For Quick Alerts
ALLOW NOTIFICATIONS  
For Daily Alerts

ತೂಕ ಕಡಿಮೆ ಮಾಡಿಕೊಳ್ಳುವ ಕುರಿತು ಇರುವ 15 ಮೂಢನಂಬಿಕೆಗಳು

By Deepak M
|

ತೂಕ ಕಡಿಮೆ ಮಾಡಿಕೊಳ್ಳುವುದು ಎಂದರೆ ಕೇವಲ ಕಡಿಮೆ ತಿನ್ನುವುದು ಮತ್ತು ವ್ಯಾಯಾಮ ಹೆಚ್ಚು ಮಾಡುವುದು ಮಾತ್ರವಲ್ಲ. ಇದು ತೂಕ ಕಡಿಮೆ ಮಾಡಿಕೊಳ್ಳುವ ಕುರಿತಂತೆ ಇರುವ ಪ್ರಸಿದ್ಧ ಮೂಢ ನಂಬಿಕೆ. ತೂಕ ಕಡಿಮೆ ಮಾಡಿಕೊಳ್ಳುವುದು ಅತ್ಯಂತ ಸುಲಭವಾದ ವಿಚಾರ, ಆದರೆ ಇಂತಹ ಮೂಢ ನಂಬಿಕೆಗಳು ಹಲವಾರು ನಮ್ಮ-ನಿಮ್ಮಂತಹವರನ್ನು ಕಾಡುತ್ತಿವೆ, ಮೋಸ ಮಾಡುತ್ತಲೇ ಇವೆ.

ಫಿಟ್‍ನೆಸ್ ಕಾಪಾಡಿಕೊಳ್ಳಬೇಕೆಂಬ ಉತ್ಸಾಹಿಗಳು ತೂಕ ಕಡಿಮೆ ಮಾಡಿಕೊಳ್ಳುವ ಸತ್ಯಾಸತ್ಯತೆಗಳ ನಡುವಿನ ವ್ಯತ್ಯಾಸಗಳನ್ನು ಅರಿತಿರಬೇಕಾದುದು ತುಂಬಾ ಮುಖ್ಯ. ಸ್ಕೆಚ್ ಕ್ಲಿನಿಕ್‍ನ ವೆಯ್ಟ್ ಮ್ಯಾನೇಜ್‍ಮೆಂಟ್ ಕನ್ಸಲ್ಟೆಂಟ್ ರಿದ್ದೇಶ್ ಜಾನಿ ತೂಕ ಕಡಿಮೆ ಮಾಡಿಕೊಳ್ಳುವ ಕುರಿತು ಇರುವ 15 ಮೂಢ ನಂಬಿಕೆಗಳನ್ನು ಇಲ್ಲಿ ಬಯಲು ಮಾಡಿದ್ದಾರೆ.

ತೂಕ ಇಳಿಕೆಗೆ ಅತ್ಯುತ್ತಮವಾಗಿರುವ ಕಾರ್ಡಿಯೋ ವ್ಯಾಯಾಮ

ಒಂದು ಹೊತ್ತು ಊಟ

ಒಂದು ಹೊತ್ತು ಊಟ

ಮೂಡ ನಂಬಿಕೆ; ತೂಕ ಕಡಿಮೆ ಮಾಡಿಕೊಳ್ಳಲು ಒಂದು ಹೊತ್ತು ಊಟ ಬಿಡುವುದು ಒಳ್ಳೆಯದು.

ಸತ್ಯ; ಒಂದು ಹೊತ್ತು ಊಟ ಬಿಡುವುದರಿಂದ ನಿಮ್ಮ ದೇಹದಲ್ಲಿ ನಡೆಯುವ ಚಯಾಪಚಯಗಳ ವೇಗವು ಕಡಿಮೆಯಾಗುತ್ತವೆ. ಇದರಿಂದ ನಮ್ಮ ದೇಹದಲ್ಲಿರುವ ಕ್ಯಾಲೋರಿಗಳನ್ನು ಇದು ಸಂರಕ್ಷಿಸಲು ಆರಂಭಿಸುತ್ತದೆ. ಜೊತೆಗೆ ಒಂದು ಹೊತ್ತು ಊಟ ಬಿಟ್ಟರೆ ಮುಂದಿನ ಊಟ ಮಾಡುವಾಗ ಹೆಚ್ಚು ತಿನ್ನ ಬೇಕೆನಿಸುತ್ತದೆ.ಹೀಗಾಗಿ ಊಟ ಬಿಡುವ ಮುನ್ನ ಮೊದಲು ಆಲೋಚಿಸಿ. ತೂಕ ಇಳಿಸಿಕೊಳ್ಳಲು ದಿನಕ್ಕೆ ಮೂರು ಹೊತ್ತು ಊಟ ಮಾಡಿ. ಪ್ರತಿ ಮೂರು ಗಂಟೆಗೊಮ್ಮೆ ಪ್ರಮಾಣದಲ್ಲಿ ಸಣ್ಣ ತಿಂಡಿಯನ್ನು ಸೇವಿಸಿ.

ವ್ಯಾಯಾಮ

ವ್ಯಾಯಾಮ

ಮೂಢ ನಂಬಿಕೆ: ತೂಕ ಕಡಿಮೆ ಮಾಡಿಕೊಳ್ಳಲು ವ್ಯಾಯಾಮ ಮಾಡುವ ಅಗತ್ಯವಿಲ್ಲ. ಕೇವಲ ಪಥ್ಯವಿದ್ದರೆ ಸಾಕು.

ಸತ್ಯ; ಪಥ್ಯವಿರುವ ಜೊತೆಗೆ ವ್ಯಾಯಾಮವನ್ನು ಸಹ ಮಾಡಬೇಕು. ನಮಗೆ ಇಷ್ಟವಾಗುವ ಆಹಾರಗಳನ್ನು ಸೇವಿಸುವ ಚಪಲವನ್ನು ನಾವು ತಡೆಯಲು ಸಾಧ್ಯವಾಗುವುದಿಲ್ಲ. ಆದರೆ ಆ ಸೇವಿಸಿದ ಆಹಾರದಲ್ಲಿರುವ ಕ್ಯಾಲೋರಿಗಳನ್ನು ಕರಗಿಸುವ ಪ್ರಯತ್ನವನ್ನು ವ್ಯಾಯಾಮದ ಮೂಲಕ ಮಾಡಬಹುದು. ಪ್ರತಿ ನಿತ್ಯ ಪಥ್ಯದ ಜೊತೆಗೆ ವ್ಯಾಯಾಮ ಮಾಡುವುದರಿಂದ ತೂಕವನ್ನು ಕ್ಷಿಪ್ರವಾಗಿ ಇಳಿಸಿಕೊಳ್ಳಬಹುದು. ಪ್ರತಿನಿತ್ಯ ವೇಗವಾಗಿ 30 ನಿಮಿಷ ನಡೆಯುವುದರ ಮೂಲಕ ಹೃದಯದ ಕಾರ್ಯಕ್ಷಮತೆಯನ್ನು ಹೆಚ್ಚಿಸಬಹುದು ಮತ್ತು ಆ ಮೂಲಕ ನಮ್ಮ ತೂಕವನ್ನು ಇಳಿಸಿಕೊಳ್ಳಬಹುದು. ಇದರ ಜೊತೆಗೆ ವ್ಯಾಯಾಮ ಮಾಡುವುದರಿಂದ ಹೃದಯದ ಆರೋಗ್ಯ, ಕಡಿಮೆ ರಕ್ತದೊತ್ತಡ, ಮುಂತಾದ ಸಮಸ್ಯೆಗಳನ್ನು ಹೋಗಲಾಡಿಸಿಕೊಳ್ಳಬಹುದು.

ಕಾರ್ಬೋಹೈಡ್ರೇಟ್‍ಗಳು

ಕಾರ್ಬೋಹೈಡ್ರೇಟ್‍ಗಳು

ಮೂಢನಂಬಿಕೆ ; ಕಾರ್ಬೋಹೈಡ್ರೇಟ್‍ಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.

ಸತ್ಯ ; ಕಾರ್ಬೋಹೈಡ್ರೇಟ್‍ಗಳು ನಿಮ್ಮ ದೇಹದ ಇಂಜಿನ್ನಿಗೆ ಬೇಕಾದ ಮೂಲ ಇಂಧನವಾಗಿದೆ. ಕಾರ್ಬೋಹೈಡ್ರೇಟ್‍ಗಳು ಒಂದು ಗ್ರಾಂ ಕೊಬ್ಬು ನೀಡುವ ಸಾಮರ್ಥ್ಯವನ್ನು ಅದರ ಅರ್ಧ ಭಾಗದಲ್ಲಿ ನಿಮಗೆ ಒದಗಿಸುತ್ತವೆ. ಸಮಸ್ಯೆಯೇನೆಂದರೆ ಜನರು ಇಂದು ಸಕ್ಕರೆ ಮತ್ತು ಕಾರ್ನ್ ಸಿರಪ್‍ನಂತಹ ಅಧಿಕ ಕಾರ್ಬೋಹೈಡ್ರೇಟ್‍ಗಳಿರುವ ಆಹಾರಗಳನ್ನು ಸೇವಿಸುತ್ತಿದ್ದಾರೆ. ಆದರೆ ಕಡಿಮೆ ಕಾರ್ಬೋಹೈಡ್ರೇಟ್‍ಗಳಿರುವ ಆಹಾರಗಳನ್ನು ಸೇವಿಸುವುದರ ಮೂಲಕ ಅಧಿಕ ಕಾರ್ಬೋಹೈಡ್ರೇಟ್‍ಗಳನ್ನು ದೇಹದಿಂದ ಹೋಗಲಾಡಿಸಬಹುದು ಮತ್ತು ಆ ಮೂಲಕ ತೂಕವನ್ನು ಸಹ ಕಡಿಮೆ ಮಾಡಿಕೊಳ್ಳಬಹುದು.

ಇಂತಹ ತೂಕ ಕಡಿಮೆ ಮಾಡಿಕೊಳ್ಳುವ ಪ್ರಕ್ರಿಯೆಯು ಬಹುತೇಕ ಮಂದಿಗೆ ಸರಿ ಹೊಂದದಿರಬಹುದು. ಆದರೂ ಸಹ ಸಂಶೋಧನೆಗಳ ಪ್ರಕಾರ ನಮ್ಮ ಆಹಾರದಲ್ಲಿ ಕಡಿಮೆ ಕೊಬ್ಬು ಮತ್ತು ವೋಲ್ ಗ್ರೇನ್ ಹಾಗೂ ಪಿಷ್ಟದಂತಹ ಸಂಕೀರ್ಣವಾದ ಕಾರ್ಬೋಹೈಡ್ರೇಟ್‍ಗಳನ್ನು ಯಥೇಚ್ಛವಾಗಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಂತೆ.

ಕಡಿಮೆ ಕೊಬ್ಬು ಮತ್ತು ಕೊಬ್ಬು ರಹಿತ ಆಹಾರ

ಕಡಿಮೆ ಕೊಬ್ಬು ಮತ್ತು ಕೊಬ್ಬು ರಹಿತ ಆಹಾರ

ಮೂಢನಂಬಿಕೆ ; ಕಡಿಮೆ ಕೊಬ್ಬು ಮತ್ತು ಕೊಬ್ಬು ರಹಿತ ಆಹಾರಗಳಲ್ಲಿ ಕಡಿಮೆ ಕ್ಯಾಲೋರಿ ಇರುತ್ತದೆ ,!.?

ಸತ್ಯ: ಕಡಿಮೆ ಕೊಬ್ಬು ಮತ್ತು ಕೊಬ್ಬು ರಹಿತ ಆಹಾರಗಳಲ್ಲಿ ಕಡಿಮೆ ಕ್ಯಾಲೋರಿ ಇರುತ್ತದೆ ಎಂಬುದು ಅಸಲು ಇಲ್ಲಿ ಮುಖ್ಯವಾದ ಅಂಶವೇ ಅಲ್ಲ. ಏಕೆಂದರೆ ಬಹುತೇಕ ಆಹಾರ ಪದಾರ್ಥಗಳು ಕಡಿಮೆ ಕೊಬ್ಬು ಹೊಂದಿವೆ ಎಂದು ಹೇಳಿಕೊಂಡರು, ಅವುಗಳಲ್ಲಿರುವ ಇನ್ನಿತರ ಕಾರ್ಬೋಹೈಡ್ರೆಟ‌ಗಳು ಮತ್ತು ಸಕ್ಕರೆಗಳು ಆ ಆಹಾರಕ್ಕೆ ಮತ್ತಷ್ಟು ಕ್ಯಾಲೋರಿಗಳನ್ನು ಸೇರ್ಪಡೆ ಮಾಡಿ ಕೊಬ್ಬನ್ನು ಹೆಚ್ಚಿಸುತ್ತವೆ. ಸೇಬಿನಲ್ಲಿ ಕಡಿಮೆ ಕೊಬ್ಬು ಇರುತ್ತದೆ ಹಾಗೆಂದು ಅದರಲ್ಲಿ ಕ್ಯಾಲೋರಿ ಇರುವುದಿಲ್ಲವಲ್ಲ. ಅದಕ್ಕಾಗಿ ನೀವು ಸೇವಿಸುವ ಆಹಾರ ಪದಾರ್ಥದ ಕ್ಯಾಲೋರಿಗಳನ್ನು ಪರೀಕ್ಷಿಸಿ ನಂತರ ಸೇವಿಸಿ.

 45 ನಿಮಿಷ ವರ್ಕ್‌ಔಟ್

45 ನಿಮಿಷ ವರ್ಕ್‌ಔಟ್

ಮೂಢನಂಬಿಕೆ ; ವ್ಯಾಯಾಮದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರೆ ನೀವು ಕನಿಷ್ಠ 45 ನಿಮಿಷ ವರ್ಕ್‌ಔಟ್ ಮಾಡಬೇಕು.

ಸತ್ಯ; ಕನಿಷ್ಠ 30 ನಿಮಿಷ ನಡಿಗೆ ಮಾಡಿದರು ಸಾಕು ನಿಮ್ಮ ದೇಹದಲ್ಲಿರುವ ಕ್ಯಾಲೋರಿಗಳು ಕರಗುತ್ತವೆ. ಅದಕ್ಕಾಗಿ ದಿನದಲ್ಲಿ 5 ಬಾರಿ 30 ನಿಮಿಷ ಹಾಗೆಯೇ ಸುಮ್ಮನೆ ನಡೆಯಲು ಪ್ರಾರಂಭಿಸಿ. ಆನಂತರ ಆ ನಡಿಗೆಯೇ ನಿಮ್ಮ ಮೈ ಮನಗಳಿಗೆ ಮುದ ನೀಡಿ ಅಭ್ಯಾಸವಾಗುವಂತೆ ಮಾಡುತ್ತದೆ. ಅಭ್ಯಾಸವಾದ ಮೇಲೆ ನೀವು ವೇಗದ ನಡಿಗೆಯನ್ನು ಪ್ರಯತ್ನಿಸಬಹುದು.

ರಾತ್ರಿ ತಡವಾಗಿ ಊಟ ಮಾಡುವುದು

ರಾತ್ರಿ ತಡವಾಗಿ ಊಟ ಮಾಡುವುದು

ಮೂಢನಂಬಿಕೆ: ರಾತ್ರಿ ತಡವಾಗಿ ಊಟ ಮಾಡುವುದು ಅಥವಾ ಮಲಗುವ ಮುನ್ನ ಊಟ ಮಾಡುವುದರಿಂದ ತೂಕ ಹೆಚ್ಚಾಗುತ್ತದೆ.

ಸತ್ಯ; ಕ್ಯಾಲೋರಿಗಳು ಎಂದೆಂದಿಗು ಕ್ಯಾಲೋರಿಗಳೇ. ನೀವು ಅಧಿಕ ಪ್ರಮಾಣದಲ್ಲಿ ಕ್ಯಾಲೋರಿಗಳನ್ನು ಸೇವಿಸಿ, ವ್ಯಾಯಾಮ ಮಾಡದಿದ್ದರೆ, ನಿಮ್ಮ ತೂಕ ನಿಸ್ಸಂಶಯವಾಗಿ ಹೆಚ್ಚಾಗುತ್ತದೆ. ರಾತ್ರಿ ತಡವಾಗಿ ಊಟ ಮಾಡಿ, ಸುಮ್ಮನೆ ಹೋಗಿ ಮಲಗುವುದು ಅಂತಹ ಹೇಳಿಕೊಳ್ಳುವಂತಹ ವಿಚಾರವೇ ಅಲ್ಲ. ಯಾವಾಗ ನೀವು ಹೆಚ್ಚಿನ ಕ್ಯಾಲೋರಿ ಇರುವ ಕೊಬ್ಬಿನಂತಹ ಆಹಾರಗಳನ್ನು ಸೇವಿಸಲು ಆರಂಭಿಸುತ್ತೀರೋ, ಆಗ ನಿಮ್ಮ ದೇಹವು ಆ ಕ್ಯಾಲೋರಿಗಳನ್ನು ಶೇಖರಿಸಿಡಲು ಆರಂಭಿಸುತ್ತದೆ. ಇದರ ಜೊತೆಗೆ ತಡವಾಗಿ ಊಟ ಮಾಡುವವರು ತಾವು ತಮಗೆ ಅಗತ್ಯವಾದ ಕ್ಯಾಲೋರಿಗಳಿಗಿಂತ ಹೆಚ್ಚಿನ ಪ್ರಮಾಣದ ಆಹಾರವನ್ನು ಸೇವಿಸಿದೆವು ಎಂದು ಭಾವಿಸುತ್ತಾರೆ.

 ಚಯಾಪಚಯ ಕ್ರಿಯೆ

ಚಯಾಪಚಯ ಕ್ರಿಯೆ

ಮೂಢನಂಬಿಕೆ; ನಾನು ಏಕೆ ಹೆಚ್ಚಿನ ತೂಕವನ್ನು ಹೊಂದಿದ್ದೇನೆ ಎಂದರೆ ನನ್ನ ಚಯಾಪಚಯ ಕ್ರಿಯೆಯು ನಿಧಾನವಾಗಿ ನಡೆಯುತ್ತದೆ.

ಸತ್ಯ; ತೂಕ ಹೆಚ್ಚಾಗುವ ವ್ಯಕ್ತಿಗಳಲ್ಲಿ ಕೇವಲ ದೇಹದ ಕೊಬ್ಬು ಮಾತ್ರ ಹೆಚ್ಚಾಗುವುದಿಲ್ಲ, ಬದಲಿಗೆ ಕೊಬ್ಬಿಗೆ ನೆರವು ನೀಡುವ ಸ್ನಾಯುಗಳು ಸಹ ಬೆಳೆಯುತ್ತವೆ. ನಿಮ್ಮ ತೂಕದಲ್ಲಿ ಒಟ್ಟಾರೆಯಾಗಿ 20-30 ಭಾಗ ತೂಕವು ಸ್ನಾಯುಗಳದ್ದೆ ಇರುತ್ತದೆ. ಸ್ನಾಯು ಕೋಶಗಳು ಕ್ಯಾಲೋರಿಯನ್ನು ಕರಗಿಸುತ್ತವೆ. ಹಾಗಾಗಿ ಹೆಚ್ಚಿನ ಸ್ನಾಯುಗಳು ಇರುವವರಲ್ಲಿ ಚಯಾಪಚಯ ಕ್ರಿಯೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತದೆ. ಹಾಗಾಗಿ ತೂಕ ಹೆಚ್ಚಿರುವವರು ತಮ್ಮ ಚಯಾಪಚಯ ಕ್ರಿಯೆಯ ವೇಗವನ್ನು ವೃದ್ಧಿಸುವ ನಿಟ್ಟಿನಲ್ಲಿ ಆಲೋಚಿಸಬೇಕು. ಹಾಗೆಂದು ಇದು ದೈಹಿಕ ಚಟುವಟಿಕೆಗಳ ಮೂಲಕ ಕ್ಯಾಲೋರಿಯನ್ನು ಕರಗಿಸುವ ಪ್ರಕ್ರಿಯೆಯನ್ನು ಒಳಗೊಂಡಿರುವುದಿಲ್ಲ.

ಫ್ಯಾಡ್ ಡಯಟ್

ಫ್ಯಾಡ್ ಡಯಟ್

ಮೂಢನಂಬಿಕೆ ; ತೂಕ ಇಳಿಸಲು ಫ್ಯಾಡ್ ಡಯಟ್ ಅತ್ಯುತ್ತಮ.

ಸತ್ಯ; ಫ್ಯಾಡ್ ಡಯಟ್ ( ಸೌತ್ ಬೀಚ್ ಡಯಟ್, ಬ್ಲಡ್ ಗ್ರೂಪ್ ಡಯಟ್, ಅಟ್ಕಿನ್ಸ್ ಡಯಟ್, ಗ್ಲಿಸೆಮಿಕ್ ಲೋಡ್ ಡಯಟ್ ಇತ್ಯಾದಿ) ಗಳು ತೂಕ ಇಳಿಸಿಕೊಳ್ಳಲು ಮಾತ್ರ ಉತ್ತಮವಲ್ಲ, ಜೊತೆಗೆ ತೂಕವನ್ನು ನಿಯಂತ್ರಿಸಿಕೊಳ್ಳಲು ಸಹ ಅತ್ಯುತ್ತಮವಾಗಿ ನೆರವಾಗುತ್ತವೆ. ಈ ಪಥ್ಯದ ಮೂಲಕ ನೀವು ತೂಕವನ್ನು ಕಡಿಮೆ ಮಾಡಬಹುದು. ಆದರೆ ಇದಕ್ಕಾಗಿ ನೀವು ಆಹಾರ ಸೇವಿಸುವ ಕ್ರಮವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಾಗುತ್ತದೆ. ಈ ಪಥ್ಯದ ಮೂಲಕ ಬಹುತೇಕ ಮಂದಿ ಅತಿ ಶೀಘ್ರವಾಗಿ ತಮ್ಮ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಪ್ರತಿದಿನ 800 ಕ್ಯಾಲೋರಿಗಳಿಗಿಂತ ಕಡಿಮೆ ಪ್ರಮಾಣದ ಆಹಾರವನ್ನು ಸೇವಿಸುವುದರಿಂದ ಹೃದಯದ ಸಮರ್ಪಕ ಕಾರ್ಯ ನಿರ್ವಹಣೆಗೆ ತೊಂದರೆಯಾಗುತ್ತದೆ. ಮುಂದೆ ಇದು ಅಪಾಯಕಾರಿ ಸಹ ಆಗಬಹುದು. ಅಧ್ಯಯನಗಳ ಪ್ರಕಾರ ನಾವು ತೂಕವನ್ನು ವಾರಕ್ಕೆ 1/2 ದಿಂದ 2 ಕೆ.ಜಿಯಷ್ಟು ತೂಕವನ್ನು ಆರೋಗ್ಯಕಾರಿ ಪಥ್ಯ, ವ್ಯಾಯಾಮ ಮುಂತಾದ ಚಟುವಟಿಕೆಗಳ ಮೂಲಕ ಕಡಿಮೆ ಮಾಡಿಕೊಳ್ಳುವುದು ನಿಜಕ್ಕು ಒಳ್ಳೆಯದಂತೆ. ಇದಕ್ಕಾಗಿ ಆರೋಗ್ಯಕಾರಿ ಆಹಾರ ಸೇವಿಸುವ ಕ್ರಮ ಮತ್ತು ದೈಹಿಕ ಚಟುವಟಿಕೆಗಳ ಹವ್ಯಾಸ ನಮಗೆ ಇರಬೇಕಾದುದು ಅವಶ್ಯಕ. ಇದರಿಂದ ತೂಕ ಕಡಿಮೆಯಾಗುವುದರ ಜೊತೆಗೆ ಟೈಪ್ 2 ಡಯಾಬಿಟಿಸ್, ಹೃದ್ರೋಗ ಮತ್ತು ಅಧಿಕ ರಕ್ತದೊತ್ತಡ ಬರದಂತೆ ತಡೆಗಟ್ಟಬಹುದು.

ಅಧಿಕ ಪ್ರೋಟಿನ್‍ಗಳು

ಅಧಿಕ ಪ್ರೋಟಿನ್‍ಗಳು

ಮೂಢ ನಂಬಿಕೆ : ಅಧಿಕ ಪ್ರೋಟಿನ್‍ಗಳು ತೂಕ ಇಳಿಸಿಕೊಳ್ಳಲು ಸಹಕರಿಸುತ್ತವೆ.

ಸತ್ಯ; ಮಾಂಸ, ಮೊಟ್ಟೆ ಮತ್ತು ಚೀಸ್‍ನಂತಹ ಅಧಿಕ ಪ್ರೋಟಿನ್ ಇರುವ ಆಹಾರ ಪದಾರ್ಥಗಳನ್ನು ಸೇವಿಸುವ ಆಹಾರ ಕ್ರಮ ನಿಜಕ್ಕು ಸರಿಯಾದುದಲ್ಲ. ಈ ರೂಪದಲ್ಲಿ ನೀವು ಅಧಿಕ ಕೊಬ್ಬು ಮತ್ತು ಕೊಲೆಸ್ಟ್ರಾಲ್‍ಗಳನ್ನು ಸೇವಿಸುತ್ತೀರಿ. ಇವು ಹೃದ್ರೋಗವನ್ನುಂಟು ಮಾಡುತ್ತವೆ. ಇನ್ನು ಕೆಲವೊಮ್ಮೆ ನೀವು ಹಣ್ಣು , ತರಕಾರಿ ಮತ್ತು ವೋಲ್ ಗ್ರೇನ್ಸ್ ಸೇವಿಸಬಹುದು. ಇವು ಡಯಟೆರಿ ಫೈಬರ್ ( ನಾರಿನಂಶ) ಮತ್ತು ಅಗತ್ಯವಾದ ವಿಟಮಿನ್ ಹಾಗು ಖನಿಜಗಳ ಕೊರತೆಯಿಂದ ಮಲಬದ್ಧತೆಯನ್ನು ಉಂಟು ಮಾಡಬಹುದು. ಜೊತೆಗೆ ಅಧಿಕ ಪ್ರೋಟಿನ್ ಇರುವ ಆಹಾರವನ್ನು ಸೇವಿಸುವುದರಿಂದ ನಿಮ್ಮಲ್ಲಿ ಓಕರಿಕೆ, ಸುಸ್ತು ಮತ್ತು ನಿಶ್ಶಕ್ತಿ ಕಾಡಬಹುದು.

ತೂಕ ಹೆಚ್ಚಾಗುವಿಕೆಗೆ ಅನುವಂಶಿಕ ಕಾರಣ

ತೂಕ ಹೆಚ್ಚಾಗುವಿಕೆಗೆ ಅನುವಂಶಿಕ ಕಾರಣ

ಮೂಢನಂಬಿಕೆ; ತೂಕ ಹೆಚ್ಚಾಗುವಿಕೆಯು ನಮ್ಮ ಪೋಷಕರಿಂದ ಅನುವಂಶಿಕವಾಗಿ ಬರುತ್ತದೆ.

ಸತ್ಯ; ನಮ್ಮ ದೇಹದಲ್ಲಿ ತಾತ ಮುತ್ತಾತರಿಂದ ಮೊಮ್ಮಕ್ಕಳವರೆಗು ಬಳುವಳಿಯಾಗಿ ಬರುವ ಕೊಬ್ಬು ಎನ್ನುವ ಯಾವುದೇ ವಂಶವಾಹಿಗಳು ಇಲ್ಲ. ಬಹುಶಃ ನಮ್ಮ ಪೋಷಕರು ತಮ್ಮ ಅನಾರೋಗ್ಯಕಾರಿ ಜೀವನ ಶೈಲಿಯ ಕಾರಣದಿಂದ ಸ್ಥೂಲ ಕಾಯರಾಗಿ ಇದ್ದಿರಬಹುದು. ಅವರ ಆಹಾರ ಪದ್ಧತಿ ಅವರನ್ನು ಹಾಗೆ ಮಾಡಿರಬಹುದು. ಹಾಗೆಂದು ಅವರ ಹಾಗೆ ನಾವು ಆಗುತ್ತೇವೆ ಎಂಬ ಮೂಢ ನಂಬಿಕೆ ಬಿಡಿ. ಆನಾರೋಗ್ಯಕಾರಿ ಹವ್ಯಾಸಗಳನ್ನು ಬಿಡಿ, ನಿಮ್ಮ ವಂಶವೃಕ್ಷದಲ್ಲಿ ನಿಮ್ಮಿಂದಲೆ ಆರೋಗ್ಯಕಾರಿ ಹವ್ಯಾಸಗಳು ಆರಂಭವಾಗಲಿ, ಎಲ್ಲರು ಅದನ್ನು ಅನುಸರಿಸಲಿ.

 ತೂಕ ಇಳಿಸಿಕೊಳ್ಳಲು ಕಾರ್ಡಿಯೋ ವ್ಯಾಯಾಮ

ತೂಕ ಇಳಿಸಿಕೊಳ್ಳಲು ಕಾರ್ಡಿಯೋ ವ್ಯಾಯಾಮ

ಮೂಢನಂಬಿಕೆ; ತೂಕ ಇಳಿಸಿಕೊಳ್ಳಬೇಕೆಂದರೆ ಹೆಚ್ಚೆಚ್ಚು ಕಾರ್ಡಿಯೋವನ್ನು ಮಾಡಬೇಕು.

ಸತ್ಯ: ನಿಮ್ಮ ತೂಕವನ್ನು ಇಳಿಸಿಕೊಳ್ಳಲು ನೀವು ಮೊದಲು ನಿಮ್ಮ ದೇಹಕ್ಕೆ ಶಾಕ್ ನೀಡಬೇಕು. ಇದುವರೆಗು ನೀವು ವ್ಯಾಯಾಮವನ್ನು ಮಾಡದಿದ್ದಲ್ಲಿ, ಇನ್ನು ಮುಂದಾದರು ಓಟವನ್ನು ಅಭ್ಯಾಸ ಮಾಡಿಕೊಂಡು ನಿಮ್ಮ ದೇಹಕ್ಕೆ ಶಾಕ್ ನೀಡಬಹುದು. ಇದರಿಂದ ನಿಮ್ಮ ದೇಹದ ತೂಕ ಸಹಜವಾಗಿ ಕಡಿಮೆಯಾಗುತ್ತದೆ. ಆದರೆ ಎಷ್ಟು ದಿನ ಓಡಬಲ್ಲಿರಿ, ಹೀಗೆಯೇ ಓಡುತ್ತಿದ್ದರೆ ನೀವು ತೆಳ್ಳಗಾಗಿ, ನಿಮ್ಮ ದೇಹಕ್ಕೆ ಅಗತ್ಯವಾದ ತೂಕವನ್ನು ಕಳೆದುಕೊಂಡು ಮತ್ತೆ ತೂಕ ಹೆಚ್ಚಿಸಿಕೊಳ್ಳುವ ಕಡೆಗೆ ಗಮನ ಹರಿಸಬೇಕಾಗಿ ಬಂದೀತು!. ಅದಕ್ಕಾಗಿ ಯಾವುದು ಅತಿಯಾಗಿ ಮಾಡುವುದು ಒಳ್ಳೆಯದಲ್ಲ. ಇದಕ್ಕಿರುವ ಪರಿಹಾರ ಮಾರ್ಗ ಹೀಗಿದೆ; ಯೋಗ, ಭಾರ ಎತ್ತುವುದು ಮತ್ತು ಕಾರ್ಡಿಯೋದಂತಹ ಚಟುವಟಿಕೆಗಳನ್ನು ಮಾಡಿ. ಭಾರ ಎತ್ತುವುದು ಮತ್ತು ಸ್ನಾಯುಗಳ ವರ್ಕ್ ಔಟ್ ನಿಮ್ಮ ದೇಹದ ತೂಕವನ್ನು ನಿಯಂತ್ರಣದಲ್ಲಿಡುತ್ತವೆ.

ಬೆಂದ ಆಹಾರವನ್ನು ಮಾತ್ರ ಸೇವಿಸಬೇಕು

ಬೆಂದ ಆಹಾರವನ್ನು ಮಾತ್ರ ಸೇವಿಸಬೇಕು

ಮೂಢನಂಬಿಕೆ ; ಬೆಂದ ಆಹಾರವನ್ನು ಮಾತ್ರ ಸೇವಿಸಬೇಕು, ಕರಿದ ಆಹಾರವನ್ನು ಸೇವಿಸಲೇಬಾರದು.

ಸತ್ಯ; ಮಾರುಕಟ್ಟೆಯಲ್ಲಿ " ಆರೋಗ್ಯಕಾರಿ" ಎಂಬ ಬೇಯಿಸಿದ ಪಿತ್ತವಿರುವ ತಿಂಡಿ ತಿನಿಸುಗಳು ಲಭ್ಯವಿವೆ. ಜನರು ಸಹ ಇವುಗಳಿಗೆ ಮರುಳಾಗಿ ಮುಗ್ಧತೆಯಿಂದ ಇವುಗಳನ್ನು ಜಗಿದು ಸೇವಿಸಿ ಸಂತೋಷಪಡುತ್ತಾರೆ, ಅಲ್ಲದೆ ತಾವು ಕರಿದ ಆಹಾರ ಸೇವಿಸಿಲ್ಲವಲ್ಲ ಎಂದು ಸಹ ಖುಷಿಪಡುತ್ತಾರೆ. ಮೇಲ್ನೋಟಕ್ಕೆ ಇದು ಸರಿಯೇ, ಆದರೆ ಇದು ಎಷ್ಟು ಸರಿ ಎಂಬುದು ನೀವು ಜಗಿದು ತಿಂದ ಆಹಾರ ಯಾವುದು ಎಂಬುದರ ಮೇಲೆ ಅವಲಂಬಿತವಾಗಿದೆ. ಉದಾ; ಕರಿದ ಒಣ ಹಣ್ಣುಗಳಿಗಿಂತ ಬೇಯಿಸಿದ ಒಣ ಹಣ್ಣುಗಳು ಉತ್ತಮ. ಕರಿದ ಕೋಳಿಗಿಂತ ಬೇಯಿಸಿದ ಕೋಳಿ ಉತ್ತಮ. ಬೇಯಿಸಿದ ನಚ್ನಿ ಚಿಪ್ಸ್ ಸಹ ಕರಿದುದಕ್ಕಿಂತ ಉತ್ತಮ. ಇವೆಲ್ಲದ ಒಟ್ಟು ಸಾರಾಂಶವಿಷ್ಟೆ ಎಣ್ಣೆಯಲ್ಲಿ ಕರಿದುದಕ್ಕಿಂತ ಬೇಯಿಸಿದ ಆಹಾರಗಳು ಉತ್ತಮ. ಇದರ ಜೊತೆಗೆ ನೀವು ಬೇಕ್ ಮಾಡಲಾದ ಚಕ್ರಿಗಳನ್ನು ಅಥವಾ ಭಕರ್ವಡಿಗಳನ್ನು ಸೇವಿಸುತ್ತೀರೋ ಅಥವಾ ಸೋಡಿಯಂ, ಮೈದಾ ಹೆಚ್ಚಾಗಿರುವ ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದೀರೋ ಎಂದು ಪರೀಕ್ಷಿಸಿಕೊಳ್ಳಿ. ನನಗೆ ತಿಳಿದ ಮಟ್ಟಿಗೆ ಆರೋಗ್ಯಕಾರಿ ಸ್ನ್ಯಾಕ್ ಎಂಬುದು ಯಾವುದು ಇಲ್ಲ. ಏಕೆಂದರೆ ತೂಕ ಇಳಿಸಿಕೊಳ್ಳಲು ಹೋಗುವಾಗ ಇಂತಹ ಎಲ್ಲಾ ವಿಚಾರಗಳು ಮುಖ್ಯವಾಗುತ್ತವೆ.

ಪೋಷಕಾಂಶ ಆಹಾರ

ಪೋಷಕಾಂಶ ಆಹಾರ

ಮೂಢ ನಂಬಿಕೆ ; ತೂಕ ಇಳಿಸಿಕೊಳ್ಳಲು ಹೋಗುವಾಗ ಪೂರಕ ಪೋಷಕಾಂಶವನ್ನು ತೆಗೆದುಕೊಳ್ಳಬೇಕೆ?

ಸತ್ಯ; ತೂಕ ಇಳಿಸಿಕೊಳ್ಳಲು ಪೂರಕ ಪೋಷಕಾಂಶವನ್ನು ತೆಗೆದುಕೊಳ್ಳಬೇಕೆಂದು ಯಾರು ಸಹ ನಿಮಗೆ ಸೂಚಿಸುವುದಿಲ್ಲ. ಏಕೆಂದರೆ ಬಹುತೇಕ ಪೂರಕ ಪೋಷಕಾಂಶಗಳು ಮೊದಲು ನಮ್ಮ ಕರುಳಿನ ಕಾರ್ಯಕ್ಷಮತೆಯನ್ನು ನಿಗದಿಗಿಂತ ಹೆಚ್ಚು ಮಾಡುತ್ತವೆ. ಇದು ಮುಂದೆ ನಮ್ಮ ದೇಹದಲ್ಲಿ ನಿರ್ಜಲೀಕರಣ ಮತ್ತು ಪೋಷಕಾಂಶಗಳ ಕೊರತೆಯನ್ನುಂಟು ಮಾಡುತ್ತದೆ. ಎರಡನೆಯದಾಗಿ ಈ ಪೂರಕ ಪೋಷಕಾಂಶಗಳು ನಮ್ಮ ಆಹಾರದಲ್ಲಿರುವ ಎಲ್ಲ ಬಗೆಯ ಕೊಬ್ಬನ್ನು ಹೊರದೂಡುತ್ತವೆ. ಇದು ಯಾವ ಹಂತಕ್ಕೆ ತಲುಪುತ್ತದೆ ಎಂದರೆ ಕೊನೆಗೆ ನಮ್ಮ ದೇಹದ ಆರೋಗ್ಯಕ್ಕೆ ಅಗತ್ಯವಿರುವ ಆರೋಗ್ಯಕಾರಿ ಕೊಬ್ಬುಗಳು ಮತ್ತು ಕೊಬ್ಬಿನ ಆಮ್ಲಗಳು ಸಹ ಇದರಿಂದ ನಿರ್ಮೂಲಗೊಳ್ಳುತ್ತವೆ.

ದೇಹಕ್ಕೆ ವಿಶ್ರಾಂತಿ

ದೇಹಕ್ಕೆ ವಿಶ್ರಾಂತಿ

ಮೂಢನಂಬಿಕೆ : ದೇಹವನ್ನು ಸಡಿಲ ಮಾಡುವುದು ಮತ್ತು ವಿಶ್ರಾಂತಿ ನೀಡುವುದು ಅತ್ಯಗತ್ಯ.

ಸತ್ಯ; ದೇಹವನ್ನು ಸಡಿಲ ಮಾಡದೆಯೇ ( ವಾರ್ಮ್ ಅಪ್) ನಿಮ್ಮ ದೇಹದ ಸ್ನಾಯುಗಳಿಗೆ ಅಗತ್ಯವಾದ ಆಮ್ಲಜನಕ ಮತ್ತು ರಕ್ತ ಪರಿಚಲನೆಯನ್ನು ಒದಗಿಸಬಹುದು. ಜೊತೆಗೆ ನಿಮ್ಮ ಸ್ನಾಯುಗಳು ಗಾಯವಾಗುವುದನ್ನು ತಡೆಯಬಹುದು ಸಹ. 5-10 ನಿಮಿಷ ದೇಹವನ್ನು ಸಡಿಲ ಮಾಡುವ ವ್ಯಾಯಾಮವು ನಿಮ್ಮ ದೇಹದ ಉಷ್ಣಾಂಶವನ್ನು ಹೆಚ್ಚಿಸುತ್ತದೆ . ಆಗ ನಿಮ್ಮ ಸ್ನಾಯುಗಳಿಗೆ ಆರಾಮವನ್ನು ನೀಡಲು ವಿಶ್ರಾಂತಿಯ ಅಗತ್ಯವಿರುತ್ತದೆ. ಅದರಲ್ಲು ವರ್ಕ್ ಔಟ್ ಮಾಡುವಾಗ ಗಾಯಗೊಂಡರೆ ನಿಮ್ಮ ಸ್ನಾಯುಗಳನ್ನು ಯಥಾಸ್ಥಿತಿಗೆ ತರಲು ಅದಕ್ಕೆ ಅಗತ್ಯ ವಿಶ್ರಾಂತಿಯನ್ನು ನೀಡಲೇ ಬೇಕು. ಇಲ್ಲವಾದಲ್ಲಿ ಮುಂದೆ ತೊಂದರೆಯಾಗುತ್ತದೆ. ವರ್ಕ್ ಔಟ್‍ನ ನಂತರ ಅಗತ್ಯ ವಿಶ್ರಾಂತಿಯನ್ನು ಪಡೆಯಲಿಲ್ಲವಾದಲ್ಲಿ ನಿಮ್ಮ ದೇಹದಿಂದ ಅಗತ್ಯ ಪ್ರಮಾಣದ ಲ್ಯಾಕ್ಟಿಕ್ ಆಮ್ಲ ಹೊರಬರುವುದಿಲ್ಲ. ಇದು ನಿಮ್ಮ ಹೃದಯದ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ. ಲ್ಯಾಕ್ಟಿಕ್ ಆಮ್ಲವು ಹೃದಯದ ಕಾರ್ಯವೈಖರಿಯನ್ನು ಪರಿಣಾಮಕಾರಿಗೊಳಿಸುವುದರ ಜೊತೆಗೆ, ನಿಮ್ಮನ್ನು ದಿನ ಪೂರ್ತಿ ಲವಲವಿಕೆಯಿಂದ ಇರುವಂತೆ ಮಾಡುತ್ತದೆ.

ಬಾಳೆಹಣ್ಣುಗಳು

ಬಾಳೆಹಣ್ಣುಗಳು

ಮೂಢನಂಬಿಕೆ; ಬಾಳೆಹಣ್ಣುಗಳು ತೂಕ ಇಳಿಸಿಕೊಳ್ಳುವ ಆಹಾರದ ಪಥ್ಯದಲ್ಲಿ ಸೇರಿಲ್ಲ

ಸತ್ಯ; ಬಾಳೆಹಣ್ಣುಗಳು ಯಾವತ್ತೂ ಆರೋಗ್ಯಕಾರಿ ಪಥ್ಯದ ಒಂದು ಭಾಗ, ಜೊತೆಗೆ ಇದು ತೂಕ ಇಳಿಸಿಕೊಳ್ಳುವಲ್ಲಿ ಸಹ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಆದಾಗಿಯೂ ಯಾವುದೇ ಆಹಾರವು ತೂಕವನ್ನು ಇಳಿಸಿಕೊಳ್ಳಲು ನಿರ್ದಿಷ್ಟವಾಗಿ ಸಹಾಯ ಮಾಡುವುದಿಲ್ಲ. ತೂಕ ಇಳಿಸಿಕೊಳ್ಳಲು ಕ್ಯಾಲೋರಿಗಳನ್ನು ಕಡಿಮೆ ಮಾಡಬೇಕು. ಅಂದರೆ ಪ್ರತಿನಿತ್ಯ ಕೆಲವು ಕ್ಯಾಲೋರಿಗಳನ್ನು ಕರಗಿಸಬೇಕು. ಬಹಳಷ್ಟು ಸಂದರ್ಭದಲ್ಲಿ ನಿತ್ಯ 10-15% ಕ್ಯಾಲೋರಿಯನ್ನು ಕಡಿಮೆ ಮಾಡುವುದು ಒಳ್ಳೆಯದು.ಈ ಕ್ಯಾಲೋರಿಗಳನ್ನು ಕಡಿಮೆ ಮಾಡಿಕೊಳ್ಳುವ ಪ್ರಕ್ರಿಯೆಯು ಸ್ನಾಯುಗಳನ್ನು ಕಡಿಮೆ ಮಾಡುತ್ತದೆ, ಕೊಬ್ಬನ್ನಲ್ಲ.

English summary

15 Weight loss myths busted

Weight loss is much more than eating less and exercising more. One tends to cheat or adhere to simpler but wrong means to attain weight loss and then abides by the same.
X
Desktop Bottom Promotion