For Quick Alerts
ALLOW NOTIFICATIONS  
For Daily Alerts

ಲೈಂಗಿಕ ಜೀವನಕ್ಕೆ ಅಡ್ಡಿಯಾಗುವ 15 ಆರೋಗ್ಯ ಸಮಸ್ಯೆಗಳು

By Super
|

ನಿಮ್ಮ ಸಂಗಾತಿಯನ್ನು ಸೇರಲೆಂದು ಮನೆಗೆ ಹೋದಾಗ ಸೆಕ್ಸ್ ಮೊದಲ ಅಥವಾ ನಿಮ್ಮ ಏಕೈಕ ಯೋಚನೆಯಾಗಿರುತ್ತದೆ. ಆದರೆ ಕೆಲವೊಂದು ವಿಷಯಗಳು ಇದನ್ನು ಕೆಡಿಸಬಹುದು ಮತ್ತು ನಿಮ್ಮ ಲೈಂಗಿಕ ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ತಲೆನೋವು, ಬೆನ್ನುನೋವು, ಮಧುಮೇಹ ಕೆಲವೊಂದು ಸಾಮಾನ್ಯ ಆರೋಗ್ಯ ಸಮಸ್ಯೆಗಳು ನಿಮ್ಮ ಸಂಗಾತಿ ಜತೆಗಿನ ಲೈಂಗಿಕ ಸುಖಕ್ಕೆ ಅಡ್ಡಿಯುಂಟು ಮಾಡಬಹುದು. ಇದನ್ನು ಹೊರತುಪಡಿಸಿ ಇತರ ಕೆಲವೊಂದು ಆರೋಗ್ಯ ಸಮಸ್ಯೆಗಳು ನಿಮ್ಮ ಲೈಂಗಿಕ ಜೀವನದಲ್ಲಿ ಕಣ್ಣುಮುಚ್ಚಾಲೆಯಾಡಬಹುದು.

ದಿನದ ಅಂತ್ಯಕ್ಕೆ ಮನೆಗೆ ಹೋಗಿ ನಿಮ್ಮ ಸಂಗಾತಿ ಜತೆ ಲೈಂಗಿಕ ಸುಖ ಪಡೆಯಬೇಕೆಂದು ಬಯಸುತ್ತೀರಿ. ಆದರೆ ಮಾನಸಿಕ ಹಾಗೂ ದೈಹಿಕ ಒತ್ತಡ ನಿಮ್ಮ ಲೈಂಗಿಕ ಜೀವನವನ್ನು ಕೆಡಿಸಬಹುದು. ಮದುವೆಯ ಸಂಬಂಧದಲ್ಲಿ ಆರೋಗ್ಯ ಸಮಸ್ಯೆಗಳಿಂದಾಗಿ ಲೈಂಗಿಕ ಕ್ರಿಯೆಯೆಲ್ಲಿ ನಿರಾಸಕ್ತಿಯು ವಿಚ್ಛೇದನಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ

ಲೈಂಗಿಕ ಸಾಮರ್ಥ್ಯ ಕಡಿಮೆ ಮಾಡುವ 10 ಆಹಾರಗಳು

ಭಾರತದಲ್ಲಿ ಲೈಂಗಿಕ ಕ್ರಿಯೆಗೆ ಪ್ರಮುಖವಾಗಿ ಅಡ್ಡಿಯಾಗಿರುವ ಆರೋಗ್ಯ ಸಮಸ್ಯೆಯೆಂದರೆ ಅದು ಮಧುಮೇಹ. ಶೇ. 85ರಷ್ಟು ಮಂದಿ ಭಾರತದಲ್ಲಿ ಮಧುಮೇಹದಿಂದ ಬಳಲುತ್ತಿದ್ದಾರೆ. ಇದರಿಂದ ಅವರು ತುಂಬಾ ಬಳಲಿದವರಂತಾಗಿ ಸಂಗಾತಿ ಜತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಕಷ್ಟವಾಗುತ್ತಿದೆ. ಇಲ್ಲಿ ಪಟ್ಟಿ ಮಾಡಲಾಗಿರುವ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಬಹುದು. ನೀವು ನೈಸರ್ಗಿಕವಾಗಿ ತಲೆನೋವನ್ನು ಕಡಿಮೆ ಮಾಡಿದರೆ ಮತ್ತು ಮಧುಮೇಹವನ್ನು ನಿಯಂತ್ರಿಸಿದರೆ ಆಗ ನಿಮ್ಮ ಪ್ರಣಯವು ರಸಮಯವಾಗಿರುತ್ತದೆ. ನಿಮ್ಮ ಲೈಂಗಿಕ ಜೀವನಕ್ಕೆ ಮಾರಕವಾಗುವಂತಹ ಕೆಲವೊಂದು ಆರೋಗ್ಯ ಸಮಸ್ಯೆಗಳು ಇಲ್ಲಿವೆ.

ತಲೆನೋವು

ತಲೆನೋವು

ತಲೆನೋವು ನಿಮ್ಮ ಸಂಪೂರ್ಣ ರಾತ್ರಿಯನ್ನು ಕೆಡಿಸಬಹುದು. ನಿಮ್ಮ ತಲೆಯ ನರಗಳು ಎಳೆಯಲು ಆರಂಭಿಸುವಂತೆ ನಿಮಗೆ ನಿದ್ರೆ ಮತ್ತು ವಿಶ್ರಾಂತಿ ಬೇಕೆನಿಸುತ್ತದೆ.

ಮಧುಮೇಹ

ಮಧುಮೇಹ

ನಿಮಗೆ ಮಧುಮೇಹ ಇದ್ದಲ್ಲಿ ಅದರಿಂದ ಜನನಾಂಗಕ್ಕೆ ಹೋಗುವ ರಕ್ತ ಸಂಚಾರದ ಮೇಲೆ ಪರಿಣಾಮಬೀರುತ್ತದೆ. ಇದರಿಂದ ಸೆಕ್ಸ್‌ನಲ್ಲಿ ನಿಮಗೆ ಆಸಕ್ತಿ ಕಡಿಮೆಯಾಗುತ್ತದೆ. ರಕ್ತದಲ್ಲಿನ ಅನಿಯಂತ್ರಿತ ಸಕ್ಕರೆ ಮಟ್ಟವು ಹಲವಾರು ಸಮಸ್ಯೆಗಳನ್ನು ಮತ್ತು ಲೈಂಗಿಕ ನಿಷ್ಕ್ರೀಯತೆ ಉಂಟುಮಾಡುತ್ತದೆ.

ಋತುಬಂಧ

ಋತುಬಂಧ

ಋತುಬಂಧವು ನಿಮ್ಮ ಲೈಂಗಿಕ ಜೀವನಕ್ಕೆ ಅಡ್ಡಿಯುಂಟುಮಾಡುವ ಮತ್ತೊಂದು ಸಮಸ್ಯೆ. ಈ ಸಮಯದಲ್ಲಿ ನಿಮ್ಮ ಹಾರ್ಮೋನು ಮಟ್ಟವು ತೀವ್ರವಾಗಿ ಏರುಪೇರಾಗುತ್ತದೆ. ಇದರಿಂದಾಗಿ ಲೈಂಗಿಕ ಆಸಕ್ತಿ ಕಡಿಮೆಯಾಗಿ, ನೋವಿನ ಅನುಭವವಾಗುತ್ತದೆ.

ಅನೀಮಿಯಾ(ರಕ್ತಹೀನತೆ)

ಅನೀಮಿಯಾ(ರಕ್ತಹೀನತೆ)

ಅನೀಮಿಯಾ ನಿಮ್ಮ ರಾತ್ರಿಯ ರಸ ನಿಮಿಷಗಳಿಗೆ ಹೆಚ್ಚಿನ ಸಮಸ್ಯೆ ಉಂಟುಮಾಡುವುದಿಲ್ಲ. ಆದರೆ ಲೈಂಗಿಕ ಕ್ರಿಯೆಗೆ ಬೇಕಾಗಿರುವಂತಹ ಶಕ್ತಿಯ ಮಟ್ಟವನ್ನು ಕಡಿಮೆ ಮಾಡುತ್ತದೆ.

ಖಿನ್ನತೆ

ಖಿನ್ನತೆ

ಆಕಾಂಕ್ಷೆಗಳೆಲ್ಲವೂ ಮೆದುಳಿನಲ್ಲಿರುತ್ತದೆ ಮತ್ತು ಮಾನಸಿಕವಾಗಿ ಏನಾದರೂ ಸಮಸ್ಯೆಯಾದರೆ ಇದು ಲೈಂಗಿಕ ಆಕಾಂಕ್ಷೆಗಳನ್ನು ನಿಯಂತ್ರಿಸುವ ಮೆದುಳಿನ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಲೈಂಗಿಕ ನಿರಾಸಕ್ತಿಗೆ ಕಾರಣವಾಗುತ್ತದೆ.

ಬೆನ್ನುನೋವು

ಬೆನ್ನುನೋವು

ಹೆನ್ರಿಯೇಟೆಡ್ ಡಿಸ್ಕ್ ಮತ್ತು ಬೆನ್ನು ಹುರಿ ಬಾವು ನಿಮ್ಮ ಲೈಂಗಿಕ ಆಸಕ್ತಿಯ ಮೇಲೆ ಪರಿಣಾಮ ಬೀರಬಲ್ಲ ಇತರ ಸಮಸ್ಯೆಗಳು. ನೋವಿನಲ್ಲಿ ನಿಮಗೆ ಆ ಕ್ಷಣದ ಸುಖವನ್ನು ಅನುಭವಿಸಲು ಸಾಧ್ಯವಾಗದು ಮತ್ತು ಇದರಿಂದ ನಿಮ್ಮಲ್ಲಿ ನಿರಾಸಕ್ತಿ ಮೂಡಬಹುದು.

ಲೈಂಗಿಕ ನಿಷ್ಕ್ರೀಯತೆ

ಲೈಂಗಿಕ ನಿಷ್ಕ್ರೀಯತೆ

ಜನನಾಂಗದ ರಕ್ತಸಂಚಲನಕ್ಕೆ ಅಡ್ಡಿ ಉಂಟುಮಾಡುವ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಲೈಂಗಿಕ ನಿಷ್ಕ್ರೀಯತೆಗೆ ಕಾರಣವಾಗಬಹುದು ಮತ್ತು ಇದು ಆರೋಗ್ಯಕರ ಲೈಂಗಿಕ ಜೀವನಕ್ಕೆ ಅಡ್ಡಿಯಾಗಬಹುದು.

ಥೈರಾಯ್ಡ್

ಥೈರಾಯ್ಡ್

ತಪ್ಪಾದ ಥೈರಾಯ್ಡ್-ಇದು ಅತಿಯಾದ ಅಥವಾ ಹೇರಳ ಹಾರ್ಮೋನು, ನಿಮಿರುವಿಕೆ ಮತ್ತು ಸ್ಖಲನದ ಸಮಸ್ಯೆಯನ್ನು ಉಂಟುಮಾಡಬಹುದು. ಇದು ಮಹಿಳೆಯರಲ್ಲಿ ಕಾಮಾಸಕ್ತಿ ಮತ್ತು ಲೈಂಗಿಕ ಪರಾಕಷ್ಠೆಯ ಬದಲಾವಣೆಗೆ ಕಾರಣವಾಗಬಹುದು.

ಔಷಧಿಯ ತೊಂದರೆಗಳು

ಔಷಧಿಯ ತೊಂದರೆಗಳು

ಖಿನ್ನತೆ ಮೆದುಳಿನ ಸೆರೋಟೋನಿನ್ ಗ್ರಾಹಕಗಳ ಮೇಲೆ ಕಾರ್ಯನಿರ್ವಹಿಸುತ್ತದೆ. ಅಧಿಕ ರಕ್ತದೊತ್ತಡಕ್ಕೆ ತೆಗೆದುಕೊಳ್ಳುವ ಔಷಧಿಗಳು ಮತ್ತು ಗರ್ಭನಿರೋಧಕ ಮಾತ್ರೆಗಳು ನಿಮ್ಮ ಕಾಮಾಸಕ್ತಿ ಕಡಿಮೆ ಮಾಡಬಹುದು.

ಗರ್ಭಕಂಠ

ಗರ್ಭಕಂಠ

ಸಾಮಾನ್ಯವಾಗಿ ಗರ್ಭಕೋಶದ ಸಾಲಿನಲ್ಲಿ ಬೆಳೆಯುವ ಅಂಗಾಂಶವು ದೇಹದ ಇತರ ಭಾಗದಲ್ಲಿ ಬೆಳವಣಿಗೆಯಾಗುವುದು. ಈ ಹೆಚ್ಚುವರಿ ಬೆಳವಣಿಗೆಯಿಂದ ಮಹಿಳೆಯು ನೋವಿನ ಸೆಳೆತ, ಋತುಚಕ್ರದ ವೇಳೆ ಹೆಚ್ಚು ರಕ್ತಸ್ರಾವ, ದೀರ್ಘಕಾಲ ಯೋನಿಯ ನೋವು ಲೈಂಗಿಕ ಕ್ರಿಯೆಯಲ್ಲಿ ಆನಂದವನ್ನು ಕಿತ್ತುಕೊಳ್ಳುತ್ತದೆ.

ಕೋಶ ಉರಿಯೂತ

ಕೋಶ ಉರಿಯೂತ

ನಿಮಗೆ ಲೈಂಗಿಕ ಕ್ರಿಯೆ ವೇಳೆ ತುಂಬಾ ನೋವಾಗುತ್ತಿದ್ದರೆ ಅದು ಅಂಡಾಶಯದ ಕೋಶದ ಉರಿಯೂತದ ಲಕ್ಷಣ. ಅಂಡಾಶಯದ ಕೋಶವು ಅಂಡಾಶಯದಲ್ಲಿರುವ ದ್ರವ ತುಂಬಿದ ಕೋಶ. ಈ ನೋವು ನಿಮ್ಮಲ್ಲಿ ಕಾಮಾಸಕ್ತಿ ಕಡಿಮೆ ಮಾಡುತ್ತದೆ.

ಮಲ್ಟಿಪಲ್ ಸ್ಕ್ಲೆರೋಸಿಸ್

ಮಲ್ಟಿಪಲ್ ಸ್ಕ್ಲೆರೋಸಿಸ್

ನಿಮ್ಮ ಲೈಂಗಿಕ ಜೀವನಕ್ಕೆ ತೊಂದರೆ ಉಂಟುಮಾಡುವ ಮತ್ತೊಂದು ಆರೋಗ್ಯ ಸಮಸ್ಯೆಯೆಂದರೆ ಮಲ್ಟಿಪಲ್ ಸ್ಕ್ಲೆರೋಸಿಸ್. ಇದು ಕೇಂದ್ರ ನರಮಂಡಲದ ಒಂದು ರೋಗ. ಇದು ಲೈಂಗಿಕಾಸಕ್ತಿಯ ಕ್ರಿಯೆಗೆ ಅಡ್ಡಿಯುಂಟು ಮಾಡುತ್ತದೆ.

ನಿದ್ರಾ ಶ್ವಾಸಬಂಧನ

ನಿದ್ರಾ ಶ್ವಾಸಬಂಧನ

ಪುರುಷರ ಲೈಂಗಿಕ ಸಮಸ್ಯೆಗಳಿಗೆ ನಿದ್ರಾ ಶ್ವಾಸಬಂಧನವು ತುಂಬಾ ಅಪಾಯಕಾರಿ. ನಿದ್ರಾ ಶ್ವಾಸಬಂಧನದಿಂದಾಗಿ ಪುರುಷರಿಗೆ ನಿಮಿರುವಿಕೆ ಮೇಲೆ ಪರಿಣಾಮ ಬೀರುತ್ತದೆ.

ಒತ್ತಡ

ಒತ್ತಡ

ನಿಮ್ಮ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರಬಲ್ಲ ಮತ್ತೊಂದು ಸಮಸ್ಯೆಯೆಂದರೆ ಅದು ಉನ್ನತ ಮಟ್ಟದ ಒತ್ತಡ. ಸಂಗಾತಿಗಳಿಬ್ಬರು ಹೆಚ್ಚಿನ ಒತ್ತಡಕ್ಕೆ ಒಳಗಾಗಿದ್ದರೆ ಅವರು ದಿನದ ಅಂತ್ಯದ ವೇಳೆ ವಿಶ್ರಾಂತಿ ಮಾತ್ರ ಬಯಸುತ್ತಾರೆ.

ತಿಂಗಳ ಆ ಸಮಯ

ತಿಂಗಳ ಆ ಸಮಯ

ತಿಂಗಳ ಆ ಸಮಯದಲ್ಲಿ ಸಾಮಾನ್ಯವಾಗಿ ಮಹಿಳೆಯರಿಗೆ ಕಿರಿಕಿರಿಯಾಗುತ್ತದೆ ಮತ್ತು ಏಕಾಂಗಿ ಬಯಸುತ್ತಾರೆ. ಅವರ ಹಾರ್ಮೋನು ಬದಲಾವಣೆಯಿಂದಾಗಿ ಲೈಂಗಿಕಾಸಕ್ತಿ ಅವರ ಅಂತಿಮ ಆಯ್ಕೆಯಾಗಿರುತ್ತದೆ.

English summary

15 Health Problems That Ruin Sex Life

Sex might be the first or the only thing on your mind when you go home to your partner. But certain things can ruin the moment and create havoc in your sex life. Here are some of the health problems that can ruin your sex life: 
X
Desktop Bottom Promotion