For Quick Alerts
ALLOW NOTIFICATIONS  
For Daily Alerts

ಸೀತಾಫಲ ಹಣ್ಣಿನ ನ೦ಬಲಸಾಧ್ಯವಾದ ಆರೋಗ್ಯವರ್ಧಕ ಗುಣಗಳು

By Super
|

ಪ್ರತಿ ಋತುವಿನಲ್ಲಿ ಮಾರುಕಟ್ಟೆಯಲ್ಲಿ ತರಹೆವಾರಿಯಾದ ಹಣ್ಣುಗಳು ಮಾರಾಟವಾಗುವುದನ್ನು ನಾವು ನೋಡುತ್ತಿರುತ್ತವೆ. ಅದರಲ್ಲಿಯೂ ನೀವು ಸೀತಾಫಲಗಳನ್ನು ಕಂಡರೆ ತೆಗೆದುಕೊಳ್ಳದೆ ಬರುವುದು ಅಪರೂಪವೆನ್ನುವುದು ನಿಮ್ಮ ಅರಿವಿಗೂ ಬಂದಿರಬಹುದು. ಈ ಹಣ್ಣುಗಳು ಸವಿಯಲ್ಲಷ್ಟೇ ಅಲ್ಲದೆ, ಆರೋಗ್ಯಕಾರಿ ಪ್ರಯೋಜನಗಳ ವಿಚಾರದಲ್ಲಿ ಸಹ ಅತ್ಯಂತ ಪ್ರಯೋಜನಕಾರಿಯಾಗಿರುತ್ತದೆ. ಸೀತಾಫಲದಲ್ಲಿ ವಿಟಮಿನ್ ಸಿ ಯಂತಹ ಆಂಟಿ-ಆಕ್ಸಿಡೆಂಟ್‍ಗಳು ಅಧಿಕ ಪ್ರಮಾಣದಲ್ಲಿರುತ್ತವೆ.

ಈ ಎಲ್ಲಾ ಪೋಷಕಾಂಶಗಳ ಕಾರಣವಾಗಿ ಸೀತಾಫಲವು ನಿಮ್ಮ ದೇಹವನ್ನು ಫ್ರೀ ರ‍್ಯಾಡಿಕಲ್‍ಗಳಿಂದ ಮುಕ್ತವನ್ನಾಗಿಸುತ್ತದೆ. ಈ ಹಣ್ಣಿನಲ್ಲಿ ಕ್ಯಾಲ್ಸಿಯಂ, ಕಬ್ಬಿಣಾಂಶ, ನಿಯಾಸಿನ್ ಮತ್ತು ಪೊಟಾಶಿಯಂಗಳು ಯಥೇಚ್ಛವಾಗಿರುತ್ತವೆ. ಇವುಗಳು ನಿಮ್ಮ ದೇಹವನ್ನು ಆರೋಗ್ಯಕರವಾಗಿ ಮತ್ತು ಗಟ್ಟಿ ಮುಟ್ಟಾಗಿ ಇರಿಸಲು ಅತ್ಯಂತ ಅಗತ್ಯ.

ಸುಮಾರು ಜನರಿಗೆ ಈ ಹಣ್ಣಿನ ಮೇಲೆ ಅಂತಹ ವಿಶೇಷ ಆಸಕ್ತಿ ಇರುವುದಿಲ್ಲ. ಆದರೆ ಇದರಿಂದ ದೊರೆಯುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಒಮ್ಮೆ ತಿಳಿದರೆ ಸಾಕು ಯಾರೂ ಸಹ ಈ ಹಣ್ಣನ್ನು ನಿರಾಕರಿಸುವುದಿಲ್ಲ. ಬದಲಿಗೆ ಈ ಹಣ್ಣು ಸಿಗುವ ಋತುವಿನಾದ್ಯಂತ ಈ ಹಣ್ಣನ್ನು ಸೇವಿಸಲು ಇಷ್ಟಪಡುತ್ತಾರೆ. ತಙ್ಞರ ಪ್ರಕಾರ ಈ ಹಣ್ಣನ್ನು ಸೇವಿಸುವುದರಿಂದ ಶೀಘ್ರವಾಗಿ ತೂಕವನ್ನು ಇಳಿಸಿಕೊಳ್ಳಬಹುದು. ಮಧುಮೇಹವನ್ನು ನಿಯಂತ್ರಿಸುವ ಸೀತಾಫಲವೆಂಬ ಅದ್ಭುತ ಫಲ!

ಆದ್ದರಿಂದ ತೂಕ ಇಳಿಸಿಕೊಳ್ಳುವವರು ತಮ್ಮ ಡಯಟ್‍ನಲ್ಲಿ ಈ ಹಣ್ಣನ್ನು ಸೇರಿಸಿಕೊಳ್ಳುವುದು ಉತ್ತಮ. ಆದರೆ ಈ ಹಣ್ಣಿನಿಂದ ಉಂಟಾಗುವ ಒಂದು ದುಷ್ಪರಿಣಾಮವೆಂದರೆ ಅದು ದೇಹವನ್ನು ತಂಪಾಗಿಸುವ ಗುಣ. ಆದ್ದರಿಂದ ಇದು ಉಬ್ಬಸ ಮುಂತಾದ ಉಸಿರಾಟದ ಸಮಸ್ಯೆ ಇರುವ ರೋಗಿಗಳಿಗೆ ಒಳ್ಳೆಯದಲ್ಲ. ಬನ್ನಿ ಹಾಗದರೆ ಈ ಸೀತಾಫಲದಿಂದ ನಮಗೆ ದೊರೆಯುವ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ಒಮ್ಮೆ ತಿಳಿಯೋಣ.

ತೂಕ ಹೆಚ್ಚಿಸಿಕೊಳ್ಳಲು

ತೂಕ ಹೆಚ್ಚಿಸಿಕೊಳ್ಳಲು

ತೂಕ ಹೆಚ್ಚಿಸಿಕೊಳ್ಳಬೇಕೆನ್ನುವವರಿಗೆ ಸೀತಾಫಲವು ವರದಾನ. ಇದನ್ನು ರಸ ಬೇಕಾದರು ಮಾಡಿಕೊಂಡು ಕುಡಿಯಬಹುದು. ಇದಕ್ಕಾಗಿ ಸ್ವಲ್ಪ ಹಾಲಿನಲ್ಲಿ ಸಿಪ್ಪೆ, ಬೀಜಗಳನ್ನು ಬೇರ್ಪಡಿಸಿದ ಸೀತಾಫಲದ ಹಣ್ಣನ್ನು ಬೆರೆಸಿ, ಜೊತೆಗೆ ಸ್ವಲ್ಪ ಜೇನು ತುಪ್ಪವನ್ನು ಸೇರಿಸಿ ಪ್ರತಿನಿತ್ಯ ಸೇವಿಸಿ. ಇದರಿಂದ ನಿಮ್ಮ ಕ್ಯಾಲೋರಿಗಳ ಸೇವನೆಯು ಅಧಿಕವಾಗುತ್ತದೆ.

ಗರ್ಭಿಣಿಯಾಗಿರುವಾಗ

ಗರ್ಭಿಣಿಯಾಗಿರುವಾಗ

ಸೀತಾಫಲವು ಗರ್ಭದಲ್ಲಿರುವ ಶಿಶುವಿನ ಮೆದುಳು ವಿಕಾಸವಾಗಲು, ನರ ವ್ಯೂಹ ಮತ್ತು ರೋಗ ನಿರೋಧಕ ಶಕ್ತಿಯು ಸುಗಮವಾಗಲು ನೆರವಾಗುತ್ತದೆ. ಇದೆಲ್ಲದ್ದಕ್ಕಿಂತ ಮುಖ್ಯವಾಗಿ ಸೀತಾಫಲವು ಗರ್ಭಪಾತದ ಅಪಾಯವನ್ನು ತಡೆಯುವ ಸಾಮರ್ಥ್ಯವನ್ನು ಸಹ ಹೊಂದಿದೆ.

ಅಸ್ತಮಾ ರೋಗಿಗಳಿಗೆ

ಅಸ್ತಮಾ ರೋಗಿಗಳಿಗೆ

ಸೀತಾಫಲದಲ್ಲಿ ವಿಟಮಿನ್ ಬಿ6 ಅಧಿಕ ಪ್ರಮಾಣದಲ್ಲಿರುತ್ತದೆ. ಈ ವಿಟಮಿನ್‍ನಿಂದಾಗಿ ಶ್ವಾಸಕೋಶದ ಉರಿಯೂತ ಕಡಿಮೆಯಾಗುತ್ತದೆ ಮತ್ತು ಇದು ಅಸ್ತಮಾ ಬರುವುದನ್ನು ತಡೆಯುತ್ತದೆ.

ಹೃದಯಾಘಾತ

ಹೃದಯಾಘಾತ

ಸೀತಾಫಲದಲ್ಲಿರುವ ಮೆಗ್ನೀಶಿಯಂ ಅಂಶವು ಈ ಹಣ್ಣನ್ನು ಅತ್ಯುತ್ತಮವಾದ ಆರೋಗ್ಯಕಾರಿ ಹಣ್ಣನ್ನಾಗಿಸಿದೆ. ಇದು ಹೃದಯವನ್ನು ಹೃದ್ರೋಗಗಳಿಂದ ಕಾಪಾಡುತ್ತದೆ.

ಜೀರ್ಣ ಕ್ರಿಯೆ ಹೆಚ್ಚಿಸಲು ನೆರವಾಗುತ್ತದೆ

ಜೀರ್ಣ ಕ್ರಿಯೆ ಹೆಚ್ಚಿಸಲು ನೆರವಾಗುತ್ತದೆ

ಸೀತಾ ಫಲದಲ್ಲಿ ತಾಮ್ರ ಮತ್ತು ಡಯಟರಿ ಫೈಬರ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಆದ್ದರಿಂದ ಈ ಹಣ್ಣನ್ನು ಸೇವಿಸಿದಷ್ಟು ಆರೋಗ್ಯ ನಿಮ್ಮ ಸ್ವಂತವಾಗುತ್ತದೆ. ಇದರಲ್ಲಿರುವ ವಿಟಮಿನ್ ಉಪಸ್ಥಿತಿಯಿಂದಾಗಿ, ಇದು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ಸೀತಾಫಲವು ಜಠರ ಮತ್ತು ಕರುಳುಗಳು ಸುಗಮವಾಗಿ ಕಾರ್ಯ ನಿರ್ವಹಿಸಲು ನೆರವಾಗಿ, ಮಲಬದ್ಧತೆಯನ್ನು ನಿವಾರಿಸುತ್ತದೆ.

ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಹಣ್ಣು

ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಹಣ್ಣು

ಸೀತಾಫಲದಲ್ಲಿ ಯಥೇಚ್ಛವಾಗಿರುವ ಡಯಟೆರಿ ಫೈಬರ್‌ಗಳು ದೇಹವು ಸಕ್ಕರೆಯನ್ನು ಹೀರಿಕೊಳ್ಳುವ ಪ್ರಕ್ರಿಯೆಯನ್ನು ಕಡಿಮೆ ಮಾಡುತ್ತವೆ. ಆದ್ದರಿಂದ ಇದನ್ನು ಸೇವಿಸುವುದರಿಂದ ಟೈಪ್-2 ಮಧುಮೇಹ ಬರದಂತೆ ತಡೆಯಬಹುದು.

ಅಧಿಕ ರಕ್ತದೊತ್ತಡಕ್ಕೆ

ಅಧಿಕ ರಕ್ತದೊತ್ತಡಕ್ಕೆ

ಸೀತಾಫಲದಿಂದ ಅಧಿಕ ಆರೋಗ್ಯಕಾರಿ ಲಾಭವನ್ನು ಪಡೆಯಬೇಕೆಂದಲ್ಲಿ, ಇದರಲ್ಲಿರುವ ಪೊಟಾಶಿಯಂ ಮತ್ತು ಮ್ಯೆಗ್ನಿಶಿಯಂಗಳನ್ನು ಬಳಸಿಕೊಳ್ಳಬೇಕು. ಈ ಎರಡು ಅಂಶಗಳು ರಕ್ತದ ಮಟ್ಟವನ್ನು ನಿಯಂತ್ರಣದಲ್ಲಿಡುತ್ತವೆ.

ಕೊಲೆಸ್ಟ್ರಾಲ್ ಮಟ್ಟಗಳು

ಕೊಲೆಸ್ಟ್ರಾಲ್ ಮಟ್ಟಗಳು

ಸೀತಾಫಲದಲ್ಲಿ ನಿಯಾಸಿನ್ ಮತ್ತು ಡಯಟೆರಿ ಫೈಬರ್ ಅಧಿಕ ಪ್ರಮಾಣದಲ್ಲಿರುತ್ತವೆ. ಇದರ ಪ್ರಭಾವದಿಂದಾಗಿ ಇದನ್ನು ಸೇವಿಸಿದಾಗ ಕೊಲೆಸ್ಟ್ರಾಲ್ ಮಟ್ಟಗಳು ಕಡಿಮೆಯಾಗುತ್ತವೆ.

ನಿಮ್ಮಲ್ಲಿ ರಕ್ತ ಹೀನತೆ ಇದೆಯೇ?

ನಿಮ್ಮಲ್ಲಿ ರಕ್ತ ಹೀನತೆ ಇದೆಯೇ?

ಯಾಕೆ ಯೋಚನೆ ಮಾಡುತ್ತೀರಿ ಸೀತಾಫಲವನ್ನು ಸೇವಿಸಿ. ಇದು ಒಳ್ಳೆಯ ಪ್ರಚೋದಕ, ಎಕ್ಸ್‌ಪೆಕ್ಟೊರೆಂಟ್ ಮತ್ತು ಹಿಮಾಟ್ನಿಕ್ ಆಗಿರುವ ಹಣ್ಣಾಗಿದೆ. ಇದೆಲ್ಲದ್ದಕ್ಕಿಂತ ಹೆಚ್ಚಾಗಿ ಈ ಹಣ್ಣಿನಲ್ಲಿ ಕಬ್ಬಿಣಾಂಶವು ಅಧಿಕವಾಗಿರುವುದರಿಂದ ಅನಿಮಿಯಾ ಅಥವಾ ರಕ್ತ ಹೀನತೆಗೆ ಹೇಳಿ ಮಾಡಿಸಿದ ಹಣ್ಣಾಗಿದೆ.

ಬಾಯಿಯ ಆರೋಗ್ಯ

ಬಾಯಿಯ ಆರೋಗ್ಯ

ಸೀತಾಫಲವು ಬಾಯಿಯ ಆರೋಗ್ಯಕ್ಕೆ ಒಳ್ಳೆಯದು. ಸೀತಾಫಲದ ತಿರುಳು ಹಲ್ಲು ಮತ್ತು ದವಡೆ ನೋವಿನ ವಿರುದ್ಧ ಸಮರ್ಥವಾಗಿ ಹೋರಾಡುತ್ತದೆ.

ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು

ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು

ಸೀತಾಫಲಗಳಲ್ಲಿ ರಿಬೊಫ್ಲಾವಿನ್ ಮತ್ತು ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿರುತ್ತವೆ. ಇವುಗಳು ಕಣ್ಣಿಗೆ ಒಳ್ಳೆಯದು. ಇವುಗಳು ಫ್ರೀ ರ‍್ಯಾಡಿಕಲ್‍ಗಳ ವಿರುದ್ಧ ಹೋರಾಡುತ್ತವೆ. ಆ ಮೂಲಕ ಇವು ಕಣ್ಣಿನ ದೃಷ್ಟಿ ಕುಂದದಂತೆ ಕಾಪಾಡುತ್ತವೆ.

ಅರ್ಥರಿಟಿಸ್ ಅನ್ನು ತಡೆಯುತ್ತದೆ

ಅರ್ಥರಿಟಿಸ್ ಅನ್ನು ತಡೆಯುತ್ತದೆ

ಸೀತಾಫಲದಿಂದ ದೊರೆಯುವ ಅತ್ಯುತ್ತಮ ಆರೋಗ್ಯಕಾರಿ ಪ್ರಯೋಜನಗಳಲ್ಲಿ ಅರ್ಥರಿಟಿಸ್ ಬರದಂತೆ ತಡೆಯುವುದು ಸಹ ಒಂದು. ಇದರಲ್ಲಿ ಮ್ಯೆಗ್ನಿಶಿಯಂ ಇರುತ್ತದೆ. ಇದು ದೇಹದಲ್ಲಿನ ನೀರಿನ ಸಮತೋಲನವನ್ನು ಸಮಗೊಳಿಸುತ್ತದೆ. ಇದು ಕೀಲುಗಳಲ್ಲಿರುವ ಆಮ್ಲಗಳನ್ನು ಹೊಡೆದೊಡಿಸುತ್ತದೆ. ಆ ಮೂಲಕ ಅರ್ಥರಿಟಿಸ್ ಬರದಂತೆ ತಡೆಯುತ್ತದೆ.

ಮುಂಜಾನೆಯ ಮಂಕನ್ನು ನಿವಾರಿಸುತ್ತದೆ

ಮುಂಜಾನೆಯ ಮಂಕನ್ನು ನಿವಾರಿಸುತ್ತದೆ

ಗರ್ಭಿಣಿ ಹೆಂಗಸರು ಬೆಳಗ್ಗೆ ಎದ್ದ ಕೂಡಲೆ ಮಂಕಾಗಿರುತ್ತಾರೆ. ಬಾಣಂತಿಯರಲ್ಲಿ ಪ್ರಸವದ ನಂತರ ತೂಕ ಕಡಿಮೆಯಾಗುತ್ತದೆ. ಇವೆಲ್ಲದ್ದಕ್ಕು ಸೀತಾಫಲವೇ ದಿವ್ಯೌಷಧ. ಇದು ಗರ್ಭಾವಧಿಯಲ್ಲಿ ಕಂಡುಬರುವ ನಾಸಿಯಾ, ಮಂಕು, ತಿನ್ನುವ ಚಪಲ ಮತ್ತು ಬೇಸರ ಮುಂತಾದ ಮೂಡಿಗೆ ಸಂಬಂಧಿಸಿದ ಲೋಪ ದೋಷಗಳನ್ನು ಸರಿಪಡಿಸುತ್ತದೆ.

ಸೀತಾಫಲವು ಕ್ಯಾನ್ಸರನ್ನು ದೂರವಿರಿಸುತ್ತದೆ

ಸೀತಾಫಲವು ಕ್ಯಾನ್ಸರನ್ನು ದೂರವಿರಿಸುತ್ತದೆ

ಸೀತಾಫಲದಲ್ಲಿ ಕಂಡು ಬರುವ ಅಸಿಟೊಜೆನಿನ್ ಎಂಬ ರಾಸಾಯನಿಕ ಪದಾರ್ಥವು ಚರ್ಮದ ಕ್ಯಾನ್ಸರ್ ಬರದಂತೆ ಕಾಪಾಡುತ್ತದೆ. ಇದು ತ್ವಚೆಯ ಮೇಲೆ ಕ್ಯಾನ್ಸರ್ ಪೂರ್ವ ಕಂಡುಬರುವ ಪೊರೆಯನ್ನು ನಾಶ ಮಾಡುತ್ತದೆ.

English summary

14 Health Benefits Of Custard Apples

Every season, we are introduced to a variety of fruits in the market. You will not miss to see carts stocked with custard apples. In every nook and corner these fleshy fruits are in abundance and what's special is that they are extremely healthy.
X
Desktop Bottom Promotion