇಕು ಅಥವಾ ತೀರಾ ಕಷ್ಟ ಪಡಬೇಕು

ಬೇಗ ಬೇಕು ಅಥವಾ ತೀರಾ ಕಷ್ಟ ಪಡಬೇಕು

ಹೌದು ಯಾವುದೇ ಫಲಿತಾಂಶವು ದಿನ ಬೆಳಗಾಗುವುದರಲ್ಲಿ ಸಿಗುವುದಿಲ್ಲ. ಆದ್ದರಿಂದ ನಿಮ್ಮ ಪ್ರಗತಿ ಬೇಗ ಬೇಕು ಎಂದರೆ ನೀವು ಹೆಚ್ಚಿಗೆ ಕಷ್ಟ ಪಡಬೇಕು. 1 -10ರವರೆಗೆ ಒಂದು ಮಾನದಂಡವನ್ನು ಇಟ್ಟುಕೊಳ್ಳಿ. ಇಲ್ಲಿ 10 ತೀರಾ ಕೆಟ್ಟದು ಎಂದರೆ 1 ನಿಮ್ಮ ಗುರಿಯಾಗಿರಲಿ. ಇದನ್ನು ಸಾಧಿಸಲು ವಾರಕ್ಕೆ 4-5 ಬಾರಿಯಾದರು ವ್ಯಾಯಾಮ ಮಾಡಿ.

ಮಧ್ಯಪಾನ ಸೇವನೆ

ಮಧ್ಯಪಾನ ಸೇವನೆ

ಕೊನೆಯದಾಗಿ, ನಿಮ್ಮ ಮಧ್ಯಪಾನ ಸೇವನೆಯನ್ನು ಕಡಿಮೆ ಮಾಡಿ. ಒಂದು ವೇಳೆ ನೀವು ಸೇವಿಸಲೇ ಬೇಕು ಎಂದಾದಲ್ಲಿ ವಾರಾಂತ್ಯದಲ್ಲಿ ಹಿತ-ಮಿತವಾಗಿ ಸೇವಿಸಿ,,,,,,,,,,,,,,,,,,,,,,,,

English summary

20 tips to get the perfect body

Perfect body is a gift for healthy living. But certain things to be carried carefully to get this gift. Here are 20 tips to get perfect body,
Story first published: Monday, October 20, 2014, 18:03 [IST]
X
Desktop Bottom Promotion