For Quick Alerts
ALLOW NOTIFICATIONS  
For Daily Alerts

ಜನನಾಂಗ ನಿಮಿರುವಿಕೆ ಸಮಸ್ಯೆಗೆ 15 ಪ್ರಾಕೃತಿಕ ಪರಿಹಾರಗಳು

ಲಿಂಗ ನಿಮಿರುವಿಕೆ ಸಮಸ್ಯೆಯು ಸಾಮಾನ್ಯವಾಗಿ ವಯಸ್ಸಾದ ಗಂಡಸರಲ್ಲಿ ಕಂಡು ಬರುವ ದೋಷವಾಗಿದೆ. ಇದಕ್ಕೆ ವಯಸ್ಸಾದ ಗಂಡಸರಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿಯುವ ಟೆಸ್ಟೊಸ್ಟಿರೋನ್ ಮಟ್ಟದಿಂದಾಗಿ ಈ ಸಮಸ್ಯೆಗೆ ಮುಖ್ಯ ಕಾರಣವಾಗಿರುತ್ತದೆ.

By Super Admin
|

ಲಿಂಗ ನಿಮಿರುವಿಕೆ ಸಮಸ್ಯೆಯು ಸಾಮಾನ್ಯವಾಗಿ ವಯಸ್ಸಾದ ಗಂಡಸರಲ್ಲಿ ಕಂಡು ಬರುವ ದೋಷವಾಗಿದೆ. ಇದಕ್ಕೆ ವಯಸ್ಸಾದ ಗಂಡಸರಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿಯುವ ಟೆಸ್ಟೊಸ್ಟಿರೋನ್ ಮಟ್ಟದಿಂದಾಗಿ ಈ ಸಮಸ್ಯೆಗೆ ಮುಖ್ಯ ಕಾರಣವಾಗಿರುತ್ತದೆ. ಸಾಮಾನ್ಯವಾಗಿ ಇದು 40 ವರ್ಷ ದಾಟಿದ ಗಂಡಸರಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಆದರೆ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ,45 ವರ್ಷವಾಗಿರುವವರಲ್ಲಿ ಲಿಂಗ ನಿಮಿರುವಿಕೆಯ ದೋಷವು ಶೇ. 5 ರಷ್ಟು ಕಂಡು ಬಂದರೆ,

60 ವರ್ಷ ವಯಸ್ಸಾದವರಲ್ಲಿ ಇದರ ಪ್ರಮಾಣವು ಶೇ. 20-25 ಪ್ರಮಾಣದಷ್ಟು ಕಂಡು ಬರುತ್ತದೆಯಂತೆ. ಕೆಲವೊಂದು ವೈಧ್ಯಕೀಯ ಚಿಕಿತ್ಸೆಗಳು ಈ ಲಿಂಗ ನಿಮಿರುವಿಕೆಯ ನ್ಯೂನತೆಗಳನ್ನು ಪರಿಹರಿಸಿದರು, ಪ್ರಾಕೃತಿಕ ಪರಿಹಾರೋಪಾಯಗಳೇ ಈ ಸಮಸ್ಯೆಯಿಂದ ನಿಮ್ಮನ್ನು ಸದಾ ಕಾಲಕ್ಕೆ ಕಾಪಾಡಬಲ್ಲವು. ಈ ಅಂಕಣದಲ್ಲಿ ನಾವು ಲಿಂಗ ನಿಮಿರುವಿಕೆ ದೋಷವನ್ನು ಪರಿಹರಿಸುವ ನೈಸರ್ಗಿಕ ಪರಿಹಾರೋಪಾಯಗಳ ಕುರಿತಾಗಿ ಗಮನ ಹರಿಸೋಣ. ಮಹಿಳೆಯರ ಜನನಾಂಗ ಸಮಸ್ಯೆಗೆ ಸೂಕ್ತ ಸಲಹೆಗಳು

ನಾವು ಒಂದೊಮ್ಮೆ ಪ್ರಾಕೃತಿಕ ಪರಿಹಾರೋಪಾಯಗಳ ಕುರಿತಾಗಿ ಇಲ್ಲಿ ಹೇಳುತ್ತಿದ್ದರೂ, ಈ ಅಂಕಣವು ಪುರುಷರಲ್ಲಿ ಕಂಡು ಬರುವ ನಿರ್ವೀರ್ಯದ ಬಗೆಗೆ ಎಂದರೆ ಪುರುಷ ಬಂಜೆತನದ ಬಗೆಗು ಗಮನಹರಿಸುತ್ತದೆ. ಬನ್ನಿ ಹಾಗಾದರೆ ಲಿಂಗ ನಿಮಿರುವಿಕೆ ಮತ್ತು ನಿರ್ವೀರ್ಯದಿಂದ ಪಾರಾಗಲು ಇರುವ ಪ್ರಾಕೃತಿಕ ಪರಿಹಾರೋಪಾಯಗಳತ್ತ ಒಮ್ಮೆ ಗಮನ ಹರಿಸೋಣ. ಇದಕ್ಕಾಗಿ ನಮಗೆ 15 ಮಾರ್ಗೋಪಾಯಗಳು ದೊರೆಯುತ್ತವೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಲಿಂಗ ನಿಮಿರುವಿಕೆಯ ಸಮಸ್ಯೆಗೆ ಪ್ರಮುಖ ಕಾರಣ ಜನನಾಂಗಕ್ಕೆ ರಕ್ತದ ಪೂರೈಕೆಯ ಕೊರತೆ ಇರುವುದು. ಬೆಳ್ಳುಳ್ಳಿಯು ರಕ್ತ ಪರಿಚಲನೆಯನ್ನು ಸುಗಮಗೊಳಿಸುತ್ತದೆ, ಆದ್ದರಿಂದ ಜನನಾಂಗವು ಉದ್ರೇಕಗೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ಬೆಳ್ಳುಳ್ಳಿಯಲ್ಲಿ ಹಲವಾರು ಖನಿಜಗಳು ಇರುತ್ತವೆ. ಇವು ಪುರುಷರಲ್ಲಿ ವೀರ್ಯಗಳ ಉತ್ಪಾದನೆಯನ್ನು ಹೆಚ್ಚಿಸುತ್ತವೆ.

ದಾಳಿಂಬೆ

ದಾಳಿಂಬೆ

ದಾಳಿಂಬೆಯು ಹಲವಾರು ಕಾರಣಗಳಿಂದ ಸೂಪರ್ ಫುಡ್ ಎಂಬ ಅಭಿದಾನಕ್ಕೆ ಪಾತ್ರವಾಗಿದೆ. ಇದರಲ್ಲಿ ಸಮೃದ್ಧವಾದ ಖನಿಜಾಂಶಗಳು ಮತ್ತು ವಿಟಮಿನ್‍ಗಳು ಇದ್ದು, ಪ್ರಾಕೃತಿಕವಾಗಿ ನಿರ್ವೀರ್ಯತೆಯನ್ನು ಹೋಗಲಾಡಿಸುತ್ತದೆ. ದಾಳಿಂಬೆಯಲ್ಲಿರುವ ಯಥೇಚ್ಛ ಆಂಟಿ ಆಕ್ಸಿಡೆಂಟ್‍ಗಳು ಪುರುಷರಲ್ಲಿ ವೀರ್ಯಗಳು ವೃದ್ಧಿಯಾಗುವಂತೆ ಮಾಡುತ್ತವೆ.

ಡಾರ್ಕ್ ಚಾಕೊಲೇಟ್

ಡಾರ್ಕ್ ಚಾಕೊಲೇಟ್

ಡಾರ್ಕ್ ಚಾಕೊಲೇಟ್ ಲಿಂಗ ನಿಮಿರುವಿಕೆಯ ಸಮಸ್ಯೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಡಾರ್ಕ್ ಚಾಕೊಲೇಟ್‍ನಲ್ಲಿ ಫ್ಲಾವೊನಯ್ಡ್‌ಗಳು ಇರುತ್ತವೆ. ಇವು ರಕ್ತ ಪರಿಚಲನೆಯನ್ನು ಸುಗಮಗೊಳಿಸಲು ನೆರವಾಗುತ್ತವೆ. ಇದರ ಜೊತೆಗೆ ಇದು ಕೊಲೆಸ್ಟ್ರಾಲನ್ನು ಸಹ ನಿಯಂತ್ರಿಸುತ್ತದೆ. ಕೊಲೆಸ್ಟ್ರಾಲ್ ಲಿಂಗ ನಿಮಿರುವಿಕೆಯ ನ್ಯೂನತೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿರುತ್ತದೆ.

ಬಾಳೆಹಣ್ಣುಗಳು

ಬಾಳೆಹಣ್ಣುಗಳು

ಬಾಳೆಹಣ್ಣನ್ನು ಪ್ರತಿನಿತ್ಯ ಸೇವಿಸುವುದರಿಂದ ಲಿಂಗ ನಿಮಿರುವಿಕೆಯ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಬಾಳೆಹಣ್ಣುಗಳಲ್ಲಿ ಬ್ರೊಮೆಲೈನ್ ಎಂಬ ಎನ್‍ಜೈಮ್ ಇರುತ್ತದೆ. ಇದು ನಮ್ಮ ದೇಹದಲ್ಲಿರುವ ಸೆಕ್ಸ್ ಹಾರ್ಮೊನುಗಳನ್ನು ಸಕ್ರಿಯಗೊಳಿಸುತ್ತದೆ ಎಂಬುದನ್ನು ಖಚಿತಪಡಿಸಿದೆ. ಇದರ ಜೊತೆಗೆ ಬಾಳೆಹಣ್ಣುಗಳಲ್ಲಿ ವಿಟಮಿನ್ ಎ ಮತ್ತು ಬಿ1 ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇದು ಗಂಡಸರಲ್ಲಿ ಸಾಮರ್ಥ್ಯವನ್ನು ತುಂಬುವುದರ ಜೊತೆಗೆ, ಲೈಂಗಿಕಾಸಕ್ತಿಯನ್ನು ಸಹ ಹೆಚ್ಚಿಸುತ್ತದೆ.

ಒಯಿಸ್ಟರ್‌ಗಳು

ಒಯಿಸ್ಟರ್‌ಗಳು

ಇದು ವೀರ್ಯಗಳ ಉತ್ಪಾದನೆಯನ್ನು ಗಣನಿಯವಾಗಿ ಹೆಚ್ಚಿಸುವ ಅದ್ಭುತ ಆಹಾರವಾಗಿದೆ. ಇದರ ಜೊತೆಗೆ ಇದು ಹಾಳಾಗಿರುವ ವೀರ್ಯವನ್ನು ಸಹ ಸರಿಪಡಿಸುವ ಸಾಮರ್ಥ್ಯವನ್ನು ಹೊಂದಿದೆ.

ವಾಲ್‍ನಟ್‍ಗಳು

ವಾಲ್‍ನಟ್‍ಗಳು

ವಾಲ್‍ನಟ್‍ಗಳಲ್ಲಿ ಅರ್ಗನೈನ್ ಎಂಬ ಘಟಕಾಂಶವು ಇರುತ್ತದೆ. ಇದು ಸ್ವಾಭಾವಿಕವಾಗಿ ವೀರ್ಯಗಳ ವೃದ್ಧಿಗೆ ಸಹಕರಿಸುವ ಒಣ ಹಣ್ಣಾಗಿದೆ. ಅರ್ಗನೈನ್ ವೃಷಣಗಳಲ್ಲಿ ವೀರ್ಯವನ್ನು ಉತ್ಪಾದಿಸುವ ಪ್ರಕ್ರಿಯೆಗೆ ಸಹಕರಿಸುತ್ತದೆ. ವಾಲ್‍ನಟ್‍ಗಳು ಬಲವಾದ ನಿಮಿರುವಿಕೆಯೊಂದಿಗೆ ಸಂಬಂಧವನ್ನು ಹೊಂದಿರುತ್ತವೆ. ಇದರ ಜೊತೆಗೆ ವಾಲ್‍ನಟ್‍ಗಳಲ್ಲಿರುವ ಒಮೆಗಾ-3 ಎಂಬ ಕೊಬ್ಬಿನ ಆಮ್ಲವು ನಮ್ಮ ದೇಹದಲ್ಲಿರುವ ರಕ್ತವನ್ನು ಪುರುಷರ ಜನನಾಂಗಗಳತ್ತ ಸಾಗಲು ನೆರವು ನೀಡುತ್ತದೆ.

ಬೆಣ್ಣೆ ಹಣ್ಣು

ಬೆಣ್ಣೆ ಹಣ್ಣು

ನಾವೆಲ್ಲರು ಇದಕ್ಕಾಗಿ ಕಾಯುತ್ತಿದ್ದೇವು, ಅಲ್ಲವೆ? ಬೆಣ್ಣೆ ಹಣ್ಣು ಅದ್ಭುತವಾದ ಆರೋಗ್ಯಕಾರಿ ಪರಿಹಾರಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಒಣ ಹಣ್ಣಾಗಿದೆ. ಇವುಗಳಲ್ಲಿ ವೀರ್ಯದ ಉತ್ಪಾದನೆಯನ್ನು ಹೆಚ್ಚಿಸುವ ಫೊಲಿಕ್ ಆಸಿಡ್, ವಿಟಮಿನ್‍ಗಳು ಮತ್ತು ಖನಿಜಾಂಶಗಳು ಅಧಿಕ ಪ್ರಮಾಣದಲ್ಲಿರುತ್ತದೆ. ಲಿಂಗ ನಿಮಿರುವಿಕೆಯನ್ನು ಪರಿಹರಿಸುವಲ್ಲಿ ಇವುಗಳು ಅತ್ಯುತ್ತಮವಾದ ಪ್ರಾಕೃತಿಕ ಪರಿಹಾರೋಪಾಯವಾಗಿ ಗುರುತಿಸಲ್ಪಟ್ಟಿದೆ.

ಶತಾವರಿ (Asparagus)

ಶತಾವರಿ (Asparagus)

ಶತಾವರಿ ಎಂಬುದು ಒಂದು ಸಮೃದ್ಧವಾದ ಆಂಟಿ ಆಕ್ಸಿಡೆಂಟ್‍ ಆಗಿದ್ದು, ಹಲವಾರು ಆರೋಗ್ಯಕಾರಿ ಸಮಸ್ಯೆಗಳನ್ನು ನಿವಾರಿಸುವ ಗುಣಗಳನ್ನು ಹೊಂದಿದೆ. ಇದು ಗಂಡಸರಲ್ಲಿ ವೀರ್ಯವನ್ನು ಉತ್ಪಾದಿಸುವ ಅತ್ಯಂತ ಪರಿಣಾಮಕಾರಿ ಆಹಾರವಾಗಿದೆ.

ವ್ಯಾಯಾಮ

ವ್ಯಾಯಾಮ

ಈಗ ನಾವು ನಿರ್ವೀರ್ಯತೆಗೆ ಕಾರಣವಾಗಿರುವ ಸಮಸ್ಯೆಗಳ ಮೂಲವನ್ನು ಗಮನಿಸೋಣ. ಜೊತೆಗೆ ಇನ್ನಿತರ ಪ್ರಾಕೃತಿಕ ಪರಿಹಾರಗಳ ಕುರಿತಾಗಿ ಸಹ ಆಲೋಚಿಸೋಣ. ಈ ವಿಚಾರದಲ್ಲಿ ವ್ಯಾಯಾಮವು ಅತ್ಯಂತ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಒಂದು ವೇಳೆ ನಿಮ್ಮ ದೇಹದಲ್ಲಿ ಅಧಿಕ ಪ್ರಮಾಣದ ಕೊಬ್ಬು ಇಲ್ಲವಾದಲ್ಲಿ, ನಿಮ್ಮ ವೀರ್ಯ ಉತ್ಪಾದನಾ ಸಾಮರ್ಥ್ಯವು ಸಹಜವಾಗಿ ಹೆಚ್ಚಿಗೆ ಇರುತ್ತದೆ. ಅದಕ್ಕಾಗಿ ನೀವು ತೆಳ್ಳಗೆ ಮತ್ತು ಆರೋಗ್ಯಕರವಾಗಿ ಇರುವಂತೆ ನೋಡಿಕೊಳ್ಳಿ. ಇದಕ್ಕೂ ಮೇಲಾಗಿ, ವ್ಯಾಯಾಮವು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಯ ವೇಗವನ್ನು ಸಹ ಹೆಚ್ಚಿಸುತ್ತದೆ.

ಯೋಗ

ಯೋಗ

ಯೋಗವು ಲಿಂಗ ನಿಮಿರುವಿಕೆಯನ್ನು ನಿವಾರಿಸುವ ಅತ್ಯಂತ ಪರಿಣಾಮಕಾರಿಯಾದ ಮಾರ್ಗವಾಗಿರುತ್ತದೆ. ಇದು ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಜನನಾಂಗಗಳನ್ನು ಉದ್ದೀಪನಗೊಳಿಸುತ್ತದೆ.

ಪಾಲಾಕ್ ಸೊಪ್ಪು ಮತ್ತು ಇನ್ನಿತರ ಹಸಿರು ತರಕಾರಿಗಳು

ಪಾಲಾಕ್ ಸೊಪ್ಪು ಮತ್ತು ಇನ್ನಿತರ ಹಸಿರು ತರಕಾರಿಗಳು

ಪಾಲಾಕ್ ಸೊಪ್ಪು ಮತ್ತು ಇನ್ನಿತರ ಹಸಿರು ತರಕಾರಿಗಳಲ್ಲಿ ಸತು, ಆಂಟಿ ಆಕ್ಸಿಡೆಂಟ್‍ಗಳು ಯಥೇಚ್ಛವಾಗಿರುತ್ತವೆ. ಇವುಗಳಲ್ಲಿರುವ ಪೋಷಕಾಂಶಗಳು ಲಿಂಗ ನಿಮಿರುವಿಕೆಯ ಲೋಪ ದೋಷಗಳನ್ನು ಸರಿಪಡಿಸುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ.

ಬೀನ್ಸ್

ಬೀನ್ಸ್

ಹುರುಳಿಕಾಳುಗಳು, ಅದರಲ್ಲೂ ಹಣ್ಣು ಹುರುಳಿ ಕಾಳುಗಳಲ್ಲಿ ಸತುವಿನ ಪ್ರಮಾಣ ಅಧಿಕವಾಗಿರುತ್ತದೆ. ಇವುಗಳು ಲಿಂಗ ನಿಮಿರುವಿಕೆ ಮತ್ತು ನಿರ್ವೀರ್ಯತೆಯನ್ನು ಪ್ರಾಕೃತಿಕವಾಗಿ ಪರಿಹರಿಸಲು ನೆರವಾಗುತ್ತವೆ.

ಅಣಬೆಗಳು

ಅಣಬೆಗಳು

ಲಿಂಗ ನಿಮಿರುವಿಕೆ ಸಮಸ್ಯೆಯನ್ನು ಪರಿಹರಿಸುವ ಮತ್ತೊಂದು ಅದ್ಭುತ ಆಹಾರ ಪದಾರ್ಥವೆಂದರೆ, ಅದು ಅಣಬೆ. ಇದರಲ್ಲಿಯೂ ಸಹ ಸತು ಮತ್ತು ಇನ್ನಿತರ ಖನಿಜಾಂಶಗಳು ಅಧಿಕ ಪ್ರಮಾಣದಲ್ಲಿರುತ್ತವೆ.

ಬಾದಾಮಿಗಳು

ಬಾದಾಮಿಗಳು

ವಾಲ್‍ನಟ್‍ಗಳಂತೆಯೆ, ಬಾದಾಮಿಯು ಸಹ ಲಿಂಗ ನಿಮಿರುವಿಕೆಯನ್ನು ಹೋಗಲಾಡಿಸಲು ಪರಿಣಾಮಕಾರಿಯಾಗಿ ನೆರವಾಗುತ್ತದೆ.

ಈ ಎಲ್ಲಾ ವಿಚಾರಗಳ ಜೊತೆಗೆ ಇವುಗಳಿಂದ ನಿಮ್ಮ ಲಿಂಗ ನಿಮಿರುವಿಕೆಯ ದೋಷವು ದೂರವಾಗುತ್ತದೆ ಎಂಬ ಧನಾತ್ಮಕ ಮನೋಭಾವವನ್ನು ತಾಳಿ. ಧನಾತ್ಮಕ ಮನೋಭಾವ ಮತ್ತು ಆತ್ಮ ವಿಶ್ವಾಸಗಳು ಲಿಂಗ ನಿಮಿರಲು ಅತ್ಯಾವಶ್ಯಕ.

English summary

15 Powerful Natural Remedies For Erectile Dysfunction

Erectile dysfunction is a common disorder that mostly affects aged men. The disorder is majorly caused due to a steep fall in testosterone levels in men. It is primarily known to afflict men post 40. Let us now look at the natural remedies for erectile dysfunction. Here are 15 ways to cure erectile dysfunction naturally.
X
Desktop Bottom Promotion