For Quick Alerts
ALLOW NOTIFICATIONS  
For Daily Alerts

ನಿಮ್ಮನ್ನು ಆರೋಗ್ಯವಾಗಿಡಬಲ್ಲ 17 ಸೂಪರ್ ಫುಡ್

|

ಕೊಬ್ಬು ಕಡಿಮೆ ಇರುವ ಉತ್ತಮ ಕೊಲೆಸ್ಟ್ರಾಲ್‌ಗಳನ್ನು ಹೊಂದಿರುವ ಕೆಲವೊಂದು ಆಹಾರಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ನಿಮ್ಮನ್ನು ಆರೋಗ್ಯಕರವಾಗಿಸಲು ಅಗತ್ಯವಾಗಿರುವ ನ್ಯೂಟ್ರಿಯಂಟ್ಸ್‌ಗಳನ್ನು ಇವುಗಳು ಒಳಗೊಂಡಿವೆ. ದಿನವೂ ಈ ಆಹಾರಗಳನ್ನು ನಿಮಗೆ ಸೇವಿಸಬಹುದು.

ಇಲ್ಲಿರುವಂತಹ ಕೆಲವೊಂದು ಸೂಪರ್ ಫುಡ್‌ಗಳು ನಿಮಗೆ ನೆರವಾಗಬಹುದು. ನಿಮ್ಮ ದೇಹ ಮತ್ತು ಸೌಂದರ್ಯ ನೀವು ಏನು ತಿನ್ನುತ್ತೀರಿ ಎನ್ನುವುದರ ಮೇಲೆ ಅವಲಂಬಿಸಿರುತ್ತದೆ. ನೀವು ಕೆಟ್ಟ ಆಹಾರ ಕ್ರಮವನ್ನು ಅನುಸರಿಸುತ್ತಿದ್ದರೂ ಈ ಆಹಾರಗಳು ನಿಮ್ಮನ್ನು ಕೆಟ್ಟ ಪರಿಣಾಮದಿಂದ ರಕ್ಷಿಸುತ್ತದೆ.

ನಿಮ್ಮ ಆಹಾರ ಕ್ರಮದಲ್ಲಿ ಈ ಆಹಾರಗಳನ್ನು ಸೇರಿಸಲು ಪ್ರಯತ್ನಿಸಿ ಮತ್ತು ನಿಮ್ಮ ದೇಹ ಮತ್ತು ಮನಸ್ಸಿನ ಮೇಲಾಗುವ ವ್ಯತ್ಯಾಸವನ್ನು ತಿಳಿದುಕೊಳ್ಳಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ನೀವು ಪ್ರತೀ ದಿನ ಸೇವಿಸಬಹುದಾದ 10 ಆಹಾರಗಳು

ಮೊಟ್ಟೆ:

ಮೊಟ್ಟೆ:

ಎಲ್ಲಾ ಕಾಲದಲ್ಲೂ ಮೊಟ್ಟೆ ಸಿಗುತ್ತದೆ. ಎರಡು ಬೇಯಿಸಿದ ಮೊಟ್ಟೆಗಳನ್ನು ನಿತ್ಯವೂ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಅತೀ ಉತ್ತಮ. ಬಲವನ್ನು ವರ್ಧಿಸಿ ಉತ್ತಮ ಕೊಲೆಸ್ಟ್ರಾಲ್ ಅನ್ನು ಮೊಟ್ಟೆ ಪೂರೈಸುತ್ತದೆ. ಅಲ್ಲದೆ ಪ್ರೋಟಿನ್, ವಿಟಮಿನ್ ಮತ್ತು ಮಿನರಲ್‌‌ಗಳಿಂದ ಸಮೃದ್ಧವಾಗಿರುವ ಮೊಟ್ಟೆಯು ನಿಮ್ಮ ಏಕಾಗ್ರತೆ ಮತ್ತು ಸಮತೋಲಿನ ತೂಕ, ಮೆದುಳಿನ ಬೆಳವಣಿಗೆ, ದೃಷ್ಟಿ ಬಲಗೊಳ್ಳಲು, ರಕ್ತ ಹೆಪ್ಪುಗಟ್ಟುವಿಕೆ ತಡೆಯುತ್ತದೆ ಎಂದು ಪೋಷಕಾಂಶ ತಜ್ಞೆ ಪೂಜಾ ಮಖಿಜಾ ಹೇಳುತ್ತಾರೆ.

ಬ್ಲ್ಯೂ ಬೆರಿಗಳು:

ಬ್ಲ್ಯೂ ಬೆರಿಗಳು:

ಬ್ಲ್ಯೂ ಬೆರಿಗಳಲ್ಲಿ ಗರಿಷ್ಠ ಮಟ್ಟದ ಆ್ಯಂಟಿಆಕ್ಸಿಡೆಂಟ್‌ಗಳಿವೆ. ಇದು ರಕ್ತದಲ್ಲಿನ ಕೊಬ್ಬಿನ ಅಂಶವನ್ನು ಕಡಿಮೆಗೊಳಿಸಿ ಗ್ಲೂಕೋಸ್ ಮತ್ತು ಇನ್ಸುಲಿನ್ ಅಂಶವನ್ನು ನಿಯಂತ್ರಿಸುತ್ತದೆ. ಆದ್ದರಿಂದ ಇದು ಹೃದಯಕ್ಕೆ ಅತಿ ಅವಶ್ಯಕ. ಮತ್ತು ಮಧುಮೇಹವನ್ನು ತಡೆಗಟ್ಟುವಲ್ಲೂ ಇದು ಸಹಕಾರಿ.

ಕುಂಬಳಕಾಯಿ:

ಕುಂಬಳಕಾಯಿ:

ಇದರ ಬೀಜ ಮತ್ತು ಸಿಪ್ಪೆ ಹಲವಾರು ಗುಣಗಳನ್ನು ಹೊಂದಿರುವಂತಹ ಸೂಪರ್ ಫುಡ್. ಇದರಲ್ಲಿ ಉನ್ನತ ಮಟ್ಟದ ಆ್ಯಂಟಿ ಆಕ್ಸಿಡೆಂಟ್, ವಿಟಮಿನ್ ಎ, ಸಿ, ಕೆ ಮತ್ತು ಈ ಇದೆ. ಸಂಧಿವಾತ ಸಮಸ್ಯೆ ಇರುವವರು ಪ್ರತೀದಿನ ಕುಂಬಳಕಾಯಿ ಬೀಜವನ್ನು ತಿನ್ನುವುದು ಒಳ್ಳೆಯದು. ಇದರಲ್ಲಿರುವ ಸತುವಿನಂಶ ಸಂಧಿವಾತ ಕಾಯಿಲೆಯ ವಿರುದ್ಧ ಹೋರಾಡುತ್ತದೆ.

ಕಿತ್ತಳೆ:

ಕಿತ್ತಳೆ:

ಕಿತ್ತಳೆಯಲ್ಲಿ ವಿಟಮಿನ್ ಸಿ ಅಗಾಧವಾಗಿದೆ ಅಲ್ಲದೆ ಈ ಹಣ್ಣು ಅಸ್ತಮಾ, ಕಿಡ್ನಿ ಕಲ್ಲು, ಅಧಿಕ ರಕ್ತದೊತ್ತಡ, ಸಂಧಿವಾತ, ಕೊಲೆಸ್ಟ್ರಾಲ್ ಕಡಿಮೆ ಮಾಡಿ ಡಯಾಬಿಟಿಸ್‌ನ್ನು ತಡೆಯುತ್ತದೆ, ಹಾಗೂ ತ್ವಚೆಯ ಅನೇಕ ಸಮಸ್ಯೆಗಳಿಗೆ ಕಿತ್ತಳೆಯ ಸಿಪ್ಪೆಯಿಂದ ನಾವು ಪರಿಹಾರವನ್ನು ಕಂಡುಕೊಳ್ಳಬಹುದು. ಇದನ್ನು ಬಳಸಿ ಫೇಶಿಯಲ್ ಮಾಡಿದರೆ ಮುಖದ ಬಿಳುಪು ಹೆಚ್ಚುವುದು.

ಹೂಕೋಸು:

ಹೂಕೋಸು:

ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿರುವ ಈ ಸೂಪರ್ ಫುಡ್ ರಕ್ತದೊತ್ತಡ, ಡಯಾಬಿಟಿಸ್, ಆಸ್ಟಿಯೊಪೊರೋಸಿಸ್ ಇರುವವರಿಗೆ ನೆರವಾಗುತ್ತದೆ.

ವಾಲ್ ನಟ್ಸ್:

ವಾಲ್ ನಟ್ಸ್:

ಮೆದುಳಿನಂತೆ ಕಾಣುವ ಈ ಬೀಜವು ಮೆದುಳಿಗೆ ತುಂಬಾ ಒಳ್ಳೆಯದು. ವಾಲ್ ನಟ್ಸ್ ನಿಮ್ಮ ಹೃದಯ, ಮನಸ್ಥಿತಿ, ಮೂಳೆ ಆರೋಗ್ಯ ಮತ್ತು ತೂಕ ಇಳಿಸಲು ಅದೇ ರೀತಿ ನಿದ್ರಾಹೀನತೆ, ಪಿತ್ತಗಲ್ಲು, ಮಧುಮೇಹ ಮತ್ತು ಕ್ಯಾನ್ಸರ್ ತಡೆಗಟ್ಟಲು ನೆರವಾಗುತ್ತದೆ.

ಮೊಸರು:

ಮೊಸರು:

ಮೊಸರಿನಲ್ಲಿ ಅನೇಕ ಪೋಷಕಾಂಶ ಮತ್ತು ಆರೋಗ್ಯಕ್ಕೆ ಅಗತ್ಯವಿರುವ ಅಂಶವಿದೆ. ಕೇವಲ ಆರೋಗ್ಯಕ್ಕೆ ಮಾತ್ರವಲ್ಲ, ಮೊಸರನ್ನು ಸೌಂದರ್ಯ ವೃದ್ಧಿಗೂ ಬಳಸಲಾಗುತ್ತೆ.

ಮೊಸರು ಜೀರ್ಣಾಂಗವ್ಯೂಹವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ನೆರವಾಗುತ್ತದೆ. ಇದರಿಂದ ಮಲಬದ್ಧತೆ, ಅತಿಸಾರ, ಲ್ಯಾಕ್ಟೋಸ್ ಅಸಹಿಷ್ಣುತೆ, ಕರುಳಿನ ಕ್ಯಾನ್ಸರ್ ಮತ್ತು ಕರುಳಿನ ಕಾಯಿಲೆ ನಿಯಂತ್ರಿಸಲು ನೆರವಾಗುತ್ತದೆ.

ಗ್ರೀನ್ ಟೀ:

ಗ್ರೀನ್ ಟೀ:

ಗ್ರೀನ್ ಟೀಯು ನಿಮ್ಮ ಕರುಳಿನಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳನ್ನು ಕೊಂದು ಸೋಂಕುಗಳ ವಿರುದ್ಧ ಹೋರಾಡುವ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಅದರ ಬದಲಿಗೆ ಸ್ಥಾನಾಂತರಿಸುತ್ತದೆ. ನಿತ್ಯವೂ 2 ಲೋಟಗಳಷ್ಟು ಗ್ರೀನ್ ಟೀಯನ್ನು ಸೇವಿಸುವುದು ಪರಿಣಾಮಕಾರಿ ಚಿಕಿತ್ಸೆಯಾಗಿದೆ. ನೀರಿನೊಂದಿಗೆ ಜೇನು ಬೆರೆಸಿ ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ಸೇವಿಸುವುದು ಮತ್ತು ಸಂಜೆಯ ಸಮಯದಲ್ಲಿ ಅಂದರೆ ಊಟದ ನಂತರ ಸೇವಿಸುವುದು ಒಳ್ಳೆಯದು. ಹಾಲಿನ ಚಹಾದ ಬದಲಿಗೆ ಗ್ರೀನ್ ಟೀಯನ್ನು ಸೇವಿಸುವುದು ಹೊಟ್ಟೆ ನೋವನ್ನು ಹೋಗಲಾಡಿಸುತ್ತದೆ. ಗ್ರೀನ್ ಟೀಯೊಂದಿಗೆ ಸಣ್ಣ ತುಂಡು ಶುಂಠಿಯನ್ನು ಬೆರೆಸಿ ಸೇವಿಸುವುದು ಆರೋಗ್ಯಕ್ಕೆ ಉತ್ತಮ.

ಪಾಲಕ:

ಪಾಲಕ:

ಪಾಲಕವು ಪೌಷ್ಠಿಕಾಂಶಗಳನ್ನು ಹೊಂದಿರುವಂತಹ ಆಹಾರ. ಇದರಲ್ಲಿ ಕೇವಲ ಕಬ್ಬಿನಾಂಶ ಮಾತ್ರವಲ್ಲದೆ ವಿಟಮಿನ್, ಮಿನರಲ್ ಮತ್ತು ಫೈಟೋನ್ಯೂಟ್ರಿಯೆಂಟ್ಸ್ ಗಳಿವೆ. ಈ ತರಕಾರಿಯು ನಿಮ್ಮ ಹೃದಯವನ್ನು ಕಾಪಾಡುತ್ತದೆ. ಜೀರ್ಣಾಂಗವ್ಯೂಹದ ಆರೋಗ್ಯ ಕಾಪಾಡುತ್ತದೆ. ನಿಮ್ಮ ಮೆದುಳು ಯುವ ಮತ್ತು ಕ್ರಿಯಾತ್ಮಕವಾಗಿರುವಂತೆ ನೋಡಿಕೊಳ್ಳುತ್ತದೆ.

ಓಟ್ಸ್‌:

ಓಟ್ಸ್‌:

ಓಟ್ಸ್‌ನಲ್ಲಿ ಕರಗುವ ಮತ್ತು ಕರಗದ ನಾರಿನಾಂಶಗಳು ಸಮೃದ್ಧವಾಗಿದೆ. ಇದರಲ್ಲಿರುವ ನಾರಿನಾಂಶದಿಂದ ಕೊಲೆಸ್ಟ್ರಾಲ್ ಮತ್ತು ರಕ್ತದ ಸಕ್ಕರೆಯನ್ನು ಕಡಿಮೆ ಮಾಡಬಹುದು. ಓಟ್ಸ್ ತಿಂದರೆ ಹೊಟ್ಟೆ ತುಂಬಿದಂತಾಗಿ ಹಸಿವಿನ ಭಾವನೆಯಾಗುವುದಿಲ್ಲ. ತೂಕ ಇಳಿಸಿಕೊಳ್ಳಲು ಹಸಿವಿನ ಮೇಲೆ ನಿಯಂತ್ರಣ ಹೇರಬೇಕು ಮತ್ತು ಆರೋಗ್ಯಕರವಾಗಿರುವುದನ್ನು ತಿನ್ನಬೇಕು. ನಾರಿನಾಂಶ ಹೆಚ್ಚಾಗಿರುವ ಆಹಾರವು ನಿಮ್ಮ ಹೃದಯಕ್ಕೆ ತುಂಬಾ ಒಳ್ಳೆಯದು.

ಅಗಸೆ ಬೀಜ:

ಅಗಸೆ ಬೀಜ:

ಅಗಸೆ ಬೀಜದಲ್ಲಿ ನಾರಿನಾಂಶ, ಒಮೆಗಾ3 ಸಮೃದ್ಧವಾಗಿದೆ ಮತ್ತು ಇದು ನೈಸರ್ಗಿಕವಾಗಿ ಮಲವಿಸರ್ಜನೆಯಾಗುವಂತೆ ಮಾಡುತ್ತದೆ. ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್, ಪಾರ್ಶ್ವವಾಯು ಮತ್ತು ಮಧುಮೇಹದ ಅಪಾಯ ಕಡಿಮೆ ಮಾಡಲು ಇದು ನೆರವಾಗಿರುವ ಹಲವಾರು ಸಾಕ್ಷ್ಯಗಳಿವೆ. ಶತಮಾನಗಳಿಂದಲೂ ಈ ಸಣ್ಣ ಬೀಜವು ದೊಡ್ಡ ಮಟ್ಟದ ಲಾಭಗಳನ್ನು ಒದಗಿಸುತ್ತಿದೆ.

ವೀಟ್ ಗ್ರಾಸ್:

ವೀಟ್ ಗ್ರಾಸ್:

ವೀಟ್ ಗ್ರಾಸ್ ಯಾವಾಗಲೂ ಹಸಿರಾಗಿಯೇ ಇರುತ್ತದೆ. ಈ ಆಹಾರವು ನಿಮ್ಮ ಪಿತ್ತಜನಕಾಂಗವನ್ನು ಶುದ್ದೀಕರಿಸುತ್ತದೆ. ಹಿಮೋಗ್ಲೋಬಿನ್ ಉತ್ಪಾದನೆ ಹೆಚ್ಚಿಸುತ್ತದೆ. ಪ್ರತಿರೋಧಕ ಶಕ್ತಿ ಹೆಚ್ಚಿಸುತ್ತದೆ, ಗಾಯ ನಿವಾರಿಸುತ್ತದೆ, ರಕ್ತ ಶುದ್ಧೀಕರಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಸಾಲ್ಮನ್:

ಸಾಲ್ಮನ್:

ಸಾಲ್ಮನ್ ನಲ್ಲಿರುವ ಒಮೆಗಾ-3 ಆಮ್ಲವು ಇದನ್ನು ಒಂದು ಅತ್ಯಾದ್ಭುತವಾದ ಸೂಪರ್ ಫುಡ್ ಆಗಿ ಮಾಡಿದೆ. ಸಾಲ್ಮನ್ ಹೃದಯದ ಕಾಯಿಲೆ ವಿರುದ್ಧ ಹೋರಾಡುತ್ತದೆ, ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ, ಮಂಡಿಗಳ ರಕ್ಷಣೆ, ಮನಸ್ಥಿತಿ ಉತ್ತಮಪಡಿಸಿ, ಶುಷ್ಕ ಕಣ್ಣಿನಂತಹ ಕಣ್ಣಿನ ಸಮಸ್ಯೆಗಳನ್ನು ಕೂಡ ನಿವಾರಿಸುತ್ತದೆ.

ಟೊಮೆಟೊ:

ಟೊಮೆಟೊ:

ಈ ಸೂಪರ್ ಫುಡ್ ಲೈಕೊಪೀನ್ ನಿಂದ ತನ್ನ ಕೆಂಪು ಬಣ್ಣವನ್ನು ಪಡೆದಿದೆ. ಲೈಕೊಪೀನ್ ಆ್ಯಂಟಿಆಕ್ಸಿಡೆಂಟ್ ಆಗಿದ್ದು, ಇದು ನೈಸರ್ಗಿಕವಾಗಿ ದೇಹದಲ್ಲಿರುವುದಿಲ್ಲ ಮತ್ತು ಇದನ್ನು ಹೊರಗಿನ ಆಹಾರದ ಮೂಲಕ ದೇಹವು ಪಡೆಯುತ್ತದೆ. ಟೊಮೆಟೋದಿಂದ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ನಿಯಂತ್ರಿಸಬಹುದು. ಇದು ಕೊಲೆಸ್ಟ್ರಾಲ್ ಕಡಿಮೆ ಮಾಡಲು ನೆರವಾಗುತ್ತದೆ.

ಬಾಳೆಹಣ್ಣು:

ಬಾಳೆಹಣ್ಣು:

ಪೊಟಾಶಿಯಂ ಮತ್ತು ನಾರಿನಾಂಶವು ಅಧಿಕವಾಗಿರುವ ಬಾಳೆಹಣ್ಣಿನಿಂದ ನಿಮ್ಮ ದೇಹದ ರಕ್ತದೊತ್ತಡ ಕಡಿಮೆ ಮಾಡಬಹುದು, ಮೂಳೆಗಳ ಆರೋಗ್ಯ ಕಾಪಾಡಬಹುದು, ಜೀರ್ಣಾಂಗ ಕ್ರಿಯೆಯನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು ಮತ್ತು ಕ್ಯಾನ್ಸರ್ ಬಾರದಂತೆ ತಡೆಯಬಹುದು ಎಂದು ತಜ್ಞೆ ಪೂಜಾ ಹೇಳುತ್ತಾರೆ.

ಸ್ಟ್ರಾಬೆರಿ:

ಸ್ಟ್ರಾಬೆರಿ:

ಸ್ಟ್ರಾಬೆರಿ ನೋಡಲು ಮತ್ತು ರುಚಿಯಲ್ಲಿ ಮಾತ್ರ ಅಮೋಘವಲ್ಲ. ಇದು ಆ್ಯಂಟಿಆಕ್ಸಿಡೆಂಟ್ ಸೂಪರ್ ಫುಡ್ ಮತ್ತು ಹೃದಯ ರಕ್ತನಾಳಕ್ಕೆ ತುಂಬಾ ಲಾಭಕಾರಿ. ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುವ ಕಾರಣ ಡಯಾಬಿಟಿಸ್ ಇರುವವರಿಗೆ ಅತ್ಯುತ್ತಮ ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ.

Read more about: health wellness
English summary

17 foods that make you radiant

Here are a few superfoods that can help. Remember, your body and beauty is what you eat. Although you had some bad diet, these foods help to overcome bad effects of that.
X
Desktop Bottom Promotion