For Quick Alerts
ALLOW NOTIFICATIONS  
For Daily Alerts

ತೇಗುವಿಕೆಯನ್ನು ತಡೆಗಟ್ಟಲು 15 ಸರಳ ಮನೆಮದ್ದುಗಳು

By Super
|

ತೇಗುವುದು ಬಾಯಿಯಿಂದ ಬಿಡುಗಡೆಯಾಗುವ ವಾಯು, ಕೆಲವು ಸಲ ಇದು ವಿಶೇಷ ಶಬ್ದ ಮತ್ತು ಕೆಟ್ಟ ವಾಸನೆ ಹೊಂದಿರುತ್ತದೆ. ಇದು ಯಾವುದೇ ಅನಾರೋಗ್ಯವಲ್ಲ, ಆದರೆ ಇದು ಸಾಂಪ್ರದಾಯಿಕವಾಗಿ ಸ್ವೀಕಾರಾರ್ಹವಲ್ಲ. ಭಾರತ ಮತ್ತು ಚೀನಾದ ಸಂಪ್ರದಾಯದಲ್ಲಿ ಕೆಲವು ಪರಿಸ್ಥಿತಿಯಲ್ಲಿ ಇದನ್ನು ಸ್ವೀಕರಿಸಲಾಗುವುದಿಲ್ಲ. ಜಪಾನ್‌ನಲ್ಲಿ ಇದೊಂದು ಕೆಟ್ಟ ವರ್ತನೆಯೆಂದೇ ಪರಿಗಣಿಸಲಾಗಿದೆ.

ಪಾಶ್ಚಿಮಾತ್ಯ ಸಂಪ್ರದಾಯಗಳಲ್ಲಿ ಉತ್ತರ ಅಮೆರಿಕಾ, ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ತೇಗುವುದು ಅಸಮಂಜಸ ಮತ್ತು ಇದನ್ನು ತಡೆಯಿಡಿಯಬೇಕು ಮತ್ತು ಅವನ ಅಥವಾ ಆಕೆಯಿಂದ ಕ್ಷಮೆ ಕೇಳಬೇಕು. ತೇಗುವಿಕೆ ಬರುವುದು ಗಾಳಿಯನ್ನು ನುಂಗುವ ಪರಿಣಾಮ.

ಹೊಟ್ಟೆಯು ಅನ್ನನಾಳದ ಮೂಲಕ ಗಾಳಿಯನ್ನು ಮೇಲಕ್ಕೆ ತಳ್ಳಿ ಬಾಯಿಯ ಮೂಲಕ ಹೊರದೂಡುತ್ತದೆ. ತೇಗುವಿಕೆಯನ್ನು ತಡೆಯಲು ಇಲ್ಲಿ 15 ಔಷಧಿಗಳಿವೆ. ಈ ಔಷಧಿಗಳು ನಿಮ್ಮ ಮನೆಯ ಅಡುಗೆ ಕೋಣೆಯಲ್ಲಿ ಸುಲಭವಾಗಿ ಸಿಗುತ್ತದೆ. ಬೆನ್ನುಬಿಡದೇ ಕಾಡುವ ಮೈಗ್ರೇನ್‌ನ 10 ಲಕ್ಷಣಗಳು ಯಾವುದು?

ಶುಂಠಿ

ಶುಂಠಿ

ತೇಗುವಿಕೆಗೆ ಶುಂಠಿಯು ಅತ್ಯಂತ ಪರಿಚಿತ ಹಾಗೂ ಪರಿಣಾಮಕಾರಿ. ಇದು ತಕ್ಷಣ ಪರಿಹಾರ ನೀಡುತ್ತದೆ. ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಶುಂಠಿ ಹುಡಿಯ ಮಾತ್ರೆ ಅಥವಾ ಟಿಂಚರ್‌ನ್ನು, ಊಟಕ್ಕೆ ಮೊದಲು ತಾಜಾ ಹಸಿ ಶುಂಠಿಯನ್ನು ಜಗಿದರೆ ತೇಗುವಿಕೆ ಶಮನವಾಗುತ್ತದೆ. ಶುಂಠಿಯ ಖಾರ ನಿಮಗೆ ಇಷ್ಟವಿಲ್ಲವೆಂದಾದರೆ ಆಗ ನೀವು ಶುಂಠಿ ಟೀ ಅಥವಾ ಜೇನಿನ ಟೀ ಮಾಡಿ ಕುಡಿಯಿರಿ. ಬಿಸಿ ನೀರಿಗೆ ಶುಂಠಿ ತುಂಡುಗಳು ಮತ್ತು ಜೇನು ಅಥವಾ ಲಿಂಬೆ ಹಾಕಿದರೆ ಅದು ಉಪಯುಕ್ತ.

ಲಿಂಬೆ ಜ್ಯೂಸ್

ಲಿಂಬೆ ಜ್ಯೂಸ್

ಲಿಂಬೆ ರಸವನ್ನು ಅಡುಗೆ ಸೋಡಾದೊಂದಿಗೆ ಒಂದು ಗ್ಲಾಸ್ ನೀರಿನಲ್ಲಿ ಹಾಕಿ ಕುಡಿದರೆ ತೇಗುವಿಕೆಗೆ ತಕ್ಷಣ ಪರಿಹಾರ ಸಿಗುತ್ತದೆ. ಇದು ಜೀರ್ಣಕ್ರಿಯೆಗೂ ನೆರವಾಗುತ್ತದೆ. ಇದು ನೈಸರ್ಗಿಕ ಈನೋದಂತೆ ಕೆಲಸ ಮಾಡುತ್ತದೆ.

ಪಪ್ಪಾಯಿ

ಪಪ್ಪಾಯಿ

ತೇಗುವಿಕೆಯನ್ನು ಕಡಿಮೆ ಮಾಡಲು ಅತ್ಯಂತ ಆರೋಗ್ಯಕಾರಿ ವಿಧಾನವೆಂದರೆ ಸಲಾಡ್ ರೂಪದಲ್ಲಿ ಪಪ್ಪಾಯಿ ತಿನ್ನುವುದು. ಪಪ್ಪಾಯಿಯಲ್ಲಿರುವ ಪಪೈನ್ ಎನ್ನುವ ಕಿಣ್ವವು ತೇಗುವಿಕೆ ಉಂಟುಮಾಡುವ ಗ್ಯಾಸ್ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಪಪ್ಪಾಯವನ್ನು ದಿನಾಲೂ ತಿನ್ನಿ.

ಮೊಸರು

ಮೊಸರು

ಭಾರತದ ಊಟದ ಪದ್ದತಿಯಲ್ಲಿ ಒಂದು ಪಿಂಗಾಣಿ ಮೊಸರನ್ನು ತಿನ್ನಲಾಗುತ್ತದೆ. ಇದಕ್ಕೆ ಕಾರಣವೆಂದರೆ ಮೊಸರು ಜೀರ್ಣಕ್ರಿಯೆಗೆ ನೆರವಾಗುತ್ತದೆ. ಇದರಲ್ಲಿರುವ ಜೀವಂತ ಬ್ಯಾಕ್ಟೀರಿಯಾ ಎಲ್ಲಾ ರೀತಿಯ ಹೊಟ್ಟೆಯ ಹಾಗೂ ಕರುಳಿನ ಸಮಸ್ಯೆ ನಿವಾರಿಸುತ್ತದೆ. ಲ್ಯಾಕ್ಟೋಸ್ ಸಹಿಸಲು ಸಾಧ್ಯವಿಲ್ಲವೆಂದಾದರೆ ಆಗ ನೀವು ಮಜ್ಜಿಗೆಯನ್ನು ಬದಲಿಯಾಗಿ ಬಳಸಿ.

ಸೀಮೆ ಸೋಂಪು

ಸೀಮೆ ಸೋಂಪು

ಸೀಮೆ ಸೋಂಪು ಜೀರ್ಣಕ್ರಿಯೆಯನ್ನು ಸುವ್ಯವಸ್ಥಿತವಾಗಿರಿಸಿ ತೇಗುವಿಕೆಯನ್ನು ನೈಸರ್ಗಿಕವಾಗಿ ಕಡಿಮೆ ಮಾಡುತ್ತದೆ. ಇದನ್ನು ಹಾಗೆ ತಿನ್ನಬಹುದು ಅಥವಾ ಸಲಾಡ್‌ನೊಂದಿಗೆ ತಿನ್ನಬಹುದು.

ಜೀರಿಗೆ, ಅನಿಸ್ ಮತ್ತು ಸೆಲರಿ ಬೀಜಗಳು

ಜೀರಿಗೆ, ಅನಿಸ್ ಮತ್ತು ಸೆಲರಿ ಬೀಜಗಳು

ಈ ಬೀಜಗಳು ಕಿರಣಿ ಅಂಗಡಿ ಮತ್ತು ಸೂಪರ್ ಮಾರ್ಕೆಟ್‌ಗಳಲ್ಲಿ ಸುಲಭವಾಗಿ ಸಿಗುತ್ತದೆ. ತೇಗುವಿಕೆಯಿಂದ ಆರಾಮ ಪಡೆಯಲು ಊಟದ ಬಳಿಕ ಕೆಲವು ಬೀಜಗಳನ್ನು ನೀವು ಜಗಿಯಬೇಕು. ಈ ಬೀಜಗಳಲ್ಲಿರುವ ಕಾರ್ಮಿನಟಿವ್ ಏಜೆಂಟ್ ಕರುಳಿನಿಂದ ಗ್ಯಾಸ್‌ನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ.

ಕ್ಯಾಮೊಮೈಲ್ ಚಹಾ

ಕ್ಯಾಮೊಮೈಲ್ ಚಹಾ

ದನ್ನು ಸಾಂಪ್ರದಾಯಿಕವಾಗಿ ಹೊಟ್ಟೆಯ ನೋವು ಮತ್ತು ತೇಗುವಿಕೆ ನಿವಾರಣೆಗೆ ಬಳಸಲಾಗುತ್ತದೆ. ಮಲಗುವ ಮೊದಲು ಒಂದು ಕಪ್ ಕ್ಯಾಮೊಮೈಲ್ ಟೀ ಸೇವಿಸಿ.

ಏಲಕ್ಕಿ ಚಹಾ

ಏಲಕ್ಕಿ ಚಹಾ

ಇದು ಜೀರ್ಣಕ್ರಿಯೆಗೆ ನೆರವಾಗುತ್ತದೆ. ಇದು ಗ್ಯಾಸ್ ಉಂಟುಮಾಡಬಲ್ಲ ಆಹಾರವನ್ನು ಜೀರ್ಣಿಸುತ್ತದೆ ಮತ್ತು ತೇಗುವಿಕೆ ಕಡಿಮೆ ಮಾಡುತ್ತದೆ. ಒಂದು ಚಮಚ ಏಲಕ್ಕಿಯನ್ನು ಒಂದು ಕಪ್ ನೀರಿಗೆ ಹಾಕಿ ಕುದಿಸಿ. ತೇಗುವಿಕೆಯಿಂದ ಪರಿಹಾರ ಪಡೆಯಲು ಊಟಕ್ಕೆ ಮೊದಲು ಕುಡಿಯಿರಿ.

ಜೀರಿಗೆ

ಜೀರಿಗೆ

ಊಟದ ಬಳಿಕ ಹುರಿದ ಜೀರಿಗೆಯನ್ನು ಜಗಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಮತ್ತು ತೇಗುವಿಕೆ ನಿವಾರಣೆಗೆ ನೆರವಾಗುತ್ತದೆ.

ಪುದೀನಾ

ಪುದೀನಾ

ತೇಗುವಿಕೆಗೆ ಇದು ಅತ್ಯಂತ ಉತ್ತಮ ಮನೆಮದ್ದು. ಕೆಲವು ಪುದೀನಾ ಎಲೆಗಳನ್ನು ಹಾಕಿ ಒಂದು ಕಪ್ ನೀರನ್ನು ಕುದಿಸಿ. ಐದು ನಿಮಿಷ ಕಲಸಿ. ಮಲಗುವ ಮೊದಲು ಇದನ್ನು ಕುಡಿಯಿರಿ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿ ಮೊಗ್ಗನ್ನು ನುಂಗಿ ಮತ್ತು ಇದರ ಬಳಿಕ ಒಂದು ಲೋಟ ನೀರು ಕುಡಿಯಿರಿ. ಖಾಲಿ ಹೊಟ್ಟೆಯನ್ನು ಇದನ್ನು ಸೇವಿಸಿದರೆ ಅದು ತುಂಬಾ ಒಳ್ಳೆಯದು. ಬೆಳ್ಳುಳ್ಳಿ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ನೈಸರ್ಗಿಕವಾಗಿ ತೇಗುವಿಕೆಗೆ ಉಪಶಮನ ನೀಡುತ್ತದೆ.

ಹಿಂಗ್

ಹಿಂಗ್

ಒಂದು ಚಿಟಿಕೆಯಷ್ಟು ಹಿಂಗನ್ನು ಬಿಸಿ ನೀರಿಗೆ ಹಾಕಿ ಮತ್ತು ಊಟಕ್ಕೆ ಮೊದಲು ಇದನ್ನು ಕುಡಿಯಿರಿ. ಇದು ಹೊಟ್ಟೆಯ ಕಟ್ಟುವಿಕೆಯನ್ನು ನಿವಾರಿಸುತ್ತದೆ. ಇದು ನೈಸರ್ಗಿಕವಾಗಿ ತೆಗುವಿಕೆ ನಿವಾರಿಸುತ್ತದೆ.

ಮೆಂತ್ಯೆ

ಮೆಂತ್ಯೆ

ಮೆಂತ್ಯೆ ಎಲೆಯನ್ನು ನೀರಿಗೆ ಹಾಕಿ ೨-೩ ಗಂಟೆ ತನಕ ನೆನೆಸಿ ಮತ್ತು ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ. ತೇಗಿಗೆ ಇದು ಅತ್ಯುತ್ತಮ ನೈಸರ್ಗಿಕ ಪರಿಹಾರ. ಇದು ಬಾಯಿಯನ್ನು ತಾಜಾವಾಗಿಡುತ್ತದೆ.

ಸೋಯಾ ಎಣ್ಣೆ

ಸೋಯಾ ಎಣ್ಣೆ

ಒಂದು ಚಮಚ ಜೀನಿಗೆ ಒಂದು ಹನಿ ಸೋಯಾ ಎಣ್ಣೆಯನ್ನು ಹಾಕಿ ಸರಿಯಾಗಿ ಮಿಶ್ರಣ ಮಾಡಿ ಮತ್ತು ಊಟದ ಬಳಿಕ ಇದನ್ನು ಸೇವಿಸಿ. ತೇಗಿಗೆ ಇದು ತಕ್ಷಣ ಪರಿಹಾರ ನೀಡುತ್ತದೆ.

ಲವಂಗದ ಎಲೆಗಳು

ಲವಂಗದ ಎಲೆಗಳು

ಹಸಿ ಲವಂಗದ ಎಲೆಗಳು ಜೀರ್ಣಕ್ರಿಯೆಯನ್ನು ಸರಾಗವಾಗಿಸಿ ತೇಗನ್ನು ನಿವಾರಿಸುತ್ತದೆ. ತೇಗುವಿಕೆಯಿಂದ ಪರಿಹಾರ ಪಡೆಯಲು ಊಟದ ಬಳಿಕ ಹಸಿ ಲವಂಗದ ಎಲೆಯನ್ನು ಜಗಿಯಿರಿ.

English summary

15 Simple Home Remedies To Prevent Burping

Burping is the result of swallowing air. The stomach removes the gas by pushing it upwards through the esophagus and then the mouth.Here are 15 home remedies to relieve burping. These ingredients are easily available in your kitchen.
X
Desktop Bottom Promotion